Friday, May 22, 2015

22 ಮೇ 2015

ವಿವಾದಾತೀತ ಕರಾರು (indisputable  contract) ಎಂದರೇನು?


ಸತ್ಯವನ್ನು ಮರೆಮಾಚಿದ್ದರೆ, ಸುಳ್ಳು ಹೇಳಿದ ಆಧಾರದ ಮೇಲೆ ವಿಮಾ ಕರಾರನ್ನು, ಕರಾರಿನ ಮೊದಲ ಎರಡು ವರ್ಷಗಳಲ್ಲಿ, ಪೂರ್ವಾನ್ವಯವಾಗಿ ಅನೂರ್ಜಿತಗೊಳಿಸಬಹುದು. ಅಂದರೆ ವಿಮಾ ಕರಾರು ಅನೂರ್ಜಿತ ಅಥವಾ ಅನೂರ್ಜಿತಗೊಳಿಸಬಹುದಾದ (void or voidable)  ಕರಾರು ಆಗಿರುತ್ತದೆ. (ಕರಾರನ್ನು  ಅನೂರ್ಜಿತಗೊಳಿಸಲು  ವಿಮಾ ಒಡಂಬಡಿಕೆ ವಂಚನೆಯ ಆಧಾರದ ಮೇಲೆ ಜರುಗಿರುವದರ ಬಗ್ಗೆ ಸಾಬೀತು ಪಡೆಸುವ ಹೊಣೆಗಾರಿಕೆಯೂ ವಿಮಾ ಕಂಪನಿ ಮೇಲೆ ಇರುವದಿಲ್ಲಾ.) 

ಸತ್ಯವನ್ನು ಮರೆಮಾಚಿದ್ದರೆ, ಸುಳ್ಳು ಹೇಳಿದ ಆಧಾರದ ಮೇಲೆ ವಿಮಾ ಕರಾರನ್ನು, ಕರಾರಿನ ಎರಡು ವರ್ಷಗಳ ನಂತರ sಸುಲಭವಾಗಿ ಅನೂರ್ಜಿತಗೊಳಿಸಲು ಬರುವದಿಲ್ಲಾ. ಆದುದರಿಂದ ಎರಡು ವರ್ಷಗಳ ನಂತರ  ವಿಮಾ ಒಡಂಬಡಿಕೆ ವಿವಾದಾತೀತ ಕರಾರು (indisputable  contract) ಆಗಿರುತ್ತದೆ.

(ಆದರೆ ಎರಡು ವರ್ಷಗಳ ನಂತರ, ವಿಮಾ ಕರಾರನ್ನು ಅನೂರ್ಜಿತಗೊಳಿಸಲೇ ಬೇಕೆಂದು ಬಯಸಿದರೆ, ವಿಮಾ ಒಡಂಬಡಿಕೆಯು  ಅಕ್ರಮವಾಗಿದ್ದು, ಅದು ವಂಚನೆಯ ಆಧಾರದ ಮೇಲೆ ಜರುಗಿರುವದರ ಬಗ್ಗೆ ಸಾಬೀತು ಪಡೆಸುವ ಹೊಣೆಗಾರಿಕೆ ವಿಮಾ ಕಂಪನಿ ಮೇಲೆ ಬೀಳುತ್ತದೆ. ಇದನ್ನೇ ವಿಮಾ ಕಾನೂನು 1938 ರ ಸೆಕ್ಶನ್ 45 ರಲ್ಲಿ ಹೇಳಲಾಗಿದೆ.)

Thursday, May 21, 2015

21 ಮೇ 2015

ಅನೂರ್ಜಿತ (void) ಹಾಗೂ ಅನೂರ್ಜಿತಗೊಳಿಸಬಹುದಾದ (voidable)  ಕರಾರುಗಳೆಂದರೆ ಏನು?


ಅನೂರ್ಜಿತ ಕರಾರು (void contract ) ಗಳು ಕೆಳಗಿನ ಸಂದರ್ಭಗಳಲ್ಲಿ ಹುಟ್ಟಿಕೊಳ್ಳುತ್ತವೆ. 
1) ಮೂಲಭೂತ ತಪ್ಪುಗಳ ಆಧಾರದ ಮೇಲೆಯೇ ಕರಾರು ಅನೂರ್ಜಿತಗೊಳ್ಳಬಹುದು.
     (ಕುಡಿತದ ಅಮಲಿನಲ್ಲಿ ಒಪ್ಪಂದಕ್ಕೆ ಹಸ್ತಾಕ್ಷರ ಹಾಕಿದ ಸಂದರ್ಭದಲ್ಲಿ,) 
2) ಕಾನೂನು ವಿರೋಧಿ ಉದ್ಯೇಶಗಳಿಗಾಗಿ, ಒಪ್ಪಂದಕ್ಕೆ ಮನಸ್ಸು ಮಾಡಿದ್ದರೆ,
(ಆತ್ಮ ಹತ್ಯೆ/ಇನ್ನೊಬ್ಬರ ಹತ್ಯೆಯ ಮೂಲಕ ಲಾಭ ಪಡೆಯಲು ವಿಮಾ ಕೋರಿಕೆ ಸಲ್ಲಿಸಿದ್ದರೆ,) 
3) ವಿಮಾ ಆಸಕ್ತಿಯ ಉಪಸ್ಥಿತಿ ಇಲ್ಲದಿದ್ದರೆ,
(ತಂದೆಯ ಅಥವಾ ಗೆಳೆಯನ ಜೀವದ ಮೇಲೆ ವಿಮೆ ಪಡೆಯ ಬಯಸಿದರೆ,) 
4) ಪರಮೋಚ್ಚ ನಂಬಿಕೆಯ ತತ್ವ ಉಲ್ಲಂಘನೆಯಾಗಿದ್ದರೆ,
     (ಉಭಯ ಪಕ್ಷಗಳು ಬೇರೆ ಬೇರೆ ರೀತಿಯಲ್ಲಿಯೇ ಯೋಚಿಸಿ, ಅನುಚಿತ ಲಾಭ ಪಡೆಯ ಬಯಸಿದರೆ.) 
5) ವಾರಂಟಿಯ ಉಲ್ಲಂಘನೆಯಾದಾಗ,
(ಸತ್ಯವನ್ನು ಮರೆ ಮಾಚಿದಾಗ, ಸುಳ್ಳಿನ ಪ್ರದರ್ಶನವಾದಾಗ.) 

ಅನೂರ್ಜಿತಗೊಳಿಸಬಹುದಾದ ಕರಾರು  (voidable  contract)  :
ಅನೂರ್ಜೀತಗೊಳಿಸಬಹುದಾದ  (voidable) ಕರಾರು ಎಂದರೆ ವಿಮಾ ಕಂಪನಿ ಬಯಸಿದರೆ ಅನೂರ್ಜಿತ ಕರಾರನ್ನು ಊರ್ಜಿತವೆಂದು ಮಾನ್ಯ ಮಾಡಬಹುದು.


Wednesday, May 20, 2015

20 ಮೇ 2015

ಕರಾರಿನ ನಿಯಮಗಳ ಉಲ್ಲಂಘನೆಯ   (breach of condition)    ಪರಿಣಾಮ ಏನು?

ಕರಾರಿನ ನಿಯಮಗಳ ಉಲ್ಲಂಘನೆ  (breach of condition)   ಯಾದಾಗ ನಡೆದಾಗ ಕರಾರು ಅನೂರ್ಜಿತ (void)ವಾಗುತ್ತದೆ. ಇಲ್ಲವೇ ಅನೂರ್ಜಿತಗೊಳಿಸಬಹುದಾದ (voidable)  ಕರಾರು ಆಗುತ್ತದೆ. ಅನೂರ್ಜೀತಗೊಳಿಸಬಹುದಾದ (voidable)  ಕರಾರು ಎಂದರೆ ವಿಮಾ ಕಂಪನಿ ಬಯಸಿದರೆ ಅನೂರ್ಜಿತ ಕರಾರನ್ನು ಊರ್ಜಿತವೆಂದು ಮಾನ್ಯ ಮಾಡಬಹುದು.
       

Tuesday, May 19, 2015

19 ಮೇ 2015

ಮರಣ ವಿಮಾ ಪರಿಹಾರ ಸಂದಾಯ ಮಾಡುವಾಗ, ಯಾವ ಸಂದರ್ಭಗಳಲ್ಲಿ ವಿಶೇಷ ಜಾಗ್ರತೆ (special care)    ವಹಿಸ ಬೇಕು? 

ಮರಣ ವಿಮಾ ಪರಿಹಾರ ಸಂದಾಯ ಮಾಡುವಾಗ, ಕೆಳಗಿನÀ ಸಂದರ್ಭಗಳಲ್ಲಿ ವಿಶೇಷ ಜಾಗ್ರತೆ (special care)  ವಹಿಸಬೇಕು.
ವಿಮಾ ಕಂಪನಿಗೆ ಮರಣದ ಸೂಚನೆ ಅಪರಿಚಿತ ವ್ಯಕ್ತಿಯಿಂದ ಬಂದಾಗ,
ವಿಮಾ ಪರಿಹಾರ ಸಂದಾಯದ ಕಾರ್ಯಪ್ರಗತಿ ಬಗ್ಗೆ, ಮೇಲಿಂದ ಮೇಲೆ, ಪುನಃ ಪುನಃ ವಿಮಾ ಕಂಪನಿಯ ಹತ್ತಿರ ವಿಚಾರಿಸತೊಡಗಿದಾಗ,
ಪಾಲಿಸಿ ಕರಾರು ಪ್ರಾರಂಭವಾಗಿ ಮೂರು ವರ್ಷದೊಳಗೆ ಮರಣ ಸಂಭವಿಸಿದಾಗ, ಪಾಲಿಸಿಯ ಮೂರು ವರ್ಷಗಳ ಅವಧಿ ಮುಗಿಯುವ ವರೆಗೆ ಕಾಯ್ದು,  ನಂತರ ವಿಮಾ ಪರಿಹಾರ ಕೋರಿಕೆಯನ್ನು ಸಲ್ಲಿಸಿದಾಗ,
      (ತನಿಖೆಯ ತೀವೃತೆಯನ್ನು ಉದ್ಯೇಶ ಪೂರ್ವಕವಾಗಿ ಕಡಿಮೆ ಮಾಡುವ, ದುರುದ್ಯೇಶದ ಸಾಧ್ಯತೆ ಇಲ್ಲಿ ಕಂಡು ಬರುವದು.)


Monday, May 18, 2015

18 ಮೇ 2015

ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ವಂಚನೆ(fraud) ಯು ಭವಿಷ್ಯದಲ್ಲಿ ಯಾವ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ? 

ಉತ್ತರ : ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ವಂಚನೆ(fraud)ಗೆ ಅವಕಾಶ ದೊರಕಿದರೆ, ಅದು ಭವಿಷ್ಯದಲ್ಲಿ ಕೆಳಗಿನ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ.
ವಿಮಾಕಂಪನಿಗಳಿಗೆ – ಸಂಸ್ಥೆಯ ಒಟ್ಟಾರೆ ವಿಮಾ ಪರಿಹಾರ ವೆಚ್ಚ ಊಹಿಸಿದ್ದಕ್ಕಿಂತಲೂ ಹೆಚ್ಚಾಗಿ, ಸ್ಪರ್ಧಾತ್ಮಕ ವ್ಯಾಪಾರದಲ್ಲಿ ಹಿನ್ನೆಡೆಗೆ ಅವಕಾಶ ಮಾಡಿಕೊಡುತ್ತದೆ. ಸಂಸ್ಥೆಯ ನಿರ್ಲಕ್ಷ್ಯ, ಹೆಚ್ಚು ಸಂಖ್ಯೆಯಲ್ಲಿ ವಂಚನೆಯ ವಿಮಾ ಸಂದಾಯ (fraudulent claim)  ಗಳಿಗೆ ಅವಕಾಶ ಮಾಡಿಕೊಡುತ್ತದೆ.
ಸಾಮಾನ್ಯ ಗ್ರಾಹಕರಿಗೆ -ಸಂಸ್ಥೆಯ ಒಟ್ಟಾರೆ ವಿಮಾ ಪರಿಹಾರ ವೆಚ್ಚ, ಊಹಿಸಿದ್ದಕ್ಕಿಂತಲೂ ಹೆಚ್ಚಾಗುವದರಿಂದ, 1) ವಿಮಾ ಕಂತಿನ ದರದಲ್ಲಿ ಅನಗತ್ಯವಾದ ಹೆಚ್ಚಳ ಕಂಡು ಬರುವದು. 2) ಪ್ರಾಮಾಣಿಕ ಗ್ರಾಹಕರಿ ಇದರಿಂದ ಅನಗತ್ಯವಾಗಿ, ಹೆಚ್ಚು ಬೆಲೆ ತೆರಬೇಕಾಗುವದು.
ವಂಚಕ ಗ್ರಾಹಕರಿಗೆ – ವಿಮಾ ಕಂಪನಿಯ ನಿರ್ಲಕ್ಷ್ಯದಿಂದ ವಂಚಕ ಗ್ರಾಹಕರು ಇನ್ನೂ ಉತ್ತೇಜಿತರಾಗಿ, ಹೆಚ್ಚಿನ ವಂಚನೆಗೆ ತಯಾರಾಗುವರು, ಹಾಗೂ ಇತರರಿಗೂ ಪ್ರೇರಣೆ ನೀಡುವರು.

Sunday, May 17, 2015

17 ಮೇ 2015

ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ವಂಚನೆ (fraud)  ಯ ಬಗ್ಗೆ ಯಾವಾಗ ಅನುಮಾನಿಸುತ್ತಾರೆ? 

ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ಕೆಳಗಿನ ಸಂದರ್ಭಗಳಲ್ಲಿ ವಂಚನೆ (fraud)   ಯ ಬಗ್ಗೆ ಅನುಮಾನಿಸುತ್ತಾರೆ.
ವಿಮಾ ಕರಾರು ಮುಗಿದ ಮೂರು ವರ್ಷದೊಳಗೆ ಮರಣ ಸಂಭವಿಸಿದ್ದರೆ, ವಿಮಾ ಮಾಹಿತಿ ಬಗ್ಗೆ, ಈ ಮೊದಲು ತಪ್ಪು ಹೇಳಿಕೆ ನೀಡಿರುವ, ಸತ್ಯ ಸಂಗತಿ ಬಚ್ಚಿಟ್ಟಿರುವ ಸಾಧ್ಯತೆ ಕಂಡು ಬರುತ್ತದೆ.
ಮೂಲ ಪಾಲಿಸಿ ಬಾಂಡನ್ನು ವಿಮಾ ಪರಿಹಾರಕ್ಕಾಗಿ ನೀಡದಿದ್ದಾಗ, ಪಾಲಸಿಯ ಮಾಲೀಕತ್ವದ ಹಕ್ಕುಗಳಲ್ಲಿ ಬದಲಾವಣೆಗಳ ಸಾಧ್ಯತೆ ಕಂಡು ಬರುತ್ತದೆ.
ಕ್ಷುಲ್ಲಕ ಕಾರಣಗಳಿಗಾಗಿ ವಿಮಾ ಸಂಸ್ಥೆ, ವಿಮಾ ಪರಿಹಾರ ನೀಡಲು ತೊಂದರೆ ಕೊಡತೊಡಗಿದರೆ, ವಿಮಾ ಸಂಸ್ಥೆಯ ಪ್ರಾಮಾಣಿಕತೆಗೆ ಅನುಮಾನ ಉಂಟಾಗುತ್ತದೆ.


Saturday, May 16, 2015

16 ಮೇ 2015

ಮರಣ ವಿಮಾ ಪರಿಹಾರ ಸಂದಾಯ(Death claim settlment)  ವನ್ನು ಹೇಗೆ ಮಾಡುತ್ತಾರೆ? 

ಮರಣದ ಸೂಚನೆ, ಪಾಲಸಿ ಹಕ್ಕುದಾರನಿಂದ ಬಂದ ಕೂಡಲೇ ವಿಮಾ ಕಂಪನಿಯು, ಮರಣ ವಿಮಾ ಪರಿಹಾರ ಸಂದಾಯಕ್ಕೆ ಅವಶ್ಯಕ ಕ್ರಮ ಕೈಕೊಳ್ಳುತ್ತದೆ. ಅಗತ್ಯಬಿದ್ದರೆ, ವಿಮಾ ಪರಿಹಾರ ಸಂದಾಯಕ್ಕೆ ಮೊದಲು, ತನಿಖೆಯನ್ನು ಕೈಕೊಳ್ಳುತ್ತದೆ.


Friday, May 15, 2015

15 ಮೇ 2015

ಜೀವಿತ ಸೌಲಭ್ಯ ಪರಿಹಾರ ಸಂದಾಯ (Death claim settlement) ವನ್ನು ಹೇಗೆ ಮಾಡುತ್ತಾರೆ? 

ಸಾಮಾನ್ಯವಾಗಿ ಜೀವಿತ ಸೌಲಭ್ಯ ಪರಿಹಾರ ಸಂದಾಯ(Death claim settlement)ದ ಕೆಲಸವನ್ನು ವಿಮಾ ಕಂಪನಿಗಳೇ ಪ್ರಾರಂಭಿಸುತ್ತವೆ. ಮೂಲ ಪಾಲಿಸಿಯ ಮೇಲೆ ಅವಶ್ಯಕ ಒಕ್ಕಣಿಕೆಯನ್ನು ನಮೂದಿಸಿದ ನಂತರವೇ, ಜೀವಿತ ಸೌಲಭ್ಯ ಪರಿಹಾರವನ್ನು ನೀಡಲಾಗುತ್ತದೆ. ಒಂದು ವೇಳೆ ಮೂಲ ಪಾಲಿಸಿ ಬಾಂಡ್ ಕಳೆದು ಹೋಗಿದ್ದರೆ, ಅವಶ್ಯಕ ಒಕ್ಕಣಿಕೆಯ ನಮೂದಿಸುವಿಕೆಗೆ, ಡುಪ್ಲಿಕೇಟ್ ಪಾಲಸಿ ಬಾಂಡ್ ನೀಡ ಬೇಕಾಗುತ್ತದೆ.


Thursday, May 14, 2015

14 ಮೇ 2015

 ಕಂಡೀಶನಲ್ ಅಸೈನಮೆಂಟ್ ಮಾಡಿದ ಪಾಲಿಸಿಯಲ್ಲಿ ವಿಮಾಪರಿಹಾರ ಪ್ರದಾನವನ್ನು ಯಾರಿಗೆ ಮಾಡಲಾಗುತ್ತದೆ?

ಕಂಡೀಶನಲ್ ಅಸೈನಮೆಂಟ್ ಮಾಡಿದ ಪಾಲಿಸಿಯಲ್ಲಿ ವಿಮಾಪರಿಹಾರ ಪ್ರದಾನವನ್ನು ಕೆಳಗಿನಂತೆ  ಮಾಡಲಾಗುತ್ತದೆ.
ಪರಿಪಕ್ವ ವಿಮಾ ಪರಿಹಾರ ಸಂದಾಯವನ್ನು, ಪಾಲಸಿಧಾರಕನಿಗೆ ಮಾಡಲಾಗುತ್ತದೆ.
ಮರಣ ವಿಮಾ ಪರಿಹಾರ ಸಂದಾಯವನ್ನು, ಪರಿಹಾರ ಸಂದಾಯ ಸಮಯದಲ್ಲಿ, ಅಸೈನೀಯು ಜೀವಂತವಾಗಿದ್ದರೆ, ಪರಿಹಾರ ಪ್ರದಾನವನ್ನು ಅಸೈನೀಗೆ  ಮಾಡಲಾಗುತ್ತದೆ.
ಮರಣ ವಿಮಾ ಪರಿಹಾರ ಸಂದಾಯವನ್ನು, ಪರಿಹಾರ ಸಂದಾಯ ಸಮಯದಲ್ಲಿ, ಅಸೈನೀಯು ಪಾಲಸಿ ಧಾರಕನಿಗಿಂತ ಮೊದಲೇ ನಿಧನನಾಗಿದ್ದರೆ, ಪರಿಹಾರ ಪ್ರದಾನವನ್ನು ಪಾಲಸಿಧಾರಕನ ವಾರಸುದಾರರಿಗೆ ಮಾಡಲಾಗುತ್ತದೆ. 
ಮರಣ ವಿಮಾ ಪರಿಹಾರ ಸಂದಾಯವನ್ನು, ಪರಿಹಾರ ಸಂದಾಯ ಸಮಯದಲ್ಲಿ, ಅಸೈನೀಯು ಪಾಲಸಿ ಧಾರಕನ ನಂತರ ನಿಧನನಾಗಿದ್ದರೆ, ಪರಿಹಾರ ಪ್ರದಾನವನ್ನು ಅಸೈನೀಯ ವಾರಸುದಾರರಿಗೆ ಮಾಡಲಾಗುತ್ತದೆ. 


Wednesday, May 13, 2015

13 ಮೇ 2015

ಪರಿಪಕ್ವ ವಿಮಾ ಪರಿಹಾರ ಸಂದಾಯಕ್ಕೆ ಅಗತ್ಯವಿರುವ ದಾಖಲೆಪತ್ರಗಳು ಯಾವುವು?

ಪರಿಪಕ್ವ ವಿಮಾ ಪರಿಹಾರ ಸಂದಾಯಕ್ಕೆ ಅಗತ್ಯವಿರುವ ದಾಖಲೆಪತ್ರಗಳು :
ಮೂಲ ಪಾಲಸಿ ಬಾಂಡ್. (ಅದು ಕಳೆದು ಹೋಗಿದ್ದರೆ, ಇಂಡೆಮ್ನಿಟಿ ಬಾಂಡ್)
ಪಾಲಸಿಹಕ್ಕುದಾರನ ಹೇಳಿಕೆ ಪತ್ರ. 
ವಯಸ್ಸಿನ ದಾಖಲೆ, ( ಈಗಾಗಲೇ ವಯಸ್ಸು ಅಂಗೀಕೃತವಾಗಿರದಿದ್ದರೆ,)
ಪಾಲಸಿಹಕ್ಕುದಾರನಿಂದ ರುಜು ಮಾಡಿದ ಡಿಸ್‍ಚಾರ್ಜ ಫಾರ್ಮ.
ಕೊನೆಗೆ ನೀಡಲಾದ ವಿಮಾ ಕಂತಿನ ರಸೀದಿ.


Tuesday, May 12, 2015

12 ಮೇ 2015

ಪರಿಪಕ್ವ ವಿಮಾ ಪರಿಹಾರ ಸಂದಾಯವನ್ನು ಹೇಗೆ ಮಾಡುತ್ತಾರೆ? 

ಸಾಮಾನ್ಯವಾಗಿ ಪರಿಪಕ್ವ ವಿಮಾ ಪರಿಹಾರ ಸಂದಾಯದ ಕೆಲಸವನ್ನು ವಿಮಾ ಕಂಪನಿಗಳೇ ಪ್ರಾರಂಭಿ
ಸುತ್ತವೆ. ಪರಿಪಕ್ವವಾಗುವ ತಿಂಗಳಿಗಿಂತ, ಎರಡು ಮೂರು ತಿಂಗಳು ಮೊದಲೇ, ಪರಿಹಾರ ಸಂದಾಯಕ್ಕೆ ಅವಶ್ಯ ವಿರುವ ಕಾಗದಪತ್ರಗಳನ್ನು ಕಳಿಸಲು, ವಿಮಾಸಂಸ್ಥೆಯು ಪಾಲಸಿಧಾರಕನಿಗೆ ಸೂಚನೆ ಕಳಿಸುತ್ತದೆ.


Monday, May 11, 2015

11 ಮೇ 2015

ವಿಮಾ ಪರಿಹಾರ ಸಂದಾಯಕ್ಕಾಗಿ, ಆಯ್.ಆರ್.ಡಿ.ಎ.ಯು 2002 ರಲ್ಲಿ ಪ್ರಕಟಿಸಿದ ಪಾಲಸಿಧಾರಕರ ಹಕ್ಕು ರಕ್ಷಣಾ ನಿಯಮಾವಳಿಗಳಲ್ಲಿ ಯಾವ ನಿರ್ದೇಶನಗಳನ್ನು ನೀಡಿದೆ? 

 ವಿಮಾ ಪರಿಹಾರ ಸಂದಾಯಕ್ಕಾಗಿ, ಆಯ್.ಆರ್.ಡಿ.ಎ.ಯು 2002 ರಲ್ಲಿ ಪ್ರಕಟಿಸಿದ ಪಾಲಸಿಧಾರಕರ ಹಕ್ಕು ರಕ್ಷಣಾ ನಿಯಮಾವಳಿಗಳಲ್ಲಿ ಕೆಳಗಿನÀ ನಿರ್ದೇಶನಗಳನ್ನು ವಿಮಾ ಸಂಸ್ಥಗೆ ನೀಡಿದೆ.

1) ವಿಮಾ ಪರಿಹಾರ ನೀಡುವದಕ್ಕೆ ಪಾಲಿಸಿ ಬಾಂಡನ್ನು ಪಡೆಯಲೇಬೇಕು.
2) ವಿಮಾ ಪರಿಹಾರ ಕೋರಿಕೆ ಸಲ್ಲಿಸಿದ, 15 ದಿನದೊಳಗೆ ಅವಶ್ಯವೆನಿಸಿದ ಎಲ್ಲಾ ದಾಖಲೆಗಳನ್ನು ನೀಡಲು ಒಂದೇ ಬಾರಿಗೆ ಕೇಳಬೇಕು.
3) ವಿಮಾ ಪರಿಹಾರ ಕೋರಿಕೆ ಸಲ್ಲಿಸಿದ, ಎಲ್ಲಾ ದಾಖಲೆಗಳು ತಲುಪಿದ 30 ದಿನದೊಳಗೆ, ವಿಮಾ ಪರಿಹಾರ ಕೋರಿಕೆಯನ್ನು ಒಪ್ಪಿಕೊಂಡ/ತಿರಸ್ಕರಿಸಿದ ಬಗ್ಗೆ ನಿರ್ಣಯ ತಿಳಿಸಬೇಕು.
4) ವಿಮಾ ಪರಿಹಾರ ಸಂದಾಯಕ್ಕೆ, ತನಿಖೆಯ ಅವಶ್ಯಕತೆ ಎನಿಸಿದರೆ, ತನಿಖಾ ವರದಿ ಪಡೆಯಲು 6 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳತಕ್ಕದ್ದಲ್ಲ.
5) ವಿಮಾ ಪರಿಹಾರ ನೀಡಿಕೆಯ ಬಗ್ಗೆ ನಿರ್ಣಯ ಕೈಕೊಳ್ಳಲು, ವಿಮಾ ಕಂಪನಿಯು ನಿಗದಿತ ಅವಧಿಗಿಂತ ಹೆಚ್ಚು ಸಮಯ ತೆಗೆದು ಕೊಂಡರೆ, ಈ ಹೆಚ್ಚಿನ ಅವಧಿಗೆ ವಿಮಾಸಂಸ್ಥೆಯು, ವಿಮಾಪರಿಹಾರ ಹಣದ ಮೇಲೆ, ಬಡ್ಡಿಯನ್ನು ಬ್ಯಾಂಕ್ ಉಳಿತಾಯದ ಬಡ್ಡೀ ದರಕ್ಕಿಂತ 2% ಹೆಚ್ಚಿನ ದರದಲ್ಲಿ ನೀಡ ಬೇಕಾಗುವದು.
6) ವಿಮಾ ಪರಿಹಾರ ನೀಡಿಕೆಯ ಬಗ್ಗೆ ನಿರ್ಣಯ ತೆಗೆದುಕೊಂಡ 30 ದಿನಗಳೊಳಗೆ, ಪರಿಹಾರ ಸಂದಾಯವನ್ನು ಪಾಲಸಿ ಹಣ ಹಕ್ಕುದಾರರಿಗೆ ಮಾಡಬೇಕು. 
ಈ ಅವಧಿಯೊಳಗೆ ಪರಿಹಾರ ಹಣ ಸಂದಾಯವಾಗದಿದ್ದರೆ, ಹೆಚ್ಚಿಗೆ ತೆಗೆದು ಕೊಂಡ ಅವಧಿಗೆ, ಬಡ್ಡಿಯನ್ನು ಬ್ಯಾಂಕ್ ಉಳಿತಾಯದ ಬಡ್ಡೀ ದರದಲ್ಲಿ ನೀಡ ಬೇಕಾಗುವದು.


