Sunday, November 30, 2014

30 ನವ್ಹಂಬರ್ 2014

 ವರ್ಷಾಶನ (Annuity)  ದ ಪ್ರಕಾರಗಳು ಯಾವುವು?

ವರ್ಷಾಶನದ ಪ್ರಕಾರಗಳು ಕೆಳಗಿನಂತಿವೆ.

1) ಕೂಡಲೇ ಪ್ರಾರಂಭವಾಗುವ ವರ್ಷಾಶನಗಳು (Immediate Annuity). ಈ ರೀತಿಯ ವರ್ಷಾಶನ ಪಾಲಿಸಿಗಳನ್ನು ಒಂದು ದೊಡ್ಡ ಮೊತ್ತದ ಹಣದಿಂದ ಖರೀದಿಸಿ, ತದ ನಂತರ ಕೂಡಲೇ ಆಜೀವ ಪರ್ಯಂತ ಚಿಕ್ಕ ಮೊತ್ತದ ವರ್ಷಾಶನಗಳನ್ನು ಪಡೆಯುವರು.

2) ಮುಂದೂಡಿದ ವರ್ಷಾಶನಗಳು (Deferred Annuity). ಈ ರೀತಿಯ ವರ್ಷಾಶನ ಪಾಲಿಸಿಗಳಲ್ಲಿ, ಆಜೀವ ಪರ್ಯಂತ ಚಿಕ್ಕ ಮೊತ್ತದ ವರ್ಷಾಶನಗಳನ್ನು ಕೂಡಲೇ ಪಡೆಯದೇ. ಒಂದು ನಿರ್ಧಿಷ್ಠ ಅವಧಿ ಮಗಿದ ನಂತರ ವರ್ಷಾಶನಗಳನ್ನು ಪಡೆಯಲು ಪ್ರಾರಂಭಿಸುವರು. ಈ ನಿರ್ಧಿಷ್ಠ ಅವಧಿಗೆ ಮುಂದೂಡಿದ ಅವಧಿ (Deferment Period) ಎಂದು ಕರೆಯುವರು. ವರ್ಷಾಶನ ಸೌಲಭ್ಯಗಳ ಖರೀದಿ ಬೆಲೆ (Purchase Price) ಯನ್ನು ಪಾಲಿಸಿಯನ್ನು ಕೊಳ್ಳುವ ಸಮಯದಲ್ಲಿ ಒಂದೇ ಕಂತಿನಲ್ಲಿ, ಅಥವಾ ಮುಂದೂಡಿದ ಅವಧಿ (Deferment Period )ಯಲ್ಲಿ, 1/3/6/12 ತಿಂಗಳ ಅವಧಿಗಳ ಕಂತುಗಳಲ್ಲಿ ನೀಡಬಹುದು.
ಮುಂದೂಡಿದ ಅವಧಿ (Deferment Period )ಯಲ್ಲಿ ಪಾಲಸಿಧಾರಕ ನಿಧನನಾದರೆ, ಅವನ ವಾರಸುದಾರನು ಕಂತುಗಳನ್ನು ಬಡ್ಡಿ ಸಹಿತ ವಾಪಸು ಪಡೆಯಬಹದು, ಅಥವಾ ಆ ಹಣಕ್ಕೆ ಸರಿಯಾಗಿ ವರ್ಷಾಶನವನ್ನು ಆಯ್ಕೆ ಮಾಡಿಕೊಳ್ಳಬಹುದು. ಮುಂದೂಡಿದ ಅವಧಿಗೆ, ಮೂಲ ಪಾಲಿಸಿಯ ಜೊತೆಗೆ, ವಿವಿಧ ಹೆಚ್ಚುವರಿ ವಿಮಾ ಸೌಲಭ್ಯ(Riders) ಗಳನ್ನು ಖರೀದಿಸಬಹುದು.

Saturday, November 29, 2014

29 ನವ್ಹಂಬರ್ 2014

 ವರ್ಷಾಶನ (Annuity)  ವೆಂದರೇನು?

ಜೀವ ವಿಮೆ ಪಾಲಿಸಿಗಳಲ್ಲಿ ಹಂತ ಹಂತವಾಗಿ ಚಿಕ್ಕ ಕಂತುಗಳನ್ನು ನೀಡಿ, ನಿಗದಿತ ಅವಧಿಯ ಕೊನೆಗೊಮ್ಮೆ ದೊಡ್ಡ ವಿಮಾರಾಶಿಯನ್ನು ಪಡೆಯುವರು. ಇದಕ್ಕೆ ವ್ಯತಿರಿಕ್ತವಾಗಿ ವರ್ಷಾಶನ (ಂಟಿಟಿuiಣಥಿ)   ಪಾಲಿಸಿಗಳಲ್ಲಿ ದೊಡ್ಡ ಮೊತ್ತದ ಒಂದು ಕಂತುನ್ನು ನೀಡಿ, ತದ ನಂತರ ಆಜೀವ ಪರ್ಯಂತ ಚಿಕ್ಕ ಮೊತ್ತದ ಆದಾಯದ ಕಂತುಗಳನ್ನು ವಾಪಸು ಪಡೆಯುವರು.


Friday, November 28, 2014

28 ನವ್ಹಂಬರ್ 2014

ಹೆಚ್ಚುವರಿ ವಿಮಾ ಸೌಲಭ್ಯ (Rider) ಗಳ ಮೇಲೆ ಆಯ್.ಆರ್.ಡಿ.ಎ, ವಿಧಿಸಿದ ನಿರ್ಬಂಧಗಳು ಯಾವುವು?


ಹೆಚ್ಚುವರಿ ವಿಮಾ ಸೌಲಭ್ಯಗಳ ಮೇಲೆ ಆಯ್.ಆರ್.ಡಿ.ಎ, ರಚಿಸಿದ ನಿಯಮಾವಳಿಗಳು :
ಆರೋಗ್ಯ ಅಥವಾ ಗಂಭೀರ ಕಾಯಿಲೆಗಳಿಗೆ  ಸಂಬಂಧೀಸಿದ ಎಲ್ಲಾ ಹೆಚ್ಚುವರಿ ವಿಮಾ ಸೌಲಭ್ಯ (Health/ Critical Illness Rider) ಗಳ  ಒಟ್ಟಾರೆ ಕಂತುಗಳ ಮೊತ್ತ ಅವಧಿ ವಿಮೆ  ಅಥವಾ ಗುಂಪು ವಿಮೆಯ ( Term/Group Insurance)  ಕಂತಿನ ಮೊತ್ತವನ್ನು ಮೀರ ಕೂಡದು.
ಉಳಿದೆಲ್ಲಾ ಹೆಚ್ಚುವರಿ ವಿಮಾ ಸೌಲಭ್ಯಗಳ  ಒಟ್ಟಾರೆ ಕಂತುಗಳ ಮೊತ್ತ ಮೂಲ ವಿಮಾ ಕಂತಿನ 30% ಮೊತ್ತವನ್ನು ಮೀರ ಕೂಡದು.
ಪ್ರತಿಯೊಂದು ಹೆಚ್ಚುವರಿ ವಿಮಾ ಸೌಲಭ್ಯಗಳ ವಿಮಾ ರಾಶಿ (Sum ಂssuಡಿeಜ), ಮೂಲ ಪಾಲಿಸಿಯ ವಿಮಾ ರಾಶಿ (Sum Assured) ಯನ್ನು ಮೀರ ಕೂಡದು.  
 ಆಯ್.ಆರ್.ಡಿ.ಎ, ರಚಿಸಿದ ಈ ನಿಯಮಾವಳಿಗಳು ಭವಿಷ್ಯದಲ್ಲಿ ಬದಲಾಗ ಬಹುದಾದ ಸಾಧ್ಯತೆಯೂ ಇದೆ.


Thursday, November 27, 2014

27 ನವ್ಹಂಬರ್ 2014

ಹೆಚ್ಚುವರಿ ವಿಮಾ ಸೌಲಭ್ಯ (Rider) ಗಳ ಲಕ್ಷಣಗಳು ಯಾವುವು?


 ಹೆಚ್ಚುವರಿ ವಿಮಾ ಸೌಲಭ್ಯಗಳ ಲಕ್ಷಣಗಳು ಕೆಳಗಿನಂತಿವೆ.
ಇದನ್ನು ಸ್ವತಂತ್ರವಾಗಿ ಮಾರಲಾಗದು. ಮೂಲ ಸರಕಿನೊಂದಿಗೆ ಹೆಚ್ಚುವರಿಯಾಗಿಯೇ ಮಾರುವದು.
ಇದರ ದರ ತುಂಬಾ ಅಗ್ಗವಾಗಿರುತ್ತದೆ.
ಅನಕೂಲಕ್ಕೆ ತಕ್ಕಂತೆ ಹೊಂದಾಣಿಕೆಗೆ ಅನಕೂಲವಾಗುವ ಸೌಲಭ್ಯಗಳು.
ಯಾವಾಗ ಬೇಕಾದರೂ ನಿಲ್ಲಿಸಬಹುದಾದ ಸೌಲಭ್ಯಗಳು.
ಕರ ರಿಯಾಯತಿಗಳಿಗೆ ಅರ್ಹವಾಗುವ ಸೌಲಭ್ಯಗಳು.


Wednesday, November 26, 2014

26  ನವ್ಹಂಬರ್ 2014

ಎಷ್ಟು ಬಗೆಯ ಹೆಚ್ಚುವರಿ ವಿಮಾ ಸೌಲಭ್ಯ ( Insurance Rider Benefits ) ಗಳಿವೆ?


1) ಅಪಘಾತ ಮರಣ ಹೆಚ್ಚುವರಿ ವಿಮಾ ಸೌಲಭ್ಯ ( Accidental Death  Benefit Rider ): ಅಪಘಾತದಿಂದ ಮರಣ ಸಂಭವಿಸಿದರೆ, ಸಾಮಾನ್ಯ ಮರಣ ವಿಮಾ ಪರಿಹಾರದ ಜೊತೆಗೆ, ಅಪಘಾತ ಮರಣ ಹೆಚ್ಚುವರಿ ವಿಮಾ ಪರಿಹಾರವನ್ನೂ ಹೆಚ್ಚಿಗೆ ನೀಡಲಾಗುವದು.

2) ಸಹಜ ಮರಣ ಹೆಚ್ಚುವರಿ ವಿಮಾ ಸೌಲಭ್ಯ ( Term Insurance  Benefit Rider )   : ಮರಣ ಸಂಭವಿಸಿದರೆ, ಸಾಮಾನ್ಯ ಮರಣ ವಿಮಾ ಪರಿಹಾರದ ಜೊತೆಗೆ, ಸಹಜ ಮರಣ ಹೆಚ್ಚುವರಿ ವಿಮಾ ಪರಿಹಾರವನ್ನೂ ಹೆಚ್ಚಿಗೆ ನೀಡಲಾಗುವದು.

3) ಗಂಭೀರ ಕಾಯಿಲೆ ಹೆಚ್ಚುವರಿ ವಿಮಾ ಸೌಲಭ್ಯ  ( Critical Illness  Benefit Rider ): ಪೂರ್ವ ನಿರ್ಧಾರಿತ ಗಂಭೀರ ಕಾಯಿಲೆಗೆ ತುತ್ತಾದಾಗ, ಅಪಘಾತ ಮರಣ ಹೆಚ್ಚುವರಿ ವಿಮಾ ಪರಿಹಾರವನ್ನು ಪ್ರತ್ಯೇಕವಾಗಿ ನೀಡಲಾಗುವದು.

4) ಕಂತು ವಿನಾಯತಿ ಹೆಚ್ಚುವರಿ ವಿಮಾ ಸೌಲಭ್ಯ ( Premium Waiver Benefit Rider )  :  :    
1)ಅಪಘಾತದಿಂದ ವಿಮಾ ಕೋರಿಕೆದಾರ ಸಂಪೂರ್ಣ ಅಂಗವಿಕಲತೆಯನ್ನು ಪಡೆದಾಗ, ಪಾಲಸಿಯಲ್ಲಿ ತದ ನಂತರ ಬಾಕಿಯಾಗುವ ವಿಮಾ ಕಂತುಗಳ ನೀಡಿಕೆಗೆ, ವಿನಾಯತಿ ಸೌಲಭ್ಯವನ್ನು ನೀಡುವರು.

