Thursday, July 31, 2014

31ಜುಲೈ 2014

ಪಾಲಿಸಿ ಅಸೈನಮೆಂಟ್‍ನ್ನು ಪಾಲಿಸಿ ಬಾಂಡಿನ ಮೇಲೆ ಒಕ್ಕಣಿಕೆ(endorsement) ಯ ಮೂಲಕ ಮಾಡಬಹುದು. ಆಥವಾ ಪ್ರತ್ಯೇಕ ಹಾಳೆಯ ಮೇಲೆ ಬರವಣಿಗೆಯ ಮೂಲಕವೂ ಮಾಡಬಹುದು. ಹೀಗಾಗಿ  ವಿಮಾ ಸಂಸ್ಥೆಗೆ ಒಂದಕ್ಕಿಂತ ಹೆಚ್ಚು ಅಸೈನಮೆಂಟ್‍ಗಳು ನೋಂದಾವಣಿಗೆ ಬರಬಹುದು. ಆಗ ವಿಮಾ ಸಂಸ್ಥೆಯ ಯಾವ ಅಸೈನಮೆಂಟ್‍ನ್ನು ಮಾನ್ಯ ಮಾಡುತ್ತದೆ?


ಇಂತಹ ಸಂದರ್ಭದಲ್ಲಿ ಯಾವ ಅಸೈನಮೆಂಟಿನ ನೋಟಿಸು ಮೊದಲು ವಿಮಾಸಂಸ್ಥೆಗೆ ತಲುಪುತ್ತದೆಯೋ ಆ ಅಸೈನಮೆಂಟನ್ನೇ ಮಾನ್ಯ ಮಾಡಿ ಅದನ್ನು ವಿಮಾ ಸಂಸ್ಥೆ ನೋಂದಾಯಿಸುತ್ತದೆ. ಯಾವುದೇ ಅಸೈನಮೆಂಟದ ಕಾನೂನಿನ ಕ್ರಮಬದ್ಧತೆಯ ಬಗ್ಗೆ ವಿಮಾ ಸಂಸ್ಥೆ ತನ್ನ ಅಭಿಪ್ರಾಯ ವ್ಯಕ್ತಪಡಿಸದೇ, ನೋಂದಾಯಿಸುವ ಕಾರ್ಯವನ್ನು ಮಾತ್ರ ಮಾಡುತ್ತದೆ.

Wednesday, July 30, 2014

30ಜುಲೈ 2014

ಅಸೈನಮೆಂಟ್‍ನ್ನು ಹೇಗೆ ಮಾಡಬಹುದು?

1) ಪಾಲಿಸಿ ಅಸೈನಮೆಂಟ್‍ನ್ನು ಪಾಲಿಸಿ ಬಾಂಡಿನ ಮೇಲೆ ಒಕ್ಕಣಿಕೆ(endorsement) ಯ ಮೂಲಕ ಮಾಡಬಹುದು. ಆಥವಾ ಪ್ರತ್ಯೇಕ ಹಾಳೆಯ ಮೇಲೆ ಬರವಣಿಗೆಯ ಮೂಲಕವೂ ಮಾಡಬಹುದು. 

2) ಅದಕ್ಕೆ ಅಸೈನರ ಅಥವಾ ಅವನಿಂದ ಅನುಮತಿ ಪಡೆದವನು ರುಜು ಹಾಕಬೇಕು. ಹಾಗೂ ಸರಿಯಾದ ಸಾಕ್ಷಿದಾರರೂ ರುಜು ಹಾಕಬೇಕು.

3) ಅಸೈನಮೆಂಟಿನ ನೋಂದಣಿಗಾಗಿ ಅಸೈನಮೆಂಟಿನ ದಾಖಲೆಪತ್ರದ ಜೊತೆಗೆ, ಅಸೈನಮೆಂಟಿನ ನೋಟಿಸನ್ನು, ವಿಮಾ ಸಂಸ್ಥೆಗೆ ಕಳಿಸುವದು ಕಡ್ಡಾಯವಾಗಿದೆ. 

Tuesday, July 29, 2014

29ಜುಲೈ 2014

ಪಾಲಿಸಿ ಅಸೈನಮೆಂಟ್‍ಗೆ ಇರಬೇಕಾದ ಅರ್ಹತೆ ಏನು?

ಪಾಲಿಸಿ ಅಸೈನಮೆಂಟ್ ಮಾಡಲು, ವ್ಯಕ್ತಿಯು ಪಾಲಿಸಿ ಮಾಲಿಕತ್ವ ಹೊಂದಿರಬೇಕು. ಈ ವ್ಯಕ್ತಿಯು ವಯಸ್ಕನಾಗಿರಬೇಕು.

