Tuesday, March 31, 2015

31 ಮಾರ್ಚ 2015 

ಪಾಲಿಸಿ ಮುಂದುವರೆಸುವಿಕೆ (Persistency ) ಗೆ ಆತಂಕಕಾರೀ ಸಂಗತಿಗಳು ಯಾವುವು? 

ಪಾಲಿಸಿ ಮುಂದುವರೆಸುವಿಕೆ (Persistency)  ಗೆ ಆತಂಕಕಾರೀ ಸಂಗತಿಗಳು :-
ಪಾಲಸಿ ರಚನೆ - ಪಾಲಸಿ ರಚನೆ ಗ್ರಾಹಕನ ಅವಶ್ಯಕತೆಗಳನ್ನು ಈಡೇರಿಸುವ ಸ್ಥಿತಿಯಲ್ಲಿರದಿದ್ದರೆ, ಪಾಲಿಸಿ ಮುಂದುವರೆಸುವಿಕೆಗೆ ಆತಂಕಕಾರೀಯಾಗುತ್ತದೆ.
ಗಳಿಕೆಯ ನಿಲುಗಡೆ - ನಿರುದ್ಯೋಗ, ಅನಾರೋಗ್ಯ, ಅಂಗವಿಕಲತೆ, ಇತ್ಯಾದಿಗಳ ಕಾರಣಗಳಿಂದ ಉಂಟಾಗುವ ಆದಾಯ ನಿಲುಗಡೆ ಅಥವಾ ಆದಾಯ ಕಡಿತ,  ಪಾಲಿಸಿ ಮುಂದುವರೆಸುವಿಕೆಗೆ ಆತಂಕಕಾರೀಯಾಗುತ್ತದೆ. 
ಪಾಲಸಿ ಸೇವಾ – ಏಜೆಂಟನ ಅಸಡ್ಡೆ, ಸಂಸ್ಥೆಂiÀi ಅನಾಸಕ್ತಿಗಳ ಕಾರಣ, ಪಾಲಸಿ ಸೇವೆಯು ಗ್ರಾಹಕನಿಗೆ ದೊರೆಯದಿದ್ದರೆ, ಗ್ರಾಹಕನ ಅಸಮಾಧಾನ ಪಾಲಿಸಿ ಮುಂದುವರೆಸುವಿಕೆಗೆ ಆತಂಕಕಾರೀಯಾಗುತ್ತದೆ.
ಏಜೆಂಟನ ನಡತೆ : ಏಜೆಂಟನು ಗ್ರಾಹಕನ ಜೊತೆಗೆ ಒಳ್ಳೆಯ ಸಂಬಂಧ ಇಟ್ಟು ಕೊಳ್ಳದಿದ್ದರೆ, ಗ್ರಾಹಕನ ಅಭಿಲಾಷೆಗಳನ್ನು ಈಡೇರಿಸುವ ಪಾಲಿಸಿಯನ್ನು ನೀಡದಿದ್ದರೆ, ಗ್ರಾಹಕನಿಗೆ ಒಳ್ಳೆಯ ಪಾಲಸಿ ಸೇವೆಯನ್ನು  ಒದಗಿಸÀದಿದ್ದರೆ, ಗ್ರಾಹಕನಿಗೆ ಅಸಮಾಧಾನವಾಗಿ, ಈ ಅಸಮಾಧಾನವು ಪಾಲಿಸಿ ಮುಂದುವರೆಸುವಿಕೆಗೆ ಆತಂಕಕಾರೀಯಾಗುತ್ತದೆ.

Monday, March 30, 2015

30 ಮಾರ್ಚ 2015 

ಪಾಲಿಸಿ ಉಳಿಸಿಕೊಳ್ಳುವಿಕೆಯು ಕಡಿಮೆಯಾದರೆ ಆಗುವ ಹಾನಿಗಳು ಯಾವುವು?

ಪಾಲಿಸಿ ಉಳಿಸಿಕೊಳ್ಳ್ಳುವಿಕೆಯ ಅನುಪಾತ (Persistency  Ratio) ಕಡಿಮೆಯದರೆ ಆಗುವ ಹಾನಿಗಳು :
ವಿಮಾ ಕಂಪನಿಗೆ- ಬಹಳಷ್ಟು ಪಾಲಿಸಿಗಳು ಅವಧಿಗೆ ಮೊದಲೇ ನಿಂತು ಹೋಗುವದರಿಂದ, ಸರಂಡರ ಆಗುವದರಿಂದ, ಸಂಸ್ಥೆಯ ಸಂಭವನೀಯ ಉಳಿಕೆ ಹಣ ಕಡಿಮೆಯಾಗಿ, ಅದರ ಗಳಿಕೆಯೂ ಕಡಿಮೆ ಆಗುವದು. ಹೀಗಾಗಿ ಗ್ರಾಹಕರಿಗೆ ಘೋಷಿಸುವ ಬೋನಸ್ ದರದಲ್ಲಿ ಇಳಿಕೆ ಆಗುವದು.
ಗ್ರಾಹಕನಿಗೆ- ಪಾಲಸಿಯನ್ನು ಉಳಿಸಿಕೊಳ್ಳದಿದ್ದರೆ, ಅಂದರೆ ಮುಂದುವರಿಸದಿದ್ದರೆ, ವಿಮಾ ರಕ್ಷಣೆ ನಿಲ್ಲುವದು ಅಥವಾ ಕುಂಠಿತಗೊಳ್ಳುವದು.
ವಿಮಾ ಕಂಪನಿಗೆ-ಗ್ರಾಹಕನು ಪಾಲಸಿಯನ್ನು ಉಳಿಸಿಕೊಳ್ಳದಿದ್ದರೆ, ಅಂದರೆ ಮುಂದುವರಿಸದಿದ್ದರೆ, ಏಜೆಂಟನಿಗೆ ಮುಂದುವರೆಯುವ ಕಮೀಶನ್ ನೀಡಿಕೆ ನಿಲ್ಲುವದು.




Sunday, March 29, 2015

29 ಮಾರ್ಚ 2015 

 ಪಾಲಿಸಿ ಮುಂದುವರೆಸುವಿಕೆಯ ಅನುಪಾತ ಹೆಚ್ಚಾದರೆ ಆಗುವ ಲಾಭಗಳು ಯಾವುವು?

ಪಾಲಿಸಿ ಮುಂದುವರೆಸುವಿಕೆಯ ಅನುಪಾತ (Persistency  Ratio) ಹೆಚ್ಚಾದರೆ ಆಗುವ ಲಾಭಗಳು :-
ವಿಮಾ ಕಂಪನಿಯ ಆದಾಯ ಹೆಚ್ಚಿ, ಲಾಭಾಂಶ ಹೆಚ್ಚುವದು. 
ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಬೋನಸ್ ದೊರೆತು, ಗ್ರಾಹಕ ತೃಪ್ತಿ ಬೆಳೆಯುವದು.
ವಿಮಾ ಸಂಸ್ಥೆಯ ಆಡಳಿತ ವೆಚ್ಚಕಡಿಮೆ ಯಾಗುವದು.



