Wednesday, December 31, 2014

31  ಡಿಸೆಂಬರ 2014 

 ಜೀವ ವಿಮಾ ಖರೀದಿಯಲ್ಲಿ ಗ್ರಾಹಕನು ವಿರೋಧ ವ್ಯಕ್ತಪಡಿಸುವಾಗ, ಏಜೆಂಟನು ಜಾಗ್ರತೆ ವಹಿಸಬೇಕಾದ ಸಂಗತಿಗಳು ಯಾವುವು?

ವಿರೋಧದ ಹಿಂದೆ  ಇರುವ ವಾಸ್ತವಿಕ ಕಾರಣ (real reasons)ಗಳನ್ನು ಪತ್ತೆ ಹಚ್ಚಬೇಕು.
ವಿರೋಧಗಳಿಗೆ ಗ್ರಾಹಕನಿಗಿರುವ ಹಕ್ಕನ್ನು ಮನ್ನಿಸಬೇಕು.
ವಿರೋಧ ಕಾರಣ ಅರಿಯಲು ಸರಿಯಾದ ರೀತಿಯಲ್ಲಿ ಪ್ರಶ್ನೆ ಕೇಳಬೇಕು.
ಗ್ರಾಹಕನ ಉತ್ತರವನ್ನು ಲಕ್ಷಗೊಟ್ಟು ಮನಸಾ ಕೇಳಬೇಕು( you must listen). ನಂತರ ನಿಜವಾದ ಸಮಸ್ಯೆಗೆ ಪರಿಹಾರ ನೀಡಬೇಕು.

Tuesday, December 30, 2014

30 ಡಿಸೆಂಬರ 2014 

ಜೀವ ವಿಮಾ ಖರೀದಿಗಳಲ್ಲಿ ಕಂಡು ಬರುವ ಸಾಮಾನ್ಯ ವಿರೋಧಗಳು ಯಾವುವು?

ಜೀವ ವಿಮಾ ಸರಕುಗಳ ಖರೀದಿಗಳಲ್ಲಿ ಕಂಡು ಬರುವ ವಿರೋಧಗಳು ಕೆಳಗಿನಂತಿವೆ.
ವಿಮಾ ಪಾಲಿಸಿಗಳು ತನ್ನ ಬೇಡಿಕೆಗಳನ್ನು ಪೂರೈಸುವದಿಲ್ಲಾ ಎನ್ನುವ ಭಾವನೆ.
ಬೇರೆ ಕಂಪನಿಗಳ ಸರಕುಗಳು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತವೆ ಎನ್ನುವ ಭಾವನೆ.
ಪಾಲಿಸಿ ಕೊಳ್ಳಲು ತನ್ನ ಬಳಿ ಹಣವಿಲ್ಲಾ, ಎನ್ನುವ ಭಾವನೆ.

   

Monday, December 29, 2014

29 ಡಿಸೆಂಬರ 2014 

ಗ್ರಾಹಕನ ವಿರೋಧಗಳ ರೀತಿ ಹೇಗಿರುತ್ತದೆ?
 ಜೀವ ವಿಮಾ ಸರಕುಗಳ ಖರೀದಿಗೆ ವಿರೋಧಿಸುವ ಕಾರಣಗಳು.
ಗ್ರಾಹಕನು ಜೀವ ವಿಮೆಯನ್ನು ಅರ್ಥ ಮಾಡಿಕೊಂಡಿರುವದಿಲ್ಲಾ.
ಸಾವಿನ ಸಮಯದ ಬಗ್ಗೆ ಚರ್ಚಿಸಲು ಗ್ರಾಹಕನ ಮನ ಒಪ್ಪುವದಿಲ್ಲಾ.
ಸಾವಿನ ನಂತರ ಅವಲಂಬಿತರಿಗೆ ಉಂಟಾಗಬಹುದಾದ ಕಷ್ಟಗಳನ್ನು ಚರ್ಚಿಸ ಬಯಸುವದಿಲ್ಲಾ.