Monday, July 28, 2014

28ಜುಲೈ 2014

ಮರುಅಸೈನಿಯು ನಾಮಿನೇಶನ್ ಮಾಡಿಸ ಬಹುದೇ?

ಮರುಅಸೈನಿಯು ಎಂದರೆ ಪಾಲಸಿಯ ಮೂಲಮಾಲೀಕ, ಮರುಅಸೈನಮೆಂಟ್ ಮೂಲಕ ಮರಳಿ ಮಾಲಿಕತ್ವವನ್ನು ಪಡೆದವನು. (ಮೊದಲ ಅಸೈನಮೆಂಟಿನಲ್ಲಿ, ಆಗ ಪಾಲಸಿಯಲ್ಲಿದ್ದ ನಾಮಿನೇಶನ್ ರದ್ದಾಗಿರುತ್ತದೆ.)ಮರುಅಸೈನಿಯೇ ವಿಮಾಜೀವಿ(life assured) ಯಾಗಿದ್ದರೆ (ಅಂದರೆ ಸ್ವಂತ ಜೀವದ ಮೇಲೆ ಪಾಲಿಸಿ ತೆಗೆದು ಕೊಂಡಿದ್ದರೆ), ಪುನಃ ನಾಮಿನೇಶನ್ ಮಾಡಿಸಬಹುದು. 

Sunday, July 27, 2014

27ಜುಲೈ 2014

ಅಸೈನೀಯು ನಾಮಿನೇಶನ್ ಮಾಡಿಸ ಬಹುದೇ?


ಅಸೈನೀಯು ಪಾಲಸಿಯಲ್ಲಿ ವಿಮಾರಕ್ಷಿತ (life assured) ನಾಗಿದ್ದರೆ ಮಾತ್ರಅವನು ನಾಮೀನೇಶನ್ ಮಾಡಿಸಬಹುದು.

Saturday, July 26, 2014

26ಜುಲೈ 2014

 ಅಸೈನರ್ ಪುನಃ ಪಾಲಿಸಿ ಮಾಲೀಕನಾಗಬಹುದೇ?

ಅಸೈನರ್ ಪುನಃ ಪಾಲಿಸಿ ಮಾಲೀಕನಾಗಬೇಕಾದರೆ, ಅಸೈನೀಯು ಪಾಲಿಸಿಯನ್ನು ಮರುಅಸೈನಮೆಂಟ್  (re assignment) ಮಾಡುವ ಮೂಲಕ ಅಸೈನರ್ (ಮೂಲ ಪಾಲಿಸಿ ಮಾಲೀಕ) ನಿಗೆ ಮಾಲಿಕತ್ವವನ್ನು ಮರಳಿಸಬಹುದು.   

Friday, July 25, 2014

25ಜುಲೈ 2014

 ಪಾಲಿಸಿ ಅಸೈನಮೆಂಟ್ (assignment) :

*  ಪಾಲಿಸಿಯ ಮಾಲೀಕತ್ವವನ್ನು ಇನ್ನೊಬ್ಬರಿಗೆ ವರ್ಗಾಯಿಸುವದಕ್ಕೆ ಅಸೈನಮೆಂಟ್(ಚಿssigಟಿmeಟಿಣ)     
     ಎನ್ನುತ್ತಾರೆ. 

*  ಮಾಲೀಕತ್ವವನ್ನು ವರ್ಗಾಯಿಸಿದವನಿಗೆ ಅಸೈನರ್(assignor)  ಎಂದು ಕರೆಯುತ್ತಾರೆ. 

*  ಹೊಸ ಮಾಲೀಕತ್ವವನ್ನು ಪಡೆದವನಿಗೆ ಅಸೈನೀ(assignee)  ಎಂದು ಕರೆಯುತ್ತಾರೆ.

Thursday, July 24, 2014

24 ಜುಲೈ 2014

ಜಂಟಿಯಾಗಿ ಖರೀದಿಸಿದ ಪಾಲಿಸಿಯಲ್ಲಿ ದಂಪತಿಗಳು ನಾಮೀನೇಶನ್ ಮಾಡಿಸ ಬಹುದೆ?


