Thursday, April 30, 2015

30 ಎಪ್ರೀಲ್ 2015

 ಮರಣ ವಿಮಾ ಪರಿಹಾರ ಕೋರಿಕೆ ಯಾವ ಸಂದರ್ಭಗಳಲ್ಲಿ ಕ್ರಮಬದ್ಧ (valid)ವಾಗಿರುದಿಲ್ಲಾ?

ಮರಣ ವಿಮಾ ಪರಿಹಾರ ಕೋರಿಕೆ ಕೆಳಗಿನÀ ಸಂದರ್ಭಗಳಲ್ಲಿ ಕ್ರಮಬದ್ಧ (valid) ವಾಗಿರುದಿಲ್ಲಾ, ಅಂದರೆ ಮರಣ ವಿಮಾ ಪರಿಹಾರ ಕೋರಿಕೆ ಅಕ್ರಮ ((invalid)) ವಾಗಿರುತ್ತದೆ.  
ಮರಣ ಕಾಲದಲ್ಲಿ ಪಾಲಸಿಯು ರದ್ದತಿಯ (policy not in force)  ಸ್ಥಿತಿಯಲ್ಲಿದ್ದರೆ,
ನಿರ್ಬಂಧಿಸಿದ ಕಾರಣಗಳಿಂದ (ಉದಾ : ಆತ್ಮಹತ್ಯೆ) ಮರಣ ಸಂಭವಿಸಿದ್ದರೆ,
ಮೋಸ, ವಂಚನೆ, ದುರುದ್ಯೇಶಗಳ ಪ್ರಯುಕ್ತ, ಕೆಲವು ಮಹತ್ವದ ಸಂಗತಿಗಳನ್ನು ಬಚ್ಚಿಟ್ಟಿದ್ದರೆ, ಅಥವಾ ಕೆಲವು ಖೊಟ್ಟಿ ಮಾಹಿತಿಗಳನ್ನು ನೀಡಿದ್ದರೆ,

Wednesday, April 29, 2015

29 ಎಪ್ರೀಲ್ 2015

ವಿಮಾ ಕರಾರು ಏರ್ಪಟ್ಟ ನಂತರ, ಎಷ್ಟು ಅವಧಿಯೊಳಗೆ ಮರಣ ಸಂಭವಿಸಿದರೆ, ಮರಣ ವಿಮಾ ಪರಿಹಾರ ಸಂದಾಯ ಮಾಡಲು, ಪೂರ್ವಭಾವಿ ತನಿಖೆ (prelimanary investigation) ಯನ್ನು ಕೈಕೊಳ್ಳುತ್ತಾರೆ?

ವಿಮಾ ಕರಾರು ಏರ್ಪಟ್ಟ ನಂತರ, 3 ವರ್ಷಗಳ  ಅವಧಿಯೊಳಗೆ ಮರಣ ಸಂಭವಿಸಿದರೆ, ಮರಣ ವಿಮಾ ಪರಿಹಾರ ಸಂದಾಯ ಮಾಡಲು, ಪೂರ್ವಭಾವಿ ತನಿಖೆ (prelimanary investigation) ಯನ್ನು ಕೈಕೊಳ್ಳುತ್ತಾರೆ.



Tuesday, April 28, 2015

28 ಎಪ್ರೀಲ್ 2015

ಮರಣ ವಿಮಾ ಪರಿಹಾರ ಸಂದಾಯಕ್ಕೆ ಮೊದಲು, ಕೆಲವು ಬಾರಿ ತನಿಖೆ (Claim Investigation)  ಯನ್ನು ಯಾಕೆ ಕೈಕೊಳ್ಳುತ್ತ್ತಾರೆ?

ಮರಣ ವಿಮಾ ಪರಿಹಾರ ಸಂದಾಯಕ್ಕೆ ಮೊದಲು, ಕೆಲವು ಬಾರಿ ತನಿಖೆಯನ್ನು ಕೈಕೊಳ್ಳುತ್ತ್ತಾರೆ. ವಿಮಾ ಕರಾರು ಏರ್ಪಟ್ಟಾಗ, ಪರಮೋಚ್ಚ ನಂಬಿಕೆಯ ತತ್ವ (Principle of utmost good faith)   ಉಲ್ಲಂಘನೆಯಾಗಿಲ್ಲವೆಂಬುದನ್ನು ಖಾತ್ರಿ ಮಾಡಿಕೊಳ್ಳಲು, ಈ ರೀತಿಯ ತನಿಖೆಯ ಅವಶ್ಯಕತೆ ಉಂಟಾಗುತ್ತದೆ.


Monday, April 27, 2015

27 ಎಪ್ರೀಲ್ 2015

ಹೆಚ್ಚುವರಿ ವಿಮಾ ಸೌಲಭ್ಯ ಪರಿಹಾರ ಕೋರಿಕೆ (Rider Benefit Claim) ಯೆಂದರೇನು? 