Sunday, December 28, 2014

28 ಡಿಸೆಂಬರ 2014 

ಮನಃಪೂರ್ವಕವಾಗಿ  ಕೇಳುವ ರೀತಿ (Listening) ಹೇಗಿರುತ್ತದೆ?

ಗ್ರಾಹಕನು ಹೇಳುವದನ್ನು ಗಮನವಿಟ್ಟು ಕೇಳುವದು. ಅವನು ಹೇಳುವದರಲ್ಲಿ ನಿಮಗೆ ಆಸಕ್ತಿ ಇದೆ ಎಂದು       
       ತೋರಿಸಿಕೊಳ್ಳುವದು.
ಗ್ರಾಹಕನ ಉತ್ತರಗಳನ್ನು ಒಂದೆಡೆ ಬರೆದುಕೊಳ್ಳುವದು, ಅವನ ಹಾವಭಾವಗಳನ್ನು ಗಮನಿಸುವದು.
ಗ್ರಾಹಕನ ಆರ್ಥಿಕ ಯೋಜನೆಯನ್ನು ಕಾರ್ಯಗತಗೊಳಿಸಲು ತನಗಿರುವ ಆಸಕ್ತಿಯನ್ನು ತೋರಿಸುವದು.


Saturday, December 27, 2014


27 ಡಿಸೆಂಬg 2014 ಡಿಸೆಂಬರ 2014 

 ಪ್ರಶ್ನೆ ಕೇಳುವ ರೀತಿ ಹೇಗಿರುತ್ತದೆ?


ಗ್ರಾಹಕನ ಉತ್ತರ ಏಜೆಂಟನ ಮುಂದಿನ ಪ್ರಶ್ನೆಯನ್ನು ರೂಪಿಸುತ್ತದೆ.
ಪ್ರಶ್ನೆ ಸರಳವಾಗಿರಬೇಕು, ಆರ್ಥಪೂರ್ಣವಾಗಿರಬೇಕು, ಗೊಂದಲರಹಿತವಾಗಿರಬೇಕು. 
ಪ್ರಶ್ನೆಗಳು ವ್ಯಕ್ತಿಗತವಾಗಿರಬೇಕು, ಜನಸಮೂಹಕ್ಕೆ ಅನ್ವಯವಾಗುವ ಸಾಮಾನ್ಯ ಪ್ರಶ್ನೆ ಕೇಳಲಾಗದು.


Friday, December 26, 2014

26 ಡಿಸೆಂಬರ 2014 

ಪ್ರಶ್ನೆ ಕೇಳುವ ಉದ್ಯೇಶಗಳೇನು?

ಮಾಹಿತಿ ಕೋರಿಕೆ ಪ್ರಶ್ನೆ             : ಬೇಕಾದ ವಿವರ ಕಲೆ ಹಾಕಲು. 
ಹೆಚ್ಚಿನ ಮಾಹಿತಿ ಕೋರಿಕೆ ಪ್ರಶ್ನೆ        : ಹೆಚ್ಚಿನ ವಿವರ ಕಲೆ ಹಾಕಲು. 
ಮಾಹಿತಿ ಸ್ಪಷ್ಟೀಕರಣ ಪ್ರಶ್ನೆ           : ಉತ್ತರಗಳ ಮೇಲೆ ಸ್ಪಷ್ಟೀಕರಣ ಕೇಳಲು. 
ಒಪ್ಪಿಗೆಗೆ ಖಾತ್ರಿ ಮಾಡಿಕೊಳ್ಳುವ ಪ್ರಶ್ನೆ    : ಒಪ್ಪಿಗೆಯ ಸಂದಿಘ್ನತೆಯನು ತೊಡೆದು ಹಾಕಲು.
ಒಪ್ಪಿಗೆ ಕಾರ್ಯಗತಗೊಳಿಸಲು ಪ್ರಶ್ನೆ     : ಒಪ್ಪಿಗೆಯನ್ನು ಕಾರ್ಯಾಚರಣೆಯಲ್ಲಿ ತರಲು.



