Friday, May 22, 2015

22 ಮೇ 2015

ವಿವಾದಾತೀತ ಕರಾರು (indisputable  contract) ಎಂದರೇನು?


ಸತ್ಯವನ್ನು ಮರೆಮಾಚಿದ್ದರೆ, ಸುಳ್ಳು ಹೇಳಿದ ಆಧಾರದ ಮೇಲೆ ವಿಮಾ ಕರಾರನ್ನು, ಕರಾರಿನ ಮೊದಲ ಎರಡು ವರ್ಷಗಳಲ್ಲಿ, ಪೂರ್ವಾನ್ವಯವಾಗಿ ಅನೂರ್ಜಿತಗೊಳಿಸಬಹುದು. ಅಂದರೆ ವಿಮಾ ಕರಾರು ಅನೂರ್ಜಿತ ಅಥವಾ ಅನೂರ್ಜಿತಗೊಳಿಸಬಹುದಾದ (void or voidable)  ಕರಾರು ಆಗಿರುತ್ತದೆ. (ಕರಾರನ್ನು  ಅನೂರ್ಜಿತಗೊಳಿಸಲು  ವಿಮಾ ಒಡಂಬಡಿಕೆ ವಂಚನೆಯ ಆಧಾರದ ಮೇಲೆ ಜರುಗಿರುವದರ ಬಗ್ಗೆ ಸಾಬೀತು ಪಡೆಸುವ ಹೊಣೆಗಾರಿಕೆಯೂ ವಿಮಾ ಕಂಪನಿ ಮೇಲೆ ಇರುವದಿಲ್ಲಾ.) 

ಸತ್ಯವನ್ನು ಮರೆಮಾಚಿದ್ದರೆ, ಸುಳ್ಳು ಹೇಳಿದ ಆಧಾರದ ಮೇಲೆ ವಿಮಾ ಕರಾರನ್ನು, ಕರಾರಿನ ಎರಡು ವರ್ಷಗಳ ನಂತರ sಸುಲಭವಾಗಿ ಅನೂರ್ಜಿತಗೊಳಿಸಲು ಬರುವದಿಲ್ಲಾ. ಆದುದರಿಂದ ಎರಡು ವರ್ಷಗಳ ನಂತರ  ವಿಮಾ ಒಡಂಬಡಿಕೆ ವಿವಾದಾತೀತ ಕರಾರು (indisputable  contract) ಆಗಿರುತ್ತದೆ.

(ಆದರೆ ಎರಡು ವರ್ಷಗಳ ನಂತರ, ವಿಮಾ ಕರಾರನ್ನು ಅನೂರ್ಜಿತಗೊಳಿಸಲೇ ಬೇಕೆಂದು ಬಯಸಿದರೆ, ವಿಮಾ ಒಡಂಬಡಿಕೆಯು  ಅಕ್ರಮವಾಗಿದ್ದು, ಅದು ವಂಚನೆಯ ಆಧಾರದ ಮೇಲೆ ಜರುಗಿರುವದರ ಬಗ್ಗೆ ಸಾಬೀತು ಪಡೆಸುವ ಹೊಣೆಗಾರಿಕೆ ವಿಮಾ ಕಂಪನಿ ಮೇಲೆ ಬೀಳುತ್ತದೆ. ಇದನ್ನೇ ವಿಮಾ ಕಾನೂನು 1938 ರ ಸೆಕ್ಶನ್ 45 ರಲ್ಲಿ ಹೇಳಲಾಗಿದೆ.)

Thursday, May 21, 2015

21 ಮೇ 2015

ಅನೂರ್ಜಿತ (void) ಹಾಗೂ ಅನೂರ್ಜಿತಗೊಳಿಸಬಹುದಾದ (voidable)  ಕರಾರುಗಳೆಂದರೆ ಏನು?


ಅನೂರ್ಜಿತ ಕರಾರು (void contract ) ಗಳು ಕೆಳಗಿನ ಸಂದರ್ಭಗಳಲ್ಲಿ ಹುಟ್ಟಿಕೊಳ್ಳುತ್ತವೆ. 
1) ಮೂಲಭೂತ ತಪ್ಪುಗಳ ಆಧಾರದ ಮೇಲೆಯೇ ಕರಾರು ಅನೂರ್ಜಿತಗೊಳ್ಳಬಹುದು.
     (ಕುಡಿತದ ಅಮಲಿನಲ್ಲಿ ಒಪ್ಪಂದಕ್ಕೆ ಹಸ್ತಾಕ್ಷರ ಹಾಕಿದ ಸಂದರ್ಭದಲ್ಲಿ,) 
2) ಕಾನೂನು ವಿರೋಧಿ ಉದ್ಯೇಶಗಳಿಗಾಗಿ, ಒಪ್ಪಂದಕ್ಕೆ ಮನಸ್ಸು ಮಾಡಿದ್ದರೆ,
(ಆತ್ಮ ಹತ್ಯೆ/ಇನ್ನೊಬ್ಬರ ಹತ್ಯೆಯ ಮೂಲಕ ಲಾಭ ಪಡೆಯಲು ವಿಮಾ ಕೋರಿಕೆ ಸಲ್ಲಿಸಿದ್ದರೆ,) 
3) ವಿಮಾ ಆಸಕ್ತಿಯ ಉಪಸ್ಥಿತಿ ಇಲ್ಲದಿದ್ದರೆ,
(ತಂದೆಯ ಅಥವಾ ಗೆಳೆಯನ ಜೀವದ ಮೇಲೆ ವಿಮೆ ಪಡೆಯ ಬಯಸಿದರೆ,) 
4) ಪರಮೋಚ್ಚ ನಂಬಿಕೆಯ ತತ್ವ ಉಲ್ಲಂಘನೆಯಾಗಿದ್ದರೆ,
     (ಉಭಯ ಪಕ್ಷಗಳು ಬೇರೆ ಬೇರೆ ರೀತಿಯಲ್ಲಿಯೇ ಯೋಚಿಸಿ, ಅನುಚಿತ ಲಾಭ ಪಡೆಯ ಬಯಸಿದರೆ.) 
5) ವಾರಂಟಿಯ ಉಲ್ಲಂಘನೆಯಾದಾಗ,
(ಸತ್ಯವನ್ನು ಮರೆ ಮಾಚಿದಾಗ, ಸುಳ್ಳಿನ ಪ್ರದರ್ಶನವಾದಾಗ.) 

