Sunday, June 1, 2014

1 ಜೂನ 2014


ವಿಮಾ ಆಸಕ್ತಿ (insurable interest)ಯನ್ನು ಹೇಗೆ ಗುರುತಿಸುವದು? 


ಯಾವ ಕಾನೂನಿನಲ್ಲೂ ವಿಮಾ ಆಸಕ್ತಿಯ ವ್ಯಾಖ್ಯೆ ಇರುವದಿಲ್ಲಾ. ಆದರೆ ಕೋರ್ಟುಗಳು ನೀಡಿದ ತೀರ್ಪುಗಳಲ್ಲಿ ವಿಮಾ ಆಸಕ್ತಿಯ ವ್ಯಾಖ್ಯೆಯನ್ನು ಕಾಣಬಹುದು.

ವ್ಯಕ್ತಿಯೊಬ್ಬನಿಗೆ ನಿರ್ಧಿಷ್ಠ ಜೀವದ; ಇರುವಿಕೆಯಿಂದ ಆರ್ಥಿಕವಾಗಿ ಲಾಭವೆನಿಸುತ್ತಿದ್ದರೆ, ಇಲ್ಲದಿರುವಿಕೆಯಿಂದ ಆರ್ಥಿಕ ಹಾನಿ ಉಂಟಾಗುವಂತಿದ್ದರೆ, ಆ ವ್ಯಕ್ತಿಗೆ ಆ ನಿರ್ಧಿಷ್ಠ ಜೀವದಲ್ಲಿ ವಿಮಾ ಆಸಕ್ತಿ ಇದೆ ಎಂದು ಗ್ರಹಿಸಲಾಗುವದು. ವಿಮಾ ಆಸಕ್ತಿಯ ಪ್ರಮಾಣ; ಆರ್ಥಿಕ ಲಾಭ ಅಥವಾ ಆರ್ಥಿಕ ಹಾನಿ ಪ್ರಮಾಣಕ್ಕೆ ಅನುಗುಣವಾಗಿಯೇ ಇರುತ್ತದೆ.

ಉದಾಹರಣೆಗೆ :
1) ಪ್ರತಿಯೊಬ್ಬನಿಗೂ ತನ್ನ ಸ್ವಂತದ ಹಾಗೂ ಜೀವನಸಂಗಾತಿಯ ಜೀವದಲ್ಲಿ ವಿಮಾ ಆಸಕ್ತಿ ಅಗಣಿತ ಪ್ರಮಾಣದಲ್ಲಿದೆ. ಹೀಗಾಗಿ ಪ್ರತಿಯೊಬ್ಬನೂ ತನ್ನ ಸ್ವಂತದ ಹಾಗೂ ಜೀವನಸಂಗಾತಿಯ ಜೀವದ ಮೆಲೆ ಅಗಣಿತ ಪ್ರಮಾಣದಲ್ಲಿ ವಿಮೆ ಮಾಡಿಸಬಹುದು.

2) ಅಕ್ಕ ತಂಗಿಯರ, ಅಣ್ಣ ತಮ್ಮಂದಿರ ಜೀವದಲ್ಲಿ ಆರ್ಥಿಕ ಆಸಕ್ತಿ ಇಲ್ಲಾ. ಹೀಗಾಗಿ ವಿಮಾ ಆಸಕ್ತಿಯೂ ಇರುವದಿಲ್ಲಾ. ಆದುದರಿಂದ ಅಕ್ಕ ತಂಗಿಯರ, ಅಣ್ಣ ತಮ್ಮಂದಿರ ಜೀವದ ಮೇಲೆ ವಿಮೆ ಮಾಡಿಸಲು ಬರುವದಿಲ್ಲಾ.

3) ಮಕ್ಕಳಿಗೆ ತಾಯಿ ತಂದೆಗಳ ಜೀವದಲ್ಲಿ ಆರ್ಥಿಕ ಆಸಕ್ತಿ ಇಲ್ಲಾ. ಹೀಗಾಗಿ ವಿಮಾ ಆಸಕ್ತಿಯೂ ಇರುವದಿಲ್ಲಾ. ಆದುದರಿಂದ ಮಕ್ಕಳಿಗೆ ತಾಯಿ ತಂದೆಗಳ ಜೀವದ ಮೇಲೆ ವಿಮೆ ತೆಗೆದು ಕೊಳ್ಳಲು ಬರುವದಿಲ್ಲಾ.

4) ತಾಯಿ ತಂದೆಗಳಿಗೆ ವಯಸ್ಕ ಮಕ್ಕಳ ಜೀವದಲ್ಲಿ ಮಿತ ಪ್ರಮಾಣದಲ್ಲಿ ಆರ್ಥಿಕ ಆಸಕ್ತಿ ಇದೆ. ಆದುದರಿಂದ ವಯಸ್ಕ ಮಕ್ಕಳ ಜೀವದಲ್ಲಿ ಮಿತ ಪ್ರಮಾಣದಲ್ಲಿ ವಿಮಾ ಆಸಕ್ತಿ ಇದೆ. (ಕೋರ್ಟ ತೀರ್ಮಾನದ ಪ್ರಕಾರ ವೃದ್ಧ ತಾಯಿ ತಂದೆಯರ ಯೋಗಕ್ಷೇಮದ ಹೊಣೆ ವಯಸ್ಕ ಮಕ್ಕಳ ಮೇಲಿದೆ.) ಹೀಗಾಗಿ ತಾಯಿ ತಂದೆಗಳು ಮಿತ ಪ್ರಮಾಣದಲ್ಲಿ ವಯಸ್ಕ ಮಕ್ಕಳ ಜೀವದ ಮೆಲೆ ವಿಮೆ ಮಾಡಿಸಬಹುದು.