ಮರಣ ವಿಮಾ ಪರಿಹಾರ ಸಂದಾಯ ಸಮಯದಲ್ಲಿ ಕೆಲವು ಬಾರಿ, ಮೂಲ ವಿಮಾ ಪರಿಹಾರದ ಜೊತೆಗೆ, ಹೆಚ್ಚುವರಿ ವಿಮಾ ಸೌಲಭ್ಯ ಪರಿಹಾರ (Rider Benefit Claim)  ವನ್ನೂ ನೀಡಬೇಕಾಗುತ್ತದೆ. 
     ಉದಾಹರಣೆಗೆ, ಮರಣವು 
ಅಪಘಾತದಿಂದಾಗಿದ್ದರೆ, ಹೆಚ್ಚುವರಿ ಅಪಘಾತ ಪರಿಹಾರವನ್ನು ನೀಡಲಾಗುವದು, 
ಗಂಭೀರ ಕಾಯಿಲೆಯಿಂದಾಗಿದ್ದರೆ, ಹೆಚ್ಚುವರಿ ಗಂಭೀರ ಕಾಯಿಲೆ ಪರಿಹಾರವನ್ನು ನೀಡಲಾಗುವದು,
ಅದೇ ರೀತಿ, ಕೆಲವು ವಿಶೇಷ ಘಟನೆಗಳು ಜರುಗಿದಾಗ ಹೆಚ್ಚುವರಿ ವಿಮಾ ಪರಿಹಾರವನ್ನೂ ನೀಡಬೇಕಾಗುತ್ತದೆ. 
ಉದಾಹರಣೆಗೆ,
ಅಪಘಾತದಿಂದ ಅಂಗವಿಕಲನಾದರೆ, ಹೆಚ್ಚುವರಿ ಅಪಘಾತ ಪರಿಹಾರವನ್ನು ನೀಡಲಾಗುವದು,
ಗಂಭೀರ ಕಾಯಿಲೆಯಿಂದ ಆಸ್ಪತ್ರೆ ಸೇರಿದರೆ, ಹೆಚ್ಚುವರಿ ಅಪಘಾತ ಪರಿಹಾರವನ್ನು ನೀಡಲಾಗುವದು,
ಗಂಭೀರ ಕಾಯಿಲೆಯಿಂದ ಶಸ್ತ್ರ ಚಿಕಿತ್ಸೆ ಅವಶ್ಯವೆನಿಸಿದರೆ , ಹೆಚ್ಚುವರಿ ಅಪಘಾತ ಪರಿಹಾರವನ್ನು ನೀಡಲಾಗುವದು. 


Sunday, April 26, 2015

26 ಎಪ್ರೀಲ್ 2015

 ಕ್ರಮ ಬದ್ಧ ವಿಮಾ ಪರಿಹಾರ ಕೋರಿಕೆ (Valid Claim) ಎಂದರೇನು? 

 ವಿಮಾ ಪರಿಹಾರ ಸಂದಾಯ (Claim payment)  ಸಮಯದಲ್ಲಿ,
ವಿಮಾ ಪಾಲಸಿ ಚಾಲತಿ/ಪೇಡ್‍ಅಪ್ ಸ್ಥಿತಿಯಲ್ಲಿದ್ದರೆ, (ಅಂದರೆ ಪಾಲಸಿ ಕರಾರು ಸಂಪೂರ್ಣವಾಗಿ ರದ್ದಾಗಿರದಿದ್ದರೆ)
ವಿಮೆಗೆ ಸಂಬಂಧಿಸಿದ ಘಟನೆ ಜರುಗಿದ್ದರೆ,(ಅವಧಿ ಪೂರ್ತಿ ಗೊಂಡಿದ್ದರೆ/ಅವಧಿಗಿಂತ ಮೊದಲೇ ಮರಣ ಸಂಭವಿಸಿದ್ದರೆ) 
ಪಾಲಸಿ ಬಾಂಡ್ ಸಹಿತ, ಅವಶ್ಯವಿದ್ದ ಎಲ್ಲಾ ದಾಖಲೆಗಳನ್ನು ನೀಡಿದ್ದರೆ,
ಪರಮೋಚ್ಚ ನಂಬಿಕೆಯ ತತ್ವದ ಉಲ್ಲಂಘನೆಯಾಗಿರದಿದ್ದರೆ,
ಅಂತಹ ವಿಮಾ ಪರಿಹಾರ ಕೋರಿಕೆ , ಕ್ರಮ ಬದ್ಧ ವಿಮಾ ಪರಿಹಾರ ಕೋರಿಕೆಯೆನಿಸಿಕೊಳ್ಳುತ್ತದೆ.

Saturday, April 25, 2015

25 ಎಪ್ರೀಲ್ 2015

ಮರಣ ವಿಮಾ ಪರಿಹಾರದ ಹಣ (Death Claim payment) ವನ್ನು ಹೇಗೆ ಲೆಕ್ಕ ಮಾಡುತ್ತಾರೆ? 


ಸಾಂಪ್ರದಾಯಕ ಪಾಲಸಿಗಳಲ್ಲಿ, ಮರಣ ಸಮಯದಲ್ಲಿ ಪಾಲಸಿ ಚಾಲತಿ ಸ್ಥಿತಿಯಲ್ಲ್ಲಿದ್ದರೆ, ಪೂರ್ಣ ವಿಮಾ ಮೊತ್ತಕ್ಕೆ ಗಳಿಸಿದ ಬೋನಸ್ಸನ್ನು ಕೂಡಿಸಿ ಒಟ್ಟು ಹಣವನ್ನು ನೀಡುತ್ತಾರೆ. 
ಪಾಲಸಿ ಪೇಡ್-ಅಪ್ ಸ್ಥಿತಿಯಲ್ಲ್ಲಿದ್ದರೆ, ಒಟ್ಟು ಪೇಡ್‍ಅಪ್ ಬೆಲೆಯನ್ನು ನೀಡುತ್ತಾರೆ.
ಯುಲಿಪ್ ಪಾಲಸಿಗಳಲ್ಲಿ, ಸಾಮಾನ್ಯವಾಗಿ ನಿಧಿಯ ಮೌಲ್ಯ ಹಾಗೂ ವಿಮಾರಾಶಿಗಳಲ್ಲಿ ಯಾವದು ಅಧಿಕವಾಗಿರುತ್ತದೆಯೋ, ಅದನ್ನು ನೀಡುತ್ತಾರೆ. 
ಕೆಲವು ಯುಲಿಪ್ ಪಾಲಸಿಗಳಲ್ಲಿ, ನಿಧಿಯ ಮೌಲ್ಯ ಹಾಗೂ ವಿಮಾರಾಶಿಗಳೆರಡರ ಮೊತ್ತವನ್ನೂ ನೀಡುತ್ತಾರೆ. 

Friday, April 24, 2015

24 ಎಪ್ರೀಲ್ 2015

ಮೋಸಯುಕ್ತ ಮರಣ ವಿಮಾ ಪರಿಹಾರ (Fraudulent Claim)ವನ್ನು ಹೇಗೆ ಪಡೆಯಲು ಯತ್ನಿಸುವರು?

