Monday, June 30, 2014

30 ಜೂನ 2014

 ಸ್ಥಗಿತಗೊಂಡ ಕೆಳಗಿನ ಪಾಲಿಸಿಯ ಪೇಡ ಅಪ್ ಬೆಲೆ ಲೆಕ್ಕ ಮಾಡಿರಿ?  ಪಾಲಿಸಿಯ ವಿವರಗಳು :


100,000 ರೂ, ವಿಮಾ ಮೊತ್ತದ, 20 ವರ್ಷದ ಎಂಡೋಮೆಂಟ್ ಪಾಲಸಿಯಲ್ಲಿ  4 ವರ್ಷಗಳ ವಿಮಾಕಂತುಗಳ ಸಂದಾಯವಾಗಿ ಈಗಾಗಲೇ 40,000 ರೂ,ಗಳ ಬೋನಸ್ಸು ಜಮೆಯಾಗಿದೆ. ವಾರ್ಷಿಕ ವಿಮಾಕಂತಿನ ದರ  ರೂ. 4950 ಇರುತ್ತದೆ. ಹಾಗಿದ್ದರೆ ಈ ಪಾಲಿಸಿಯ ಪೇಡ ಅಪ್ ಬೆಲೆ ಎಷ್ಟು?
ಉತ್ತರ:              
                                ನೀಡಿದ ವಿಮಾ ಕಂತುಗಳ ಒಟ್ಟಾರೆ ಅವಧಿ
ಪೇಡ್ ಅಪ್ ಮೌಲ್ಯ  = --------------------------- ----------- X ಮೂಲ ವಿಮಾ ಮೊತ್ತ +ಗಳಿಸಿದ ಬೋನಸ್ಸ ಹಣ.
                                    ಪಾಲಿಸಿಯ ಒಟ್ಟಾರೆ ಅವಧಿ
                                              4
ಪೇಡ್ ಅಪ್ ಮೌಲ್ಯ  = ---------------------------  X 100,000 + 16000.
                                               20
ಪೇಡ್ ಅಪ್ ಮೌಲ್ಯ   = 20,000+ 16000.

ಪೇಡ್ ಅಪ್ ಮೌಲ್ಯ   = 36,000 ರೂ.ಗಳು.

------------------------------------------------------------------------------------------------------------


ಸ್ಥಗಿತಗೊಂಡ ಕೆಳಗಿನ ಪಾಲಿಸಿಯ ಪೇಡ ಅಪ್ ಬೆಲೆ ಲೆಕ್ಕ ಮಾಡಿರಿ? ಪಾಲಿಸಿಯ ವಿವರಗಳು :

300,000 ರೂ, ವಿಮಾ ಮೊತ್ತದ,  18 ವರ್ಷದ ಎಂಡೋಮೆಂಟ್ ಪಾಲಸಿಯಲ್ಲಿ  6  ವರ್ಷಗಳ ವಿಮಾಕಂತುಗಳ ಸಂದಾಯವಾಗಿ ಈಗಾಗಲೇ 72,000 ರೂ,ಗಳ ಬೋನಸ್ಸು ಜಮೆಯಾಗಿದೆ. ವಾರ್ಷಿಕ ವಿಮಾಕಂತಿನ ದರ  ರೂ. 17000 ಇರುತ್ತದೆ.  ಹಾಗಿದ್ದರೆ ಈ ಪಾಲಿಸಿಯ ಪೇಡ ಅಪ್ ಬೆಲೆ ಎಷ್ಟು?
ಉತ್ತರ:              
                              ನೀಡಿದ ವಿಮಾ ಕಂತುಗಳ ಒಟ್ಟಾರೆ ಅವಧಿ
ಪೇಡ್ ಅಪ್ ಮೌಲ್ಯ = --------------------------- ----------- X ಮೂಲ ವಿಮಾ ಮೊತ್ತ +ಗಳಿಸಿದ ಬೋನಸ್ಸ ಹಣ.
                                      ಪಾಲಿಸಿಯ ಒಟ್ಟಾರೆ ಅವಧಿ

                                              6
ಪೇಡ್ ಅಪ್ ಮೌಲ್ಯ = ---------------------------  X 3100,000 + 72,000.
                                                18
ಪೇಡ್ ಅಪ್ ಮೌಲ್ಯ  =  100,000+ 72,000.

ಪೇಡ್ ಅಪ್ ಮೌಲ್ಯ  =  172,000 ರೂ.ಗಳು.

Sunday, June 29, 2014

29ಜೂನ 2014


ಪೇಡ ಅಪ್ ಬೆಲೆ (ಪ್ರಾಪ್ತಮೌಲ್ಯ / ನಿಲುಗಡೆ ಮೌಲ್ಯ) :


ನಿಲುಗಡೆಯಾದ ಪಾಲಿಸಿಯ ಮುಖಬೆಲೆಗೆ ಪೇಡ ಅಪ್ ಬೆಲೆ ಎಂದು ಕರೆಯುತ್ತಾರೆ.

ರಿಯಾಯತಿ ಅವಧಿಯ ನಂತರವೂ ಬಾಕೀ ಕಂತನ್ನು ನೀಡಲಾಗದಿದ್ದರೆ ವಿಮಾ ಕರಾರು ರದ್ದಾಗಿ ಪಾಲಿಸಿ ಸ್ಥಗಿತಗೊಳ್ಳುತ್ತದೆ.ಸ್ಥಗಿತಗೊಂಡ ಪಾಲಿಸಿಯಲ್ಲಿ ನೀಡಲಾದ ವಿಮಾಕಂತುಗಳ ಒಟ್ಟಾರೆ ಅವಧಿ 3 ವರ್ಷಗಳಿÀಗಿಂತ ಕಡಿಮೆಯಿದ್ದರೆ, ಆ ಪಾಲಿಸಿಗೆ ರದ್ದುಗೊಂಡ ಪಾಲಿಸಿ ಎಂದು ಕರೆಯುತ್ತಾರೆ. ರದ್ದು ಗೊಂಡ ಪಾಲಿಸಿಯ ಪೇಡ ಅಪ್ ಬೆಲೆ ಶೂನ್ಯವಾಗಿರುತ್ತದೆ.

ಸ್ಥಗಿತಗೊಂಡ ಪಾಲಿಸಿಯಲ್ಲಿ ನೀಡಲಾದ ವಿಮಾಕಂತುಗಳ ಒಟ್ಟಾರೆ ಅವಧಿ ಕನಿಷ್ಠ 3 ವರ್ಷಗಳಿದ್ದರೆ, (ಆ ಪಾಲಿಸಿಗೆ ರದ್ದುಗೊಂಡ ಪಾಲಿಸಿ ಎಂದು ಕರೆಯದೇ)ಪೇಡ್ ಅಪ್ ಪಾಲಿಸಿ ಎಂದು ಕರೆಯುತ್ತಾರೆ. ಪೇಡ್ ಅಪ್ ಪಾಲಿಸಿಯ ಮೌಲ್ಯ ಮೂಲವಿಮಾ ಮೊತ್ತಕ್ಕಿಂತ ಕಡಿಮೆಯಾಗಿರುತ್ತದೆ. ಪೇಡ್ ಅಪ್ ಪಾಲಿಸಿಯ ಮೌಲ್ಯವನ್ನು ಕೆಳಗಿನ ಸೂತ್ರದಿಂದ ಅಳೆಯಲಾಗುತ್ತದೆ.

                                 ನೀಡಿದ ವಿಮಾ ಕಂತುಗಳ ಒಟ್ಟಾರೆ ಅವಧಿ
ಪೇಡ್ ಅಪ್ ಮೌಲ್ಯ = ------------------------------------- -- X  ಮೂಲ ವಿಮಾ ಮೊತ್ತ +(ಗಳಿಸಿದ  ಬೋನಸ್ಸ ಹಣ)
                                        ಪಾಲಿಸಿಯ ಒಟ್ಟಾರೆ ಅವಧಿ
.

Saturday, June 28, 2014

28 ಜೂನ 2014


ರಿಯಾಯತಿ ಅವಧಿ (grace period):


ವಿಮಾ ಕರಾರನ್ನು ಜೀವಂತವಾಗಿಡಲು, ವಿಮಾ ಕಂತಿನ ಬಾಕೀ ದಿನಾಂಕದಂದು ಇಲ್ಲವೆ ಅದಕ್ಕೂ ಮೊದಲೇ ವಿಮಾ ಕಂತನ್ನು ನೀಡಬೇಕು. ಆದರೆ ಬಾಕೀ ದಿನಾಂಕದಂದು ಸಂಬಂದಿಸಿದ ವಿಮಾಕಂತನ್ನು ನೀಡಲಾಗದಿದ್ದರೂ ವಿಮಾ ಕಂಪನಿಯು ಕರಾರನ್ನು ರದ್ದುಗೊಳಿಸದೆ ಮುಂದೆ ಕೆಲ ಅವಧಿಯವರೆಗೆ ಕರಾರನ್ನು ಜೀವಂತವಾಗಿಡುತ್ತದೆ. ಈ ಅವಧಿಗೆ ರಿಯಾಯತಿ ಅವಧಿ ಎನ್ನುತ್ತಾರೆ. ರಿಯಾಯತಿ ಅವಧಿಯೊಳಗೆ ಮರಣಸಂಭವಿಸಿದರೆ ಪೂರ್ಣ ವಿಮಾಮೊತ್ತದಲ್ಲಿ ಬಾಕಿ ವಿಮಾ ಕಂತಿನ ಹಣಕಳೆದು ಪರಿಹಾರವನ್ನು ನಿಡುತ್ತಾರೆ.