2)ಮಕ್ಕಳ ಪಾಲಸಿಯಲ್ಲಿ, ಮಕ್ಕಳು ಪಾಲಸಿಯ ಮಾಲಿಕತ್ವವನ್ನು ಪಡೆಯುವ ಮುಂZ,É ವಿಮಾಕೋರಿಕೆದಾರ ನಿಧನನಾದರೆ, ಅಲ್ಲಿಂದ ಮಕ್ಕಳು ಪಾಲಸಿಯ ಮಾಲಿಕತ್ವವನ್ನು ಪಡೆಯುವವರೆಗಿನ ಅವಧಿಯಲ್ಲಿ, ಬಾಕಿಯಾಗುವ ವಿಮಾ ಕಂತುಗಳ ನೀಡಿಕೆಗೆ, ವಿನಾಯತಿ ಸೌಲಭ್ಯವನ್ನು ನೀಡುವರು.

5) ಶಸ್ತ್ರ ಚಿಕಿತ್ಸಾ ಕಾಳಜಿ ಹೆಚ್ಚುವರಿ ವಿಮಾ ಸೌಲಭ್ಯ( Surgical Care  Benefit Rider ): ವಿಮಾರಕ್ಷಿತನಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಪ್ರಸಂಗ ಒದಗಿದರೆ, ಶಸ್ತ್ರ ಚಿಕಿತ್ಸಾವೆಚ್ಚವನ್ನು ಭರಿಸಲು ನಿಗದಿತ ಮೊತ್ತವನ್ನು ನೀಡಲಾಗುವದು. 

6) ಆಸ್ಪತ್ರೆ ಚಿಕಿತ್ಸಾ ಕಾಳಜಿ ಹೆಚ್ಚುವರಿ ವಿಮಾ ಸೌಲಭ್ಯ (Hospitalisation Care  Benefit Rider ) : ವಿಮಾರಕ್ಷಿತನಿಗೆ ಆಸ್ಪತ್ರೆಗೆ ಸೇರುವ ಪ್ರಸಂಗ ಒದಗಿದರೆ, ಆಸ್ಪತ್ರೆ ಚಿಕಿತ್ಸಾವೆಚ್ಚವನ್ನು ಭರಿಸಲು ನಿಗದಿತ ಮೊತ್ತವನ್ನು ನೀಡಲಾಗುವದು.

7) ಖಾತರಿ ವಿಮೆಯ ಅರ್ಹತಾ ಹೆಚ್ಚುವರಿ ವಿಮಾ ಸೌಲಭ್ಯ  (Guaranteed Insuribility Option  Benefit Rider) :ನಿರ್ಧಿಷ್ಠ ಘಟನೆಗಳು ಜರುಗಿದಾಗ, ಪಾಲಸಿಧಾರಕನು ನಿರ್ಧಿಷ್ಠ ಮೊತ್ತದ ಹೆಚ್ಚುವರಿ ವಿಮೆಯನ್ನು ಖರೀದಿಸಲು ಅರ್ಹತೆ ಪಡೆಯುತ್ತಾನೆ.


Tuesday, November 25, 2014

25 ನವ್ಹಂಬರ್ 2014

 ಆರೋಗ್ಯ ವಿಮಾ ಸೌಲಭ್ಯ ಯೋಜನೆಗಳ ಲಕ್ಷಣಗಳು,ಶರ್ಯತ್ತುಗಳು ಯಾವುವು?
ಆರೋಗ್ಯ ವಿಮಾ ಸೌಲಭ್ಯ ಯೋಜನೆಗಳ ವಿಶೇಷತೆಗಳು,

1)ಬೆಲೆ-(Price) : ವಯಸ್ಸು, ವ್ಯಕ್ತಿಗತ ಆರೋಗ್ಯ ಸ್ಥಿತಿ, ಹವ್ಯಾಸ, ಕೌಟುಂಬಿಕ ಆರೋಗ್ಯ ಹಿನ್ನೆಲೆ, ಮುಂತಾದವುಗಳ ಮೇಲೆ ಅವಲಂಬಿತವಾಗಿರುತ್ತವೆ. ವಯಸ್ಸು ಹೆಚ್ಚಾದಂತೆ ಕಂತಿನ ಬೆಲೆ ಹೆಚ್ಚಾಗುತ್ತದೆ.

2)ನಗದು ರಹಿತ ಸೌಲಭ್ಯ (Cashless Facility): ಆರೋಗ್ಯ ವಿಮಾ ಪಾಲಸಿಧಾರಕ, ನಿಗದಿತ ಆಸ್ಪತ್ರಗಳಲ್ಲಿ ಚಿಕಿತ್ಸೆ ಪಡೆದರೆ ಹಣ ಪಡೆಯದೇ ಚಿಕಿತ್ಸೆ ಪಡೆಯಬಹುದು.

3)ಆರೋಗ್ಯ ಪರೀಕ್ಷೆ (Medical Examination) ಯ ನಂತರವೇ ವಿಮಾಸೌಲಭ್ಯ ಪ್ರಾಪ್ತಿ.

4)ಈ ಹಿಂದೆ ಅನುಭವಿಸಿದ ಕಾಯಿಲೆ (Pre existing disease) ಗಳಿಗೆ ವಿಮಾರಕ್ಷಣೆ ಇಲ್ಲಾ. ಕೊನೇ ಪಕ್ಷ ಕೆಲವು ಅವಧಿಯವರೆಗಾದರೂ ರಕ್ಷಣೆ ಇಲ್ಲಾ.

5)ಪರಿಹಾರ ಕೋರಿಕೆ ಸಲ್ಲಿಸದೇ ಇರುವವರಿ(Immediate Care) ಗೆ ಬೋನಸ್ಸು  No Claim Bonus)  ನೀಡಲಾಗುವದು. ಮುಂದಿನ ಕಂತುಗಳನ್ನು ನೀಡುವಾಗ ಅದನ್ನು ನೀಡುವರು.

6)ಶಾಶ್ವತವಾಗಿ ಕೆಲವು ಕಾರಣ (Permanent Exclusions) : ಗಳಿಗೆ ವಿಮಾ ರಕ್ಷೆ ಇಲ್ಲಾ.

7)ವಿಮಾ ಪಾಲಿಸಿ ನೀಡಿದ ತಕ್ಷಣ ರಕ್ಷಣೆ (Immediate Care) : ಪ್ರಾರಂಭವಾಗುತ್ತದೆ.


8) ಉಳಿತಾಯ/ಸಾಲದಿಂದ ದೊಡ್ಡಮೊತ್ತದ ಹಣ ತೆಗೆಯುವ ಅವಶ್ಯಕತೆಯಿಲ್ಲ ( No need for lump sum from Savings or Loans).

Monday, November 24, 2014

24  ನವ್ಹಂಬರ್ 2014

ಆರೋಗ್ಯ ವಿಮಾ ಸೌಲಭ್ಯ ಯೋಜನೆ (Health insurance  Benefit Plan)ಗಳ ವಿಶೇಷತೆಗಳು ಯಾವುವು?


ಆರೋಗ್ಯ ವಿಮಾ ಸೌಲಭ್ಯ ಯೋಜನೆ (Health insurance  Benefit Plan)ಗಳ ವಿಶೇಷತೆಗಳು,

1)ಆರೋಗ್ಯ ವಿಮೆ ಕಂತಿನ ಬೆಲೆ (Pricing of Health Insurance): ಬೆಲೆಯ ನಿರ್ಧಾರ, ಆರೋಗ್ಯದ ಸ್ಥಿರತೆ, ಚಟಗಳು,ಹಾಗೂ ಪರಿವಾರದ ಆರೊಗ್ಯದ ಇತಿಹಾಸದ ಮೇಲೆ ಜರುಗುತ್ತದೆ.
ವ್ಯಕ್ತಿಯ ವಯಸ್ಸು ಚಿಕ್ಕದಿದ್ದಾಗ, ಆರೋಗ್ಯದ ಸ್ಥಿತಿ ಚೆನ್ನಾಗಿದ್ದಾಗ, ಆರೋಗ್ಯ ವಿಮೆ ಪಾಲಿಸಿ ಸುಲಭವಾಗಿ ಕಡಿಮೆ ದರದಲ್ಲಿ ಸಿಗುತ್ತದೆ. ವ್ಯಕ್ತಿಯ ವಯಸ್ಸು ದೊಡ್ಡದಾದಾಗ,, ಆರೋಗ್ಯದ ಸ್ಥಿತಿ ಚೆನ್ನಾಗಿರದಾಗ, ಆರೋಗ್ಯ ವಿಮೆ ಪಾಲಿಸಿ ಸುಲಭವಾಗಿ ಸಿಗುವದಿಲ್ಲಾ. ಸಿಕ್ಕರೂ ಹೆಚ್ಚಿನ ದರದಲ್ಲಿ ಸಿಗುತ್ತದೆ. ಹೀಗಾಗಿ ಚಿಕ್ಕ ವಯಸ್ಸಿಗೇ ಆರೋಗ್ಯ ವಿಮೆ ಪಾಲಿಸಿ ಖರೀದಿಸುವದು ಜಾಣತನದ ಲಕ್ಷಣವಾಗಿರುತ್ತದೆ.

2)ನಗದು ರಹಿತ ಸೌಲಭ್ಯ (Cashless facility) : ಆರೋಗ್ಯ ವಿಮಾ ಪಾಲಸಿಧಾರಕ, ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡ ಆಸ್ಪತ್ರಗಳ ಸಮೂಹದಲ್ಲಿ ಚಿಕಿತ್ಸೆ ಪಡೆದಾಗ ನಗದು ಹಣ ನೀಡಬೇಕಾಗಿಲ್ಲಾ. ಚಿಕಿತ್ಸೆಯ ನಂತರ, ಚಿಕಿತ್ಸಾ ವೆಚ್ಚವನ್ನು, ಕಂಪನಿಯು ನೇರವಾಗಿ ಈ ಆಸ್ಪತ್ರೆಗೆ ತಲುಪಿಸುತ್ತದೆ.

3) ಆರೋಗ್ಯ ಪರೀಕ್ಷೆ (Medical Examination): ಆರೋಗ್ಯ ವಿಮಾ ಪಾಲಸಿ ಖರೀದಿಸುವ ಮುನ್ನ, ಗ್ರಾಹಕನ ಆರೋಗ್ಯ ಸ್ಥಿತಿಯನ್ನರಿಯಲು, ಆತನ ಆರೋಗ್ಯ ಪರೀಕ್ಷೆಯನ್ನು ವಿಮಾ ಕಂಪನಿಯು ಬಯಸುತ್ತದೆ.

4) ಹಿಂದೆ ಅನುಭವಿಸಿದ ಕಾಯಿಲೆಗಳು (Pre existing illness) : ಗ್ರಾಹಕನು ಈ ಹಿಂದೆ ಅನುಭವಿಸಿದ ಕಾಯಿಲೆಗಳಿಗೆ, ಪಾಲಿಸಿ ನೀಡಿದ ಕೂಡಲೇ, ಕಂಪನಿಯು ವಿಮಾ ರಕ್ಷಣೆಯನ್ನು ಅನುಗ್ರಹಿಸುವದಿಲ್ಲಾ. ಸಂದರ್ಭಕ್ಕೆ  ಅನುಸಾರವಾಗಿ, ಈ ಕಾಯಿಲೆಗಳನ್ನು ರಕ್ಷಣೆಯ ವ್ಯಾಪ್ತಿಯಿಂದ ಸದಾಕಾಲ ಇಲ್ಲವೆ ಕೆಲವು ಸಮಯ, ಹೊರಗಿಡಬಹುದು. ಎಷ್ಟು ಅವಧಿಯ ವರೆಗೆ ರಕ್ಷಣೆಯನ್ನು ಹೊರಗಿಡುತ್ತಾರೋ, ಆ ಅವಧಿಗೆ ನಿರೀಕ್ಷಣಾ ಅಥವಾ ಕಾಯುವ ಅವಧಿ (Wಚಿiಣiಟಿg Peಡಿioಜ ) ಎನ್ನುತ್ತಾರೆ.

