Saturday, January 31, 2015

31 ಜನೆವರಿ 2015 

ಗ್ರಾಹಕನ ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯವನ್ನು ಹೇಗೆ ಗುರುತಿಸುವದು,ಅಥವಾ ಅಳೆಯುವದು ?


ಆದಾಯ ಪ್ರಮಾಣದ ಬಗ್ಗೆ ಚಿಂತಿಸದೆ,  100% ಖಾತರಿ ಆದಾಯ ಬಯಸುವವರ, ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯ (Ability to take risk and withstand investment  losses)ಕ್ಕೆ ಶೂನ್ಯ ಅಂಕವನ್ನು ನೀಡುತ್ತಾರೆ.

ಅತೀ ಹೆಚ್ಚಿನ ಆದಾಯದ ಮೇಲೆ ಗಮನವಿಟ್ಟು, ಆದಾಯ ಖಾತರಿ ಬಗ್ಗೆ ಕಿಂಚಿತ್ತೂ ಗಮನ ನೀಡದವನ, ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯ (Ability to take risk and withstand investment  losses)ಕ್ಕೆ 5 ಅಂಕವನ್ನು ನೀಡುತ್ತಾರೆ. 

ಸ್ವಲ್ಪ ಹೆಚ್ಚಿನ ಆದಾಯದ ಮೇಲೆ ಗಮನವಿಟ್ಟು, ಆದಾಯ ಖಾತರಿ ಬಗ್ಗೆಯೂ ಸ್ವಲ್ಪ ಗಮನ ಕೊಡುವವನÀ, ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯ (Ability to take risk and withstand investment  losses) ಕ್ಕೆ 1 ರಿಂದ 5ರ ಮಧ್ಯದಲ್ಲಿರುವ ಅಂಕವನ್ನು ನೀಡುತ್ತಾರೆ.

Friday, January 30, 2015

30  ಜನೆವರಿ 2015 

ಆರ್ಥಿಕ ಯೋಜನೆಯನ್ನು ಕಾರ್ಯಗತಗೊಳಿಸುವಾಗ, ಗ್ರಾಹಕನ ಹೂಡಿಕೆಯ ಅಪಾಯ ಎದುರಿಸುವ (ಧೈರ್ಯ ಪ್ರದರ್ಶನ)  ಸಾಮಥ್ರ್ಯ (Client’s ability to take risk and withstand investment  losses) ದ  ಪಾತ್ರವೇನು?


ಕೆಲವರು ಹೂಡಿಕೆಯಿಂದ ದೊರೆಯುವ ಸಂಭವನೀಯ ಆದಾಯದ ಬಗ್ಗೆ ಎಳ್ಳಷ್ಟೂ ಅಪಾಯ ತೆಗೆದುಕೊಳ್ಳಲು ಸಿದ್ಧರಿರುವದಿಲ್ಲಾ. ಇಂತಹವರ  ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯ (Ability to take risk and withstand investment  losses)  ಕಡಿಮೆ ಇರುತ್ತದೆ. 100% ಖಾತರಿಯ ಆದಾಯವನ್ನೇ  ಅಪೇಕ್ಷಿಸುವವರಿಗೆ ದೊರೆಯುವ ಆದಾಯ ಪ್ರಮಾಣ ಕಡಿಮೆಯಾಗಿರುತ್ತದೆ. ಉದಾ : ಬ್ಯಾಂಕ/ಪೊಸ್ಟಲ್ ಠೇವಣಿ, ಸರಕಾರೀ ಬಾಂಡ್. ಇಂತಹವರಿಗೆ ಸಾಂಪ್ರದಾಯಕ ಪಾಲಸಿಗಳನ್ನು ಶಿಫಾರಸು ಮಾಡಬೇಕಾಗುತ್ತದೆ.

ಕೆಲವರು ಹೂಡಿಕೆಯಿಂದ ದೊರೆಯುವ ಸಂಭವನೀಯ ಆದಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ಅಪೇಕ್ಷಿಸುತ್ತಾರೆ. ಆದರೆ ಇವರು ಹೂಡಿಕೆಯ ಮೇಲೆ ಗಳಿಕೆಯ ಖಾತರಿಯನ್ನು ಅಪೇಕ್ಷಿಸುವಂತಿಲ್ಲಾ. ಅಂದರೆ ಹೆಚ್ಚು ಆದಾಯ ಗಳಿಸುವ ಸಾಧ್ಯತೆಯ ಜೊತೆಗೆ, ಕೆಲವು ಬಾರಿ ಹಾನಿ ಅನುಭವಿಸುವ ಸಾಧ್ಯತೆಯೂ ಇರುತ್ತದೆ. ಇಂತಹವರ  ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯ (Ability to take risk and withstand investment  losses) ಹೆಚ್ಚಿಗೆ ಇರುತ್ತದೆ. ಶೇರು ಮಾರುಕಟ್ಟಯಲ್ಲಿ ತಮ್ಮ ಹೂಡಿಕೆಗಳನ್ನು ಮಾಡಲು ಸಮ್ಮತಿಸುತ್ತಾರೆ. ಇಂತಹವರಿಗೆ ಯುಲಿಪ್ ಪಾಲಸಿಗಳನ್ನು ಶಿಫಾರಸು ಮಾಡಬಹುದು.



Thursday, January 29, 2015

29  ಜನೆವರಿ 2015 

 ಆರ್ಥಿಕ ಯೋಜನೆ (Financial Planning) ಯನ್ನು ರೂಪಿಸುವಾಗ  ಧ್ಯೇಯಗಳ ಆದ್ಯತೆ (Priortisation of Objectives) ಗಳ ಪಾತ್ರವೇನು?


 ಗುರುತಿಸಲಾದ ಎಲ್ಲಾ  ಧ್ಯೇಯಗಳನ್ನು ಒಮ್ಮಲೇ ಈಡೇರಿಸುವದಕ್ಕೆ ಬೇಕಾದ ಆರ್ಥಿಕ ಸಾಮಥ್ರ್ಯ ಗ್ರಾಹಕನ ಬಳಿ ಈಗ ಇರಲಿಕ್ಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಗುರುತಿಸಲಾದ ಎಲ್ಲಾ ಧ್ಯೇಯಗಳಲ್ಲಿ, ಯಾವುಗಳನ್ನು ಮೊದಲು, ಯಾವುಗಳನ್ನು ನಂತರ, ಯಾವುಗಳನ್ನು ಕೊನೆಗೆ ಈಡೇರಿಸಲು ಕೈಗೆತ್ತಿಕೊಳ್ಳಬೇಕೆಂಬುದನ್ನು ನಿರ್ಧರಿಸಲು, ಧ್ಯೇಯಗಳ ಆದ್ಯತೀಕರಣ (Priortisation of Objectives) ವನ್ನು ಮಾಡಬೇಕಾಗುತ್ತದೆ. ಸಧ್ಯದ ಆರ್ಥಿಕ ಸಾಮಥ್ರ್ಯದ ಚೌಕಟ್ಟಿನಲ್ಲಿ, ಇಡೇರಿಸ ಬಹುದಾದ ಧ್ಯೇಯಗಳನ್ನು ಆದ್ಯತೆಗಳ ಕ್ರಮಾಂಕಿನಲ್ಲಿ ಕೈಗೆತ್ತಿಕೊಳ್ಳ ಬೇಕು.