Sunday, May 10, 2015

10 ಮೇ 2015

ವಿಮಾ ಪರಿಹಾರ ಸಂದಾಯಕ್ಕಾಗಿ (claim settlement/ payment) , ಆಯ್.ಆರ್.ಡಿ.ಎ.ಯು ಕೈಕೊಂಡ ವಿಶೇಷ ಕ್ರಮಗಳು ಯಾವುವು? 

ವಿಮಾ ಪರಿಹಾರ ಸಂದಾಯಕ್ಕೆ ಮಾರ್ಗದರ್ಶನ ಮಾಡಲು, ಆಯ್.ಆರ್.ಡಿ.ಎ.ಯು, ಪಾಲಸಿಧಾರಕರ ಹಕ್ಕು ರಕ್ಷಣಾ ನಿಯಮಾವಳಿಗಳನ್ನು 2002 ರಲ್ಲಿ ಪ್ರಕಟಿಸಿದೆ. 


Saturday, May 9, 2015

9 ಮೇ 2015

ಅಪಘಾತ ಮರಣ ವಿಮಾ (Accident  death  claim)  ಪರಿಹಾರ ಸಂದಾಯಕ್ಕಾಗಿ, ವಿಮಾ ಸಂಸ್ಥೆ ಯಾವ ಹೆಚ್ಚುವರಿ ದಾಖಲಾತಿಗಳನ್ನು ಕೇಳುತ್ತದೆ?

ಅಪಘಾತ ಮರಣ ವಿಮಾ ಪರಿಹಾರ (Accident  death  claim)  ಸಂದಾಯಕ್ಕಾಗಿ, ವಿಮಾ ಸಂಸ್ಥೆ ಕೆಳಗಿನÀ ಹೆಚ್ಚುವರಿ ದಾಖಲಾತಿಗಳನ್ನು ಕೇಳುತ್ತದೆ.
ಪೋಲೀಸರ ಪ್ರಾಥಮಿಕ ವರದಿ,
ಪಂಚನಾಮಾ ವರದಿ,
ಫೋರೆನ್ಸಿಕ್ ವರದಿ,
ಮರಣಾ ನಂತರ ನಡೆಸಿದ ಶಸ್ತ್ರಕಿಯಾ ವರದಿ,
ಕೋರೋನರ್ಸ ವರದಿ,
ವಿಶೇಷ ತನಿಖಾ ವರದಿ ( ಅವಶ್ಯವೆನಿಸಿದರೆ)


Friday, May 8, 2015

8 ಮೇ 2015

ಕೋರ್ಟ್ ನಿರ್ಣಯಕ್ಕೆ ಕಾಯದೇ ಮರಣವನ್ನು ಕಲ್ಪಿಸಿಕೊಂಡು (Presumption of death) ವಿಮಾ ಕಂಪನಿ ಮರಣ ವಿಮಾ ಪರಿಹಾರ ನೀಡಬಹುದೆ?

 ಕೆಲವು ವಿಶಿಷ್ಠ ಸಂದರ್ಭಗಳಲ್ಲಿ ಕಳೆದು ಹೋದ ವ್ಯಕ್ತಿ ನಿಜವಾಗಿ ಮರಣ ಹೊಂದಿದರ ಬಗ್ಗೆ ಬಲವಾದ ಬೇರೆ ಪುರಾವೆ ದೊರೆತರೆ, (ಉದಾ : ವಿಮಾನ ದುರಂತದಲ್ಲಿ) , ಕೋರ್ಟ್ ನಿರ್ಣಯಕ್ಕೆ ಕಾಯದೇ ಮರಣವನ್ನು ಕಲ್ಪಿಸಿಕೊಂಡು (Presumption of death) ವಿಮಾ ಕಂಪನಿ ಮರಣ ವಿಮಾ ಪರಿಹಾರವನ್ನು  ನೀಡುವದು.

Thursday, May 7, 2015

7 ಮೇ 2015

 ಮರಣವನ್ನು ಕಲ್ಪಿಸಿಕೊಳ್ಳ್ಳುವದರ (Presumption of death)  ಬಗ್ಗೆ 1872 ರ ಸಾಕ್ಷಿ  ಕಾನೂನಿನ (evidence act ) ಸೆಕ್ಶನ್ 107 ಹಾಗೂ 108 ರಲ್ಲಿ ಏನನ್ನು ವಿವರಿಸಲಾಗಿದೆ?

1872 ರ ಸಾಕ್ಷಿ  ಕಾನೂನಿನ (evidence act ) ಸೆಕ್ಶನ್ 107 ಹಾಗೂ 108 ರಲ್ಲಿ ಮರಣವನ್ನು ಕಲ್ಪಿಸಿಕೊಳ್ಳ್ಳುವದರ (Presumption of death) ಬಗ್ಗೆ ಕೆಳಗಿನಂತೆ ವಿವರಿಸಲಾಗಿದೆ. ಒಂದು ವ್ಯಕ್ತಿ ಕಳೆದು ಹೋದ ನಂತರ 7 ವರ್ಷಗಳ ವರೆಗೆ ಆತನ ಇರುವಿಕೆಯ ಬಗ್ಗೆ ಯಾವ ಸುಳಿವು ಸಿಗದೇ ಇದ್ದರೆ, ಆತನು ಮರಣವನ್ನು ಹೊಂದಿದ್ದಾನೆಂದು ಕಲ್ಪಸಿಕೊಳ್ಳಲಾಗುವದು.
ಇಂತಹ ಮರಣದ ಬಗ್ಗೆ ನಿರ್ಣಯ ಕೊಡಲು ಕೋರ್ಟಿಗೆ ಅರ್ಜಿ ಸಲ್ಲಿಸಿದರೆ, ಅರ್ಜಿ ಸಲ್ಲಿಸಿದ ದಿನಾಂಕಿನಿಂದೆ ಏಳು ವರುಷ ಕಾಯ್ದು, ನಂತರ  ಆ ವ್ಯಕ್ತಿಯು ಮರಣ ಹೊಂದಿದ್ದಾನೆಂದು ಕಲ್ಪಿಸಿಕೊಂಡು, ಆ ಬಗ್ಗೆ ಕೋರ್ಟು ನ್ಯಾಯ ನಿರ್ಣಯ ಕೊಡುವದು. (ಅಲ್ಲಿಯ ವರೆಗೆ ಕಳೆದು ಹೋದ ವ್ಯಕ್ತಿ ಜೀವಂತವಾಗಿದ್ದಾನೆಂದೇ ಭಾವಿಸ ಬೇಕು, ಹಾಗೂ ಅಲ್ಲಿಯ ವರೆಗೆ ಆತನ ಪಾಲಸಿ ಮುಂದುವರೆಯಲೇಬೇಕು.


Wednesday, May 6, 2015

6 ಮೇ 2015

ಮರಣವನ್ನು ಕಲ್ಪಿಸಿಕೊಳ್ಳ್ಳುವದರ (Presumption of death) ಬಗ್ಗೆ ಯಾವ ಕಾನೂನಲ್ಲಿ ವಿವರಿಸಲಾಗಿದೆ? 

ಮರಣವನ್ನು ಕಲ್ಪಿಸಿಕೊಳ್ಳ್ಳುವದರ (Presumption of death) ಬಗ್ಗೆ 1872 ರ ಸಾಕ್ಷಿ  ಕಾನೂನಿನ(evidence act  ಸೆಕ್ಶನ್ 107 ಹಾಗೂ 108 ರಲ್ಲಿ ವಿವರಿಸಲಾಗಿದೆ?


Tuesday, May 5, 2015

5 ಮೇ 2015

ಮರಣವನ್ನು ಕಲ್ಪಿಸಿಕೊಳ್ಳ್ಳುವದು (Presumption of death)  ವೆಂದರೇನು? 

ವಿಮೆ ಮಾಡಿಸಿದ ವ್ಯಕ್ತಿ ಮರಳಿ ಕಾಣದ ರೀತಿಯಲ್ಲಿ ಕಳೆದು ಹೋದರೆ ಆ ವ್ಯಕ್ತಿಯು ಮರಣಿಸಿದ್ದಾನೆ ಎಂದು ಭಾವಿಸಿದರೆ, ಅದಕ್ಕೆ  ಮರಣವನ್ನು ಕಲ್ಪಿಸಿಕೊಳ್ಳ್ಳುವದು (Presumption of death)   ಎಂದು ಕರೆಯಲಾಗುತ್ತದೆ.


Monday, May 4, 2015

4 ಮೇ 2015

 ಶೀಘ್ರ ಮರಣ ವಿಮಾ ಪರಿಹಾರ (early  death  claim)  ಸಂದಾಯಕ್ಕಾಗಿ, ವಿಮಾ ಸಂಸ್ಥೆ ಯಾವ ಹೆಚ್ಚುವರಿ ದಾಖಲಾತಿಗಳನ್ನು ಕೇಳುತ್ತದೆ?

ಶೀಘ್ರ ಮರಣ ವಿಮಾ ಪರಿಹಾರ (early  death  claim)  ಸಂದಾಯಕ್ಕಾಗಿ, ವಿಮಾ ಸಂಸ್ಥೆ ಕೆಳಗಿನÀ ಹೆಚ್ಚುವರಿ ದಾಖಲಾತಿಗಳನ್ನು ಕೇಳುತ್ತದೆ.
ಮರಣ ಸಮಯದಲ್ಲಿ ಉಪಚಾರ ನೀಡಿದ ವೈದ್ಯರ ಹೇಳಿಕೆ,
ಮರಣಕ್ಕೆ ಮುಂಚೆ ವಿಮಾ ಜೀವಿ ಆಸ್ಪತ್ರೆಗೆ ದಾಖಲಾಗಿದ್ದರೆ, ಆಸ್ಪತ್ರೆಯ ಹೇಳಿಕೆ,
ಅಂತಿಮ ಸಂಸ್ಕಾರದಲ್ಲಿ ಪಾಲುಗೊಂಡ ಪ್ರತ್ಯಕ್ಷದಶಿಗಳ ಹೇಳಿಕೆ,
ವಿಮಾ ಜೀವಿ ನೌಕರಿ ಮಾಡುತ್ತಿದ್ದರೆ, ವಿಮಾಜೀವಿಯ ರಜಾದಾಖಲೆಗಳು.
      

Sunday, May 3, 2015

3 ಮೇ 2015

ಶೀಘ್ರ ಮರಣ ವಿಮಾ ಪರಿಹಾರ ಸಂದಾಯ (early  death  claim)  ಕ್ಕಾಗಿ, ವಿಮಾ ಸಂಸ್ಥೆ ಯಾವ ಕ್ರಮ ಕೈಕೊಳ್ಳುತ್ತದೆ?

 ವಿಮಾ ಕರಾರು ಏರ್ಪಟ್ಟ ನಂತರ, 3 ವರ್ಷಗಳ  ಅವಧಿಯೊಳಗೆ ಮರಣ ಸಂಭವಿಸಿದರೆ ಅಂತಹ ಮರಣ ವಿಮಾ ಪರಿಹಾರ ಸಂದಾಯಕ್ಕೆ, ಶೀಘ್ರ ಮರಣ ವಿಮಾ ಪರಿಹಾರ (early  death  claim)  ಸಂದಾಯ ಎಂದು ಕರೆಯುತ್ತಾರೆ. ಇಂತಹ ಸಂದರ್ಭದಲ್ಲಿ, ತಪ್ಪು ಮಾಹಿತಿ ನೀಡುವ ಮೂಲಕ ಅಥವಾ ಸತ್ಯ ಸಂಗತಿಗಳನ್ನು ಬಚ್ಚಿಡುವ ಮೂಲಕ ಕರಾರಿನ ಉಲ್ಲಂಘನೆಯಾಗಿಲ್ಲ ಎನ್ನುವದನ್ನು ಖಾತ್ರಿ ಪಡೆಸಿಕೊಳ್ಳಲು, ಸಂಸ್ಥೆಯು ಪೂರ್ವಭಾವಿ ತನಿಖೆಯನ್ನು ಏರ್ಪಡಿಸುತ್ತದೆ.


Saturday, May 2, 2015

2 ಮೇ 2015

 ಮರಣ ವಿಮಾ ಪರಿಹಾರ ಸಂದಾಯಕ್ಕಾಗಿ, ವಿಮಾ ಸಂಸ್ಥೆ ಯಾವ ದಾಖಲೆ (documents) ಗಳನ್ನು ಕೇಳುವದು? 

ಮರಣ ವಿಮಾ ಪರಿಹಾರ ಸಂದಾಯಕ್ಕಾಗಿ, ವಿಮಾ ಸಂಸ್ಥೆ ಕೆಳಗಿನ ದಾಖಲೆ (documents) ಗಳನ್ನು ಕೇಳುವದು.
ಪಾಲಸಿ ಬಾಂಡ್,
ವಯಸ್ಸಿನ ದಾಖಲೆ (ಈಗಾಗಲೇ ವಯಸ್ಸಿನ ಅಂಗೀಕಾರ ಆಗಿರದಿದ್ದರೆ)
ಮರಣ ದಾಖಲೆ.
ಪಾಲಿಸಿಯನ್ನು ಅಸೈನ್ ಮಡಿದ್ದರೆ, ಅಸೈನ್‍ಮೆಂಟಿನ ಕಾಗದ ಪತ್ರಗಳು.
ನಾಮೀನೇಶನ್/ಅಸೈನ್‍ಮೆಂಟ್ ಇರದಿದ್ದಾಗ, ವಾರಸಾ ಪ್ರಮಾಣ ಪತ್ರ.
ಪಾಲಸಿ ಹಕ್ಕುದಾರನಿಂದ ಭರ್ತಿ ಮಾಡಿದ ಹೇಳಿಕೆ ಫಾರ್ಮ. (ಛಿಟಚಿimಚಿಟಿಣ’s sಣಚಿಣemeಟಿಣ )  
ಮೊದಲೇ ರುಜು ಹಾಕಿದ, ಪರಿಹಾರ ಹಣದ ಡಿಸ್‍ಚಾರ್ಜ ಫಾರ್ಮ.
      

Friday, May 1, 2015

1 ಮೇ 2015

ಮರಣ ವಿಮಾ ಪರಿಹಾರ ಸಂದಾಯ (death claim payment) ಕ್ಕಾಗಿ, ವಿಮಾ ಸಂಸ್ಥೆಗೆ ಯಾರು ವಿನಂತಿಸಿಕೊಳ್ಳಬೇಕು? 

 ಮರಣ ವಿಮಾ ಪರಿಹಾರ ಸಂದಾಯ(death claim payment) ಕ್ಕಾಗಿ ವಿಮಾ ಸಂಸ್ಥೆಗೆ; ನಾಮಿನೀ/ಅಸೈನೀ, ಅಥವಾ ಪಾಲಸಿಧಾರಕನ ವಾರಸುದಾರರು ಅಥವಾ ಏಜೆಂಟರು/ನೌಕರಿ ಕೊಟ್ಟ ಮಾಲೀಕರು; ವಿಮಾ ಸಂಸ್ಥೆಗೆ ವಿನಂತಿಸಿಕೊಳ್ಳಬೇಕು.


Thursday, April 30, 2015

30 ಎಪ್ರೀಲ್ 2015

 ಮರಣ ವಿಮಾ ಪರಿಹಾರ ಕೋರಿಕೆ ಯಾವ ಸಂದರ್ಭಗಳಲ್ಲಿ ಕ್ರಮಬದ್ಧ (valid)ವಾಗಿರುದಿಲ್ಲಾ?

ಮರಣ ವಿಮಾ ಪರಿಹಾರ ಕೋರಿಕೆ ಕೆಳಗಿನÀ ಸಂದರ್ಭಗಳಲ್ಲಿ ಕ್ರಮಬದ್ಧ (valid) ವಾಗಿರುದಿಲ್ಲಾ, ಅಂದರೆ ಮರಣ ವಿಮಾ ಪರಿಹಾರ ಕೋರಿಕೆ ಅಕ್ರಮ ((invalid)) ವಾಗಿರುತ್ತದೆ.  
ಮರಣ ಕಾಲದಲ್ಲಿ ಪಾಲಸಿಯು ರದ್ದತಿಯ (policy not in force)  ಸ್ಥಿತಿಯಲ್ಲಿದ್ದರೆ,
ನಿರ್ಬಂಧಿಸಿದ ಕಾರಣಗಳಿಂದ (ಉದಾ : ಆತ್ಮಹತ್ಯೆ) ಮರಣ ಸಂಭವಿಸಿದ್ದರೆ,
ಮೋಸ, ವಂಚನೆ, ದುರುದ್ಯೇಶಗಳ ಪ್ರಯುಕ್ತ, ಕೆಲವು ಮಹತ್ವದ ಸಂಗತಿಗಳನ್ನು ಬಚ್ಚಿಟ್ಟಿದ್ದರೆ, ಅಥವಾ ಕೆಲವು ಖೊಟ್ಟಿ ಮಾಹಿತಿಗಳನ್ನು ನೀಡಿದ್ದರೆ,

Wednesday, April 29, 2015

29 ಎಪ್ರೀಲ್ 2015

ವಿಮಾ ಕರಾರು ಏರ್ಪಟ್ಟ ನಂತರ, ಎಷ್ಟು ಅವಧಿಯೊಳಗೆ ಮರಣ ಸಂಭವಿಸಿದರೆ, ಮರಣ ವಿಮಾ ಪರಿಹಾರ ಸಂದಾಯ ಮಾಡಲು, ಪೂರ್ವಭಾವಿ ತನಿಖೆ (prelimanary investigation) ಯನ್ನು ಕೈಕೊಳ್ಳುತ್ತಾರೆ?

ವಿಮಾ ಕರಾರು ಏರ್ಪಟ್ಟ ನಂತರ, 3 ವರ್ಷಗಳ  ಅವಧಿಯೊಳಗೆ ಮರಣ ಸಂಭವಿಸಿದರೆ, ಮರಣ ವಿಮಾ ಪರಿಹಾರ ಸಂದಾಯ ಮಾಡಲು, ಪೂರ್ವಭಾವಿ ತನಿಖೆ (prelimanary investigation) ಯನ್ನು ಕೈಕೊಳ್ಳುತ್ತಾರೆ.



Tuesday, April 28, 2015

28 ಎಪ್ರೀಲ್ 2015

ಮರಣ ವಿಮಾ ಪರಿಹಾರ ಸಂದಾಯಕ್ಕೆ ಮೊದಲು, ಕೆಲವು ಬಾರಿ ತನಿಖೆ (Claim Investigation)  ಯನ್ನು ಯಾಕೆ ಕೈಕೊಳ್ಳುತ್ತ್ತಾರೆ?

ಮರಣ ವಿಮಾ ಪರಿಹಾರ ಸಂದಾಯಕ್ಕೆ ಮೊದಲು, ಕೆಲವು ಬಾರಿ ತನಿಖೆಯನ್ನು ಕೈಕೊಳ್ಳುತ್ತ್ತಾರೆ. ವಿಮಾ ಕರಾರು ಏರ್ಪಟ್ಟಾಗ, ಪರಮೋಚ್ಚ ನಂಬಿಕೆಯ ತತ್ವ (Principle of utmost good faith)   ಉಲ್ಲಂಘನೆಯಾಗಿಲ್ಲವೆಂಬುದನ್ನು ಖಾತ್ರಿ ಮಾಡಿಕೊಳ್ಳಲು, ಈ ರೀತಿಯ ತನಿಖೆಯ ಅವಶ್ಯಕತೆ ಉಂಟಾಗುತ್ತದೆ.


Monday, April 27, 2015

27 ಎಪ್ರೀಲ್ 2015

ಹೆಚ್ಚುವರಿ ವಿಮಾ ಸೌಲಭ್ಯ ಪರಿಹಾರ ಕೋರಿಕೆ (Rider Benefit Claim) ಯೆಂದರೇನು? 

ಮರಣ ವಿಮಾ ಪರಿಹಾರ ಸಂದಾಯ ಸಮಯದಲ್ಲಿ ಕೆಲವು ಬಾರಿ, ಮೂಲ ವಿಮಾ ಪರಿಹಾರದ ಜೊತೆಗೆ, ಹೆಚ್ಚುವರಿ ವಿಮಾ ಸೌಲಭ್ಯ ಪರಿಹಾರ (Rider Benefit Claim)  ವನ್ನೂ ನೀಡಬೇಕಾಗುತ್ತದೆ. 
     ಉದಾಹರಣೆಗೆ, ಮರಣವು 
ಅಪಘಾತದಿಂದಾಗಿದ್ದರೆ, ಹೆಚ್ಚುವರಿ ಅಪಘಾತ ಪರಿಹಾರವನ್ನು ನೀಡಲಾಗುವದು, 
ಗಂಭೀರ ಕಾಯಿಲೆಯಿಂದಾಗಿದ್ದರೆ, ಹೆಚ್ಚುವರಿ ಗಂಭೀರ ಕಾಯಿಲೆ ಪರಿಹಾರವನ್ನು ನೀಡಲಾಗುವದು,
ಅದೇ ರೀತಿ, ಕೆಲವು ವಿಶೇಷ ಘಟನೆಗಳು ಜರುಗಿದಾಗ ಹೆಚ್ಚುವರಿ ವಿಮಾ ಪರಿಹಾರವನ್ನೂ ನೀಡಬೇಕಾಗುತ್ತದೆ. 
ಉದಾಹರಣೆಗೆ,
ಅಪಘಾತದಿಂದ ಅಂಗವಿಕಲನಾದರೆ, ಹೆಚ್ಚುವರಿ ಅಪಘಾತ ಪರಿಹಾರವನ್ನು ನೀಡಲಾಗುವದು,
ಗಂಭೀರ ಕಾಯಿಲೆಯಿಂದ ಆಸ್ಪತ್ರೆ ಸೇರಿದರೆ, ಹೆಚ್ಚುವರಿ ಅಪಘಾತ ಪರಿಹಾರವನ್ನು ನೀಡಲಾಗುವದು,
ಗಂಭೀರ ಕಾಯಿಲೆಯಿಂದ ಶಸ್ತ್ರ ಚಿಕಿತ್ಸೆ ಅವಶ್ಯವೆನಿಸಿದರೆ , ಹೆಚ್ಚುವರಿ ಅಪಘಾತ ಪರಿಹಾರವನ್ನು ನೀಡಲಾಗುವದು. 


Sunday, April 26, 2015

26 ಎಪ್ರೀಲ್ 2015

 ಕ್ರಮ ಬದ್ಧ ವಿಮಾ ಪರಿಹಾರ ಕೋರಿಕೆ (Valid Claim) ಎಂದರೇನು? 

 ವಿಮಾ ಪರಿಹಾರ ಸಂದಾಯ (Claim payment)  ಸಮಯದಲ್ಲಿ,
ವಿಮಾ ಪಾಲಸಿ ಚಾಲತಿ/ಪೇಡ್‍ಅಪ್ ಸ್ಥಿತಿಯಲ್ಲಿದ್ದರೆ, (ಅಂದರೆ ಪಾಲಸಿ ಕರಾರು ಸಂಪೂರ್ಣವಾಗಿ ರದ್ದಾಗಿರದಿದ್ದರೆ)
ವಿಮೆಗೆ ಸಂಬಂಧಿಸಿದ ಘಟನೆ ಜರುಗಿದ್ದರೆ,(ಅವಧಿ ಪೂರ್ತಿ ಗೊಂಡಿದ್ದರೆ/ಅವಧಿಗಿಂತ ಮೊದಲೇ ಮರಣ ಸಂಭವಿಸಿದ್ದರೆ) 
ಪಾಲಸಿ ಬಾಂಡ್ ಸಹಿತ, ಅವಶ್ಯವಿದ್ದ ಎಲ್ಲಾ ದಾಖಲೆಗಳನ್ನು ನೀಡಿದ್ದರೆ,
ಪರಮೋಚ್ಚ ನಂಬಿಕೆಯ ತತ್ವದ ಉಲ್ಲಂಘನೆಯಾಗಿರದಿದ್ದರೆ,
ಅಂತಹ ವಿಮಾ ಪರಿಹಾರ ಕೋರಿಕೆ , ಕ್ರಮ ಬದ್ಧ ವಿಮಾ ಪರಿಹಾರ ಕೋರಿಕೆಯೆನಿಸಿಕೊಳ್ಳುತ್ತದೆ.

Saturday, April 25, 2015

25 ಎಪ್ರೀಲ್ 2015

ಮರಣ ವಿಮಾ ಪರಿಹಾರದ ಹಣ (Death Claim payment) ವನ್ನು ಹೇಗೆ ಲೆಕ್ಕ ಮಾಡುತ್ತಾರೆ? 


ಸಾಂಪ್ರದಾಯಕ ಪಾಲಸಿಗಳಲ್ಲಿ, ಮರಣ ಸಮಯದಲ್ಲಿ ಪಾಲಸಿ ಚಾಲತಿ ಸ್ಥಿತಿಯಲ್ಲ್ಲಿದ್ದರೆ, ಪೂರ್ಣ ವಿಮಾ ಮೊತ್ತಕ್ಕೆ ಗಳಿಸಿದ ಬೋನಸ್ಸನ್ನು ಕೂಡಿಸಿ ಒಟ್ಟು ಹಣವನ್ನು ನೀಡುತ್ತಾರೆ. 
ಪಾಲಸಿ ಪೇಡ್-ಅಪ್ ಸ್ಥಿತಿಯಲ್ಲ್ಲಿದ್ದರೆ, ಒಟ್ಟು ಪೇಡ್‍ಅಪ್ ಬೆಲೆಯನ್ನು ನೀಡುತ್ತಾರೆ.
ಯುಲಿಪ್ ಪಾಲಸಿಗಳಲ್ಲಿ, ಸಾಮಾನ್ಯವಾಗಿ ನಿಧಿಯ ಮೌಲ್ಯ ಹಾಗೂ ವಿಮಾರಾಶಿಗಳಲ್ಲಿ ಯಾವದು ಅಧಿಕವಾಗಿರುತ್ತದೆಯೋ, ಅದನ್ನು ನೀಡುತ್ತಾರೆ. 
ಕೆಲವು ಯುಲಿಪ್ ಪಾಲಸಿಗಳಲ್ಲಿ, ನಿಧಿಯ ಮೌಲ್ಯ ಹಾಗೂ ವಿಮಾರಾಶಿಗಳೆರಡರ ಮೊತ್ತವನ್ನೂ ನೀಡುತ್ತಾರೆ. 