ರಿಯಾಯತಿ ಅವಧಿ ಸಾಮಾನ್ಯವಾಗಿ 1 ತಿಂಗಳಿಗೆ (ಕನಿಷ್ಢ 30 ದಿನಗಳಿಗೆ) ಸಮನಾಗಿರುತ್ತದೆ.
ಅದು ಮೊದಲ ಬಾಕೀ ಕಂತಿನ ದಿನಾಂಕದ ಮರುದಿನದಿಂದ ಪ್ರಾರಂಭವಾಗುತ್ತದೆ.
ರಿಯಾಯತಿ ಅವಧಿಯ ಕೊನೆಯ ದಿನ ರಜೆಯ ದಿನವಾಗಿದ್ದರೆ, ಅದರ ನಂತರ ಕೂಡಲೇ ಬರುವ ಕೆಲಸದ ದಿನಕ್ಕೂ
        ರಿಯಾಯತಿ ಅವಧಿ ಮುಂದುವರೆಯುತ್ತದೆ.
ರಿಯಾಯತಿ ಅವಧಿಯು ಕೊನೆಯ ದಿನದ ಮಧ್ಯರಾತ್ರಿ 12ಕ್ಕೆ ಕೊನೆಗೊಳ್ಳುತ್ತದೆ.

Friday, June 27, 2014

27 ಜೂನ 2014

ಆಯ್.ಆರ್.ಡಿ.ಏ. ಯ ನಿಯಮಾವಳಿಗಳ ಪ್ರಕಾರ ಪಾಲಿಸಿ ಬಾಂಡಿನಲ್ಲಿ ಕಡ್ಡಾಯವಾಗಿ ನಮೂದಿಸಲೇ ಬೇಕಾದ ಸಂಗತಿಗಳು :

ವಿಮಾಕಂತಿನ ಅವಧಿಗಳ ರೀತಿಗಳು, ವಿಮಾಕಂತು ನೀಡಿಕೆಯ ವಿಧಾನಗಳು, ಅನಕೂಲತೆಗಳು.
ಪಾಲಿಸಿಯ ಸೇವೆ/ವಿಚಾರಣೆಗಳ ಬಗ್ಗೆ ಸಂಪರ್ಕಿಸಬೇಕಾದ ವ್ಯಕ್ತಿ ಅಥವಾ ಕಚೇರಿಯ ವಿವರ.
ವಿಳಾಸ ಬದಲಾವಣೆ/ನಾಮೀನೇಶನ್‍ದ ಮಹತ್ವದ ಬಗ್ಗೆ ತಿಳುವಳಿಕೆ.
ದೂರು/ತೊಂದರೆಗಳ ಬಗ್ಗೆ ಮಾಡಬೇಕಾದ ವಿಧಾನಗಳ ಬಗ್ಗೆ,
ವಿಮಾ ಲೋಕಪಾಲ (Insurance - ombudsman)ನ ವಿಳಾಸ ಹಾಗೂ ಮಾಹಿತಿಗಳ ಬಗ್ಗೆ.

Thursday, June 26, 2014

26ಜೂನ 2014


ಪಾಲಸಿ ಬಾಂಡಿನಲ್ಲಿ  ಕೆಳಗಿನ ವಿವರಗಳು ಕಾಣಲು ಸಿಗುತ್ತವೆ.



1)    ತಲೆ ಬರಹ (Heading) : ಸಂಸ್ಥೆಯ ಹೆಸರು, ಚಿಹ್ನೆ, ವಿಳಾಸ.

2) ಪೀಠಿಕೆ (Preamble) : ಕೋರಿಕೆ ಪತ್ರ ಹಾಗೂ ಕೋರಿಕೆದಾರನ ಘೋಷಣೆಗಳೇ ಕರಾರಿಗೆ ತಳಹದಿ ಎಂದು ಹೇಳುತ್ತದೆ.

3) ಕರಾರು ಚಾಲನೆಯ ಶರ್ಯತ್ತುಗಳು (operative clauses) :ಕೋರಿಕೆದಾರನಿಂದ ವಿಮಾ ಕಂತು ನೀಡುವದು,  ವಿಮಾ             ಘಟನೆ ಸಂಭವಿಸಿದಾಗ   ಒಪ್ಪಿಗೆದಾರನಿಂದ ವಿಮಾಪರಿಹಾರ ನೀಡುವದು ಕರಾರಿನಲ್ಲಿ ಪಾಲಿಸ ಬೇಕಾದ ನಿಯಮಗಳು           ಎಂದು ಹೇಳುತ್ತದೆ.

4) ಪ್ರಾವಧಾನಗಳು (Proviso) : ಕರಾರಿನ ಸಾಮಾನ್ಯ ಸಂಗತಿಗಳು ಉದಾ : ಭರವಸೆಯ ಸರಂಡರ್ ಮೌಲ್ಯ ,      
        ನಾಮೀನೇಶನ್, ಅಸೈನಮೆಂಟ್, ಪಾಲಸಿ ಆಧಾರದ ಮೇಲೆ ಸಿಗುವ ಸಾಲ, ಇತ್ಯಾದಿ.

5) ಕೋಷ್ಟಕ (Sheಜuಟe) : ಪಾಲಸಿಧಾರಕನ ವ್ಯಕ್ತಿಗತ ವಿವರಗಳನ್ನು ಇಲ್ಲಿ ನೀಡಲಾಗುವದು. ಉದಾ : ಪಾಲಸಿಯ  
       ನಂಬರು, ಮೂಲ ವಿಮಾ ಮೊತ್ತ,  ಪಾಲಸಿಯ ಅವಧಿಯ ಪ್ರಾರಂಭದ ದಿನಾಂಕ, ಪಾಲಸಿಯ ಅವಧಿಯ
       ಕೊನೆಯದಿನಾಂಕ: ವಿಮಾ ಕಂತಿನ ಹಣ,  ವಿಮಾ ಕಂತಿನ ಅವಧಿ, ಪ್ರಾರಂಭದ ವಿಮಾ ಕಂತಿನ ದಿನಾಂಕ, ಕೊನೆಯ
       ವಿಮಾ ಕಂತಿನ ದಿನಾಂಕ; ವಿಶೇಷ ಶರ್ಯತ್ತುಗಳು, ಹೆಚ್ಚುವರಿ ಸೌಲಭ್ಯಗಳ ವಿವರಗಳು, ದೊರಕಲಾರದ ಸೌಲಭ್ಯಗಳು,
       ತಾತ್ಕಾಲಿಕ ಹೊರೆ ಅಂದರೆ ಲೀನ್.

6) ಧೃಡೀಕರಣ (attestation): ಕರಾರಿಗೆ ಅಧಿಕಾರಿಯ ಹಸ್ತಾಕ್ಷರ, ಕರಾರಿನ ಸ್ಥಳ, ದಿನಾಂಕ.

7) ಶರ್ಯತ್ತುಗಳು,ಸೌಲಭ್ಯಗಳು ಹಾಗೂ ನಿಯಮಗಳು ( Terms & conditions, Previledges & conditions) :
        ವಯಸ್ಸಿನ ಅಂಗೀಕಾರ, ಕಂತು ನೀಡದಿದ್ದರೆ ಆಗುವ ಪರಿಣಾಮಗಳು, ಸಾಲದ ನಿಯಮಗಳು, ಸೌಲಭ್ಯ ಸಿಗದಂತೆ  
         ಮಾಡುವ ಘಟನೆಗಳು – (ಉದಾ : ಆತ್ಮ ಹತ್ಯೆ), ಇತ್ಯಾದಿಗಳ ಬಗ್ಗೆ.

8) ಒಕ್ಕಣಿಕೆಗಳು (Endorsements) :ನಾಮೀನೇಶನ್/ಅಸೈನಮೆಂಟ್‍ಗಳ ಬದಲಾವಣೆ, ರದ್ದತಿ, ಇತರ ಸಂಗತಿಗಳು.

Wednesday, June 25, 2014

25ಜೂನ 2014


ವಿಮಾ ಪರಿಹಾರ ಕೋರಿಕೆ ಸಲ್ಲಿಸುವಾಗ ಕಡ್ಡಾಯವಾಗಿ ನೀಡಬೇಕಾದ ದಾಖಲೆಗಳು :



1) ಮೂಲ ಪಾಲಿಸಿ ಬಾಂಡ್.
2) ಕೊನೆಗೆ ನೀಡಲಾದ ವಿಮಾ ಕಂತಿನ ರಸೀದಿ.
3) ಡಿಸ್‍ಚಾರ್ಜ್ ಫಾರ್ಮ ಹಾಗೂ ಮುಂಗಡ ಪಾವತಿ..
4) ಮರಣ ದಾಖಲಾತಿ ಪತ್ರ ( ವಿಮಾ ಜೀವಿ ಮರಣಹೊಂದಿದ್ದರೆ)

Tuesday, June 24, 2014

24 ಜೂನ 2014


ಪ್ರಾಸ್ಪೆಕ್ಟಸ್ ಎಂದರೇನು?



ವಿಮಾ ಕರಾರಿನಲ್ಲಿ ತಾನು ಗ್ರಾಹಕನಿಗೆ ನೀಡಬಹುದಾದ/ನೀಡಲಾಗದ ಎಲ್ಲ ಸೌಲಭ್ಯಗಳನ್ನು/ ಸಂದರ್ಭಗಳನ್ನು  ಸ್ಪಷ್ಟವಾಗಿ, ವಿವರವಾಗಿ ತಾನು ಹೊರತಂದ ಪ್ರಾಸ್ಪೆಕ್ಟಸ್ ಪುಸ್ತಕದಲ್ಲಿ ಪ್ರಕಾಶನಗೊಳಿಸುತ್ತದೆ. ಅಯ್.ಆರ್.ಡಿ.ಎ. ಯ ಪಾಲಸಿಧಾರಕರ ಹಿತಾಸಕ್ತಿಗಳ ರಕ್ಷಣೆ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ವಿಮಾ ಸಂಸ್ಥೆಯು ತಾನು ಪ್ರಕಟಿಸಬೇಕಾದ ಪ್ರಾಸ್ಪೆಕ್ಟಸ್‍ದಲ್ಲಿ ಕೆಳಗಿನ ಸಂಗತಿಗಳನ್ನು ಕಡ್ಡಾಯವಾಗಿ ತೋರಿಸಲೇ ಬೇಕು.