ಅನೂರ್ಜಿತಗೊಳಿಸಬಹುದಾದ ಕರಾರು  (voidable  contract)  :
ಅನೂರ್ಜೀತಗೊಳಿಸಬಹುದಾದ  (voidable) ಕರಾರು ಎಂದರೆ ವಿಮಾ ಕಂಪನಿ ಬಯಸಿದರೆ ಅನೂರ್ಜಿತ ಕರಾರನ್ನು ಊರ್ಜಿತವೆಂದು ಮಾನ್ಯ ಮಾಡಬಹುದು.


Wednesday, May 20, 2015

20 ಮೇ 2015

ಕರಾರಿನ ನಿಯಮಗಳ ಉಲ್ಲಂಘನೆಯ   (breach of condition)    ಪರಿಣಾಮ ಏನು?

ಕರಾರಿನ ನಿಯಮಗಳ ಉಲ್ಲಂಘನೆ  (breach of condition)   ಯಾದಾಗ ನಡೆದಾಗ ಕರಾರು ಅನೂರ್ಜಿತ (void)ವಾಗುತ್ತದೆ. ಇಲ್ಲವೇ ಅನೂರ್ಜಿತಗೊಳಿಸಬಹುದಾದ (voidable)  ಕರಾರು ಆಗುತ್ತದೆ. ಅನೂರ್ಜೀತಗೊಳಿಸಬಹುದಾದ (voidable)  ಕರಾರು ಎಂದರೆ ವಿಮಾ ಕಂಪನಿ ಬಯಸಿದರೆ ಅನೂರ್ಜಿತ ಕರಾರನ್ನು ಊರ್ಜಿತವೆಂದು ಮಾನ್ಯ ಮಾಡಬಹುದು.
       

Tuesday, May 19, 2015

19 ಮೇ 2015

ಮರಣ ವಿಮಾ ಪರಿಹಾರ ಸಂದಾಯ ಮಾಡುವಾಗ, ಯಾವ ಸಂದರ್ಭಗಳಲ್ಲಿ ವಿಶೇಷ ಜಾಗ್ರತೆ (special care)    ವಹಿಸ ಬೇಕು? 

ಮರಣ ವಿಮಾ ಪರಿಹಾರ ಸಂದಾಯ ಮಾಡುವಾಗ, ಕೆಳಗಿನÀ ಸಂದರ್ಭಗಳಲ್ಲಿ ವಿಶೇಷ ಜಾಗ್ರತೆ (special care)  ವಹಿಸಬೇಕು.
ವಿಮಾ ಕಂಪನಿಗೆ ಮರಣದ ಸೂಚನೆ ಅಪರಿಚಿತ ವ್ಯಕ್ತಿಯಿಂದ ಬಂದಾಗ,
ವಿಮಾ ಪರಿಹಾರ ಸಂದಾಯದ ಕಾರ್ಯಪ್ರಗತಿ ಬಗ್ಗೆ, ಮೇಲಿಂದ ಮೇಲೆ, ಪುನಃ ಪುನಃ ವಿಮಾ ಕಂಪನಿಯ ಹತ್ತಿರ ವಿಚಾರಿಸತೊಡಗಿದಾಗ,
ಪಾಲಿಸಿ ಕರಾರು ಪ್ರಾರಂಭವಾಗಿ ಮೂರು ವರ್ಷದೊಳಗೆ ಮರಣ ಸಂಭವಿಸಿದಾಗ, ಪಾಲಿಸಿಯ ಮೂರು ವರ್ಷಗಳ ಅವಧಿ ಮುಗಿಯುವ ವರೆಗೆ ಕಾಯ್ದು,  ನಂತರ ವಿಮಾ ಪರಿಹಾರ ಕೋರಿಕೆಯನ್ನು ಸಲ್ಲಿಸಿದಾಗ,
      (ತನಿಖೆಯ ತೀವೃತೆಯನ್ನು ಉದ್ಯೇಶ ಪೂರ್ವಕವಾಗಿ ಕಡಿಮೆ ಮಾಡುವ, ದುರುದ್ಯೇಶದ ಸಾಧ್ಯತೆ ಇಲ್ಲಿ ಕಂಡು ಬರುವದು.)


Monday, May 18, 2015

18 ಮೇ 2015

ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ವಂಚನೆ(fraud) ಯು ಭವಿಷ್ಯದಲ್ಲಿ ಯಾವ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ? 

