28 ಜೂನ 2014
ರಿಯಾಯತಿ ಅವಧಿ (grace period):
ವಿಮಾ ಕರಾರನ್ನು ಜೀವಂತವಾಗಿಡಲು, ವಿಮಾ ಕಂತಿನ ಬಾಕೀ ದಿನಾಂಕದಂದು ಇಲ್ಲವೆ ಅದಕ್ಕೂ ಮೊದಲೇ ವಿಮಾ ಕಂತನ್ನು ನೀಡಬೇಕು. ಆದರೆ ಬಾಕೀ ದಿನಾಂಕದಂದು ಸಂಬಂದಿಸಿದ ವಿಮಾಕಂತನ್ನು ನೀಡಲಾಗದಿದ್ದರೂ ವಿಮಾ ಕಂಪನಿಯು ಕರಾರನ್ನು ರದ್ದುಗೊಳಿಸದೆ ಮುಂದೆ ಕೆಲ ಅವಧಿಯವರೆಗೆ ಕರಾರನ್ನು ಜೀವಂತವಾಗಿಡುತ್ತದೆ. ಈ ಅವಧಿಗೆ ರಿಯಾಯತಿ ಅವಧಿ ಎನ್ನುತ್ತಾರೆ. ರಿಯಾಯತಿ ಅವಧಿಯೊಳಗೆ ಮರಣಸಂಭವಿಸಿದರೆ ಪೂರ್ಣ ವಿಮಾಮೊತ್ತದಲ್ಲಿ ಬಾಕಿ ವಿಮಾ ಕಂತಿನ ಹಣಕಳೆದು ಪರಿಹಾರವನ್ನು ನಿಡುತ್ತಾರೆ.
• ರಿಯಾಯತಿ ಅವಧಿ ಸಾಮಾನ್ಯವಾಗಿ 1 ತಿಂಗಳಿಗೆ (ಕನಿಷ್ಢ 30 ದಿನಗಳಿಗೆ) ಸಮನಾಗಿರುತ್ತದೆ.
• ಅದು ಮೊದಲ ಬಾಕೀ ಕಂತಿನ ದಿನಾಂಕದ ಮರುದಿನದಿಂದ ಪ್ರಾರಂಭವಾಗುತ್ತದೆ.
• ರಿಯಾಯತಿ ಅವಧಿಯ ಕೊನೆಯ ದಿನ ರಜೆಯ ದಿನವಾಗಿದ್ದರೆ, ಅದರ ನಂತರ ಕೂಡಲೇ ಬರುವ ಕೆಲಸದ ದಿನಕ್ಕೂ
ರಿಯಾಯತಿ ಅವಧಿ ಮುಂದುವರೆಯುತ್ತದೆ.
• ರಿಯಾಯತಿ ಅವಧಿಯು ಕೊನೆಯ ದಿನದ ಮಧ್ಯರಾತ್ರಿ 12ಕ್ಕೆ ಕೊನೆಗೊಳ್ಳುತ್ತದೆ.
No comments:
Post a Comment