1) ವಿಮಾ ಕರಾರಿನಲ್ಲಿ ನೀಡಲಾಗುವ ಸೌಲಭ್ಯಗಳ ವ್ಯಾಪ್ತಿ.
2) ವಿಮಾ ಕರಾರಿನಲ್ಲಿ ವಿಧಿಸಲಾಗುವ ಶರ್ಯತ್ತುಗಳು/ನಿಯಮಗಳು/ವಾರಂಟಿಗಳು.
3) ವಿಮಾ ಕರಾರಿನಲ್ಲಿ ಪ್ರಾಪ್ತವಾಗುವ ಹಕ್ಕುಗಳು ಹಾಗೂ ಅಪವಾದಗಳು.
4) ವಿಮಾ ಕರಾರಿನಲ್ಲಿ ಪ್ರಾಪ್ತವಾಗುವ ಬೋನಸ್ಸಗಳ ವಿವರಗಳು, ಹಾಗೂ ಇತರ ಸಂಗತಿಗಳು.

Monday, June 23, 2014

23 ಜೂನ 2014


ಪಾಲಸಿಧಾರಕರಿಗೆ ವಿಮಾಕಂಪನಿಯು ಕೆಳಗಿನ ಸಂದರ್ಭಗಳಲ್ಲಿ ನೋಟೀಸುಗಳನ್ನು ಕಳಿಸುತ್ತದೆ.



ಬಾಕೀ ಆದ ವಿಮಾಕಂತುಗಳ/ಸಾಲ ಹಾಗೂ ಬಡ್ಡಿಯ ಹಣ ನೀಡುವದಕ್ಕೆ ನೆನಪಿಸಲು,
ಸ್ಥಗಿತಗೊಂಡ ಪಾಲಿಸಿ ((lapsed policy)ಯನ್ನು ಪನರಾರಂಭಿಸುವದಕ್ಕೆ ವಿನಂತಿಸಲು,
ಜೀವಿತ ಸೌಲಭ್ಯ (Survival benefits)/ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು,
ಹೊಸದಾಗಿ ಗಳಿಸಿದ ಬೋನಸ್ಸಿನ ವಿವರ ತಿಳಿಸಲು,
ಯುಲಿಪ್ ಪಾಲಿಸಿಗಳಲ್ಲಿ ನಿಧಿಯ ಬಗ್ಗೆ ವಾರ್ಷಿಕ ಸ್ಟೇಟಮೆಂಟ್ ಕಳಿಸಲು.

Sunday, June 22, 2014

22 ಜೂನ 2014


ವಿಮಾ ಒಕ್ಕಣಿಕೆ (Endorsement  -ಎಂಡಾರ್ಸ್ ಮೆಂಟ್) :



 ದೊಡ್ಡ ಸಂಖ್ಯೆಯಲ್ಲಿರುವ ಸಾಮಾನ್ಯ ಪಾಲಸಿಧಾರಕರ ಸಲುವಾಗಿ ಒಂದೇ ತೆರನಾದ ನಿಯಮಗಳನ್ನು ಅಳವಡಿಸಿದ ಮಾದರಿ ಪಾಲಿಸಿ ಬಾಂಡ್‍ನ್ನು ಅಚ್ಚು ಹಾಕಿಸಿ ಪಾಲಸಿಧಾರಕರಿಗೆ ನೀಡಲು ಉಪಯೋಗಿಸುತ್ತಾರೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಕೆಲವು ಪಾಲಿಸಿಧಾರಕರಿಗೆ ಒಂದರೆಡು ನಿಯಮಗಳಲ್ಲಿ ತಿದ್ದುಪಡಿಯನ್ನು ಮಾಡುವ ಪ್ರಸಂಗ ಒದಗುತ್ತದೆ. ಇಂತಹ ತಿದ್ದುಪಡಿಗಳನ್ನು ಪಾಲಸಿಬಾಂಡಿನ ಖಾಲೀ ಸ್ಥಳದಲ್ಲಿ ಒಕ್ಕಣಿಕೆ (Endorsement )ಯನ್ನು ನಮೂದಿಸುವ ಮೂಲಕ ಕೈಕೊಳ್ಳಲಾಗುತ್ತದೆ.

ನಾಮೀನೇಶನ್, ಅಸೈನಮೆಂಟಗಳ ಮೂಲಕ ಪಾಲಸಿ ಹಕ್ಕುದಾರರಲ್ಲಿ ಉಂಟಾದ ಬದಲಾವಣೆಗಳನ್ನೂ ಪಾಲಸಿ ಬಾಂಡನಲ್ಲಿರುವ ಖಾಲೀ ಸ್ಥಳದಲ್ಲಿ, ಒಕ್ಕಣಿಕೆ (Endorsement)ಯ   ಮುಖಾಂತರ ನಮೂದಿಸುತ್ತಾರೆ.

Saturday, June 21, 2014

21 ಜೂನ 2014


ಉಚಿತ ನಿರೀಕ್ಷಣಾ ಅವಧಿ - ಅಥವಾ ಕೂಲಿಂಗ ಆಫ್ ಅವಧಿ (Free look in period - or Cooling off period) :



ರದ್ದುಗೊಳಸಿದ ಕರಾರಿನಲ್ಲಿ ಸಂದಾಯವಾದ ವಿಮಾಕಂತುಗಳನ್ನು ಗ್ರಾಹಕನಿಗೆ ಮರಳಿಸುವ ಅವಕಾಶ ಇಲ್ಲಾ. ಆದರೆ ಇದಕ್ಕೆ ಅಪವಾದವೆಂಬಂತೆ ಉಚಿತ ನಿರೀಕ್ಷಣಾ ಅವಧಿ (ಅಥವಾ ಕೂಲಿಂಗ ಆಫ್ ಅವಧಿ)ಯಲ್ಲಿ ವಿಮಾ ಕರಾರನ್ನು ರದ್ದುಗೊಳಿಸಿ ಸಂದಾಯವಾದ ವಿಮಾಕಂತುಗಳನ್ನು ಮರಳಿ ವಾಪಸು ಪಡೆಯುವ ಸ್ವಾತಂತ್ರ್ಯ ಪಾಲಸಿಧಾರಕನಿಗೆ ನೀಡಲಾಗಿದೆ.

ಉಚಿತ ನಿರೀಕ್ಷಣಾ ಅವಧಿ (Free look in period) 15 ದಿನಗಳಷ್ಟಾಗಿದೆ. ಹಾಗೂ ಅದು ವಿಮಾ ಪಾಲಿಸಿ ಬಾಂಡ್ ಗ್ರಾಹಕನ ಕೈಸೇರಿದ ದಿನದಿಂದ ಪ್ರಾರಂಭವಾಗುತ್ತದೆ. ಈ ಯೋಜನೆಯಲ್ಲಿ ಪಾಲಿಸಿ ರದ್ದುಗೊಳಿಸಿ ಸಂದಾಯವಾದ ವಿಮಾಕಂತುಗಳನ್ನು ಮರಳಿ ವಾಪಸು ನೀಡುವಾಗ, ಅಲ್ಲಿಯವರೆಗಿನ ಅವಧಿಗೆ ತಗಲಬಹುದಾಗ ಅವಧಿ ವಿಮೆಯ ಶುಲ್ಕದ ಹಣ, ಮೆಡಿಕಲ್ ಫೀ ಹಣ, ಪಾಲಸಿ ಬಾಂಡ್ ತಯಾರಿಕೆಯ ವೆಚ್ಚದ ಹಣಗಳನ್ನು ಕಳೆದು ಉಳಿದ ಹಣವನ್ನು ಕಂಪನಿ ನೀಡುತ್ತದೆ.

Friday, June 20, 2014

20 ಜೂನ 2014


ವಿಮಾ ಕಂತು ಪಾವತಿಗಳ ವಿವಿಧ ನಮೂನೆಗಳು :



1) ಮೊದಲ ವಿಮಾ ಕಂತಿನ ರಸೀದಿ - First Premium Receipt:
ಮೊದಲ ವಿಮಾ ಕಂತಿಗೆ ನೀಡಲಾದ ಹಣದ ಪಾವತಿ. ಮೊದಲ ಕಂತಿನ ರಸೀದಿ ನೀಡಿದ ಸಮಯದಿಂದ ವಿಮಾಕರಾರು ಅಸ್ತಿತ್ವದಲ್ಲಿ ಬರುತ್ತದೆ.

2)  ಮುಂದುವರೆಸ ಬಹುದಾದ ಮೊದಲ ವರ್ಷದ ವಿಮಾ ಕಂತಿನ ರಸೀದಿ - First Year Renewal Premium Receipt:
ಒಂದನೆಯ ಕಂತು ಬಿಟ್ಟು, ಮೊದಲ ವರ್ಷದಲ್ಲಿ ಉಳಿದ ವಿಮಾ ಕಂತುಗಳಿಗೆ ನೀಡಲಾದ ಹಣದ ಪಾವತಿ.

3) ಮುಂದುವರೆಸಬಹುದಾದ ವಿಮಾ ಕಂತಿನ ರಸೀದಿ -  Renewal   Premium Receipt :  ಎರಡನೆಯ/ಹಾಗೂ ನಂತರದ ವರ್ಷಗಳ  ವಿಮಾ ಕಂತುಗಳಿಗೆ ನೀಡಲಾದ ಹಣದ ಪಾವತಿ.

ಮೇಲೆ ಕಾಣಿಸಿದ ಮೂರೂ ನಮೂನೆಯ ವಿಮಾ ರಸೀದಿಗಳಲ್ಲಿ ಕೆಳಗಿನ ಮಾಹಿತಿಗಳು ಇರುತ್ತವೆ.