ಸತ್ಯವನ್ನು ಬಚ್ಚಿಡುವ ಮೂಲಕ ಇಲ್ಲವೇ ಖೊಟ್ಟಿ ಮಾಹಿತಿಯನ್ನು ನೀಡುವ ಮೂಲಕ ಮೋಸಯುಕ್ತ ಮರಣ ವಿಮಾ ಪರಿಹಾರ (Fraudulent Claim) ಪಡೆಯಲು ಯತ್ನಿಸುವರು.


Thursday, April 23, 2015

23 ಎಪ್ರೀಲ್ 2015

ಮೋಸಯುಕ್ತ ಮರಣ ವಿಮಾ ಪರಿಹಾರ (Fraudulent Claim) ಎಂದರೇನು? 

ಅನ್ಯಾಯ ಮಾರ್ಗದಿಂದ ಹಣ ಗಳಿಸುವದಕ್ಕೆ ವಿಮೆಯನ್ನು ದುರುಪಯೋಗ ಮಾಡಿಕೊಂಡು, ಪಡೆಯಬಯಸುವ ವಿಮಾ ಪರಿಹಾರಕ್ಕೆ ಮೋಸಯುಕ್ತ ಮರಣ ವಿಮಾ ಪರಿಹಾರ(Fraudulent Claim) ಎನ್ನುತ್ತಾರೆ.


Wednesday, April 22, 2015

22 ಎಪ್ರೀಲ್ 2015

ಯಾವ ಸಮಯದಲ್ಲಿ ನಿಧನನಾದರೆ ಮರಣ ವಿಮಾ ಪರಿಹಾರ (Death Claim) ದೊರೆಯುತ್ತದೆ? 

ಮರಣ ವಿಮಾ ಪರಿಹಾರ (Death Claim) ದ ಹಣವನ್ನು,
ಸಾಮಾನ್ಯವಾಗಿ ಪಾಲಸಿ ಅವಧಿಯೊಳಗೆ ಮರಣ ಸಂಭವಿಸಿದಾಗ ಮಾತ್ರ, ಮರಣ ವಿಮಾ ಪರಿಹಾರ ದೊರೆಯುತ್ತದೆ.
ಮ್ಯಾರೇಜ್ ಎಂಡೋಮೆಂಟನಂತಹ ಪಾಲಿಸಿಗಳಲ್ಲಿ, ಪಾಲಸಿ ಅವಧಿಯೊಳಗೆ ಮರಣ ಸಂಭವಿಸಿದಾಗ, ಮರಣ ವಿಮಾ ಪರಿಹಾರ ಹಣ ಕೂಡಲೇ ದೊರೆಯದೆ, ಅವಧಿ ಮುಗಿದ ನಂತರವೇ ದೊರೆಯುತ್ತದೆ.

Tuesday, April 21, 2015

21 ಎಪ್ರೀಲ್ 2015

ಮರಣ ವಿಮಾ ಪರಿಹಾರ (Death Claim payment)ವನ್ನು ಯಾರಿಗೆ ನೀಡುತ್ತಾರೆ?

ಮರಣ ವಿಮಾ ಪರಿಹಾರ (Death Claim payment) ವನ್ನು,
ಪಾಲಸಿಧಾರಕನಿಗೆ (ಆತ ವಿಮಾ ಜೀವಿಯಾಗಿರದಿದ್ದರೆ), ಅಥವಾ ಅಸೈನೀ (Asignee) ಗೆ (ಪಾಲಸಿಯನ್ನು ಅಸೈನ್ ಮಾಡಿದ್ದರೆ).
ಸಾಮಾನ್ಯವಾಗಿ ನಾಮಿನೀ (nominee)ಗೆ, [ನಾಮಿನೀಯು ವಯಸ್ಕನಾಗಿರದಿದ್ದರೆ, ಹಣವನ್ನು ಆತನ ಅಪಾೈಂಟೀ – (appointee) ಗೆ.]
ನಾಮಿನೀ ಇಲ್ಲದಾಗ, ಪಾಲಸಿಧಾರಕನ ಕಾನೂನಬದ್ಧ ವಾರಸುದಾರರಿಗೆ.


Monday, April 20, 2015

20 ಎಪ್ರೀಲ್ 2015

ಮರಣ ವಿಮಾ ಪರಿಹಾರ ಕೋರಿಕೆ (Death Claim) ಎಂದರೇನು?

ಪಾಲಸಿಯಲ್ಲಿಯ ವಿಮಾ ಜೀವಿ ಮರಣ ಹೊಂದಿದಾಗ, ಪಾಲಿಸಿಯಿಂದ ದೊರೆಯುವ ವಿಮಾ ಪರಿಹಾರಕ್ಕೆ ಸಲ್ಲಿಸುವ ಬೇಡಿಕೆಗೆ, ಮರಣ ವಿಮಾ ಪರಿಹಾರ ಕೋರಿಕೆ ಎನ್ನುತ್ತಾರೆ.

Sunday, April 19, 2015

19 ಎಪ್ರೀಲ್ 2015

ವರ್ಷಾಶನ ವಿಮಾ ಪರಿಹಾರ ಕೋರಿಕೆ(Annuity Claim) ಎಂದರೇನು?

 ಒಂದು ನಿಗದಿತ ದಿನಾಂಕಿನಿಂದ, ದೊರೆಯಲಿರುವ ಅಜೀವ ಪರ್ಯಂತ ವರ್ಷಾಶನಗಳ ಸೌಲಭ್ಯ ಪಡೆಯುವದಕ್ಕೆ, ಸಲ್ಲಿಸುವ ಕೋರಿಕೆಗೆ ವರ್ಷಾಶನ ವಿಮಾ ಪರಿಹಾರ ಕೋರಿಕೆ ಎಂದು ಕರೆಯುತ್ತಾರೆ. ವರ್ಷಾಶನಗಳನ್ನು, 1/3/6/12 ತಿಂಗಳ ಕಂತುಗಳಲ್ಲಿ ಪಡೆಯಬಹುದು.