Friday, April 24, 2015

24 ಎಪ್ರೀಲ್ 2015

ಮೋಸಯುಕ್ತ ಮರಣ ವಿಮಾ ಪರಿಹಾರ (Fraudulent Claim)ವನ್ನು ಹೇಗೆ ಪಡೆಯಲು ಯತ್ನಿಸುವರು?

ಸತ್ಯವನ್ನು ಬಚ್ಚಿಡುವ ಮೂಲಕ ಇಲ್ಲವೇ ಖೊಟ್ಟಿ ಮಾಹಿತಿಯನ್ನು ನೀಡುವ ಮೂಲಕ ಮೋಸಯುಕ್ತ ಮರಣ ವಿಮಾ ಪರಿಹಾರ (Fraudulent Claim) ಪಡೆಯಲು ಯತ್ನಿಸುವರು.


Thursday, April 23, 2015

23 ಎಪ್ರೀಲ್ 2015

ಮೋಸಯುಕ್ತ ಮರಣ ವಿಮಾ ಪರಿಹಾರ (Fraudulent Claim) ಎಂದರೇನು? 

ಅನ್ಯಾಯ ಮಾರ್ಗದಿಂದ ಹಣ ಗಳಿಸುವದಕ್ಕೆ ವಿಮೆಯನ್ನು ದುರುಪಯೋಗ ಮಾಡಿಕೊಂಡು, ಪಡೆಯಬಯಸುವ ವಿಮಾ ಪರಿಹಾರಕ್ಕೆ ಮೋಸಯುಕ್ತ ಮರಣ ವಿಮಾ ಪರಿಹಾರ(Fraudulent Claim) ಎನ್ನುತ್ತಾರೆ.


Wednesday, April 22, 2015

22 ಎಪ್ರೀಲ್ 2015

ಯಾವ ಸಮಯದಲ್ಲಿ ನಿಧನನಾದರೆ ಮರಣ ವಿಮಾ ಪರಿಹಾರ (Death Claim) ದೊರೆಯುತ್ತದೆ? 

ಮರಣ ವಿಮಾ ಪರಿಹಾರ (Death Claim) ದ ಹಣವನ್ನು,
ಸಾಮಾನ್ಯವಾಗಿ ಪಾಲಸಿ ಅವಧಿಯೊಳಗೆ ಮರಣ ಸಂಭವಿಸಿದಾಗ ಮಾತ್ರ, ಮರಣ ವಿಮಾ ಪರಿಹಾರ ದೊರೆಯುತ್ತದೆ.
ಮ್ಯಾರೇಜ್ ಎಂಡೋಮೆಂಟನಂತಹ ಪಾಲಿಸಿಗಳಲ್ಲಿ, ಪಾಲಸಿ ಅವಧಿಯೊಳಗೆ ಮರಣ ಸಂಭವಿಸಿದಾಗ, ಮರಣ ವಿಮಾ ಪರಿಹಾರ ಹಣ ಕೂಡಲೇ ದೊರೆಯದೆ, ಅವಧಿ ಮುಗಿದ ನಂತರವೇ ದೊರೆಯುತ್ತದೆ.

Tuesday, April 21, 2015

21 ಎಪ್ರೀಲ್ 2015

ಮರಣ ವಿಮಾ ಪರಿಹಾರ (Death Claim payment)ವನ್ನು ಯಾರಿಗೆ ನೀಡುತ್ತಾರೆ?

ಮರಣ ವಿಮಾ ಪರಿಹಾರ (Death Claim payment) ವನ್ನು,
ಪಾಲಸಿಧಾರಕನಿಗೆ (ಆತ ವಿಮಾ ಜೀವಿಯಾಗಿರದಿದ್ದರೆ), ಅಥವಾ ಅಸೈನೀ (Asignee) ಗೆ (ಪಾಲಸಿಯನ್ನು ಅಸೈನ್ ಮಾಡಿದ್ದರೆ).
ಸಾಮಾನ್ಯವಾಗಿ ನಾಮಿನೀ (nominee)ಗೆ, [ನಾಮಿನೀಯು ವಯಸ್ಕನಾಗಿರದಿದ್ದರೆ, ಹಣವನ್ನು ಆತನ ಅಪಾೈಂಟೀ – (appointee) ಗೆ.]
ನಾಮಿನೀ ಇಲ್ಲದಾಗ, ಪಾಲಸಿಧಾರಕನ ಕಾನೂನಬದ್ಧ ವಾರಸುದಾರರಿಗೆ.


Monday, April 20, 2015

20 ಎಪ್ರೀಲ್ 2015

ಮರಣ ವಿಮಾ ಪರಿಹಾರ ಕೋರಿಕೆ (Death Claim) ಎಂದರೇನು?

ಪಾಲಸಿಯಲ್ಲಿಯ ವಿಮಾ ಜೀವಿ ಮರಣ ಹೊಂದಿದಾಗ, ಪಾಲಿಸಿಯಿಂದ ದೊರೆಯುವ ವಿಮಾ ಪರಿಹಾರಕ್ಕೆ ಸಲ್ಲಿಸುವ ಬೇಡಿಕೆಗೆ, ಮರಣ ವಿಮಾ ಪರಿಹಾರ ಕೋರಿಕೆ ಎನ್ನುತ್ತಾರೆ.

Sunday, April 19, 2015

19 ಎಪ್ರೀಲ್ 2015

ವರ್ಷಾಶನ ವಿಮಾ ಪರಿಹಾರ ಕೋರಿಕೆ(Annuity Claim) ಎಂದರೇನು?

 ಒಂದು ನಿಗದಿತ ದಿನಾಂಕಿನಿಂದ, ದೊರೆಯಲಿರುವ ಅಜೀವ ಪರ್ಯಂತ ವರ್ಷಾಶನಗಳ ಸೌಲಭ್ಯ ಪಡೆಯುವದಕ್ಕೆ, ಸಲ್ಲಿಸುವ ಕೋರಿಕೆಗೆ ವರ್ಷಾಶನ ವಿಮಾ ಪರಿಹಾರ ಕೋರಿಕೆ ಎಂದು ಕರೆಯುತ್ತಾರೆ. ವರ್ಷಾಶನಗಳನ್ನು, 1/3/6/12 ತಿಂಗಳ ಕಂತುಗಳಲ್ಲಿ ಪಡೆಯಬಹುದು.


Saturday, April 18, 2015

18 ಎಪ್ರೀಲ್ 2015

ವಿಮಾ ಪರಿಹಾರ ಕಂತುಗಳ ನಗದೀಕರಣ (Encashment of Claim installments)   ಎಂದರೇನು?

ಕೆಲವು ಸಲ ವಿಮಾ ಅವಧಿ ಮಗಿದ ನಂತರ ವಿಮಾ ಪರಿಹಾರವನ್ನು ಒಂದೇ ಕಂತಿನಲ್ಲಿ  ನೀಡದೇ  ಭವಿಷ್ಯದಲ್ಲಿ ಅನೇಕ ನಿಯಮಿತ ಕಂತುಗಳಲ್ಲಿ ಅದನ್ನು ನೀಡುವ ವ್ಯವಸ್ಥೆ ಇರುತ್ತದೆ. ಭವಿಷ್ಯದ ಇಂತಹ ವಿಮಾ ಪರಿಹಾರ ಕಂತುಗಳ ಹಣವನ್ನು ಇಂದೇ, ಒಂದೇ ಬಾರಿಗೆ, ನಗದು ರೂಪದಲ್ಲಿ ಪಡೆಯುವದಕ್ಕೆ, ವಿಮಾ ಪರಿಹಾರ ಕಂತುಗಳ ನಗದೀಕರಣ ಎನ್ನುತ್ತಾರೆ. 
ಭವಿಷ್ಯದಲ್ಲಿ ನೀಡುವ ವಿಮಾ ಪರಿಹಾರ ಕಂತುಗಳನ್ನು, ಸಾಕಷ್ಟು ಮುಂಚಿತವಾಗಿಯೇ ಪಡೆಯುವದರಿಂದ, ಬವಿಷ್ಯದ ವಿಮಾ ಪರಿಹಾರ ಕಂತುಗಳ ಒಟ್ಟು ಹಣದಿಂದ, ಸ್ವಲ್ಪ ಬಡ್ಡಿ ಹಣ ಕಳೆದು ಉಳಿದ ಹಣವನ್ನು ನೀಡುತ್ತಾರೆ.


Friday, April 17, 2015

17 ಎಪ್ರೀಲ್ 2015

ಪೇಡ್ ಅಪ್ ವಿಮಾ ಪರಿಹಾರ ಕೋರಿಕೆ (Paid Up Claim)  ಎಂದರೇನು?

ಪೂರ್ತಿ ಕಂತುಗಳನ್ನು ನೀಡದೇ, ಮಧ್ಯದಲ್ಲಿಯೇ ನಿಂತ ಪಾಲಸಿಯ ಅವಧಿ ಪೂರ್ತಿಗೊಂಡಾಗ, ಬದುಕಿ ಉಳಿದ ಪಾಲಸಿಧಾರಕನು ಪಡೆಯಬಯಸುವ, ಪಾಲಿಸಿ ಸೌಲಭ್ಯಗಳು. 



Thursday, April 16, 2015

16 ಎಪ್ರೀಲ್ 2015

ಜೀವಿತ ಸೌಲಭ್ಯ ವಿಮಾ ಪರಿಹಾರ ಕೋರಿಕೆ (Survival Benefit Claim)  ಎಂದರೇನು?

 ಮನೀ ಬ್ಯಾಕ್‍ನಂತಹ ಕೆಲವು ನಮೂನೆಯ ಪಾಲಿಸಿಗಳಲ್ಲಿ, ಎಲ್ಲಾ ಮೂಲ ವಿಮಾ ಮೊತ್ತವನ್ನು ಒಂದೇ ಬಾರಿ ಪಾಲಸಿ ಅವಧಿಯ ಕೊನೆಗೆ ನೀಡದೆ, ಅವಧಿಯ ವಿವಿಧ ಘಟ್ಟಗಳಲ್ಲಿ, ಭಾಗಗಳಲ್ಲಿ ನೀಡಲಾಗುತ್ತದೆ. ಪಾಲಸಿ ಅವಧಿಯ ಆಯಾ ಘಟ್ಟಗಳ ಕೊನೆಗೆ ಪಾಲಸಿಧಾರಕ ಜೀವಂತವಾಗಿದ್ದಾಗ, ಆ ಘಟ್ಟಗಳ ಕೊನೆಯಲ್ಲಿ ನೀಡಲಾಗುವ ವಿಮಾಮೊತ್ತದ ಭಾಗಗಳನ್ನು ಪಡೆಯಲು ವಿಮಾ ಕೋರಿಕೆದಾರನು ಸಲ್ಲಿಸುವ ಬೇಡಿಕೆಗೆ, ಜೀವಿತ ಸೌಲಭ್ಯ ವಿಮಾ ಪರಿಹಾರ ಕೋರಿಕೆ ಎಂದು ಕರೆಯುತ್ತಾರೆ.
 (ಉದಾಹರಣೆಗೆ, 15 ವರ್ಷದ ಮನೀ ಬ್ಯಾಕ್ ಪಾಲಿಸಿಯಲ್ಲಿ, ವಿಮಾ ಪರಿಹಾರವನ್ನು, 5, 10, 15 ವರ್ಷಗಳ ಕೊನೆಗೆ, 30%, 30%, 40% ಭಾಗಗಳಲ್ಲಿ, ನೀಡುತ್ತಾರೆ. ಅಲ್ಲದೇ ಗಳಿಕೆಯಾದ ಬೋನಸ್ಸನ್ನು ಪಾಲಸಿ ಅವಧಿಯ ಕೊನೆಗೆ ನೀಡುತ್ತಾರೆ.)


Wednesday, April 15, 2015

15 ಎಪ್ರೀಲ್ 2015

ಮುಂಗಡ (ಡಿಸ್‍ಕೌಂಟೆಡ್) ವಿಮಾ ಪರಿಹಾರ ಕೋರಿಕೆ (Discounted Claim)ಎಂದರೇನು?

ವಿಮಾ ಪಾಲಿಸಿಯ ಎಲ್ಲಾ ಕಂತುಗಳನ್ನು ನೀಡಿದ ಬಳಿಕ, ಪಾಲಸಿಯ ಅವಧಿಯ ಕೊನೆಯ ವರ್ಷದಲ್ಲಿ, ಆದರೆ ಅವಧಿ ಮುಗಿಯುವ ಮುಂಚೆಯೇ, ಬದುಕಿ ಉಳಿದ ಪಾಲಸಿಧಾರಕನು ಪಡೆಯಬಯಸುವ ಪಾಲಿಸಿ ಸೌಲಭ್ಯಗಳು. 

ಇಲ್ಲಿ ಪರಿಪಕ್ವ ವಿಮಾ ಪರಿಹಾರವನ್ನು ಅವಧಿಗೆ ಮುಂಚೆಯೇ, ಅಂದರೆ ಅವಧಿಯ ಕೊನೆಯ ವರ್ಷದಲ್ಲಿ ನೀಡಲು ಕೇಳುತ್ತಾರೆ. ಕೊನೆಯಲ್ಲಿ ನೀಡುವ ಹಣವನ್ನು ಸ್ವಲ್ಪ ಮುಂಚಿತವಾಗಿಯೇ ಪಡೆಯುವದರಿಂದ, ಪರಿಪಕ್ವ ವಿಮಾ ಪರಿಹಾರ ಹಣದಿಂದ ಸ್ವಲ್ಪ ಬಡ್ಡಿ ಹಣ ಕಳೆದು, ಉಳಿದ ಹಣವನ್ನು ನೀಡುತ್ತಾರೆ.


Tuesday, April 14, 2015

14 ಎಪ್ರೀಲ್ 2015

ವಾರ್ಷಿಕ ಬೋನಸ್  (yearly bonus) ಹಾಗೂ  ಅವಧಿಯ ಕೊನೆಯ ಬೋನಸ್  (Terminal bonus) ಗಳು ಗ್ರಾಹಕನಿಗೆ ಹೇಗೆ ಅನಕೂಲಕಾರಿಯಾಗಿವೆ.

 ವಾರ್ಷಿಕ ಬೋನಸ್  (yearly bonus) ಪಾಲಸಿಯನ್ನು ಪ್ರತಿ ವರ್ಷ ಮುಂದುವರೆಸಲು ಪ್ರೇರೇಪಿಸುತ್ತದೆ.  ಅವಧಿಯ ಕೊನೆಯ ಬೋನಸ್  (Terminal bonus) ಪಾಲಸಿಯನ್ನು ಕೊನೆಯ ವರೆಗೂ ಮುಂದುವರೆಸಲು ಪ್ರೇರೇಪಿಸುತ್ತದೆ.  


Monday, April 13, 2015

13 ಮೇ 2015

ಪರಿಪಕ್ವ ವಿಮಾ ಪರಿಹಾರ ಸಂದಾಯಕ್ಕೆ ಅಗತ್ಯವಿರುವ ದಾಖಲೆಪತ್ರಗಳು ಯಾವುವು?

ಪರಿಪಕ್ವ ವಿಮಾ ಪರಿಹಾರ ಸಂದಾಯಕ್ಕೆ ಅಗತ್ಯವಿರುವ ದಾಖಲೆಪತ್ರಗಳು :
ಮೂಲ ಪಾಲಸಿ ಬಾಂಡ್. (ಅದು ಕಳೆದು ಹೋಗಿದ್ದರೆ, ಇಂಡೆಮ್ನಿಟಿ ಬಾಂಡ್)
ಪಾಲಸಿಹಕ್ಕುದಾರನ ಹೇಳಿಕೆ ಪತ್ರ. 
ವಯಸ್ಸಿನ ದಾಖಲೆ, ( ಈಗಾಗಲೇ ವಯಸ್ಸು ಅಂಗೀಕೃತವಾಗಿರದಿದ್ದರೆ,)
ಪಾಲಸಿಹಕ್ಕುದಾರನಿಂದ ರುಜು ಮಾಡಿದ ಡಿಸ್‍ಚಾರ್ಜ ಫಾರ್ಮ.
ಕೊನೆಗೆ ನೀಡಲಾದ ವಿಮಾ ಕಂತಿನ ರಸೀದಿ.


Sunday, April 12, 2015

12 ಎಪ್ರೀಲ್ 2015

 ವಾರ್ಷಿಕ ಬೋನಸ್  (yearly bonus) ಎಂದರೇನು?

 ಲಾಭದಲ್ಲಿ ಭಾಗವಹಿಸುವ ಪಾಲಸಿಗಳಿಗೆ ಸಾಮಾನ್ಯವಾಗಿ ಪ್ರತಿ ವರ್ಷಕ್ಕೊಮ್ಮೆ ಬೋನಸ್ಸು ನೀಡಲಾಗುವದು. ಇದಕ್ಕೆ ವಾರ್ಷಿಕ ಬೋನಸ್ಸು (ಥಿeಚಿಡಿಟಥಿ boಟಿus) ಎಂದು ಕರೆಯಲಾಗುವದು.


Saturday, April 11, 2015

 11 ಎಪ್ರೀಲ್ 2015

   ವಿಮಾ ಕಂತುಗಳ ವಾಪಸಾತಿ  (Return of premium) ಎಂದರೇನು?

ಕೆಲವು ವಿಮಾ ಪಾಲಸಿಗಳಲ್ಲಿ ಪಾಲಸಿ ರಿಪಕ್ವವಾದಾಗ ಮೂಲ ವಿಮಾರಾಸಿಗೆ ಬದಲಾಗಿ, ಪಾಲಸಿಯಲ್ಲಿ ನೀಡಲಾದ ವಿಮಾಕಂತುಗನ್ನು ಕಂಪನಿಯು ಮರಳಿಸುತ್ತದೆ. ಅ0ದರೆ ಇಲ್ಲಿ ವಿಮಾ ಕಂತುಗಳ ವಾಪಸಾತಿ  
(return of premium) ಯೇ  ಪರಿಪಕ್ವ ವಿಮಾ ಸೌಲಭ್ಯವಾಗಿರುತ್ತದೆ.



Friday, April 10, 2015

10 ಎಪ್ರೀಲ್ 2015

ಪರಿಪಕ್ವ ವಿಮಾ ಪರಿಹಾರ ಕೋರಿಕೆಯ(Maturity Claim)ಲ್ಲಿ ಪಡೆಯಲಾಗುವ ಸೌಲಭ್ಯಗಳು ಯಾವುವು?

 ಪರಿಪಕ್ವ ವಿಮಾ ಪರಿಹಾರ ಕೋರಿಕೆಯಲ್ಲಿ ಪಡೆಯಲಾಗುವ ಸೌಲಭ್ಯಗಳು:-
ಮೂಲ ವಿಮಾ ರಾಶಿ + ಗಳಿಕೆಯಾದ ಬೋನಸ್ಸು. (ಬಹುತೇಕ ಪಾಲಿಸಿಗಳಲ್ಲಿ)
ಮೂಲ ವಿಮಾರಾಶಿ - ಜೀವಿತ ಸೌಲಭ್ಯಗಳು + ಗಳಿಕೆಯಾದ ಬೋನಸ್ಸು. (ಮನೀ ಬ್ಯಾಕ್ ಪಾಲಿಸಿಗಳಲ್ಲಿ)
ನೀಡಲಾದ ಎಲ್ಲಾ ಮೂಲ ವಿಮಾ ಕಂತುಗಳು + ಗಳಿಕೆಯಾದ ಬೋನಸ್ಸು (ಕೆಲವು ಪಾಲಸಿಗಳಲ್ಲಿ)

  

Thursday, April 9, 2015

9 ಎಪ್ರೀಲ್ 2015

ಪರಿಪಕ್ವ ವಿಮಾ ಪರಿಹಾರ ಕೋರಿಕೆ (Maturity Claim) ಎಂದರೇನು?

 ವಿಮಾ ಪಾಲಿಸಿಯ ಎಲ್ಲಾ ಕಂತುಗಳನ್ನು ನೀಡಿದ ಬಳಿಕ, ಪಾಲಿಸಿ ಅವಧಿ ಪೂರ್ತಿಗೊಂಡಾಗ, ಬದುಕಿ ಉಳಿದ ಪಾಲಸಿಧಾರಕನು ಪಡೆಯಬಹುದಾದ ಪಾಲಿಸಿ ಸೌಲಭ್ಯಗಳು. 



Wednesday, April 8, 2015

8 ಎಪ್ರೀಲ್ 2015

ವಿಮಾ ಪರಿಹಾರ ಕೋರಿಕೆ (Claim) ಯನ್ನು ಮುಖ್ಯವಾಗಿ, ಎಷ್ಟು ರೀತಿಗಳಲ್ಲಿ ವಿಂಗಡಿಸಬಹುದು?

 ವಿಮಾ ಪರಿಹಾರ ಕೋರಿಕೆಯನ್ನು ಮುಖ್ಯವಾಗಿ, ಕೆಳಗಿನ ರೀತಿಗಳಲ್ಲಿ ವಿಂಗಡಿಸಬಹುದು.
ಪರಿಪಕ್ವ ವಿಮಾ ಪರಿಹಾರ ಕೋರಿಕೆ, (Maturity Claim)
ಮರಣ ವಿಮಾ ಪರಿಹಾರ ಕೋರಿಕೆ, (Death Claim)
ಜೀವಿತ ಸೌಲಭ್ಯ ವಿಮಾ ಪರಿಹಾರ ಕೋರಿಕೆ, (Suಡಿvivಚಿಟ ಃeಟಿeಜಿiಣ ಅಟಚಿim)


Tuesday, April 7, 2015

7 ಎಪ್ರೀಲ್ 2015

 ವಿಮಾ ಪರಿಹಾರ ಸಂದಾಯ(Claim Settlement) ವೆಂದರೇನು?

ವಿಮಾ ಪಾಲಸಿಯ ಕರಾರಿನ ಪ್ರಕಾರ, ವಿಮಾ ಘಟನೆ ಜರುಗಿದಾಗ ವಿಮಾ ಸಂಸ್ಥೆ, ವಿಮಾಹಕ್ಕುದಾರನಿಗೆ ನೀಡಬೇಕಾದ ಪರಿಹಾರ ಹಣವನ್ನು, ಲೆಕ್ಕ ಮಾಡಿ ಪಾವತಿ ಮಾಡುವದಕ್ಕೆ ವಿಮಾ ಪರಿಹಾರ ಸಂದಾಯ ಎನ್ನುವರು.


Monday, April 6, 2015

6 ಎಪ್ರೀಲ್ 2015

100 ಪಾಲಸಿ ವಿಮಾ ಪರಿಹಾರ ಕೋರಿಕೆಗಳಲ್ಲಿ, 95 ಪಾಲಸಿಗಳಲ್ಲಿ ವಿಮಾ ಪರಿಹಾರ ಸಂದಾಯವಾಗಿದೆ.  5 ಪಾಲಿಸಿಗಳಲ್ಲಿ ಕ್ಲೇಮ್‍ಗಳನ್ನು ನಿರಾಕರಿಸಲಾಗಿದೆ. ಹಾಗಾದರೆ ಕ್ಲೇಮ್ ಪರಿಹಾರ ಸಂದಾಯದ ಅನುಪಾತ ಎಷ್ಟು?


 95%.


Sunday, April 5, 2015

5 ಎಪ್ರೀಲ್ 2015

ಪಾಲಿಸಿ ಖರೀದಿಸುವಾಗ ಗಣನೆಗೆ ತೆಗೆದು ಕೊಳ್ಳುವ ಸಂಗತಿಗಳು ಯಾವುವು?


ಪಾಲಿಸಿ ಖರೀದಿಸುವಾಗ ಗಣನೆಗೆ ತೆಗೆದು ಕೊಳ್ಳುವ ಸಂಗತಿಗಳು :-
ಸರಕಿನ ಬೆಲೆ,
ಸರಕಿನ ಲಕ್ಷಣ,
ಸಂಭವನೀಯ ಇಳುವರಿ,
ತೆರಿಗೆ ಸೌಲಭ್ಯ,
ಸೇವಾ ಮಟ್ಟ, 
ಪಾಲಸಿ ರಚನೆ, (ಅವಧಿ, ಕಂತು ವಿಧಾನ, ನಗದೀಕರಣ ಸೌಲಭ್ಯಗಳು, ಇತ್ಯಾದಿಗಳು.)

Saturday, April 4, 2015

4 ಎಪ್ರೀಲ್ 2015

ಗ್ರಾಹಕನ ಬವಿಷ್ಯ ಜೀವನದಲ್ಲಿ ಸಂಭವಿಸ ಬಹುದಾದ ಹೊಸ ಘಟನೆಗಳು ಯಾವುವು ? ಗ್ರಾಹಕನ ಜೊತೆ ದೀರ್ಘಾವಧಿ ಸಂಬಂಧ (Long Term Relationship)  ಗಳನ್ನು ಬೆಳೆಸಿದಾಗ, ಅವುಗಳು ಹೊಸ ಪಾಲಿಸಿಗಳ ಮಾರಾಟಕ್ಕೆ ಹೇಗೆ ಸಹಾಯಕಾರಿಯಾಗಬಹುದು?


ಗ್ರಾಹಕನ ಭವಿಷ್ಯ ಜೀವನದಲ್ಲಿ ಸಂಭವಿಸ ಬಹುದಾದ ಹೊಸ ಘಟನೆಗಳು ಮದುವೆ, ಮಗುವಿನ ಜನನ, ವೃತ್ತಿಯಲ್ಲಿ ಬದಲಾವಣೆ, ಹೊಸಮನೆಗೆ ಹೋಗುವದು. 
ಈ ಹೊಸ ಘಟನೆಗಳು ಕೆಳಗಿನ ಕಾರಣಗಳಿÀಗಾಗಿ ಹೊಸ ಪಾಲಿಸಿಗಳ ಮಾರಾಟಕ್ಕೆÉ ಸಹಾಯಕಾರಿಯಾಗಬಹುದು.
ಹೆಚ್ಚಿನ ವಿಮಾ ರಕ್ಷಣೆಗೆ ಅವಕಾಶ ಮಾಡಿಕೊಡಬಹುದು.
ಹೆಚ್ಚಿನ ಉಳಿತಾಯಗಳಿಗೆ ಅವಕಾಶ ಮಾಡಿಕೊಡಬಹುದು.
ಹೆಚ್ಚಿನ ಹೂಡಿಕೆಗಳಿಗೆ ಅವಕಾಶ ಮಾಡಿಕೊಡಬಹುದು.
ಹೂಡಿಕೆಯ ರೀತಿಗಳಲ್ಲಿ ಅವಕಾಶ ಮಾಡಿಕೊಡಬಹುದು.
  


Friday, April 3, 2015

3 ಎಪ್ರೀಲ್ 2015

ಗ್ರಾಹಕನ ಜೊತೆ ದೀರ್ಘಾವಧಿ ಸಂಬಂಧ (Long Term Relationship)  ಗಳನ್ನು ಏಕೆ ಬೆಳೆಸ ಬೇಕು?