Saturday, March 28, 2015

28 ಮಾರ್ಚ 2015 

ಪಾಲಿಸಿ ಮುಂದುವರೆಸುವಿಕೆಯ ಅನುಪಾತ (Persistency  Ratio) ವೆಂದರೇನು?

ಉತ್ತರ : ಪಾಲಿಸಿ ಮುಂದುವರೆಸುವಿಕೆಯ ಅನುಪಾತ (Persistency  Ratio) ವೆಂದರೆ, ವರ್ಷದ ಪ್ರಾರಂಬದಲ್ಲಿ, ಚಾಲತಿಯಲ್ಲಿದ್ದ ಪಾಲಿಸಿಗಳ ಸಂಖ್ಯೆ, ಯಾವ ಪ್ರಮಾಣದಲ್ಲಿ ವರ್ಷದ ಕೊನೆಗೆ ಬೆಳೆದಿದೆ? ಇದನ್ನು ಕೆಳಗಿನ ಸೂತ್ರದಿಂಸ ಅಳೆಯುತ್ತಾರೆ.                    
                                                                       ವರ್ಷದ ಕೊನೆಯಲ್ಲಿ ಚಾಲತಿಯಲ್ಲಿದ್ದ ಪಾಲಿಸಿಗಳ ಸಂಖ್ಯೆ,
        
       ಪಾಲಿಸಿ ಮುಂದುವರೆಸುವಿಕೆಯ ಅನುಪಾತ = ---------------------------------------------------------------
                                                                          ವರ್ಷದ ಪ್ರಾರಂಬದಲ್ಲಿ, ಚಾಲತಿಯಲ್ಲಿದ್ದ ಪಾಲಿಸಿಗಳ ಸಂಖ್ಯೆ,
                              

Friday, March 27, 2015

27 ಮಾರ್ಚ 2015 

ಪಾಲಿಸಿಯ ವಿನಿಮಯ ಮಾರಾಟ (Product switching )ದ ವಿಷಯದಲ್ಲಿ ಏಜೆಂಟನು ವಹಿಸಬೇಕಾದ ಜಾಗ್ರತೆ ಏನು?  

 ಪಾಲಿಸಿಯ ವಿನಿಮಯ ಮಾರಾಟ (Product switching ) ದ ವಿಷಯದಲ್ಲಿ ಏಜೆಂಟನು ವಹಿಸಬೇಕಾದ ಜಾಗ್ರತೆಗಳು. 
ಪಾಲಿಸಿಯ ವಿನಿಮಯ ಮಾರಾಟ (Product switching ), ಗ್ರಾಹಕನಿಗೆ ಅನಕೂಲಕರವಾಗಿದ್ದರೆ ಮಾತ್ರ ಸೂಚಿಸಬೇಕು.
ಹಳೆಯ ಪಾಲಸಿ ನಿಲ್ಲಿಸುವದರಿಂದ, ರದ್ದು ಮಾಡುವದರಿಂದ ಉಂಟಾಗುವ ಸಾಧಕ, ಬಾಧಕಗಳನ್ನು ತಪ್ಪದೇ ತಿಳಿಸಿ ಹೇಳಬೇಕು.


Thursday, March 26, 2015

26 ಮಾರ್ಚ 2015 

ಪಾಲಿಸಿಯ ವಿನಿಮಯ ಮಾರಾಟ ದಿಂದ ಗ್ರಾಹಕನಿಗೆ ಯಾವಾಗ ಲಾಭ ಉಂಟಾಗುತ್ತದೆ?

ಪಾಲಿಸಿಯ ವಿನಿಮಯ ಮಾರಾಟ (Product switching ) ದಿಂದ, ಕೆಳಗಿನ ಸಂದರ್ಭಗಳಲ್ಲಿ ಗ್ರಾಹಕನಿಗೆ ಲಾಭ ಉಂಟಾಗುತ್ತದೆ.
ಅವಶ್ಯಕತೆಗಳನ್ನು ಈಡೇರಿಸದ ಪಾಲಿಸಿಗಳನ್ನು ಮಾರಾಟ ಮಾಡಿದಾಗ,
ಪಾಲಸಿಯಲ್ಲಿ ಹೂಡಿಕೆಯು ಅಪೇಕ್ಷಿತ ಪ್ರತಿಫಲವನ್ನು ನೀಡದಿದ್ದಾಗ, 
ಪಾಲಸಿಯಲ್ಲಿ ಹೂಡಿಕೆಯು ಅತೀ ಭಾರವೆನಿಸಿದಾಗ,



Wednesday, March 25, 2015

25 ಮಾರ್ಚ 2015 

 ಪಾಲಿಸಿಯ ವಿನಿಮಯ ಮಾರಾಟ (churning)ದಿಂದ ಗ್ರಾಹಕನಿಗೆ ಹೇಗೆ ಹಾನಿ ಉಂಟಾಗುತ್ತದೆ?

 ಪಾಲಿಸಿಯ ವಿನಿಮಯ ಮಾರಾಟ (churning) ದಿಂದ ಗ್ರಾಹಕನಿಗೆ ಕೆಳಗಿನಂತೆ ಹಾನಿ ಉಂಟಾಗುತ್ತದೆ.
ಅನಗತ್ಯವಾಗಿ ಸರಂಡರ ವೆಚ್ಚವನ್ನು ಭರಿಸಬೇಕಾಗುವದು.
ಹೊಸ ಪಾಲಸಿಯಲ್ಲಿ ಅನವಶ್ಯಕವಾಗಿ ಹೆಚ್ಚಿನ ದರದಲ್ಲಿ ವಿಮಾಕಂತುಗಳನ್ನು ನೀಡ ಬೇಕಾಗುವದು.
ಹಳೆ ಪಾಲಸಿಯಲ್ಲಿ ದೊರಕಬಹುದಾದ ಪಾಲಸಿ ಸಾಲದ ಸೌಲಭ್ಯ ಹೊಸ ಪಾಲಿಸಿಯಲ್ಲಿ ಕೂಡಲೇ ಸಿಗದು.



Tuesday, March 24, 2015

24 ಮಾರ್ಚ 2015 

ಪಾಲಿಸಿಯ ವಿನಿಮಯ ಮಾರಾಟ (churning)ವನ್ನು ಹೇಗೆ ತಡೆಯಬಹುದು.


ಆಯ್.ಆರ್.ಡಿ.ಎ. ಯು ‘ಆಚಾರ ಸಂಹಿತೆ’ (code of conduct ) ಯ ಮೂಲಕ ಇದಕ್ಕೆ ತಡೆ ಹಾಕಲು ಕ್ರಮ ಕೈಕೊಂಡಿದೆ.
ಎಜೆಂಟರ ವೃತ್ತಿಪರ ಕಾರ್ಯವು (Professional act), ಇದಕ್ಕೆ ತಡೆ ಒಡ್ಡುತ್ತದೆ.
ಇತರ ಮೂಲಗಳಿಂದ ಪಡೆದ ವಿಮಾ ಜ್ಞಾನವು, ಇದಕ್ಕೆ ತಡೆ ಒಡ್ಡುತ್ತದೆ.