5) ತಾಯಿ ತಂದೆಗಳಿಗೆ ಮೈನರ ಮಕ್ಕಳ ಜೀವದಲ್ಲಿ ವಿಮಾ ಆಸಕ್ತಿ ಇಲ್ಲಾ. ಆದರೆ ಮೈನರ ಮಕ್ಕಳ ಯೋಗಕ್ಷೇಮಕ್ಕಾಗಿ, ಮೈನರ ಮಕ್ಕಳ ಪರವಾಗಿ, ಮೈನರ ಮಕ್ಕಳÀ ಅವಶ್ಯಕತೆಗಳ ಪ್ರಮಾಣದಲ್ಲಿ ಮೈನರ ಮಕ್ಕಳ ಜೀವದ ಮೆಲೆ ತಾಯಿ ತಂದೆಗಳು ವಿಮೆ ಮಾಡಿಸಬಹುದು.

6) ಮಾಲೀಕನ ಲಾಭ ನೌಕರರ ಇರುವಿಕೆಯ ಮೇಲೆ ಅವಲಂಬಿತವಾಗಿರುವದರಿಂದ, ಮಾಲೀಕನಿಗೆ ನೌಕರರ ಜೀವದಲ್ಲಿ ವಿಮಾ ಆಸಕ್ತಿ ಅವರಿಮದಪಡೆಯುವ ಲಾಭದ ಕಾಣಿಕೆಯ ಪ್ರಮಾಣದಲ್ಲಿ ಇದೆ.  ಅಷ್ಟರ ಮಟ್ಟಿಗೆ ಮಾಲೀಕನು ನೌಕರರ ಜೀವದ ಮೇಲೆ ವಿಮೆ ಪಡೆಯ ಬಹುದು.
ಅದೇ ರೀತಿ ನೌಕರರ ಗಳಿಕೆ ಮಾಲೀಕನ  ಇರುವಿಕೆಯ ಮೇಲೆ ಅವಲಂಬಿತವಾಗಿರುವದರಿಂದ, ನೌಕರರಿಗೆ ಮಾಲೀಕನ ಜೀವದಲ್ಲಿ ವಿಮಾ ಆಸಕ್ತಿ ಅವರು ಪಡೆಯುವ ವೇತನದ  ಪ್ರಮಾಣದಲ್ಲಿ ಇದೆ. ಅಷ್ಟರ ಮಟ್ಟಿಗೆ ನೌಕರರು ಮಾಲೀಕನ ಜೀವದ ಮೇಲೆ ವಿಮೆ ಪಡೆಯಬಹುದು.

7) ಜಾಮೀನದಾರನಿಗೆ ತನ್ನ ಒಡೆಯನ ಜೀವದಲ್ಲಿ ವಿಮಾ ಆಸಕ್ತಿ ಇದೆ.  ಅವನ ಆರ್ಥಿಕ ಹಿತಾಸಕ್ತಿಯ ಪ್ರಮಾಣಕ್ಕೆ ಅನುಗುಣವಾಗಿ ವಿಮಾ ಆಸಕ್ತಿ ಇರುತ್ತದೆ. ತನ್ನ ವಿಮಾ ಆಸಕ್ತಿಯ ಪ್ರಮಾಣಕ್ಕೆ (ಅಂದರೆ ಆರ್ಥಿಕ ಆಸಕ್ತಿಯ ಪ್ರಮಾಣಕ್ಕೆ) ಅನುಗುಣವಾಗಿ ಜಾಮೀನದಾರನು ಒಡೆಯನ ಜೀವದ ಮೇಲೆ ವಿಮೆ ತೆಗೆದುಕೊಳ್ಳ ಬಹುದು.

8) ಸಾಲಕೊಟ್ಟ ಸಾವುಕಾರನಿಗೆ ಸಾಲಗರನ ಜೀವದ ಮೇಲೆ ವಿಮಾ ಆಸಕ್ತಿ ಇದೆ. ಅವನÀ ಆರ್ಥಿಕ ಹಿತಾಸಕ್ತಿಗಳ ಪ್ರಮಾಣಕ್ಕೆ ಅನುಗುಣವಾಗಿ ವಿಮಾ ಆಸಕ್ತಿ ಇರುತ್ತದೆ. ತನ್ನ ವಿಮಾ ಆಸಕ್ತಿಗಳ ಪ್ರಮಾಣಕ್ಕೆ ಅನುಗುಣವಾಗಿ ಸಾವುಕಾರನು ಸಾಲಗಾರನ ಜೀವದ ಮೇಲೆ ವಿಮೆ ತೆಗೆದುಕೊಳ್ಳ ಬಹುದು.

9) ಪಾಲುಗಾರಿಕೆ ಸಂಸ್ಥೆಯಲ್ಲಿ ಪ್ರತಿ ಪಾಲುದಾರನಿಗೆ ಇತರ ಪಾಲುದಾರರ ಜೀವಗಳಲ್ಲಿ ವಿಮಾ ಆಸಕ್ತಿ ಇದೆ.ಅವನ ಆರ್ಥಿಕ ಹಿತಾಸಕ್ತಿಗಳ ಪ್ರಮಾಣಕ್ಕೆ ಅನುಗುಣವಾಗಿ ವಿಮಾ ಆಸಕ್ತಿ ಇರುತ್ತದೆ.ತನ್ನ ವಿಮಾ ಆಸಕ್ತಿಗಳ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿ ಪಾಲುದಾರನು ಇತರ ಪಾಲುದಾರರ ಜೀವಗಳ ಮೇಲೆ ವಿಮೆ ತೆಗೆದುಕೊಳ್ಳ ಬಹುದು.

No comments:

Post a Comment