ಉತ್ತರ : ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ವಂಚನೆ(fraud)ಗೆ ಅವಕಾಶ ದೊರಕಿದರೆ, ಅದು ಭವಿಷ್ಯದಲ್ಲಿ ಕೆಳಗಿನ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ.
ವಿಮಾಕಂಪನಿಗಳಿಗೆ – ಸಂಸ್ಥೆಯ ಒಟ್ಟಾರೆ ವಿಮಾ ಪರಿಹಾರ ವೆಚ್ಚ ಊಹಿಸಿದ್ದಕ್ಕಿಂತಲೂ ಹೆಚ್ಚಾಗಿ, ಸ್ಪರ್ಧಾತ್ಮಕ ವ್ಯಾಪಾರದಲ್ಲಿ ಹಿನ್ನೆಡೆಗೆ ಅವಕಾಶ ಮಾಡಿಕೊಡುತ್ತದೆ. ಸಂಸ್ಥೆಯ ನಿರ್ಲಕ್ಷ್ಯ, ಹೆಚ್ಚು ಸಂಖ್ಯೆಯಲ್ಲಿ ವಂಚನೆಯ ವಿಮಾ ಸಂದಾಯ (fraudulent claim)  ಗಳಿಗೆ ಅವಕಾಶ ಮಾಡಿಕೊಡುತ್ತದೆ.
ಸಾಮಾನ್ಯ ಗ್ರಾಹಕರಿಗೆ -ಸಂಸ್ಥೆಯ ಒಟ್ಟಾರೆ ವಿಮಾ ಪರಿಹಾರ ವೆಚ್ಚ, ಊಹಿಸಿದ್ದಕ್ಕಿಂತಲೂ ಹೆಚ್ಚಾಗುವದರಿಂದ, 1) ವಿಮಾ ಕಂತಿನ ದರದಲ್ಲಿ ಅನಗತ್ಯವಾದ ಹೆಚ್ಚಳ ಕಂಡು ಬರುವದು. 2) ಪ್ರಾಮಾಣಿಕ ಗ್ರಾಹಕರಿ ಇದರಿಂದ ಅನಗತ್ಯವಾಗಿ, ಹೆಚ್ಚು ಬೆಲೆ ತೆರಬೇಕಾಗುವದು.
ವಂಚಕ ಗ್ರಾಹಕರಿಗೆ – ವಿಮಾ ಕಂಪನಿಯ ನಿರ್ಲಕ್ಷ್ಯದಿಂದ ವಂಚಕ ಗ್ರಾಹಕರು ಇನ್ನೂ ಉತ್ತೇಜಿತರಾಗಿ, ಹೆಚ್ಚಿನ ವಂಚನೆಗೆ ತಯಾರಾಗುವರು, ಹಾಗೂ ಇತರರಿಗೂ ಪ್ರೇರಣೆ ನೀಡುವರು.

Sunday, May 17, 2015

17 ಮೇ 2015

ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ವಂಚನೆ (fraud)  ಯ ಬಗ್ಗೆ ಯಾವಾಗ ಅನುಮಾನಿಸುತ್ತಾರೆ? 

ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ಕೆಳಗಿನ ಸಂದರ್ಭಗಳಲ್ಲಿ ವಂಚನೆ (fraud)   ಯ ಬಗ್ಗೆ ಅನುಮಾನಿಸುತ್ತಾರೆ.
ವಿಮಾ ಕರಾರು ಮುಗಿದ ಮೂರು ವರ್ಷದೊಳಗೆ ಮರಣ ಸಂಭವಿಸಿದ್ದರೆ, ವಿಮಾ ಮಾಹಿತಿ ಬಗ್ಗೆ, ಈ ಮೊದಲು ತಪ್ಪು ಹೇಳಿಕೆ ನೀಡಿರುವ, ಸತ್ಯ ಸಂಗತಿ ಬಚ್ಚಿಟ್ಟಿರುವ ಸಾಧ್ಯತೆ ಕಂಡು ಬರುತ್ತದೆ.
ಮೂಲ ಪಾಲಿಸಿ ಬಾಂಡನ್ನು ವಿಮಾ ಪರಿಹಾರಕ್ಕಾಗಿ ನೀಡದಿದ್ದಾಗ, ಪಾಲಸಿಯ ಮಾಲೀಕತ್ವದ ಹಕ್ಕುಗಳಲ್ಲಿ ಬದಲಾವಣೆಗಳ ಸಾಧ್ಯತೆ ಕಂಡು ಬರುತ್ತದೆ.
ಕ್ಷುಲ್ಲಕ ಕಾರಣಗಳಿಗಾಗಿ ವಿಮಾ ಸಂಸ್ಥೆ, ವಿಮಾ ಪರಿಹಾರ ನೀಡಲು ತೊಂದರೆ ಕೊಡತೊಡಗಿದರೆ, ವಿಮಾ ಸಂಸ್ಥೆಯ ಪ್ರಾಮಾಣಿಕತೆಗೆ ಅನುಮಾನ ಉಂಟಾಗುತ್ತದೆ.


Saturday, May 16, 2015

16 ಮೇ 2015

ಮರಣ ವಿಮಾ ಪರಿಹಾರ ಸಂದಾಯ(Death claim settlment)  ವನ್ನು ಹೇಗೆ ಮಾಡುತ್ತಾರೆ? 

ಮರಣದ ಸೂಚನೆ, ಪಾಲಸಿ ಹಕ್ಕುದಾರನಿಂದ ಬಂದ ಕೂಡಲೇ ವಿಮಾ ಕಂಪನಿಯು, ಮರಣ ವಿಮಾ ಪರಿಹಾರ ಸಂದಾಯಕ್ಕೆ ಅವಶ್ಯಕ ಕ್ರಮ ಕೈಕೊಳ್ಳುತ್ತದೆ. ಅಗತ್ಯಬಿದ್ದರೆ, ವಿಮಾ ಪರಿಹಾರ ಸಂದಾಯಕ್ಕೆ ಮೊದಲು, ತನಿಖೆಯನ್ನು ಕೈಕೊಳ್ಳುತ್ತದೆ.