Monday, March 23, 2015

23 ಮಾರ್ಚ 2015 

ಪಾಲಿಸಿಯ ವಿನಿಮಯ ಮಾರಾಟ(churning)ಕ್ಕೆ,  ಅನೈತಿಕ ಆಚರಣೆ ಎಂದು ಯಾಕೆ ಕರೆಯುತ್ತಾರೆ?

 ಕೆಲವು ಬಾರಿ ಏಜೆಂಟರು, ಹೊಸ ಪಾಲಿಸಿಯಲ್ಲಿ ಹೆಚ್ಚಿ ದರದಲ್ಲಿ ಕಮೀಶನ್ ಗಳಿಸುವ ದುರಾಸೆಯಲ್ಲಿ,    
ಹಳೆಯ ಪಾಲಿಸಿಯನ್ನು ಮಾರಿಸಿ ಹೊಸ ಪಾಲಿಸಿ ನೀಡುವರು. ಇದಕ್ಕೆ ಪಾಲಿಸಿಯ ಅನಗತ್ಯ ವಿನಿಮಯ (churning)  ಎನ್ನುತ್ತಾರೆ.  ಹಳೆಯ ಪಾಲಿಸಿಯನ್ನು ಮಾರುವದರಿಂದ ಗ್ರಾಹಕನಿಗೆ ಲಾಭದ ಬದಲು ಹಾನಿಯೇ ಆಗುತ್ತದೆ. ಇದು ವೃತ್ತಿಪರ ಏಜೆಂಟರಿಗೆ ಶೋಭೆ ತರುವದಿಲ್ಲಾ. ಹೀಗಾಗಿ ಇದು ಅನೈತಿಕ ಆಚರಣೆ (Uಟಿ eಣhiಛಿಚಿಟ Pಡಿಚಿಛಿಣiಛಿe) ಎಂದು ಕರೆಸಿಕೊಳ್ಳುತ್ತದೆ.


Sunday, March 22, 2015

22 ಮಾರ್ಚ 2015 

 ಶಿಫಾರಸುಗಳಿಗೆ ಗ್ರಾಹಕನು ವಿರೋಧವನ್ನು ಯಾವ ಸಂದರ್ಭಗಳÀಲ್ಲಿ  ಮಾಡಬಹುದು?  

 ಶಿಫಾರಸುಗಳಿಗೆ ಗ್ರಾಹಕನು ವಿರೋಧವನ್ನು ಕೆಳಗಿನ ಸಂದರ್ಭಗಳಲ್ಲಿ  ಮಾಡಬಹುದು.
ಸಂದರ್ಶನ ಮಾಡುವ ಸಮಯದಲ್ಲಿ ಮಾಹಿತಿ ಸಂಗ್ರಹಿಸುವಾಗ,.
ಪಾಲಿಸಿ ಸೌಲಭ್ಯಗಳನ್ನು ವಿವರಿಸುವ ಸಂದರ್ಭದಲ್ಲಿ.


Saturday, March 21, 2015

21 ಮಾರ್ಚ 2015 

 ಗ್ರಾಹಕನು ಶಿಫಾರಸುಗಳಗಳನ್ನು ಭಾಗಶಃ ಒಪ್ಪಿದರೆ, ಏಜೆಂಟನು ಏನು ಮಾಡಬೇಕು? 

 ಏಜೆಂಟನು ಶಿಫಾರಸುಗಳನ್ನು ಮಾಡಿದಾಗ, ಕೆಲವು ಬಾರಿ ಗ್ರಾಹಕನು,
ಶುದ್ಧ ವಿಮೆಗೆ ಬದಲು, ಉಳಿತಾಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲು ಸೂಚಿಸಬಹುದು.
ಸುರಕ್ಷಿತ ಹೂಡಿಕೆಯ ನಮೂನೆಗೆ ಬದಲಾಗಿ, ಹೆಚ್ಚು ಅಪಾಯಕಾರಿ ನಮೂನೆಯ ಹೂಡಿಕೆಗೆ ವಿನಂತಿಸಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಏಜೆಂಟನು, ಯಾವ ಆಧಾರದ ಮೇಲೆ ತನ್ನ ಶಿಫಾರಸುಗಳನ್ನು ಮಾಡಲಾಗಿದೆ ಎಂಬುದನ್ನು ತಿಳಿಸಿ ಹೇಳಬೇಕು. ಅದಕ್ಕೆ ಗ್ರಾಹಕನಿಗೆ ಮನವರಿಕೆಯಾದರೆ ಸರಿ. ಇಲ್ಲದಿದ್ದರೆ ಗ್ರಾಹಕನ ಇಚ್ಛಿಸಿದ ಬದಲಾವಣೆಗಳಿಗೆ ಏಜೆಂಟನು ಒಪ್ಪಿಗೆಯನ್ನು ಸೂಚಿಸಬೇಕು. ಈ ಬದಲಾವಣೆU,É ಗ್ರಾಹಕನೇ ಹೊಣೆಗಾರನೆಂದು ತಿಳಿಸಲು ಮರೆಯಬಾರದು.



Friday, March 20, 2015

 20 ಮಾರ್ಚ 2015 

ಶಿಫಾರಸುಗಳ ಒಪ್ಪಿಗೆ ಅಥವಾ ತಿರಸ್ಕಾರ ಘಟ್ಟದಲ್ಲಿ, ಏಜೆಂಟನು ಏನು ಮಾಡಬೇಕು? 

ಶಿಫಾರಸುಗಳ ಒಪ್ಪಿಗೆ ಅಥವಾ ತಿರಸ್ಕಾರ ಘಟ್ಟದಲ್ಲಿ, ಏಜೆಂಟನು ಮಾಡಬೇಕಾದುದು;
1) ಶಿಫಾರಸುಗಳಿಗೆ ಒಪ್ಪಿದರೆ; ಗ್ರಾಹಕನಿಗೆ ಪ್ರಪೋಜಲ್ ಫಾರ್ಮನ್ನು ತುಂಬಲು ಕೇಳಿಕೊಳ್ಳಬೇಕು.
    ಶಿಫಾರಸುಗಳಿಗೆ
2) ಒಪ್ಪದಿದ್ದರೆ; ಸರಿಯಾದ ಮನಸಾ ಕೇಳುವಿಕೆಯ ಕೌಶಲ್ಯದ ಮೂಲಕ, ಕಾರಣಗಳನ್ನು ಅರಿತುಕೊಳ್ಳಬೇಕು. ಸಂಶಯ ಪರಿಹಾರ ಮಾಡಿ, ಪುನಃ ಒಪ್ಪಿಗೆಯನ್ನು ಪಡೆಯುವ ಪ್ರಯತ್ನ ಮಾಡಬೇಕು.
3) ಇಷ್ಟಾಗಿಯೂ ಗ್ರಾಹಕ ಒಪ್ಪಿಗೆ ನೀಡದಿದ್ದರೆ, ಗ್ರಾಹಕನ ತಿರಸ್ಕಾರದ ನಿರ್ಣಯವನ್ನು ಗೌರವಿಸಿ, ಪುನಃ ಮತ್ತೊಮ್ಮೆ ಬೇಟಿಯಾಗುವ ದಿನಾಂಕ ನಿರ್ಧರಿಸಿ, ಹೊರಟು ಹೋಗಬೇಕು. ಹೊರಟು ಹೋಗುವ ಮುನ್ನ ಕೆಲವು ಹೊಸ ಬಾವೀ ಗ್ರಾಹಕರ ಹೆಸರುಗಳನ್ನು ಸೂಚಿಸಿ, ಅವರ ಪರಿಚಯ ಹಾಗೂ ವಿಳಾಸಗಳನ್ನು ಪಡೆಯಬೇಕು.