Saturday, April 18, 2015

18 ಎಪ್ರೀಲ್ 2015

ವಿಮಾ ಪರಿಹಾರ ಕಂತುಗಳ ನಗದೀಕರಣ (Encashment of Claim installments)   ಎಂದರೇನು?

ಕೆಲವು ಸಲ ವಿಮಾ ಅವಧಿ ಮಗಿದ ನಂತರ ವಿಮಾ ಪರಿಹಾರವನ್ನು ಒಂದೇ ಕಂತಿನಲ್ಲಿ  ನೀಡದೇ  ಭವಿಷ್ಯದಲ್ಲಿ ಅನೇಕ ನಿಯಮಿತ ಕಂತುಗಳಲ್ಲಿ ಅದನ್ನು ನೀಡುವ ವ್ಯವಸ್ಥೆ ಇರುತ್ತದೆ. ಭವಿಷ್ಯದ ಇಂತಹ ವಿಮಾ ಪರಿಹಾರ ಕಂತುಗಳ ಹಣವನ್ನು ಇಂದೇ, ಒಂದೇ ಬಾರಿಗೆ, ನಗದು ರೂಪದಲ್ಲಿ ಪಡೆಯುವದಕ್ಕೆ, ವಿಮಾ ಪರಿಹಾರ ಕಂತುಗಳ ನಗದೀಕರಣ ಎನ್ನುತ್ತಾರೆ. 
ಭವಿಷ್ಯದಲ್ಲಿ ನೀಡುವ ವಿಮಾ ಪರಿಹಾರ ಕಂತುಗಳನ್ನು, ಸಾಕಷ್ಟು ಮುಂಚಿತವಾಗಿಯೇ ಪಡೆಯುವದರಿಂದ, ಬವಿಷ್ಯದ ವಿಮಾ ಪರಿಹಾರ ಕಂತುಗಳ ಒಟ್ಟು ಹಣದಿಂದ, ಸ್ವಲ್ಪ ಬಡ್ಡಿ ಹಣ ಕಳೆದು ಉಳಿದ ಹಣವನ್ನು ನೀಡುತ್ತಾರೆ.


Friday, April 17, 2015

17 ಎಪ್ರೀಲ್ 2015

ಪೇಡ್ ಅಪ್ ವಿಮಾ ಪರಿಹಾರ ಕೋರಿಕೆ (Paid Up Claim)  ಎಂದರೇನು?

ಪೂರ್ತಿ ಕಂತುಗಳನ್ನು ನೀಡದೇ, ಮಧ್ಯದಲ್ಲಿಯೇ ನಿಂತ ಪಾಲಸಿಯ ಅವಧಿ ಪೂರ್ತಿಗೊಂಡಾಗ, ಬದುಕಿ ಉಳಿದ ಪಾಲಸಿಧಾರಕನು ಪಡೆಯಬಯಸುವ, ಪಾಲಿಸಿ ಸೌಲಭ್ಯಗಳು. 



Thursday, April 16, 2015

16 ಎಪ್ರೀಲ್ 2015

ಜೀವಿತ ಸೌಲಭ್ಯ ವಿಮಾ ಪರಿಹಾರ ಕೋರಿಕೆ (Survival Benefit Claim)  ಎಂದರೇನು?

 ಮನೀ ಬ್ಯಾಕ್‍ನಂತಹ ಕೆಲವು ನಮೂನೆಯ ಪಾಲಿಸಿಗಳಲ್ಲಿ, ಎಲ್ಲಾ ಮೂಲ ವಿಮಾ ಮೊತ್ತವನ್ನು ಒಂದೇ ಬಾರಿ ಪಾಲಸಿ ಅವಧಿಯ ಕೊನೆಗೆ ನೀಡದೆ, ಅವಧಿಯ ವಿವಿಧ ಘಟ್ಟಗಳಲ್ಲಿ, ಭಾಗಗಳಲ್ಲಿ ನೀಡಲಾಗುತ್ತದೆ. ಪಾಲಸಿ ಅವಧಿಯ ಆಯಾ ಘಟ್ಟಗಳ ಕೊನೆಗೆ ಪಾಲಸಿಧಾರಕ ಜೀವಂತವಾಗಿದ್ದಾಗ, ಆ ಘಟ್ಟಗಳ ಕೊನೆಯಲ್ಲಿ ನೀಡಲಾಗುವ ವಿಮಾಮೊತ್ತದ ಭಾಗಗಳನ್ನು ಪಡೆಯಲು ವಿಮಾ ಕೋರಿಕೆದಾರನು ಸಲ್ಲಿಸುವ ಬೇಡಿಕೆಗೆ, ಜೀವಿತ ಸೌಲಭ್ಯ ವಿಮಾ ಪರಿಹಾರ ಕೋರಿಕೆ ಎಂದು ಕರೆಯುತ್ತಾರೆ.
 (ಉದಾಹರಣೆಗೆ, 15 ವರ್ಷದ ಮನೀ ಬ್ಯಾಕ್ ಪಾಲಿಸಿಯಲ್ಲಿ, ವಿಮಾ ಪರಿಹಾರವನ್ನು, 5, 10, 15 ವರ್ಷಗಳ ಕೊನೆಗೆ, 30%, 30%, 40% ಭಾಗಗಳಲ್ಲಿ, ನೀಡುತ್ತಾರೆ. ಅಲ್ಲದೇ ಗಳಿಕೆಯಾದ ಬೋನಸ್ಸನ್ನು ಪಾಲಸಿ ಅವಧಿಯ ಕೊನೆಗೆ ನೀಡುತ್ತಾರೆ.)


Wednesday, April 15, 2015

15 ಎಪ್ರೀಲ್ 2015

ಮುಂಗಡ (ಡಿಸ್‍ಕೌಂಟೆಡ್) ವಿಮಾ ಪರಿಹಾರ ಕೋರಿಕೆ (Discounted Claim)ಎಂದರೇನು?