ಜಂಟಿಯಾಗಿ ಖರೀದಿಸಿದ ಪಾಲಿಸಿಯಲ್ಲಿ ದಂಪತಿಗಳು ನಾಮೀನೇಶನ್ ಮಾಡಿಸಬಹುದು. ಆದರೆ ದಂಪತಿಗಳಿಬ್ಬರೂ ಏಕಕಾಲಕ್ಕೆ ನಿಧನಹೊಂದಿದರೆ ಮಾತ್ರ (ಯಾರು ಮೊದಲು, ಯಾರು ನಂತರ ಮರಣ ಹೊಂದಿದರು ಎನ್ನವದನ್ನು ನಿರ್ಧರಿಸಲಾಗದ ಸ್ಥಿತಿಯಲ್ಲಿದ್ದರೆ ಮಾತ್ರ) ನಾಮಿನಿಗೆ ಹಣ ಸಂದಾಯವಾಗುತ್ತದೆ.

(ಏಕ ಕಾಲಕ್ಕೆ ನಿಧನ ಹೊಂದಿದಾಗ, ಯಾರೋ ಒಬ್ಬರು ಮೊದಲು ಮರಣಹೊಂದಿದ್ದು ತಿಳಿದು ಬಂದರೆ, ಮರಣ ಪರಿಹಾರವನ್ನು ನಂತರ ಮರಣ ಹೊಂದಿದವರ ಕಾನೂನು ಬದ್ಧ ವಾರಸುದಾರರಿಗೆ ನೀಡಲಾಗುವದು.)

Wednesday, July 23, 2014

23 ಜುಲೈ 2014

ಪಾಲಸಿಧಾರಕನು ಪಾಲಿಸಿಯ ಅವಧಿಗೆ ಮುಂಚೆ ನಿಧನನಾದರೆ, ಆದರೆ ನಾಮಿನಿಯು ಜೀವಂತವಾಗಿದ್ದರೆ, ಬೇರೆ ಯಾರಾದರೂ ಮರಣ ಪರಿಹಾರವನ್ನು ಪಡೆಯಲು ವಿನಂತಿಸಬಹುದೆ? 

ಪಾಲಸಿಧಾರಕನು ಪಾಲಿಸಿಯ ಅವಧಿಗೆ ಮುಂಚೆ ನಿಧನನಾದರೆ, ಆದರೆ ನಾಮಿನಿಯು ಜೀವಂತವಾಗಿದ್ದರೆ, ಪಾಲಸಿಧಾರಕನ ಕಾನೂಬದ್ಧ ವಾರಸುದಾರರು ಕೋರ್ಟಿನ ಮುಖಾಂತರ ಮರಣ ಪರಿಹಾರ ಹಣವನ್ನು ಪಡೆಯಲು ಕೇಳಿಕೊಂಡರೆ, ವಿಮಾ ಸಂಸ್ಥೆ ನಾಮಿನಿಯ ಬದಲು ಪಾಲಸಿಧಾರಕನ ಕಾನೂಬದ್ಧ ವಾರಸುದಾರರಿಗೆ ಪಾಲಿಸಿ ಹಣ ನೀಡುವದು.

Tuesday, July 22, 2014

22ಜುಲೈ 2014

 ಪಾಲಸಿಧಾರಕನು ಪಾಲಿಸಿಯ ಅವಧಿಗೆ ಮುಂಚೆ ನಿಧನನಾದರೆ, ಆದರೆ ನಾಮಿನಿಯು ಜೀವಂತವಾಗಿದ್ದರೆ, ಮರಣ ಪರಿಹಾರವನ್ನು ಯಾರಿಗೆ ನೀಡುವರು? 

ಪಾಲಸಿಧಾರಕನು ಪಾಲಿಸಿಯ ಅವಧಿಗೆ ಮುಂಚೆ ನಿಧನನಾದರೆ, ಆದರೆ ನಾಮಿನಿಯು ಜೀವಂತವಾಗಿದ್ದರೆ, ಮರಣ ಪರಿಹಾರವನ್ನು, ಪಾಲಸಿದಾರಕನ ಕಾನೂನು ಬದ್ಧ ವಾರಸುದಾರರಿಗೆ ನೀಡಲಾಗುವದು.

Monday, July 21, 2014

21ಜುಲೈ 2014

ಪಾಲಸಿಧಾರಕನು ಪಾಲಿಸಿಯ ಅವಧಿ ನಂತರ ನಿಧನನಾದರೆ, ಆದರೆ ನಾಮಿನಿಯು ಜೀವಂತವಾಗಿದ್ದರೆ, ಮರಣ ಪರಿಹಾರವನ್ನು ಯಾರಿಗೆ ನೀಡುವರು? 