Thursday, March 19, 2015

19 ಮಾರ್ಚ 2015 

ನಿರ್ಧಿಷ್ಟ ಪಾಲಿಸಿಯನ್ನು ಶಿಫಾರಸು (Recommendation) ಮಾಡಿದ್ದಕ್ಕೆ ಕಾರಣಗಳನ್ನು ವಿವರಿಸುವಾಗ, ಜರುಗುವ ಘಟನಾವಳಿಗಳು  ಯಾವುವು?

 ನಿರ್ಧಿಷ್ಟ ಪಾಲಿಸಿಯನ್ನು ಶಿಫಾರಸು ಮಾಡಿದ್ದಕ್ಕೆ ಕಾರಣಗಳನ್ನು ವಿವರಿಸುವಾಗ, ಜರುಗುವ ಘಟನಾವಳಿಗಳು: 
ನಿರ್ಧಿಷ್ಠ ಪಾಲಿಸಿಯನ್ನು ಶಿಫಾರಸು ಮಾಡಿದ್ದಕ್ಕೆ ಕಾರಣಗಳನ್ನು ವಿವರಿಸಬೇಕು.
ಮಾಹಿತಿ ಸಂಗ್ರಹ ಸಮಯದಲ್ಲಿ, ಗ್ರಾಹÀಕನು ತೋರಿಸಿದ ಆಸಕ್ತಿಗೆ ಆನುಗುಣವಾಗಿ, ನೀವು ಪ್ರಾಧಾನ್ಯತೆ ನೀಡಿ ಶಿಫಾರಸನ್ನು ಮಾಡಿದ್ದನ್ನು, ಒತ್ತಿ ಹೇಳಬೇಕು.
ನೀವು ಶಿಫಾರಸು ಮಾಡಿದ ಪಾಲಿಸಿಗಳ ಪ್ರಮುಖ ಲಕ್ಷಣಗಳ ಹಾಗೂ ಸೌಲಭ್ಯಗಳ ವಿವರಣೆಯೊಂದಿಗೆ, ಇತರ ಪಾಲಸಿಗಳೊಂದಿಗೆ ಹೋಲಿಕೆಯನ್ನು ತೋರಿಸ ಬೇಕು.
ಇನ್ನೂ ಗ್ರಾಹಕನಿಗೆ ಸಂಶಯ ಉಳಿದಿದ್ದರೆ, ಅದನ್ನು ನಿವಾರಿಸಿ, ಕೊನೆಗೂ ಶಿಫಾರಸುಗಳಿಗೆ ಗ್ರಾಹಕನ ಒಪ್ಪಿಗಯನ್ನು ಪಡೆಯಬೇಕು.
ಸಂಶಯ ನಿವಾರಣೆಯಾಗದಿದ್ದರೆ, ಬದಲೀ ಶಿಫಾರಸುಗಳನ್ನು (Alternate Recommendations)  ಮಾಡಿ, ಅದಕ್ಕೆ ಗ್ರಾಹಕನ ಅಂತಿಮ ಒಪ್ಪಿಗೆಯನ್ನು ಪಡೆಯಬೇಕು.

     

Wednesday, March 18, 2015

18ಮಾರ್ಚ 2015 

 ಅವಶ್ಯಕತೆಗಳ ಬಗ್ಗೆ ಗ್ರಾಹಕನ ಬದ್ಧತೆಯನ್ನು ಪರೀಕ್ಷಿಸುವಾಗ ಕಾಣ ಬರುವ ಹಂತಗಳು ಯಾವುವು?

 ಅವಶ್ಯಕತೆಗಳ ಬಗ್ಗೆ ಗ್ರಾಹಕನ ಬದ್ಧತೆ (commitment) ಯನ್ನು ಪರೀಕ್ಷಿಸುವಾಗ ಕಾಣ ಬರುವ ಹಂತಗಳು :-
ಶಿಫಾರಸು (Recommendation) ಗಳನ್ನು ಮಾಡುವ ಮುಂಚೆ, ಪರಿಗಣಿಸಲಾದ ಒಂದೊಂದು ಅವಶ್ಯಕತೆಗಳನ್ನೂ, ಗ್ರಾಹಕನಿಗೆ ಪ್ರತ್ಯೇಕವಾಗಿ ತಿಳಿಸುವದು.
ಪ್ರತಿಯೊಂದಕ್ಕೂ ಗ್ರಾಹಕನ ಸಮ್ಮತಿಯನ್ನು ಕೇಳಿ ತಿಳಿದುಕೊಳ್ಳುವದು.
ಏಜೆಂಟನು ಭಾವಿಸಿಕೊಂಡ ಅವಶ್ಯಕತೆಗೆ, ಗ್ರಾಹಕನ ಅಸಮ್ಮತಿ ಇದ್ದರೆ, ಅವನಿಗಿರುವ ತಪ್ಪು ತಿಳುವಳಿಕೆಯನ್ನು ನಿವಾರಿಸಬೇಕು. ನಿವಾರಿಸಲಾಗದಿದ್ದರೆ, ಬದಲೀ ಆರ್ಥಿಕ ಯೋಜನೆಯನ್ನು ತಯಾರಿಸಿ ತೋರಿಸಬೇಕಾಗುವದು.


Tuesday, March 17, 2015

17 ಮಾರ್ಚ 2015 

 ಪಾಲಿಸಿಗಳ ಶಿಫಾರಸು(Recommendation) ಗಳನ್ನು ಮಾಡುವಾಗ, ಕಂಡು ಬರುವ ಹಂತಗಳು ಯಾವುವು?

 ಪಾಲಿಸಿಗಳ ಶಿಫಾರಸುಗಳನ್ನು ಮಾಡುವಾಗ, ಕಂಡು ಬರುವ ಹಂತಗಳು ಕೆಳಗಿನಂತಿವೆ. 
ಮೊದಲು, ಅವಶ್ಯಕತೆಗಳ ಬಗ್ಗೆ ಗ್ರಾಹಕನ ಬದ್ಧತೆಯನ್ನು ಪರೀಕ್ಷೀಸುವದು.
ನಂತರ, ನಿರ್ಧಿಷ್ಟ ಪಾಲಿಸಿಯನ್ನು ಶಿಫಾರಸು ಮಾಡಿದ್ದಕ್ಕೆ ಕಾರಣಗಳನ್ನು ತಿಳಿಸುವದು.
ನಂತರ, ಈ ರೀತಿ ಮಾಡಿದ ಶಿಫಾರಸುಗಳಿಗೆ ಗ್ರಾಹಕ ಒಪ್ಪಿಕೊಳ್ಳಬಹದು, ಅಥವಾ ಒಪ್ಪಿಕೊಳ್ಳಲಿಕ್ಕಿಲ್ಲಾ.
ನಂತರ ಹಳೆಯ ಪಾಲಿಸಿಗೆ ಬದಲಾಗಿ ಹೊಸ ಪಾಲಿಸಿಯನ್ನು ನೀಡುವ ಚಟುವಟಿಕೆ ಪ್ರಾರಂಭವಾಗಬಹುದು.