ದೀರ್ಘಾವಧಿ ಸಂಬಂಧ (Long Term Relationship)  ಬೆಳೆಸುವದರಿಂದ, ಗ್ರಾಹಕನ ಸಮಸ್ಯಗಳಿಗೆ ಪರಿಹಾರ ದೊರಕಿಸುವ ಅವಕಾಶ ದೊರಕುತ್ತದೆ. ಹೊಸ ಪಾಲಿಸಗಳ ಮಾರಾಟಕ್ಕೆ ಸಂಪರ್ಕ ದೊರಕುತ್ತದೆ. ಸಂತೃಪ್ತ ಗಿರಾಕಿ ಹೊಸ ಗ್ರಾಹಕರಿಗೆ ಶಿಫಾರಿಸು ಮಾಡುತ್ತಾರೆ.
ಗ್ರಾಹಕರಿಗೆ ದೀರ್ಘಾವಧಿಯಲ್ಲಿ, ತೆರಿಗೆ, ಹೊಸ ಅವಶ್ಯಕತೆಗಳು, ಸೇವೆಗಳ ಸಂಬಂಧವಾಗಿ ನೆರವು ಬೇಕಾಗುತ್ತದೆ.
ದೀರ್ಘಾವಧಿ ಸಂಬಂಧದಿಂದ ಈ ನೆರವು ಗ್ರಾಹಕನಿಗೆ ಸುಲಭವಾಗಿ ದೊರಕುತ್ತದೆ.



Thursday, April 2, 2015

2 ಎಪ್ರೀಲ್ 2015

ಗ್ರಾಹಕನಿಗೆ ನೀಡಲಾದ ಭರವಸೆಗಳು ಈಡೇರದಿದ್ದಾಗ, ಅವನಿಗೆ ಮುಂದಿರುವ ದಾರಿ ಯಾವುದು?


ಪ್ರತಿಯೊಂದು ವಿಮಾಕಂಪನಿಯು, ಸೇವಾ ವಂಚಿತ ಪಾಲಸಿದಾರಕರ ದೂರುಗಳನ್ನು ಸ್ವೀಕರಿಸಲು, ಗ್ರಾಹಕರ ಅತೃಪ್ತಿಯನ್ನು ತೊಡೆದುಹಾಕಲು, ದೂರು ಸ್ವೀಕರಿಸುವ ವ್ಯವಸ್ಥೆಯನ್ನು ಏರ್ಪಡಿಸಿರುತ್ತದೆ. ಈ ಕೆಲಸವನ್ನು ಮಾಡುವ ವಿಭಾಗಕ್ಕೆ ದೂರು ನಿವಾರಣಾ ಘಟಕ (Complaint redressal cell) ವೆನ್ನುತ್ತಾರೆ. 
ಗ್ರಾಹಕನಿಗೆ ನೀಡಲಾದ ಭರವಸೆಗಳು ಈಡೇರದಿದ್ದಾಗ, ಅವನಿಗೆ ಮುಂದಿರುವ ದಾರಿಯೆಂದರೆ ದೂರು ನಿವಾರಣಾ ಘಟಕಕ್ಕೆ ದೂರು ಸಲ್ಲಿಸಿ, ದೂರಿಗೆ ಪರಿಹಾರ ಪಡೆಯುವದು. ದೂರು ನಿವಾರಣೆಯಾದರೆ ಗ್ರಾಹಕನ ಸಂತೃಪ್ತಿ ಬೆಳೆಯುತ್ತದೆ, ಸಂಸ್ಥೆಯ ಪ್ರಸಿದ್ಧಿ ಹೆಸರು (Brand Name) ವೃದ್ಧಿಯಾಗುತ್ತದೆ.



Wednesday, April 1, 2015

1 ಎಪ್ರೀಲ್ 2015

ಪಾಲಿಸಿ ಮುಂದುವರೆಸುವಿಕೆ (Persistency)  ಯ ವಿವಿಧ ಉಪಾಯಗಳು ಯಾವುವು?


ಪಾಲಿಸಿ ಮುಂದುವರೆಸುವಿಕೆ (Persistency) ಯ ವಿವಿಧ ಉಪಾಯಗಳು:-
ವಿಮಾ ಕಂತಿನ ಅವಧಿಯ/ನೀಡಿಕೆಯ ರೀತಿಯನ್ನು ಗ್ರಾಹಕನಿಗೆ ಹೊಂದಾಣಿಕೆಯಾಗುವ ರೀತಿಯಲ್ಲಿ ನೀಡುವದು. 
ಉದಾ : ವಿಮಾ ಕಂತನ್ನು ಅನಕೂಲಕ್ಕೆ ತಕ್ಕಂತೆ, 1/3/6/12 ತಿಂಗಳಿಗೊಮ್ಮೆ ನೀಡಲು ಅನುವು ಮಾಡಿಕೊಡುವದು. 
ವಿಮಾ ಕಂತನ್ನು ಅನಕೂಲಕ್ಕೆ ತಕ್ಕಂತೆ, ಚೆಕ್ಕು/ಕ್ಯಾಶ್/ಡಿ.ಡಿ./ಈ.ಸಿ.ಎಸ್./ಎಮ್.ಓ. ಗಳ ಮೂಲಕ ನೀಡಲು ಅನುವು ಮಾಡಿಕೊಡುವದು.
ವಿಮಾ ಕಂತು ನೀಡಿಕೆಗೆ, ಪದೇ ಪದೇ ನೆನಪಿಸುವದು. 
ಉದಾ : ವಾರ್ಷಿಕ/ಅರೆವಾರ್ಷಿಕ ಕಂತುಗಳಲ್ಲಿ ಎಷ್ಟೋ ಬಾರಿ, ವಿಮಾ ಕಂತಿನ ಬಾಕೀ ದಿನಾಂಕಗಳನ್ನೇ ಮರೆಯಬಹುದು. ಪತ್ರ/ಈ.ಮೇಲ್/ಮೊಬೈಲ್‍ಸಂದೇಶಗಳ ಮೂಲಕ ಗ್ರಾಹಕನ ವಿಮಾ ಕಂತು ನೀಡಿಕೆಗೆ, ಪದೇ ಪದೇ ನೆನಪಿಸಬಹುದು.
ಗ್ರಾಹಕನ ಜೊತೆ ಸಂಪರ್ಕದಲ್ಲಿರುವದು.
ಗ್ರಾಹಕನ ಸಂಪರ್ಕದಲ್ಲಿರುವದರಿಂದ: ಗ್ರಾಹÀಕನ ಜೊತೆ ಒಳ್ಳೆಯ ಸಂಬಂಧವನ್ನು ಬೆಳೆಸ ಬಹುದು. ಗ್ರಾಹÀಕನ ಸಮಸ್ಯೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಪಾಲಸಿ ಸೇವೆಯನ್ನು ಸರಾಗವಾಗಿ ಮಾಡಬಹುದು. ವಿಮಾಕಂತುಗಳನ್ನು ನೀಡಲು ನೆನಪಿಸಬಹುದು. ಹೊಸ ಪಾಲಸಿಗಳನ್ನು ಮಾರಬಹದು.
ಅಗತ್ಯ ಪಾಲಿಸಿ ಸೇವೆಗಳನ್ನು (Policy servicing) ನೀಡುವದು.
ಪಾಲಸಿ ಸೇವಾಕೊರತೆ, ಪಾಲಸಿ ನಿಲುಗಡೆಗೆ ಕಾರಣವಾಗಬಹುದು. ಅವಶ್ಯವೆನಿಸುವ ಪಾಲಸಿ ಸೇವೆಗಳು : ವಿಳಾಸ ಬದಲಾವಣೆ, ಪಾಲಿಸಿ ಸಾಲ ಕೋರಿಕೆ, ನಾಮೀನೇಶÀನ್/ಅಸೈನ್‍ಮೆಂಟ್ ಮಾಡಿಸುವದು ಅಥವಾ ಬದಲಾಯಿಸುವದು, ಪಾಲಿಸಿಗಳಲ್ಲಿ ಬೇಕೆನಿಸಿದ ಬದಲಾವಣೆಗಳನ್ನು ಕೈಕೊಳ್ಳುವದು, ಇತ್ಯಾದಿ, ಇತ್ಯಾದಿ.



Tuesday, March 31, 2015

31 ಮಾರ್ಚ 2015 

ಪಾಲಿಸಿ ಮುಂದುವರೆಸುವಿಕೆ (Persistency ) ಗೆ ಆತಂಕಕಾರೀ ಸಂಗತಿಗಳು ಯಾವುವು? 

ಪಾಲಿಸಿ ಮುಂದುವರೆಸುವಿಕೆ (Persistency)  ಗೆ ಆತಂಕಕಾರೀ ಸಂಗತಿಗಳು :-
ಪಾಲಸಿ ರಚನೆ - ಪಾಲಸಿ ರಚನೆ ಗ್ರಾಹಕನ ಅವಶ್ಯಕತೆಗಳನ್ನು ಈಡೇರಿಸುವ ಸ್ಥಿತಿಯಲ್ಲಿರದಿದ್ದರೆ, ಪಾಲಿಸಿ ಮುಂದುವರೆಸುವಿಕೆಗೆ ಆತಂಕಕಾರೀಯಾಗುತ್ತದೆ.
ಗಳಿಕೆಯ ನಿಲುಗಡೆ - ನಿರುದ್ಯೋಗ, ಅನಾರೋಗ್ಯ, ಅಂಗವಿಕಲತೆ, ಇತ್ಯಾದಿಗಳ ಕಾರಣಗಳಿಂದ ಉಂಟಾಗುವ ಆದಾಯ ನಿಲುಗಡೆ ಅಥವಾ ಆದಾಯ ಕಡಿತ,  ಪಾಲಿಸಿ ಮುಂದುವರೆಸುವಿಕೆಗೆ ಆತಂಕಕಾರೀಯಾಗುತ್ತದೆ. 
ಪಾಲಸಿ ಸೇವಾ – ಏಜೆಂಟನ ಅಸಡ್ಡೆ, ಸಂಸ್ಥೆಂiÀi ಅನಾಸಕ್ತಿಗಳ ಕಾರಣ, ಪಾಲಸಿ ಸೇವೆಯು ಗ್ರಾಹಕನಿಗೆ ದೊರೆಯದಿದ್ದರೆ, ಗ್ರಾಹಕನ ಅಸಮಾಧಾನ ಪಾಲಿಸಿ ಮುಂದುವರೆಸುವಿಕೆಗೆ ಆತಂಕಕಾರೀಯಾಗುತ್ತದೆ.
ಏಜೆಂಟನ ನಡತೆ : ಏಜೆಂಟನು ಗ್ರಾಹಕನ ಜೊತೆಗೆ ಒಳ್ಳೆಯ ಸಂಬಂಧ ಇಟ್ಟು ಕೊಳ್ಳದಿದ್ದರೆ, ಗ್ರಾಹಕನ ಅಭಿಲಾಷೆಗಳನ್ನು ಈಡೇರಿಸುವ ಪಾಲಿಸಿಯನ್ನು ನೀಡದಿದ್ದರೆ, ಗ್ರಾಹಕನಿಗೆ ಒಳ್ಳೆಯ ಪಾಲಸಿ ಸೇವೆಯನ್ನು  ಒದಗಿಸÀದಿದ್ದರೆ, ಗ್ರಾಹಕನಿಗೆ ಅಸಮಾಧಾನವಾಗಿ, ಈ ಅಸಮಾಧಾನವು ಪಾಲಿಸಿ ಮುಂದುವರೆಸುವಿಕೆಗೆ ಆತಂಕಕಾರೀಯಾಗುತ್ತದೆ.

Monday, March 30, 2015

30 ಮಾರ್ಚ 2015 

ಪಾಲಿಸಿ ಉಳಿಸಿಕೊಳ್ಳುವಿಕೆಯು ಕಡಿಮೆಯಾದರೆ ಆಗುವ ಹಾನಿಗಳು ಯಾವುವು?

ಪಾಲಿಸಿ ಉಳಿಸಿಕೊಳ್ಳ್ಳುವಿಕೆಯ ಅನುಪಾತ (Persistency  Ratio) ಕಡಿಮೆಯದರೆ ಆಗುವ ಹಾನಿಗಳು :
ವಿಮಾ ಕಂಪನಿಗೆ- ಬಹಳಷ್ಟು ಪಾಲಿಸಿಗಳು ಅವಧಿಗೆ ಮೊದಲೇ ನಿಂತು ಹೋಗುವದರಿಂದ, ಸರಂಡರ ಆಗುವದರಿಂದ, ಸಂಸ್ಥೆಯ ಸಂಭವನೀಯ ಉಳಿಕೆ ಹಣ ಕಡಿಮೆಯಾಗಿ, ಅದರ ಗಳಿಕೆಯೂ ಕಡಿಮೆ ಆಗುವದು. ಹೀಗಾಗಿ ಗ್ರಾಹಕರಿಗೆ ಘೋಷಿಸುವ ಬೋನಸ್ ದರದಲ್ಲಿ ಇಳಿಕೆ ಆಗುವದು.
ಗ್ರಾಹಕನಿಗೆ- ಪಾಲಸಿಯನ್ನು ಉಳಿಸಿಕೊಳ್ಳದಿದ್ದರೆ, ಅಂದರೆ ಮುಂದುವರಿಸದಿದ್ದರೆ, ವಿಮಾ ರಕ್ಷಣೆ ನಿಲ್ಲುವದು ಅಥವಾ ಕುಂಠಿತಗೊಳ್ಳುವದು.
ವಿಮಾ ಕಂಪನಿಗೆ-ಗ್ರಾಹಕನು ಪಾಲಸಿಯನ್ನು ಉಳಿಸಿಕೊಳ್ಳದಿದ್ದರೆ, ಅಂದರೆ ಮುಂದುವರಿಸದಿದ್ದರೆ, ಏಜೆಂಟನಿಗೆ ಮುಂದುವರೆಯುವ ಕಮೀಶನ್ ನೀಡಿಕೆ ನಿಲ್ಲುವದು.




Sunday, March 29, 2015

29 ಮಾರ್ಚ 2015 

 ಪಾಲಿಸಿ ಮುಂದುವರೆಸುವಿಕೆಯ ಅನುಪಾತ ಹೆಚ್ಚಾದರೆ ಆಗುವ ಲಾಭಗಳು ಯಾವುವು?

ಪಾಲಿಸಿ ಮುಂದುವರೆಸುವಿಕೆಯ ಅನುಪಾತ (Persistency  Ratio) ಹೆಚ್ಚಾದರೆ ಆಗುವ ಲಾಭಗಳು :-
ವಿಮಾ ಕಂಪನಿಯ ಆದಾಯ ಹೆಚ್ಚಿ, ಲಾಭಾಂಶ ಹೆಚ್ಚುವದು. 
ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಬೋನಸ್ ದೊರೆತು, ಗ್ರಾಹಕ ತೃಪ್ತಿ ಬೆಳೆಯುವದು.
ವಿಮಾ ಸಂಸ್ಥೆಯ ಆಡಳಿತ ವೆಚ್ಚಕಡಿಮೆ ಯಾಗುವದು.



Saturday, March 28, 2015

28 ಮಾರ್ಚ 2015 

ಪಾಲಿಸಿ ಮುಂದುವರೆಸುವಿಕೆಯ ಅನುಪಾತ (Persistency  Ratio) ವೆಂದರೇನು?

ಉತ್ತರ : ಪಾಲಿಸಿ ಮುಂದುವರೆಸುವಿಕೆಯ ಅನುಪಾತ (Persistency  Ratio) ವೆಂದರೆ, ವರ್ಷದ ಪ್ರಾರಂಬದಲ್ಲಿ, ಚಾಲತಿಯಲ್ಲಿದ್ದ ಪಾಲಿಸಿಗಳ ಸಂಖ್ಯೆ, ಯಾವ ಪ್ರಮಾಣದಲ್ಲಿ ವರ್ಷದ ಕೊನೆಗೆ ಬೆಳೆದಿದೆ? ಇದನ್ನು ಕೆಳಗಿನ ಸೂತ್ರದಿಂಸ ಅಳೆಯುತ್ತಾರೆ.                    
                                                                       ವರ್ಷದ ಕೊನೆಯಲ್ಲಿ ಚಾಲತಿಯಲ್ಲಿದ್ದ ಪಾಲಿಸಿಗಳ ಸಂಖ್ಯೆ,
        
       ಪಾಲಿಸಿ ಮುಂದುವರೆಸುವಿಕೆಯ ಅನುಪಾತ = ---------------------------------------------------------------
                                                                          ವರ್ಷದ ಪ್ರಾರಂಬದಲ್ಲಿ, ಚಾಲತಿಯಲ್ಲಿದ್ದ ಪಾಲಿಸಿಗಳ ಸಂಖ್ಯೆ,
                              

Friday, March 27, 2015

27 ಮಾರ್ಚ 2015 

ಪಾಲಿಸಿಯ ವಿನಿಮಯ ಮಾರಾಟ (Product switching )ದ ವಿಷಯದಲ್ಲಿ ಏಜೆಂಟನು ವಹಿಸಬೇಕಾದ ಜಾಗ್ರತೆ ಏನು?  

 ಪಾಲಿಸಿಯ ವಿನಿಮಯ ಮಾರಾಟ (Product switching ) ದ ವಿಷಯದಲ್ಲಿ ಏಜೆಂಟನು ವಹಿಸಬೇಕಾದ ಜಾಗ್ರತೆಗಳು. 
ಪಾಲಿಸಿಯ ವಿನಿಮಯ ಮಾರಾಟ (Product switching ), ಗ್ರಾಹಕನಿಗೆ ಅನಕೂಲಕರವಾಗಿದ್ದರೆ ಮಾತ್ರ ಸೂಚಿಸಬೇಕು.
ಹಳೆಯ ಪಾಲಸಿ ನಿಲ್ಲಿಸುವದರಿಂದ, ರದ್ದು ಮಾಡುವದರಿಂದ ಉಂಟಾಗುವ ಸಾಧಕ, ಬಾಧಕಗಳನ್ನು ತಪ್ಪದೇ ತಿಳಿಸಿ ಹೇಳಬೇಕು.


Thursday, March 26, 2015

26 ಮಾರ್ಚ 2015 

ಪಾಲಿಸಿಯ ವಿನಿಮಯ ಮಾರಾಟ ದಿಂದ ಗ್ರಾಹಕನಿಗೆ ಯಾವಾಗ ಲಾಭ ಉಂಟಾಗುತ್ತದೆ?

ಪಾಲಿಸಿಯ ವಿನಿಮಯ ಮಾರಾಟ (Product switching ) ದಿಂದ, ಕೆಳಗಿನ ಸಂದರ್ಭಗಳಲ್ಲಿ ಗ್ರಾಹಕನಿಗೆ ಲಾಭ ಉಂಟಾಗುತ್ತದೆ.
ಅವಶ್ಯಕತೆಗಳನ್ನು ಈಡೇರಿಸದ ಪಾಲಿಸಿಗಳನ್ನು ಮಾರಾಟ ಮಾಡಿದಾಗ,
ಪಾಲಸಿಯಲ್ಲಿ ಹೂಡಿಕೆಯು ಅಪೇಕ್ಷಿತ ಪ್ರತಿಫಲವನ್ನು ನೀಡದಿದ್ದಾಗ, 
ಪಾಲಸಿಯಲ್ಲಿ ಹೂಡಿಕೆಯು ಅತೀ ಭಾರವೆನಿಸಿದಾಗ,



Wednesday, March 25, 2015

25 ಮಾರ್ಚ 2015 

 ಪಾಲಿಸಿಯ ವಿನಿಮಯ ಮಾರಾಟ (churning)ದಿಂದ ಗ್ರಾಹಕನಿಗೆ ಹೇಗೆ ಹಾನಿ ಉಂಟಾಗುತ್ತದೆ?

 ಪಾಲಿಸಿಯ ವಿನಿಮಯ ಮಾರಾಟ (churning) ದಿಂದ ಗ್ರಾಹಕನಿಗೆ ಕೆಳಗಿನಂತೆ ಹಾನಿ ಉಂಟಾಗುತ್ತದೆ.
ಅನಗತ್ಯವಾಗಿ ಸರಂಡರ ವೆಚ್ಚವನ್ನು ಭರಿಸಬೇಕಾಗುವದು.
ಹೊಸ ಪಾಲಸಿಯಲ್ಲಿ ಅನವಶ್ಯಕವಾಗಿ ಹೆಚ್ಚಿನ ದರದಲ್ಲಿ ವಿಮಾಕಂತುಗಳನ್ನು ನೀಡ ಬೇಕಾಗುವದು.
ಹಳೆ ಪಾಲಸಿಯಲ್ಲಿ ದೊರಕಬಹುದಾದ ಪಾಲಸಿ ಸಾಲದ ಸೌಲಭ್ಯ ಹೊಸ ಪಾಲಿಸಿಯಲ್ಲಿ ಕೂಡಲೇ ಸಿಗದು.



Tuesday, March 24, 2015

24 ಮಾರ್ಚ 2015 

ಪಾಲಿಸಿಯ ವಿನಿಮಯ ಮಾರಾಟ (churning)ವನ್ನು ಹೇಗೆ ತಡೆಯಬಹುದು.


ಆಯ್.ಆರ್.ಡಿ.ಎ. ಯು ‘ಆಚಾರ ಸಂಹಿತೆ’ (code of conduct ) ಯ ಮೂಲಕ ಇದಕ್ಕೆ ತಡೆ ಹಾಕಲು ಕ್ರಮ ಕೈಕೊಂಡಿದೆ.
ಎಜೆಂಟರ ವೃತ್ತಿಪರ ಕಾರ್ಯವು (Professional act), ಇದಕ್ಕೆ ತಡೆ ಒಡ್ಡುತ್ತದೆ.
ಇತರ ಮೂಲಗಳಿಂದ ಪಡೆದ ವಿಮಾ ಜ್ಞಾನವು, ಇದಕ್ಕೆ ತಡೆ ಒಡ್ಡುತ್ತದೆ.



Monday, March 23, 2015

23 ಮಾರ್ಚ 2015 

ಪಾಲಿಸಿಯ ವಿನಿಮಯ ಮಾರಾಟ(churning)ಕ್ಕೆ,  ಅನೈತಿಕ ಆಚರಣೆ ಎಂದು ಯಾಕೆ ಕರೆಯುತ್ತಾರೆ?

 ಕೆಲವು ಬಾರಿ ಏಜೆಂಟರು, ಹೊಸ ಪಾಲಿಸಿಯಲ್ಲಿ ಹೆಚ್ಚಿ ದರದಲ್ಲಿ ಕಮೀಶನ್ ಗಳಿಸುವ ದುರಾಸೆಯಲ್ಲಿ,    
ಹಳೆಯ ಪಾಲಿಸಿಯನ್ನು ಮಾರಿಸಿ ಹೊಸ ಪಾಲಿಸಿ ನೀಡುವರು. ಇದಕ್ಕೆ ಪಾಲಿಸಿಯ ಅನಗತ್ಯ ವಿನಿಮಯ (churning)  ಎನ್ನುತ್ತಾರೆ.  ಹಳೆಯ ಪಾಲಿಸಿಯನ್ನು ಮಾರುವದರಿಂದ ಗ್ರಾಹಕನಿಗೆ ಲಾಭದ ಬದಲು ಹಾನಿಯೇ ಆಗುತ್ತದೆ. ಇದು ವೃತ್ತಿಪರ ಏಜೆಂಟರಿಗೆ ಶೋಭೆ ತರುವದಿಲ್ಲಾ. ಹೀಗಾಗಿ ಇದು ಅನೈತಿಕ ಆಚರಣೆ (Uಟಿ eಣhiಛಿಚಿಟ Pಡಿಚಿಛಿಣiಛಿe) ಎಂದು ಕರೆಸಿಕೊಳ್ಳುತ್ತದೆ.


Sunday, March 22, 2015

22 ಮಾರ್ಚ 2015 

 ಶಿಫಾರಸುಗಳಿಗೆ ಗ್ರಾಹಕನು ವಿರೋಧವನ್ನು ಯಾವ ಸಂದರ್ಭಗಳÀಲ್ಲಿ  ಮಾಡಬಹುದು?  

 ಶಿಫಾರಸುಗಳಿಗೆ ಗ್ರಾಹಕನು ವಿರೋಧವನ್ನು ಕೆಳಗಿನ ಸಂದರ್ಭಗಳಲ್ಲಿ  ಮಾಡಬಹುದು.
ಸಂದರ್ಶನ ಮಾಡುವ ಸಮಯದಲ್ಲಿ ಮಾಹಿತಿ ಸಂಗ್ರಹಿಸುವಾಗ,.
ಪಾಲಿಸಿ ಸೌಲಭ್ಯಗಳನ್ನು ವಿವರಿಸುವ ಸಂದರ್ಭದಲ್ಲಿ.


Saturday, March 21, 2015

21 ಮಾರ್ಚ 2015 

 ಗ್ರಾಹಕನು ಶಿಫಾರಸುಗಳಗಳನ್ನು ಭಾಗಶಃ ಒಪ್ಪಿದರೆ, ಏಜೆಂಟನು ಏನು ಮಾಡಬೇಕು? 

 ಏಜೆಂಟನು ಶಿಫಾರಸುಗಳನ್ನು ಮಾಡಿದಾಗ, ಕೆಲವು ಬಾರಿ ಗ್ರಾಹಕನು,
ಶುದ್ಧ ವಿಮೆಗೆ ಬದಲು, ಉಳಿತಾಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲು ಸೂಚಿಸಬಹುದು.
ಸುರಕ್ಷಿತ ಹೂಡಿಕೆಯ ನಮೂನೆಗೆ ಬದಲಾಗಿ, ಹೆಚ್ಚು ಅಪಾಯಕಾರಿ ನಮೂನೆಯ ಹೂಡಿಕೆಗೆ ವಿನಂತಿಸಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಏಜೆಂಟನು, ಯಾವ ಆಧಾರದ ಮೇಲೆ ತನ್ನ ಶಿಫಾರಸುಗಳನ್ನು ಮಾಡಲಾಗಿದೆ ಎಂಬುದನ್ನು ತಿಳಿಸಿ ಹೇಳಬೇಕು. ಅದಕ್ಕೆ ಗ್ರಾಹಕನಿಗೆ ಮನವರಿಕೆಯಾದರೆ ಸರಿ. ಇಲ್ಲದಿದ್ದರೆ ಗ್ರಾಹಕನ ಇಚ್ಛಿಸಿದ ಬದಲಾವಣೆಗಳಿಗೆ ಏಜೆಂಟನು ಒಪ್ಪಿಗೆಯನ್ನು ಸೂಚಿಸಬೇಕು. ಈ ಬದಲಾವಣೆU,É ಗ್ರಾಹಕನೇ ಹೊಣೆಗಾರನೆಂದು ತಿಳಿಸಲು ಮರೆಯಬಾರದು.



Friday, March 20, 2015

 20 ಮಾರ್ಚ 2015 

ಶಿಫಾರಸುಗಳ ಒಪ್ಪಿಗೆ ಅಥವಾ ತಿರಸ್ಕಾರ ಘಟ್ಟದಲ್ಲಿ, ಏಜೆಂಟನು ಏನು ಮಾಡಬೇಕು? 