ಪಾಲಸಿಧಾರಕನು ಪಾಲಿಸಿಯ ಅವಧಿ ನಂತರ ನಿಧನನಾದರೆ, ಆದರೆ ನಾಮಿನಿಯು ಜೀವಂತವಾಗಿದ್ದರೆ, ಮರಣ ಪರಿಹಾರವನ್ನು, ಪಾಲಸಿದಾರಕನ ಕಾನೂನು ಬದ್ಧ ವಾರಸುದಾರರಿಗೆ ನೀಡಲಾಗುವದು.

Sunday, July 20, 2014

20ಜುಲೈ 2014

ಪಾಲಸಿಧಾರಕನ ನಂತರ ಆದರೆ ಪರಿಹಾರ ಹಣ ಸ್ವೀಕರಿಸುವ ಮೊದಲೇ  ನಾಮಿನಿಯು  ನಿಧನನಾಗಿದ್ದರೆ, ಮರಣ ಪರಿಹಾರವನ್ನು ಯಾರಿಗೆ ನೀಡುವರು? 

ಪಾಲಸಿಧಾರಕನ ನಂತರ ಆದರೆ ಪರಿಹಾರ ಹಣ ಸ್ವೀಕರಿಸುವ ಮೊದಲೇ  ನಾಮಿನಿಯು  ನಿಧನನಾಗಿದ್ದರೆ, ಮರಣ ಪರಿಹಾರವನ್ನು ಪಾಲಸಿಧಾರಕನ ಕಾನೂನು ಬದ್ಧ ವಾರಸುದಾರರಿಗೆ ನೀಡಲಾಗುವದು.

Saturday, July 19, 2014

19ಜುಲೈ 2014

ಪಾಲಸಿಧಾರಕನ ಮೊದಲೇ ನಾಮಿನಿಯು ನಿಧನನಾಗಿದ್ದರೆ, ಮರಣ ಪರಿಹಾರವನ್ನು ಯಾರಿಗೆ ನೀಡುವರು? 

ಪಾಲಸಿಧಾರಕನ ಮೊದಲೇ ನಾಮಿನಿಯು ನಿಧನನಾಗಿದ್ದರೆ, ಮರಣ ಪರಿಹಾರವನ್ನು ಪಾಲಸಿಧಾರಕನ ಕಾನೂನು ಬದ್ಧ ವಾರಸುದಾರರಿಗೆ ನೀಡಲಾಗುವದು.

Friday, July 18, 2014

18ಜುಲೈ 2014

ಪಾಲಿಸಿಯನ್ನು ಅಸೈನ್ (ಚಿssigಟಿ) ಮಾಡಿದರೆ, ಆ ಪಾಲಿಸಿಯಲ್ಲಿದ್ದ ನಾಮೀನೆಶನ್ ಮೇಲೆ ಯಾವ ಪರಿಣಾಮ ಉಂಟಾಗುವದು?

 ಪಾಲಿಸಿಯನ್ನು ಅಸೈನ್ ಮಾಡಿದರೆ, ಆ ಪಾಲಿಸಿಯಲ್ಲಿದ್ದ ನಾಮೀನೆಶನ್ ತನ್ನಿಂದ ತಾನೇ ರದ್ದಾಗುವದು. (ಆದರೆ ಸಾಲ ಪಡೆಯಲು, ಪಾಲಿಸಿಯನ್ನು ವಿಮಾಕಂಪನಿಗೆ ಅಸೈನ್ ಮಾಡಿದರೆ, ಆ ಪಾಲಿಸಿಯಲ್ಲಿದ್ದ ನಾಮಿನೇಶನ್ ರದ್ದಾಗದೇ ಹಾಗೆಯೇ ಉಳಿದುಕೊಳ್ಳುವದು.)

Thursday, July 17, 2014

17ಜುಲೈ 2014

ನಾಮಿನೇಶನ್‍ವನ್ನು ಅಥವಾ ನಾಮಿನೇಶನ್‍ದ ಬದಲಾವಣೆ/ರದ್ದತಿಯನ್ನು ಒಕ್ಕಣಿಕೆ ಮೂಲಕ ಮಾಡುವಾಗ ಪಾಲಿಸಿ ಬಾಂಡಿನಲ್ಲಿ ಸಾಕಷ್ಟು ಖಾಲೀ ಸ್ಥಳವಿರದಿದ್ದರೆ ಏನು ಮಾಡ ಬೇಕು?