1) ಗ್ರಾಹಕನ ಹೆಸರು ಹಾಗೂ ವಿಳಾಸ.
2) ಪಾಲಿಸಿ ಸಂಖ್ಯೆ.
3) ಮೂಲ ವಿಮಾ ಮೊತ್ತ.
4) ವಿಮಾ ಕಂತಿನ ಹಣ.
5) ವಿಮಾ ಕಂತಿನ ಅವಧಿಯ ನಮೂನೆ.
6) ಸಧ್ಯದ ಕಂತು ಬಾಕೀ ಆದ ದಿನಾಂಕ.
7) ಮುಂದಿನ ಕಂತಿನ ಬಾಕೀಯಾಗುವ ದಿನಾಂಕ.
8) ಕೊನೆಯ ಕಂತು ಬಾಕೀಯಾಗುವ ದಿನಾಂಕ.

Thursday, June 19, 2014

19 ಜೂನ 2014


ವಿಮಾಕಂತು ನೀಡಿಕೆಯ ರೀತಿಗಳು :



ವಿಮಾ ಕಂತುಗಳನ್ನು ಕೆಳಗಿನ ರೀತಿಯಲ್ಲಿ ನೀಡಬಹುದು.
1) ರೋಖ ಹಣದ ಮೂಲಕ. (ರೂ. 49,999 ರವರೆಗೆ ಮಾತ್ರ)
2) ಚೆಕ್/ಡಿ.ಡಿ./ಪೋಸ್ಟಲ್ ಆರ್ಡರ್/ಮನೀ ಆರ್ಡರ್ ಮೂಲಕ.
3) ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ.
4) ಆನ್ ಲಾಯಿನ್ ಮೂಲಕ.

Wednesday, June 18, 2014


18 ಜೂನ 2014


‘ನಿಮ್ಮ ಗ್ರಾಹಕರನ್ನು ಗುರುತಿಸು’-ಕೆ.ವಾಯ್.ಸಿ.(Know your Customer -KYC) ವಿಧಾನವನ್ನು ಯಾಕೆ ಪಾಲಿಸಬೇಕು?



ಕಪ್ಪು ಹಣ ಶುದ್ಧೀಕರಣ ವಿರೋಧಿ / ಆರ್ಥಿಕ ಭಯೋತ್ಪಾದನಾ ವಿರೋಧಿ (Anti Money Laundering –AML / Combating  Financing of Terrorism - CFT )ಮಾರ್ಗದರ್ಶಿ ಸೂತ್ರ (Guidelines) ಗಳ ಪ್ರಕಾರ, ‘ನಿಮ್ಮ ಗ್ರಾಹಕರನ್ನು ಗುರುತಿಸು’ (ಕೆ.ವಾಯ್.ಸಿ.) ವಿಧಾನವನ್ನು ಪಾಲಿಸುವದು ಆರ್ಥಿಕ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.

Tuesday, June 17, 2014

17 ಜೂನ 2014


‘ನಿಮ್ಮ ಗ್ರಾಹಕರನ್ನು ಗುರುತಿಸು’ ಕೆ.ವಾಯ್.ಸಿ. ವಿಧಾನದಲ್ಲಿ ಸಲ್ಲಿಸ ಬೇಕಾದ ದಾಖಲೆಗಳು :



1) ವಯಸ್ಸಿನ ದಾಖಲೆ ಪತ್ರ (Age proof).
2) ಗುರುತಿನ ದಾಖಲೆ ಪತ್ರ. (Identity proof).
3) ವಿಳಾಸದ ದಾಖಲೆ ಪತ್ರ. (Address proof).
4)  ಆದಾಯ ದಾಖಲೆ ಪತ್ರ. (Income proof).
5)  ಫೋಟೋ ಪ್ರತಿ (ಅವಶ್ಯವೆನಿಸಿದರೆ.)

Monday, June 16, 2014

16ಜೂನ 2014

ವಯಸ್ಸಿನ ಅಂಗೀಕಾರ (Age admission)ಕ್ಕೆ ಸ್ವೀಕರಿಸಲಾಗುವ ದಾಖಲೆ (proof)ಗಳು:


ವಯಸ್ಸಿನ ಅಂಗೀಕಾರಕ್ಕೆ ಸ್ವೀಕರಿಸಲಾಗುವ ದಾಖಲೆಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಬಹುದು.

1) ಉಚ್ಚಮಟ್ಟದ ವಯಸ್ಸಿನ ದಾಖಲೆಗಳು. (Standard Age Proof)
        ಶಾಲಾ ಪ್ರಮಾಣಪತ್ರ.
        ಜನನ/ಮರಣ, ಮುನಸಿಪಾಲಟಿ ಅಧಿಕಾರಿಗಳು ನೀಡಿದ ಪ್ರಮಾಣಪತ್ರ.
        ಪಾಸ್ ಪೋರ್ಟ.
        ಪ್ಯಾನ್ ಕಾರ್ಡ್
        ಬಾಪ್ಟಿಸಮ್/ರೋಮನ್ ಚರ್ಚ್ ವಿವಾಹ ಪ್ರಮಾಣಪತ್ರ.
        ಫ್ಯಾಮಿಲಿ ಬೈಬಲ್‍ದಲ್ಲಿಯ ದಾಖಲಾತಿ ಪ್ರತಿ,
        ರಕ್ಷಣಾ ಇಲಾಖೆಯವರ ಗುರುತಿನ ಚೀಟಿ.

2) ಉಚ್ಚಮಟ್ಟವಲ್ಲದ ವಯಸ್ಸಿನ ದಾಖಲೆಗಳು. (Non-standard Age Proof)
         ಜನನ ಕಾಲದಲ್ಲಿ ತಯಾರಿಸಿದ ಜಾತಕ/ಕುಂಡಲೀ.
         ರೇಶನ್ ಕಾರ್ಡ್.
         ಸ್ವಘೋಷಿತ/ಹಿರಿಯರಿಂದ ಘೋಷಿತ - ಪ್ರತಿಜ್ಞಾಪತ್ರ (affidavit).
          ಗ್ರಾಮ ಪಂಚಾಯಿತಿ ನೀಡಿದ ಪ್ರಮಾಣಪತ್ರ (certificate).

Sunday, June 15, 2014

15 ಜೂನ 2014


ವಿಮಾ ರಕ್ಷಣೆ ಪಡೆಯಬಯಸುವ ಗ್ರಾಹಕ(proposer)  ಅನುಸರಿಸಬೇಕಾದ ವಿಧಾನ :


ವಿಮಾ ರಕ್ಷಣೆ ಪಡೆಯಬಯಸುವ ಗ್ರಾಹಕ(proposer),

ಮೊದಲಿಗೆ ಮುದ್ರಿತ ಕೋರಿಕೆಪತ್ರ (proposal form) ವನ್ನು, ಭರ್ತಿಮಾಡಿ ಕೇಳಿದ ಮಾಹಿತಿಗಳನ್ನು ಪ್ರಾಮಾಣಿಕವಾಗಿ ನೀಡುವದು.

ನೀಡಿದ ಮಾಹಿತಿಗಳನ್ನು ಪುಷ್ಟೀಕರಿಸಲು ಅವಶ್ಯಕ ದಾಖಲೆಗಳನ್ನು ನೀಡುವದು.               
ಉದಾ; ವಯಸ್ಸಿನ ದಾಖಲೆ, ಆದಾಯದ ದಾಖಲೆ, ವಿಳಾಸ/ಗುರುತಿನ ದಾಖಲೆ, ಆರೋಗ್ಯ ದಾಖಲೆ, ಇತ್ಯಾದಿ, ಇತ್ಯಾದಿ.

ಕೊನೆಯಲ್ಲಿ ಘೋಷಣಾ ಪತ್ರ (declaration)ಕ್ಕೆ ರುಜು ಹಾಕುವದು. ಘೋಷಣೆಯಲ್ಲಿ ಸ್ಪಷ್ಟೀಕರಿಸ ಬೇಕಾದ ವಿಷಯಗಳು :-
1. ಎಲ್ಲಾ ಪ್ರಶ್ನೆಗಳನ್ನು ಅರ್ಥಮಾಡಿಕೊಂಡ ನಂತರವೇ ಉತ್ತರಿಸಲಾಗಿದೆ, ಎಂದು ಘೋಷಿಸಬೇಕು.
2. ತಾನು ನೀಡಿದ ಮಾಹಿತಿಯ ಮೇಲೆಯೇ ಕರಾರಿನ ಅಸ್ತಿತ್ವ ಇರುವದು, ಎಂದು ಘೋಷಿಸಬೇಕು.
3. ತಾನು ನೀಡಿದ ಮಾಹಿತಿ ಸುಳ್ಳಾದರೆ ಕರಾರನ್ನು ರದ್ದುಗೊಳಿಸಬಹುದು, ಎಂದು ಘೋಷಿಸಬೇಕು.
4. ಬೇರೆ ಭಾಷೆಯಲ್ಲಿ ರುಜು ಮಾಡಿದ್ದರೆ, ‘ ಕೋರಿಕೆ ಪತ್ರದಲ್ಲಿ ನಮೂದಿಸಲಾದ ಮಾಹಿತಿಗಳನ್ನು ಅರ್ಥ ಮಾಡಿಕೊಂಡ ನಂತರವೇ ರುಜು ಹಾಕಲಾಯಿತು’ ಎಂಬ ಒಕ್ಕಣಿಕೆಯನ್ನು ರುಜು ಹಾಕಿದ ಭಾಷೆ (vernacular language) ಯಲ್ಲಿ ನಮೂದಿಸಿ, ಆ ಒಕ್ಕಣಿಕೆ (endorsement) ಗೆ ಮತ್ತೊಂದು ರುಜು ಹಾಕಬೇಕು.