Monday, March 16, 2015

16 ಮಾರ್ಚ 2015 

ಯುಲಿಪ್ ಪಾಲಿಸಿಯಲ್ಲಿ ಏಜೆಂಟನಿಗೆ ನೀಡಲಾಗುವ ಕಮೀಶನ್‍ದ ಮಾಹಿತಿ ಪ್ರದರ್ಶನ (Disclosure) ವನ್ನು, ಯಾವ ದಿನದಿಂದ ಕಡ್ಡಾಯಗೊಳಿಸಲಾಗಿದೆ?  ಹಾಗೂ ಈ ನಿಯಮವನ್ನು ಪಾಲಿಸುವ ರೀತಿ ಹೇಗೆ?


 1 ಜುಲೈ 2010ರಿಂದ, ಯುಲಿಪ್ ಪಾಲಿಸಿಯಲ್ಲಿ ಏಜೆಂಟನಿಗೆ ನೀಡಲಾಗುವ ಕಮೀಶನ್‍ದ ಮಾಹಿತಿ ಪ್ರದರ್ಶನ (Disclosure) ವನ್ನು ಕಡ್ಡಾಯಗೊಳಿಸಲಾಗಿದೆ. ಈ ಮಾಹಿತಿಯನ್ನು ಯುಲಿಪ್ ಪಾಲಿಸಿಯ ‘ಸೌಲಭ್ಯ ವಿವರಣಾ ದಾಖಲಾತಿ’ (Benefit Illustration Document) ಯಲ್ಲಿ ತೋರಿಸಬೇಕು.
ಈ ಪಾಲಿಸಿಯನ್ನು ಮಾರುವಾಗ, ಆ ಯುಲಿಪ್ ಪಾಲಿಸಿಯ ಸೌಲಭ್ಯ ವಿವರಣಾ ದಾಖಲಾತಿಯಲ್ಲಿ, ಗ್ರಾಹಕನ ರುಜು ಪಡೆದು, ಅದರ ಪ್ರತಿಯನ್ನು, ಪ್ರಪೋಜಲ್ ಪೇಪರಿಗೆ ಲಗತ್ತಿಸಬೇಕು.



Sunday, March 15, 2015

15 ಮಾರ್ಚ 2015 

ಕಡ್ಡಾಯ ಮಾಹಿತಿ ಪ್ರದರ್ಶನ (Disclosure), ಯಾವ ಸಂದರ್ಭಗಳಲ್ಲಿ ಜರುಗಿಸಬೇಕಾಗುತ್ತದೆ?



ಯುಲಿಪ್ ಪಾಲಿಸಿಯಲ್ಲಿ ಏಜೆಂಟನಿಗೆ ನೀಡಲಾಗುವ ಕಮೀಶನ್‍ದ ಮಾಹಿತಿ ಪ್ರದರ್ಶನ (Disclosure) ವನ್ನು ಕಡ್ಡಾಯಗೊಳಿಸಲಾಗಿದೆ. ಈ ಮಾಹಿತಿಯನ್ನು ಈ ಪಾಲಿಸಿಯ ಸೌಲಭ್ಯ ವಿವರಣಾ ದಾಖಲಾತಿ (Benefit Illustration Document) ಯಲ್ಲಿ ನೀಡಬೇಕು.
ಯಾವುದೇ ಪಾಲಿಸಿಯ ಸೌಲಭ್ಯ ವಿವರಣಾ ದಾಖಲಾತಿಯಲ್ಲಿ, ಗಳಿಕೆಯದರ 6% ಹಾಗೂ 10% ಇದ್ದಾಗ,
 ಪಾಲಿಸಿಯಲ್ಲಿ ದೊರಕಬಹುದಾದ ಖಚಿತವಾದ ಹಾಗೂ ಖಚಿತವಲ್ಲದ ಸೌಲಭ್ಯಗಳನ್ನು (Guaranteed and Non guaranteed Benefits )    ಪ್ರತ್ಯೇಕವಾಗಿ ತೋರಿಸಬೇಕು. 



Saturday, March 14, 2015

14 ಮಾರ್ಚ 2015 

ಸಾಮಾನ್ಯವಾಗಿ ಯಾವ ಪಾಲಿಸಿಗಳಿಗೆ ನೀಡಲಾಗುವ ಕಮೀಶನ್ ದರ, ನಿಗದಿತ ಗರಿಷ್ಠ ಮಟ್ಟದ ದರಕ್ಕಿಂತ ಕಡಿಮೆಯಾಗಿರುತ್ತದೆ?   

ಸಾಮಾನ್ಯವಾಗಿ ಕೆಳಗಿನ ನಮೂನೆಯ ಪಾಲಿಸಿಗಳಿಗೆ ನೀಡಲಾಗುವ ಕಮೀಶನ್ ದರ, ನಿಗದಿತ ಗರಿಷ್ಠ ಮಟ್ಟದ ದರಕ್ಕಿಂತ ಕಡಿಮೆಯಾಗಿರುತ್ತದೆ.
ಚಿಕ್ಕ ಅವಧಿಗಳ ಪಾಲಸಿಗಳಲ್ಲಿ. 
ಒಂಟಿ ಕಂತಿನÀ ಪಾಲಸಿಗಳಲ್ಲಿ..
ಅವಧಿ ವಿಮೆ, ವರ್ಷಾಶನ ವಿಮೆ ಹಾಗೂ ನಿವೃತ್ತಿ ವಿಮೆ ಪಾಲಸಿಗಳಲ್ಲಿ.



Friday, March 13, 2015


13 ಮಾರ್ಚ 2015 

 ವಿಮಾ ಏಜೆಂಟನ ಕಮೀಶನ್‍ನ್ನು, ಏಜೆಂಟನ ಹೊರತಾಗಿ ಬೇರೆ ಯಾರಿಗಾದರೂ ನೀಡಬಹುದೆ?  

 ವಿಮಾ ಏಜೆಂಟನು ನಿಧನನಾದರೆ, ನಿಧನಾನಂತರ ಏಜೆಂಟನ ವಿಮಾ ಕಮೀಶನ್‍ನ್ನು, ಆತನ ಕಾನೂನ ಬದ್ಧ ವಾರಸುದಾರರಿಗೆ ನೀಡಲಾಗುವದು.



Thursday, March 12, 2015

12ಮಾರ್ಚ 2015 

 ವಿಮಾ ಏಜೆನ್ಸಿ ರದ್ದಾದರೂ,  ಮುಂದುವರೆÀಸುವ ವಿಮಾಕಂತುಗಳ ಮೇಲೆ ಕಮೀಶನ್ (Renewal Commission)    ಪಡೆಯುವ ಹಕ್ಕು ಯಾವಾಗ ಪ್ರಾಪ್ತಿಯಾಗುತ್ತದೆ?