ನಾಮಿನೇಶನ್‍ವನ್ನು ಅಥವಾ ನಾಮಿನೇಶನ್‍ದ ಬದಲಾವಣೆ/ರದ್ದತಿಯನ್ನುಒಕ್ಕಣಿಕೆ ಮೂಲಕ ಮಾಡುವಾಗ ಪಾಲಿಸಿ ಬಾಂಡಿನಲ್ಲಿ ಸಾಕಷ್ಟು ಖಾಲೀ ಸ್ಥಳವಿರದಿದ್ದರೆ, ಪಾಲಿಸಿ ಬಾಂಡಿಗೆ ಸುಲಭವಾಗಿ ಬೇರ್ಪಡಿಸಲಾಗದ ರೀತಿಯಲ್ಲಿ ಖಾಲೀ ಕಾಗದವನ್ನು ಅಂಟಿಸಿ, ಅದರಲ್ಲಿ ಒಕ್ಕಣಿಕೆಯನ್ನು ನಮೂದಿಸಬೇಕು.

Wednesday, July 16, 2014

16ಜುಲೈ 2014

ಈಗಿದ್ದ ನಾಮಿನೇಶನ್‍ವನ್ನು ಬದಲಾವಣೆ ಇಲ್ಲವೇ ರದ್ದು ಮಾಡಬಹುದೇ?

ಈಗಿದ್ದ ನಾಮಿನೇಶನ್‍ವನ್ನು ಬದಲಾವಣೆ ಇಲ್ಲವೇ ರದ್ದು ಮಾಡಬೇಕಾದರೆ, ಪಾಲಿಸಿ ಬಾಂಡ್ ಮೇಲೆ ಒಕ್ಕಣಿಕೆಯನ್ನು ನಮೂದಿಸುವ ಮೂಲಕ ಮಾಡಬಹುದು. ರದ್ದತಿ/ಬದಲಾವಣೆಯನ್ನು ನೋಂದಯಿಸಲು, ಒಕ್ಕಣಿಸಿದ ಪಾಲಿಸಿ ಬಾಂಡು ಹಾಗೂ ಲಿಖಿತ ನೋಟೀಸನ್ನು ಕಂಪನಿಗೆ ಕಳಿಸಬೇಕಾಗುವದು.

Tuesday, July 15, 2014

15ಜುಲೈ 2014

ಮೈನರ್ ವ್ಯಕ್ತ್ತಿಯನ್ನು ನಾಮಿನಿಯಾಗಿ ನೇಮಕ ಮಾಡಬಹುದೇ?

ಮೈನರ್ ವ್ಯಕ್ತ್ತಿಯನ್ನು ನಾಮಿನಿಯಾಗಿ ನೇಮಕ ಮಾಡಬಹುದು. ನಾಮಿನಿಯು ಮೈನರ್ ಇದ್ದಾಗ, ಮೈನರ ನಾಮಿನಿಗಾಗಿ ವಯಸ್ಕ ಅಪೈಂಟೀ (appointee) ಯನ್ನು ನಿಯಮಿಸಬೇಕಾಗುತ್ತದೆ. ಮರಣ ಪರಿಹಾರ ನೀಡುವ ಸಮಯದಲ್ಲಿ ನಾಮಿನಿಯು ಇನ್ನೂ ಮೈನರ್ ಆಗಿದ್ದರೆ, ಹಣವನ್ನು ವಯಸ್ಕ ಅಪೈಂಟೀ (appointee) ಗೆ ಕೊಡಲಾಗುತ್ತದೆ.

Monday, July 14, 2014

14ಜುಲೈ 2014

ಕೋರಿಕೆ ಪತ್ರದಲ್ಲಿ ನಾಮಿನಿಯ ಹೆಸರನ್ನು ಸೂಚಿಸದಿದ್ದರೆ, ನಾಮಿನೇಶನ್ ಮಾಡುವ ವಿಧಾನ :

ವಿಮಾ ಕೋರಿಕೆ ಸಲ್ಲಿಸುವ ಸಮಯದಲ್ಲಿ ಕೋರಿಕೆ ಪತ್ರದಲ್ಲಿ ನಾಮಿನಿಯ ಹೆಸರನ್ನು ಸೂಚಿಸಲಾಗದಿದ್ದರೆ, ಪಾಲಿಸಿ ಬಾಂಡು ನೀಡಿದ ನಂತರ, ಪಾಲಿಸಿ ಬಾಂಡಿನ ಖಾಲೀ ಸ್ಥಳದಲ್ಲಿ ಒಕ್ಕಣಿಕೆ (endorsement)ಯ ಮೂಲಕ ನಾಮಿನೇಶನ್ ಮಾಡಬಹುದು. ಈ ನಾಮಿನೇಶನ್‍ದ ನೋಂದಾವಣಿ (registration)ಗಾಗಿ ಪಾಲಿಸಿ ಬಾಂಡನ್ನು ಕಂಪನಿಗೆ ಕಳಿಸಬೇಕಾಗುವದು.