Thursday, December 25, 2014

25 ಡಿಸೆಂಬರ 2014 

ಪ್ರಶ್ನೆ ಕೇಳುವ ಕೌಶಲ್ಯ (Questioning  Skills) ವೆಂದರೇನು?

ಪ್ರಶ್ನೆ ಕೇಳುವ ಕೌಶಲ್ಯವೆಂದರೆ,
ವಿವಿಧ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುವ ಕಲೆ,
ತೆರೆದು ಕೊಳ್ಳುವ ಪ್ರಶ್ನೆ (Open ended questions) ಕೇಳುವದು - ಅಂದರೆ ವಿವರಗಳನ್ನು ಕಲೆ ಹಾಕಲು ಕೇಳುವ 
          ಪ್ರಶ್ನೆ.
ಮುಚ್ಚಿ ಕೊಳ್ಳುವ ಪ್ರಶ್ನೆ (Close ended questions) ಕೇಳುವದು– ಅಂದರೆ ಸಮ್ಮತಿಯನ್ನು ಪಡೆಯಲು ಕೇಳುವ 
       ಪ್ರಶ್ನೆ. 


Wednesday, December 24, 2014

24 ಡಿಸೆಂಬರ 2014 

 ಸಂಪರ್ಕ ಕೌಶಲ್ಯ (Communication Skills) ವೆಂದರೇನು?

ಸಂಪರ್ಕ ಕೌಶಲ್ಯವೆಂದರೆ,
ಗ್ರಾಹಕನ ಸ್ಥಳೀಯ ಭಾಷೆ (local language) ಮೇಲೆ ಗಾಢವಾದ ಪ್ರೌಢಿಮೆ.
ಸ್ನೇಹಪರ ವ್ಯವಹಾರ ಹಾಗೂ ಅಪ್ಪಟ ವಿಶ್ವಾಸ ಪ್ರದರ್ಶನ.
ಗ್ರಾಹಕನ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡಿ, ಸಂಭಾಷಣೆಯನ್ನು ಮುಂದುವರೆಸುವದು.


Tuesday, December 23, 2014

23 ಡಿಸೆಂಬರ 2014 

ಗ್ರಾಹಕನ ನಿಜವಾದ ಬೇಡಿಕೆ (Real needs) ಗಳನ್ನು ಗುರುತಿಸುವಲ್ಲಿ ಏಜೆಂಟನ ಪಾತ್ರವೇನು?


ಗ್ರಾಹಕನ ಜೀವನದ ವಾಸ್ತವಿಕ ಬೇಡಿಕೆ (Real needs) ಗಳನ್ನು ಪತ್ತೆ ಹಚ್ಚಿ ತಿಳಿಸುವದು.
ಸಧ್ಯದ ಹಾಗೂ ಭವಿಷ್ಯದ ಬೇಡಿಕೆ (Present & Future  needs) ಗಳನ್ನು ಪ್ರತ್ಯೇಕವಾಗಿ ಬಿಡಿಸಿ ತಿಳಿಸುವದು.
ಬೇಡಿಕೆಗಳನ್ನು ಆದ್ಯತಾ ಕ್ರಮ (prioritization of needs) ದಲ್ಲಿ ಹೊಂದಿಸಿ, ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಬೇಕಾಗುವ ಹಣ (Quantification of needs) ವನ್ನು ಲೆಕ್ಕ ಮಾಡಿ ಹೇಳುವದು.
ನಿಯಮಿತ ಕಾಲಾವಧಿಗಳ ನಂತರ, ಬೇಡಿಕೆಗಳನ್ನು ಪುನಃ ಪರಿಶೀಲಿಸಿ, ಮತ್ತೆ ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿ ಹೇಳುವದು. 