ಶಿಫಾರಸುಗಳ ಒಪ್ಪಿಗೆ ಅಥವಾ ತಿರಸ್ಕಾರ ಘಟ್ಟದಲ್ಲಿ, ಏಜೆಂಟನು ಮಾಡಬೇಕಾದುದು;
1) ಶಿಫಾರಸುಗಳಿಗೆ ಒಪ್ಪಿದರೆ; ಗ್ರಾಹಕನಿಗೆ ಪ್ರಪೋಜಲ್ ಫಾರ್ಮನ್ನು ತುಂಬಲು ಕೇಳಿಕೊಳ್ಳಬೇಕು.
    ಶಿಫಾರಸುಗಳಿಗೆ
2) ಒಪ್ಪದಿದ್ದರೆ; ಸರಿಯಾದ ಮನಸಾ ಕೇಳುವಿಕೆಯ ಕೌಶಲ್ಯದ ಮೂಲಕ, ಕಾರಣಗಳನ್ನು ಅರಿತುಕೊಳ್ಳಬೇಕು. ಸಂಶಯ ಪರಿಹಾರ ಮಾಡಿ, ಪುನಃ ಒಪ್ಪಿಗೆಯನ್ನು ಪಡೆಯುವ ಪ್ರಯತ್ನ ಮಾಡಬೇಕು.
3) ಇಷ್ಟಾಗಿಯೂ ಗ್ರಾಹಕ ಒಪ್ಪಿಗೆ ನೀಡದಿದ್ದರೆ, ಗ್ರಾಹಕನ ತಿರಸ್ಕಾರದ ನಿರ್ಣಯವನ್ನು ಗೌರವಿಸಿ, ಪುನಃ ಮತ್ತೊಮ್ಮೆ ಬೇಟಿಯಾಗುವ ದಿನಾಂಕ ನಿರ್ಧರಿಸಿ, ಹೊರಟು ಹೋಗಬೇಕು. ಹೊರಟು ಹೋಗುವ ಮುನ್ನ ಕೆಲವು ಹೊಸ ಬಾವೀ ಗ್ರಾಹಕರ ಹೆಸರುಗಳನ್ನು ಸೂಚಿಸಿ, ಅವರ ಪರಿಚಯ ಹಾಗೂ ವಿಳಾಸಗಳನ್ನು ಪಡೆಯಬೇಕು.



Thursday, March 19, 2015

19 ಮಾರ್ಚ 2015 

ನಿರ್ಧಿಷ್ಟ ಪಾಲಿಸಿಯನ್ನು ಶಿಫಾರಸು (Recommendation) ಮಾಡಿದ್ದಕ್ಕೆ ಕಾರಣಗಳನ್ನು ವಿವರಿಸುವಾಗ, ಜರುಗುವ ಘಟನಾವಳಿಗಳು  ಯಾವುವು?

 ನಿರ್ಧಿಷ್ಟ ಪಾಲಿಸಿಯನ್ನು ಶಿಫಾರಸು ಮಾಡಿದ್ದಕ್ಕೆ ಕಾರಣಗಳನ್ನು ವಿವರಿಸುವಾಗ, ಜರುಗುವ ಘಟನಾವಳಿಗಳು: 
ನಿರ್ಧಿಷ್ಠ ಪಾಲಿಸಿಯನ್ನು ಶಿಫಾರಸು ಮಾಡಿದ್ದಕ್ಕೆ ಕಾರಣಗಳನ್ನು ವಿವರಿಸಬೇಕು.
ಮಾಹಿತಿ ಸಂಗ್ರಹ ಸಮಯದಲ್ಲಿ, ಗ್ರಾಹÀಕನು ತೋರಿಸಿದ ಆಸಕ್ತಿಗೆ ಆನುಗುಣವಾಗಿ, ನೀವು ಪ್ರಾಧಾನ್ಯತೆ ನೀಡಿ ಶಿಫಾರಸನ್ನು ಮಾಡಿದ್ದನ್ನು, ಒತ್ತಿ ಹೇಳಬೇಕು.
ನೀವು ಶಿಫಾರಸು ಮಾಡಿದ ಪಾಲಿಸಿಗಳ ಪ್ರಮುಖ ಲಕ್ಷಣಗಳ ಹಾಗೂ ಸೌಲಭ್ಯಗಳ ವಿವರಣೆಯೊಂದಿಗೆ, ಇತರ ಪಾಲಸಿಗಳೊಂದಿಗೆ ಹೋಲಿಕೆಯನ್ನು ತೋರಿಸ ಬೇಕು.
ಇನ್ನೂ ಗ್ರಾಹಕನಿಗೆ ಸಂಶಯ ಉಳಿದಿದ್ದರೆ, ಅದನ್ನು ನಿವಾರಿಸಿ, ಕೊನೆಗೂ ಶಿಫಾರಸುಗಳಿಗೆ ಗ್ರಾಹಕನ ಒಪ್ಪಿಗಯನ್ನು ಪಡೆಯಬೇಕು.
ಸಂಶಯ ನಿವಾರಣೆಯಾಗದಿದ್ದರೆ, ಬದಲೀ ಶಿಫಾರಸುಗಳನ್ನು (Alternate Recommendations)  ಮಾಡಿ, ಅದಕ್ಕೆ ಗ್ರಾಹಕನ ಅಂತಿಮ ಒಪ್ಪಿಗೆಯನ್ನು ಪಡೆಯಬೇಕು.

     

Wednesday, March 18, 2015

18ಮಾರ್ಚ 2015 

 ಅವಶ್ಯಕತೆಗಳ ಬಗ್ಗೆ ಗ್ರಾಹಕನ ಬದ್ಧತೆಯನ್ನು ಪರೀಕ್ಷಿಸುವಾಗ ಕಾಣ ಬರುವ ಹಂತಗಳು ಯಾವುವು?

 ಅವಶ್ಯಕತೆಗಳ ಬಗ್ಗೆ ಗ್ರಾಹಕನ ಬದ್ಧತೆ (commitment) ಯನ್ನು ಪರೀಕ್ಷಿಸುವಾಗ ಕಾಣ ಬರುವ ಹಂತಗಳು :-
ಶಿಫಾರಸು (Recommendation) ಗಳನ್ನು ಮಾಡುವ ಮುಂಚೆ, ಪರಿಗಣಿಸಲಾದ ಒಂದೊಂದು ಅವಶ್ಯಕತೆಗಳನ್ನೂ, ಗ್ರಾಹಕನಿಗೆ ಪ್ರತ್ಯೇಕವಾಗಿ ತಿಳಿಸುವದು.
ಪ್ರತಿಯೊಂದಕ್ಕೂ ಗ್ರಾಹಕನ ಸಮ್ಮತಿಯನ್ನು ಕೇಳಿ ತಿಳಿದುಕೊಳ್ಳುವದು.
ಏಜೆಂಟನು ಭಾವಿಸಿಕೊಂಡ ಅವಶ್ಯಕತೆಗೆ, ಗ್ರಾಹಕನ ಅಸಮ್ಮತಿ ಇದ್ದರೆ, ಅವನಿಗಿರುವ ತಪ್ಪು ತಿಳುವಳಿಕೆಯನ್ನು ನಿವಾರಿಸಬೇಕು. ನಿವಾರಿಸಲಾಗದಿದ್ದರೆ, ಬದಲೀ ಆರ್ಥಿಕ ಯೋಜನೆಯನ್ನು ತಯಾರಿಸಿ ತೋರಿಸಬೇಕಾಗುವದು.


Tuesday, March 17, 2015

17 ಮಾರ್ಚ 2015 

 ಪಾಲಿಸಿಗಳ ಶಿಫಾರಸು(Recommendation) ಗಳನ್ನು ಮಾಡುವಾಗ, ಕಂಡು ಬರುವ ಹಂತಗಳು ಯಾವುವು?

 ಪಾಲಿಸಿಗಳ ಶಿಫಾರಸುಗಳನ್ನು ಮಾಡುವಾಗ, ಕಂಡು ಬರುವ ಹಂತಗಳು ಕೆಳಗಿನಂತಿವೆ. 
ಮೊದಲು, ಅವಶ್ಯಕತೆಗಳ ಬಗ್ಗೆ ಗ್ರಾಹಕನ ಬದ್ಧತೆಯನ್ನು ಪರೀಕ್ಷೀಸುವದು.
ನಂತರ, ನಿರ್ಧಿಷ್ಟ ಪಾಲಿಸಿಯನ್ನು ಶಿಫಾರಸು ಮಾಡಿದ್ದಕ್ಕೆ ಕಾರಣಗಳನ್ನು ತಿಳಿಸುವದು.
ನಂತರ, ಈ ರೀತಿ ಮಾಡಿದ ಶಿಫಾರಸುಗಳಿಗೆ ಗ್ರಾಹಕ ಒಪ್ಪಿಕೊಳ್ಳಬಹದು, ಅಥವಾ ಒಪ್ಪಿಕೊಳ್ಳಲಿಕ್ಕಿಲ್ಲಾ.
ನಂತರ ಹಳೆಯ ಪಾಲಿಸಿಗೆ ಬದಲಾಗಿ ಹೊಸ ಪಾಲಿಸಿಯನ್ನು ನೀಡುವ ಚಟುವಟಿಕೆ ಪ್ರಾರಂಭವಾಗಬಹುದು.



Monday, March 16, 2015

16 ಮಾರ್ಚ 2015 

ಯುಲಿಪ್ ಪಾಲಿಸಿಯಲ್ಲಿ ಏಜೆಂಟನಿಗೆ ನೀಡಲಾಗುವ ಕಮೀಶನ್‍ದ ಮಾಹಿತಿ ಪ್ರದರ್ಶನ (Disclosure) ವನ್ನು, ಯಾವ ದಿನದಿಂದ ಕಡ್ಡಾಯಗೊಳಿಸಲಾಗಿದೆ?  ಹಾಗೂ ಈ ನಿಯಮವನ್ನು ಪಾಲಿಸುವ ರೀತಿ ಹೇಗೆ?


 1 ಜುಲೈ 2010ರಿಂದ, ಯುಲಿಪ್ ಪಾಲಿಸಿಯಲ್ಲಿ ಏಜೆಂಟನಿಗೆ ನೀಡಲಾಗುವ ಕಮೀಶನ್‍ದ ಮಾಹಿತಿ ಪ್ರದರ್ಶನ (Disclosure) ವನ್ನು ಕಡ್ಡಾಯಗೊಳಿಸಲಾಗಿದೆ. ಈ ಮಾಹಿತಿಯನ್ನು ಯುಲಿಪ್ ಪಾಲಿಸಿಯ ‘ಸೌಲಭ್ಯ ವಿವರಣಾ ದಾಖಲಾತಿ’ (Benefit Illustration Document) ಯಲ್ಲಿ ತೋರಿಸಬೇಕು.
ಈ ಪಾಲಿಸಿಯನ್ನು ಮಾರುವಾಗ, ಆ ಯುಲಿಪ್ ಪಾಲಿಸಿಯ ಸೌಲಭ್ಯ ವಿವರಣಾ ದಾಖಲಾತಿಯಲ್ಲಿ, ಗ್ರಾಹಕನ ರುಜು ಪಡೆದು, ಅದರ ಪ್ರತಿಯನ್ನು, ಪ್ರಪೋಜಲ್ ಪೇಪರಿಗೆ ಲಗತ್ತಿಸಬೇಕು.



Sunday, March 15, 2015

15 ಮಾರ್ಚ 2015 

ಕಡ್ಡಾಯ ಮಾಹಿತಿ ಪ್ರದರ್ಶನ (Disclosure), ಯಾವ ಸಂದರ್ಭಗಳಲ್ಲಿ ಜರುಗಿಸಬೇಕಾಗುತ್ತದೆ?



ಯುಲಿಪ್ ಪಾಲಿಸಿಯಲ್ಲಿ ಏಜೆಂಟನಿಗೆ ನೀಡಲಾಗುವ ಕಮೀಶನ್‍ದ ಮಾಹಿತಿ ಪ್ರದರ್ಶನ (Disclosure) ವನ್ನು ಕಡ್ಡಾಯಗೊಳಿಸಲಾಗಿದೆ. ಈ ಮಾಹಿತಿಯನ್ನು ಈ ಪಾಲಿಸಿಯ ಸೌಲಭ್ಯ ವಿವರಣಾ ದಾಖಲಾತಿ (Benefit Illustration Document) ಯಲ್ಲಿ ನೀಡಬೇಕು.
ಯಾವುದೇ ಪಾಲಿಸಿಯ ಸೌಲಭ್ಯ ವಿವರಣಾ ದಾಖಲಾತಿಯಲ್ಲಿ, ಗಳಿಕೆಯದರ 6% ಹಾಗೂ 10% ಇದ್ದಾಗ,
 ಪಾಲಿಸಿಯಲ್ಲಿ ದೊರಕಬಹುದಾದ ಖಚಿತವಾದ ಹಾಗೂ ಖಚಿತವಲ್ಲದ ಸೌಲಭ್ಯಗಳನ್ನು (Guaranteed and Non guaranteed Benefits )    ಪ್ರತ್ಯೇಕವಾಗಿ ತೋರಿಸಬೇಕು. 



Saturday, March 14, 2015

14 ಮಾರ್ಚ 2015 

ಸಾಮಾನ್ಯವಾಗಿ ಯಾವ ಪಾಲಿಸಿಗಳಿಗೆ ನೀಡಲಾಗುವ ಕಮೀಶನ್ ದರ, ನಿಗದಿತ ಗರಿಷ್ಠ ಮಟ್ಟದ ದರಕ್ಕಿಂತ ಕಡಿಮೆಯಾಗಿರುತ್ತದೆ?   

ಸಾಮಾನ್ಯವಾಗಿ ಕೆಳಗಿನ ನಮೂನೆಯ ಪಾಲಿಸಿಗಳಿಗೆ ನೀಡಲಾಗುವ ಕಮೀಶನ್ ದರ, ನಿಗದಿತ ಗರಿಷ್ಠ ಮಟ್ಟದ ದರಕ್ಕಿಂತ ಕಡಿಮೆಯಾಗಿರುತ್ತದೆ.
ಚಿಕ್ಕ ಅವಧಿಗಳ ಪಾಲಸಿಗಳಲ್ಲಿ. 
ಒಂಟಿ ಕಂತಿನÀ ಪಾಲಸಿಗಳಲ್ಲಿ..
ಅವಧಿ ವಿಮೆ, ವರ್ಷಾಶನ ವಿಮೆ ಹಾಗೂ ನಿವೃತ್ತಿ ವಿಮೆ ಪಾಲಸಿಗಳಲ್ಲಿ.



Friday, March 13, 2015


13 ಮಾರ್ಚ 2015 

 ವಿಮಾ ಏಜೆಂಟನ ಕಮೀಶನ್‍ನ್ನು, ಏಜೆಂಟನ ಹೊರತಾಗಿ ಬೇರೆ ಯಾರಿಗಾದರೂ ನೀಡಬಹುದೆ?  

 ವಿಮಾ ಏಜೆಂಟನು ನಿಧನನಾದರೆ, ನಿಧನಾನಂತರ ಏಜೆಂಟನ ವಿಮಾ ಕಮೀಶನ್‍ನ್ನು, ಆತನ ಕಾನೂನ ಬದ್ಧ ವಾರಸುದಾರರಿಗೆ ನೀಡಲಾಗುವದು.



Thursday, March 12, 2015

12ಮಾರ್ಚ 2015 

 ವಿಮಾ ಏಜೆನ್ಸಿ ರದ್ದಾದರೂ,  ಮುಂದುವರೆÀಸುವ ವಿಮಾಕಂತುಗಳ ಮೇಲೆ ಕಮೀಶನ್ (Renewal Commission)    ಪಡೆಯುವ ಹಕ್ಕು ಯಾವಾಗ ಪ್ರಾಪ್ತಿಯಾಗುತ್ತದೆ?

 ವಿಮಾ ಕಾನೂನು 1938, ಸೆಕ್ಶನ್ 44 ರ ಪ್ರಕಾರ, ಕನಿಷ್ಠ 5 ವರ್ಷಗಳ ವಿಮಾ ಏಜೆನ್ಸಿಯನ್ನು ಪೂರ್ತಿಗೊಳಿಸಿದ ನಂತರ ವಿಮಾ ಏಜೆನ್ಸಿಯು ರದ್ದಾದರೆ; ವಿಮಾ ಏಜೆನ್ಸಿಯು ರದ್ದಾದ ಒಂದು ವರ್ಷದ ಮುಂಚೆ ಕನಿಷ್ಠ 50,000 ರೂ.ಗಳ ವಿಮಾ ವ್ಯವಹಾರ ಚಾಲತಿಯಲ್ಲಿದ್ದರೆ; ಅಂತಹ ಏಜೆಂಟನಿಗೆ ವಿಮಾ ಏಜೆನ್ಸಿಯು ರದ್ದಾದ ನಂತರವೂ, ಮುಂದುವರೆÀಸುವ ವಿಮಾಕಂತುಗಳ ಮೇಲೆ ಕಮೀಶನ್ (Renewal Commission)   ಪಡೆಯುವ ಹಕ್ಕು  ಪ್ರಾಪ್ತಿ ಯಾಗುತ್ತದೆ.


Wednesday, March 11, 2015

11 ಮಾರ್ಚ 2015 

ವಿಮಾ ಏಜೆಂಟನಿಗೆ  ಕೊಡಬಹುದಾದ ಕಮೀಶನ್ (Agent Remuneration)  ದ ಗರಿಷ್ಠ ಪ್ರಮಾಣ ಎಷ್ಟು?

ವಿಮಾ ಕಾನೂನು 1938 ರ ಪ್ರಕಾರ, 
ವಿಮಾ ಏಜೆಂಟನಿಗೆ  ಕೊಡಬಹುದಾದ ಕಮೀಶನ್ (Agent Remuneration)  ದ ಗರಿಷ್ಠ ಪ್ರಮಾಣ :
ಮೊದಲ ವರ್ಷದ ವಿಮಾಕಂತಿನ (First Year Premium)   35%, 
2 & 3ನೇ ವರ್ಷಗಳ ವಿಮಾ ಕಂತಿನ (2nd & 3rd  Year Premium)   7.5 5%. 
ನಂತರದ ವರ್ಷ (Subsequent Year Premium)   ಗಳಿಗೆ 5 % ((ವರ್ಷಾಶನದ ಪಾಲಿಸಿಗಳಿಗೆ ಈ ನಿಯಮ 
       ಅನ್ವಯವಾಗುವದಿಲ್ಲಾ.)
                          ಆಥವಾ
ಮೊದಲ 10 ವರ್ಷಗಳಲ್ಲಿ, ಮೊದಲ ವರ್ಷದ ವಿಮಾ ಕಂತಿನ ಮೇಲೆ– (First Year Premium) 40%, 
       ಮುಂದುವರೆಸುವ ಒಟ್ಟಾರೆ ವಿಮಾಕಂತುಗಳ ಮೇಲೆ - (Renewal  Premium) 4 %.

Tuesday, March 10, 2015

10 ಮಾರ್ಚ 2015 

ಗ್ರಾಹಕನ ಮಾಹಿತಿ ಸಂಗ್ರಹಿಸಿದ ನಂತರ ವಿಮಾ ಏಜೆಂಟನು ನಿರ್ವಹಿಸಬೇಕಾದ ಕರ್ತವ್ಯಗಳು ಯಾವುವು?


ಗ್ರಾಹಕನ ಮಾಹಿತಿ ಸಂಗ್ರಹಿಸಿದ ನಂತರ ವಿಮಾ ಏಜೆಂಟನು ನಿರ್ವಹಿಸಬೇಕಾದ ಕರ್ತವ್ಯಗಳು :-
ಗ್ರಾಹಕನ ಅವಶ್ಯಕತೆಗಳನ್ನು ಆದ್ಯತೆಗಳ ಆಧಾರ (Priority of needs)ದ ಮೇಲೆ ಕ್ರಮಾನುಗತವಾಗಿ   
         ಬರೆಯುವದು.
ಸಮಗ್ರ ಆರ್ಥಿಕ ಶಿಫಾರಸುಗಳನ್ನು ಮಾಡಲು ಸಂಶೋಧನೆ (Research) ಮಾಡುವದು.
ಎಲ್ಲಾ ಅವಶ್ಯಕತೆಗಳ ಈಡೇರಿಕೆಗೆ ಬೇಕಾಗುವ ಹಣವನ್ನು ಲೆಕ್ಕ ಮಾಡಿ ತಿಳಿಸುವದು.
ಪ್ರತಿ ಅವಶ್ಯಕತೆಯ ಈಡೇರಿಕೆಗೆ ಲಭ್ಯವಿರುವ ಎಲ್ಲಾ ಸರಕುಗಳನ್ನು ಗುರುತಿಸಿ, ಅವುಗಳಲ್ಲಿ ಅತೀ ಯೊಗ್ಯವಾದ 
          ಸರಕನ್ನು (most suitable product)  ಶಿಫಾರಸು ಮಾಡುವದು.


Monday, March 9, 2015

9 ಮಾರ್ಚ 2015 

 ವಿಮಾ  ಏಜೆಂಟನ ಕರ್ತವ್ಯಗಳು (Agent’s duties & responsibilities)  ಯಾವುವು?

 ವಿಮಾ  ಏಜೆಂಟನ ಕರ್ತವ್ಯಗಳು (Agent’s duties & responsibilities) :-
ವಿಮಾ ಕಂಪನಿಗಳ ಸರಕುಗಳ ಜ್ನಾನ ಪಡೆದು, ಅವುಗಳ ಲಕ್ಷಣಗಳನ್ನು ಹಾಗೂ ಅವುಗಳು ನೀಡುವ ಸೌಲಭ್ಯಗಳನ್ನು     
     ತಿಳಿದು ಕೊಳ್ಳುವದು.
ವಿಮಾ ಕಂಪನಿಗಳ ಭಾವೀ ಗ್ರಾಹಕರನ್ನು ಗುರುತಿಸುವದು.
ಗ್ರಾಹಕನ ಅವಶ್ಯಕತೆಗಳನ್ನು ಗುರುತಿಸುವದು ಹಾಗೂ ವಿಶ್ಲೇಷಿಸುವದು. 
ಗ್ರಾಹಕನ ಅವಶ್ಯಕತೆಗಳಿಗೆ ಹಾಗೂ ಸಾಮಥ್ರ್ಯಗಳಿಗೆ ಹೊಂದಿಕೆಯಾಗುವಂತಹ ಪಾಲಿಸಿ (Suitable products) 
           ಗಳನ್ನು ಶಿಫಾರಸು ಮಾಡುವದು.
ವಿಮಾ ಕೋರಿಕೆಪತ್ರದಲ್ಲಿ ಸರಿಯಾದ ಮಾಹಿತಿ ಭರ್ತಿಯಾಗುವಂತೆ ನೋಡಿಕೊಳ್ಳುವದು.
ವಿಮಾಕೋರಿಕೆ ಪತ್ರದ ಜೊತೆಗೆ ಲಗತ್ತಿಸಬೇಕಾದ; ವಯಸ್ಸು, ಆದಾಯ,ಗುರುತು,ಆರೋಗ್ಯ,ಹಾಗೂ ಇನ್ನಿತರ 
        ಮಾಹಿತಿಗಳ ದಾಖಲೆ ಪತ್ರಗಳ ಸಲ್ಲಿಕೆಗೆ ಜವಾಬ್ದಾರಿ ತೆಗೆದು ಕೊಳ್ಳುವದು.
ಗ್ರಾಹಕನು ನೀಡಬೇಕಾದ ವಿಮಾಕಂತು, ವಿವಿಧ ಶುಲ್ಕಗಳ ಬಗ್ಗೆ ಮಾಹಿತಿ ನೀಡುವದು.
ಗ್ರಾಹಕನು ಬಯಸಿದರೆ ಪಾಲಿಸಿಗಳಲ್ಲಿ ಪಡೆಯಲಾಗುವ ಕಮೀಶನ್ ಬಗ್ಗೆ ಮಾಹಿತಿ ನೀಡುವದು.
ವಿಮಾ ಕಂಪನಿಗೆ ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನು ವಿಶ್ವಾಸಪೂರ್ವಕವಾಗಿ ಸಲ್ಲಿಸುವದು.
ವಿಮಾಂಕನ ಅಧಿಕಾರಿಗೆ, ಅಪಾಯ ಮೌಲ್ಯ ಮಾಪನಕ್ಕೆ ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನು ನೀಡುವದಕ್ಕೆ 
         ಸಹಕರಿಸುವದು.
ಗ್ರಾಹಕನು ವಿಮಾಕಂತುಗಳನ್ನು ಕಾಲಕ್ಕೆ ಸರಿಯಾಗಿ ನೀಡಲು, ಸಹಾಯ ಸಲ್ಲಿಸುವದು.
ವಿಮಾ ಸಂಸ್ಥೆ ಅನುಮತಿಸಿದರೆ, ಗ್ರಾಹಕನಿಂದ ವಿಮಾಕಂತು ಸ್ವೀಕರಿಸಿ ಕಂಪನಿಗೆ ನೀಡುವದು.
ವಿಮಾ ಪರಿಹಾರ ಸಂದಾಯ ಸುಲಭವಾಗುವಂತೆ, ಪರಿಹಾರ ಹಕ್ಕುದಾರನಿಗೆ ಸಹಾಯ ಸಲ್ಲಿಸುವದು.
ಪಾಲಸಿಯ ವಿಮಾ ಪರಿಹಾರ ಸಂದಾಯವಾಗುವವರೆಗೆ ಗ್ರಾಹಕನಿಗೆ ಪಾಲಸಿಯ ಸೇವೆಯನ್ನು (Policy    
        servicing.)ನೀಡುವದು.

ಗ್ರಾಹಕನ ಹಿತಾಸಕ್ತಿ (customer’s  interest.) ಗಳನ್ನು ಕಾಪಾಡುವದು. 
ವಂಚನೆಯ ಘಟನೆ ನಡೆದಾಗ, ಗ್ರಾಹಕ ಹಾಗೂ ಸಂಸ್ಥೆಗಳ ಪರವಹಿಸದೇ, ತಟಸ್ಥ (neutral) ನಾಗಿ ಉಳಿಯುವದು.



Sunday, March 8, 2015

8 ಮಾರ್ಚ 2015 

 ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿ ಇದೆ?


ವಿಮಾ  ಏಜೆಂಟನು  ವಿಮಾ ಸಂಸ್ಥೆಯನ್ನು  ಪ್ರತಿನಿಧಿಸುತ್ತಾನೆ. 
ವಿಮಾ  ಏಜೆಂಟನು  ವಿಮಾ  ಗ್ರಾಹಕನನ್ನು  ಪ್ರತಿನಿಧಿಸುತ್ತಾನೆ. 
ವಿಮಾ  ಏಜೆಂಟನು  ಆಯ್.ಆರ್.ಡಿ.ಎ.ಯನ್ನು  ಪ್ರತಿನಿಧಿಸುತ್ತಾನೆ.
ವಿಮಾ  ಏಜೆಂಟನು  ವಿಮಾ ಸಂಸ್ಥೆ  ಹಾಗೂ ವಿಮಾ  ಗ್ರಾಹಕ  ಇವರಿಬ್ಬರನ್ನೂ ಪ್ರತಿನಿಧಿಸುತ್ತಾನೆ.



Friday, March 6, 2015

6 ಮಾರ್ಚ 2015 

ವೃತ್ತಿಯ ಪ್ರಮುಖ ಲಕ್ಷಣಗಳು ಯಾವುವು?