Sunday, July 13, 2014

13ಜುಲೈ 2014

ನಾಮಿನೇಶನ್ ಮಾಡುವ ವಿಧಾನ :

ವಿಮಾ ಕೋರಿಕೆ ಸಲ್ಲಿಸುವ ಸಮಯದಲ್ಲಿ ಕೋರಿಕೆ ಪತ್ರದಲ್ಲಿ ನಾಮಿನಿಯ ಹೆಸರನ್ನು ಸೂಚಿಸಿದರೆ ಪಾಲಿಸಿ ಬಾಂಡಿನಲ್ಲಿ ಆ ನಾಮಿನಿಯ ಹೆಸರನ್ನು ನಮೂದಿಸಲಾಗುವದು.

Saturday, July 12, 2014

12ಜುಲೈ 2014

ಒಂದಕ್ಕಿಂತ ಹೆಚ್ಚು ನಾಮಿನಿಗಳು ಇದ್ದಾಗ ಒಬ್ಬನಿಗೆ ಮಾತ್ರ ಹಣ ನೀಡುವ ವ್ಯವಸ್ಥೆ ಇದೆಯೇ?


ಒಂದಕ್ಕಿಂತ ಹೆಚ್ಚು ನಾಮಿನಿಗಳು ಇದ್ದಾಗ ಒಬ್ಬರಿಗೆ ಮಾತ್ರ ಹಣ ಸ್ವೀಕರಿಸುವಂತೆ ಮಾಡಬೇಕಾದರೆ, ನಿಯಮಿಸಿದ ನಾಮಿನಿಗಳಿಗೆ 1,2,3,-- ಹೀಗೆ ಮೊದಲು ಕ್ರಮಾಂಕ ನೀಡಬೇಕು. ಇದಕ್ಕೆ ಒಬ್ಬರ ನಂತರ ಇನ್ನೊಬ್ಬರ ನಾಮಿನೇಶನ (successive nomination)ಎನ್ನುವರು.
ನಾಮಿನಿಗೆ ಮರಣ ಪರಿಹಾರ ನೀಡುವ ಸ್ಥಿತಿ ಉದ್ಭವಿಸಿದಾಗ, ಆ ಸಮಯಕ್ಕೆ ಬದುಕಿ ಉಳಿದ ನಾಮಿನಿಗಳಲ್ಲಿ ಅತ್ಯಂತ ಕಡಿಮೆ ಕ್ರಮಾಂಕ ಹೊಂದಿದ ಒಬ್ಬ ನಾಮಿನಿಗೆ ಮಾತ್ರ ಪರಿಹಾರ ನೀಡಲಾಗುವದು.

Friday, July 11, 2014

11 ಜುಲೈ 2014

ಒಂದಕ್ಕಿಂತ ಹೆಚ್ಚು ನಾಮಿನಿಗಳು ಇದ್ದಾಗ ಒಬ್ಬರು ನಿಧನರಾದರೆ ಹಣ ಹೇಗೆ ನೀಡುತ್ತಾರೆ?

ಉತ್ತರ :ಒಂದಕ್ಕಿಂತ ಹೆಚ್ಚು ನಾಮಿನಿಗಳು ಇದ್ದಾಗ ಒಬ್ಬರು ಅಥವಾ ಹೆಚ್ಚು ನಾಮಿನಿಗಳು ನಿಧನರಾದರೆ, ಬದುಕಿ ಉಳಿದ ನಾಮಿನಿಗಳಿಗೆ ಹಣವನ್ನು ಸಾಮೂಹಿಕವಾಗಿ (Jointly)ನೀಡುತ್ತಾರೆ.

Thursday, July 10, 2014

10 ಜುಲೈ 2014

ಒಂದಕ್ಕಿಂತ ಹೆಚ್ಚು ನಾಮಿನಿಗಳು ಇದ್ದಾಗ ಹಣವನ್ನು ಯಾರಿಗೆ ನೀಡಬೇಕು?

ಒಂದಕ್ಕಿಂತ ಹೆಚ್ಚು ನಾಮಿನಿಗಳು ಇದ್ದಾಗ ಹಣವನ್ನು ಎಲ್ಲರಿಗೂ ಸಾಮೂಹಿಕವಾಗಿ (Jointly) ನೀಡುತ್ತಾರೆ. ಯಾರಿಗೂ ನಿಶ್ಚಿತವಾದ ಪಾಲು ಇರುವದಿಲ್ಲಾ.