Wednesday, January 28, 2015

.
28  ಜನೆವರಿ 2015 

ಆರ್ಥಿಕ ಯೋಜನೆ ಹಾಗೂ ಯೋಜನಾ ವೆಚ್ಚಗಳನ್ನು ಪರಿಗಣಿಸುವಾಗ, ಯಾವ ಮಾಹಿತಿಗಳನ್ನು ಗಣನೆಗೆ ತೆಗೆದು ಕೊಳ್ಳಬೇಕು?


ಆರ್ಥಿಕ ಯೋಜನೆ (Financial Planning) ಹಾಗೂ ಯೋಜನಾ ವೆಚ್ಚ (Financial Expenditure) ಗಳನ್ನು ಪರಿಗಣಿಸುವಾಗ, ಕೆಳಗಿನ ಮಾಹಿತಿಗಳನ್ನು ಗಣನೆಗೆ ತೆಗೆದು ಕೊಳ್ಳಬೇಕು.

 ಈಗಾಗಲೇ ಕೈಗೆತ್ತಿಕೊಂಡ ಧ್ಯೇಯಗಳ ಮಾಹಿತಿ,
        ಉದಾ: ಈಗಾಗಲೇ ಪಡೆದುಕೊಂಡಿರುವ ಅವಧಿ/ಅಪಘಾತ/ಆರೋಗ್ಯ ವಿಮೆಗಳ ವಿವರ.
          ಈಗಾಗಲೇ ಹೂಡಿಕೆಯನ್ನು ಹೇಗೆ ಮಾಡಲಾಗಿದೆ?
          ಈಗಿರುವ ನಿಯಮಿತ ಉಳತಾಯದ ಮಟ್ಟ.
          ನಿವೃತ್ತಿಯ ವಯಸ್ಸು, ನಿವೃತ್ತಿ ನಿರ್ವಹಣೆಗೆ ಬೇಕೆನಿಸಿದ ನಿಧಿಯ ಮೊತ್ತ. 

ಭವಿಷ್ಯದಲ್ಲಿ ಕೈಗೆತ್ತಿಕೊಳ್ಳಬೇಕಾದ ಧ್ಯೇಯಗಳ ಮಾಹಿತಿ.
ಕುಟುಂಬದ ಭವಿಷ್ಯದ ಬಗ್ಗೆ ಮಾಹಿತಿ,
ಮಕ್ಕಳ ಶಿಕ್ಷಣ ಹಾಗೂ ಮದುವೆ ಬಗ್ಗೆ ಮಾಹಿತಿ,
ಭವಿಷ್ಯದಲ್ಲಿ ಮನೆಯ ಬಗ್ಗೆ ಮಾಡಬಹುದಾದ ಬದಲಾವಣೆಗಳು,
ಭವಿಷ್ಯದಲ್ಲಿ ವೃತ್ತಿ, ವ್ಯವಹಾರಗಳಲ್ಲಿ ಜರುಗ ಬಹುದಾದ ಬದಲಾವಣೆಗಳು,
ನಿವೃತ್ತಿಯ ಬಗ್ಗೆ,
ನಿಧನದ ನಂತರ ಅವಲಂಬಿತರಿಗೆ ಸಾಗಿಸ ಬಯಸುವ ಆಸ್ತಿ.
ಯೋಜನಾ ವೆಚ್ಚಗಳ ಮಾಹಿತಿ.
ಆರ್ಥಿಕ ಯೋಜನಾ ವೆಚ್ಚಗಳ ಹಾಗೂ ಆದ್ಯತೆಗಳ ಮಾಹಿತಿ.



Tuesday, January 27, 2015


27  ಜನೆವರಿ 2015 

ಮಾಸಿಕ ಆದಾಯ/ವೆಚ್ಚಗಳ ವಿಶ್ಲೇಷಣೆ (Analysis) ಯಾಕೆ ಮಾಡಬೇಕು?


ಮಾಸಿಕ ಆದಾಯ/ವೆಚ್ಚಗಳ ವಿಶ್ಲೇಷಣೆ ಯಾಕೆ ಮಾಡಬೇಕೆಂದರೆ,
ಯಾವ ವೆಚ್ಚಗಳನ್ನು ನಿಲ್ಲಿಸಬಹುದು/ಕಡಿತಗೊಳಸಬಹುದೆಂಬುದನ್ನು ಅರಿತುಕೊಳ್ಳಲು,
ಎಲ್ಲಾ ಆಸ್ತಿಮೂಲಗಳಿಂದ ದೊರಕಿಸ/ಹೆಚ್ಚಿಸಬಹುದಾದ ಆದಾಯಗಳನ್ನು ಅರಿತುಕೊಳ್ಳಲು,
ಆರ್ಥಿಕ ಯೋಜನೆಯನ್ನು ಕಾರ್ಯಗತಗೊಳಿಸಲು ಲಭ್ಯವಾಗುವ ಉಳಿಕೆ ಹಣವನ್ನು ಅರಿತುಕೊಳ್ಳಲು, 


Monday, January 26, 2015

26  ಜನೆವರಿ 2015 

ಈಗಾಗಲೇ ಖರೀದಿಸಿದ ವಿಮೆಯ ವಿಶ್ಲೇಷಣೆಗೆ  ಯಾವ ಮಾಹಿತಿ ಬೇಕು?


ಈಗಾಗಲೇ ಖರೀದಿಸಿದ ವಿಮೆಯ ವಿಶ್ಲೇಷಣೆಗೆ ಕೆಳಗಿನ ಮಾಹಿತಿ ಬೇಕು.
ವಿಮೆಯ ಪ್ರಕಾರ ? (ಅವಧಿ/ಅಪಘಾತ/ಆರೋಗ್ಯ/ಆಜೀವ/ಎಂಡೋಮೆಂಟ್/ವರ್ಷಾಶನ/ಇತ್ಯಾದಿ ನಮೂನೆಗಳು) 
ಕಂತಿನ ಪ್ರಕಾರ ? (ಸಾಂಪ್ರದಾಯಕ/ ಯುನಿಟ್ ಜೋಡಣೆಯ ಕಂತುಗಳು.)
ವಿಮೆಯ ಅವಧಿ ? (ಚಿಕ್ಕ/ಮಧ್ಯಮ/ದೀರ್ಘ/ಆಜೀವ ಅವಧಿಗಳ ವಿಮೆಗಳು.)
ವಿಮೆಯ ಕಂತಿನ ಅವಧಿ ? (ಪೂರ್ಣಾವಧಿ/ಸೀಮಿತ/ಏಕ ಕಂತಿನ ಆವಧಿಗಳು)
ವಿಮಾ ರಕ್ಷಿತ ಯಾರು ? (ವಿಮಾ ಕೋರಿಕೆದಾರನೋ/ಇತರ ಸಂಬಂಧಿಗಳೋ)


Sunday, January 25, 2015

25  ಜನೆವರಿ 2015 

ಮನೆಯೆಂಬ ಆಸ್ತಿಯನ್ನು ವಿಶ್ಲೇಷಿಸುವಾಗ ಯಾವ ಸಂಗತಿಗಳನ್ನು ಗಮನಿಸ ಬೇಕು?