5) ಪರಿಹಾರ ಕೇಳದ್ದಕ್ಕೆ ಬೋನಸ್ (No Claim Bonus): ವಿಮೆಯಲ್ಲಿ ಗ್ರಾಹಕರು ನೀಡುವ ಕಂತಿನ ಹಣ, ಅವರು ಪಡೆಯುವ ಪರಿಹಾರದ ಹಣಕ್ಕಿಂತ , ತೀರ ಚಿಕ್ಕದ್ದಾಗಿರುತ್ತದೆ. ಹೀಗಾಗಿ ಪರಿಹಾರ ಪಡೆದವರಿಗೆ ಪಾಲಸಿ ಮುಂದುವರೆಸುವಲ್ಲಿ ಯಾವ ಸಂಕೋಚ, ಅನಾಸಕ್ತಿ ಉಂಟಾಗುವದಿಲ್ಲಾ.
ಪರಿಹಾರ ಪಡೆಯದ ಗ್ರಾಹಕರಿಗೆ ಕೆಲವು ಬಾರಿ, ತಾವು ಹಿಂದೆ ‘ವ್ಯರ್ಥವಾಗಿ ವಿಮಾ ಕಂತು ನೀಡಿದೆವು’, ಅನ್ನುವ ಭಾವನೆ ಬರುವದು ಸುಲಭ. ಅವರು ಪಾಲಸಿಯನ್ನು ಮುಂದುವರೆಸಲು ಕೆಲವು ವೇಳೆ ಹಿಂದೇಟು ಹಾಕಬಹುದು. ಪರಿಹಾರ ಪಡೆಯದ ಇಂತಹ ಗ್ರಾಹಕರಿಗೆ ಪಾಲಿಸಿಯನ್ನು ಮುಂದುವರೆಸಲು, ಪ್ರೋತ್ಸಾಹ ನೀಡುವ ಸಲುವಾಗಿ ಕಂಪನಿಯು ಅವರಿಗೆ ಬೋನಸ್ ನೀಡುವದು. ಇದಕ್ಕೆ ಪರಿಹಾರ ಕೇಳದ್ದಕ್ಕೆ ನೀಡಲಾಗುವ ಬೋನಸ್ ಎಂದು ಕರೆಯ ಬಹುದು. ಇವರು ಮುಂದುವರೆಸುವ ವಿಮಾಕಂತನ್ನು ನೀಡುವಾಗ, ಆ ವಿಮಾಕಂತಿನಲ್ಲಿ ಈ ಬೋನಸ್ಸಿನ ಹಣವನ್ನು ಕಡಿಮೆ ಮಾಡಲಾಗುವದು.

6)ಶಾಶ್ವತವಾಗಿ ಅನ್ವಯವಾಗದ ಕೆಲವು ಕಾರಣಗಳು (Permanent Exclusions): ಮಾದಕ ದೃವ್ಯ ಸೇವನೆ, ವೈದ್ಯರ ಸಲಹೆಯನ್ನು ದಿಃಖರಿಸುವದು, ಇತ್ಯಾದಿ ಕಾರಣಗಳು, ವಿಮಾ ಪರಿಹಾರವನ್ನು ವಿಮೆಯ ವ್ಯಾಪ್ತಿಯಿಂದ ಶಾಶ್ವತವಾಗಿ ಹೊರಗೆ ಇಡುತ್ತವೆ.

7)ತತ್‍ಕ್ಷಣದಿಂದ ರಕ್ಷಣೆ ಪ್ರಾರಂಭ (Immediate Care ): ವಿಮಾ ಪಾಲಿಸಿಯ ಪ್ರಥಮ ಕಂತಿನ ರಸೀದಿ ನೀಡಿದ ತಕ್ಷಣದಿಂದಲೇ ವಿಮಾ ರಕ್ಷಣೆಯ ಕಾರ್ಯ ಪ್ರಾರಂಭವಗುತ್ತದೆ.

8)ಉಳಿತಾಯ/ಸಾಲದಿಂದ ದೊಡ್ಡಮೊತ್ತದ ಹಣದ ಅವಶ್ಯಕತೆಯಿಲ್ಲ (No need for Lump Sum from Savings or Loans) : ಈ ಪಾಲಸಿಯನ್ನು ತೆಗೆದುಕೊಂಡರೆ, ಅನಾರೋಗ್ಯ, ಗಂಭೀರ ಕಾಯಿಲೆಗಳನ್ನು ಎದುರಿಸುವ ಸಲುವಾಗಿ, ದೊಡ್ಡ ಮೊತ್ತದ ಹಣವನ್ನು ಪ್ರತ್ಯೇಕವಾಗಿ ತೆಗೆದಿಡುವ ಪ್ರಸಂಗ ತಪ್ಪುತ್ತದೆ, ಆಥವಾ ಇಂತಹ ಘಟನೆಗಳು ಸಂಭವಿಸಿದಾಗ ದೊಡ್ಡ ಮೊತ್ತದ ಸಾಲವನ್ನು ಮಾಡುವ ಪ್ರಸಂಗ ತಪ್ಪುತ್ತದೆ.


Sunday, November 23, 2014

23 ನವ್ಹಂಬರ್ 2014

ದೈನಂದಿನ ಆಸ್ಪತ್ರೆ ನಗದು ಸೌಲಭ್ಯ ಯೋಜನೆಯ (Daily Hospitalisation Cash Benefit   Plan) ವಿಶೇಷತೆಗಳು ಯಾವುವು?

ದೈನಂದಿನ ಆಸ್ಪತ್ರೆ ನಗದು ಸೌಲಭ್ಯ ಯೋಜನೆಯ ವಿಶೇಷತೆಗಳು, ಆಸ್ಪತ್ರಗೆ ದಾಖಲಾದರೆ,
ಪೂರ್ವ ನಿಗದಿತ ದರದಲ್ಲಿ ದೈನಂದಿನ ವೆಚ್ಚಕ್ಕೆ ಪರಿಹಾರ.
ದೈನಂದಿನ ನಿಜವಾದ ವೆಚ್ಚ ಎಷ್ಟೇ ಆದರೂ, ಪರಿಹಾರ ನೀಡಿಕೆ ಪೂರ್ವ ನಿಗದಿತ ದರದಲ್ಲಿಯೇ.
ತುರ್ತು ನಿಗಾ ಘಟಕ (Emergency Cell) ದಲ್ಲಿ ಚಿಕಿತ್ಸೆ ಪಡೆದರೆ , ದೈನಂದಿನ ಪರಿಹಾರ ಮೊತ್ತದಲ್ಲಿ ಹೆಚ್ಚಳ.

Saturday, November 22, 2014

22 ನವ್ಹಂಬರ್ 2014

ಆರೋಗ್ಯ ವಿಮೆ (Health Insurance) ಯ ಪ್ರಕಾರಗಳು ಯಾವುವು?

ಆರೋಗ್ಯ ವಿಮೆಯ (Health Insurance) ಪ್ರಕಾರಗಳು,
ವ್ಯಕ್ತಿಗತ ಆರೋಗ್ಯ ವಿಮಾ ಪಾಲಿಸಿ. (ಸ್ವಂತಕ್ಕಾಗಿ) (Individual Health Insurance Policy for Self.)
ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮಾ ಪಾಲಿಸಿ. (ಕುಟುಂಬದ ಸದಸ್ಯರೆಲ್ಲರಿಗೂ) (Family Floater  Health Insurance Policy for family members)
ಗುಂಪು ಆರೋಗ್ಯ ವಿಮಾ ಪಾಲಿಸಿ. (ಗುಂಪಿನ ಸದಸ್ಯರೆಲ್ಲರಿಗೂ) (Group Health Insurance Policy for group members)
ದೈನಂದಿನ ಆಸ್ಪತ್ರೆ ನಗದು ಸೌಲಭ್ಯ ಯೋಜನೆ (Daily Hospitalisation Cash Benefit Plan),
     

Friday, November 21, 2014

21 ನವ್ಹಂಬರ್ 2014

ಪೆನ್ಶನ್ ಯೋಜನೆ (Pension Plans) ಗಳು ಯಾಕೆ ಬೇಕು?

ಪೆನ್ಶನ್ ಯೋಜನೆ (Pension Plans) ಗಳು ಯಾಕೆ ಬೇಕೆಂದರೆ,

ಜೀವಿತ ಅವಧಿ (Longitivity period) ಯು ಹೆಚ್ಚಾಗುತ್ತಿದೆ.
ನಿವೃತ್ತಿ ನಂತರವೂ ಜೀವನ ಶೈಲಿ ಮಟ್ಟ (level of life style) ವನ್ನು ಕಾಪಾಡಿಕೊಳ್ಳುವದು ಅವಶ್ಯಕವಾಗಿದೆ.
ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ, ನಿವೃತ್ತಿ ಜೀವನಕ್ಕೆ ಬೇರೆಯವರ ಮೇಲೆ ಅವಲಂಬಿಸುವದು ಕಷ್ಟಕರವಾಗಿದೆ.
     
  

Thursday, November 20, 2014

20 ನವ್ಹಂಬರ್ 2014

ಹೆಚ್ಚುವರಿ ವಿಮಾ ಸೌಲಭ್ಯ (ಖiಜeಡಿ ಃeಟಿeಜಿiಣs ) ಗಳನ್ನು ಖರೀದಿಸುವಲ್ಲಿ ಹೆಚ್ಚಿನ ಪ್ರಯೋಜನಗಳೇನು?


ಹೆಚ್ಚುವರಿ ವಿಮಾ ಸೌಲಭ್ಯ (Rider Benefits)ಗಳನ್ನು ಪ್ರತ್ಯೇಕವಾಗಿ ಖರೀದಿಸಲು ಬರುವದಿಲ್ಲಾ. ಅವುಗಳನ್ನು ಮೂಲ ವಿಮಾಸರಕುಗಳಿಗೆ ಜೊತೆಯಾಗಿಯೇ ಖರೀದಿಸ ಬೇಕಾಗುವದು.
ಮೂಲ ಸರಕುಗಳ ಜೊತೆ ಮಾರಾಟವಾಗುವ, ಹೆಚ್ಚುವರಿ ವಿಮಾ ಸೌಲಭ್ಯ (Insurance Rider Benefits) ಗಳು, ಬೆಲೆಯಲ್ಲಿ ತುಂಬಾ  ಅಗ್ಗವಾಗಿರುತ್ತವೆ.
ಹೆಚ್ಚುವರಿ ವಿಮಾ ಸೌಲಭ್ಯ (Insurance Rider Benefits) ಗಳನ್ನು , ವಿವಿಧ ರೀತಿಗಳಲ್ಲಿ, ವಿವಿಧ ಪ್ರಮಾಣಗಳಲ್ಲಿ, ಅನಕೂಲಕರ ಅವಧಿಗಳಿಗೆ ಜೋಡಿಸಲು ಸಾಧ್ಯವಿರುವದರಿಂದ, ಒಟ್ಟಾರೆ ವಿಮಾ ಸೌಲಭ್ಯಗಳ ಬೇಡಿಕೆಗಳನ್ನು ಸಮರ್ಥವಾಗಿ ಈಡೇರಿಸಬಹುದು.


Wednesday, November 19, 2014

19 ನವ್ಹಂಬರ್ 2014

 ಆರೋಗ್ಯವಂತನಾಗಿದ್ದಾಗಲೇ ಆರೋಗ್ಯ ವಿಮೆ (Health Insurance) ಯನ್ನು ಯಾಕೆ ಖರೀದಿಸಬೇಕು?