 ವೃತ್ತಿಯ (Profession) ಪ್ರಮುಖ ಲಕ್ಷಣಗಳು :-
ಗ್ರಾಹಕರು ಹಾಗೂ ವೃತ್ತಿಯೊಂದಿಗೆ ನೈತಿಕವಾಗಿ (ethically) ನಡೆದುಕೊಳ್ಳುವದು.
ವೃತ್ತಿಯಲ್ಲಿ ದಕ್ಷತೆಯನ್ನು ಕಾಪಾಡಿಕೊಂಡು ಬರುವದು.
ವೃತ್ತಿಯ ಬೆಳವಣಿಗೆಗೆ ಸ್ಪಂಧಿಸುವದು.



Thursday, March 5, 2015

5 ಮಾರ್ಚ 2015 

 ‘ನಿಮ್ಮ ಗ್ರಾಹಕರನ್ನು ಅರಿಯಿರಿ’, ಯೋಜನೆಯಲ್ಲಿ  ಗ್ರಾಹಕನ ಗುರುತಿನ ದಾಖಲಾತಿ ಹಾಗೂ ಗ್ರಾಹಕನ ವಿಳಾಸ ದಾಖಲಾತಿಗಳ ವಿವರಗಳು ಯಾವುವು.

 ‘ನಿಮ್ಮ ಗ್ರಾಹಕರನ್ನು ಅರಿಯಿರಿ’, ಯೋಜನೆಯಲ್ಲಿ  ಗ್ರಾಹಕನ ಗುರುತಿನ ದಾಖಲಾತಿ ಹಾಗೂ ಗ್ರಾಹಕನ ವಿಳಾಸ ದಾಖಲಾತಿಗಳ ವಿವರಗಳು :
ದಾಖಲಾತಿಗಳ ವರ್ಣನೆ.    ಗುರುತಿನ ದಾಖಲಾತಿಯೊ?         ವಿಳಾಸದ ದಾಖಲಾತಿಯೊ?
ಡ್ರೈವಿಂಗ ಲೈಸೆನ್ಸ್.                     ಹೌದು.                            ಹೌದು.
ಪಾಸ್ ಪೋರ್ಟ,                              ಹೌದು.                            ಹೌದು.
ಮತದಾರನ ಗುರುತಿನ ಚೀಟಿ.       ಹೌದು.                              _
ಸೈನಿಕ ಖಾತೆಯ ಗುರುತಿನ ಚೀಟಿ.      ಹೌದು.                               _
ಸರಕಾರೀ ಗುರುತಿನ ಚೀಟಿ,               ಹೌದು.                           _
ವಿದ್ಯತ್/ಟೆಲೆಫೋನ್ ಬಿಲ್.                    _                            ಹೌದು.
ವಿಮಾ ಕಂಪನಿ ರಸೀದಿ.                   _                          ಹೌದು.
ರೇಶನ್ ಕಾರ್ಡ್.                                 _                          ಹೌದು.
ಬ್ಯಾಂಕ ಪಾಸ್ ಬುಕ್.                        _                          ಹೌದು.

Wednesday, March 4, 2015

4 ಮಾರ್ಚ 2015 

 ‘ನಿಮ್ಮ ಗ್ರಾಹಕರನ್ನು ಅರಿಯಿರಿ’ (Know your Customer )  ಯೋಜನೆಯಲ್ಲಿ ಕೇಳಲಾಗುವ ದಾಖಲಾತಿಗಳು ಯಾವುವು ? 

 ‘ನಿಮ್ಮ ಗ್ರಾಹಕರನ್ನು ಅರಿಯಿರಿ’(Know your Customer ) ಯೋಜನೆಯಲ್ಲಿ ಕೇಳಲಾಗುವ ದಾಖಲಾತಿಗಳು :-
1. ಗ್ರಾಹಕನ ಭಾವಚಿತ್ರ. 
2. ಗ್ರಾಹಕನ ಗುರುತಿನ ದಾಖಲಾತಿ.
3. ಗ್ರಾಹಕನ ವಿಳಾಸ ದಾಖಲಾತಿ.


Tuesday, March 3, 2015

3 ಮಾರ್ಚ 2015 

ಸೌಲಭ್ಯ ವಿವರಣಾ ದಾಖಲೆ ಪತ್ರ (Benefit Illustration Document) ಗಳ ವಿಶೇಷತೆ ಏನು? 

ಸೌಲಭ್ಯ ವಿವರಣಾ ದಾಖಲೆ ಪತ್ರ (Benefit Illustration Document) ಗಳ ವಿಶೇಷತೆ ;- ವಿವರಣಾ ದಾಖಲಾತಿ ಪತ್ರಗಳಲ್ಲಿ,

ದೊರಕಬಹುದಾದ, ಖಾತರಿ ಸೌಲಭ್ಯಗಳು (Guaranteed Benefits)    ಹಾಗೂ ಖಾತರಿಯಲ್ಲದ ಸೌಲಭ್ಯ (Non Guaranteed Benefits)    ಗಳನ್ನು ಪ್ರತ್ಯೇಕವಾಗಿ ಹೇಳುತ್ತಾರೆ.  

ಗಳಿಕೆಯ ದರ 6% ಹಾಗೂ 10% ಇದ್ದಾಗ ದೊರಕಬಹುದಾದ ಖಾತರಿಯಲ್ಲದ ಸೌಲಭ್ಯ (Non Guaranteed Benefits)    ಗಳನ್ನು ಹೇಳುತ್ತಾರೆ.  

ವಿಮಾ ಕಂಪನಿಗಳು ವಿಧಿಸುವ ವೆಚ್ಚಗಳ ವರ್ಣನೆಯ ಜೊತೆಗೆ, ಆ ವೆಚ್ಚಗಳ ಅನುಪಸ್ಥಿತಿಯಲ್ಲಿ ಹಾಗೂ ಉಪಸ್ಥಿತಿಯಲ್ಲಿ ಪಡೆಯಬಹುದಾದ, ಒಟ್ಟು ಗಳಿಕೆಯ ದರ (Gross Rate of Return)     ಹಾಗೂ ಒಟ್ಟು ನಿವ್ವಳ ದರ (Net Rate of Return)    ದ ಬಗ್ಗೆ ಹೇಳಿಕೆ ನೀಡಿರುತ್ತಾರೆ.



Monday, March 2, 2015

2 ಮಾರ್ಚ 2015 

ಸೌಲಭ್ಯ ವಿವರಣಾ ದಾಖಲೆ ಪತ್ರ (Benefit Illustration Document) ದ ಉಪಯೋಗ ಏನು?

ಸೌಲಭ್ಯ ವಿವರಣಾ ದಾಖಲೆ ಪತ್ರ (Benefit Illustration Document) ದ ಮೂಲಕ, 
1. ಗ್ರಾಹಕನಿಗೆ ವಿವರಿಸಿದ ಸರಕಿನ ಪ್ರಮುಖ ಲಕ್ಷಣಗಳನ್ನು ತಿಳಿಸಬಹುದು.
2. ಗ್ರಾಹಕನಿಗೆ ಸರಕಿನಿಂದ ದೊರೆಯುವ ಪ್ರಮುಖ ಸೌಲಭ್ಯಗಳನ್ನು ತಿಳಿಸಬಹುದು.
3. ಗ್ರಾಹಕನಿಗೆ ಯಾವ ಸಂದರ್ಭಗಳಲ್ಲಿ, ಯಾವ ಸೌಲಭ್ಯಗಳು ದೊರೆಯುವದೆಂಬದನ್ನು ತಿಳಿಸಬಹುದು.



Sunday, March 1, 2015

1 ಮಾರ್ಚ 2015 

ಪ್ರತಿಯೊಂದು ಅವಶ್ಯಕತೆಗಳಿಗೆ ಶಿಫಾರಸುಗಳನ್ನು ಪ್ರಸ್ತಾಪಿಸುವಾಗ, ಏಜೆಂಟನು ನಿರ್ವಹಿಸ ಬೇಕಾದ ಕರ್ತವ್ಯಗಳೇನು?

ಪ್ರತಿಯೊಂದು ಅವಶ್ಯಕತೆಗಳಿಗೆ ಶಿಫಾರಸುಗಳನ್ನು ಪ್ರಸ್ತಾಪಿಸುವಾಗ, ಏಜೆಂಟನು ನಿರ್ವಹಿಸ ಬೇಕಾದ ಕರ್ತವ್ಯಗಳು.
 ಸರಕುಗಳು ನೀಡುವ ಪ್ರಮುಖ ಸೌಲಭ್ಯಗಳನ್ನು ತಿಳಿಯುವಂತೆ ಹೇಳಬೇಕು.
 ಆ ಸರಕನ್ನೇ ಯಾಕೆ ಶಿಫಾರಸು ಮಾಡಿದ ಎಂಬುದನ್ನು ತಪ್ಪದೇ ಹೇಳಬೇಕು.
 ಕೆಲವು ಚಿಕ್ಕ ಪುಟ್ಟ ಅವಶ್ಯಕತೆÀಗಳನ್ನು, ಆ ಸರಕು ಈಡೇರಿಸದಿದ್ದರೆ, ಆ ಸರಕಿಗೆ ಇರುವ ಇತಿಮಿತಿಯನ್ನು ತಿಳಿ ಹೇಳಬೇಕು.

Saturday, February 28, 2015

28 ಫೆಬ್ರುವರಿ 2015 

ಗ್ರಾಹಕನು ಏಜೆಂಟನ ಪ್ರಸ್ತಾಪಗಳನ್ನು ಒಪ್ಪಿಕೊಳ್ಳದಿದ್ದರೆ, ಏಜೆಂಟನು ಏನು ಮಾಡಬೇಕು? 

ಗ್ರಾಹಕನು ಏಜೆಂಟನ ಪ್ರಸ್ತಾಪಗಳನ್ನು ಒಪ್ಪಿಕೊಳ್ಳದಿದ್ದರೆ,
ಗ್ರಾಹಕನ ಪರಿಸ್ಥಿತಿಯಲ್ಲಿ, ಯೋಚನೆಯಲ್ಲಿ ಬದಲಾವಣೆ ಸಂಭವಿಸಿದ್ದರೆ, ಏಜೆಂಟನು ಬದಲಾದ ಸನ್ನಿವೇಶದಲ್ಲಿ, ಹೊಸ ಪ್ರಸ್ತಾಪಗಳನ್ನು ಸೂಚಿಸ ಬೇಕು.
ಪರಿಸ್ಥಿತಿಯಲ್ಲಿ, ಯೋಚನೆಯಲ್ಲಿ ಯಾವ ಬದಲಾವಣೆಗಳು ಕಂಡುಬರದಿದ್ದರೆ, ಏಜೆಂಟನು ಪ್ರಸ್ತಾಪದ ಹಿಂದೆ ಇರುವ ವಿಚಾರ ಧಾರೆಗಳ ಬಗ್ಗೆ ತಿಳುವಳಿಕೆ ನೀಡಬೇಕು.
ಗ್ರಾಹಕನ ಅವಶ್ಯಕತೆಗಳ ಬಗ್ಗೆ ಗಾಢವಾಗಿ ಚಿಂತಿಸಿರುವದರ ಬಗ್ಗೆ ಮನವರಿಕೆ ಮಾಡಲು ಯತ್ನಿಸ ಬೇಕು.




Friday, February 27, 2015

27 ಫೆಬ್ರುವರಿ 2015 

ಶಿಫಾರಸುಗಳ ಪ್ರಸ್ತಾಪ ಪದ್ಧತಿ ಹೇಗಿರುತ್ತದೆ ?

 ಶಿಫಾರಸುಗಳ ಪ್ರಸ್ತಾಪ ಪದ್ಧತಿ :-
ಮೊದಲು ಉಭಯ ಕುಶಲೋಪರಿಯ ಬಗ್ಗೆ ಮಾತುಕತೆ ಆಡ ಬೇಕು.
ನಂತರ ಅವಶ್ಯಕತೆಗಳ ಈಡೇರಿಕೆಗೆ ಹಾಗೂ ಆದ್ಯತೆಗಳಿಗೆ ಗ್ರಾಹಕನ ಬದ್ಧತೆಯನ್ನು ಪರೀಕ್ಷಿಸಬೇಕು.
ಶಿಫಾರಸುಗಳ ಹಿಂದೆ ಇರುವ ವಿಚಾರ ಧಾರೆಯನ್ನು ತಿಳಿಸ ಬೇಕು.
ಪ್ರತಿಯೊಂದು ಅವಶ್ಯಕತೆಗಳಿಗೂ ಏಜೆಂಟನು ತನ್ನ  ಪ್ರಸ್ತಾಪದ ಬಗ್ಗೆ ವಿವರಿಸಬೇಕು.
ಪ್ರತಿ ಪ್ರಸ್ತಾಪದ ನಂತರ ಏಜೆಂಟನ ಒಪ್ಪಿಗೆಯು ದೊರೆತ ನಂತರವೇ, ಮುಂದಿನ ಪ್ರಸ್ತಾಪಕ್ಕೆ ಸಾಗ ಬೇಕು.
ಕೊನೆಗೆ ಸರಕುಗಳ ಬಗ್ಗೆ ಲಿಖಿತ ವಿವರಣೆ ನೀಡಿರಿ.



Thursday, February 26, 2015

26 ಫೆಬ್ರುವರಿ 2015 

ಶಿಫಾರಸು ಪ್ರದರ್ಶನ (Presentation of Recommendation) ಪದ್ಧತಿ ಹೇಗಿರುತ್ತದೆ ?

ಉತ್ತರ : ಶಿಫಾರಸು ಪ್ರದರ್ಶನ ಪದ್ಧತಿ :-
ಶಿಫಾರಸು ಪ್ರದರ್ಶನ ಪೂರ್ವ ನಿಗದಿತ ಸ್ಥಳದಲ್ಲಿಯೇ ಜರುಗಬೇಕು.
ಬೆಲೆ ಹಾಗೂ ಸೌಲಭ್ಯ ವಿವರಗಳ ನಡುವಿನ ಸಂಬಂಧಗಳನ್ನು ವಿವರಿಸಬೇಕು.
ಶಿಫಾರಸು ಪ್ರದರ್ಶನಕ್ಕೆ, ವೃತ್ತಿಪರ ರೀತಿಯಲ್ಲಿಯೇ ಸಂದರ್ಶನ ಜರುಗಬೇಕು.



Wednesday, February 25, 2015

25 ಫೆಬ್ರುವರಿ 2015 

 ಶಿಫಾರಸು ಪ್ರದರ್ಶನ (Presentation of Recommendation) ದ ಲಕ್ಷಣಗಳು ಯಾವುವು?

ಶಿಫಾರಸು ಪ್ರದರ್ಶನದ ಲಕ್ಷಣಗಳು :-
ಶಿಫಾರಸುಗಳಲ್ಲಿ ಪ್ರಾಮುಖ್ಯತೆ ಪಡೆಯಬೇಕಾದದ್ದು, 1)ಪ್ರದರ್ಶನ ಕೌಶಲ್ಯ, 2) ಅವಗಳಲ್ಲಿರುವ ವಿಷಯಗಳು.
ಶಿಫಾರಸುಗಳು ಅವಶ್ಯಕತೆಗಳನ್ನು ಪೂರೈಸಬೇಕು.
ಶಿಫಾರಸುಗಳನ್ನು ಗ್ರಾಹಕನ ಆರ್ಥಿಕ ಸಾಮಥ್ರ್ಯದ ಮಿತಿಯಲ್ಲಿಯೇ ಮಾಡಬೇಕು.



Tuesday, February 24, 2015

24 ಫೆಬ್ರುವರಿ 2015 

ಮಾಹಿತಿ ಸಂಗ್ರಹದ ಅಂತಿಮ ಗುರಿಗಳು ಯಾವುದು? 

ಮಾಹಿತಿ ಸಂಗ್ರಹದ ಅಂತಿಮ ಗುರಿಗಳು :-
ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ, ಕ್ರಮವಗಿ ಹೊಂದಿಸಿಡುವದು.
ಎಲ್ಲಾ ಮಾಹಿತಿಗಳನ್ನು ವಿವರವಾಗಿ ಚರ್ಚಿಸುವದು.
ಎಲ್ಲಾ ಮಾಹಿತಿಗಳನ್ನು ಸ್ಪಷ್ಟವಾಗಿ ವಿಶ್ಲೇಷಿಸುವದು.


Monday, February 23, 2015

23 ಫೆಬ್ರುವರಿ 2015 

ಶಿಫಾರಸುಗಳನ್ನು (Recommendation) ಮಾಡುವಾಗ ಏಜೆಂಟನು ಎದುರಿಸುವ ಕಷ್ಟಕರ ಸಂಗತಿ ಯಾವುದು? 

 ಶಿಫಾರಸುಗಳನ್ನು ಮಾಡುವಾಗ ಏಜೆಂಟನು ಎದುರಿಸುವ ಕಷ್ಟಕರ ಸಂಗತಿ :-
ಗ್ರಾಹಕನೂ ಈಗಾಗಲೇ ಖರೀದಿಸಿದ ಅನಾನುಕೂಲ ಸರಕುಗಳ ಬಗ್ಗೆ ತನ್ನ ಪ್ರಾಮಾಣಿಕ ಅಭಿಪ್ರಾಯಗಳನ್ನು ತಿಳಿಸುವದು, ಏಜೆಂಟನಿಗೆ ಕೆಲವೊಮ್ಮೆ ಕಷ್ಟ ಎನಿಸಬಹುದು.


Sunday, February 22, 2015

22 ಫೆಬ್ರುವರಿ 2015 

ಶಿಫಾರಸು (Recommendation)  ಗಳನ್ನು ಮಾಡುವಾಗ ಗಮನಿಸಬೇಕಾದ ಸಂಗತಿಗಳು ಯಾವುದು? 

 ಶಿಫಾರಸುಗಳನ್ನು ಮಾಡುವಾಗ ಗಮನಿಸಬೇಕಾದ ಸಂಗತಿಗಳು :-
ಸರಕು ಬೆಲೆ ಹಾಗೂ ಸೌಲಭ್ಯ ವಿವರಣೆಗಳನ್ನು ಚೆನ್ನಾಗಿ ಅಭ್ಯಸಿಸಬೇಕು.
ಸರಕು ಖರೀದಿಯಲ್ಲಿ, ಬೆಲೆಯೇ ಪ್ರಾಧಾನ್ಯವಾಗಿದ್ದರೆ, ಕಡಿಮೆ ಬೆಲೆಯ ಸರಕುಗಳನ್ನು ಶಿಫಾರಸು ಮಾಡಬೇಕು.
ಗ್ರಾಹಕನ ಹೂಡಿಕೆಯ ಸಾಮಥ್ರ್ಯದ ಮಿತಿಯೊಳಗೆ ಶಿಫಾರಸು ಮಾಡಬೇಕು.
ಗ್ರಾಹಕನೂ ಈಗಾಗಲೇ ಖರೀದಿಸಿದ ಸರಕುಗಳನ್ನು ಏಜೆಂಟನು ಶಿಫಾರಸು ಮಾಡಲೇಬೇಕಾಗುವದು.
ಇಂತಹ ಸರಕುಗಳನ್ನು ಕೈಬಿಡುವದು ಕೆಲವೊಮ್ಮೆ ಕಷ್ಟ ಎನಿಸಬಹುದು.




Saturday, February 21, 2015

21 ಫೆಬ್ರುವರಿ 2015 

ಪ್ರತಿಯೊಂದು ಅವಶ್ಯಕತೆಗೆ ಸರಕನ್ನು ಪ್ರತ್ಯೇಕವಾಗಿ ಸೂಚಿಸುವಾಗ ಕಂಡುಬರುವ ಅನಾನುಕೂಲ ಸಂಗತಿಗಳು ಯಾವುವು? 

ಪ್ರತಿಯೊಂದು ಅವಶ್ಯಕತೆಗೆ ಸರಕನ್ನು ಪ್ರತ್ಯೇಕವಾಗಿ ಸೂಚಿಸುವಾಗ ಕಂಡುಬರುವ ಅನಾನುಕೂಲ ಸಂಗತಿಗಳು :-
ಕೆಲವು ಸರಕುಗಳ ಬೆಲೆ ಹೆಚ್ಚಾಗಿರಬಹುದು.
ಕೆಲವು ಸರಕುಗಳು ಅವಶ್ಯಕತೆಗಿಂತ ಹೆಚ್ಚಿಗೆ ಬೇಡಿಕೆಗಳನ್ನು ಪೂರೈಸಬಹುದು..
ಕೆಲವು ಸರಕುಗಳ ಅವಧಿ ಅವಶ್ಯಕತೆಗಿಂತ ಹೆಚ್ಚಿಗೆ ಇರಬಹುದು.
ಕೆಲವು ಸರಕುಗಳಲ್ಲಿ ಹೂಡಿಕೆಯ ಅಪಾಯ ಮಟ್ಟ ನಿರೀಕ್ಷೆಗಿಂತ ಹೆಚ್ಚಾಗಿರಬಹುದು.



Friday, February 20, 2015

20 ಫೆಬ್ರುವರಿ 2015 

ಪ್ರತಿಯೊಂದು ಅವಶ್ಯಕತೆಗೆ ಸರಕನ್ನು ಪ್ರತ್ಯೇಕವಾಗಿ ಸೂಚಿಸಲು ಯಾವ ಜಾಗ್ರತೆ ವಹಿಸಬೆಕು? 

ಪ್ರತಿಯೊಂದು ಅವಶ್ಯಕತೆಯ ಈಡೇರಿಕೆಗಾಗಿ, ಅದರ ಮುಂದೆ ಲಭ್ಯವಿರುವ ಅನೇಕ ಸರಕುಗಳನ್ನು ಪಟ್ಟ ಮಾಡಿರಿ. ಈ ರೀತಿ ಲಭ್ಯವಿರುವ ಅನೇಕ ಸರಕುಗಳಲ್ಲಿ, ಅತೀ ಅನಕೂಲಕರ ಸರಕಿಗೆ ಗುರುತು  ಹಾಕಿ, ಆಯ್ಕೆ ಮಾಡಿರಿ. ಅನಕೂಲಕರ ಸರಕು ಅಂದರೆ; ಬೆಲೆ, ಬೇಡಿಕೆ ಪೂರೈಕೆ, ಹೂಡಿಕೆ ಅವಧಿ, ಹೂಡಿಕೆಯಲ್ಲಿಯ ಅಪಾಯ ಮಟ್ಟ, ಇತ್ಯಾದಿಗಳ ಹಿನ್ನೆಲೆಗಳಲ್ಲಿ ಅನಕೂಲಕರವಾಗುವ ಸರಕು.



Thursday, February 19, 2015

19 ಫೆಬ್ರುವರಿ 2015 

ಅವಶ್ಯಕ ಸರಕುಗಳನ್ನು ಹುಡುಕುವ ವಿಧಾನದಲ್ಲಿ ಏಜೆಂಟನ ಪಾತ್ರ ಯಾವುದು?

ಅವಶ್ಯಕ ಸರಕುಗಳನ್ನು ಹುಡುಕುವ ವಿಧಾನದಲ್ಲಿ ಏಜೆಂಟನ ಪಾತ್ರ :-      
1) ಸರಿಯಾದ ಸರಕುಗಳನ್ನು, ಅವುಗಳ ಮುಖ್ಯ ಲಕ್ಷಣಗಳನ್ನು, ಕರ ರಿಯಾಯತಿಗಳನ್ನು ಗುರುತಿಸುವದಾಗಿರುತ್ತದೆ.
2) ಬೇರೆ ಯಾವದೇ ಮೂಲಗಳಿಂದ, ಈಗಾಗಲೇ ಬೇರೆ ಕೆಲವು ಸರಕುಗಳು ಲಭ್ಯವಾಗಿದ್ದರೆ, ಅವುಗಳನ್ನು ಪತ್ತೆ  ಹಚ್ಚುವದು.


Wednesday, February 18, 2015

18 ಫೆಬ್ರುವರಿ 2015 

ಅವಶ್ಯಕ ಸರಕುಗಳನ್ನು ಹುಡುಕುವ ವಿಧಾನದಲ್ಲಿ ತೋರಿಸಬೇಕಾದ ಜಾಗ್ರತೆಗಳು ಯಾವುವು?

ಅವಶ್ಯಕ ಸರಕುಗಳನ್ನು ಹುಡುಕುವ ವಿಧಾನದಲ್ಲಿ ತೋರಿಸಬೇಕಾದ ಜಾಗ್ರತೆÉಗಳು:-
ಪ್ರತಿಯೊಂದು ಅವಶ್ಯಕತೆಗಳ ಈಡೇರಿಕೆಗೆ ಬೇಕಾದ ಹಣವನ್ನು ಹೆಚ್ಚಾಗಿಯೂ ಹೇಳಬಾರದು, ಕಡಿಮೆಯಾಗಿಯೂ ಹೇಳಬಾರದು. ಒಂದು ಅವಶ್ಯಕತೆಯ ಈಡೇರಿಕೆಗೆ ಬೇಕಾದ ಹಣವನ್ನು ಹೆಚ್ಚಾಗಿ ಹೇಳಿದರೆ, ಅನವಶ್ಯಕವಾಗಿ ಹೆಚ್ಚು ಹಣ ಒದಗಿಸಿದಂತಾಗುತ್ತದೆ. ಒಂದು ಅವಶ್ಯಕತೆಯ ಈಡೇರಿಕೆಗೆ ಬೇಕಾದ ಹಣವನ್ನು ಕಡಿಮೆಯಾಗಿ ಹೇಳಿದರೆ, ಆ ಅವಶ್ಯಕತೆಯನ್ನು ಪೂರ್ಣವಾಗಿ ಈಡೇರಿಸಿದಂತೆ ಆಗುವದಿಲ್ಲಾ.


Tuesday, February 17, 2015

17ಫೆಬ್ರುವರಿ 2015 

 ಅವಶ್ಯಕ ಸರಕುಗಳನ್ನು ಹುಡುಕುವ ವಿಧಾನದಲ್ಲಿ ತೋರಿಸಬೇಕಾದ ವೃತ್ತಿಪರ ನಡತೆಗಳು ಯಾವುವು?

ಅವಶ್ಯಕ ಸರಕುಗಳನ್ನು ಹುಡುಕುವ ವಿಧಾನದಲ್ಲಿ ತೋರಿಸಬೇಕಾದ ವೃತ್ತಿಪರ ನಡತೆಗಳು:-
ಪ್ರತಿಯೊಂದು ಹಂತದಲ್ಲಿ ವೃತ್ತ್ತಿಪರ ನಡತೆ, ಪ್ರಾಮಾಣಿಕತೆಗಳನ್ನು ಪ್ರದರ್ಶಿಸಬೇಕು.
ವಾಸ್ತವಿಕ ಅವಶ್ಯಕತೆಗಳನ್ನು ಗುರುತಿಸಿ, ಭಾವನಾತ್ಮಕ ಅವಶ್ಯಕತೆಗಳನ್ನು ತೊಡೆದುಹಾಕಿ, ಸರಿಯಾದ ವಿಶ್ಲೇಷಣೆಯನ್ನು ಮಾಡಬೇಕಾಗುತ್ತದೆ.
ಪ್ರತಿಯೊಂದು ಅವಶ್ಯಕತೆಗೆ ಬೇಕಾಗುವ ಹಣವನ್ನು ಸರಿಯಾಗಿ ಲೆಕ್ಕ ಮಾಡಿ ಹೇಳಬೇಕಾಗುತ್ತದೆ.