ಮನೆಯೆಂಬ ಆಸ್ತಿಯನ್ನು ವಿಶ್ಲೇಷಿಸುವಾಗ ಗಮನಿಸಬೇಕಾದ ಸಂಗತಿಗಳು :
ಈ ಮನೆ ಇರದಿದ್ದರೆ, ನಿಮಗಿರಲು ಬೇಕಾದ ಮನೆಗೆ ನೀಡಬೇಕಾಗುವ ಬಾಡಿಗೆ.
ಮನೆಯ ಸುಣ್ಣ, ಬಣ್ಣ, ರಿಪೇರಿ, ತೆರಿಗಿಗೆ ಮಾಡುವ ವೆಚ್ಚ.
ಮನೆ ಸಾಲವಿದ್ದರೆ, ನೀಡಬೇಕಾದ ಸಾಲದ ಕಂತಿನ ಮೊತ್ತ.
ಮನೆ ಖರೀದಿಸುವದಿದ್ದರೆ, ವಿಸ್ತಾರಗೊಳಿಸುವದಿದ್ದರೆ ಅವಶ್ಯಕ ಹಣ, ಹಾಗೂ ಮನೆಯಸಾಲದ ಬಡ್ಡೀದರ.



Saturday, January 24, 2015

24  ಜನೆವರಿ 2015 

ಹೊರೆ (Liability) ಗಳೆಂದರೆ ಏನು?


ಹೊರೆಗಳೆಂದರೆ, ಗ್ರಾಹಕನು ತೀರಿಸಬೇಕಾದ  ಸಾಲಗಳ ಮೊತ್ತ. ಸಾಲಗಳಿಗೆ ಪ್ರತಿಯಾಗಿ ಅವಧಿ ವಿಮೆಯ ರಕ್ಷಣೆ ಇದ್ದರೆ, ಇಂತಹ ಸಾಲಗಳನ್ನು ಹೊರೆಯೆಂದು ಭಾವಿಸಬೇಕಿಲ್ಲಾ. (ಗ್ರಾಹಕನ ನಿವ್ವಳ ಆಸ್ತಿ ಮೌಲ್ಯವೆಂದರೆ, ಅವನ ಒಟ್ಟು ಆಸ್ತಿಗಳ ಮೌಲ್ಯದಲ್ಲಿ, ಒಟ್ಟು ಹೊರೆಗಳ ಮೌಲ್ಯವನ್ನು ಕಳೆಯುತ್ತಾರೆ. ಇಂತಹ ಸಂದರ್ಭದಲ್ಲಿ, ಅವಧಿ ವಿಮಾ ರಕ್ಷಣೆ ಹೊಂದಿದ ಸಾಲಗಳÀ ಮೌಲ್ಯಗಳನ್ನು ಕಳೆಯ ಬೇಕಾಗಿಲ್ಲ.)



Friday, January 23, 2015

23  ಜನೆವರಿ 2015 

ಸ್ವಲ್ಪ ಅಸ್ತಿ ಹೊಂದಿದ ಗ್ರಾಹಕನಿಂದ ಅರಿತುಕೊಳ್ಳಬೇಕಾದ ವಿಷಯ ಏನು?

      
 ಸ್ವಲ್ಪ ಅಸ್ತಿ ಹೊಂದಿದ ಗ್ರಾಹಕನಿಂದ ಅರಿತುಕೊಳ್ಳಬೇಕಾದ ವಿಷಯ:
ಈ ಆಸ್ತಿಗಳು ಗ್ರಾಹಕನ ಅವಶ್ಯಕತೆಗಳನ್ನು ಈಡೇರಿಸುತ್ತಿವೆಯೋ?
ಈ ಆಸ್ತಿಗಳು ಗ್ರಾಹಕನಿಗೆ ಅಪೇಕ್ಷಿತ ಆದಾಯ ನೀಡುತ್ತಿವೆಯೋ?
ಈ ಆಸ್ತಿಗಳಿಂದ ಗ್ರಾಹಕನ ಹೂಡಿಕೆಯ ಅಪಾಯ ಎದುರಿಸುವ ಸಾಮಥ್ರ್ಯವನ್ನು ಗುರುತಿಸ ಬಹುದೇ?



Thursday, January 22, 2015

22  ಜನೆವರಿ 2015 

ಮಾಹಿತಿ ಸಂಗ್ರಹ ಫಾರ್ಮುಗಳಲ್ಲಿ ಯಾವ ವಿವರಗಳನ್ನು ಕೇಳಲಾಗುತ್ತದೆ?


ಮಾಹಿತಿ ಸಂಗ್ರಹ ಫಾರ್ಮುಗಳಲ್ಲಿ ಕೆಳಗಿನ ವಿವರಗಳನ್ನು ಕೇಳಲಾಗುತ್ತದೆ.

ವ್ಯಕ್ತಿಗತ (personal) ಮಾಹಿತಿಗಳು : (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ಉದ್ಯೋಗ, ಆದಾಯ, ಆರೋಗ್ಯಸ್ಥಿತಿ, ಇತ್ಯಾದಿ.)

ಪರಿವಾರ (family) ದ ಮಾಹಿತಿಗಳು :(ಪರಿವಾರ ಸದಸ್ಯರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ಆರೋಗ್ಯಸ್ಥಿತಿ, ಇತ್ಯಾದಿ.) ಸದಸ್ಯರೆಂದರೆ, ಜೀವನ ಸಂಗಾತಿ, ಮಕ್ಕಳು, ತಾಯಿ, ತಂದೆ, ಅವಲಂಬಿತರು.
   (ಅವಧಿ/ಅಪಘಾತ/ಆರೋಗ್ಯ ವಿಮೆಯ ಗಾತ್ರ ನಿರ್ಧಾರಕ್ಕೆ ಈ ಮಾಹಿತಿ ಅವಶ್ಯವಾಗಿದೆ)

ಪರಿವಾರ ವೈದ್ಯ (Family doctor) ನ ಮಾಹಿತಿಗಳು : (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ,)

ವೃತ್ತಿ (Employment) ಮಾಹಿತಿಗಳು : (ವೃತ್ತಿ ಮಾಲೀಕನ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇತ್ಯಾದಿ.)

ವೃತ್ತಿ ರೀತಿ      : ನೌಕರಿ/ವ್ಯಾಪಾರ/ಸ್ವಯಂ ವೃತ್ತಿ.
ವೃತ್ತಿ ಅಪಾಯ   : ನಿರಪಾಯಕಾರಿ/ಅಪಾಯಕಾರಿ.
ವೃತ್ತಿ ಆದಾಯ   : ನಿಯಮಿತ ಆದಾಯ/ನಿಯಮಿತ ಆದಾಯ.
ವೃತ್ತಿ ಸೌಲಭ್ಯ    : ರಜೆಗಳು/ರಜಾ ನಗದೀಕರಣ/ ರಜಾ ಪ್ರಯಾಣ ಸೌಲಭ್ಯಗಳು.
ವೃತ್ತಿ ಗಳಿಕೆ ಗಾತ್ರ : ಅಲ್ಪ ಗಾತ್ರ/ ಸಾಧಾರಣ ಗಾತ್ರ/ ದೊಡ್ಡ ಗಾತ್ರ/ ಅಪಾg ಗಾತ್ರದ ಗಳಿಕೆಗಳು.