ವಿಮಾ ಪಾಲಿಸಿಯ ಎಲ್ಲಾ ಕಂತುಗಳನ್ನು ನೀಡಿದ ಬಳಿಕ, ಪಾಲಸಿಯ ಅವಧಿಯ ಕೊನೆಯ ವರ್ಷದಲ್ಲಿ, ಆದರೆ ಅವಧಿ ಮುಗಿಯುವ ಮುಂಚೆಯೇ, ಬದುಕಿ ಉಳಿದ ಪಾಲಸಿಧಾರಕನು ಪಡೆಯಬಯಸುವ ಪಾಲಿಸಿ ಸೌಲಭ್ಯಗಳು. 

ಇಲ್ಲಿ ಪರಿಪಕ್ವ ವಿಮಾ ಪರಿಹಾರವನ್ನು ಅವಧಿಗೆ ಮುಂಚೆಯೇ, ಅಂದರೆ ಅವಧಿಯ ಕೊನೆಯ ವರ್ಷದಲ್ಲಿ ನೀಡಲು ಕೇಳುತ್ತಾರೆ. ಕೊನೆಯಲ್ಲಿ ನೀಡುವ ಹಣವನ್ನು ಸ್ವಲ್ಪ ಮುಂಚಿತವಾಗಿಯೇ ಪಡೆಯುವದರಿಂದ, ಪರಿಪಕ್ವ ವಿಮಾ ಪರಿಹಾರ ಹಣದಿಂದ ಸ್ವಲ್ಪ ಬಡ್ಡಿ ಹಣ ಕಳೆದು, ಉಳಿದ ಹಣವನ್ನು ನೀಡುತ್ತಾರೆ.


Tuesday, April 14, 2015

14 ಎಪ್ರೀಲ್ 2015

ವಾರ್ಷಿಕ ಬೋನಸ್  (yearly bonus) ಹಾಗೂ  ಅವಧಿಯ ಕೊನೆಯ ಬೋನಸ್  (Terminal bonus) ಗಳು ಗ್ರಾಹಕನಿಗೆ ಹೇಗೆ ಅನಕೂಲಕಾರಿಯಾಗಿವೆ.

 ವಾರ್ಷಿಕ ಬೋನಸ್  (yearly bonus) ಪಾಲಸಿಯನ್ನು ಪ್ರತಿ ವರ್ಷ ಮುಂದುವರೆಸಲು ಪ್ರೇರೇಪಿಸುತ್ತದೆ.  ಅವಧಿಯ ಕೊನೆಯ ಬೋನಸ್  (Terminal bonus) ಪಾಲಸಿಯನ್ನು ಕೊನೆಯ ವರೆಗೂ ಮುಂದುವರೆಸಲು ಪ್ರೇರೇಪಿಸುತ್ತದೆ.  


Monday, April 13, 2015

13 ಮೇ 2015

ಪರಿಪಕ್ವ ವಿಮಾ ಪರಿಹಾರ ಸಂದಾಯಕ್ಕೆ ಅಗತ್ಯವಿರುವ ದಾಖಲೆಪತ್ರಗಳು ಯಾವುವು?

ಪರಿಪಕ್ವ ವಿಮಾ ಪರಿಹಾರ ಸಂದಾಯಕ್ಕೆ ಅಗತ್ಯವಿರುವ ದಾಖಲೆಪತ್ರಗಳು :
ಮೂಲ ಪಾಲಸಿ ಬಾಂಡ್. (ಅದು ಕಳೆದು ಹೋಗಿದ್ದರೆ, ಇಂಡೆಮ್ನಿಟಿ ಬಾಂಡ್)
ಪಾಲಸಿಹಕ್ಕುದಾರನ ಹೇಳಿಕೆ ಪತ್ರ. 
ವಯಸ್ಸಿನ ದಾಖಲೆ, ( ಈಗಾಗಲೇ ವಯಸ್ಸು ಅಂಗೀಕೃತವಾಗಿರದಿದ್ದರೆ,)
ಪಾಲಸಿಹಕ್ಕುದಾರನಿಂದ ರುಜು ಮಾಡಿದ ಡಿಸ್‍ಚಾರ್ಜ ಫಾರ್ಮ.
ಕೊನೆಗೆ ನೀಡಲಾದ ವಿಮಾ ಕಂತಿನ ರಸೀದಿ.


Sunday, April 12, 2015

12 ಎಪ್ರೀಲ್ 2015

 ವಾರ್ಷಿಕ ಬೋನಸ್  (yearly bonus) ಎಂದರೇನು?

 ಲಾಭದಲ್ಲಿ ಭಾಗವಹಿಸುವ ಪಾಲಸಿಗಳಿಗೆ ಸಾಮಾನ್ಯವಾಗಿ ಪ್ರತಿ ವರ್ಷಕ್ಕೊಮ್ಮೆ ಬೋನಸ್ಸು ನೀಡಲಾಗುವದು. ಇದಕ್ಕೆ ವಾರ್ಷಿಕ ಬೋನಸ್ಸು (ಥಿeಚಿಡಿಟಥಿ boಟಿus) ಎಂದು ಕರೆಯಲಾಗುವದು.


Saturday, April 11, 2015

 11 ಎಪ್ರೀಲ್ 2015

   ವಿಮಾ ಕಂತುಗಳ ವಾಪಸಾತಿ  (Return of premium) ಎಂದರೇನು?

ಕೆಲವು ವಿಮಾ ಪಾಲಸಿಗಳಲ್ಲಿ ಪಾಲಸಿ ರಿಪಕ್ವವಾದಾಗ ಮೂಲ ವಿಮಾರಾಸಿಗೆ ಬದಲಾಗಿ, ಪಾಲಸಿಯಲ್ಲಿ ನೀಡಲಾದ ವಿಮಾಕಂತುಗನ್ನು ಕಂಪನಿಯು ಮರಳಿಸುತ್ತದೆ. ಅ0ದರೆ ಇಲ್ಲಿ ವಿಮಾ ಕಂತುಗಳ ವಾಪಸಾತಿ  
(return of premium) ಯೇ  ಪರಿಪಕ್ವ ವಿಮಾ ಸೌಲಭ್ಯವಾಗಿರುತ್ತದೆ.