Wednesday, July 9, 2014

9 ಜುಲೈ 2014

 ನಾಮಿನಿಗೆ ಪಾಲಿಸಿ ಹಣದ ಮೇಲೆ ಹಕ್ಕುಗಳು ಪ್ರಾಪ್ತವಾಗುವವೋ? 

ಉತ್ತರ : ಇಲ್ಲ. ನಾಮಿನಿಗೆ ಪಾಲಿಸಿ ಹಣ ಸ್ವೀಕರಿಸುವ ಅಧಿಕಾರ ಮಾತ್ರ ಸಿಗುತ್ತದೆ. ಆ ಹಣದ ಮೇಲೆ ಹಕ್ಕು ದೊರಕುವದಿಲ್ಲಾ.

Tuesday, July 8, 2014

8 ಜುಲೈ 2014

ಒಂದಕ್ಕಿಂತ ಹೆಚ್ಚಿಗೆ ನಾಮಿನಿಗಳು ಇರಬಹುದೇ?

ಖಂಡಿತವಾಗಿ ಒಂದಕ್ಕಿಂತ ಹೆಚ್ಚಿಗೆ ನಾಮಿನಿಗಳನ್ನು ಸೂಚಿಸಬಹುದು.

Monday, July 7, 2014

7 ಜುಲೈ 2014

ನಾಮಿನೀ(Nominee)ಎಂದರೇನು?

ಯಾರಿಗೆ ಹಣ ಸ್ವೀಕರಿಸಲು ಸೂಚಿಸಿರುತ್ತಾರೋ ಅವನಿಗೆ ನಾಮಿನಿ (Nominee)ಎಂದು ಕರೆಯುತ್ತಾರೆ.

Sunday, July 6, 2014

6 ಜುಲೈ 2014

ನಾಮಿನೇಶನ್‍ವನ್ನು ಯಾರು ಮಾಡಬಹುದು?

ತನ್ನ ಸ್ವಂತ ಜೀವದ ಮೇಲೆ ವಿಮೆ ಮಾಡಿಸಿಕೊಂಡ ಪಾಲಿಸಿಧಾರಕ ಮಾತ್ರ ನಾಮೀನೇಶನ ಮಾಡಿಸ ಬಹುದು.

Saturday, July 5, 2014

5 ಜುಲೈ 2014

ನಾಮಿನೇಶನ್( Nomination)ಬಗ್ಗೆ ಅಧಿಕೃತ ವಿವರಣೆ ಎಲ್ಲಿ ದೊರಕುತ್ತದೆ?

ನಾಮಿನೇಶನ್ ಬಗ್ಗೆ ಅಧಿಕೃತ ವಿವರಣೆ ವಿಮಾ ಕಾನೂನು 1938ರ ಸೆಕ್ಶನ್ 39ರಲ್ಲಿ ದೊರಕುತ್ತದೆ.

Friday, July 4, 2014

4 ಜುಲೈ 2014

ನಾಮಿನೇಶನ್ - (Nomination) .

ತನ್ನ ಮರಣಾನಂತರ ಪಾಲಿಸಿ ಹಣವನ್ನು ಯಾರು ಸ್ವೀಕರಿಸಬೇಕು ಎಂದು ಸೂಚಿಸುವದಕ್ಕೆ ನಾಮಿನೇಶನ್ ( Nomination)ಎಂದು ಕರೆಯುತ್ತಾರೆ.

Thursday, July 3, 2014

3 ಜುಲೈ 2014

ಪಾಲಿಸಿಯ  ಪುನರುಜ್ಜೀವನ – ರಿವೈವಲ್ (Revival).


ಸ್ಥಗಿತಗೊಂಡ ಪಾಲಿಸಿಯನ್ನು ಪುನಃ ಚಾಲನೆಯ ಸ್ಥಿತಿಯಲ್ಲಿ ತರುವದಕ್ಕೆ ಪಾಲಿಸಿಯ ಪುನರುಜ್ಜೀವನ- (Revival)ಎಂದು ಕರೆಯುತ್ತಾರೆ.ಪಾಲಿಸಿಯ ಪುನರುಜ್ಜೀವನಕ್ಕೆ - ರಿವೈವಲ್‍ಗೆ ವಿಧಿಸಲಾಗುವ ಶರ್ಯತ್ತುಗಳು.
1) ರಿವೈವಲ್ ದಿನಾಂಕದವರೆಗೆ ಬಾಕೀ ಉಳಿದ ಎಲ್ಲಾ ವಿಮಾಕಂತುಗಳನ್ನು ಬಡ್ಡಿಯೊಂದಿಗೆ ನೀಡಬೇಕು.
2) ರಿವೈವಲ್ ದಿನದಂದು, ವಿಮಾಜೀವಿಯು ಒಳ್ಳೆ ಆರೋಗ್ಯ ಹೊಂದಿರುವ ಬಗ್ಗೆ ಪುರಾವೆ ನೀಡಬೇಕು.
3) ರಿವೈವಲ್ ಶುಲ್ಕವನ್ನೂ ನೀಡಬೇಕು.