 ಆರೋಗ್ಯವಂತನಾಗಿದ್ದಾಗಲೇ ಆರೋಗ್ಯ ವಿಮೆಯನ್ನು ಯಾಕೆ ಖರೀದಿಸಬೇಕು, ಯಾಕಂದರೆ:
ದೀರ್ಘ ಜೀವನದಲ್ಲಿ ಸದಾಕಾಲ, ಆರೋಗ್ಯವಂತನಾಗಿರುವದು ಅಸಾಧ್ಯ.
ಕಾಯಿಲೆ ಸಂಭವಿಸಿದಾಗ ಆರೋಗ್ಯ ಪಾಲನೆ ವೆಚ್ಚ ದುಬಾರಿಯಾಗಿದೆ.
ಆರೋಗ್ಯವಂತನಾಗಿದ್ದಾಗಲೇ ಆರೋಗ್ಯ ವಿಮೆಯನ್ನು ಖರೀದಿಸುವದು ಸುಲಭ.
ಅನಾರೋಗ್ಯವಂತನಿಗೆ ಆರೋಗ್ಯ ವಿಮೆಯನ್ನು ಖರೀದಿಸುವದು ಅಸಾಧ್ಯ.


Tuesday, November 18, 2014

18  ನವ್ಹಂಬರ್ 2014

 ಆರೋಗ್ಯ ವಿಮೆ (Health Insurance) ಯ ಅವಶ್ಯಕತೆ ಯಾಕೆ ಹೆಚ್ಚಾಗಿದೆ?

 ಆರೋಗ್ಯ ವಿಮೆಯ ಅವಶ್ಯಕತೆ ಯಾಕೆ ಹೆಚ್ಚಾಗಿದೆಯೆಂದರೆ,
ಮಹಾ ಶಸ್ತ್ರ ಚಿಕಿತ್ಸೆಗಳ ವೆಚ್ಚ (Major Surgical Expense) ದುಬಾರಿಯಾಗಿದೆ.
ದೀರ್ಘಕಾಲೀನ ಆಸ್ಪತ್ರೆ ಚಿಕಿತ್ಸೆ (Long term Hospitalisation expense) ವೆಚ್ಚವೂ ದುಬಾರಿಯಾಗಿದೆ.
ಜೀವಿತ ಅವಧಿಯ ಹೆಚ್ಚಳದೊಂದಿಗೆ, ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆಯೂ ಹೆಚ್ಚಾಗಿದೆ.


Monday, November 17, 2014

17  ನವ್ಹಂಬರ್ 2014

ಭಾರತದಲ್ಲಿ ಜೀವಿತ ಅವಧಿಯ ಕಾಲ (Longitivity Period )  ಎಷ್ಟಿದೆ?

ಭಾರತದಲ್ಲಿ ಜೀವಿತ ಅವಧಿಯ ಕಾಲ (Longitivity Period ) , ಉದ್ಯೋಗ ನಿವೃತ್ತಿಯ ವಯಸ್ಸಿ (Retirement age)  ಗಿಂತ, ಅಂದರೆ 60 ವರ್ಷಗಳಗಿಂತ ಅಧಿಕವಾಗಿದೆ.


Sunday, November 16, 2014

16 ನವ್ಹಂಬರ್ 2014

ಉಳಿತಾಯ ಸರಕುಗಳ ಕಾಲಾವಧಿ- (Term of Saving Products ) ಎಂದರೇನು?

 ಅವಶ್ಯಕೆಗಳನ್ನು ಕಾಲಾವಧಿಗಳಿಗೆ ತಕ್ಕಂತೆ, ಚಿಕ್ಕ ಕಾಲಾವಧಿಯ, ಮಧ್ಯಮ ಕಾಲಾವಧಿಯ, ದೀರ್ಘ ಕಾಲಾವಧಿಯ ಅವಶ್ಯಕತೆಗಳೆಂದು ವಿಂಗಡಿಸ ಬಹುದು. ಇದಕ್ಕೆ ಸಮಾನಾಂತರವಾಗಿ ಉಳತಾಯದ ಸರಕುಗಳನ್ನೂ, ಚಿಕ್ಕ ಕಾಲಾವಧಿಯ, ಮಧ್ಯಮ ಕಾಲಾವಧಿಯ, ದೀರ್ಘ ಕಾಲಾವಧಿಯ ಸರಕುಗಳೆಂದು ವಿಂಗಡಿಸ ಬಹುದು. ಉದಾಹರಣೆಗೆ ;
1) ಚಿಕ್ಕ ಕಾಲಾವಧಿಯ ಸರಕುಗಳು (Short Term Products ) : 1 ರಿಂದ 5 ವರ್ಷಗಳ ಅವಧಿಗಳ   ಸರಕುಗಳು.
2) ಮಧ್ಯಮ ಕಾಲಾವಧಿಯ ಸರಕುಗಳು (medium Term Products ) : 6 ರಿಂದ 14 ವರ್ಷಗಳ ಅವಧಿಗಳ ಸರಕುಗಳು.
3) ದೀರ್ಘ ಕಾಲಾವಧಿಯ ಸರಕುಗಳು (Long Term Products )   : 15 ವರ್ಷಗಳಿಗೆ ಮಿಕ್ಕದ ವರ್ಷಗಳ ಅವಧಿಗಳ ಸರಕುಗಳು.

Saturday, November 15, 2014

15 ನವ್ಹಂಬರ್ 2014

 ಉಳಿತಾಯದ ಅವಶ್ಯಕತೆಗಳ ಆದ್ಯತೆಗಳನ್ನು ಹೇಗೆ ನಿರ್ಧರಿಸ ಬೇಕು? 

ಪ್ರಥಮ ಆದ್ಯತೆ  :  ತುರ್ತು ನಿಧಿಗಾಗಿ ಉಳಿಸುವದು - (Save for Emergencu Fund) .ಹಟಾತ್ತನೆ ಉದ್ಭವಿಸುವ ಆದರೆ ತಪ್ಪಿಸಿ ಕೊಳ್ಳಲಾಗದ ಆರ್ಥಿಕ ಬೇಡಿಕೆಗಳ ಈಡೇರಿಕೆಗಾಗಿ, (ಅನಾರೋಗ್ಯ/ಅಪಘಾತ/ನಿರುದ್ಯೋಗ/ಇತ್ಯಾದಿ.) ಕನಿಷ್ಠ 6 ತಿಂಗಳ ಆದಾಯದ ಗಾತ್ರದ ತುರ್ತು ನಿಧಿಯನ್ನು ನಿರ್ಮಿಸಬೇಕು. ತುರ್ತು ನಿಧಿಗಾಗಿ ಎರಡು ತಿಂಗಳ ಹಣವನ್ನು ಬ್ಯಾಂಕ ಎಸ್.ಬಿ. ಖಾತೆಯಲ್ಲಿ, ಬಾಕೀ ಹಣವನ್ನು ಮ್ಯೂಚುವಲ್ ಫಂಡಿನ ಸಾಲನಿಧಿಯಲ್ಲಿ ಹೂಡಿಕೆ ಮಾಡ ಬಹುದು.              
ಎರಡನೆಯ ಆದ್ಯತೆ : ವಿಮೆಗಾಗಿ ಉಳಿಸುವದು- (Save for Insurance). 
ಆಕಸ್ಮಿಕ ಮರಣ (un anticipated death )ದಿಂದ ಆದಾಯ ಮೂಲ ಗಳಿಕೆಗಳನ್ನು ಸಂರಕ್ಷಿಸುವದು. ಸಾಕಾಗುವಷ್ಟು ಮೊತ್ತಕ್ಕೆ ವಿಮೆ ಖರೀದಿಸುವದನ್ನು ಮರೆಯ ಬಾರದು. ಅವಧಿ ವಿಮೆಯನ್ನು ತುಂಬಾ ಅಗ್ಗದ ದರದಲ್ಲಿ ಖರೀದಿಸಬಹುದು. ಸಾಕಾಗುವಷ್ಟು ಮೊತ್ತಕ್ಕೆ ವಿಮೆ ಖರೀದಿಸಿದ ನಂತರವೇ ಉಳಿದ ಉಳಿತಾಯದ ಅವಶ್ಯಕತೆಗಳ ಬಗ್ಗೆ ಯೋಚಿಸ ಬೇಕು. 
      
ಆಕಸ್ಮಿಕ ಅಪಘಾತ  (un anticipated accident) ಗಳಿಂದ ಆದಾಯ ಮೂಲ ಗಳಿಕೆಗಳನ್ನು  ಸಂರಕ್ಷಿಸುವದು.ಅಪಘಾತಗಳಿಂದ ಬದುಕಿ, ಆದಾಯ ನಿಂತು ಹೋದರೆ, ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲು ಹೆಚ್ಚುವರಿ ಅಪಘಾತ ವಿಮೆ ಸೌಲಭ್ಯಗಳನ್ನು ಖರೀದಿಸುವದಕ್ಕೆ ಮರೆಯಬಾರದು. ಕೆಲವು ಬಾರಿ  ಪ್ರತ್ಯೇಕ ಅಪಘಾತ ವಿಮೆ ಪಾಲಸಿಗಳನ್ನು ಖರೀದಿಸ ಬಹುದು.
ಆಕಸ್ಮಿಕ ಗಂಭೀರ ಕಾಯಿಲೆ (un anticipated critical illness) ಗಳಿಂದ ಆದಾಯ ಮೂಲ ಗಳಿಕೆಗಳನ್ನು ಸಂರಕ್ಷಿಸುವದು. ಆಕಸ್ಮಿಕ ಗಂಭೀರ ಕಾಯಿಲೆಗಳಿಂದ  ಆದಾಯ ನಿಂತು ಹೋದರೆ, ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲು ಹೆಚ್ಚುವರಿ ಅಪಘಾತ ವಿಮೆ ಸೌಲಭ್ಯಗಳನ್ನು ಖರೀದಿಸುವದಕ್ಕೆ ಮರೆಯಬಾರದು. ಕೆಲವು ಬಾರಿ  ಪ್ರತ್ಯೇಕ ಅಪಘಾತ ವಿಮೆ ಪಾಲಸಿಗಳನ್ನು ಖರೀದಿಸಬಹುದು. ಕುಟುಂಬದ ಸದಸ್ಯರೆಲ್ಲರಿಗೂ ಒಂದೇ ಪಾಲಿಸಿಯ ಮೂಲಕ ಅಪಘಾತ ವಿಮೆ ಪಾಲಸಿ ಖರೀದಿಸ ಬಹುದು.  
       