Friday, May 15, 2015

15 ಮೇ 2015

ಜೀವಿತ ಸೌಲಭ್ಯ ಪರಿಹಾರ ಸಂದಾಯ (Death claim settlement) ವನ್ನು ಹೇಗೆ ಮಾಡುತ್ತಾರೆ? 

ಸಾಮಾನ್ಯವಾಗಿ ಜೀವಿತ ಸೌಲಭ್ಯ ಪರಿಹಾರ ಸಂದಾಯ(Death claim settlement)ದ ಕೆಲಸವನ್ನು ವಿಮಾ ಕಂಪನಿಗಳೇ ಪ್ರಾರಂಭಿಸುತ್ತವೆ. ಮೂಲ ಪಾಲಿಸಿಯ ಮೇಲೆ ಅವಶ್ಯಕ ಒಕ್ಕಣಿಕೆಯನ್ನು ನಮೂದಿಸಿದ ನಂತರವೇ, ಜೀವಿತ ಸೌಲಭ್ಯ ಪರಿಹಾರವನ್ನು ನೀಡಲಾಗುತ್ತದೆ. ಒಂದು ವೇಳೆ ಮೂಲ ಪಾಲಿಸಿ ಬಾಂಡ್ ಕಳೆದು ಹೋಗಿದ್ದರೆ, ಅವಶ್ಯಕ ಒಕ್ಕಣಿಕೆಯ ನಮೂದಿಸುವಿಕೆಗೆ, ಡುಪ್ಲಿಕೇಟ್ ಪಾಲಸಿ ಬಾಂಡ್ ನೀಡ ಬೇಕಾಗುತ್ತದೆ.


Thursday, May 14, 2015

14 ಮೇ 2015

 ಕಂಡೀಶನಲ್ ಅಸೈನಮೆಂಟ್ ಮಾಡಿದ ಪಾಲಿಸಿಯಲ್ಲಿ ವಿಮಾಪರಿಹಾರ ಪ್ರದಾನವನ್ನು ಯಾರಿಗೆ ಮಾಡಲಾಗುತ್ತದೆ?

ಕಂಡೀಶನಲ್ ಅಸೈನಮೆಂಟ್ ಮಾಡಿದ ಪಾಲಿಸಿಯಲ್ಲಿ ವಿಮಾಪರಿಹಾರ ಪ್ರದಾನವನ್ನು ಕೆಳಗಿನಂತೆ  ಮಾಡಲಾಗುತ್ತದೆ.
ಪರಿಪಕ್ವ ವಿಮಾ ಪರಿಹಾರ ಸಂದಾಯವನ್ನು, ಪಾಲಸಿಧಾರಕನಿಗೆ ಮಾಡಲಾಗುತ್ತದೆ.
ಮರಣ ವಿಮಾ ಪರಿಹಾರ ಸಂದಾಯವನ್ನು, ಪರಿಹಾರ ಸಂದಾಯ ಸಮಯದಲ್ಲಿ, ಅಸೈನೀಯು ಜೀವಂತವಾಗಿದ್ದರೆ, ಪರಿಹಾರ ಪ್ರದಾನವನ್ನು ಅಸೈನೀಗೆ  ಮಾಡಲಾಗುತ್ತದೆ.
ಮರಣ ವಿಮಾ ಪರಿಹಾರ ಸಂದಾಯವನ್ನು, ಪರಿಹಾರ ಸಂದಾಯ ಸಮಯದಲ್ಲಿ, ಅಸೈನೀಯು ಪಾಲಸಿ ಧಾರಕನಿಗಿಂತ ಮೊದಲೇ ನಿಧನನಾಗಿದ್ದರೆ, ಪರಿಹಾರ ಪ್ರದಾನವನ್ನು ಪಾಲಸಿಧಾರಕನ ವಾರಸುದಾರರಿಗೆ ಮಾಡಲಾಗುತ್ತದೆ. 
ಮರಣ ವಿಮಾ ಪರಿಹಾರ ಸಂದಾಯವನ್ನು, ಪರಿಹಾರ ಸಂದಾಯ ಸಮಯದಲ್ಲಿ, ಅಸೈನೀಯು ಪಾಲಸಿ ಧಾರಕನ ನಂತರ ನಿಧನನಾಗಿದ್ದರೆ, ಪರಿಹಾರ ಪ್ರದಾನವನ್ನು ಅಸೈನೀಯ ವಾರಸುದಾರರಿಗೆ ಮಾಡಲಾಗುತ್ತದೆ. 


Wednesday, May 13, 2015

13 ಮೇ 2015

ಪರಿಪಕ್ವ ವಿಮಾ ಪರಿಹಾರ ಸಂದಾಯಕ್ಕೆ ಅಗತ್ಯವಿರುವ ದಾಖಲೆಪತ್ರಗಳು ಯಾವುವು?