ಆರ್ಥಿಕ (Financial) ಮಾಹಿತಿಗಳು : ಆಸ್ತಿಗಳು ಹಾಗೂ ಹೊರೆಗಳು.
ಆಸ್ತಿ (Assets) ಗಳ ಉದಾಹರಣೆಗಳು.- ಸ್ವಂತ ಮನೆ, ನಿವೇಶನ, ವಸತಿ/ವಾಣಿಜ್ಯ ಕಟ್ಟಡಗಳು, ಶೇರು/ ಮ್ಯೂಚುವಲ್ ಫಂಡಗಳು, ನಿಶ್ಚಿತ ಆದಾಯ ಹೂಡಿಕೆಗಳು (ಬ್ಯಾಂಕು ಹಾಗೂ ಪೋಸ್ಟ ಆಫೀಸುಗಳಲ್ಲಿ), ಲೋಹಗಳು(¨ಂಗಾರ/ಬೆಳ್ಳಿಗಳು), ಭೂಮಿ/ಪ್ಲ್ಯಾಂಟೇಶನ್.

ಹೊರೆ (Liability) ಗಳ ಉದಾಹರಣೆಗಳು- ಮನೆ ಸಾಲ, ಮರಳಿಸ ಬೇಕಾದ ಸಾಲಗಳು, ಕ್ರೆಡಿಟ್ ಕಾರುಗಳು/ಓವರ್‍ಡ್ರಾಫ್ಟ,  ಕಂತಿನ ಸಾಲಗಳು (ವಾಹನ,ಶಿಕ್ಷಣ,ವ್ಯಾಪಾರಕ್ಕಾಗಿ), ಕೈಗಡಗಳು, ಮರಳಿಸ ಬೇಕಾದ ಇನ್ನಿತರ ಹೊರೆಗಳು.

ಈಗಿದ್ದ ವಿಮೆಯ ಹಾಗೂ ಹೂಡಿಕೆಗಳ ಮಾಹಿತಿಗಳು : ಖರೀದಿಸಿದ ವಿಮೆಗಳ ಮೊತ್ತ ಹಾಗೂ ಕಂತುಗಳು.

ಮಾಸಿಕ ಆದಾಯ ಹಾಗೂ ವೆಚ್ಚ (Income & Expenditure) ಗಳ ಮಾಹಿತಿಗಳು. :
ಆದಾಯಗಳ ಉದಾಹರಣೆಗಳು -ಸ್ವಂತದ/ಇತರ ಸದಸ್ಯರ ಆದಾಯ, ಆಸ್ತಿಗಳ ಆದಾಯ, ಭವಿಷ್ಯದಲ್ಲಿ ಸಿಗಬಹುದಾದ ಆದಾಯ.

ವೆಚ್ಚಗಳ ಉದಾಹರಣೆಗಳು – ಆಹಾರ,ಉಡುಪು, ಮನೆಬಾಡಿಗೆ, ಶಾಲಾ ಫೀ, ಸಾಲ ಕಂತು, ವಿಮಾ ಕಂತು, ತೆರಿಗೆ, ಪ್ರಯಾಣ/ಮನರಂಜನೆ, ಇತರ ವೆಚ್ಚಗಳು.

ಆರ್ಥಿಕ ಯೋಜನೆಯ ಗುರಿಗಳು, ಅದಕ್ಕೆ ತಗಲುವ ವೆಚ್ಚಗಳು.
 ಈ ಮೊದಲು ಕೈಕೊಂಡ ಆರ್ಥಿಕ ಯೋಜನೆಗಳ ಮಾಹಿತಿ/ವೆಚ್ಚ. ಅವುಗಳು ಈಡೇರಿಸುವ ಬೇಡಿಕೆಗಳು.
 ಇಂದು ಕೈಕೊಳ್ಳಬೇಕಾದÀ ಆರ್ಥಿಕ ಯೋಜನೆಗಳ ಮಾಹಿತಿ/ವೆಚ್ಚ. ಅವುಗಳು ಈಡೇರಿಸಬೇಕಾದ ಬೇಡಿಕೆಗಳು.
 ಬೇಡಿಕೆಗಳ ಉದಾಹರಣೆಗಳು :ವಿಮಾರಕ್ಷಣೆ, ಮಕ್ಕಳ ಶಿಕ್ಷಣ/ಮದುವೆ/ನಿವೃತ್ತ ಜೀವನಗಳಿಗೆ ವ್ಯವಸ್ಥೆ, ಮನೆ, ಕಾರು, ಪ್ರಯಾಣ ಇತ್ಯಾದಿ.

ಭವಿಷ್ಯದಲ್ಲಿಯ ಬದಲಾವಣೆ (Changes) ಗಳು. ಮಾಹಿತಿಗಳನ್ನು ವರ್ತಮಾನ ಕಾಲದಲ್ಲಿದ್ದ ಸ್ಥಿತಿಯಲ್ಲಿಯೇ ಸಂಗ್ರಹಿಸಿದರೂ, ಮಾಹಿತಿಯಲ್ಲಿ ಉಂಟಾಗುವ ಭವಿಷ್ಯದ ಬದಲಾವಣೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.



Wednesday, January 21, 2015

21  ಜನೆವರಿ 2015 

ಸಂದರ್ಶನ  ಮುಗಿದ ನಂತರ, ಶಿಫಾರಸು (Recommendation) ಗಳನ್ನು ಮಾಡುವ ಮುಂಚೆ ಯಾವ ಕ್ರಮ ಕೈಕೊಳ್ಳಬೇಕಗುತ್ತದೆ?


ಸಂದರ್ಶನ ಮುಗಿದ ನಂತರ, ಶಿಫಾರಸು (Recommendation)  ಮಾಡುವ ಮುಂಚೆ ಕೆಳಗಿನ ಕ್ರಮಗಳನ್ನು ಕೈಕೊಳ್ಳಬೇಕು.
1) ಸಂದರ್ಶನದಲ್ಲಿ ಪಡೆದ ಎಲ್ಲಾ ಮಾಹಿತಿಗಳ ವಿಶ್ಲೇಷಣೆಯನ್ನು, ಸಾಧ್ಯವಾದರೆ ತಜ್ಞರ ಸಹಾಯದೊಂದಿಗೆ ಮಾಡಬೇಕು.
2) ಆರ್ಥಿಕ ಅವಶ್ಯಕತೆಗಳನ್ನು ಹಣದಲ್ಲಿ ಅಳೆಯುವಂತೆ ಪರಿವರ್ತಿಸಬೇಕು.
3) ಹಣದಲ್ಲಿ ಅಳೆÀಯಬಹುದಾದ ಬೇಡಿಕೆಗಳನ್ನು ಈಡೇರಿಸಲು, ನೀಡಬಹುದಾದ ಸರಕು(Products) ಗಳನ್ನು ಗುರುತಿಸಬೇಕು.
4) ಸರಕುಗಳ ಬೆಲೆಯನ್ನು ಅರಿತಮೇಲೆ, ಗ್ರಾಹಕನ ಆರ್ಥಿಕ ಸಾಮಥ್ರ್ಯದ ಮಿತಿಯೊಳಗೆ, ಗ್ರಾಹಕನಿಗೆ ಶಿಫಾರಸುಗಳನ್ನು ಮಾಡಬೇಕು.