Monday, February 16, 2015

16 ಫೆಬ್ರುವರಿ 2015 

 ಮಾಹಿತಿ ವಿಶ್ಲೇಷಣೆಯ ನಂತರ ಶಿಫಾರಸುಗಳನ್ನು ಮಾಡುವ ವಿಧಾನ ಹೇಗಿರುತ್ತದೆ?

ಉತ್ತರ : ಮಾಹಿತಿ ವಿಶ್ಲೇಷಣೆಯ ನಂತರ ಶಿಫಾರಸುಗಳನ್ನು ಮಾಡುವ ವಿಧಾನ ಕೆಳಗಿನಂತಿರುತ್ತದೆ.
ಗುರುತಿಸಿದ ಅವಶ್ಯಕತೆಗಳನ್ನು ಆದ್ಯತೆಗಳ ಆಧಾರದ ಮೇಲೆ ಕ್ರಮಾನುಗತವಾಗಿ ಪಟ್ಟಿ ಮಾಡಬೇಕು.
ಎಲ್ಲಾ ಅವಶ್ಯಕತೆಗಳಿಗೆ ಸಮಗ್ರ ಶಿಫಾರಸುಗಳನ್ನು ಮಾಡಲು ಬೇಕಾದ ಎಲ್ಲಾ ಮಾಹಿತಿ ಕಲೆ ಹಾಕಬೇಕು.
ಪ್ರತಿಯೊಂದು ಅವಶ್ಯಕತೆಗೆ ಬೇಕಾಗುವ ಹಣವನ್ನು ಲೆಕ್ಕ ಮಾಡುತ್ತಾ ಹೋಗಿರಿ.
ಎಲ್ಲಾ ಅವಶ್ಯಕತೆಗಳು ಹಾಗೂ ಅವುಗಳ ಈಡೇರಿಕೆಗೆ ಬೇಕಾಗುವ ಹಣದ ಬಗ್ಗೆ ವರದಿ ತಯಾರಸಿರಿ.
ಗುರಿ ಈಡೇರಿಕೆಗೆ ಬೇಕಾದ ಹಣ, ಹಾಗೂ ಅದನ್ನು ಪಡೆಯಲು ನೀಡಬೇಕಾದ ಕಂತುಗಳು, ಅಂದರೆ ಪಡೆಯ ಬೇಕಾದ ಸೌಲಭ್ಯ ಹಾಗೂ ಅದಕ್ಕೆ ತೆರಬೇಕಾದ ಬೆಲೆ, ಇವುಗಳನ್ನು ಉದಾಹರಣೆಯೊಂದಿಗೆ ವಿವರಿಸಿರಿ.
ಪ್ರತಿಯೊಂದು ಗುರಿ ಈಡೇರಿಕೆಯ ಮುಂದೆ ಲಭ್ಯವಿರುವ ಅನೇಕ ಸರಕುಗಳನ್ನು ಪಟ್ಟ ಮಾಡಿರಿ. ಈ ರೀತಿ ಲಭ್ಯವಿರುವ ಅನೇಕ ಸರಕುಗಳಲ್ಲಿ, ಅತೀ ಅನಕೂಲಕರ ಸರಕಿಗೆ ಗುರುತು  ಹಾಕಿ, ಆಯ್ಕೆ ಮಾಡಿರಿ.



Sunday, February 15, 2015

15 ಫೆಬ್ರುವರಿ 2015 

ಮಾಹಿತಿ ಸಂಗ್ರಹದ ಇನ್ನೊಂದು ಮಹತ್ವದ ಹೆಚ್ಚಿನ ಉದ್ಯೇಶ ಯಾವುದು? 

ಮಾಹಿತಿ ಸಂಗ್ರಹದ ಇನ್ನೊಂದು ಮಹತ್ವದ ಹೆಚ್ಚಿನ ಉದ್ಯೇಶ ಯಾವುದು ಎಂದರೆ,
ಭವಿಷ್ಯದಲ್ಲಿ ಗ್ರಾಹಕರಿಗೆ ಅವಶ್ಯವೆನಿಸುವ ವಿಮಾಸರಕುಗಳನ್ನು ಇಂದೇ ಗುರುತಿಸುವದು, 
ಹಾಗೂ ಅದರ ಬಗ್ಗೆ ಪರಿಶೀಲಿಸಿ ನಿರ್ಣಯ ಕೈಕೊಳ್ಳಲು ಚರ್ಚಿಸ ಬೇಕಾದ ದಿನಾಂಕವನ್ನೂ ಇಂದೇ ನಿರ್ಧರಿಸುವದು. (ಬಹುಶಃ ಆ ಸಮಯದಲ್ಲಿಯೇ ಹೊಸ ಪಾಲಿಸಿ ಕೊಳ್ಳಲು ಹೆಚ್ಚುವರಿ ಹಣ ಲಭ್ಯವಾಗ ಬಹುದು.)



Saturday, February 14, 2015

14 ಫೆಬ್ರುವರಿ 2015 

ಪಾಲಿಸಿ ಅವಧಿ ಕಂಡು ಹಿಡಿಯಲು ಇರುವ ತೊಡಕುಗಳು ಯಾವುವು?

ಪಾಲಿಸಿ ಅವಧಿ ಕಂಡು ಹಿಡಿಯಲು ಇರುವ ತೊಡಕುಗಳ ಉದಾಹರಣೆಗಳು ಕೆಳಗಿನಂತಿವೆ
ಮಗುವಿನ ವಯಸ್ಸು ತಿಳಿಯುತ್ತದೆ, ಆದರೆ ತನ್ನ ಶಿಕ್ಷಣ ಪೂರ್ತಿಗೊಳಿಸಲು ಮಗು ತನ್ನ ಪೋಷಕರ ಮೇಲೆ ಅವಲಂಬಿತವಾಗುವ ಅವಧಿ ತಿಳಿಯುವದಿಲ್ಲಾ.
ಕೊನೆಯ ಮಗುವು ಯಾವಾಗ ಶಿಕ್ಷಣ ಮುಗಿಸುವದೆÀಂಬುದನ್ನು ತಿಳಿಯುವದು ಕಷ್ಟದ ಸಂಗತಿಯಾಗಿದೆ.
ಶಿಕ್ಷಣ ಮುಗಿಸುವ ವಯಸ್ಸು, ಒಂದು ಮಗುವಿನಿಂದ, ಇನ್ನೊಂದು ಮಗುವಿಗೆ ಬೇರೆಯಾಗಿರುತ್ತದೆ. 



Friday, February 13, 2015

13 ಫೆಬ್ರುವರಿ 2015 

ಮಾಹಿತಿ ಸಂಗ್ರಹ ಫಾರ್ಮಿನಿಂದ ನೇರವಾಗಿ ಆರ್ಥ ಮಾಡಿಕೊಳ್ಳಬಹುದಾದ ಹಾಗೂ ಅರ್ಥ ಮಾಡಿ ಕೊಳ್ಳಲಾಗದ ವಿಷಯಗಳು ಯಾವುವು?

ಮಾಹಿತಿ ಸಂಗ್ರಹ ಫಾರ್ಮಿನಿಂದ ನೇರವಾಗಿ ಆರ್ಥ ಮಾಡಿಕೊಳ್ಳಬಹುದಾದ  ವಿಷಯಗಳು :-
ಸಧ್ಯಕ್ಕೆ ಮಾಡಲಾಗುವ ವೆಚ್ಚ :– 
      ಅಕಸ್ಮಾತ್ ನಿಧನ ಹೊಂದಿದರೆ, ವೆಚ್ಚವನ್ನು ಸರಿದೂಗಿಸಲು ಎಷ್ಟೊಂದು ಹಣಕ್ಕೆ ವಿಮೆ ಖರೀದಿಸಬಹುದೆಂಬುದನ್ನು ನಿಖರವಾಗಿ    
      ಅಳೆಯಬಹುದು.
ಸಧ್ಯದ ವಿಮಾ ಪಾಲಸಿಗಳು/ಆಸ್ತಿಗಳು/ಉಳಿತಾಯಗಳು: –
      ಅಕಸ್ಮಾತ್ ನಿಧನ ಹೊಂದಿದರೆ, ತತ್‍ಕ್ಷಣ ಎಷ್ಟೊಂದು ಆದಾಯ ದೊರಕಬಹುದು, ಹೀಗೆ ದೊರಕಿದ ಅದಾಯ ಸಾಕಾಗುವದೋ     
      ಇಲ್ಲವೋ ಎನ್ನುವದನ್ನು ತಿಳಿಸಿಕೊಡುತ್ತದೆ.

ಮಾಹಿತಿ ಸಂಗ್ರಹ ಫಾರ್ಮಿನಿಂದ ನೇರವಾಗಿ ಅರ್ಥ ಮಾಡಿ ಕೊಳ್ಳಲಾಗದ ವಿಷಯಗಳು :- ಉದಾಹರಣೆಗೆ
ಭವಿಷ್ಯದಲ್ಲಿ ಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚ.
ಭವಿಷ್ಯದಲ್ಲಿ ಮನೆ ನಿರ್ಮಿಸಲು ತಗಲುವ ವೆಚ್ಚ.
ಭವಿಷ್ಯದಲಿ ಕೈಕೊಳ್ಳಬಹದಾದ ವಿದೇಶ ಪ್ರಯಾಣಕ್ಕೆ ತಗಲುವ ವೆಚ್ಚ.




Thursday, February 12, 2015

12 ಫೆಬ್ರುವರಿ 2015 

ಬೇಡಿಕೆಗಳ ವಿಶ್ಲೇಷಣೆಯಲ್ಲಿ ಕೈಕೊಳ್ಳಬೇಕಾದ ಕ್ರಮಗಳು ಯಾವುವು?

 ಬೇಡಿಕೆಗಳ ವಿಶ್ಲೇಷಣೆಯಲ್ಲಿ ಕೈಕೊಳ್ಳಬೇಕಾದ ಕ್ರಮಗಳು :
ಬೇಡಿಕೆಗಳ ಈಡೇರಿಕೆಗೆ ಸಾಕಷ್ಟು ಹಣ ಒದಗಿಸಲು ತಯಾರಾಗಿರುವದಕ್ಕೆ ಖಾತ್ರಿ ಮಾಡಿಕೊಳ್ಳುವದು.
ಗ್ರಾಹಕನು ಸಧ್ಯದ ಅವಶ್ಯಕತೆಗಳನ್ನು ಸರಿಯಾಗಿ ಆರ್ಥಮಾಡಿಕೊಂಡಿದ್ದನ್ನು ಖಾತ್ರಿ ಮಾಡಿಕೊಳ್ಳುವದು.
ಗ್ರಾಹಕನು ಭವಿಷ್ಯದ ಅವಶ್ಯಕತೆಗಳನ್ನು ಸರಿಯಾಗಿ ಆರ್ಥಮಾಡಿಕೊಂಡಿದ್ದನ್ನು ಖಾತ್ರಿ ಮಾಡಿಕೊಳ್ಳುವದು.



Wednesday, February 11, 2015

11 ಫೆಬ್ರುವರಿ 2015 

 ಬೇಡಿಕೆಗಳ ವಿಶ್ಲೇಷಣೆ (Need Analysis)  ಎಂದರೇನು?


 ಭವಿಷ್ಯದಲ್ಲಿ ಊಹಿಸಬಹುದಾದ/ಊಹಿಸಲಿಕ್ಕಾಗದ ಅವಶ್ಯಕತೆಗಳಿಗೆ ಸಾಕಷ್ಟು ಆರ್ಥಿಕ ವ್ಯವಸ್ಥೆಯನ್ನು ಮಾಡಲಾಗಿದೆಯೇ; ಎನ್ನುವದನ್ನು ಗುರುತಿಸುವದಕ್ಕೆ ಬೇಡಿಕೆಗಳ ವಿಶ್ಲೇಷಣೆ ಎನ್ನುತ್ತಾರೆ.

Tuesday, February 10, 2015

10 ಫೆಬ್ರುವರಿ 2015 

ಗ್ರಾಹಕನ ಬೇಡಿಕೆಗಳನ್ನು ವಿಶ್ಲೇಷಿಸಲು ಏಜೆಂಟನು ಮಾಡ ಬೇಕಾದ ಕೆಲಸಗಳು ಯಾವುವು?


ಗ್ರಾಹಕನ ಬೇಡಿಕೆಗಳನ್ನು ವಿಶ್ಲೇಷಿಸಲು ಏಜೆಂಟನು ಮಾಡ ಬೇಕಾದ ಕೆಲಸಗಳು :-
ಮಾಹಿತಿಗಳನ್ನು ಅರ್ಥ ಮಾಡಿಕೊಂಡು, ಸರಿಯಾಗಿ ಬರೆದುಕೊಳ್ಳಬೇಕು.
ಬೇಡಿಕೆಗಳನ್ನು ವಿಶ್ಲೇಷಿಸಲು, ಬೇಡಿಕೆಗಳನ್ನು ಅಳತೆ ಮಾಡಲು, ಮಾಹಿತಿ ಬಳಕೆಗೆ ಏಜೆಂಟನು ತನ್ನ ವೃತ್ತಿ ಅನುಭವವನ್ನು ಉಪಯೋಗಿಸಬೇಕು.

Monday, February 9, 2015

9 ಫೆಬ್ರುವರಿ 2015 

ಗ್ರಾಹಕನ ಬೇಡಿಕೆಗಳನ್ನು ಅಳೆಯಲು ಏಜೆಂಟನು ಮಾಡ ಬೇಕಾದ ಕೆಲಸಗಳು ಯಾವುವು?


ಗ್ರಾಹಕನ ಪ್ರತಿಯೊಂದು ಬೇಡಿಕೆಗೆ ಬೇಕಾಗುವ ಹಣವನ್ನು ತಿಳಿದುಕೊಳ್ಳುವದು.
ಗ್ರಾಹಕನ ಉಳಿತಾಯ ಸಾಮಥ್ರ್ಯಗಳನ್ನು ತಿಳಿದುಕೊಳ್ಳುವದು.
ಪ್ರತಿಯೊಂದು ಬೇಡಿಕೆಯ ಈಡೇರಿಕೆಗೆ ಹಣ ಒದಗಿಸಿ, ಈಗಿದ್ದ ಪರಿಸ್ಥಿತಿಯಲ್ಲಿ ಅತ್ಯುನ್ನತ ಸಮಗ್ರ ಆರ್ಥಿಕ ಯೋಜನೆಯನ್ನು ರೂಪಿಸುವದು.
ಈ ಸಮಗ್ರ ಆರ್ಥಿಕ ಯೋಜನೆಯ ಫಲಶೃತಿಯನ್ನು ಕಾಲಕಾಲಕ್ಕೆ ನೀಯಮಿತವಾಗಿ ವಿಮರ್ಶಿಸುವದು.



Sunday, February 8, 2015

8 ಫೆಬ್ರುವರಿ 2015 

ಪ್ರತಿಯೊಂದು ದೊಡ್ಡ ಬೇಡಿಕೆಗಳನ್ನು ಈಡೇರಿಸಲು ಎಷ್ಟೊಂದು ವ್ಯವಸ್ಥೆಯನ್ನು ಈಗ ಕೈಕೊಳ್ಳಲಾಗಿದೆ, ಹಾಗೂ ಬಾಕಿ ಉಳಿದ ವ್ಯವಸ್ಥೆಯನ್ನು ಕೈಗೆತ್ತಿಕೊಳ್ಳಲು ಎಷ್ಟೊಂದು ಸಂಪನ್ಮೂಲಗಳು ಬಳಿಯಲ್ಲಿವೆ, ಎನ್ನುವದನ್ನು ತಿಳಿದುಕೊಳ್ಳಲು, ಯಾವ ಮಾಹಿತಿಗಳು ಬೇಕಾಗುತ್ತವೆ?


ಪ್ರತಿಯೊಂದು ದೊಡ್ಡ ಬೇಡಿಕೆಗಳನ್ನು ಈಡೇರಿಸಲು ಎಷ್ಟೊಂದು ವ್ಯವಸ್ಥೆಯನ್ನು ಈಗ ಕೈಕೊಳ್ಳಲಾಗಿದೆ, ಹಾಗೂ ಬಾಕಿ ಉಳಿದ ವ್ಯವಸ್ಥೆಯನ್ನು ಕೈಗೆತ್ತಿಕೊಳ್ಳಲು ಎಷ್ಟೊಂದು ಸಂಪನ್ಮೂಲಗಳು ಬಳಿಯಲ್ಲಿವೆ, ಎನ್ನುವದನ್ನು ತಿಳಿದುಕೊಳ್ಳಲು, ಕೆಳಗಿನ ಮಾಹಿತಿಗಳು ಬೇಕಾಗುತ್ತವೆ.
ಆಸ್ತಿ ಹಾಗೂ ಹೊರೆಗಳು,
ಆದಾಯ, ವೆಚ್ಚ, ಉಳಿತಾಯಗಳು,
ಅವಧಿ/ಅಪಘಾತ/ಆರೋಗ್ಯವಿಮೆ,
ನಿವೃತ್ತಿ ಜೀವನ ವ್ಯವಸ್ಥೆ,
ಉಯಿಲು ಹಾಗೂ ಮರಣಾನಂತರ ಅವಲಂಬಿತರಿಗೆ ವರ್ಗಾಯಿಸ ಬಯಸುವ ಆಸ್ತಿಗಳು.





Saturday, February 7, 2015

7 ಮಾರ್ಚ 2015 

 ವಿಮಾ ಏಜೆಂಟನ ವ್ಯಾಖ್ಯೆಯು  (definition) ಯಾವ ಕಾನೂನಿನ ಯಾವ ಸೆಕ್ಶನ್‍ದಲ್ಲಿದೆ?

ವಿಮಾ ಏಜೆಂಟನ ವ್ಯಾಖ್ಯೆಯು, ವಿಮಾ ಕಾನೂನು 1938ರ, 42ನೆಯ ಸೆಕ್ಶನ್‍ದಲ್ಲಿದೆ?



7 ಫೆಬ್ರುವರಿ 2015 

ಗ್ರಾಹಕನಿಗೆ ವಿಮಾ ಸರಕುಗಳನ್ನು ಶಿಫಾರಸು (Recommendation)  ಮಾಡಲು, ಏಜೆಂಟನು,  ಮಾಹಿತಿ ಸಂಗ್ರಹದಲ್ಲಿ ಗಮನಿಸ ಬೇಕಾದ ಸಂಗತಿಗಳು ಯಾವುವು? 


ವಿಮಾ ಸರಕುಗಳನ್ನು ಶಿಫಾರಸು ಮಾಡಲು, ಗಮನಿಸ ಬೇಕಾದ ಸಂಗತಿಗಳು. 
ಗ್ರಾಹಕನ ಅವಶ್ಯಕತೆಗಳು,
ಗ್ರಾಹಕನ ಧ್ಯೇಯಗಳು,
ಗ್ರಾಹಕನ ವ್ಯಕ್ತಿಗತ ಪರಿಚಯ.



Friday, February 6, 2015

6 ಫೆಬ್ರುವರಿ 2015 

ಮಾಹಿತಿ ಸಂಗ್ರಹ ಪ್ರಶ್ನಾವಳಿ (Questionnaire) ಗಳಲ್ಲಿ ಯಾವ ಪ್ರಶ್ನೆಗಳು ಪ್ರಸ್ತುತವಾಗಿವೆ ಎಂಬುದನ್ನು ಹೇಗೆ ನಿರ್ಧರಿಸಬೇಕು?


ಮಾಹಿತಿ ಸಂಗ್ರಹ ಪ್ರಶ್ನಾವಳಿಗಳಲ್ಲಿ ಯಾವ ಪ್ರಶ್ನೆಗಳು ಪ್ರಸ್ತುತವಾಗಿವೆ ಎಂಬುದನ್ನು 
ಗ್ರಾಹಕನ ಧ್ಯೇಯೋದ್ಯೇಶಗಳನ್ನು ಅರಿಯುವ ಮೂಲಕ,
ಗ್ರಾಹಕನ ಪ್ರಸಕ್ತ ಸ್ಥಿತಿಗತಿಗಳನ್ನು ಅರಿಯುವ ಮೂಲಕ,
ಗ್ರಾಹಕನ ವ್ಯಕ್ತಿಗತ ವಿವರಗಳನ್ನು ಅರಿಯುವ ಮೂಲಕ, ನಿರ್ಧರಿಸಬಹುದು.


Thursday, February 5, 2015

5 ಫೆಬ್ರುವರಿ 2015 

ಮಾಹಿತಿ ಸಂಗ್ರಹ ಪ್ರಶ್ನಾವಳಿ ಫಾರ್ಮಿನಲ್ಲಿ ಎಲ್ಲಾ ಗ್ರಾಹಕರಿಗೂ ಎಲ್ಲಾ ಪ್ರಶ್ನೆಗಳು ಯಾಕೆ ಅನ್ವಯಿಸುವದಿಲ್ಲಾ? 


ಮಾಹಿತಿ ಸಂಗ್ರಹ ಪ್ರಶ್ನಾವಳಿ ಫಾರ್ಮಿನಲ್ಲಿ ಎಲ್ಲಾ ಗ್ರಾಹಕರಿಗೂ ಎಲ್ಲಾ ಪ್ರಶ್ನೆಗಳು ಅನ್ವಯಿಸುವದಿಲ್ಲಾ.
ಯಾಕೆಂದರೆ, ಎಲ್ಲಾ ಗ್ರಾಹಕರ ಸ್ಥಿತಿಗತಿಗಳು ಒಂದೇ ರೀತಿಯದು ಆಗಿರುವದಿಲ್ಲಾ.


Wednesday, February 4, 2015

4 ಫೆಬ್ರುವರಿ 2015 

ವಿವಿಧ ಮಾಹಿತಿ ಸಂಗ್ರಹ ಪ್ರಶ್ನಾವಳಿ ಫಾರ್ಮು (Questionnaire)  ಗಳಲ್ಲಿ  ಎಲ್ಲಾ ಪ್ರಶ್ನೆಗಳು ಒಂದೇ ರೀತಿಯದು ಆಗಿರುವದಿಲ್ಲಾ. ಯಾಕೆ?

 ವಿವಿಧ ಮಾಹಿತಿ ಸಂಗ್ರಹ ಪ್ರಶ್ನಾವಳಿ ಫಾರ್ಮು(Questionnaire)  ಗಳಲ್ಲಿ  ಎಲ್ಲಾ ಪ್ರಶ್ನೆಗಳು ಒಂದೇ ರೀತಿಯದು ಆಗಿರುವದಿಲ್ಲಾ, ಯಾಕೆಂದರೆ, ಆರ್ಥಿಕ ಧ್ಯೇಯೋದ್ಯೇಶಗಳು ಎಲ್ಲಾ ಗ್ರಾಹಕರಿಗೂ ಒಂದೇ ರೀತಿಯದು ಆಗಿರುವದಿಲ್ಲಾ. ಹೀಗಾಗಿ ಬೇರೆ ರೀತಿಯ ಪ್ರಶ್ನಾವಳಿ ಫಾರ್ಮುಗಳನ್ನು ತಯಾರಿಸ ಬೇಕಾಗುತ್ತದೆ.


Tuesday, February 3, 2015

3 ಫೆಬ್ರುವರಿ 2015 

ಭವಿಷ್ಯದಲ್ಲಿಯ ಬದಲಾವಣೆಗೆ ಸಂಬಂಧಿಸಿದಂತೆ, ಯಾವ ಮಾಹಿತಿಗಳನ್ನು ಸಂಗ್ರಹಿಸಬೇಕು?


ಭವಿಷ್ಯದಲ್ಲಿಯ ಬದಲಾವಣೆಗೆ ಸಂಬಂಧಿಸಿದಂತೆ, ಕೆಳಗಿನ ಮಾಹಿತಿಗಳನ್ನು ಸಂಗ್ರಹಿಸಬೇಕು.
ತಾಯಿ ತಂದೆಗಳ ನಿಧನದ ನಂತರ ದೊರಯುವ ಆಸ್ತಿ, ಹೊರೆ.
ಮಗುವಿನ ಜನನವಾದಾಗ, ಆತನ ಶಿಕ್ಷಣ/ವಿವಾಹದ ಜವಾಬ್ದಾರಿ,
ವೃತ್ತಿಗೆ ಸಂಬಂಧಿಸಿದ ಪರೀಕ್ಷೆ ಪಾಸು ಮಾಡಿದರೆ, ಆದಾಯದಲ್ಲಿ ಉಂಟಾಗುವ ಹೆಚ್ಚಳ,
ವೃತ್ತಿ ಜೀವನದಲ್ಲಿ ಉಂಟಾಗಬಹುದಾದ ಬದಲಾವಣೆಗಳು,
ಇನ್ನಿತರ ಮಹತ್ವಾಕಾಂಕ್ಷೆಗಳು, ಉದಾ : ವಿದೇಶಿ ಪ್ರವಾಸ, ದಾನ ಧರ್ಮಗಳಿಗಾಗಿ ನಿಧಿ ರಚನೆ, ಇತ್ಯಾದಿ.



Monday, February 2, 2015

2 ಫೆಬ್ರುವರಿ 2015 

ಆರ್ಥಿಕ ಯೋಜನೆಗಳ ಧ್ಯೇಯ ಹಾಗೂ ವೆಚ್ಚಗಳನ್ನು ಗುರುತಿಸುವಿಕೆಯಲ್ಲಿ, ಉಯಿಲಿ  (will) ನ ಬಗ್ಗೆ ಯಾವ ಮಾಹಿತಿಗಳನ್ನು ಲೆಕ್ಕಕ್ಕೆ ತೆಗೆದು ಕೊಳ್ಳಬೇಕು?


ಆರ್ಥಿಕ ಯೋಜನೆಗಳ ಧ್ಯೇಯ ಹಾಗೂ ವೆಚ್ಚಗಳನ್ನು ಗುರುತಿಸುವಿಕೆಯಲ್ಲಿ, ಉಯಿಲಿ(Will) ನ ಬಗ್ಗೆ ಕೆಳಗಿನ ಮಾಹಿತಿಗಳನ್ನು ಲೆಕ್ಕಕ್ಕೆ ತೆಗೆದು ಕೊಳ್ಳಬೇಕು.`
ಗ್ರಾಹಕನು ಈಗಾಗಲೇ ಉಯಿಲ(will) ನ್ನು ಬರೆದಿದ್ದಾನೆಯೇ ಎಂಬುದನ್ನು ಗಮನಿಸಬೇಕು.
ಹಾಗಿದ್ದರೆ, ಉಯಿಲಿನ ಪ್ರಕಾರ ನೆರವೇರಿಸಬೇಕಾದ ಸಂಗತಿಗಳನ್ನು ಗಮನಿಸಬೇಕು.
ಉಯಿಲು ಬರೆಯದಿದ್ದಾಗ, ಉಯಿಲು ಬರೆಯುವ ಇಚ್ಛೆ ಇದ್ದರೆ, ಅದರ ಬಗ್ಗೆ ತಿಳಿದುಕೊಳ್ಳಬೇಕು. ಅದರಲ್ಲಿ ಅಳವಡಿಸ ಬಯಸುವ ಆರ್ಥಿಕ ವಿಚಾರಗಳನ್ನೂ ತಿಳಿದುಕೊಳ್ಳಬೇಕು.


Sunday, February 1, 2015

1 ಫೆಬ್ರುವರಿ 2015 

 ಧ್ಯೇಯೋದ್ಯೇಶಗಳು  ಹಾಗೂ ಅವುಗಳ ಈಡೇರಿಕೆಗಾಗಿ ಬೇಕಾಗುವ ಬೆಲೆಗಳ ಬಗ್ಗೆ ಬೇಕಾಗುವ    ಮಾಹಿತಿಗಳು ಯಾವುವು?