ಪರಿಪಕ್ವ ವಿಮಾ ಪರಿಹಾರ ಸಂದಾಯಕ್ಕೆ ಅಗತ್ಯವಿರುವ ದಾಖಲೆಪತ್ರಗಳು :
ಮೂಲ ಪಾಲಸಿ ಬಾಂಡ್. (ಅದು ಕಳೆದು ಹೋಗಿದ್ದರೆ, ಇಂಡೆಮ್ನಿಟಿ ಬಾಂಡ್)
ಪಾಲಸಿಹಕ್ಕುದಾರನ ಹೇಳಿಕೆ ಪತ್ರ. 
ವಯಸ್ಸಿನ ದಾಖಲೆ, ( ಈಗಾಗಲೇ ವಯಸ್ಸು ಅಂಗೀಕೃತವಾಗಿರದಿದ್ದರೆ,)
ಪಾಲಸಿಹಕ್ಕುದಾರನಿಂದ ರುಜು ಮಾಡಿದ ಡಿಸ್‍ಚಾರ್ಜ ಫಾರ್ಮ.
ಕೊನೆಗೆ ನೀಡಲಾದ ವಿಮಾ ಕಂತಿನ ರಸೀದಿ.


Tuesday, May 12, 2015

12 ಮೇ 2015

ಪರಿಪಕ್ವ ವಿಮಾ ಪರಿಹಾರ ಸಂದಾಯವನ್ನು ಹೇಗೆ ಮಾಡುತ್ತಾರೆ? 

ಸಾಮಾನ್ಯವಾಗಿ ಪರಿಪಕ್ವ ವಿಮಾ ಪರಿಹಾರ ಸಂದಾಯದ ಕೆಲಸವನ್ನು ವಿಮಾ ಕಂಪನಿಗಳೇ ಪ್ರಾರಂಭಿ
ಸುತ್ತವೆ. ಪರಿಪಕ್ವವಾಗುವ ತಿಂಗಳಿಗಿಂತ, ಎರಡು ಮೂರು ತಿಂಗಳು ಮೊದಲೇ, ಪರಿಹಾರ ಸಂದಾಯಕ್ಕೆ ಅವಶ್ಯ ವಿರುವ ಕಾಗದಪತ್ರಗಳನ್ನು ಕಳಿಸಲು, ವಿಮಾಸಂಸ್ಥೆಯು ಪಾಲಸಿಧಾರಕನಿಗೆ ಸೂಚನೆ ಕಳಿಸುತ್ತದೆ.


Monday, May 11, 2015

11 ಮೇ 2015

ವಿಮಾ ಪರಿಹಾರ ಸಂದಾಯಕ್ಕಾಗಿ, ಆಯ್.ಆರ್.ಡಿ.ಎ.ಯು 2002 ರಲ್ಲಿ ಪ್ರಕಟಿಸಿದ ಪಾಲಸಿಧಾರಕರ ಹಕ್ಕು ರಕ್ಷಣಾ ನಿಯಮಾವಳಿಗಳಲ್ಲಿ ಯಾವ ನಿರ್ದೇಶನಗಳನ್ನು ನೀಡಿದೆ? 

 ವಿಮಾ ಪರಿಹಾರ ಸಂದಾಯಕ್ಕಾಗಿ, ಆಯ್.ಆರ್.ಡಿ.ಎ.ಯು 2002 ರಲ್ಲಿ ಪ್ರಕಟಿಸಿದ ಪಾಲಸಿಧಾರಕರ ಹಕ್ಕು ರಕ್ಷಣಾ ನಿಯಮಾವಳಿಗಳಲ್ಲಿ ಕೆಳಗಿನÀ ನಿರ್ದೇಶನಗಳನ್ನು ವಿಮಾ ಸಂಸ್ಥಗೆ ನೀಡಿದೆ.

1) ವಿಮಾ ಪರಿಹಾರ ನೀಡುವದಕ್ಕೆ ಪಾಲಿಸಿ ಬಾಂಡನ್ನು ಪಡೆಯಲೇಬೇಕು.
2) ವಿಮಾ ಪರಿಹಾರ ಕೋರಿಕೆ ಸಲ್ಲಿಸಿದ, 15 ದಿನದೊಳಗೆ ಅವಶ್ಯವೆನಿಸಿದ ಎಲ್ಲಾ ದಾಖಲೆಗಳನ್ನು ನೀಡಲು ಒಂದೇ ಬಾರಿಗೆ ಕೇಳಬೇಕು.
3) ವಿಮಾ ಪರಿಹಾರ ಕೋರಿಕೆ ಸಲ್ಲಿಸಿದ, ಎಲ್ಲಾ ದಾಖಲೆಗಳು ತಲುಪಿದ 30 ದಿನದೊಳಗೆ, ವಿಮಾ ಪರಿಹಾರ ಕೋರಿಕೆಯನ್ನು ಒಪ್ಪಿಕೊಂಡ/ತಿರಸ್ಕರಿಸಿದ ಬಗ್ಗೆ ನಿರ್ಣಯ ತಿಳಿಸಬೇಕು.
4) ವಿಮಾ ಪರಿಹಾರ ಸಂದಾಯಕ್ಕೆ, ತನಿಖೆಯ ಅವಶ್ಯಕತೆ ಎನಿಸಿದರೆ, ತನಿಖಾ ವರದಿ ಪಡೆಯಲು 6 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳತಕ್ಕದ್ದಲ್ಲ.
5) ವಿಮಾ ಪರಿಹಾರ ನೀಡಿಕೆಯ ಬಗ್ಗೆ ನಿರ್ಣಯ ಕೈಕೊಳ್ಳಲು, ವಿಮಾ ಕಂಪನಿಯು ನಿಗದಿತ ಅವಧಿಗಿಂತ ಹೆಚ್ಚು ಸಮಯ ತೆಗೆದು ಕೊಂಡರೆ, ಈ ಹೆಚ್ಚಿನ ಅವಧಿಗೆ ವಿಮಾಸಂಸ್ಥೆಯು, ವಿಮಾಪರಿಹಾರ ಹಣದ ಮೇಲೆ, ಬಡ್ಡಿಯನ್ನು ಬ್ಯಾಂಕ್ ಉಳಿತಾಯದ ಬಡ್ಡೀ ದರಕ್ಕಿಂತ 2% ಹೆಚ್ಚಿನ ದರದಲ್ಲಿ ನೀಡ ಬೇಕಾಗುವದು.
6) ವಿಮಾ ಪರಿಹಾರ ನೀಡಿಕೆಯ ಬಗ್ಗೆ ನಿರ್ಣಯ ತೆಗೆದುಕೊಂಡ 30 ದಿನಗಳೊಳಗೆ, ಪರಿಹಾರ ಸಂದಾಯವನ್ನು ಪಾಲಸಿ ಹಣ ಹಕ್ಕುದಾರರಿಗೆ ಮಾಡಬೇಕು. 
ಈ ಅವಧಿಯೊಳಗೆ ಪರಿಹಾರ ಹಣ ಸಂದಾಯವಾಗದಿದ್ದರೆ, ಹೆಚ್ಚಿಗೆ ತೆಗೆದು ಕೊಂಡ ಅವಧಿಗೆ, ಬಡ್ಡಿಯನ್ನು ಬ್ಯಾಂಕ್ ಉಳಿತಾಯದ ಬಡ್ಡೀ ದರದಲ್ಲಿ ನೀಡ ಬೇಕಾಗುವದು.