Saturday, June 14, 2014

14 ಜೂನ 2014

ಮುಂದುವರೆಸಬಹುದಾದ ಕರಾರು (renewable contract) :

ವಿಮಾ ಕರಾರು ದೀರ್ಘಾವಧಿಗೆ ಇರುತ್ತದೆ. ಒಂಟಿ ಕಂತಿನ ಪಾಲಿಸಿ ಹೊರತು ಪಡೆಸಿ ಉಳಿದೆಲ್ಲಾ ಪಾಲಿಸಿಗಳಲ್ಲಿ ವಿಮಾಕಂತುಗಳನ್ನು ಚಿಕ್ಕ ಕಾಲಾವಧಿಗಳಿಗೆ ಸ್ವೀಕರಿಸಲಾಗುತ್ತದೆ.

ಉದಾಹರಣೆಗೆ : ತ್ರೈಮಾಸಿಕ ಕಂತುಗಳ ಪಾಲಿಸಿಯಲ್ಲಿ ವಿಮಾಕಂತನ್ನು ಮೂರು ತಿಂಗಳಿಗೊಮ್ಮೆ ಕೊಡಬೇಕಾಗುತ್ತದೆ. ತ್ರೈಮಾಸಿಕ ಕಂತು ನೀಡಿದಾಗ ಕರಾರು ಮೂರು ತಿಂಗಳ ಅವಧಿಗೆ ಮಾತ್ರ ಊರ್ಜಿತವಾಗುತ್ತದೆ. ತದನಂತರ ಪಾಲಸಿಧಾರಕ ಬೇಕಾದರೆ ಮುಂದಿನ ವಿಮಾಕಂತನ್ನು ನೀಡದೆಯೇ ಕರಾರನ್ನು ನಿಲ್ಲಿಸಬಹುದು, ಅಥವಾ ಇನ್ನೊಂದು ವಿಮಾಕಂತನ್ನು ನೀಡಿ ಕರಾರನ್ನು ಮತ್ತೆ ಮೂರುತಿಂಗಳ ಅವಧಿಗೆ ಮುಂದುವರೆಸಬಹುದು.

 ಹೀಗೆ ಕರಾರನ್ನು ನಿಲ್ಲಿಸಬಹುದಾದ ಅಥವಾ ಮುಂದುವರೆಸಬಹುದಾದ ಆಯ್ಕೆ ಸ್ವಾತಂತ್ರ್ಯ ವಿಮಾ ಗ್ರಾಹಕನಿಗೆ ಇದೆ. ಇಂತಹ ಕರಾರುಗಳಿಗೆ ಮುಂದುವರೆಸಬಹುದಾದ ಕರಾರು (renewable contract)  ಎನ್ನುತ್ತಾರೆ.

ಪಾಲಿಸಿಯ ಇಡೀ ಅವಧಿ ಮುಗಿದನಂತರವೂ, ಕರಾರನ್ನು ಮತ್ತೆ ಹೊಸ ಅವಧಿಗೆ,ಹೊಸ ಶರ್ಯತ್ತಿನೊಂದಿಗೆ ಮುಂದುವರೆಸಲು ಕೆಲವು ಸಂದರ್ಭಗಳಲ್ಲಿ, ವಿಮಾ ಸಂಸ್ಥೆಯು ಗ್ರಾಹಕನಿಗೆ ಅನುಮತಿ ನೀಡಬಹುದಾಗಿದೆ.

Friday, June 13, 2014

13 ಜೂನ 2014

ವಿಮಾ ಕರಾರು ಅಂತಿಮವಾಗಿ ಯಾವ ಸಮಯದಿಂದ ಜಾರಿಗೆ ಬರುತ್ತದೆ?

ಕರಾರಿಗೆ ಅಂತಿಮ ಸಮ್ಮತಿ ದೊರೆತ ನಂತರ ವಿಮಾ ಕಂಪನಿಯು ಪ್ರಥಮ ವಿಮಾಕಂತಿನ ರಸೀದಿ ((first premium receipt)ಯನ್ನು ನೀಡುತ್ತದೆ. ಪ್ರಥಮ ವಿಮಾಕಂತಿನ ರಸೀದಿಯನ್ನು ನೀಡಿದ ಕ್ಷಣದಿಂದ ವಿಮಾಕರಾರು ಜಾರಿಗೆ ಬರುತ್ತದೆ. 

ತದನಂತರ ಕರಾರು ದಾಖಲೆ ಪತ್ರ ಅಂದರೆ ಪಾಲಿಸಿ ಬಾಂಡ್‍ನ್ನು ಕಳಿಸಿಕೊಡುತ್ತದೆ.

ಪ್ರಥಮ ವಿಮಾಕಂತಿನ ರಸೀದಿಯನ್ನು ನೀಡಿದ ಕ್ಷಣದಿಂದ, ಪಾಲಿಸಿ ಬಾಂಡು ಕಳಿಸುವ ಕ್ಷಣದ ಅವಧಿಯೊಳಗೆ ವಿಮಾಜೀವಿ ಮರಣ ಹೊಂದಿದರೆ ವಿಮಾ ಸಂಸ್ಥೆ ವಿಮಾಪರಿಹಾರ ನೀಡಲೇಬೇಕಾಗತ್ತದೆ.

Thursday, June 12, 2014

12 ಜೂನ 2014

ವಿಮಾ ಕರಾರಿನಲ್ಲಿ ಒಪ್ಪಿಗೆಯು ಅಂತಿಮವಾಗಿ ಯಾವಾಗ ಪೂರ್ಣಗೊಳ್ಳುತ್ತದೆ?


ವಿಮಾ ಕೋರಿಕೆದಾರ ವಿನಂತಿ ಸಲ್ಲಿಸಿದಾಗ, ಸಂಸ್ಥೆಯು ವಿಮೆಯ ದರವನ್ನು ಇನ್ನಿತರ ಶರ್ಯತ್ತುಗಳೊಡನೆ ತಿಳಿಸಿ ಕೋರಿಕೆ(proposal) ಗೆ ತನ್ನ ಒಪ್ಪಿಗೆ(acceptance) ಯನ್ನು ಸೂಚಿಸುತ್ತದೆ. ವಿಮಾ ಕೋರಿಕೆದಾರ ಆ ಶರ್ಯತ್ತುಗಳನ್ನು ಪೂರೈಸಿ ವಿಮಾ ಕಂತುಗಳನ್ನು ನೀಡಿದಾಗ, ವಿಮಾ ಸಂಸ್ಥೆಯು ವಿಮಾ ಕರಾರಿಗೆ ತನ್ನ ತನ್ನ ಮೊದಲಿನ ಕೋರಿಕೆಯಿಂದ, ಯಾವುದೇ ಕಾರಣಕ್ಕೂ ಹಿಂದೆ ಸರಿಯುವಂತಿಲ್ಲಾ.

ಆದರೆ ಈ ಮಧ್ಯದ ಅವಧಿಯಲ್ಲಿ ವಿಮಾಜೀವಿ (life assured)ಯ ವಿಷಯದಲ್ಲಿ ಯಾವುದಾದರೂ ಭೌತಿಕ ಬದಲಾವಣೆ(material changes)ಗಳ ಬಗ್ಗೆ ಮಾಹಿತಿ ವಿಮಾ ಸಂಸ್ಥೆಗೆ ತಲುಪಿದರೆ, ಅಂತಹ ಸಂದರ್ಭದಲ್ಲಿ ವಿಮಾ ಸಂಸ್ಥೆಯು ವಿಮಾ ಕರಾರಿಗೆ ತನ್ನ ಮೊದಲಿನ ಕೋರಿಕೆಯನ್ನು ತಡೆಹಿಡಿಯಬಹುದು.

Wednesday, June 11, 2014

11 ಜೂನ 2014

ವಿಮೆಯ ಮಾರಾಟದ ಕರಾರಿನಲ್ಲಿ ಕೋರಿಕೆದಾರ (proposer)  ಹಾಗೂ ಒಪ್ಪಿಗೆದಾರ (acceptor) ರು ಯಾರು?


1)ವಿಮೆಯಲ್ಲಿ ಯಾರು ವಿಮಾ ಮಾರಾಟದ ಪ್ರಸ್ತಾಪವನ್ನು ಮೊದಲು ಮಾಡುತ್ತಾನೋ, ಅವನೇ ವಿಮಾಕೋರಿಕೆದಾರ        
   (proposer) ಎಂದೆನಿಸಿಕೊಳ್ಳುತ್ತಾನೆ.

2)ಮಾರಾಟದ ಕೊನೆಯ ಹಂತದಲ್ಲಿ ಯಾರು ಒಪ್ಪಿಗೆಯನ್ನು ಸೂಚಿಸುತ್ತಾನೋ, ಅವನೇ ವಿಮಾಒಪ್ಪಿಗೆದಾರ
   (acceptor)ಎಂದೆನಿಸಿಕೊಳ್ಳುತ್ತಾನೆ.