Tuesday, January 20, 2015

20  ಜನೆವರಿ 2015 

ಸಂದರ್ಶನ (Interview) ಮುಗಿದ ನಂತರದ ಘಟ್ಟ ಯಾವುದು?


ಸಂದರ್ಶನ ಮುಗಿದ ನಂತರದ ಘಟ್ಟ, ಶಿಫಾರಸು (Recommendation) ಮಾಡುವದು,
ಗ್ರಾಹಕನ ಬೇಡಿಕೆಗಳ ಈಡೇರಿಕೆಗೆ ಯೋಗ್ಯ ಶಿಫಾರಸು (Recommendation) ಗಳನ್ನು ಮಾಡುವದು.
ಗ್ರಾಹಕನ ಬೇಡಿಕೆಗಳನ್ನು, ಅವನು ಉಳಿಸಲು ಒಪ್ಪಿಕೊಂಡ ಹಣದ ಚËಕಟ್ಟಿನಲ್ಲಿಯೇ ಮಾಡುವದು.
ಗ್ರಾಹಕನ ವಿರೋಧವಿರದಿದ್ದರೆ, ಯೋಗ್ಯ ಶಿಫಾರಸು (Recommendation) ಗಳನ್ನು ಮಾಡುವದಕ್ಕೆ ಹಣದ ಚËಕಟ್ಟಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲಾ,

Monday, January 19, 2015

 19  ಜನೆವರಿ 2015 

ಸಂದರ್ಶನದ ಸ್ಥಳ ಎಲ್ಲಿರ ಬೇಕು ?


ಗ್ರಾಹಕನ ಅನಕೂಲದ ಪ್ರಕಾರ,
ಆತನ ಮನೆಯಲ್ಲಿ,
ಅಥವಾ ಏಜೆಂಟನ ಆಫೀಸಿನಲ್ಲಿ,
ಇಬ್ಬರಿಗೂ ಒಪ್ಪಿಗೆಯಾದ ಮೂರನೇ ಸ್ಥಳದಲ್ಲಿ.



Sunday, January 18, 2015

18  ಜನೆವರಿ 2015 

ಸಂದರ್ಶನ (Interview) ದಲ್ಲಿಯ ಘಟ್ಟಗಳು ಯಾವುವು?

ಸಂದರ್ಶನದಲ್ಲಿಯ ಘಟ್ಟಗಳು:
ಗ್ರಾಹಕರನ್ನು ಉಲ್ಹಸಿತ ಸ್ಥಿತಿಯಲ್ಲಿಟ್ಟು ಮಾತನಾಡಿಸುವದು.
ಮಾಹಿತಿ ಸಂಗ್ರಹದ ವಿಧಾನ, ಉದ್ಯೇಶಗಳ ಬಗ್ಗೆ ವಿವರಿಸುವದು,
ನಂತರ ಬೇಕಾದ ಮಾಹಿತಿಗಳನ್ನು ಸಂಗ್ರಹಿಸುವದು.
ಗ್ರಾಹಕನ ಆದ್ಯತೆ ಹಾಗೂ ಕಾಳಜಿಗಳ ಬಗ್ಗೆ ವಿಚಾರಿಸುವದು.
ಗ್ರಾಹಕನ ಆರ್ಥಿಕ ಬೇಡಿಕೆಗಳ ಬಗ್ಗೆ, ತಾತ್ವಿಕವಾಗಿ ಒಮ್ಮತದ ಅಭಿಪ್ರಾಯವನ್ನು ಮೂಡಿಸುವದು.

Saturday, January 17, 2015

17  ಜನೆವರಿ 2015 

ಮಾಹಿತಿ ಹುಡುಕು (Fact find) ವ ವಿಧಾನಗಳು ಯಾವುವು?

ನಿಗದಿತ ಫಾರ್ಮುಗಳನ್ನು ಭರ್ತಿ ಮಾಡುವ ಮೂಲಕ,
ಟೆಲೆಫೋನ್ ಸಂಭಾಷಣೆಗಳ ಮೂಲಕ, 
ಪೂರ್ವ ನಿಯೋಜಿತ ಸಂದರ್ಶನಗಳ ಮೂಲಕ, 



Friday, January 16, 2015

16  ಜನೆವರಿ 2015 
ಸಂಭವನೀಯ ಬದಲಾವಣೆ (Likely Changes) ಗಳಿಗೆ ಯೋಗ್ಯ ಗಮನವನ್ನು ಯಾಕೆ ನೀಡಬೇಕು?

ಸಂಭವನೀಯ ಬದಲಾವಣೆಗಳನ್ನು ಗಮನಿಸುವದು ಆರ್ಥಿಕ ಯೋಜನೆಗಳಲ್ಲಿ ಅತ್ಯವಶ್ಯ.
ಉದಾ: ಭವಿಷ್ಯದಲ್ಲಿ: ಆದಾಯದಲ್ಲಿ ಉಂಟಾಗ ಬಹುದಾದ ಹೆಚ್ಚಳ, ಪರಿವಾರದಲ್ಲಿ  ಉದಯಿಸಲಿರುವ ಮಗು, ಉದ್ದಿಮೆಯಲ್ಲಿ ಜರುಗಬಹುದಾದ ಅನಪೇಕ್ಷಿತ ಘಟನೆಗಳು.



Thursday, January 15, 2015



15 ಜನೆವರಿ 2015 
ಗ್ರಾಹಕನ ಹಣದ ಹರಿದಾಟ (Cash flow) ವನ್ನು  ವಿಶ್ಲೇಷಿಸುವದೆಂದರೆ ಏನು?