 ವಿಮಾ ಕಾನೂನು 1938, ಸೆಕ್ಶನ್ 44 ರ ಪ್ರಕಾರ, ಕನಿಷ್ಠ 5 ವರ್ಷಗಳ ವಿಮಾ ಏಜೆನ್ಸಿಯನ್ನು ಪೂರ್ತಿಗೊಳಿಸಿದ ನಂತರ ವಿಮಾ ಏಜೆನ್ಸಿಯು ರದ್ದಾದರೆ; ವಿಮಾ ಏಜೆನ್ಸಿಯು ರದ್ದಾದ ಒಂದು ವರ್ಷದ ಮುಂಚೆ ಕನಿಷ್ಠ 50,000 ರೂ.ಗಳ ವಿಮಾ ವ್ಯವಹಾರ ಚಾಲತಿಯಲ್ಲಿದ್ದರೆ; ಅಂತಹ ಏಜೆಂಟನಿಗೆ ವಿಮಾ ಏಜೆನ್ಸಿಯು ರದ್ದಾದ ನಂತರವೂ, ಮುಂದುವರೆÀಸುವ ವಿಮಾಕಂತುಗಳ ಮೇಲೆ ಕಮೀಶನ್ (Renewal Commission)   ಪಡೆಯುವ ಹಕ್ಕು  ಪ್ರಾಪ್ತಿ ಯಾಗುತ್ತದೆ.


Wednesday, March 11, 2015

11 ಮಾರ್ಚ 2015 

ವಿಮಾ ಏಜೆಂಟನಿಗೆ  ಕೊಡಬಹುದಾದ ಕಮೀಶನ್ (Agent Remuneration)  ದ ಗರಿಷ್ಠ ಪ್ರಮಾಣ ಎಷ್ಟು?

ವಿಮಾ ಕಾನೂನು 1938 ರ ಪ್ರಕಾರ, 
ವಿಮಾ ಏಜೆಂಟನಿಗೆ  ಕೊಡಬಹುದಾದ ಕಮೀಶನ್ (Agent Remuneration)  ದ ಗರಿಷ್ಠ ಪ್ರಮಾಣ :
ಮೊದಲ ವರ್ಷದ ವಿಮಾಕಂತಿನ (First Year Premium)   35%, 
2 & 3ನೇ ವರ್ಷಗಳ ವಿಮಾ ಕಂತಿನ (2nd & 3rd  Year Premium)   7.5 5%. 
ನಂತರದ ವರ್ಷ (Subsequent Year Premium)   ಗಳಿಗೆ 5 % ((ವರ್ಷಾಶನದ ಪಾಲಿಸಿಗಳಿಗೆ ಈ ನಿಯಮ 
       ಅನ್ವಯವಾಗುವದಿಲ್ಲಾ.)
                          ಆಥವಾ
ಮೊದಲ 10 ವರ್ಷಗಳಲ್ಲಿ, ಮೊದಲ ವರ್ಷದ ವಿಮಾ ಕಂತಿನ ಮೇಲೆ– (First Year Premium) 40%, 
       ಮುಂದುವರೆಸುವ ಒಟ್ಟಾರೆ ವಿಮಾಕಂತುಗಳ ಮೇಲೆ - (Renewal  Premium) 4 %.

Tuesday, March 10, 2015

10 ಮಾರ್ಚ 2015 

ಗ್ರಾಹಕನ ಮಾಹಿತಿ ಸಂಗ್ರಹಿಸಿದ ನಂತರ ವಿಮಾ ಏಜೆಂಟನು ನಿರ್ವಹಿಸಬೇಕಾದ ಕರ್ತವ್ಯಗಳು ಯಾವುವು?


ಗ್ರಾಹಕನ ಮಾಹಿತಿ ಸಂಗ್ರಹಿಸಿದ ನಂತರ ವಿಮಾ ಏಜೆಂಟನು ನಿರ್ವಹಿಸಬೇಕಾದ ಕರ್ತವ್ಯಗಳು :-
ಗ್ರಾಹಕನ ಅವಶ್ಯಕತೆಗಳನ್ನು ಆದ್ಯತೆಗಳ ಆಧಾರ (Priority of needs)ದ ಮೇಲೆ ಕ್ರಮಾನುಗತವಾಗಿ   
         ಬರೆಯುವದು.
ಸಮಗ್ರ ಆರ್ಥಿಕ ಶಿಫಾರಸುಗಳನ್ನು ಮಾಡಲು ಸಂಶೋಧನೆ (Research) ಮಾಡುವದು.
ಎಲ್ಲಾ ಅವಶ್ಯಕತೆಗಳ ಈಡೇರಿಕೆಗೆ ಬೇಕಾಗುವ ಹಣವನ್ನು ಲೆಕ್ಕ ಮಾಡಿ ತಿಳಿಸುವದು.
ಪ್ರತಿ ಅವಶ್ಯಕತೆಯ ಈಡೇರಿಕೆಗೆ ಲಭ್ಯವಿರುವ ಎಲ್ಲಾ ಸರಕುಗಳನ್ನು ಗುರುತಿಸಿ, ಅವುಗಳಲ್ಲಿ ಅತೀ ಯೊಗ್ಯವಾದ 
          ಸರಕನ್ನು (most suitable product)  ಶಿಫಾರಸು ಮಾಡುವದು.


Monday, March 9, 2015

9 ಮಾರ್ಚ 2015 

 ವಿಮಾ  ಏಜೆಂಟನ ಕರ್ತವ್ಯಗಳು (Agent’s duties & responsibilities)  ಯಾವುವು?