ಗ್ರಾಹಕ ಹಾಗೂ ಏಜೆಂಟ, ಇವರಿಬ್ಬರೂ ಕೂಡಿ ಚರ್ಚಿಸಬೇಕಾದ ಧ್ಯೇಯೋದ್ಯೇಶಗಳ ಉದ್ಯೇಶಗಳ ಮಾಹಿತಿ.
ಅವಶ್ಯಕತೆಗಳ ಆದ್ಯತೆಗಳ ಮೇಲೆ ವಿಪರೀತ ಪರಿಣಾಮ (Adverse Impacts)   ಗಳನ್ನು ಬೀರುವ ಸಂಗತಿಗಳ ಮಾಹಿತಿ.
ಹೂಡಿಕೆಯ ಆದಾಯ ಹಾಗೂ ಅಪಾಯ (Income & Risk of Investment)  ಗಳ ನಡುವೆ ಇರುವ ಸಂಬಂಧದ ಮಾಹಿತಿ.

Saturday, January 31, 2015

31 ಜನೆವರಿ 2015 

ಗ್ರಾಹಕನ ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯವನ್ನು ಹೇಗೆ ಗುರುತಿಸುವದು,ಅಥವಾ ಅಳೆಯುವದು ?


ಆದಾಯ ಪ್ರಮಾಣದ ಬಗ್ಗೆ ಚಿಂತಿಸದೆ,  100% ಖಾತರಿ ಆದಾಯ ಬಯಸುವವರ, ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯ (Ability to take risk and withstand investment  losses)ಕ್ಕೆ ಶೂನ್ಯ ಅಂಕವನ್ನು ನೀಡುತ್ತಾರೆ.

ಅತೀ ಹೆಚ್ಚಿನ ಆದಾಯದ ಮೇಲೆ ಗಮನವಿಟ್ಟು, ಆದಾಯ ಖಾತರಿ ಬಗ್ಗೆ ಕಿಂಚಿತ್ತೂ ಗಮನ ನೀಡದವನ, ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯ (Ability to take risk and withstand investment  losses)ಕ್ಕೆ 5 ಅಂಕವನ್ನು ನೀಡುತ್ತಾರೆ. 

ಸ್ವಲ್ಪ ಹೆಚ್ಚಿನ ಆದಾಯದ ಮೇಲೆ ಗಮನವಿಟ್ಟು, ಆದಾಯ ಖಾತರಿ ಬಗ್ಗೆಯೂ ಸ್ವಲ್ಪ ಗಮನ ಕೊಡುವವನÀ, ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯ (Ability to take risk and withstand investment  losses) ಕ್ಕೆ 1 ರಿಂದ 5ರ ಮಧ್ಯದಲ್ಲಿರುವ ಅಂಕವನ್ನು ನೀಡುತ್ತಾರೆ.

Friday, January 30, 2015

30  ಜನೆವರಿ 2015 

ಆರ್ಥಿಕ ಯೋಜನೆಯನ್ನು ಕಾರ್ಯಗತಗೊಳಿಸುವಾಗ, ಗ್ರಾಹಕನ ಹೂಡಿಕೆಯ ಅಪಾಯ ಎದುರಿಸುವ (ಧೈರ್ಯ ಪ್ರದರ್ಶನ)  ಸಾಮಥ್ರ್ಯ (Client’s ability to take risk and withstand investment  losses) ದ  ಪಾತ್ರವೇನು?


ಕೆಲವರು ಹೂಡಿಕೆಯಿಂದ ದೊರೆಯುವ ಸಂಭವನೀಯ ಆದಾಯದ ಬಗ್ಗೆ ಎಳ್ಳಷ್ಟೂ ಅಪಾಯ ತೆಗೆದುಕೊಳ್ಳಲು ಸಿದ್ಧರಿರುವದಿಲ್ಲಾ. ಇಂತಹವರ  ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯ (Ability to take risk and withstand investment  losses)  ಕಡಿಮೆ ಇರುತ್ತದೆ. 100% ಖಾತರಿಯ ಆದಾಯವನ್ನೇ  ಅಪೇಕ್ಷಿಸುವವರಿಗೆ ದೊರೆಯುವ ಆದಾಯ ಪ್ರಮಾಣ ಕಡಿಮೆಯಾಗಿರುತ್ತದೆ. ಉದಾ : ಬ್ಯಾಂಕ/ಪೊಸ್ಟಲ್ ಠೇವಣಿ, ಸರಕಾರೀ ಬಾಂಡ್. ಇಂತಹವರಿಗೆ ಸಾಂಪ್ರದಾಯಕ ಪಾಲಸಿಗಳನ್ನು ಶಿಫಾರಸು ಮಾಡಬೇಕಾಗುತ್ತದೆ.

ಕೆಲವರು ಹೂಡಿಕೆಯಿಂದ ದೊರೆಯುವ ಸಂಭವನೀಯ ಆದಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ಅಪೇಕ್ಷಿಸುತ್ತಾರೆ. ಆದರೆ ಇವರು ಹೂಡಿಕೆಯ ಮೇಲೆ ಗಳಿಕೆಯ ಖಾತರಿಯನ್ನು ಅಪೇಕ್ಷಿಸುವಂತಿಲ್ಲಾ. ಅಂದರೆ ಹೆಚ್ಚು ಆದಾಯ ಗಳಿಸುವ ಸಾಧ್ಯತೆಯ ಜೊತೆಗೆ, ಕೆಲವು ಬಾರಿ ಹಾನಿ ಅನುಭವಿಸುವ ಸಾಧ್ಯತೆಯೂ ಇರುತ್ತದೆ. ಇಂತಹವರ  ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯ (Ability to take risk and withstand investment  losses) ಹೆಚ್ಚಿಗೆ ಇರುತ್ತದೆ. ಶೇರು ಮಾರುಕಟ್ಟಯಲ್ಲಿ ತಮ್ಮ ಹೂಡಿಕೆಗಳನ್ನು ಮಾಡಲು ಸಮ್ಮತಿಸುತ್ತಾರೆ. ಇಂತಹವರಿಗೆ ಯುಲಿಪ್ ಪಾಲಸಿಗಳನ್ನು ಶಿಫಾರಸು ಮಾಡಬಹುದು.



Thursday, January 29, 2015

29  ಜನೆವರಿ 2015 

 ಆರ್ಥಿಕ ಯೋಜನೆ (Financial Planning) ಯನ್ನು ರೂಪಿಸುವಾಗ  ಧ್ಯೇಯಗಳ ಆದ್ಯತೆ (Priortisation of Objectives) ಗಳ ಪಾತ್ರವೇನು?


 ಗುರುತಿಸಲಾದ ಎಲ್ಲಾ  ಧ್ಯೇಯಗಳನ್ನು ಒಮ್ಮಲೇ ಈಡೇರಿಸುವದಕ್ಕೆ ಬೇಕಾದ ಆರ್ಥಿಕ ಸಾಮಥ್ರ್ಯ ಗ್ರಾಹಕನ ಬಳಿ ಈಗ ಇರಲಿಕ್ಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಗುರುತಿಸಲಾದ ಎಲ್ಲಾ ಧ್ಯೇಯಗಳಲ್ಲಿ, ಯಾವುಗಳನ್ನು ಮೊದಲು, ಯಾವುಗಳನ್ನು ನಂತರ, ಯಾವುಗಳನ್ನು ಕೊನೆಗೆ ಈಡೇರಿಸಲು ಕೈಗೆತ್ತಿಕೊಳ್ಳಬೇಕೆಂಬುದನ್ನು ನಿರ್ಧರಿಸಲು, ಧ್ಯೇಯಗಳ ಆದ್ಯತೀಕರಣ (Priortisation of Objectives) ವನ್ನು ಮಾಡಬೇಕಾಗುತ್ತದೆ. ಸಧ್ಯದ ಆರ್ಥಿಕ ಸಾಮಥ್ರ್ಯದ ಚೌಕಟ್ಟಿನಲ್ಲಿ, ಇಡೇರಿಸ ಬಹುದಾದ ಧ್ಯೇಯಗಳನ್ನು ಆದ್ಯತೆಗಳ ಕ್ರಮಾಂಕಿನಲ್ಲಿ ಕೈಗೆತ್ತಿಕೊಳ್ಳ ಬೇಕು.



Wednesday, January 28, 2015

.
28  ಜನೆವರಿ 2015 

ಆರ್ಥಿಕ ಯೋಜನೆ ಹಾಗೂ ಯೋಜನಾ ವೆಚ್ಚಗಳನ್ನು ಪರಿಗಣಿಸುವಾಗ, ಯಾವ ಮಾಹಿತಿಗಳನ್ನು ಗಣನೆಗೆ ತೆಗೆದು ಕೊಳ್ಳಬೇಕು?


ಆರ್ಥಿಕ ಯೋಜನೆ (Financial Planning) ಹಾಗೂ ಯೋಜನಾ ವೆಚ್ಚ (Financial Expenditure) ಗಳನ್ನು ಪರಿಗಣಿಸುವಾಗ, ಕೆಳಗಿನ ಮಾಹಿತಿಗಳನ್ನು ಗಣನೆಗೆ ತೆಗೆದು ಕೊಳ್ಳಬೇಕು.

 ಈಗಾಗಲೇ ಕೈಗೆತ್ತಿಕೊಂಡ ಧ್ಯೇಯಗಳ ಮಾಹಿತಿ,
        ಉದಾ: ಈಗಾಗಲೇ ಪಡೆದುಕೊಂಡಿರುವ ಅವಧಿ/ಅಪಘಾತ/ಆರೋಗ್ಯ ವಿಮೆಗಳ ವಿವರ.
          ಈಗಾಗಲೇ ಹೂಡಿಕೆಯನ್ನು ಹೇಗೆ ಮಾಡಲಾಗಿದೆ?
          ಈಗಿರುವ ನಿಯಮಿತ ಉಳತಾಯದ ಮಟ್ಟ.
          ನಿವೃತ್ತಿಯ ವಯಸ್ಸು, ನಿವೃತ್ತಿ ನಿರ್ವಹಣೆಗೆ ಬೇಕೆನಿಸಿದ ನಿಧಿಯ ಮೊತ್ತ. 

ಭವಿಷ್ಯದಲ್ಲಿ ಕೈಗೆತ್ತಿಕೊಳ್ಳಬೇಕಾದ ಧ್ಯೇಯಗಳ ಮಾಹಿತಿ.
ಕುಟುಂಬದ ಭವಿಷ್ಯದ ಬಗ್ಗೆ ಮಾಹಿತಿ,
ಮಕ್ಕಳ ಶಿಕ್ಷಣ ಹಾಗೂ ಮದುವೆ ಬಗ್ಗೆ ಮಾಹಿತಿ,
ಭವಿಷ್ಯದಲ್ಲಿ ಮನೆಯ ಬಗ್ಗೆ ಮಾಡಬಹುದಾದ ಬದಲಾವಣೆಗಳು,
ಭವಿಷ್ಯದಲ್ಲಿ ವೃತ್ತಿ, ವ್ಯವಹಾರಗಳಲ್ಲಿ ಜರುಗ ಬಹುದಾದ ಬದಲಾವಣೆಗಳು,
ನಿವೃತ್ತಿಯ ಬಗ್ಗೆ,
ನಿಧನದ ನಂತರ ಅವಲಂಬಿತರಿಗೆ ಸಾಗಿಸ ಬಯಸುವ ಆಸ್ತಿ.
ಯೋಜನಾ ವೆಚ್ಚಗಳ ಮಾಹಿತಿ.
ಆರ್ಥಿಕ ಯೋಜನಾ ವೆಚ್ಚಗಳ ಹಾಗೂ ಆದ್ಯತೆಗಳ ಮಾಹಿತಿ.



Tuesday, January 27, 2015


27  ಜನೆವರಿ 2015 

ಮಾಸಿಕ ಆದಾಯ/ವೆಚ್ಚಗಳ ವಿಶ್ಲೇಷಣೆ (Analysis) ಯಾಕೆ ಮಾಡಬೇಕು?


ಮಾಸಿಕ ಆದಾಯ/ವೆಚ್ಚಗಳ ವಿಶ್ಲೇಷಣೆ ಯಾಕೆ ಮಾಡಬೇಕೆಂದರೆ,
ಯಾವ ವೆಚ್ಚಗಳನ್ನು ನಿಲ್ಲಿಸಬಹುದು/ಕಡಿತಗೊಳಸಬಹುದೆಂಬುದನ್ನು ಅರಿತುಕೊಳ್ಳಲು,
ಎಲ್ಲಾ ಆಸ್ತಿಮೂಲಗಳಿಂದ ದೊರಕಿಸ/ಹೆಚ್ಚಿಸಬಹುದಾದ ಆದಾಯಗಳನ್ನು ಅರಿತುಕೊಳ್ಳಲು,
ಆರ್ಥಿಕ ಯೋಜನೆಯನ್ನು ಕಾರ್ಯಗತಗೊಳಿಸಲು ಲಭ್ಯವಾಗುವ ಉಳಿಕೆ ಹಣವನ್ನು ಅರಿತುಕೊಳ್ಳಲು, 


Monday, January 26, 2015

26  ಜನೆವರಿ 2015 

ಈಗಾಗಲೇ ಖರೀದಿಸಿದ ವಿಮೆಯ ವಿಶ್ಲೇಷಣೆಗೆ  ಯಾವ ಮಾಹಿತಿ ಬೇಕು?


ಈಗಾಗಲೇ ಖರೀದಿಸಿದ ವಿಮೆಯ ವಿಶ್ಲೇಷಣೆಗೆ ಕೆಳಗಿನ ಮಾಹಿತಿ ಬೇಕು.
ವಿಮೆಯ ಪ್ರಕಾರ ? (ಅವಧಿ/ಅಪಘಾತ/ಆರೋಗ್ಯ/ಆಜೀವ/ಎಂಡೋಮೆಂಟ್/ವರ್ಷಾಶನ/ಇತ್ಯಾದಿ ನಮೂನೆಗಳು) 
ಕಂತಿನ ಪ್ರಕಾರ ? (ಸಾಂಪ್ರದಾಯಕ/ ಯುನಿಟ್ ಜೋಡಣೆಯ ಕಂತುಗಳು.)
ವಿಮೆಯ ಅವಧಿ ? (ಚಿಕ್ಕ/ಮಧ್ಯಮ/ದೀರ್ಘ/ಆಜೀವ ಅವಧಿಗಳ ವಿಮೆಗಳು.)
ವಿಮೆಯ ಕಂತಿನ ಅವಧಿ ? (ಪೂರ್ಣಾವಧಿ/ಸೀಮಿತ/ಏಕ ಕಂತಿನ ಆವಧಿಗಳು)
ವಿಮಾ ರಕ್ಷಿತ ಯಾರು ? (ವಿಮಾ ಕೋರಿಕೆದಾರನೋ/ಇತರ ಸಂಬಂಧಿಗಳೋ)


Sunday, January 25, 2015

25  ಜನೆವರಿ 2015 

ಮನೆಯೆಂಬ ಆಸ್ತಿಯನ್ನು ವಿಶ್ಲೇಷಿಸುವಾಗ ಯಾವ ಸಂಗತಿಗಳನ್ನು ಗಮನಿಸ ಬೇಕು?


ಮನೆಯೆಂಬ ಆಸ್ತಿಯನ್ನು ವಿಶ್ಲೇಷಿಸುವಾಗ ಗಮನಿಸಬೇಕಾದ ಸಂಗತಿಗಳು :
ಈ ಮನೆ ಇರದಿದ್ದರೆ, ನಿಮಗಿರಲು ಬೇಕಾದ ಮನೆಗೆ ನೀಡಬೇಕಾಗುವ ಬಾಡಿಗೆ.
ಮನೆಯ ಸುಣ್ಣ, ಬಣ್ಣ, ರಿಪೇರಿ, ತೆರಿಗಿಗೆ ಮಾಡುವ ವೆಚ್ಚ.
ಮನೆ ಸಾಲವಿದ್ದರೆ, ನೀಡಬೇಕಾದ ಸಾಲದ ಕಂತಿನ ಮೊತ್ತ.
ಮನೆ ಖರೀದಿಸುವದಿದ್ದರೆ, ವಿಸ್ತಾರಗೊಳಿಸುವದಿದ್ದರೆ ಅವಶ್ಯಕ ಹಣ, ಹಾಗೂ ಮನೆಯಸಾಲದ ಬಡ್ಡೀದರ.



Saturday, January 24, 2015

24  ಜನೆವರಿ 2015 

ಹೊರೆ (Liability) ಗಳೆಂದರೆ ಏನು?


ಹೊರೆಗಳೆಂದರೆ, ಗ್ರಾಹಕನು ತೀರಿಸಬೇಕಾದ  ಸಾಲಗಳ ಮೊತ್ತ. ಸಾಲಗಳಿಗೆ ಪ್ರತಿಯಾಗಿ ಅವಧಿ ವಿಮೆಯ ರಕ್ಷಣೆ ಇದ್ದರೆ, ಇಂತಹ ಸಾಲಗಳನ್ನು ಹೊರೆಯೆಂದು ಭಾವಿಸಬೇಕಿಲ್ಲಾ. (ಗ್ರಾಹಕನ ನಿವ್ವಳ ಆಸ್ತಿ ಮೌಲ್ಯವೆಂದರೆ, ಅವನ ಒಟ್ಟು ಆಸ್ತಿಗಳ ಮೌಲ್ಯದಲ್ಲಿ, ಒಟ್ಟು ಹೊರೆಗಳ ಮೌಲ್ಯವನ್ನು ಕಳೆಯುತ್ತಾರೆ. ಇಂತಹ ಸಂದರ್ಭದಲ್ಲಿ, ಅವಧಿ ವಿಮಾ ರಕ್ಷಣೆ ಹೊಂದಿದ ಸಾಲಗಳÀ ಮೌಲ್ಯಗಳನ್ನು ಕಳೆಯ ಬೇಕಾಗಿಲ್ಲ.)



Friday, January 23, 2015

23  ಜನೆವರಿ 2015 

ಸ್ವಲ್ಪ ಅಸ್ತಿ ಹೊಂದಿದ ಗ್ರಾಹಕನಿಂದ ಅರಿತುಕೊಳ್ಳಬೇಕಾದ ವಿಷಯ ಏನು?

      
 ಸ್ವಲ್ಪ ಅಸ್ತಿ ಹೊಂದಿದ ಗ್ರಾಹಕನಿಂದ ಅರಿತುಕೊಳ್ಳಬೇಕಾದ ವಿಷಯ:
ಈ ಆಸ್ತಿಗಳು ಗ್ರಾಹಕನ ಅವಶ್ಯಕತೆಗಳನ್ನು ಈಡೇರಿಸುತ್ತಿವೆಯೋ?
ಈ ಆಸ್ತಿಗಳು ಗ್ರಾಹಕನಿಗೆ ಅಪೇಕ್ಷಿತ ಆದಾಯ ನೀಡುತ್ತಿವೆಯೋ?
ಈ ಆಸ್ತಿಗಳಿಂದ ಗ್ರಾಹಕನ ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯವನ್ನು ಗುರುತಿಸ ಬಹುದೇ?



Thursday, January 22, 2015

22  ಜನೆವರಿ 2015 

ಮಾಹಿತಿ ಸಂಗ್ರಹ ಫಾರ್ಮುಗಳಲ್ಲಿ ಯಾವ ವಿವರಗಳನ್ನು ಕೇಳಲಾಗುತ್ತದೆ?


ಮಾಹಿತಿ ಸಂಗ್ರಹ ಫಾರ್ಮುಗಳಲ್ಲಿ ಕೆಳಗಿನ ವಿವರಗಳನ್ನು ಕೇಳಲಾಗುತ್ತದೆ.

ವ್ಯಕ್ತಿಗತ (personal) ಮಾಹಿತಿಗಳು : (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ಉದ್ಯೋಗ, ಆದಾಯ, ಆರೋಗ್ಯಸ್ಥಿತಿ, ಇತ್ಯಾದಿ.)

ಪರಿವಾರ (family) ದ ಮಾಹಿತಿಗಳು :(ಪರಿವಾರ ಸದಸ್ಯರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ಆರೋಗ್ಯಸ್ಥಿತಿ, ಇತ್ಯಾದಿ.) ಸದಸ್ಯರೆಂದರೆ, ಜೀವನ ಸಂಗಾತಿ, ಮಕ್ಕಳು, ತಾಯಿ, ತಂದೆ, ಅವಲಂಬಿತರು.
   (ಅವಧಿ/ಅಪಘಾತ/ಆರೋಗ್ಯ ವಿಮೆಯ ಗಾತ್ರ ನಿರ್ಧಾರಕ್ಕೆ ಈ ಮಾಹಿತಿ ಅವಶ್ಯವಾಗಿದೆ)

ಪರಿವಾರ ವೈದ್ಯ (Family doctor) ನ ಮಾಹಿತಿಗಳು : (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ,)

ವೃತ್ತಿ (Employment) ಮಾಹಿತಿಗಳು : (ವೃತ್ತಿ ಮಾಲೀಕನ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇತ್ಯಾದಿ.)

ವೃತ್ತಿ ರೀತಿ      : ನೌಕರಿ/ವ್ಯಾಪಾರ/ಸ್ವಯಂ ವೃತ್ತಿ.
ವೃತ್ತಿ ಅಪಾಯ   : ನಿರಪಾಯಕಾರಿ/ಅಪಾಯಕಾರಿ.
ವೃತ್ತಿ ಆದಾಯ   : ನಿಯಮಿತ ಆದಾಯ/ನಿಯಮಿತ ಆದಾಯ.
ವೃತ್ತಿ ಸೌಲಭ್ಯ    : ರಜೆಗಳು/ರಜಾ ನಗದೀಕರಣ/ ರಜಾ ಪ್ರಯಾಣ ಸೌಲಭ್ಯಗಳು.
ವೃತ್ತಿ ಗಳಿಕೆ ಗಾತ್ರ : ಅಲ್ಪ ಗಾತ್ರ/ ಸಾಧಾರಣ ಗಾತ್ರ/ ದೊಡ್ಡ ಗಾತ್ರ/ ಅಪಾg ಗಾತ್ರದ ಗಳಿಕೆಗಳು.

ಆರ್ಥಿಕ (Financial) ಮಾಹಿತಿಗಳು : ಆಸ್ತಿಗಳು ಹಾಗೂ ಹೊರೆಗಳು.
ಆಸ್ತಿ (Assets) ಗಳ ಉದಾಹರಣೆಗಳು.- ಸ್ವಂತ ಮನೆ, ನಿವೇಶನ, ವಸತಿ/ವಾಣಿಜ್ಯ ಕಟ್ಟಡಗಳು, ಶೇರು/ ಮ್ಯೂಚುವಲ್ ಫಂಡಗಳು, ನಿಶ್ಚಿತ ಆದಾಯ ಹೂಡಿಕೆಗಳು (ಬ್ಯಾಂಕು ಹಾಗೂ ಪೋಸ್ಟ ಆಫೀಸುಗಳಲ್ಲಿ), ಲೋಹಗಳು(¨ಂಗಾರ/ಬೆಳ್ಳಿಗಳು), ಭೂಮಿ/ಪ್ಲ್ಯಾಂಟೇಶನ್.

ಹೊರೆ (Liability) ಗಳ ಉದಾಹರಣೆಗಳು- ಮನೆ ಸಾಲ, ಮರಳಿಸ ಬೇಕಾದ ಸಾಲಗಳು, ಕ್ರೆಡಿಟ್ ಕಾರುಗಳು/ಓವರ್‍ಡ್ರಾಫ್ಟ,  ಕಂತಿನ ಸಾಲಗಳು (ವಾಹನ,ಶಿಕ್ಷಣ,ವ್ಯಾಪಾರಕ್ಕಾಗಿ), ಕೈಗಡಗಳು, ಮರಳಿಸ ಬೇಕಾದ ಇನ್ನಿತರ ಹೊರೆಗಳು.

ಈಗಿದ್ದ ವಿಮೆಯ ಹಾಗೂ ಹೂಡಿಕೆಗಳ ಮಾಹಿತಿಗಳು : ಖರೀದಿಸಿದ ವಿಮೆಗಳ ಮೊತ್ತ ಹಾಗೂ ಕಂತುಗಳು.

ಮಾಸಿಕ ಆದಾಯ ಹಾಗೂ ವೆಚ್ಚ (Income & Expenditure) ಗಳ ಮಾಹಿತಿಗಳು. :
ಆದಾಯಗಳ ಉದಾಹರಣೆಗಳು -ಸ್ವಂತದ/ಇತರ ಸದಸ್ಯರ ಆದಾಯ, ಆಸ್ತಿಗಳ ಆದಾಯ, ಭವಿಷ್ಯದಲ್ಲಿ ಸಿಗಬಹುದಾದ ಆದಾಯ.

ವೆಚ್ಚಗಳ ಉದಾಹರಣೆಗಳು – ಆಹಾರ,ಉಡುಪು, ಮನೆಬಾಡಿಗೆ, ಶಾಲಾ ಫೀ, ಸಾಲ ಕಂತು, ವಿಮಾ ಕಂತು, ತೆರಿಗೆ, ಪ್ರಯಾಣ/ಮನರಂಜನೆ, ಇತರ ವೆಚ್ಚಗಳು.

ಆರ್ಥಿಕ ಯೋಜನೆಯ ಗುರಿಗಳು, ಅದಕ್ಕೆ ತಗಲುವ ವೆಚ್ಚಗಳು.
 ಈ ಮೊದಲು ಕೈಕೊಂಡ ಆರ್ಥಿಕ ಯೋಜನೆಗಳ ಮಾಹಿತಿ/ವೆಚ್ಚ. ಅವುಗಳು ಈಡೇರಿಸುವ ಬೇಡಿಕೆಗಳು.
 ಇಂದು ಕೈಕೊಳ್ಳಬೇಕಾದÀ ಆರ್ಥಿಕ ಯೋಜನೆಗಳ ಮಾಹಿತಿ/ವೆಚ್ಚ. ಅವುಗಳು ಈಡೇರಿಸಬೇಕಾದ ಬೇಡಿಕೆಗಳು.
 ಬೇಡಿಕೆಗಳ ಉದಾಹರಣೆಗಳು :ವಿಮಾರಕ್ಷಣೆ, ಮಕ್ಕಳ ಶಿಕ್ಷಣ/ಮದುವೆ/ನಿವೃತ್ತ ಜೀವನಗಳಿಗೆ ವ್ಯವಸ್ಥೆ, ಮನೆ, ಕಾರು, ಪ್ರಯಾಣ ಇತ್ಯಾದಿ.

ಭವಿಷ್ಯದಲ್ಲಿಯ ಬದಲಾವಣೆ (Changes) ಗಳು. ಮಾಹಿತಿಗಳನ್ನು ವರ್ತಮಾನ ಕಾಲದಲ್ಲಿದ್ದ ಸ್ಥಿತಿಯಲ್ಲಿಯೇ ಸಂಗ್ರಹಿಸಿದರೂ, ಮಾಹಿತಿಯಲ್ಲಿ ಉಂಟಾಗುವ ಭವಿಷ್ಯದ ಬದಲಾವಣೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.