 ಗ್ರಾಹಕನ ಹಣದ ಹರಿದಾಟ (Cash flow) ವನ್ನು  ವಿಶ್ಲೇಷಿಸುವ ಮುಖ್ಯ ಉದ್ಯೇಶವೇನಂದರೆ, ಆರ್ಥಿಕ ಯೋಜೆನೆಗೆ ಲಭ್ಯವಾಗುವ ಉಳಿಕೆ ಹಣವನ್ನು ಗುರುತಿಸುವದು.
ಇದಕ್ಕಾಗಿ ಗ್ರಾಹಕನ ಬಳಿಹರಿದು ಬರುವ ಎಲ್ಲಾ ಹಣಪ್ರವಾಹದ ಮೂಲಗಳನ್ನು ಗುರುತಿಸುವದು.
ಇದಕ್ಕಾಗಿ ಗ್ರಾಹಕನಿಂದ ಹೊರಗೆ ಹರಿದು ಹೋಗುವ ಎಲ್ಲಾ ವೆಚ್ಚಗಳ ವಿವರಗಳನ್ನು ಕಲೆ ಹಾಕುವದು. 
ಗ್ರಾಹಕನ ಆದಾಯ ಮೂಲವಾದ ಆಸ್ತಿಗಳ ಗುಣಮಟ್ಟಗಳನ್ನು ಪರೀಕ್ಷಿಸುವದು.
ಗ್ರಾಹಕನ ವೆಚ್ಚಕ್ಕೆ ಕಾರಣವಾಗುವ ಹೊರೆ (Liability) ಗಳ ಸ್ಥಿತಿಗಳನ್ನು ಅವಲೋಕಿಸುವದು.



Wednesday, January 14, 2015

14  ಜನೆವರಿ 2015 

ಗ್ರಾಹಕನ ಬಗ್ಗೆ ಯಾವ ಮಾಹಿತಿಗಳು ಬೇಕು?


ಗ್ರಾಹಕನ ಕೆಳಗಿನ ಮಾಹಿತಿಗಳು ಬೇಕು.
ವ್ಯಕ್ತಿಗತ ಮಾಹಿತಿಗಳು, (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ಉದ್ಯೋಗ, ಆದಾಯ, ಆರೋಗ್ಯಸ್ಥಿತಿ, ಇತ್ಯಾದಿ.)
ಪರಿವಾರದ ಮಾಹಿತಿಗಳು, (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ಆರೋಗ್ಯಸ್ಥಿತಿ, ಇತ್ಯಾದಿ.)
ಪರಿವಾರವೈದ್ಯನ ಮಾಹಿತಿಗಳು, (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ,)
ವೃತ್ತಿ ಮಾಹಿತಿಗಳು, (ವೃತ್ತಿ ಮಾಲೀಕನ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವೃತ್ತಿಯ ನಮೂನೆ, ಅಪಾಯಗಳು, ಇತ್ಯಾದಿ.)
ಹಣದ ಹರಿದಾಡುವ ರೀತಿಯ (Cash flow) ಮಾಹಿತಿಗಳು, (ಹಣದ ಒಳ/ಹೊರ ಹರಿವು, ಆದಾಯ/ವೆಚ್ಚ, ಆಸ್ತಿ/ಹೊರೆ/ಸಾಲ/ ಇತ್ಯಾದಿ)


Tuesday, January 13, 2015

13  ಜನೆವರಿ 2015 

ಬೇಡಿಕೆಗಳ ಗುರುತಿಸುವಿಕೆ (Identification of Needs) ಯಲ್ಲಿ ಎನೇನು ನಡೆಯುತ್ತದೆ?


ಬೇಡಿಕೆಗಳ ಗುರುತಿಸುವಿಕೆಯಲ್ಲಿ,
ಆಕಸ್ಮಿಕ ಸಾವು/ಅಪಘಾತ/ಗಂಭೀರಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಅವಶ್ಯಕ ವಿಮೆಯ ಬೇಡಿಕೆ, ಹಾಗೂ ಅವುಗಳಿಗೆ ತಗಲುವ ವೆಚ್ಚದ ಬಗ್ಗೆ ತಿಳಿದುಕೊಳ್ಳಲಾಗುತ್ತದೆ.
(ಉದಾ : ಎಂತಹದೇ ಪರಿಸ್ಥಿತಿಯಲ್ಲಿ ಮಗನನನ್ನು ಇಂಜನೀಯರ ಮಾಡಲೇಬೇಕು. ಇಂಜನೀಯರ ಮಾಡಲು ಮಗನ 18,19,20,21 ನೆಯ ವಯಸ್ಸಿಗೆ ಪ್ರತಿ ವರ್ಷ 100,000 ರೂ.ಗಳ ಜರೂರತೆ ಇದೆ. ಇದಕ್ಕಾಗಿ 500,000ರೂ.ಗಳ ಶಿಕ್ಷಣ  ಆದಾಯ ವಿಮಾ ಪಾಲಸಿಯನ್ನು ಖರೀದಿಸಬೇಕಾಗುತ್ತದೆ.)


Monday, January 12, 2015



12  ಜನೆವರಿ 2015 
ಮಾಹಿತಿ ಸಂಗ್ರಹ (Fact find) ದ ದ್ಯೇಯಗಳು ಯಾವುವು?

ಮಾಹಿತಿ ಸಂಗ್ರಹದ ದ್ಯೇಯಗಳು.
ಆರ್ಥಿಕ ಧ್ಯೇಯಗಳನ್ನು ಗುರುತಿಸುವದು.
ಗ್ರಾಹಕನ ಮಾಹಿತಿಗಳನ್ನು ಕಲೆ ಹಾಕುವದು.
ಗ್ರಾಹಕನ ಹಣದ ಪ್ರವಾಹ (Cash flow) ಗಳ ದಿಶೆಗಳನ್ನು ಅರಿಯುವದು,
ಭವಿಷ್ಯದ ಸಂಭವನೀಯ ಬದಲಾವಣೆ (Likely Changes)ಗಳಿಗೆ ವ್ಯವಸ್ಥೆ ಮಾಡುವದು. 





Sunday, January 11, 2015

11  ಜನೆವರಿ 2015 

ಮಾಹಿತಿ ಸಂಗ್ರಹ (Fact find) ದ ಪ್ರಯೋಜನಗಳು ಯಾವುವು?


ಮಾಹಿತಿ ಸಂಗ್ರಹದ ಪ್ರಯೋಜನಗಳು . 
ಇಂದಿನ ಆರ್ಥಿಕ ಸ್ಥಿತಿಯನ್ನು ಕಂಡುಹಿಡಿಯಬಹುದು.
ಭವಿಷ್ಯದಲ್ಲಿ ಜರುಗಬಹುದಾದ ಬದಲಾವಣೆಗಳನ್ನು ಗುರುತಿಸಬಹುದು.
ಆರ್ಥಿಕ ಗುರಿ ಈಡೇರಿಕೆಗೆ, ಶಿಫಾರಸು ಮಾಡುವ ವಿಮಾ ಸರಕುಗಳ ಪಾತ್ರದ ಬಗ್ಗೆ ಅರಿವು ಉಂಟಾಗತ್ತದೆ.

Saturday, January 10, 2015

10  ಜನೆವರಿ 2015 

 ಮಾಹಿತಿ ಹುಡುಕು (Fact find) ವದರಿಂದ ಏಜೆಂಟನಿಗೆ ಆಗುವ ಅನಕೂಲತೆಗಳು ಯಾವುವು?


