Monday, May 11, 2015

11 ಮೇ 2015

ವಿಮಾ ಪರಿಹಾರ ಸಂದಾಯಕ್ಕಾಗಿ, ಆಯ್.ಆರ್.ಡಿ.ಎ.ಯು 2002 ರಲ್ಲಿ ಪ್ರಕಟಿಸಿದ ಪಾಲಸಿಧಾರಕರ ಹಕ್ಕು ರಕ್ಷಣಾ ನಿಯಮಾವಳಿಗಳಲ್ಲಿ ಯಾವ ನಿರ್ದೇಶನಗಳನ್ನು ನೀಡಿದೆ? 

 ವಿಮಾ ಪರಿಹಾರ ಸಂದಾಯಕ್ಕಾಗಿ, ಆಯ್.ಆರ್.ಡಿ.ಎ.ಯು 2002 ರಲ್ಲಿ ಪ್ರಕಟಿಸಿದ ಪಾಲಸಿಧಾರಕರ ಹಕ್ಕು ರಕ್ಷಣಾ ನಿಯಮಾವಳಿಗಳಲ್ಲಿ ಕೆಳಗಿನÀ ನಿರ್ದೇಶನಗಳನ್ನು ವಿಮಾ ಸಂಸ್ಥಗೆ ನೀಡಿದೆ.

1) ವಿಮಾ ಪರಿಹಾರ ನೀಡುವದಕ್ಕೆ ಪಾಲಿಸಿ ಬಾಂಡನ್ನು ಪಡೆಯಲೇಬೇಕು.
2) ವಿಮಾ ಪರಿಹಾರ ಕೋರಿಕೆ ಸಲ್ಲಿಸಿದ, 15 ದಿನದೊಳಗೆ ಅವಶ್ಯವೆನಿಸಿದ ಎಲ್ಲಾ ದಾಖಲೆಗಳನ್ನು ನೀಡಲು ಒಂದೇ ಬಾರಿಗೆ ಕೇಳಬೇಕು.
3) ವಿಮಾ ಪರಿಹಾರ ಕೋರಿಕೆ ಸಲ್ಲಿಸಿದ, ಎಲ್ಲಾ ದಾಖಲೆಗಳು ತಲುಪಿದ 30 ದಿನದೊಳಗೆ, ವಿಮಾ ಪರಿಹಾರ ಕೋರಿಕೆಯನ್ನು ಒಪ್ಪಿಕೊಂಡ/ತಿರಸ್ಕರಿಸಿದ ಬಗ್ಗೆ ನಿರ್ಣಯ ತಿಳಿಸಬೇಕು.
4) ವಿಮಾ ಪರಿಹಾರ ಸಂದಾಯಕ್ಕೆ, ತನಿಖೆಯ ಅವಶ್ಯಕತೆ ಎನಿಸಿದರೆ, ತನಿಖಾ ವರದಿ ಪಡೆಯಲು 6 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳತಕ್ಕದ್ದಲ್ಲ.
5) ವಿಮಾ ಪರಿಹಾರ ನೀಡಿಕೆಯ ಬಗ್ಗೆ ನಿರ್ಣಯ ಕೈಕೊಳ್ಳಲು, ವಿಮಾ ಕಂಪನಿಯು ನಿಗದಿತ ಅವಧಿಗಿಂತ ಹೆಚ್ಚು ಸಮಯ ತೆಗೆದು ಕೊಂಡರೆ, ಈ ಹೆಚ್ಚಿನ ಅವಧಿಗೆ ವಿಮಾಸಂಸ್ಥೆಯು, ವಿಮಾಪರಿಹಾರ ಹಣದ ಮೇಲೆ, ಬಡ್ಡಿಯನ್ನು ಬ್ಯಾಂಕ್ ಉಳಿತಾಯದ ಬಡ್ಡೀ ದರಕ್ಕಿಂತ 2% ಹೆಚ್ಚಿನ ದರದಲ್ಲಿ ನೀಡ ಬೇಕಾಗುವದು.
6) ವಿಮಾ ಪರಿಹಾರ ನೀಡಿಕೆಯ ಬಗ್ಗೆ ನಿರ್ಣಯ ತೆಗೆದುಕೊಂಡ 30 ದಿನಗಳೊಳಗೆ, ಪರಿಹಾರ ಸಂದಾಯವನ್ನು ಪಾಲಸಿ ಹಣ ಹಕ್ಕುದಾರರಿಗೆ ಮಾಡಬೇಕು. 
ಈ ಅವಧಿಯೊಳಗೆ ಪರಿಹಾರ ಹಣ ಸಂದಾಯವಾಗದಿದ್ದರೆ, ಹೆಚ್ಚಿಗೆ ತೆಗೆದು ಕೊಂಡ ಅವಧಿಗೆ, ಬಡ್ಡಿಯನ್ನು ಬ್ಯಾಂಕ್ ಉಳಿತಾಯದ ಬಡ್ಡೀ ದರದಲ್ಲಿ ನೀಡ ಬೇಕಾಗುವದು.


No comments:

Post a Comment