ಉದಾ1 :  ವಿಮಾ ಸಂಸ್ಥೆ ವಿಮೆ ಕೊಳ್ಳಲು ಕೇಳಿ ಕೊಳ್ಳುತ್ತದೆ. ಅದಕ್ಕೆ ಒಪ್ಪಿ ಗ್ರಾಹಕ ವಿಮೆ ಪಾಲಿಸಿ ಖರೀದಿಸುತ್ತಾನೆ. ಇಲ್ಲಿ
                ವಿಮಾ ಕೋರಿಕೆದಾರ (proposer) : ವಿಮಾ ಸಂಸ್ಥೆ.  (ಮೊದಲು ವಿನಂತಿ ಸಲ್ಲಿಸಿಸವನು)
                ವಿಮಾ ಒಪ್ಪಿಗೆದಾರ (acceptor) : ವಿಮಾ ಗ್ರಾಹಕ. (ಕೊನೆಗೆ ಒಪ್ಪಿಗೆ ಸೂಚಿಸಿದವನು)

ಉದಾ2 :  ಗ್ರಾಹಕ ವಿಮೆ ಮಾರಲು ಕೇಳಿ ಕೊಳ್ಳುತ್ತಾನೆ. ಅದಕ್ಕೆ ಒಪ್ಪಿ ವಿಮಾ ಸಂಸ್ಥೆ ವಿಮೆ ಪಾಲಿಸಿ ಮಾರುತ್ತದೆ. ಇಲ್ಲಿ
                ವಿಮಾ ಕೋರಿಕೆದಾರ (proposer) : ವಿಮಾ ಗ್ರಾಹಕ. (ಮೊದಲು ವಿನಂತಿ ಸಲ್ಲಿಸಿಸವನು)
                ವಿಮಾ ಒಪ್ಪಿಗೆದಾರ (acceptor)  : ವಿಮಾ ಸಂಸ್ಥೆ. (ಕೊನೆಗೆ ಒಪ್ಪಿಗೆ ಸೂಚಿಸಿದವನು)

ಉದಾ3 :  ಗ್ರಾಹಕ ವಿಮೆ ಕೊಳ್ಳಲು ಕೇಳಿ ಕೊಳ್ಳುತ್ತಾನೆ. ಅದಕ್ಕೆ ವಿಮಾ ಸಂಸ್ಥೆ ಕೂಡಲೇ ಪಾಲಿಸಿ ನೀಡದೇ ಕೆಲವು ಶರ್ಯತ್ತುಗಳನ್ನು ವಿಧಿಸುತ್ತದೆ. ಗ್ರಾಹಕ                   ಆ ಶರ್ಯತ್ತುಗಳನ್ನು ಪೂರೈಸಿದಾಗ ವಿಮಾ ಸಂಸ್ಥೆ ವಿಮೆ ಪಾಲಿಸಿ ಮಾರುತ್ತದೆ. ಇಲ್ಲಿ
               ವಿಮಾ ಕೋರಿಕೆದಾರ (proposer) : ವಿಮಾ ಗ್ರಾಹಕ. (ಮೊದಲು ವಿನಂತಿ ಸಲ್ಲಿಸಿಸವನು)
               ಪ್ರತಿ ಕೋರಿಕೆದಾರ (counter proposer): ವಿಮಾ ಸಂಸ್ಥೆ.(ನಂತರದ ವಿನಂತಿ ಸಲ್ಲಿಸಿದವನು)
               ಅಂತಿಮ ಒಪ್ಪಿಗೆದಾರ (Final acceptor) : ವಿಮಾ ಗ್ರಾಹಕ.

Tuesday, June 10, 2014

10 ಜೂನ 2014


ಜೀವ ವಿಮೆಯ ಪಾಲಿಸಿಗಳನ್ನು ಯಾರ ಜೀವದ ಮೇಲೆ ಖರೀದಿಸಬಹುದು?



1) ತನ್ನ ಸ್ವಂತ ಜೀವ (on one’s own life) ದ ಮೇಲೆ,

2) ಇತರರ ಜೀವದ (on other’s life) ಮೇಲೆ (ಉದಾ : ಮಕ್ಕಳ, ಪಾಲುದಾರನ, ಸಾಲಗಾರನ ಜೀವದ ಮೇಲೆ ),            

3) ಸ್ವಂತ ಹಾಗೂ ಇತರರ (ಜೀವನಸಂಗಾತಿಯ) ಎರಡೂ ಜೀವ(on joint life)ಗಳ ಮೇಲೆ ಜಂಟಿಯಾಗಿ.

Monday, June 9, 2014

9 ಜೂನ 2014


ವಿಮೆಯ ಪಾಲಿಸಿಗಳನ್ನು ಯಾಕೆ ಖರೀದಿಸುತ್ತಾರೆ?



ವ್ಯಕ್ತಿಯೊಬ್ಬನು ಜೀವನದ ಆರ್ಥಿಕ ಗುರಿಗಳನ್ನು ತಲುಪವದಕ್ಕೆ ಅನೇಕ ಅಪಾಯಗಳು ಅಡ್ಡಿ ಪಡಿಸುತ್ತವೆ. ಈ ಅಪಾಯಗಳಿಂದ ಪರಿಹಾರ ಪಡೆಯುವದಕ್ಕೆ ಜನರು ವಿಮೆಯನ್ನು ಖರೀದಿಸುತ್ತಾರೆ.

ಆರ್ಥಿಕ ಗುರಿಗಳ ಉದಾಹರಣೆಗಳು : ಮಕ್ಕಳ ಶಿಕ್ಷಣ, ಮದುವೆ, ಕುಟುಂಬಕ್ಕೆ ಸ್ವಂತ ಮನೆ, ವ್ರದ್ಧಾಪ್ಯಕ್ಕೆ ನಿರಂತರ ಆದಾಯ, ಇತ್ಯಾದಿ.

ಅಪಾಯಗಳ ಉದಾಹರಣೆಗಳು : ಅನೀರಿಕ್ಷಿತ ಸಾವು, ಅಪಘಾತ, ಗಂಭೀರ ಕಾಯಿಲೆ, ಸುದೀರ್ಘ ಬಾಳುವಿಕೆ.

ವಿಮಾ ಸರಕುಗಳು : ಅವಧಿ ವಿಮೆ, ಆಜೀವ ವಿಮೆ, ಎಂಡೋಮೆಂಟ ವಿಮೆ, ಮನೀ ಬ್ಯಾಕ್ ವಿಮೆ, ಪೆನ್ಶನ್ ವಿಮೆ, ಯುಲಿಪ್ ವಿಮೆ.

Sunday, June 8, 2014

8 ಜೂನ 2014

ವಿಮೆಯ ಬಗ್ಗೆ ಮಾಹಿತಿ ಪಡೆಯ ಬೇಕಾದರೆ ಸಂಪರ್ಕಿಸಬೇಕಾದ ಮೂಲ ಕೇಂದ್ರಗಳು :


 1)ವಿಮಾ ಶಾಖಾ ಕಚೇರಿಗಳು.

 2)ವಿಮಾ ಏಜೆಂಟರು.

 3)ವಿಮಾ ವೆಬ್ ಸೈಟುಗಳು.

Saturday, June 7, 2014

7 ಜೂನ 2014

ನಷ್ಟ ಭರ್ತಿ ತತ್ವ (Principle of Indemnity)  ವನ್ನು ಜೀವ ವಿಮೆಯಲ್ಲಿ ಹೇಗೆ ಅನುಸರಿಸುತ್ತಾರೆ?        


ಜೀವ ವಿಮೆಯಲ್ಲಿ ಆರ್ಥಿಕ ಹಾನಿಯ ಲೆಕ್ಕವನ್ನು ಭವಿಷ್ಯದ ಗಳಿಕೆಯ ಮೇಲೆ ಮಾಡಬೇಕಾಗುತ್ತದೆ. ಭವಿಷ್ಯದ ಗಳಿಕೆಯನ್ನು ನಿಖರವಾಗಿ ಅಳೆಯಲು ಬರುವದಿಲ್ಲಾ. ಹಿಗಾಗಿ ಜೀವ ವಿಮೆಯಲ್ಲಿ ನಷ್ಠ ಭರ್ತಿ ತತ್ವವನ್ನು ನಿಖರವಾಗಿ ಅನುಸರಿಸಲು ಸಾಧ್ಯವಾಗುವದಿಲ್ಲಾ
.
ಜೀವ ವಿಮೆಯಲ್ಲಿ ಮರಣ ಸಂಭವಿಸಿದಾಗ ಆರ್ಥಿಕ ಹಾನಿಯ ಅಳತೆಯನ್ನು ಮಾಡದೇ, ಪೂರ್ವ ನಿರ್ಧಾರಿತ ವಿಮಾ ಮೌಲ್ಯವನ್ನು ಪೂರ್ಣವಾಗಿ ನೀಡಲಾಗುತ್ತದೆ. ಅದಕ್ಕೆ ಜೀವವಿಮೆಯ ಕರಾರುಗಳಿಗೆ ಬೆಲೆ ಆಧಾರಿತ ಕರಾರು (Value Contracts) ಗಳೆಂದು ಕರೆಯುತ್ತಾರೆ.

Friday, June 6, 2014

6 ಜೂನ 2014

ನಷ್ಟ ಭರ್ತಿ ತತ್ವ (Principle of Indemnity):      


ಅಪಾಯ ಸಂಭವಿಸಿ ಹಾನಿಯದಾಗ, ವಿಮೆ ಮಾಡಿಸಿದಾತನ ಕುಸಿದು ಬಿದ್ದ ಆರ್ಥಿಕ ಸ್ಥಿತಿಯ ಮಟ್ಟವನ್ನು, ಅಪಾಯದ ಮುಂಚೆ ಇದ್ದ ಆರ್ಥಿಕ ಸ್ಥಿತಿಯ ಮಟ್ಟಕ್ಕೆ ತರಲು ಅವಶ್ಯವಿರುವ ಮಟ್ಟಗೆ ಮಾತ್ರ, ಪರಿಹಾರ ನೀಡುವದು ವಿಮೆಯ ಉದ್ಯೇಶವಾಗಿದೆ. ಇದಕ್ಕೇ ನಷ್ಟಭರ್ತಿ ತತ್ವವೆನ್ನುತ್ತಾರೆ. ಅಪಾಯದ ಹಾನಿಗಿಂತ ಹೆಚ್ಚು ಪರಿಹಾರ ನೀಡುವ ವ್ಯವಸ್ಥೆ ವಿಮೆಯಲ್ಲಿ ಇಲ್ಲಾ. ಈ ತತ್ವವನ್ನು ಸಾಮಾನ್ಯ ವಿಮೆಯಲ್ಲಿ ಚಾಚೂ ತಪ್ಪದಂತೆ, ನಿಖರವಾಗಿ ಅನುಸರಿಸಲಾಗುತ್ತದೆ.