Sunday, May 10, 2015

10 ಮೇ 2015

ವಿಮಾ ಪರಿಹಾರ ಸಂದಾಯಕ್ಕಾಗಿ (claim settlement/ payment) , ಆಯ್.ಆರ್.ಡಿ.ಎ.ಯು ಕೈಕೊಂಡ ವಿಶೇಷ ಕ್ರಮಗಳು ಯಾವುವು? 

ವಿಮಾ ಪರಿಹಾರ ಸಂದಾಯಕ್ಕೆ ಮಾರ್ಗದರ್ಶನ ಮಾಡಲು, ಆಯ್.ಆರ್.ಡಿ.ಎ.ಯು, ಪಾಲಸಿಧಾರಕರ ಹಕ್ಕು ರಕ್ಷಣಾ ನಿಯಮಾವಳಿಗಳನ್ನು 2002 ರಲ್ಲಿ ಪ್ರಕಟಿಸಿದೆ. 


Saturday, May 9, 2015

9 ಮೇ 2015

ಅಪಘಾತ ಮರಣ ವಿಮಾ (Accident  death  claim)  ಪರಿಹಾರ ಸಂದಾಯಕ್ಕಾಗಿ, ವಿಮಾ ಸಂಸ್ಥೆ ಯಾವ ಹೆಚ್ಚುವರಿ ದಾಖಲಾತಿಗಳನ್ನು ಕೇಳುತ್ತದೆ?

ಅಪಘಾತ ಮರಣ ವಿಮಾ ಪರಿಹಾರ (Accident  death  claim)  ಸಂದಾಯಕ್ಕಾಗಿ, ವಿಮಾ ಸಂಸ್ಥೆ ಕೆಳಗಿನÀ ಹೆಚ್ಚುವರಿ ದಾಖಲಾತಿಗಳನ್ನು ಕೇಳುತ್ತದೆ.
ಪೋಲೀಸರ ಪ್ರಾಥಮಿಕ ವರದಿ,
ಪಂಚನಾಮಾ ವರದಿ,
ಫೋರೆನ್ಸಿಕ್ ವರದಿ,
ಮರಣಾ ನಂತರ ನಡೆಸಿದ ಶಸ್ತ್ರಕಿಯಾ ವರದಿ,
ಕೋರೋನರ್ಸ ವರದಿ,
ವಿಶೇಷ ತನಿಖಾ ವರದಿ ( ಅವಶ್ಯವೆನಿಸಿದರೆ)


Friday, May 8, 2015

8 ಮೇ 2015

ಕೋರ್ಟ್ ನಿರ್ಣಯಕ್ಕೆ ಕಾಯದೇ ಮರಣವನ್ನು ಕಲ್ಪಿಸಿಕೊಂಡು (Presumption of death) ವಿಮಾ ಕಂಪನಿ ಮರಣ ವಿಮಾ ಪರಿಹಾರ ನೀಡಬಹುದೆ?

 ಕೆಲವು ವಿಶಿಷ್ಠ ಸಂದರ್ಭಗಳಲ್ಲಿ ಕಳೆದು ಹೋದ ವ್ಯಕ್ತಿ ನಿಜವಾಗಿ ಮರಣ ಹೊಂದಿದರ ಬಗ್ಗೆ ಬಲವಾದ ಬೇರೆ ಪುರಾವೆ ದೊರೆತರೆ, (ಉದಾ : ವಿಮಾನ ದುರಂತದಲ್ಲಿ) , ಕೋರ್ಟ್ ನಿರ್ಣಯಕ್ಕೆ ಕಾಯದೇ ಮರಣವನ್ನು ಕಲ್ಪಿಸಿಕೊಂಡು (Presumption of death) ವಿಮಾ ಕಂಪನಿ ಮರಣ ವಿಮಾ ಪರಿಹಾರವನ್ನು  ನೀಡುವದು.

Thursday, May 7, 2015

7 ಮೇ 2015

 ಮರಣವನ್ನು ಕಲ್ಪಿಸಿಕೊಳ್ಳ್ಳುವದರ (Presumption of death)  ಬಗ್ಗೆ 1872 ರ ಸಾಕ್ಷಿ  ಕಾನೂನಿನ (evidence act ) ಸೆಕ್ಶನ್ 107 ಹಾಗೂ 108 ರಲ್ಲಿ ಏನನ್ನು ವಿವರಿಸಲಾಗಿದೆ?