 ವಿಮಾ  ಏಜೆಂಟನ ಕರ್ತವ್ಯಗಳು (Agent’s duties & responsibilities) :-
ವಿಮಾ ಕಂಪನಿಗಳ ಸರಕುಗಳ ಜ್ನಾನ ಪಡೆದು, ಅವುಗಳ ಲಕ್ಷಣಗಳನ್ನು ಹಾಗೂ ಅವುಗಳು ನೀಡುವ ಸೌಲಭ್ಯಗಳನ್ನು     
     ತಿಳಿದು ಕೊಳ್ಳುವದು.
ವಿಮಾ ಕಂಪನಿಗಳ ಭಾವೀ ಗ್ರಾಹಕರನ್ನು ಗುರುತಿಸುವದು.
ಗ್ರಾಹಕನ ಅವಶ್ಯಕತೆಗಳನ್ನು ಗುರುತಿಸುವದು ಹಾಗೂ ವಿಶ್ಲೇಷಿಸುವದು. 
ಗ್ರಾಹಕನ ಅವಶ್ಯಕತೆಗಳಿಗೆ ಹಾಗೂ ಸಾಮಥ್ರ್ಯಗಳಿಗೆ ಹೊಂದಿಕೆಯಾಗುವಂತಹ ಪಾಲಿಸಿ (Suitable products) 
           ಗಳನ್ನು ಶಿಫಾರಸು ಮಾಡುವದು.
ವಿಮಾ ಕೋರಿಕೆಪತ್ರದಲ್ಲಿ ಸರಿಯಾದ ಮಾಹಿತಿ ಭರ್ತಿಯಾಗುವಂತೆ ನೋಡಿಕೊಳ್ಳುವದು.
ವಿಮಾಕೋರಿಕೆ ಪತ್ರದ ಜೊತೆಗೆ ಲಗತ್ತಿಸಬೇಕಾದ; ವಯಸ್ಸು, ಆದಾಯ,ಗುರುತು,ಆರೋಗ್ಯ,ಹಾಗೂ ಇನ್ನಿತರ 
        ಮಾಹಿತಿಗಳ ದಾಖಲೆ ಪತ್ರಗಳ ಸಲ್ಲಿಕೆಗೆ ಜವಾಬ್ದಾರಿ ತೆಗೆದು ಕೊಳ್ಳುವದು.
ಗ್ರಾಹಕನು ನೀಡಬೇಕಾದ ವಿಮಾಕಂತು, ವಿವಿಧ ಶುಲ್ಕಗಳ ಬಗ್ಗೆ ಮಾಹಿತಿ ನೀಡುವದು.
ಗ್ರಾಹಕನು ಬಯಸಿದರೆ ಪಾಲಿಸಿಗಳಲ್ಲಿ ಪಡೆಯಲಾಗುವ ಕಮೀಶನ್ ಬಗ್ಗೆ ಮಾಹಿತಿ ನೀಡುವದು.
ವಿಮಾ ಕಂಪನಿಗೆ ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನು ವಿಶ್ವಾಸಪೂರ್ವಕವಾಗಿ ಸಲ್ಲಿಸುವದು.
ವಿಮಾಂಕನ ಅಧಿಕಾರಿಗೆ, ಅಪಾಯ ಮೌಲ್ಯ ಮಾಪನಕ್ಕೆ ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನು ನೀಡುವದಕ್ಕೆ 
         ಸಹಕರಿಸುವದು.
ಗ್ರಾಹಕನು ವಿಮಾಕಂತುಗಳನ್ನು ಕಾಲಕ್ಕೆ ಸರಿಯಾಗಿ ನೀಡಲು, ಸಹಾಯ ಸಲ್ಲಿಸುವದು.
ವಿಮಾ ಸಂಸ್ಥೆ ಅನುಮತಿಸಿದರೆ, ಗ್ರಾಹಕನಿಂದ ವಿಮಾಕಂತು ಸ್ವೀಕರಿಸಿ ಕಂಪನಿಗೆ ನೀಡುವದು.
ವಿಮಾ ಪರಿಹಾರ ಸಂದಾಯ ಸುಲಭವಾಗುವಂತೆ, ಪರಿಹಾರ ಹಕ್ಕುದಾರನಿಗೆ ಸಹಾಯ ಸಲ್ಲಿಸುವದು.
ಪಾಲಸಿಯ ವಿಮಾ ಪರಿಹಾರ ಸಂದಾಯವಾಗುವವರೆಗೆ ಗ್ರಾಹಕನಿಗೆ ಪಾಲಸಿಯ ಸೇವೆಯನ್ನು (Policy    
        servicing.)ನೀಡುವದು.

ಗ್ರಾಹಕನ ಹಿತಾಸಕ್ತಿ (customer’s  interest.) ಗಳನ್ನು ಕಾಪಾಡುವದು. 
ವಂಚನೆಯ ಘಟನೆ ನಡೆದಾಗ, ಗ್ರಾಹಕ ಹಾಗೂ ಸಂಸ್ಥೆಗಳ ಪರವಹಿಸದೇ, ತಟಸ್ಥ (neutral) ನಾಗಿ ಉಳಿಯುವದು.



Sunday, March 8, 2015

8 ಮಾರ್ಚ 2015 

 ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿ ಇದೆ?


ವಿಮಾ  ಏಜೆಂಟನು  ವಿಮಾ ಸಂಸ್ಥೆಯನ್ನು  ಪ್ರತಿನಿಧಿಸುತ್ತಾನೆ. 
ವಿಮಾ  ಏಜೆಂಟನು  ವಿಮಾ  ಗ್ರಾಹಕನನ್ನು  ಪ್ರತಿನಿಧಿಸುತ್ತಾನೆ. 
ವಿಮಾ  ಏಜೆಂಟನು  ಆಯ್.ಆರ್.ಡಿ.ಎ.ಯನ್ನು  ಪ್ರತಿನಿಧಿಸುತ್ತಾನೆ.
ವಿಮಾ  ಏಜೆಂಟನು  ವಿಮಾ ಸಂಸ್ಥೆ  ಹಾಗೂ ವಿಮಾ  ಗ್ರಾಹಕ  ಇವರಿಬ್ಬರನ್ನೂ ಪ್ರತಿನಿಧಿಸುತ್ತಾನೆ.



Friday, March 6, 2015

6 ಮಾರ್ಚ 2015 

ವೃತ್ತಿಯ ಪ್ರಮುಖ ಲಕ್ಷಣಗಳು ಯಾವುವು?

 ವೃತ್ತಿಯ (Profession) ಪ್ರಮುಖ ಲಕ್ಷಣಗಳು :-
ಗ್ರಾಹಕರು ಹಾಗೂ ವೃತ್ತಿಯೊಂದಿಗೆ ನೈತಿಕವಾಗಿ (ethically) ನಡೆದುಕೊಳ್ಳುವದು.
ವೃತ್ತಿಯಲ್ಲಿ ದಕ್ಷತೆಯನ್ನು ಕಾಪಾಡಿಕೊಂಡು ಬರುವದು.
ವೃತ್ತಿಯ ಬೆಳವಣಿಗೆಗೆ ಸ್ಪಂಧಿಸುವದು.



Thursday, March 5, 2015

5 ಮಾರ್ಚ 2015 

 ‘ನಿಮ್ಮ ಗ್ರಾಹಕರನ್ನು ಅರಿಯಿರಿ’, ಯೋಜನೆಯಲ್ಲಿ  ಗ್ರಾಹಕನ ಗುರುತಿನ ದಾಖಲಾತಿ ಹಾಗೂ ಗ್ರಾಹಕನ ವಿಳಾಸ ದಾಖಲಾತಿಗಳ ವಿವರಗಳು ಯಾವುವು.

 ‘ನಿಮ್ಮ ಗ್ರಾಹಕರನ್ನು ಅರಿಯಿರಿ’, ಯೋಜನೆಯಲ್ಲಿ  ಗ್ರಾಹಕನ ಗುರುತಿನ ದಾಖಲಾತಿ ಹಾಗೂ ಗ್ರಾಹಕನ ವಿಳಾಸ ದಾಖಲಾತಿಗಳ ವಿವರಗಳು :
ದಾಖಲಾತಿಗಳ ವರ್ಣನೆ.    ಗುರುತಿನ ದಾಖಲಾತಿಯೊ?         ವಿಳಾಸದ ದಾಖಲಾತಿಯೊ?
ಡ್ರೈವಿಂಗ ಲೈಸೆನ್ಸ್.                     ಹೌದು.                            ಹೌದು.
ಪಾಸ್ ಪೋರ್ಟ,                              ಹೌದು.                            ಹೌದು.
ಮತದಾರನ ಗುರುತಿನ ಚೀಟಿ.       ಹೌದು.                              _
ಸೈನಿಕ ಖಾತೆಯ ಗುರುತಿನ ಚೀಟಿ.      ಹೌದು.                               _
ಸರಕಾರೀ ಗುರುತಿನ ಚೀಟಿ,               ಹೌದು.                           _
ವಿದ್ಯತ್/ಟೆಲೆಫೋನ್ ಬಿಲ್.                    _                            ಹೌದು.
ವಿಮಾ ಕಂಪನಿ ರಸೀದಿ.                   _                          ಹೌದು.
ರೇಶನ್ ಕಾರ್ಡ್.                                 _                          ಹೌದು.
ಬ್ಯಾಂಕ ಪಾಸ್ ಬುಕ್.                        _                          ಹೌದು.