ನಂತರದ ಆದ್ಯತೆ  :  ಮಕ್ಕಳ ಶಿಕ್ಷಣ/ಮದುವೆ (children’s education / marriage) ಗೆ ಅನಕೂಲಕರ ವಿಮೆ ಪಾಲಸಿಗಳ ಮೂಲಕ ಉಳಿತಾಯ ಮಾಡುವದು.
       ಈ ಪಾಲಿಸಿಗಳಲ್ಲಿ ವಿಮಾ ಖರೀದಿದಾರ ನಿಧನನಾದರೂ, ಕೂಡಲೇ ಹಣ ನೀಡದೆ, ಮಕ್ಕಳ  ಶಿಕ್ಷಣ/ ಮದುವೆಯ ಸಮಯದಲ್ಲಿಯೇ ಪರಿಹಾರ ಹಣವನ್ನು ನೀಡಲಾಗುವದು.    
        ಸಕಾಲದಲ್ಲಿ ಪಡೆದ ಹಣದ ಮೌಲ್ಯ ಅಘಾದವಾಗಿರುತ್ತದೆ.
ನಂತರದ ಆದ್ಯತೆ  : ಆಸ್ತಿಗಳ ಗಳಿಕೆಗಾಗಿ/ರಕ್ಷಣೆಗಾಗಿ ಉಳಿಸುವದು - (Save for creation / maintainance of assets).     
       ಮನೆ/ವಾಹನ/ಜೀವನಾವಶ್ಯಕ ವಸ್ತುಗಳಿಗಾಗಿ. ಇವುಗಳಿಗಾಗಿ ಉಳಿಕೆಯ ಹಣ ಬಳಸ ಬಹುದು, ಅಥವಾ ಸಾಲದ ಹಣ ಪಡೆಯ ಬಹುದು. ಸಾಲದ ಹಣಕ್ಕೆ ವಿಮೆ 
       ತೆಗೆದುಕೊಳ್ಳುವದನ್ನು ಮರೆಯ   ಬಾರದು. ಸಾಲ ವಾಪಸಾತಿ ಕಂತಿನ ನಿವ್ವಳದ ಗರಿಷ್ಠ ಮೊತ್ತ, ನಿವ್ವಳ ವೇತನದ 40% ಮಿಕ್ಕಬಾರದು. ಮನೆ ಖರೀದಿಸಲು ಸಾಲ  
       ಪಡೆಯುವಾಗ, ಬ್ಯಾಂಕುಗಳು ಮನೆಯ ಬೆಲೆಯ 100% ಮೊತ್ತಕ್ಕೆ ಸಾಲ  ನೀಡದೇ 75% ಅಥವಾ 80% ಮೊತ್ತಕ್ಕೆ ಸಾಲ ನೀಡುತ್ತದೆ.      
ಕೊನೆಯ ಆದ್ಯತೆ  :  ನಿವೃತ್ತಿ ಜೀವನಕ್ಕೆ ಉಳಿಸುವದು - (Save for Retired Life) .                                                
ನೌಕರ ವರ್ಗಕ್ಕೆ ನಿವೃತ್ತಿ ವೇತನ ಸೌಲಭ್ಯಗಳು; ಪೆನ್ಶನ್, ಇ.ಪಿ.ಎಫ್, ಸೌಲಭ್ಯಗಳು ಮಾಲೀಕರಿಂದ ದೊರೆಯತ್ತವೆ. ಇವುಗಳು ಸಾಕಾಗದಿದ್ದರೆ ಹೆಚ್ಚಿ ಹಣಕ್ಕೆ ನಿವೃತ್ತಿ ಸೌಲಭ್ಯ ಸರಕುಗಳನ್ನು ಕೊಳ್ಳಬೇಕು. ಸ್ವತಂತ್ರವಾಗಿ ಗಳಿಸುವ ಜನರು ನಿವೃತ್ತಿ ವೇತನ ಸೌಲಭ್ಯಗಳಿಗಾಗಿ ಸಂಪೂರ್ಣ ಉಳಿತಾಯವನ್ನು ತಾವೇ ಸ್ವತಃ ಮಾಡಿಕೊಳ್ಳ ಬೇಕಾಗುತ್ತದೆ. ಇದಕ್ಕಾಗಿ ದೀರ್ಘಾವಧೀ ಸರಕುಗಳಲ್ಲಿ ಉಳಿತಾಯ ಮಾಡಬೇಕು.•



ನ್ನೂ ಕೊನೆಯ ಆದ್ಯತೆ : ಆದಾಯ ಕರ ರಿಯಾಯತಿಗಾಗಿ ಉಳಿತಾಯ ಮಾಡುವದು - (Save for Income Tax Rebate) .  ಆದಾಯ ಕರ ರಿಯಾಯತಿಗಾಗಿಯೇ  ಉಳಿಸುವದು ಜಾಣರ ಲಕ್ಷಣವಲ್ಲ. ಅವಶ್ಯಕತೆಗಳ ಈಡೇರಿಕೆಗಾಗಿ ಸರಕುಗಳನ್ನು ಖರೀದಿಸುವಾಗ ದೊರೆಯ ಬಹುದಾದ ಕರ ರಿಯಾಯತಿಗಳನ್ನು ನಿರ್ಲಕ್ಷಿಸುವದು ಮೂರ್ಖತನವಾಗುತ್ತದೆ. 




Friday, November 14, 2014

14 ನವ್ಹಂಬರ್ 2014

 ಉಳಿತಾಯ ಸರಕುಗಳ ಗಳಿಕೆಯ ದರ (Rate of Return)    ದ ಮೇಲೆ, ರಿಝರ್ವ ಬ್ಯಾಂಕ ನಿರ್ಧರಿಸುವ ಬಡ್ಡಿ ದರದ ಪರಿಣಾಮ ಏನಾಗುತ್ತದೆ?

 ರಿಝರ್ವ ಬ್ಯಾಂಕ ಆಫ್ ಇಂಡಿಯಾ ತನ್ನ ಬಡ್ಡಿ ದರ (Rate of Interest)   ದಲ್ಲಿ ಬದಲಾವಣೆ ಕೈಕೊಳ್ಳುವ ಮೂಲಕ, ಆರ್ಥಿಕ ಕ್ಷೇತ್ರದ ಬೆಳವಣಿಗೆಯ ಮೇಲೆ ನಿಯಂತ್ರಣ ಸಾಧಿಸ ಬಯಸುತ್ತದೆ.
ರಿಝರ್ವ ಬ್ಯಾಂಕ ಆಫ್ ಇಂಡಿಯಾ ತನ್ನ ಬಡ್ಡಿ ದರ (Rate of Interest)   ಹೆಚ್ಚಿಸಿದಾಗ, ಬ್ಯಾಂಕ ಠೇವಣಿ/ಬಾಂಡ್ ಹೂಡಿಕೆಗಳ ಗಳಿಕೆ ದರದಲ್ಲಿ ಹೆಚ್ಚಳ ಉಂಟಾಗುತ್ತದೆ. ಶೇರುಗಳ ಬೆಲೆ ಇಳಿಮುಖವಾಗಿತ್ತದೆ.
(ಇದಕ್ಕೆ ಕಾರಣ : 1) ಕಂಪನಿಗಳು ಪಡೆದ ಸಾಲದ ಬಡ್ಡಿಯ ಭಾರ ಹೆಚ್ಚಾಗಿ ಅವುಗಳ ಲಾಭ ಕಡಿಮೆಯಾಗುತ್ತದೆ. 2) ಬ್ಯಾಂಕ ಠೇವಣಿ/ಬಾಂಡ್ ಹೂಡಿಕೆಗಳ ಬಡ್ಡಿ ದರ ಹೆಚ್ಚಾಗುವದರಿಂದ, ಹೆಚ್ಚಿನ ಪ್ರಮಾಣದ ಹೂಡಿಕೆಯ ಹಣ ಪ್ರವಾಹ ಈ ದಿಕ್ಕಿನಲ್ಲಿ ಭರದಿಂದ ಸಾಗುತ್ತದೆ, ಮತ್ತು ಶೇರು ಮಾರುಕಟ್ಟೆಯಲ್ಲಿ ನಿಧಾನವಾಗಿ ಸಾಗುತ್ತದೆ.) 
ರಿಝರ್ವ ಬ್ಯಾಂಕ ಆಫ್ ಇಂಡಿಯಾ ತನ್ನ ಬಡ್ಡಿ ದರ (Rate of Interest)   ಇಳಿಸಿದಾಗ, ಬ್ಯಾಂಕ ಠೇವಣಿ/ಬಾಂಡ್ ಹೂಡಿಕೆಗಳ ಗಳಿಕೆ ದರ(Rate of Return) ದಲ್ಲಿ   ಕಡಿತÀ ಉಂಟಾಗುತ್ತದೆ. ಶೇರುಗಳ ಬೆಲೆ ಆಕರ್ಷಕವಾಗಿ ಏರುಮುಖವಾಗಿತ್ತದೆ.
(ಇದಕ್ಕೆ ಕಾರಣ : 1) ಕಂಪನಿಗಳು ಪಡೆದ ಸಾಲದ ಬಡ್ಡಿಯ ಭಾರ ಕಡಿಮೆಯಾಗಿ ಅವುಗಳ ಲಾಭ ಹೆಚ್ಚಾಗುತ್ತದೆ. 2) ಬ್ಯಾಂಕ ಠೇವಣಿ/ಬಾಂಡ್ ಹೂಡಿಕೆಗಳ ಬಡ್ಡಿ ದರ ಕಡಿಮೆಯಾಗುವದರಿಂದ, ಹೆಚ್ಚಿನ ಪ್ರಮಾಣದ ಹೂಡಿಕೆಯ ಹಣ ಪ್ರವಾಹ ಈ ದಿಕ್ಕಿನಲ್ಲಿ ಕ್ಷೀಣವಾಗಿ ಸಾಗುತ್ತದೆ, ಮತ್ತು ಶೇರು ಮಾರುಕಟ್ಟೆಯಲ್ಲಿ ಭರದಿಂದ ಸಾಗುತ್ತದೆ.) 



Thursday, November 13, 2014

13  ನವ್ಹಂಬರ್ 2014

9- ಖಾಲೀ ನಿವೇಶನ/ಬೆಳ್ಳಿ ಬಂಗಾರ/ ಕಲಾತ್ಮಕ ವಸ್ತುಗಳಲ್ಲಿ ಹೂಡಿಕೆಗಳು.


1. ಹೂಡಿಕೆಯ ರೀತಿ -(Investment  style)  : ಸಾಮಾನ್ಯವಾಗಿ ಒಂದೇ ಕಂತಿನಲ್ಲಿ.

2. ಆದಾಯದ  ರೀತಿ-( Income style of Investment):  ಆಸ್ತಿ ಮಾರಾಟಮಾಡಿದಾಗ ದೊರಕುವ ಲಾಭದ ಮೂಲಕ.

3. ಗಳಿಕೆಯ ಖಚಿತತೆ- ( Guarantee for income from  Investment) :           ಖಚಿತವಾದ ಗಳಿಕೆದರ ಇಲ್ಲಾ.

4. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆತಕ್ಕೆ  ಅವಕಾಶ - ( Scope for withdrawl  from  Investment)   : ಹೂಡಿಕೆಯ  ಹಿಂತೆಗೆತಕ್ಕೆ  ಅವಕಾಶ  ಇಲ್ಲಾ. ಮಾರಾಟದ ಮೂಲಕವೇ ಹೂಡಿಕೆ ಹಣ ಮರಳಿ ಪಡೆಯಬೇಕು. ಹಿಂತೆಗೆತದ ವಿಧಾನ ಸುಲಭವಿಲ್ಲಾ.

5 ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆದರೆ ದಂಡ.  (Penalty for withdrawl  from  I.nvestment) :    ಹೂಡಿಕೆಯ  ಹಿಂತೆಗೆತಕ್ಕೆ  ಅವಕಾಶ  ಇಲ್ಲಾ. ಹೀಗಾಗಿ ದಂಡಕ್ಕೆ ಆಸ್ಪದವಿಲ್ಲಾ. ಮಾರುಕಟ್ಟೆಯ ಪರಿಸ್ಥಿತಿ ಅನಾನಕೂಲವಾಗಿದ್ದಾಗ ಆಸ್ತಿ ಮಾರಾಟ ಮಾಡಿದರೆ, ಭಾರಿ ಹಾನಿಯನ್ನುಂಟು ಮಾಡುತ್ತದೆ.

6.ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment) : 
    ಗಳಿಕೆಯ ದರದಲ್ಲಿ ಬಾರೀ ಅನಿಶ್ಚಿತತೆ ಇದೆ. ಮಾರಾಟ ಮಾಡಿದ ಸಮಯದಲ್ಲಿದ್ದ, ಮಾರುಕಟ್ಟೆಯ ದರದ ಮೇಲೆಯೇ ಗಳಿಕೆದರ ನಿರ್ಧಾರವಾಗುತ್ತದೆ.

Wednesday, November 12, 2014

12 ನವ್ಹಂಬರ್ 2014

8 - ಮ್ಯೂಚುವಲ್ ಫಂಡಗಳು (ನಿಧಿಗಳು.)