1872 ರ ಸಾಕ್ಷಿ  ಕಾನೂನಿನ (evidence act ) ಸೆಕ್ಶನ್ 107 ಹಾಗೂ 108 ರಲ್ಲಿ ಮರಣವನ್ನು ಕಲ್ಪಿಸಿಕೊಳ್ಳ್ಳುವದರ (Presumption of death) ಬಗ್ಗೆ ಕೆಳಗಿನಂತೆ ವಿವರಿಸಲಾಗಿದೆ. ಒಂದು ವ್ಯಕ್ತಿ ಕಳೆದು ಹೋದ ನಂತರ 7 ವರ್ಷಗಳ ವರೆಗೆ ಆತನ ಇರುವಿಕೆಯ ಬಗ್ಗೆ ಯಾವ ಸುಳಿವು ಸಿಗದೇ ಇದ್ದರೆ, ಆತನು ಮರಣವನ್ನು ಹೊಂದಿದ್ದಾನೆಂದು ಕಲ್ಪಸಿಕೊಳ್ಳಲಾಗುವದು.
ಇಂತಹ ಮರಣದ ಬಗ್ಗೆ ನಿರ್ಣಯ ಕೊಡಲು ಕೋರ್ಟಿಗೆ ಅರ್ಜಿ ಸಲ್ಲಿಸಿದರೆ, ಅರ್ಜಿ ಸಲ್ಲಿಸಿದ ದಿನಾಂಕಿನಿಂದೆ ಏಳು ವರುಷ ಕಾಯ್ದು, ನಂತರ  ಆ ವ್ಯಕ್ತಿಯು ಮರಣ ಹೊಂದಿದ್ದಾನೆಂದು ಕಲ್ಪಿಸಿಕೊಂಡು, ಆ ಬಗ್ಗೆ ಕೋರ್ಟು ನ್ಯಾಯ ನಿರ್ಣಯ ಕೊಡುವದು. (ಅಲ್ಲಿಯ ವರೆಗೆ ಕಳೆದು ಹೋದ ವ್ಯಕ್ತಿ ಜೀವಂತವಾಗಿದ್ದಾನೆಂದೇ ಭಾವಿಸ ಬೇಕು, ಹಾಗೂ ಅಲ್ಲಿಯ ವರೆಗೆ ಆತನ ಪಾಲಸಿ ಮುಂದುವರೆಯಲೇಬೇಕು.


Wednesday, May 6, 2015

6 ಮೇ 2015

ಮರಣವನ್ನು ಕಲ್ಪಿಸಿಕೊಳ್ಳ್ಳುವದರ (Presumption of death) ಬಗ್ಗೆ ಯಾವ ಕಾನೂನಲ್ಲಿ ವಿವರಿಸಲಾಗಿದೆ? 

ಮರಣವನ್ನು ಕಲ್ಪಿಸಿಕೊಳ್ಳ್ಳುವದರ (Presumption of death) ಬಗ್ಗೆ 1872 ರ ಸಾಕ್ಷಿ  ಕಾನೂನಿನ(evidence act  ಸೆಕ್ಶನ್ 107 ಹಾಗೂ 108 ರಲ್ಲಿ ವಿವರಿಸಲಾಗಿದೆ?


Tuesday, May 5, 2015

5 ಮೇ 2015

ಮರಣವನ್ನು ಕಲ್ಪಿಸಿಕೊಳ್ಳ್ಳುವದು (Presumption of death)  ವೆಂದರೇನು? 

ವಿಮೆ ಮಾಡಿಸಿದ ವ್ಯಕ್ತಿ ಮರಳಿ ಕಾಣದ ರೀತಿಯಲ್ಲಿ ಕಳೆದು ಹೋದರೆ ಆ ವ್ಯಕ್ತಿಯು ಮರಣಿಸಿದ್ದಾನೆ ಎಂದು ಭಾವಿಸಿದರೆ, ಅದಕ್ಕೆ  ಮರಣವನ್ನು ಕಲ್ಪಿಸಿಕೊಳ್ಳ್ಳುವದು (Presumption of death)   ಎಂದು ಕರೆಯಲಾಗುತ್ತದೆ.


Monday, May 4, 2015

4 ಮೇ 2015

 ಶೀಘ್ರ ಮರಣ ವಿಮಾ ಪರಿಹಾರ (early  death  claim)  ಸಂದಾಯಕ್ಕಾಗಿ, ವಿಮಾ ಸಂಸ್ಥೆ ಯಾವ ಹೆಚ್ಚುವರಿ ದಾಖಲಾತಿಗಳನ್ನು ಕೇಳುತ್ತದೆ?

ಶೀಘ್ರ ಮರಣ ವಿಮಾ ಪರಿಹಾರ (early  death  claim)  ಸಂದಾಯಕ್ಕಾಗಿ, ವಿಮಾ ಸಂಸ್ಥೆ ಕೆಳಗಿನÀ ಹೆಚ್ಚುವರಿ ದಾಖಲಾತಿಗಳನ್ನು ಕೇಳುತ್ತದೆ.
ಮರಣ ಸಮಯದಲ್ಲಿ ಉಪಚಾರ ನೀಡಿದ ವೈದ್ಯರ ಹೇಳಿಕೆ,
ಮರಣಕ್ಕೆ ಮುಂಚೆ ವಿಮಾ ಜೀವಿ ಆಸ್ಪತ್ರೆಗೆ ದಾಖಲಾಗಿದ್ದರೆ, ಆಸ್ಪತ್ರೆಯ ಹೇಳಿಕೆ,
ಅಂತಿಮ ಸಂಸ್ಕಾರದಲ್ಲಿ ಪಾಲುಗೊಂಡ ಪ್ರತ್ಯಕ್ಷದಶಿಗಳ ಹೇಳಿಕೆ,
ವಿಮಾ ಜೀವಿ ನೌಕರಿ ಮಾಡುತ್ತಿದ್ದರೆ, ವಿಮಾಜೀವಿಯ ರಜಾದಾಖಲೆಗಳು.
      

