Sunday, November 30, 2014

30 ನವ್ಹಂಬರ್ 2014

 ವರ್ಷಾಶನ (Annuity)  ದ ಪ್ರಕಾರಗಳು ಯಾವುವು?

ವರ್ಷಾಶನದ ಪ್ರಕಾರಗಳು ಕೆಳಗಿನಂತಿವೆ.

1) ಕೂಡಲೇ ಪ್ರಾರಂಭವಾಗುವ ವರ್ಷಾಶನಗಳು (Immediate Annuity). ಈ ರೀತಿಯ ವರ್ಷಾಶನ ಪಾಲಿಸಿಗಳನ್ನು ಒಂದು ದೊಡ್ಡ ಮೊತ್ತದ ಹಣದಿಂದ ಖರೀದಿಸಿ, ತದ ನಂತರ ಕೂಡಲೇ ಆಜೀವ ಪರ್ಯಂತ ಚಿಕ್ಕ ಮೊತ್ತದ ವರ್ಷಾಶನಗಳನ್ನು ಪಡೆಯುವರು.

2) ಮುಂದೂಡಿದ ವರ್ಷಾಶನಗಳು (Deferred Annuity). ಈ ರೀತಿಯ ವರ್ಷಾಶನ ಪಾಲಿಸಿಗಳಲ್ಲಿ, ಆಜೀವ ಪರ್ಯಂತ ಚಿಕ್ಕ ಮೊತ್ತದ ವರ್ಷಾಶನಗಳನ್ನು ಕೂಡಲೇ ಪಡೆಯದೇ. ಒಂದು ನಿರ್ಧಿಷ್ಠ ಅವಧಿ ಮಗಿದ ನಂತರ ವರ್ಷಾಶನಗಳನ್ನು ಪಡೆಯಲು ಪ್ರಾರಂಭಿಸುವರು. ಈ ನಿರ್ಧಿಷ್ಠ ಅವಧಿಗೆ ಮುಂದೂಡಿದ ಅವಧಿ (Deferment Period) ಎಂದು ಕರೆಯುವರು. ವರ್ಷಾಶನ ಸೌಲಭ್ಯಗಳ ಖರೀದಿ ಬೆಲೆ (Purchase Price) ಯನ್ನು ಪಾಲಿಸಿಯನ್ನು ಕೊಳ್ಳುವ ಸಮಯದಲ್ಲಿ ಒಂದೇ ಕಂತಿನಲ್ಲಿ, ಅಥವಾ ಮುಂದೂಡಿದ ಅವಧಿ (Deferment Period )ಯಲ್ಲಿ, 1/3/6/12 ತಿಂಗಳ ಅವಧಿಗಳ ಕಂತುಗಳಲ್ಲಿ ನೀಡಬಹುದು.
ಮುಂದೂಡಿದ ಅವಧಿ (Deferment Period )ಯಲ್ಲಿ ಪಾಲಸಿಧಾರಕ ನಿಧನನಾದರೆ, ಅವನ ವಾರಸುದಾರನು ಕಂತುಗಳನ್ನು ಬಡ್ಡಿ ಸಹಿತ ವಾಪಸು ಪಡೆಯಬಹದು, ಅಥವಾ ಆ ಹಣಕ್ಕೆ ಸರಿಯಾಗಿ ವರ್ಷಾಶನವನ್ನು ಆಯ್ಕೆ ಮಾಡಿಕೊಳ್ಳಬಹುದು. ಮುಂದೂಡಿದ ಅವಧಿಗೆ, ಮೂಲ ಪಾಲಿಸಿಯ ಜೊತೆಗೆ, ವಿವಿಧ ಹೆಚ್ಚುವರಿ ವಿಮಾ ಸೌಲಭ್ಯ(Riders) ಗಳನ್ನು ಖರೀದಿಸಬಹುದು.

No comments:

Post a Comment