Thursday, June 5, 2014

5 ಜೂನ 2014

ಮಾಹಿತಿಯನ್ನು ಮುಚ್ಚಿಡದೇ ಹೊರಗೆ ತೋರಿಸುವ ಹೊಣೆಗಾರಿಕೆ (duty of disclosure)  ಯನ್ನು ವಿಮಾ ಕೋರಿಕೆದಾರನು ಎಲ್ಲಿಯ ವರೆಗೆ ಪಾಲಿಸಬೇಕಾಗುವದು?


ಕೋರಿಕೆ ಪತ್ರ ಸಲ್ಲಿಸಿದ ಸಮಯದಿಂದ, ವಿಮಾಕರಾರು ಸ್ವೀಕೃತಿಯಾಗುವ ಸಮಯದವರೆಗೆ ಮಾಹಿತಿಯನ್ನು ಮುಚ್ಚಿಡದೇ ಹೊರಗೆ ತೋರಿಸುವ ಹೊಣೆಗಾರಿಕೆಯನ್ನು ವಿಮಾಕೋರಿಕೆದಾರನು ಪ್ರದರ್ಶಿಸಬೇಕಾಗುತ್ತದೆ.

Wednesday, June 4, 2014

4 ಜೂನ 2014

ವಿಮಾ ಕರಾರಿನ ಮೇಲೆ ನಂಬಿಕೆದ್ರೋಹ (breach of  faith)  ಬೀರುವ ಪರಿಣಾಮ :


1938ರ ವಿಮಾ ಕಾನೂನು ಸೆಕ್ಶನ್ 45ರ ಪ್ರಕಾರ,

1) ಕರಾರಿನ ಮೊದಲ ಎರಡು ವರ್ಷಗಳೊಳಗೆ ನಂಬಿಕೆದ್ರೋಹ ಕಂಡು ಬಂದರೆ, ಬೇರೆ ಯಾವ ಕಾರಣ ನೀಡದೆಯೇ, ವಿಮಾ ಕರಾರನ್ನು ಪೂರ್ವಾನ್ವಯವಾಗಿ (ab initio)  ಅನೂರ್ಜಿತ ಗೊಳಿಸಬಹದು. (ಅಪವಾದ : ಪಾಲಿಸಿ ತಲುಪಿದ 15 ದಿನಗಳೊಳಗೆ, ಪಾಲಿಸಿಧಾರಕನು ನಂಬಿಕೆ ದ್ರೋಹವಾಗದಿದ್ದರೂ ಕರಾರನ್ನು ರದ್ದುಗೊಳಿಸಬಹುದು.)

2) ಕರಾರಿನ ಮೊದಲ ಎರಡು ವರ್ಷಗಳ ನಂತರ ನಂಬಿಕೆದ್ರೋಹ ಕಂಡು ಬಂದರೆ, ವಿಮಾ ಕರಾರನ್ನು ಪೂರ್ವಾನ್ವಯವಾಗಿ (ab initio)  ಅನೂರ್ಜಿತ ಗೊಳಿಸಬೇಕಾದರೆ ಸಕಾರಣಗಳನ್ನು ನೀಡಬೇಕಾಗುತ್ತದೆ.

ನಂಬಿಕೆ ದ್ರೋಹ ಉದ್ಯೇಶ ರಹಿತ ಮುಗ್ಧಕಾರಣಗಳಿಂದ ಜರುಗಿದ್ದರೆ, ಎರಡು ವರ್ಷಗಳನಂತರ ಕರಾರನ್ನು ರದ್ದುಗೊಳಿಸಲು ಬರುವದಿಲ್ಲಾ.ಇದಕ್ಕೆ ವಿವಾದೀತಾತ ನಿಯಮ(indisputility clause) ಎನ್ನುತ್ತಾರೆ. ಇದು ಮುಗ್ಧ ಪಾಲಸಿಧಾರಕನಿಗೆ ರಕ್ಷಣೆ ನೀಡುವದಕ್ಕಾಗಿಯೇ ಇದೆ.

ನಂಬಿಕೆ ದ್ರೋಹ ಉದ್ಯೇಶಪೂರ್ವಕ ಹಾಗೂ ಪೂರ್ಣ ತಿಳುವಳಿಕೆಯ ಕಾರಣಗಳಿಂದ ಜರುಗಿದ್ದರೆ ಕರಾರನ್ನು ಪೂರ್ವಾನ್ವಯವಾಗಿ(ab initio) ರದ್ದುಗೊಳಿಸಬಹುದು, ಹಾಗೂ ಈಗಾಗಲೇ ಸಂದಾಯವಾದ ವಿಮಾಕಂತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಇಂತಹ ಪ್ರಸಂಗದಲ್ಲಿ ನಂಬಿಕೆ ದ್ರೋಹವನ್ನು ಸಿದ್ಧಮಾಡಿ ತೋರಿಸುವ ಹೊಣೆಗಾರಿಕೆ ಕರಾರು ರದ್ದು ಪಡಿಸುವವನ ತಲೆಯ ಮೇಲಿರುತ್ತದೆ.

Tuesday, June 3, 2014

3 ಜೂನ 2014


ಸಂಪೂರ್ಣ ನಂಬಿಕೆ ತತ್ವ (Principle of ut most good faith) ಪ್ರದರ್ಶನ :



ವಿಮಾ ಕರಾರುಗಳಲ್ಲಿ ಉಭಯ ಪಕ್ಷಗಳ ಮೇಲೆ ಇರುವ ಇನ್ನೊಂದು ಮಹತ್ವದ ಹೊಣೆಗಾರಿಕೆ ಏನಂದರೆ, ಸಂಪೂರ್ಣ ನಂಬಿಕೆ ತತ್ವ ಪ್ರದರ್ಶನ. ಒಪ್ಪಂದಕ್ಕೆ ಸಂಬಂಧಿಸಿದಂತೆ ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನು ಹೊರಗೆ ತೋರಿಸುವ ಕರ್ತವ್ಯ ಉಭಯ ಪಕ್ಷಗಳ ಮೇಲಿದೆ. ಯಾವ ಪಕ್ಷವೂ ಸತ್ಯಾಂಶಗಳನ್ನು ಬಚ್ಚಿಡುವ, ಸುಳ್ಳು ಸಂಗತಿಗಳನ್ನು ತೋರಿಸುವ ಪ್ರಯತ್ನ ಮಾಡಕೂಡದು. ಹಾಗೇ ಮಾಡಿದರೆ ನಂಬಿಕೆದ್ರೋಹವಾದಂತಾಗಿ ವಿಮಾಕರಾರು ಬಿದ್ದು ಹೋಗುತ್ತದೆ.

ಉದಾ ; ಏಡ್ಸ ಕಾಯಿಲೆಯ ಗ್ರಾಹಕ ಸತ್ಯಾಂಶ ಬಚ್ಚಿಟ್ಟು ಪಾಲಿಸಿ ತೆಗೆದುಕೊಂಡು ನಿಧನನಾದಾಗ, ಸತ್ಯಾಂಶ ತಿಳಿದಾಗ ವಿಮಾಸಂಸ್ಥೆ ವಿಮಾಕರಾರನ್ನು ರದ್ದುಗೊಳಿಸಿ ವಿಮಾ ಪರಿಹಾರವನ್ನು ನಿರಾಕರಿಸಬಹುದು.

Monday, June 2, 2014

2 ಜೂನ 2014


ವಿಮಾ ಆಸಕ್ತಿಯ ಉಪಸ್ಥಿತಿ , ವಿಮಾ ಕರಾರಿನ ಯಾವ ಸಮಯದಲ್ಲಿ ಇರಬೇಕು? 



ಜೀವ ವಿಮೆಯಲ್ಲಿ ಕರಾರಿನ ಪ್ರಾರಂಭದಲ್ಲಿ ವಿಮಾ ಆಸಕ್ತಿ ಇರುವದು ಅವಶ್ಯವಾಗಿದೆ. ಹಡಗು ವಿಮೆಯಲ್ಲಿ ಕರಾರಿನ ಕೊನೆಯಲ್ಲಿ (ಅಂದರೆ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ), ವಿಮಾ ಆಸಕ್ತಿ ಇರುವದು ಅವಶ್ಯವಾಗಿದೆ. ಉಳಿದ ಸಾಮಾನ್ಯ ವಿಮೆಗಳಲ್ಲಿ ಕರಾರಿನ ಪ್ರಾರಂಭದಲ್ಲಿ  ಹಾಗೂ ಕೊನೆಗಳೆರಡರಲ್ಲೂ ವಿಮಾ ಆಸಕ್ತಿ ಇರುವದು ಅವಶ್ಯವಾಗಿದೆ.

Sunday, June 1, 2014

1 ಜೂನ 2014


ವಿಮಾ ಆಸಕ್ತಿ (insurable interest)ಯನ್ನು ಹೇಗೆ ಗುರುತಿಸುವದು? 


ಯಾವ ಕಾನೂನಿನಲ್ಲೂ ವಿಮಾ ಆಸಕ್ತಿಯ ವ್ಯಾಖ್ಯೆ ಇರುವದಿಲ್ಲಾ. ಆದರೆ ಕೋರ್ಟುಗಳು ನೀಡಿದ ತೀರ್ಪುಗಳಲ್ಲಿ ವಿಮಾ ಆಸಕ್ತಿಯ ವ್ಯಾಖ್ಯೆಯನ್ನು ಕಾಣಬಹುದು.