Wednesday, March 4, 2015

4 ಮಾರ್ಚ 2015 

 ‘ನಿಮ್ಮ ಗ್ರಾಹಕರನ್ನು ಅರಿಯಿರಿ’ (Know your Customer )  ಯೋಜನೆಯಲ್ಲಿ ಕೇಳಲಾಗುವ ದಾಖಲಾತಿಗಳು ಯಾವುವು ? 

 ‘ನಿಮ್ಮ ಗ್ರಾಹಕರನ್ನು ಅರಿಯಿರಿ’(Know your Customer ) ಯೋಜನೆಯಲ್ಲಿ ಕೇಳಲಾಗುವ ದಾಖಲಾತಿಗಳು :-
1. ಗ್ರಾಹಕನ ಭಾವಚಿತ್ರ. 
2. ಗ್ರಾಹಕನ ಗುರುತಿನ ದಾಖಲಾತಿ.
3. ಗ್ರಾಹಕನ ವಿಳಾಸ ದಾಖಲಾತಿ.


Tuesday, March 3, 2015

3 ಮಾರ್ಚ 2015 

ಸೌಲಭ್ಯ ವಿವರಣಾ ದಾಖಲೆ ಪತ್ರ (Benefit Illustration Document) ಗಳ ವಿಶೇಷತೆ ಏನು? 

ಸೌಲಭ್ಯ ವಿವರಣಾ ದಾಖಲೆ ಪತ್ರ (Benefit Illustration Document) ಗಳ ವಿಶೇಷತೆ ;- ವಿವರಣಾ ದಾಖಲಾತಿ ಪತ್ರಗಳಲ್ಲಿ,

ದೊರಕಬಹುದಾದ, ಖಾತರಿ ಸೌಲಭ್ಯಗಳು (Guaranteed Benefits)    ಹಾಗೂ ಖಾತರಿಯಲ್ಲದ ಸೌಲಭ್ಯ (Non Guaranteed Benefits)    ಗಳನ್ನು ಪ್ರತ್ಯೇಕವಾಗಿ ಹೇಳುತ್ತಾರೆ.  

ಗಳಿಕೆಯ ದರ 6% ಹಾಗೂ 10% ಇದ್ದಾಗ ದೊರಕಬಹುದಾದ ಖಾತರಿಯಲ್ಲದ ಸೌಲಭ್ಯ (Non Guaranteed Benefits)    ಗಳನ್ನು ಹೇಳುತ್ತಾರೆ.  

ವಿಮಾ ಕಂಪನಿಗಳು ವಿಧಿಸುವ ವೆಚ್ಚಗಳ ವರ್ಣನೆಯ ಜೊತೆಗೆ, ಆ ವೆಚ್ಚಗಳ ಅನುಪಸ್ಥಿತಿಯಲ್ಲಿ ಹಾಗೂ ಉಪಸ್ಥಿತಿಯಲ್ಲಿ ಪಡೆಯಬಹುದಾದ, ಒಟ್ಟು ಗಳಿಕೆಯ ದರ (Gross Rate of Return)     ಹಾಗೂ ಒಟ್ಟು ನಿವ್ವಳ ದರ (Net Rate of Return)    ದ ಬಗ್ಗೆ ಹೇಳಿಕೆ ನೀಡಿರುತ್ತಾರೆ.



Monday, March 2, 2015

2 ಮಾರ್ಚ 2015 

ಸೌಲಭ್ಯ ವಿವರಣಾ ದಾಖಲೆ ಪತ್ರ (Benefit Illustration Document) ದ ಉಪಯೋಗ ಏನು?

ಸೌಲಭ್ಯ ವಿವರಣಾ ದಾಖಲೆ ಪತ್ರ (Benefit Illustration Document) ದ ಮೂಲಕ, 
1. ಗ್ರಾಹಕನಿಗೆ ವಿವರಿಸಿದ ಸರಕಿನ ಪ್ರಮುಖ ಲಕ್ಷಣಗಳನ್ನು ತಿಳಿಸಬಹುದು.
2. ಗ್ರಾಹಕನಿಗೆ ಸರಕಿನಿಂದ ದೊರೆಯುವ ಪ್ರಮುಖ ಸೌಲಭ್ಯಗಳನ್ನು ತಿಳಿಸಬಹುದು.
3. ಗ್ರಾಹಕನಿಗೆ ಯಾವ ಸಂದರ್ಭಗಳಲ್ಲಿ, ಯಾವ ಸೌಲಭ್ಯಗಳು ದೊರೆಯುವದೆಂಬದನ್ನು ತಿಳಿಸಬಹುದು.



Sunday, March 1, 2015

1 ಮಾರ್ಚ 2015 

ಪ್ರತಿಯೊಂದು ಅವಶ್ಯಕತೆಗಳಿಗೆ ಶಿಫಾರಸುಗಳನ್ನು ಪ್ರಸ್ತಾಪಿಸುವಾಗ, ಏಜೆಂಟನು ನಿರ್ವಹಿಸ ಬೇಕಾದ ಕರ್ತವ್ಯಗಳೇನು?

ಪ್ರತಿಯೊಂದು ಅವಶ್ಯಕತೆಗಳಿಗೆ ಶಿಫಾರಸುಗಳನ್ನು ಪ್ರಸ್ತಾಪಿಸುವಾಗ, ಏಜೆಂಟನು ನಿರ್ವಹಿಸ ಬೇಕಾದ ಕರ್ತವ್ಯಗಳು.
 ಸರಕುಗಳು ನೀಡುವ ಪ್ರಮುಖ ಸೌಲಭ್ಯಗಳನ್ನು ತಿಳಿಯುವಂತೆ ಹೇಳಬೇಕು.
 ಆ ಸರಕನ್ನೇ ಯಾಕೆ ಶಿಫಾರಸು ಮಾಡಿದ ಎಂಬುದನ್ನು ತಪ್ಪದೇ ಹೇಳಬೇಕು.
 ಕೆಲವು ಚಿಕ್ಕ ಪುಟ್ಟ ಅವಶ್ಯಕತೆÀಗಳನ್ನು, ಆ ಸರಕು ಈಡೇರಿಸದಿದ್ದರೆ, ಆ ಸರಕಿಗೆ ಇರುವ ಇತಿಮಿತಿಯನ್ನು ತಿಳಿ ಹೇಳಬೇಕು.