Friday, April 10, 2015

10 ಎಪ್ರೀಲ್ 2015

ಪರಿಪಕ್ವ ವಿಮಾ ಪರಿಹಾರ ಕೋರಿಕೆಯ(Maturity Claim)ಲ್ಲಿ ಪಡೆಯಲಾಗುವ ಸೌಲಭ್ಯಗಳು ಯಾವುವು?

 ಪರಿಪಕ್ವ ವಿಮಾ ಪರಿಹಾರ ಕೋರಿಕೆಯಲ್ಲಿ ಪಡೆಯಲಾಗುವ ಸೌಲಭ್ಯಗಳು:-
ಮೂಲ ವಿಮಾ ರಾಶಿ + ಗಳಿಕೆಯಾದ ಬೋನಸ್ಸು. (ಬಹುತೇಕ ಪಾಲಿಸಿಗಳಲ್ಲಿ)
ಮೂಲ ವಿಮಾರಾಶಿ - ಜೀವಿತ ಸೌಲಭ್ಯಗಳು + ಗಳಿಕೆಯಾದ ಬೋನಸ್ಸು. (ಮನೀ ಬ್ಯಾಕ್ ಪಾಲಿಸಿಗಳಲ್ಲಿ)
ನೀಡಲಾದ ಎಲ್ಲಾ ಮೂಲ ವಿಮಾ ಕಂತುಗಳು + ಗಳಿಕೆಯಾದ ಬೋನಸ್ಸು (ಕೆಲವು ಪಾಲಸಿಗಳಲ್ಲಿ)

  

Thursday, April 9, 2015

9 ಎಪ್ರೀಲ್ 2015

ಪರಿಪಕ್ವ ವಿಮಾ ಪರಿಹಾರ ಕೋರಿಕೆ (Maturity Claim) ಎಂದರೇನು?

 ವಿಮಾ ಪಾಲಿಸಿಯ ಎಲ್ಲಾ ಕಂತುಗಳನ್ನು ನೀಡಿದ ಬಳಿಕ, ಪಾಲಿಸಿ ಅವಧಿ ಪೂರ್ತಿಗೊಂಡಾಗ, ಬದುಕಿ ಉಳಿದ ಪಾಲಸಿಧಾರಕನು ಪಡೆಯಬಹುದಾದ ಪಾಲಿಸಿ ಸೌಲಭ್ಯಗಳು. 



Wednesday, April 8, 2015

8 ಎಪ್ರೀಲ್ 2015

ವಿಮಾ ಪರಿಹಾರ ಕೋರಿಕೆ (Claim) ಯನ್ನು ಮುಖ್ಯವಾಗಿ, ಎಷ್ಟು ರೀತಿಗಳಲ್ಲಿ ವಿಂಗಡಿಸಬಹುದು?

 ವಿಮಾ ಪರಿಹಾರ ಕೋರಿಕೆಯನ್ನು ಮುಖ್ಯವಾಗಿ, ಕೆಳಗಿನ ರೀತಿಗಳಲ್ಲಿ ವಿಂಗಡಿಸಬಹುದು.
ಪರಿಪಕ್ವ ವಿಮಾ ಪರಿಹಾರ ಕೋರಿಕೆ, (Maturity Claim)
ಮರಣ ವಿಮಾ ಪರಿಹಾರ ಕೋರಿಕೆ, (Death Claim)
ಜೀವಿತ ಸೌಲಭ್ಯ ವಿಮಾ ಪರಿಹಾರ ಕೋರಿಕೆ, (Suಡಿvivಚಿಟ ಃeಟಿeಜಿiಣ ಅಟಚಿim)


Tuesday, April 7, 2015

7 ಎಪ್ರೀಲ್ 2015

 ವಿಮಾ ಪರಿಹಾರ ಸಂದಾಯ(Claim Settlement) ವೆಂದರೇನು?

ವಿಮಾ ಪಾಲಸಿಯ ಕರಾರಿನ ಪ್ರಕಾರ, ವಿಮಾ ಘಟನೆ ಜರುಗಿದಾಗ ವಿಮಾ ಸಂಸ್ಥೆ, ವಿಮಾಹಕ್ಕುದಾರನಿಗೆ ನೀಡಬೇಕಾದ ಪರಿಹಾರ ಹಣವನ್ನು, ಲೆಕ್ಕ ಮಾಡಿ ಪಾವತಿ ಮಾಡುವದಕ್ಕೆ ವಿಮಾ ಪರಿಹಾರ ಸಂದಾಯ ಎನ್ನುವರು.


Monday, April 6, 2015

6 ಎಪ್ರೀಲ್ 2015

100 ಪಾಲಸಿ ವಿಮಾ ಪರಿಹಾರ ಕೋರಿಕೆಗಳಲ್ಲಿ, 95 ಪಾಲಸಿಗಳಲ್ಲಿ ವಿಮಾ ಪರಿಹಾರ ಸಂದಾಯವಾಗಿದೆ.  5 ಪಾಲಿಸಿಗಳಲ್ಲಿ ಕ್ಲೇಮ್‍ಗಳನ್ನು ನಿರಾಕರಿಸಲಾಗಿದೆ. ಹಾಗಾದರೆ ಕ್ಲೇಮ್ ಪರಿಹಾರ ಸಂದಾಯದ ಅನುಪಾತ ಎಷ್ಟು?


 95%.


Sunday, April 5, 2015

5 ಎಪ್ರೀಲ್ 2015

ಪಾಲಿಸಿ ಖರೀದಿಸುವಾಗ ಗಣನೆಗೆ ತೆಗೆದು ಕೊಳ್ಳುವ ಸಂಗತಿಗಳು ಯಾವುವು?