 ಮಾಹಿತಿ ಸಂಗ್ರಹದಿಂದ ಏಜೆಂಟನಿಗೆ ಆಗುವ ಅನಕೂಲತೆಗಳು: 
ಗ್ರಾಹಕನ ಆರ್ಥಿಕ ಅವಶ್ಯಕತೆಗಳನ್ನು ಗುರುತಿಸಲು ಸಹಾಯಕವಾಗುತ್ತದೆ. (Identification of Needs)
ಗ್ರಾಹಕನ ಆರ್ಥಿಕ ಅವಶ್ಯಕತೆಗಳನ್ನು ಹಣದಲ್ಲಿ ಅಳೆಯಲು ಅನಕೂಲವಾಗುತ್ತದೆ. (Quantification of Needs)
ಈಗಿದ್ದ ಸಂಪನ್ಮೂಲಗಳ ಹಿನ್ನೆಲೆಯಲ್ಲಿ ಗ್ರಾಹಕನ ಆರ್ಥಿಕ ಅವಶ್ಯಕತೆಗಳನ್ನು ಆದ್ಯತೆಗಳ ಆಧಾರದ ಮೆಲೆ ಪಟ್ಟಿ ಮಾಡಲು ಅನಕೂಲವಾಗುತ್ತದೆ. (Lising of Needs)



Friday, January 9, 2015

9 ಜನೆವರಿ 2015 

ಆರ್ಥಿಕ ಬೇಡಿಕೆಗಳ ವಿಶ್ಲೇಷಣೆ  (Financial Need Analysis) ಯನ್ನು ಯಾವ ಸಮಯದಲ್ಲಿ ಮಾಡಬೇಕು?


ಆರ್ಥಿಕಗುರಿ ವಿಶ್ಲೇಷಣೆಯ ವಿಚಾರಧಾರೆಯ ತಳಹದಿಗಳು, ಕಾಲ ಕಾಲಕ್ಕೆ ಬದಲಾಗುವದರಿಂದ, ಆರ್ಥಿಕ ಗುರಿಗಳು ಕಾಲ ಕಾಲಕ್ಕೆ ಬದಲಾಗುವವು. ಹೀಗಾಗಿ ಪ್ರತಿ ವರ್ಷಕ್ಕೊಮ್ಮೆ ಆರ್ಥಿಕ ವಿಶ್ಲೇಷಣೆಯನ್ನು ಮಾಡಬೇಕು.

Thursday, January 8, 2015

8 ಜನೆವರಿ 2015 

ಆರ್ಥಿಕ ಬೇಡಿಕೆಗಳ ವಿಶ್ಲೇಷಣೆಯನ್ನು (Financial Need Analysis) ಯನ್ನು ಯಾವ ಸಮಯದಲ್ಲಿ ಮಾಡಬೇಕು?


ಆರ್ಥಿಕಗುರಿ ವಿಶ್ಲೇಷಣೆಯ ವಿಚಾರಧಾರೆಯ ತಳಹದಿಗಳು, ಕಾಲ ಕಾಲಕ್ಕೆ ಬದಲಾಗುವದರಿಂದ, ಆರ್ಥಿಕ ಗುರಿಗಳು ಕಾಲ ಕಾಲಕ್ಕೆ ಬದಲಾಗುವವು. ಹೀಗಾಗಿ ಪ್ರತಿ ವರ್ಷಕ್ಕೊಮ್ಮೆ ಆರ್ಥಿಕ ವಿಶ್ಲೇಷಣೆಯನ್ನು ಮಾಡಬೇಕು.

Wednesday, January 7, 2015

7  ಜನೆವರಿ 2015 

  ಕಾಲ ಕಾಲಕ್ಕೆ ಉಂಟಾಗುವ ಗ್ರಾಹಕನ ಹೆಚ್ಚುವರಿ ಬೇಡಿಕೆ (Aditional Needs) ಗಳ ವಿಶ್ಲೇಷಣೆಯನ್ನು ಹೇಗೆ ಮಾಡಬೇಕು ?

ಉತ್ತರ: 
ಗ್ರಾಹಕನ ಇಂದಿನ, ಬದಲಾದ ಆರ್ಥಿಕ ಗುರಿಗಳ ಹಿನ್ನೆಲೆಯಲ್ಲಿ ಒಟ್ಟಾರೆ ಬೇಡಿಕೆಗಳನ್ನು ಪುನಃ ಪರಿಶೀಲಿಸಬೇಕು.
ಈಗಾಗಲೇ ಈಡೇರಿಕೆಗೊಳ್ಳುವ ಬೇಡಿಕೆಗಳನ್ನು ಬಿಟ್ಟು ಉಳಿದುಕೊಳ್ಳುವ ಬೇಡಿಕೆಗಳನ್ನು  ಕಂಡುಹಿಡಿಯಬೇಕು.
ಇನ್ನುಳಿದ ಬೇಡಿಕೆಗಳನ್ನು ವಿಶ್ಲೇಷಿಸಿ, ಅವುಗಳನ್ನು ಇಡೇರಿಸಲು ಅಗತ್ಯವಾದ ಹಣವನ್ನು ಲೆಕ್ಕಮಾಡಬೇಕು.



Tuesday, January 6, 2015

6  ಜನೆವರಿ 2015 
ಗ್ರಾಹಕನ ಆರ್ಥಿಕ ಬೇಡಿಕೆಗಳ ವಿಶ್ಲೇಷಣೆ  (Need Analysis) ಯನ್ನು ಹೇಗೆ ಮಾಡಬೇಕು ?


ಗ್ರಾಹಕನ ಸಧ್ಯದ ಎಲ್ಲಾ ಹೂಡಿಕೆ (investments) ಗಳನ್ನು ವಿಮರ್ಶೆ ಮಾಡಬೇಕು.
ಈ ಹೂಡಿಕೆಗಳಿಗಾಗಿ ಗ್ರಾಹಕನ ಬದ್ಧತೆ (committment) ಯನ್ನು ಕಂಡುಹಿಡಿಯಬೇಕು.
ಇನ್ನುಳಿದ ಬೇಡಿಕೆಗಳನ್ನು ವಿಶ್ಲೇಷಿಸಿ, ಅವುಗಳನ್ನು ಇಡೇರಿಸಲು ಅಗತ್ಯವಾದ ಹಣವನ್ನು ಲೆಕ್ಕಮಾಡಬೇಕು.



Monday, January 5, 2015

5  ಜನೆವರಿ 2015 

ಗ್ರಾಹಕನ ಆರ್ಥಿಕ ಬೇಡಿಕೆಗಳ ವಿಶ್ಲೇಷಣೆ (Financial Need Analysis) ಮಾಡುವ ಪೂರ್ವದಲ್ಲಿ, ಯಾವ ಕ್ರಮ ಕೈಕೊಳ್ಳಬೇಕು?


ಗ್ರಾಹಕನ ಆರ್ಥಿಕ ಗುರಿ ಹಾಗೂ ಧ್ಯೇಯಗಳ (Financial aims & objectives)ನ್ನು ತಿಳಿದುಕೊಳ್ಳಬೇಕು.

ನೀವು ತಿಳಿದು ಕೊಂಡ ರೀತಿಯಲ್ಲಿಯೇ, ಗ್ರಾಹಕನ ಗುರಿ ಹಾಗೂ ಧ್ಯೇಯಗಳು ಇರುವ ಬಗ್ಗೆ ಖಾತ್ರಿ ಮಾಡಿಕೊಳ್ಳಿರಿ.