Sunday, May 3, 2015

3 ಮೇ 2015

ಶೀಘ್ರ ಮರಣ ವಿಮಾ ಪರಿಹಾರ ಸಂದಾಯ (early  death  claim)  ಕ್ಕಾಗಿ, ವಿಮಾ ಸಂಸ್ಥೆ ಯಾವ ಕ್ರಮ ಕೈಕೊಳ್ಳುತ್ತದೆ?

 ವಿಮಾ ಕರಾರು ಏರ್ಪಟ್ಟ ನಂತರ, 3 ವರ್ಷಗಳ  ಅವಧಿಯೊಳಗೆ ಮರಣ ಸಂಭವಿಸಿದರೆ ಅಂತಹ ಮರಣ ವಿಮಾ ಪರಿಹಾರ ಸಂದಾಯಕ್ಕೆ, ಶೀಘ್ರ ಮರಣ ವಿಮಾ ಪರಿಹಾರ (early  death  claim)  ಸಂದಾಯ ಎಂದು ಕರೆಯುತ್ತಾರೆ. ಇಂತಹ ಸಂದರ್ಭದಲ್ಲಿ, ತಪ್ಪು ಮಾಹಿತಿ ನೀಡುವ ಮೂಲಕ ಅಥವಾ ಸತ್ಯ ಸಂಗತಿಗಳನ್ನು ಬಚ್ಚಿಡುವ ಮೂಲಕ ಕರಾರಿನ ಉಲ್ಲಂಘನೆಯಾಗಿಲ್ಲ ಎನ್ನುವದನ್ನು ಖಾತ್ರಿ ಪಡೆಸಿಕೊಳ್ಳಲು, ಸಂಸ್ಥೆಯು ಪೂರ್ವಭಾವಿ ತನಿಖೆಯನ್ನು ಏರ್ಪಡಿಸುತ್ತದೆ.


Saturday, May 2, 2015

2 ಮೇ 2015

 ಮರಣ ವಿಮಾ ಪರಿಹಾರ ಸಂದಾಯಕ್ಕಾಗಿ, ವಿಮಾ ಸಂಸ್ಥೆ ಯಾವ ದಾಖಲೆ (documents) ಗಳನ್ನು ಕೇಳುವದು? 

ಮರಣ ವಿಮಾ ಪರಿಹಾರ ಸಂದಾಯಕ್ಕಾಗಿ, ವಿಮಾ ಸಂಸ್ಥೆ ಕೆಳಗಿನ ದಾಖಲೆ (documents) ಗಳನ್ನು ಕೇಳುವದು.
ಪಾಲಸಿ ಬಾಂಡ್,
ವಯಸ್ಸಿನ ದಾಖಲೆ (ಈಗಾಗಲೇ ವಯಸ್ಸಿನ ಅಂಗೀಕಾರ ಆಗಿರದಿದ್ದರೆ)
ಮರಣ ದಾಖಲೆ.
ಪಾಲಿಸಿಯನ್ನು ಅಸೈನ್ ಮಡಿದ್ದರೆ, ಅಸೈನ್‍ಮೆಂಟಿನ ಕಾಗದ ಪತ್ರಗಳು.
ನಾಮೀನೇಶನ್/ಅಸೈನ್‍ಮೆಂಟ್ ಇರದಿದ್ದಾಗ, ವಾರಸಾ ಪ್ರಮಾಣ ಪತ್ರ.
ಪಾಲಸಿ ಹಕ್ಕುದಾರನಿಂದ ಭರ್ತಿ ಮಾಡಿದ ಹೇಳಿಕೆ ಫಾರ್ಮ. (ಛಿಟಚಿimಚಿಟಿಣ’s sಣಚಿಣemeಟಿಣ )  
ಮೊದಲೇ ರುಜು ಹಾಕಿದ, ಪರಿಹಾರ ಹಣದ ಡಿಸ್‍ಚಾರ್ಜ ಫಾರ್ಮ.
      

Friday, May 1, 2015

1 ಮೇ 2015

ಮರಣ ವಿಮಾ ಪರಿಹಾರ ಸಂದಾಯ (death claim payment) ಕ್ಕಾಗಿ, ವಿಮಾ ಸಂಸ್ಥೆಗೆ ಯಾರು ವಿನಂತಿಸಿಕೊಳ್ಳಬೇಕು? 

 ಮರಣ ವಿಮಾ ಪರಿಹಾರ ಸಂದಾಯ(death claim payment) ಕ್ಕಾಗಿ ವಿಮಾ ಸಂಸ್ಥೆಗೆ; ನಾಮಿನೀ/ಅಸೈನೀ, ಅಥವಾ ಪಾಲಸಿಧಾರಕನ ವಾರಸುದಾರರು ಅಥವಾ ಏಜೆಂಟರು/ನೌಕರಿ ಕೊಟ್ಟ ಮಾಲೀಕರು; ವಿಮಾ ಸಂಸ್ಥೆಗೆ ವಿನಂತಿಸಿಕೊಳ್ಳಬೇಕು.