Monday, December 22, 2014

22 ಡಿಸೆಂಬರ 2014 

ಆರ್ಥಿಕ ಯೋಜನೆ (Financial Planning), ಗಳನ್ನು ಕೈಕೊಳ್ಳುವಾಗ ಜನರು ಹೇಗೆ ಎಡವುತ್ತಾರೆ?

   
1) ಮೋಜು ಮಸ್ತಿ ಚಟುವಟಿಕೆಗಳನ್ನು ಬಿಡಲಾಗದ್ದಕ್ಕೆ, ಬಹಳಷ್ಟು ಜನರು ನಿಯಮಿತವಾಗಿ ಉಳಿತಾಯ ಮಾಡಲು ಹಿಂದೆ ಮುಂದೆ ನೋಡುತ್ತಾರೆ.
2) ಈವತ್ತಿನ/ಭವಿಷ್ಯದ ವಾಸ್ತವಿಕ ಅವಶ್ಯಕತೆ (Real needs) ಗಳನ್ನು ತಿಳಿದುಕೊಳ್ಳದೇ, ಇಂದು ಬೇಕೆನಿಸಿದ ಅವಶ್ಯಕತೆ (perceived needs)ಗಳಿಗೆ ಅನವಶ್ಯಕ ವೆಚ್ಚ ಮಾಡುತ್ತಾರೆ. (ಉದಾ : ಗಳಿಸುವವನ ಜೀವದ ಮೇಲೆ ಪಾಲಿಸಿ ಖರೀದಿಸದೆ, ಮಗನ ಜೀವದ ಮೇಲೆ ಪಾಲಿಸಿ ಖರೀದಿಸುವದು.)


Sunday, December 21, 2014

21 ಡಿಸೆಂಬರ 2014 

ಜೀವನದ ವಿವಿಧ ಹಂತಗಳ ಅವಶ್ಯಕತೆಗಳನ್ನು ಈಡೇರಿಸಲು ಏನು ಮಾಡ ಬೇಕಾಗುತ್ತದೆ?

         1) ಆರಾಮದ ಸಮಯ (Leisure Time), ವನ್ನು ತ್ಯಾಗ ಮಾಡಬೇಕಾಗುತ್ತದೆ.
         2) ನಿಯಮಿತವಾಗಿ ಉಳಿತಾಯ (Regular Savings),  ಮಾಡ ಬೇಕಗುತ್ತದೆ. 
         3) ಉಳಿತಾಯದ ಹಣವನ್ನು ಸಮರ್ಥವಾಗಿ ಹೂಡಿಕೆ (Efficient Investment)     
          ಮಾಡಬೇಕಾಗುತ್ತದೆ.


Saturday, December 20, 2014

20 ಡಿಸೆಂಬ 2014 

 ವಾಸ್ತವಿಕ ಅವಶ್ಯಕತೆಗಳು (Real needs), ಹಾಗೂ ಬೇಕೆನಿಸಿದ ಅವಶ್ಯಕತೆಗಳು (Perceived  needs),   ಎಂದರೇನು?

ವಾಸ್ತವಿಕ ಅವಶ್ಯಕತೆ (Real needs) ಗಳೆಂದರೆ ತಳ್ಳಿಹಾಕಲಾರದ ಅವಶ್ಯಕತೆಗಳು. 
ಉದಾ : ಹಸಿವೆಗೆ ಅನ್ನ, ಬಾಯಾರಿಕೆಗೆ ನಿರು, ಸುರಕ್ಷತೆಗೆ ಗುಡಿಸಲು ಮನೆ,ಇತ್ಯಾದಿ. ಅವುಗಳನ್ನು ಈಡೇರಿಸದೇ ಹೋದರೆ ಸಂಕಷ್ಟಗಳಿಗೆ ಈಡಾಗುತ್ತಾರೆ.