ಪಾಲಿಸಿ ಖರೀದಿಸುವಾಗ ಗಣನೆಗೆ ತೆಗೆದು ಕೊಳ್ಳುವ ಸಂಗತಿಗಳು :-
ಸರಕಿನ ಬೆಲೆ,
ಸರಕಿನ ಲಕ್ಷಣ,
ಸಂಭವನೀಯ ಇಳುವರಿ,
ತೆರಿಗೆ ಸೌಲಭ್ಯ,
ಸೇವಾ ಮಟ್ಟ, 
ಪಾಲಸಿ ರಚನೆ, (ಅವಧಿ, ಕಂತು ವಿಧಾನ, ನಗದೀಕರಣ ಸೌಲಭ್ಯಗಳು, ಇತ್ಯಾದಿಗಳು.)

Saturday, April 4, 2015

4 ಎಪ್ರೀಲ್ 2015

ಗ್ರಾಹಕನ ಬವಿಷ್ಯ ಜೀವನದಲ್ಲಿ ಸಂಭವಿಸ ಬಹುದಾದ ಹೊಸ ಘಟನೆಗಳು ಯಾವುವು ? ಗ್ರಾಹಕನ ಜೊತೆ ದೀರ್ಘಾವಧಿ ಸಂಬಂಧ (Long Term Relationship)  ಗಳನ್ನು ಬೆಳೆಸಿದಾಗ, ಅವುಗಳು ಹೊಸ ಪಾಲಿಸಿಗಳ ಮಾರಾಟಕ್ಕೆ ಹೇಗೆ ಸಹಾಯಕಾರಿಯಾಗಬಹುದು?


ಗ್ರಾಹಕನ ಭವಿಷ್ಯ ಜೀವನದಲ್ಲಿ ಸಂಭವಿಸ ಬಹುದಾದ ಹೊಸ ಘಟನೆಗಳು ಮದುವೆ, ಮಗುವಿನ ಜನನ, ವೃತ್ತಿಯಲ್ಲಿ ಬದಲಾವಣೆ, ಹೊಸಮನೆಗೆ ಹೋಗುವದು. 
ಈ ಹೊಸ ಘಟನೆಗಳು ಕೆಳಗಿನ ಕಾರಣಗಳಿÀಗಾಗಿ ಹೊಸ ಪಾಲಿಸಿಗಳ ಮಾರಾಟಕ್ಕೆÉ ಸಹಾಯಕಾರಿಯಾಗಬಹುದು.
ಹೆಚ್ಚಿನ ವಿಮಾ ರಕ್ಷಣೆಗೆ ಅವಕಾಶ ಮಾಡಿಕೊಡಬಹುದು.
ಹೆಚ್ಚಿನ ಉಳಿತಾಯಗಳಿಗೆ ಅವಕಾಶ ಮಾಡಿಕೊಡಬಹುದು.
ಹೆಚ್ಚಿನ ಹೂಡಿಕೆಗಳಿಗೆ ಅವಕಾಶ ಮಾಡಿಕೊಡಬಹುದು.
ಹೂಡಿಕೆಯ ರೀತಿಗಳಲ್ಲಿ ಅವಕಾಶ ಮಾಡಿಕೊಡಬಹುದು.
  


Friday, April 3, 2015

3 ಎಪ್ರೀಲ್ 2015

ಗ್ರಾಹಕನ ಜೊತೆ ದೀರ್ಘಾವಧಿ ಸಂಬಂಧ (Long Term Relationship)  ಗಳನ್ನು ಏಕೆ ಬೆಳೆಸ ಬೇಕು?


ದೀರ್ಘಾವಧಿ ಸಂಬಂಧ (Long Term Relationship)  ಬೆಳೆಸುವದರಿಂದ, ಗ್ರಾಹಕನ ಸಮಸ್ಯಗಳಿಗೆ ಪರಿಹಾರ ದೊರಕಿಸುವ ಅವಕಾಶ ದೊರಕುತ್ತದೆ. ಹೊಸ ಪಾಲಿಸಗಳ ಮಾರಾಟಕ್ಕೆ ಸಂಪರ್ಕ ದೊರಕುತ್ತದೆ. ಸಂತೃಪ್ತ ಗಿರಾಕಿ ಹೊಸ ಗ್ರಾಹಕರಿಗೆ ಶಿಫಾರಿಸು ಮಾಡುತ್ತಾರೆ.
ಗ್ರಾಹಕರಿಗೆ ದೀರ್ಘಾವಧಿಯಲ್ಲಿ, ತೆರಿಗೆ, ಹೊಸ ಅವಶ್ಯಕತೆಗಳು, ಸೇವೆಗಳ ಸಂಬಂಧವಾಗಿ ನೆರವು ಬೇಕಾಗುತ್ತದೆ.
ದೀರ್ಘಾವಧಿ ಸಂಬಂಧದಿಂದ ಈ ನೆರವು ಗ್ರಾಹಕನಿಗೆ ಸುಲಭವಾಗಿ ದೊರಕುತ್ತದೆ.



Thursday, April 2, 2015

2 ಎಪ್ರೀಲ್ 2015

ಗ್ರಾಹಕನಿಗೆ ನೀಡಲಾದ ಭರವಸೆಗಳು ಈಡೇರದಿದ್ದಾಗ, ಅವನಿಗೆ ಮುಂದಿರುವ ದಾರಿ ಯಾವುದು?