1 .ಹೂಡಿಕೆಯ ರೀತಿ -(Investment  style) :  ಒಂದೇ ಕಂತಿನಲ್ಲಿ, ಇಲ್ಲವೇ ನಿರಂತರ ಕಂತುಗಳಲ್ಲಿ,
ಅಸಂಖ್ಯಾತ ಗ್ರಾಹಕರು, ವಂತಿಗೆಗಳ ಮೂಲಕ ಹಣವನ್ನು, ಫಂಡ ಮ್ಯಾನೇಜರ ಮೂಲಕ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವನು. ಹೂಡಿಕೆ ಹಣಕ್ಕೆ ಶೇರುಗಳಿಗೆ ಬದಲಿಯಾಗಿ ಯುನಿಟ್‍ಗಳನ್ನು ಮಾರುಕಟ್ಟೆ ದರದಲ್ಲಿ ಪಡೆಯುವರು.

2. ಆದಾಯದ  ರೀತಿ- ( Income style of Investment) :   ಯುನಿಟ್‍ಗಳ ಮೇಲೆ ಡಿವಿಡೆಂಡ ಸಿಗುವದು, ಕೆಲವು ಬಾರಿ ಬೋನಸ್ ಯುನಿಟ್‍ಗಳು ದೊರಕಬಹುದು. ಯುನಿಟ್‍ಗಳನ್ನು ಮಾರಾಟ ಮಾಡಿದಾಗ ಲಾಭ/ಹಾನಿಗಳ ಸಾಧ್ಯತೆ ಇದೆ.

3. ಗಳಿಕೆಯ ಖಚಿತತೆ ( Guarantee for income from  Investment) : ಖಚಿತವಾದ ಗಳಿಕೆದರ ಇಲ್ಲಾ. 

4. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆತಕ್ಕೆ  ಅವಕಾಶ-( Scope for withdrawl  from  Investment) :  ಮಾರುಕಟ್ಟಯಲ್ಲಿ ಮರಾಟದ ಮೂಲಕ, ಹೂಡಿಕೆಯ ಹಿಂತೆಗೆತಕ್ಕೆ  ಅವಕಾಶ  ಇದೆ. ಹಿಂತೆಗೆತದ ವಿಧಾನ ಸುಲಭವಾಗಿದೆ.

5. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆದರೆ ದಂಡ - (Penalty for withdrawl  from  Investment) :    ಲಾಕ್ ಇನ್ ಅವಧಿಗೆ ಮುಂಚೆ ಮಾರಿದರೆ ದಂಡ ನೀಡಬೇಕಾಗುವದು.

6. ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment) :
  ಫಂಡ ಮ್ಯಾನೇಜರ ತಜ್ಞನಾಗಿರುದರಿಂದ, ಹೂಡಿಕೆಯು ವಿವಿಧ ಕಂಪನಿಗಳಲ್ಲಿ ಹಂಚಿ ಹೋಗುವದರಿಂದ, ಹೂಡಿಕೆಯ ಅಪಾಯ ಮಟ್ಟವೂ ಕಡಿಮೆಯಾಗಿದೆ. ದೀರ್ಘಾವಧಿಯಲ್ಲಿ ಯೋಗ್ಯ ಮಟ್ಟದ ಗಳಿಕೆ ಮಾಡಿಕೊಳ್ಳಬಹುದು. ಗಳಿಕೆಯ ದರದಲ್ಲಿ ಹೊಯ್ದಾಟ ಕಡಿಮೆಯಾಗಿರುವದು.

7. ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ (Scope for changes in  Investment) :   ಇಲ್ಲಾ.


Tuesday, November 11, 2014

11 ನವ್ಹಂಬರ್ 2014

7 - ಶೇರು ಮಾರುಕಟ್ಟೆ ಸರಕುಗಳು.


1. ಹೂಡಿಕೆಯ ರೀತಿ-( Invetment style):  ಒಂದೇ ಕಂತಿನಲ್ಲಿ, 

2. ಆದಾಯದ  ರೀತಿ-( Income style of Investment) :    ಶೇರುಗಳ ಮೇಲೆ ಡಿವಿಡೆಂಡ ಸಿಗುವದು, ಕೆಲವು ಬಾರಿ ಬೋನಸ್ ಶೇರು ದೊರಕ ಬಹುದು. ಶೇರು ಮಾರಾಟ ಮಾಡಿದಾಗ ಲಾಭ/ಹಾನಿಗಳ ಸಾಧ್ಯತೆ ಇದೆ.

3. ಗಳಿಕೆಯ ಖಚಿತತೆ- ( Guarantee for income from  Investment):   ಖಚಿತವಾದ ಗಳಿಕೆದರ ಇಲ್ಲಾ. 

4. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆತಕ್ಕೆ  ಅವಕಾಶ     ( Scope for withdrawl  from  Investment)   ಶೇರು ಮಾರುಕಟ್ಟಯಲ್ಲಿ ಮರಾಟದ ಮೂಲಕ, ಹೂಡಿಕೆಯ  ಹಿಂತೆಗೆತಕ್ಕೆ  ಅವಕಾಶ  ಇದೆ.ಹಿಂತೆಗೆತದ ವಿಧಾನ ಸುಲಭವಾಗಿದೆ.

5. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆದರೆ ದಂಡ. (Penalty for withdrawl  from  Investment) :  ದಂಡದ ಪ್ರಶ್ನೆ ಉದ್ಭವಿಸುವದಿಲ್ಲಾ. ಒಂದೇ ಕಂತಿನಲ್ಲಿ ಹೂಡಿಕೆಯಾಗುವದರಿಂದ, ಹೂಡಿಕೆಗೆ ಯಾವ ಅವಧಿ ಇಲ್ಲಾ. 

6. ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment) :  ಗಳಿಕೆಯ ದರದಲ್ಲಿ ತುಂಬಾ ಹೊಯ್ದಾಟ ಇರುವದು ಇಲ್ಲಾ. ಮಾರುಕಟ್ಟೆಯಜ್ಞಾನ/ತಾಳ್ಮೆ/ಚಾಣಾಕ್ಷತನವದ್ದವನು ದೀರ್ಘಾವಧಿಯಲ್ಲಿ ಹೆಚ್ಚಿನ ಗಳಿಕೆ ಮಾಡಿಕೊಳ್ಳಬಹುದು.

7. ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ (Scope for changes in  Investment) :    ಇಲ್ಲಾ.


ರವಾಗುತ್ತದೆ.

7. ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ (Scope for changes in  Investment) :    ಇಲ್ಲಾ.

Monday, November 10, 2014



10 ನವ್ಹಂಬರ್ 2014

6 - ಬಾಂಡ್ ಮಾರುಕಟ್ಟೆ ಸರಕುಗಳು.


1. ಹೂಡಿಕೆಯ ರೀತಿ -  (Investment  style):  ಒಂದೇ ಕಂತಿನಲ್ಲಿ.

2 . ಆದಾಯದ  ರೀತಿ - (Income style of Investment)  :  ಬಡ್ಡಿಯನ್ನು ಆವಧಿಯ ಕೊನೆಗೆ ಒಂದೇ ಬಾರಿ, ಅಥವಾ ನಿಗದಿತ ಅವಧಿಯೊಳಗೆ ನಿರಂತರವಾಗಿ ನೀಡುವರು.

3. ಗಳಿಕೆಯ ಖಚಿತತೆ ( Guarantee for income from  Investment) : ಖಚಿತವಾದ ಗಳಿಕೆದರ ಇದೆ. 

4 .ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆತಕ್ಕೆ  ಅವಕಾಶ -( Scope for withdrawl  from  Investment) :   ಹೂಡಿಕೆಯ  ಹಿಂತೆಗೆತಕ್ಕೆ  ಅವಕಾಶ  ಇಲ್ಲಾ. ಆದರೆ ಮಾರುಕಟ್ಟೆಯಲ್ಲಿ ಮಾರಿ ಹಣ ಮರಳಿ ಪಡೆಯಬಹುದು.

5.  ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆದರೆ ದಂಡ- (Penalty for withdrawl  from  Investment):   ಮಾರುಕಟ್ಟೆಯಲ್ಲಿ ಮಾರಿದಾಗ ಲಾಭವನ್ನೂ ಗಳಿಸಬಹುದು, ಹಾನಿಯನ್ನೂ ಅನುಭವಿಸಬಹುದು.

6. ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment) :  ಇಲ್ಲಾ. ಗಳಿಕೆಯ ದರದಲ್ಲಿ ಯಾವ ಹೊಯ್ದಾಟ ಇಲ್ಲಾ.
7. ಹೂಡಿಕೆಯಲ್ಲಿ-ಬದಲಾವಣೆಗೆ ಆಸ್ಪದ (Scope for changes in  Investment):  ಇಲ್ಲಾ.


Sunday, November 9, 2014

9 ನವ್ಹಂಬರ್ 2014

5 - ಪೋಸ್ಟ ಆಫೀಸ ಉಳಿತಾಯ ಸರಕುಗಳು. 


1.  ಹೂಡಿಕೆಯ ರೀತಿ - (Investment  style)  : ಒಂದೇ ಬಾರಿಗೆ- ಎನ್.ಎಸ್.ಸಿ/ಕೆ.ವಿ.ಪಿ./ಟಿ.ಡಿ/ಪಿ.ಎಫ್/  ಮಾಸಿಕ ಆದಾಯ/ ವರಿಷ್ಠ ನಾಗರಿಕರ ಉಳಿತಾಯ ಯೋಜನೆಗಳಲ್ಲಿ) ನಿರಂತರ ಕಂತುಗಳಲ್ಲಿ–(ಆರ್.ಡಿ/ಎಸ್.ಬಿ,ಯೋಜನೆಯಲ್ಲಿ )

2. ಆದಾಯದ  ರೀತಿ- ( Income style of Investment) :   ಎನ್.ಎಸ್.ಸಿ/ಕೆ.ವಿ.ಪಿ./ಆರ್.ಡಿ./ಟಿ.ಡಿ./ಪಿ.ಪಿ.ಎಫ್. ಉಳಿತಾಯಗಳಲ್ಲಿ ಬಡ್ಡಿಯನ್ನು ಅವಧಿಯ ಕೊನೆಗೆ ನೀಡುವರು. 
ಮಾಸಿಕ ಆದಾಯ,ವರಿಷ್ಠ ನಾಗರಿಕರ ಉಳಿÀತಾಯ, ಎಸ್.ಬಿ,ಯೋಜನೆಗಳಲ್ಲಿ, ತಿಂಗಳಿಗೊಮ್ಮೆ/ಮೂರು/ಆರು ತಿಂಗಳಿಗೊಮ್ಮೆ ಬಡ್ಡಿಯನ್ನು ಅವಧಿ ಮುಗಿಯುವ ವರೆಗೆ ನೀಡುವರು.

3. ಗಳಿಕೆಯ ಖಚಿತತೆ ( Guarantee for income from  Investment) :  
ಖಚಿತವಾದ ಗಳಿಕೆದರ ಇದೆ. 

4. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆತಕ್ಕೆ  ಅವಕಾಶ -( Scope for withdrawl  from  Investment) :  ಕೆಲವು ಯೋಜನೆಗಳಲ್ಲಿ ಇದೆ.
ಹಿಂತೆಗೆತದ ವಿಧಾನ ಸುಲಭವಾಗಿದೆ.

5. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆದರೆ ದಂಡ -  (Penalty for withdrawl  from  Investment):    ಅವಧಿಗೆ ಮುಂಚೆ ಹಿಂತೆಗೆದರೆ ಆದಾಯದಲ್ಲಿ ಸ್ವಲ್ಪ ಕಡಿತ ಉಂಟಾಗುವದು.

6. ಹೂಡಿಕೆಯಲ್ಲಿ - ಅಪಾಯ ಮಟ್ಟ -(risk in investment) :  ಇಲ್ಲಾ. ಗಳಿಕೆಯ ದರದಲ್ಲಿ ಯಾವ ಹೊಯ್ದಾಟ ಇಲ್ಲಾ.