Wednesday, July 2, 2014

2ಜುಲೈ 2014

 ಸರಂಡರ್ ಬೆಲೆ(ತ್ಯಾಗ ಮೌಲ್ಯ) –Surrender  Value.

ಸ್ಥಗಿತಗೊಂಡ ಪಾಲಿಸಿಯ ಪೇಡ್‍ಅಪ್ ಬೆಲೆಯನ್ನು ಕೂಡಲೇ ನೀಡಲಾಗುವದಿಲ್ಲ. ಅದನ್ನು ಪಡೆಯ ಬೇಕಾದರೆ ಅವಧಿ ಮುಗಿಯುವವರೆಗೆ ಕಾಯಬೇಕು ಇಲ್ಲವೇ ಕೂಡಲೇ ಸಾಯಬೇಕು. ಇಂದೇ ಬೇಕೆಂದು ಹಟ ಹಿಡಿದರೆ  ಪೇಡ್‍ಅಪ್ ಬೆಲೆಯ ಭಾಗಶಃ ಮೊತ್ತವನ್ನು ಕೊಡಲು ವಿಮಾ ಸಂಸ್ಥೆ ಒಪ್ಪುತ್ತದೆ. ಪೇಡ್‍ಅಪ್ ಬೆಲೆಯ ಈ ಭಾಗಶಃ ಮೊತ್ತಕ್ಕೆ ಸರಂಡರ್ ಬೆಲೆ ಎಂದು ಕರೆಯುತ್ತಾರೆ.

ಸರಂಡರ್ ಬೆಲೆ ಎಂದರೆ ಮುಂದೆ ಸಿಗಲಿರುವ ಪೇಡ್‍ಅಪ್ ಬೆಲೆಯ ಇಂದಿನ ದರ.
ಸರಂಡರ್ ಬೆಲೆಯನ್ನು ಪೇಡ್‍ಅಪ್ ಬೆಲೆಯ ಕಡಿಮೆ ಪ್ರಮಾಣದ ಬೆಲೆ ಕರೆಯಬಹುದು.
ಸರಂಡರ ಬೆಲೆಯ ಪ್ರಮಾಣ, ಸರಂಡರ್ ದಿನಾಂಕ ಮ್ಯೆಚ್ಯೂರಿಟಿಯ ದಿನಾಂಕದತ್ತ ಸಾಗುತ್ತಹೋದಂತೆ ಹೆಚ್ಚುತ್ತ    
        ಹೋಗುತ್ತದೆ.
ಸರಂಡರ ಬೆಲೆಯ ಪ್ರಮಾಣ ಮ್ಯೆಚ್ಯೂರಿಟಿಯಂದು, ಪೇಡ್‍ಅಪ್ ಬೆಲೆಯ 100%ಕ್ಕೆ ಸಮನಾಗಿರುತ್ತದೆ.

Tuesday, July 1, 2014

1 ಜುಲೈ 2014

ವಿಮಾ ಸಂಸ್ಥೆಯು ಪಾಲಿಸಿ ಪೇಡ ಅಪ್ ಬೆಲೆಯನ್ನು ಯಾವಾಗ ನೀಡುತ್ತದೆ?


ಪಾಲಸಿಯ ಪೇಡ್‍ಅಪ್ ಬೆಲೆಯನ್ನು ಕೂಡಲೇ ನೀಡಲಾಗುವದಿಲ್ಲ. ಅದನ್ನು ಪಾಲಸಿ ಅವಧಿ ಮಗಿದ ನಂತರ, ಅಥವಾ ಅದಕ್ಕೂ ಮೊದಲೇ ಪಾಲಸಿಧಾರಕ ನಿಧÀನನಾದರೆ, ನಿಧನದ ಸಮಯಕ್ಕೆ ಕೊಡಲಾಗುತ್ತದೆ.