ಪ್ರತಿಯೊಂದು ವಿಮಾಕಂಪನಿಯು, ಸೇವಾ ವಂಚಿತ ಪಾಲಸಿದಾರಕರ ದೂರುಗಳನ್ನು ಸ್ವೀಕರಿಸಲು, ಗ್ರಾಹಕರ ಅತೃಪ್ತಿಯನ್ನು ತೊಡೆದುಹಾಕಲು, ದೂರು ಸ್ವೀಕರಿಸುವ ವ್ಯವಸ್ಥೆಯನ್ನು ಏರ್ಪಡಿಸಿರುತ್ತದೆ. ಈ ಕೆಲಸವನ್ನು ಮಾಡುವ ವಿಭಾಗಕ್ಕೆ ದೂರು ನಿವಾರಣಾ ಘಟಕ (Complaint redressal cell) ವೆನ್ನುತ್ತಾರೆ. 
ಗ್ರಾಹಕನಿಗೆ ನೀಡಲಾದ ಭರವಸೆಗಳು ಈಡೇರದಿದ್ದಾಗ, ಅವನಿಗೆ ಮುಂದಿರುವ ದಾರಿಯೆಂದರೆ ದೂರು ನಿವಾರಣಾ ಘಟಕಕ್ಕೆ ದೂರು ಸಲ್ಲಿಸಿ, ದೂರಿಗೆ ಪರಿಹಾರ ಪಡೆಯುವದು. ದೂರು ನಿವಾರಣೆಯಾದರೆ ಗ್ರಾಹಕನ ಸಂತೃಪ್ತಿ ಬೆಳೆಯುತ್ತದೆ, ಸಂಸ್ಥೆಯ ಪ್ರಸಿದ್ಧಿ ಹೆಸರು (Brand Name) ವೃದ್ಧಿಯಾಗುತ್ತದೆ.



Wednesday, April 1, 2015

1 ಎಪ್ರೀಲ್ 2015

ಪಾಲಿಸಿ ಮುಂದುವರೆಸುವಿಕೆ (Persistency)  ಯ ವಿವಿಧ ಉಪಾಯಗಳು ಯಾವುವು?


ಪಾಲಿಸಿ ಮುಂದುವರೆಸುವಿಕೆ (Persistency) ಯ ವಿವಿಧ ಉಪಾಯಗಳು:-
ವಿಮಾ ಕಂತಿನ ಅವಧಿಯ/ನೀಡಿಕೆಯ ರೀತಿಯನ್ನು ಗ್ರಾಹಕನಿಗೆ ಹೊಂದಾಣಿಕೆಯಾಗುವ ರೀತಿಯಲ್ಲಿ ನೀಡುವದು. 
ಉದಾ : ವಿಮಾ ಕಂತನ್ನು ಅನಕೂಲಕ್ಕೆ ತಕ್ಕಂತೆ, 1/3/6/12 ತಿಂಗಳಿಗೊಮ್ಮೆ ನೀಡಲು ಅನುವು ಮಾಡಿಕೊಡುವದು. 
ವಿಮಾ ಕಂತನ್ನು ಅನಕೂಲಕ್ಕೆ ತಕ್ಕಂತೆ, ಚೆಕ್ಕು/ಕ್ಯಾಶ್/ಡಿ.ಡಿ./ಈ.ಸಿ.ಎಸ್./ಎಮ್.ಓ. ಗಳ ಮೂಲಕ ನೀಡಲು ಅನುವು ಮಾಡಿಕೊಡುವದು.
ವಿಮಾ ಕಂತು ನೀಡಿಕೆಗೆ, ಪದೇ ಪದೇ ನೆನಪಿಸುವದು. 
ಉದಾ : ವಾರ್ಷಿಕ/ಅರೆವಾರ್ಷಿಕ ಕಂತುಗಳಲ್ಲಿ ಎಷ್ಟೋ ಬಾರಿ, ವಿಮಾ ಕಂತಿನ ಬಾಕೀ ದಿನಾಂಕಗಳನ್ನೇ ಮರೆಯಬಹುದು. ಪತ್ರ/ಈ.ಮೇಲ್/ಮೊಬೈಲ್‍ಸಂದೇಶಗಳ ಮೂಲಕ ಗ್ರಾಹಕನ ವಿಮಾ ಕಂತು ನೀಡಿಕೆಗೆ, ಪದೇ ಪದೇ ನೆನಪಿಸಬಹುದು.
ಗ್ರಾಹಕನ ಜೊತೆ ಸಂಪರ್ಕದಲ್ಲಿರುವದು.
ಗ್ರಾಹಕನ ಸಂಪರ್ಕದಲ್ಲಿರುವದರಿಂದ: ಗ್ರಾಹÀಕನ ಜೊತೆ ಒಳ್ಳೆಯ ಸಂಬಂಧವನ್ನು ಬೆಳೆಸ ಬಹುದು. ಗ್ರಾಹÀಕನ ಸಮಸ್ಯೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಪಾಲಸಿ ಸೇವೆಯನ್ನು ಸರಾಗವಾಗಿ ಮಾಡಬಹುದು. ವಿಮಾಕಂತುಗಳನ್ನು ನೀಡಲು ನೆನಪಿಸಬಹುದು. ಹೊಸ ಪಾಲಸಿಗಳನ್ನು ಮಾರಬಹದು.
ಅಗತ್ಯ ಪಾಲಿಸಿ ಸೇವೆಗಳನ್ನು (Policy servicing) ನೀಡುವದು.
ಪಾಲಸಿ ಸೇವಾಕೊರತೆ, ಪಾಲಸಿ ನಿಲುಗಡೆಗೆ ಕಾರಣವಾಗಬಹುದು. ಅವಶ್ಯವೆನಿಸುವ ಪಾಲಸಿ ಸೇವೆಗಳು : ವಿಳಾಸ ಬದಲಾವಣೆ, ಪಾಲಿಸಿ ಸಾಲ ಕೋರಿಕೆ, ನಾಮೀನೇಶÀನ್/ಅಸೈನ್‍ಮೆಂಟ್ ಮಾಡಿಸುವದು ಅಥವಾ ಬದಲಾಯಿಸುವದು, ಪಾಲಿಸಿಗಳಲ್ಲಿ ಬೇಕೆನಿಸಿದ ಬದಲಾವಣೆಗಳನ್ನು ಕೈಕೊಳ್ಳುವದು, ಇತ್ಯಾದಿ, ಇತ್ಯಾದಿ.