ಗ್ರಾಹಕನ ಆರ್ಥಿಕ ಬೇಡಿಕೆಗಳ ವಿಶ್ಲೇಷಣೆಗಳಿಗೆ ಅಗತ್ಯ ಮಾಹಿತಿ ಕಲೆ ಹಾಕಿರಿ.



Sunday, January 4, 2015



4  ಜನೆವರಿ 2015 

  ಗ್ರಾಹಕನ ಹಾಗೂ ಕುಟುಂಬದ ಮಾಹಿತಿ (information) ಗಳನ್ನು  ಹೇಗೆ ಸಂಗ್ರಹಿಸುವದು?


ಇದಕ್ಕಾಗಿ ‘ಮಾಹಿತಿ ಸಂಗ್ರಹ’ ಎಂಬ ಫಾವರ್iನ್ನು - (Information Collection Form)  ಬಳಸಬೇಕು. ಪಡೆಯ ಬೇಕಾದ ಮಾಹಿತಿಗಳನ್ನು ಕೆಳಗಿನಂತೆ ವರ್ಗೀಕರಿಸಬಹುದು.

ವ್ಯಕ್ತಿಗತ (personal) ಮಾಹಿತಿಗಳು, (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ಉದ್ಯೋಗ, ಆದಾಯ, ಆರೋಗ್ಯಸ್ಥಿತಿ, ಇತ್ಯಾದಿ.)

ಪರಿವಾರ (Family) ದ ಮಾಹಿತಿಗಳು, (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ಆರೋಗ್ಯಸ್ಥಿತಿ, ಇತ್ಯಾದಿ.)

ಪರಿವಾರವೈದ್ಯ (family doctor) ನ ಮಾಹಿತಿಗಳು, (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ,)

ವೃತ್ತಿ (professional) ಮಾಹಿತಿಗಳು, (ವೃತ್ತಿ ಮಾಲೀಕನ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವೃತ್ತಿಯ ನಮೂನೆ, ಅಪಾಯಗಳು, ಇತ್ಯಾದಿ.)

ಹಣದ ಹರಿದಾಟ (cash flow) ದ ಮಾಹಿತಿಗಳು, (ಹಣದ ಒಳ/ಹೊರ ಹರಿವು, ಆದಾಯ/ವೆಚ್ಚ, ಆಸ್ತಿ/ಹೊರೆ/ಸಾಲ/ ಇತ್ಯಾದಿ)

ಮಾಹಿತಿ ಸಂಗ್ರಹದ ಮೂಲಕ ಗ್ರಾಹಕನ ಗ್ರಹಿಕೆ (Assumption) ಗಳನ್ನು ಅರ್ಥಮಾಡಿಕೊಂಡು, ಆತನ ಧ್ಯೇಯ (Obejectives) ಗಳ ಬಗ್ಗೆ ಒಮ್ಮತವನ್ನು ಸಾಧಿಸುವದು.



Saturday, January 3, 2015

3  ಜನೆವರಿ 2015 

‘ ನನಗೆ ವಿಮಾ ಪಾಲಿಸಿ ಖರೀದಿಸಲು, ನನ್ನ ಬಳಿ ಹಣವಿಲ್ಲಾ.’ ಎಂದು ಎಂದು ಗ್ರಾಹಕ ಹೇಳಿದಾಗ, ಏನು ಮಾಡ ಬೇಕು?


ವಿಮೆ ಕಡೆಗಣಿಸಲಾಗದ ವಾಸ್ತವಿಕ ಅವಶ್ಯಕತೆ (Real need), ಎನ್ನುವದನ್ನು ಮನವರಿಕೆ ಮಾಡಿಕೊಡಬೇಕು.
ವಿಮೆ ಪಡೆಯುವದರಿಂದ ದೊರೆಯುವ ಪ್ರಯೋಜನಗಳ(Benefits)ನ್ನು ಒತ್ತಿ ಹೇಳಬೇಕು.
ವಿಮೆ ಪಡೆಯದೆ ಇರುವದರಿಂದ ಆಗುವÀ ಅನಾನುಕೂಲತೆ (inconveniences) ಗಳನ್ನು ಹೇಳಬೇಕು.
ಅಪಾಯಗಳನ್ನು ಉಪಾಯವಾಗಿ ಎದುರಿಸ ಬೇಕಾದ ಜಾಣ್ಮೆಯ ಬಗ್ಗೆ ಒತ್ತಿ ಹೇಳಿರಿ.

Friday, January 2, 2015

2  ಜನೆವರಿ 2015 

‘ ಪ್ರತಿಸ್ಪರ್ಧಿ ಕಂಪನಿಗಳ ಪಾಲಿಸಿಗಳು ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತವೆ .’ ಎಂದು ಎಂದು ಗ್ರಾಹಕ ಹೇಳಿದಾಗ, ಏನು ಮಾಡ ಬೇಕು?


ಇಬ್ಬರ ಪಾಲಿಸಿಗಳು ನೀಡುವ ಸೌಲಭ್ಯಗಳ ತುಲನಾತ್ಮಕ ವಿಶ್ಲೇಷಣೆ (comparative analysis) ಮಾಡಬೇಕು.
ತಮ್ಮ ಸರಕುಗಳಲ್ಲಿದ್ದ ಬಲಿಷ್ಠ ಸೌಲಭ್ಯಗಳ ಬಗ್ಗೆ ಗ್ರಾಹಕನ ವಿಶೇಷ ಗಮನ ಸೆಳೆಯ ಬೇಕು.
ಗ್ರಾಹಕನ ಬೇಡಿಕೆಗಳನ್ನು ಈಡೇರಿಸಲು, ಏಜೆಂಟನು ಸೂಚಿಸಿದ ಪಾಲಿಸಿ ಎಷ್ಟೊಂದು ಸುಯೋಗ್ಯವಾಗಿದೆ , ಎನ್ನುವದನ್ನು ಮನಗಾಣಿಸಿ ಕೊಡಬೇಕು. 


Thursday, January 1, 2015

1  ಜನೆವರಿ 2015 

‘ಈ ವಿಮಾ ಪಾಲಿಸಿ ನನ್ನ ಬೇಡಿಕೆಗಳನ್ನು ಈಡೇರಿಸುವದಿಲ್ಲಾ ಎಂದು’ ಎಂದು ಗ್ರಾಹಕ ಹೇಳಿದಾಗ, ಏನು ಮಾಡ ಬೇಕು?



ಅವರ ಕಳವಳವನ್ನು ತಿಳಿದು ಕೋಳ್ಳಲು, ತೆರೆದ ಪ್ರಶ್ನೆ (Open ended questions)ಗಳನ್ನು ಕೇಳಬೇಕು.
ಆ ವಿಮಾ ಪಾಲಿಸಿಗಳ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡಬೇಕು.
ಅಥವಾ ಗ್ರಾಹಕನ ಬೇಡಿಕೆಗಳನ್ನು ಈಡೇರಿಸಬಲ್ಲ ಹೊಸ ಪಾಲಿಸಿಯನ್ನು ಸೂಚಿಸ ಬೇಕು.