ವ್ಯಕ್ತಿಯೊಬ್ಬನಿಗೆ ನಿರ್ಧಿಷ್ಠ ಜೀವದ; ಇರುವಿಕೆಯಿಂದ ಆರ್ಥಿಕವಾಗಿ ಲಾಭವೆನಿಸುತ್ತಿದ್ದರೆ, ಇಲ್ಲದಿರುವಿಕೆಯಿಂದ ಆರ್ಥಿಕ ಹಾನಿ ಉಂಟಾಗುವಂತಿದ್ದರೆ, ಆ ವ್ಯಕ್ತಿಗೆ ಆ ನಿರ್ಧಿಷ್ಠ ಜೀವದಲ್ಲಿ ವಿಮಾ ಆಸಕ್ತಿ ಇದೆ ಎಂದು ಗ್ರಹಿಸಲಾಗುವದು. ವಿಮಾ ಆಸಕ್ತಿಯ ಪ್ರಮಾಣ; ಆರ್ಥಿಕ ಲಾಭ ಅಥವಾ ಆರ್ಥಿಕ ಹಾನಿ ಪ್ರಮಾಣಕ್ಕೆ ಅನುಗುಣವಾಗಿಯೇ ಇರುತ್ತದೆ.

ಉದಾಹರಣೆಗೆ :
1) ಪ್ರತಿಯೊಬ್ಬನಿಗೂ ತನ್ನ ಸ್ವಂತದ ಹಾಗೂ ಜೀವನಸಂಗಾತಿಯ ಜೀವದಲ್ಲಿ ವಿಮಾ ಆಸಕ್ತಿ ಅಗಣಿತ ಪ್ರಮಾಣದಲ್ಲಿದೆ. ಹೀಗಾಗಿ ಪ್ರತಿಯೊಬ್ಬನೂ ತನ್ನ ಸ್ವಂತದ ಹಾಗೂ ಜೀವನಸಂಗಾತಿಯ ಜೀವದ ಮೆಲೆ ಅಗಣಿತ ಪ್ರಮಾಣದಲ್ಲಿ ವಿಮೆ ಮಾಡಿಸಬಹುದು.

2) ಅಕ್ಕ ತಂಗಿಯರ, ಅಣ್ಣ ತಮ್ಮಂದಿರ ಜೀವದಲ್ಲಿ ಆರ್ಥಿಕ ಆಸಕ್ತಿ ಇಲ್ಲಾ. ಹೀಗಾಗಿ ವಿಮಾ ಆಸಕ್ತಿಯೂ ಇರುವದಿಲ್ಲಾ. ಆದುದರಿಂದ ಅಕ್ಕ ತಂಗಿಯರ, ಅಣ್ಣ ತಮ್ಮಂದಿರ ಜೀವದ ಮೇಲೆ ವಿಮೆ ಮಾಡಿಸಲು ಬರುವದಿಲ್ಲಾ.

3) ಮಕ್ಕಳಿಗೆ ತಾಯಿ ತಂದೆಗಳ ಜೀವದಲ್ಲಿ ಆರ್ಥಿಕ ಆಸಕ್ತಿ ಇಲ್ಲಾ. ಹೀಗಾಗಿ ವಿಮಾ ಆಸಕ್ತಿಯೂ ಇರುವದಿಲ್ಲಾ. ಆದುದರಿಂದ ಮಕ್ಕಳಿಗೆ ತಾಯಿ ತಂದೆಗಳ ಜೀವದ ಮೇಲೆ ವಿಮೆ ತೆಗೆದು ಕೊಳ್ಳಲು ಬರುವದಿಲ್ಲಾ.

4) ತಾಯಿ ತಂದೆಗಳಿಗೆ ವಯಸ್ಕ ಮಕ್ಕಳ ಜೀವದಲ್ಲಿ ಮಿತ ಪ್ರಮಾಣದಲ್ಲಿ ಆರ್ಥಿಕ ಆಸಕ್ತಿ ಇದೆ. ಆದುದರಿಂದ ವಯಸ್ಕ ಮಕ್ಕಳ ಜೀವದಲ್ಲಿ ಮಿತ ಪ್ರಮಾಣದಲ್ಲಿ ವಿಮಾ ಆಸಕ್ತಿ ಇದೆ. (ಕೋರ್ಟ ತೀರ್ಮಾನದ ಪ್ರಕಾರ ವೃದ್ಧ ತಾಯಿ ತಂದೆಯರ ಯೋಗಕ್ಷೇಮದ ಹೊಣೆ ವಯಸ್ಕ ಮಕ್ಕಳ ಮೇಲಿದೆ.) ಹೀಗಾಗಿ ತಾಯಿ ತಂದೆಗಳು ಮಿತ ಪ್ರಮಾಣದಲ್ಲಿ ವಯಸ್ಕ ಮಕ್ಕಳ ಜೀವದ ಮೆಲೆ ವಿಮೆ ಮಾಡಿಸಬಹುದು.

5) ತಾಯಿ ತಂದೆಗಳಿಗೆ ಮೈನರ ಮಕ್ಕಳ ಜೀವದಲ್ಲಿ ವಿಮಾ ಆಸಕ್ತಿ ಇಲ್ಲಾ. ಆದರೆ ಮೈನರ ಮಕ್ಕಳ ಯೋಗಕ್ಷೇಮಕ್ಕಾಗಿ, ಮೈನರ ಮಕ್ಕಳ ಪರವಾಗಿ, ಮೈನರ ಮಕ್ಕಳÀ ಅವಶ್ಯಕತೆಗಳ ಪ್ರಮಾಣದಲ್ಲಿ ಮೈನರ ಮಕ್ಕಳ ಜೀವದ ಮೆಲೆ ತಾಯಿ ತಂದೆಗಳು ವಿಮೆ ಮಾಡಿಸಬಹುದು.

6) ಮಾಲೀಕನ ಲಾಭ ನೌಕರರ ಇರುವಿಕೆಯ ಮೇಲೆ ಅವಲಂಬಿತವಾಗಿರುವದರಿಂದ, ಮಾಲೀಕನಿಗೆ ನೌಕರರ ಜೀವದಲ್ಲಿ ವಿಮಾ ಆಸಕ್ತಿ ಅವರಿಮದಪಡೆಯುವ ಲಾಭದ ಕಾಣಿಕೆಯ ಪ್ರಮಾಣದಲ್ಲಿ ಇದೆ.  ಅಷ್ಟರ ಮಟ್ಟಿಗೆ ಮಾಲೀಕನು ನೌಕರರ ಜೀವದ ಮೇಲೆ ವಿಮೆ ಪಡೆಯ ಬಹುದು.
ಅದೇ ರೀತಿ ನೌಕರರ ಗಳಿಕೆ ಮಾಲೀಕನ  ಇರುವಿಕೆಯ ಮೇಲೆ ಅವಲಂಬಿತವಾಗಿರುವದರಿಂದ, ನೌಕರರಿಗೆ ಮಾಲೀಕನ ಜೀವದಲ್ಲಿ ವಿಮಾ ಆಸಕ್ತಿ ಅವರು ಪಡೆಯುವ ವೇತನದ  ಪ್ರಮಾಣದಲ್ಲಿ ಇದೆ. ಅಷ್ಟರ ಮಟ್ಟಿಗೆ ನೌಕರರು ಮಾಲೀಕನ ಜೀವದ ಮೇಲೆ ವಿಮೆ ಪಡೆಯಬಹುದು.

7) ಜಾಮೀನದಾರನಿಗೆ ತನ್ನ ಒಡೆಯನ ಜೀವದಲ್ಲಿ ವಿಮಾ ಆಸಕ್ತಿ ಇದೆ.  ಅವನ ಆರ್ಥಿಕ ಹಿತಾಸಕ್ತಿಯ ಪ್ರಮಾಣಕ್ಕೆ ಅನುಗುಣವಾಗಿ ವಿಮಾ ಆಸಕ್ತಿ ಇರುತ್ತದೆ. ತನ್ನ ವಿಮಾ ಆಸಕ್ತಿಯ ಪ್ರಮಾಣಕ್ಕೆ (ಅಂದರೆ ಆರ್ಥಿಕ ಆಸಕ್ತಿಯ ಪ್ರಮಾಣಕ್ಕೆ) ಅನುಗುಣವಾಗಿ ಜಾಮೀನದಾರನು ಒಡೆಯನ ಜೀವದ ಮೇಲೆ ವಿಮೆ ತೆಗೆದುಕೊಳ್ಳ ಬಹುದು.

8) ಸಾಲಕೊಟ್ಟ ಸಾವುಕಾರನಿಗೆ ಸಾಲಗರನ ಜೀವದ ಮೇಲೆ ವಿಮಾ ಆಸಕ್ತಿ ಇದೆ. ಅವನÀ ಆರ್ಥಿಕ ಹಿತಾಸಕ್ತಿಗಳ ಪ್ರಮಾಣಕ್ಕೆ ಅನುಗುಣವಾಗಿ ವಿಮಾ ಆಸಕ್ತಿ ಇರುತ್ತದೆ. ತನ್ನ ವಿಮಾ ಆಸಕ್ತಿಗಳ ಪ್ರಮಾಣಕ್ಕೆ ಅನುಗುಣವಾಗಿ ಸಾವುಕಾರನು ಸಾಲಗಾರನ ಜೀವದ ಮೇಲೆ ವಿಮೆ ತೆಗೆದುಕೊಳ್ಳ ಬಹುದು.

9) ಪಾಲುಗಾರಿಕೆ ಸಂಸ್ಥೆಯಲ್ಲಿ ಪ್ರತಿ ಪಾಲುದಾರನಿಗೆ ಇತರ ಪಾಲುದಾರರ ಜೀವಗಳಲ್ಲಿ ವಿಮಾ ಆಸಕ್ತಿ ಇದೆ.ಅವನ ಆರ್ಥಿಕ ಹಿತಾಸಕ್ತಿಗಳ ಪ್ರಮಾಣಕ್ಕೆ ಅನುಗುಣವಾಗಿ ವಿಮಾ ಆಸಕ್ತಿ ಇರುತ್ತದೆ.ತನ್ನ ವಿಮಾ ಆಸಕ್ತಿಗಳ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿ ಪಾಲುದಾರನು ಇತರ ಪಾಲುದಾರರ ಜೀವಗಳ ಮೇಲೆ ವಿಮೆ ತೆಗೆದುಕೊಳ್ಳ ಬಹುದು.