7 .ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ -(Scope for changes in  Investment) :   ಇಲ್ಲಾ.


Saturday, November 8, 2014

8 ನವ್ಹಂಬರ್ 2014

4 - ಬ್ಯಾಂಕ ಠೇವಣಿ ಯೋಜನೆಗಳು.


1. ಹೂಡಿಕೆಯ ರೀತಿ-(Investment  style) :  ಒಂದೇ ಕಂತಿನಲ್ಲಿ, ಇಲ್ಲವೇ ನಿರಂತರ ಕಂತುಗಳಲ್ಲಿ,

2.  ಆದಾಯದ  ರೀತಿ-( Income style of Investment) :  ಕ್ಯುಮುಲೇಟಿವ್/ಆರ್.ಡಿ ಠೇವಣಿಗಳಲ್ಲಿ ಬಡ್ಡಿಯನ್ನು ಅವಧಿಯ ಕೊನೆಗೆ ನೀಡುವರು. 
ಟೈಮ್ ಠೇವಣಿಗಳಲ್ಲಿ ಬಡ್ಡಿಯನ್ನು 1/3/6/12 ತಿಂಗಳಿಗೊಮ್ಮೆ ಅವಧಿ ಮುಗಿಯುವ ವರೆಗೆ ನೀಡುವರು.

3. ಗಳಿಕೆಯ ಖಚಿತತೆ- ( Guarantee for income from  Investment): ಖಚಿತವಾದ ಗಳಿಕೆದರ ಇದೆ. 

4. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆತಕ್ಕೆ  ಅವಕಾಶ -(Scope for withdrawl from  Investment) :  ಹೂಡಿಕೆಯ  ಹಿಂತೆಗೆತಕ್ಕೆ  ಅವಕಾಶ  ಇದೆ. ಹಿಂತೆಗೆತದ ವಿಧಾನ ಸುಲಭವಾಗಿದೆ.

5. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆದರೆ ದಂಡ- (Penalty for withdrawl : from  Investment)          ಹಿಂತೆಗೆದ ಅವಧಿಗೆ ಅನ್ವಯವಾಗುವ ಸಾಮಾನ್ಯ ಬಡ್ಡಿ ದರಕ್ಕಿಂತ, ಸ್ವಲ್ಪ ಕಡಿಮೆ ದರದ ಬಡ್ಡಿಯನ್ನು ಅನ್ವಯಿಸುವರು.

6. ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment) :  ಇಲ್ಲಾ. ಗಳಿಕೆಯ ದರದಲ್ಲಿ ಯಾವ ಹೊಯ್ದಾಟ ಇಲ್ಲಾ.

7 .ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ (Scope for changes in  Investment) :    ಇಲ್ಲಾ.




Friday, November 7, 2014

7 ನವ್ಹಂಬರ್ 2014

 3 - ಜೀವ ವಿಮೆಯ ವರ್ಷಾಶನ ಯೋಜನೆಗಳು.


1. ಹೂಡಿಕೆಯ ರೀತಿ - (Investment  style) : ಒಂದೇ ಕಂತಿನಲ್ಲಿ, ಇಲ್ಲವೇ ನಿರಂತರ ಕಂತುಗಳಲ್ಲಿ,

2. ಆದಾಯದ  ರೀತಿ- ( Income style of Investment): ಒಂದೇ ಕಂತಿನ ಪಾಲಸಿಯಲ್ಲಿ ಕೂಡಲೇ, ನಿರಂತರ ಕಂತಿನ ಪಾಲಸಿಯಲ್ಲಿ ಅವಧಿಯ ಕೊನೆಗೆ; ಆಜೀವ ವರ್ಷಾಶನಗಳನ್ನು, ಮಾಸಿಕ/ತ್ರೈಮಾಸಿಕ/ಅರೆವಾರ್ಷಿಕ/ ವಾರ್ಷಿಕ  ರೂಪಗಳಲ್ಲಿ ನೀಡುತ್ತಾರೆ.

3. ಗಳಿಕೆಯ ಖಚಿತತೆ -( Guarantee for income from  Investment) : ಯುಲಿಪ್ ಪಾಲಿಸಿಯಲ್ಲಿ ಕನಿಷ್ಠ ಗಳಿಕೆ ದರದ ಭರವಸೆ ಇದೆ, ಸಾಂಪ್ರದಾಯಕ ವರ್ಷಾಶನಗಳಲ್ಲಿ. ಲಾಭ ಬೋನಸ್ ಮೂಲಕ ಸಿಗುವದು.
ಯುಲಿಪ್ ವರ್ಷಾಶನಗಳಲ್ಲಿ ಹೆಚ್ಚಿನ ಲಾಭ ಆಯ್ಕೆ ಮಾಡಿದ ನಿಧಿಯ ಬೆಳವಣಿಗೆಯ ಮೇಲೆ ಅವಲಂಬಿತವಾಗಿದೆ.

4. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆತಕ್ಕೆ  ಅವಕಾಶ -( Scope for withdrawl  from  Investment) :   3 ವರ್ಷಗಳ ನಂತರ (ಯುಲಿಪ್‍ಗಳಲ್ಲಿ 5 ವರ್ಷಗಳ ನಂತರ)  ಆದರೆ ವರ್ಷಾಶನ ಪ್ರಾರಂಭವಾಗುವ ತನಕ; ಹೂಡಿಕೆಯ ಹಣ ಹಿಂತೆ- -ಗೆತಕ್ಕೆ  ಅವಕಾಶ ಇದೆ. ಹಿಂತೆಗೆತದ ವಿಧಾನ ಸುಲಭವಾಗಿದೆ. 
ವರ್ಷಾಶನ ಪ್ರಾರಂಭವಾಗುವ ಸಮಯ 1/3 ಭಾಗದಷ್ಟು   ಮಾತ್ರ ಬೆಳೆದ ಭಂಡವಾಳವನ್ನು ಹಿಂತೆಗೆಯ ಬಹುದು. ನಂತರ ಹೂಡಿಕೆಯ ಹಣದ  ಹಿಂತೆಗೆತಕ್ಕೆ ಅವಕಾಶವಿಲ್ಲಾ.

5. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆದರೆ ದಂಡ- (Penalty for withdrawl :  from  Investment) : ವರ್ಷಾಶನ ಪ್ರಾರಂಭವಾಗುವ ಮೊದಲು ಹಿಂತೆಗೆದರೆ ಹಾನಿ ಯಾಗುತ್ತದೆ. ಸಾಂಪ್ರದಾಯಕ/ಯುಲಿಪ್ ಪಾಲಿಸಿಗಳಲ್ಲಿ, ಹಾನಿ  ಪ್ರಮಾಣ ಅವುಗಳ ನಮೂನೆಗಳ ಮೇಲೆ ಅವಲಂಬಿಸಿರುತ್ತದೆ. 
ವರ್ಷಾಶನ ಪ್ರಾರಂಭವಾಗುವ ಸಮಯಕ್ಕೆ  1/3 ಭಾಗದಷ್ಟು ಬೆಳೆದ ಭಂಡವಾಳವನ್ನು ಹಿಂತೆಗೆದರೆ ಯಾವ ಹಾನೀ ಇಲ್ಲಾ. 

6 .ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment) : 
  ಸಾಂಪ್ರದಾಯಕ ಪೆನ್ಶನ್ ಯೋಜನೆಯಲ್ಲಿ ಗಳಿಕೆಯ ದರದಲ್ಲಿ ಸಂಭವನೀಯ ಹೊಯ್ದಾಟ ಇರುವದಿಲ್ಲ. ಹೂಡಿಕೆಯ ಹೊಣೆಯನ್ನು ಕಂಪನಿಯೇ ತೆಗೆದು ಕೊಳ್ಳುತ್ತದೆ.
ಯುಲಿಪ್ ಪೆನ್ಶನ್ ಯೋಜನೆಯಲ್ಲಿ ಗಳಿಕೆಯ ದರದಲ್ಲಿ ಸಂಭವನೀಯ ಹೊಯ್ದಾಟ, ಗ್ರಾಹಕ ಆಯ್ಕೆ ಮಾಡಿಕೊಂಡ ನಿಧಿಯ ನಮೂನೆಯ ಮೇಲೆ ಅವಲಂಬಿತವಾಗಿದೆ.

7. ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ - (Scope for changes in  Investment) :   ಗ್ರಾಹಕನು ಯಾವಾಗ ಬೇಕಾದಾಗ, ನಿಧಿಯ ಹೂಡಿಕೆಯ ರೀತಿ-- ಯನ್ನು ಮನ ಬಂದಂತೆ ಬದಲಾಯಿಸಬಹುದು.




Thursday, November 6, 2014

6 ನವ್ಹಂಬರ್ 2014
  
 

2 - ಜೀವ ವಿಮೆಯ ಯುಲಿಪ್ ಯೋಜನೆಗಳು.


1. ಹೂಡಿಕೆಯ ರೀತಿ (Investment  style) : ಒಂದೇ ಕಂತಿನಲ್ಲಿ, ಇಲ್ಲವೇ ನಿರಂತರ ಕಂತುಗಳಲ್ಲಿ,

2. ಆದಾಯದ  ರೀತಿ ( Income style of Investment) : ಲಾಭ ಯುನಿಟ್ ಬೆಲೆಯ ಹೆಚ್ಚಳದ ಮೂಲಕ ಅವಧಿಯ ಕೊನೆಗೆ ಒಂದೇ ಕಂತಿನಲ್ಲಿ ಸಿಗುವದು.
(ಮನೀ ಬ್ಯಾಕ್‍ನಂತಹ ಪಾಲಸಿಗಳಲ್ಲಿ ಯಲ್ಲಿ ಪ್ರತಿ 3/4/5 ವರ್ಷಗಳ ಕೊನೆಯಲ್ಲಿ ಲಾಭವನ್ನು ಮುಂಚಿತವಾಗಿ ಹಿಂದಕ್ಕೆ ಪಡೆಯುವ ವ್ಯವಸ್ಥೆ ಇದೆ.)

3. ಗಳಿಕೆಯ ಖಚಿತತೆ (Guarantee for income from  Investment) :  
ಖಚಿತವಾದ ಗಳಿಕೆದರ ಇಲ್ಲಾ. ಆಯ್ಕೆ ಮಾಡಿದ ನಿಧಿಯ ಬೆಳವಣಿಗೆಯ ಮೇಲೆ ಲಾಭ ಅವಲಂಬಿತವಾಗಿದೆ.

4. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆತಕ್ಕೆ  ಅವಕಾಶ ( Scope for withdrawl  from  Investment) :
  ಹೂಡಿಕೆಯ  ಹಿಂತೆಗೆತಕ್ಕೆ  ಅವಕಾಶ   ಐದು ವÀರ್ಷಗಳ ನಂತರ ಇದೆ, ಹಿಂತೆಗೆತದ ವಿಧಾನ ಸುಲಭವಾಗಿದೆ.

5. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆದರೆ ದಂಡ. (Penalty for withdrawl  from  Investment) :   ನಾಲ್ಕು, ಐದನೇ ವರ್ಷಗಳಲ್ಲಿ ಹಿಂತೆಗದರೆ ಹೆಚ್ಚಿನ ಹಾನಿ ಇದೆ. ಐದು ವರ್ಷಗಳ ನಂತರ ಯಾವ ದಂಡ ನೀಡ ಬೇಕಾಗಿಲ್ಲಾ.

6 .ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment)  :  
  ಗಳಿಕೆಯ ದರದಲ್ಲಿ ಸಂಭವನೀಯ ಹೊಯ್ದಾಟ, ಗ್ರಾಹಕ ಆಯ್ಕೆ ಮಾಡಿಕೊಂಡ ನಿಧಿಯ ನಮೂನೆಯ ಮೇಲೆ ಅವಲಂಬಿತವಾಗಿದೆ.

7. ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ (Scope for changes in  Investment) : 
ಗ್ರಾಹಕನು ಯಾವಾಗ ಬೇಕಾದಾಗ, ನಿಧಿಯ ಹೂಡಿಕೆಯ ರೀತಿಯನ್ನು ಮನ ಬಂದಂತೆ ಬದಲಾಯಿಸ ಬಹುದು.

Wednesday, November 5, 2014

5 ನವ್ಹಂಬರ್ 2014
  

  1 - ಜೀವ ವಿಮೆಯ ಸಾಂಪ್ರದಾಯಕ ಯೋಜನೆಗಳು.


1. ಹೂಡಿಕೆಯ ರೀತಿ   (Investment  style) : ಒಂದೇ ಕಂತಿನಲ್ಲಿ, ಇಲ್ಲವೇ ನಿರಂತರ ಕಂತುಗಳಲ್ಲಿ.

2. ಆದಾಯದ  ರೀತಿ  ( Income style of Investment) :   ಲಾಭ ಬೋನಸ್ ಮೂಲಕ ಅವಧಿಯ ಕೊನೆಗೆ ಒಂದೇ ಕಂತಿನಲ್ಲಿ ಸಿಗುವದು. (ಮನೀ ಬ್ಯಾಕ್‍ನಂತಹ ಪಾಲಸಿಗಳಲ್ಲಿ ಯಲ್ಲಿ ಪ್ರತಿ 3/4/5 ವರ್ಷಗಳ ಕೊನೆಯಲ್ಲಿ ಲಾಭವನ್ನು ಮುಂಚಿತವಾಗಿ ಹಿಂದಕ್ಕೆ ಪಡೆಯುವ ವ್ಯವಸ್ಥೆ ಇದೆ.)

3. ಗಳಿಕೆಯ ಖಚಿತತೆ ( Guarantee for income from  Investment):   
ಖಚಿತವಾದ ಗಳಿಕೆ ದರ ಇಲ್ಲಾ. ಲಾಭ ಬೋನಸ್ ಮೂಲಕ ಸಿಗುವದು.(ಕೆಲವು ಪಾಲಿಸಿಗಳಲ್ಲಿ ಭರವಸೆಯ ಬೋನಸ್ಸು ದೊರೆಯುವದು.)

4. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆತಕ್ಕೆ  ಅವಕಾಶ ( Scope for withdrawl  from  Investment)       ಹೂಡಿಕೆಯ  ಹಿಂತೆಗೆತಕ್ಕೆ  ಅವಕಾಶ  ಮೂರು ವÀರ್ಷಗಳ ನಂತರ ಇದೆ, ಹಿಂತೆಗೆತದ ವಿಧಾನ ಸುಲಭವಾಗಿದೆ.

5. ಆವಧಿಗೆ  ಮುಂಚೆ  ಹೂಡಿಕೆಯ ಹಣ ಹಿಂತೆಗೆದರೆ ದಂಡ.  (Penalty for withdrawl  from  Investment)   ತೀರ ಪ್ರಾರಂಭದಲ್ಲಿ ಹೆಚ್ಚಿನ ಹಾನಿ ಅನುಭವಿಸುವರು,ತೀರ ಕೊನೆಯಲ್ಲಿ ತಕ್ಕ ಮಟ್ಟಿನ ಹಾನಿ ಅನುಭವಿಸುವರು,

6. ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment)    
    ಗಳಿಕೆಯ ದರದಲ್ಲಿ ಸಂಭವನೀಯ ಹೊಯ್ದಾಟ ಇರುವದಿಲ್ಲ. ಹೂಡಿಕೆಯ ಹೊಣೆಯನ್ನು ಕಂಪನಿಯೇ ತೆಗೆದು ಕೊಳ್ಳುತ್ತದೆ.

7. ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ (Scope for changes in  Investment)   ಸಾಮಾನ್ಯವಾಗಿ ಇಲ್ಲಾ. ಕೆಲವು ಪಾಲಿಸಿಗಳಲ್ಲಿ, ಇನ್ನೊಂದು ಬಗೆಯ ವಿಮೆಗೆ ಬದಲಾಯಿಸಬಹುದು.

Tuesday, November 4, 2014

4 ನವ್ಹಂಬರ್ 2014

ಜನಪ್ರಿಯ ಉಳಿತಾಯದ ಸರಕುಗಳು ಯಾವುವು? 

1) ಜೀವ ವಿಮೆಯ ಸಾಂಪ್ರದಾಯಕ ಯೋಜನೆಗಳು. (Traditional Life Insurance Plans)      
2) ಜೀವ ವಿಮೆಯ ಯುಲಿಪ್ ಯೋಜನೆಗಳು. (Unit linked Life Insurance Plans)         
3) ಜೀವ ವಿಮೆಯ ವರ್ಷಾಶನ ಯೋಜನೆಗಳು. (Annuity  Insurance Plans)           
4) ಬ್ಯಾಂಕ ಠೇವಣಿಗಳು. (Bank Deposits)      
5) ಪೋಸ್ಟ ಆಫೀಸ ಉಳಿತಾಯಗಳು. (Post office savings)     
6) ಬಾಂಡ್ ಮಾರುಕಟ್ಟೆ ಸರಕುಗಳು. (Bond market products)      
7) ಶೇರು ಮಾರುಕಟ್ಟೆ ಸರಕುಗಳು. (Share market products)     
8) ಮ್ಯೂಚುವಲ್ ಫಂಡಗಳು. (Mutual Funds.)
9) ಖಾಲೀ ನಿವೇಶನ/ ಬೆಳ್ಳಿ ಬಂಗಾರ/ ಕಲಾತ್ಮಕ ವಸ್ತುಗಳಲ್ಲಿ ಹೂಡಿಕೆಗಳು.
( Investment in vacant sites/ gold or silver/ Art pieces)
        ಈ ಎಲ್ಲ ಸರಕುಗಳ ಸಂಕ್ಷಿಪ್ತ ವಿವರಣೆಗಳು ಮುಂದಿನಂತಿವೆ.    

Monday, November 3, 2014

3 ನವ್ಹಂಬರ್ 2014

ಉಳಿತಾಯ ಸರಕುಗಳನ್ನು ತಿಳಿದುಕೊಳ್ಳ ಬೇಕಾದರೆ ಯಾವ ಆಧಾರಗಳ ಮೇಲೆ ವಿಶ್ಲೇಷಿಸಬೇಕು?

   ಉಳಿತಾಯ ಸರಕುಗಳ ವಿಶ್ಲೇಷಣೆ (Analysis) ಯನ್ನು ಕೆಳಗಿನಂತೆ ಮಾಡಬಹುದು.

ಹೂಡಿಕೆಯ ರೀತಿ (Investment  style) : ಒಂದೇ ಕಂತಿನಲ್ಲಿಯೋ? ನಿರಂತರವಾದ ಕಂತುಗಳಲ್ಲಿಯೋ?

ಹೂಡಿಕೆಯ ಆದಾಯದ ರೀತಿ  :  ಆದಾಯ, ಹಂತ ಹಂತವಾಗಿ ದೊರೆಯುವದೋ? ಅಥವಾ ಇಡೀ     ( Income style of Investment)   ಅವಧಿ ಮುಗಿದ ನಂತರ ಒಮ್ಮೆಲೇ ದೊರೆಯುವದೋ?   ಹಂತ ಹಂತವಾಗಿ ದೊರೆಯುವಂತಿದ್ದರೆ, ಆ ಆದಾಯದ  ಪ್ರಾರಂಭ ಕೂಡಲೇ ಪ್ರಾರಂಭವಾಗುವದೋ ಅಥವಾ ಕೆಲ ಸಮಯದ ನಂತರ ಪ್ರಾರಂಭವಾಗುವದೋ?

ಹೂಡಿಕೆಯ ಆದಾಯದ ಖಚಿತತೆ      : ಆದಾಯಕ್ಕೆ ಖಾತ್ರಿ ಇದೆಯೋ, ಇಲ್ಲವೋ?
( Guarantee for income from  Investment)    

ಹೂಡಿಕೆಯ ಹಿಂತೆಗೆತಕ್ಕೆ ಅವಕಾಶ     : ಅವಧಿಗೆ ಮುಂಚೆ ಹಿಂತೆಗೆತಕ್ಕೆ ಅವಕಾಶ ಇದೆಯೋ,       ( Scope for withdrawl  from  Investment)   ಇಲ್ಲವೋ? ಇದ್ದರೆ ಆ ದಾರಿ ಸುಲಭವೋ, ಕಷ್ಟವೋ?

ಹೂಡಿಕೆಯಲ್ಲಿ ಹಿಂತೆಗೆತಕ್ಕೆ ತಪ್ಪು ದಂಡ  :    ಅವಧಿಗೆ ಮುಂಚೆ ಹಿಂತೆಗೆತಕ್ಕೆ ಅವಕಾಶ ಇದ್ದರೆ,    (Penalty for withdrawl  from  Investment) ನೀಡಬೇಕಾದ ತಪ್ಪು ದಂಡ.                             

ಹೂಡಿಕೆಯಲ್ಲಿ  ಅಪಾಯ ಮಟ್ಟ  : ಹೂಡಿಕೆಯಲ್ಲಿ  ಅಪಾಯ ಮಟ್ಟವನ್ನು ಯಾರು ನಿರ್ಧರಿಸಬೇಕು?
(risk in investment)    

ಹೂಡಿಕೆಯಲ್ಲಿ ಬದಲಾವಣೆಗೆ ಆಸ್ಪದ   : ಸುಲಭವಾಗಿ ಬದಲಾವಣೆಗೆ ಆಸ್ಪದ ಇದೆಯೋ ಇಲ್ಲವೋ?  
                             (Scope for changes in  Investment)

Sunday, November 2, 2014

2 ನವ್ಹಂಬರ್ 2014

ಹೂಡಿಕೆಗೆ ದೊರಕುವ ಉಳಿತಾಯದ ಹಣ ಯಾವ ಸಂಗತಿಗಳ ಮೇಲೆ ಅವಲಂಬಿತವಾಗಿದೆ?

ಹೂಡಿಕೆಗೆ ದೊರಕುವ ಉಳಿತಾಯದ ಹಣ ಕೆಳಗಿನ ಸಂಗತಿಗಳ ಮೇಲೆ ಅವಲಂಬಿತವಾಗಿz.É 
ವ್ಯಕ್ತಿಯ ಆದಾಯ ಹಾಗೂ ಆತನ ಜೀವನ ಪದ್ಧತಿ (life style)  .
ಆತನ ಅವಲಂಬಿತರ ಸಂಖ್ಯೆ. (Number of dependents)
ಆತನ ಬಳಿಯಲ್ಲಿರುವ ಆಸ್ತಿ/ಹೊರೆ/ಸಾಲಗಳು (Assets/Liabilitues/Loans).

Saturday, November 1, 2014

1 ನವ್ಹಂಬರ್ 2014

ಯಶಸ್ವೀ ಹೂಡಿಕೆ  (successful investment) ಯ ಮಾರ್ಗದರ್ಶಿ ಸೂತ್ರಗಳು (Guidelines) ಯಾವುವು?

ಯಶಸ್ವೀ ಹೂಡಿಕೆಯ ಮಾರ್ಗದರ್ಶಿ ಸೂತ್ರಗಳು :
ಬೇಡಿಕೆಗಳ ಪೂರೈಕೆಗೆ ಲಭ್ಯವಿರುವ ಹೂಡಿಕೆಯ ಆವಧಿ ತಿಳಿದುಕೊಳ್ಳುವದು.
ಹೂಡಿಕೆ ಲಭ್ಯವಿರುವ ಉಳಿತಾಯದ ಹಣ ತಿಳಿದುಕೊಳ್ಳುವದು.
ಸಧ್ಯಕ್ಕೆ ಬಳಿಯಲ್ಲಿರುವ ಆಸ್ತಿ/ಹೊರೆ/ಸಾಲಗಳ ವಿವರಗಳನ್ನು ತಿಳಿದುಕೊಳ್ಳುವದು.