ಬೇಕೆನಿಸಿದ ಅವಶ್ಯಕತೆಗಳೆಂದರೆ ತಳ್ಳಿಹಾಕಬಹುದಾದ/ ಉಪೇಕ್ಷಿಸಬಹುದಾದ ಅವಶ್ಯಕತೆಗಳು.
ಉದಾ : ಹಸಿವೆಗೆ ಹೋಳಿಗೆ, ಬಾಯಾರಿಕೆಗೆ ಬಾದಾಮಿ ಹಾಲು, ಸುರಕ್ಷತೆಗೆ ತಾರಸಿ ಮನೆ,ಇತ್ಯಾದಿ. ಅವುಗಳನ್ನು ಈಡೇರಿಸದೇ ಹೋದರೆ ಸಂಕಷ್ಟಗಳೇನು ಉಂಟಾಗುವದಿಲ್ಲಾ.  ಇಲ್ಲಿ ಹೋಳಿಗೆಗೆ ಬದಲಾಗಿ ಅನ್ನ, ಬಾದಾಮಿ ಹಾಲಿಗೆ ಬದಲಾಗಿ ನೀರು, ತಾರಸಿ ಮನೆಗೆ ಬದಲಾಗಿ ಗುಡಿಸಲು ನೀಡಿದರೆ ನಡೆಯುವದು.

Friday, December 19, 2014

19 ಡಿಸೆಂಬ 2014 

ಆಸ್ತಿ ಹಾಗೂ ಹೊರೆ (Asset & Liability) ಗಳೆಂದರೆ ಏನು?


ಆಸ್ತಿಯಲ್ಲಿ ಎಲ್ಲಾ ಹಕ್ಕುಗಳು ಸ್ವಂತದ್ದಾಗಿರುತ್ತವೆ, ಹೊರೆಯಲ್ಲಿ ಎಲ್ಲಾ ಹಕ್ಕುಗಳು ಪರರದ್ದಾಗಿರುತ್ತದೆ.
ಎಲ್ಲಾ ಆಸ್ತಿಗಳ ಮೌಲ್ಯ ಎಲ್ಲಾ ಹೊರೆಗಳ ಮೌಲ್ಯಕ್ಕಿಂತ ಹೆಚ್ಚಾಗಿದ್ದರೆ ಹೂಡಿಕೆಗೆ ಹಣ ಹೊಂದಿಸಬಹುದು.   
ಎಲ್ಲಾ ಆಸ್ತಿಗಳ  ಮೌಲ್ಯ ಎಲ್ಲಾ ಹೊರೆಗಳ ಮೌಲ್ಯಕ್ಕಿಂತ ಕಡಿಮೆಯಾಗಿದ್ದರೆ ಸಾಲ ತೀರಿಕೆಗೆ ಹಣ ಹೊಂದಿಸ ಬೇಕಾಗುತ್ತದೆ.
ಆದಾಯ ಗಳಿಸದ, ಕ್ಷೀಣ ಆದಾಯದ, ಸಮಯಾನುಸಾರ ಬೆಲೆಕಳೆದುಕೊಳ್ಳುವ ಆಸ್ತಿಗಳನ್ನು ಮಾರುವದು ಒಳ್ಳೆಯದು.
ಸಾಲ ಹೊಂದಿದ ಆಸ್ತಿಗಳ ಬೆಲೆಗೆ ಸಮನಾದ ಮೊತ್ತದ ಮೇಲೆ ವಿಮೆಯನ್ನು ತಪ್ಪದೇ ಮಾಡಿಸಬೇಕು. ಆಗ ಸಾವಿನ ಜೊತೆಗೆ ಸಾಲವೂ ಸಾಯುತ್ತದೆ.


Thursday, December 18, 2014


18ಡಿಸೆಂಬ 2014 

 ಆಸ್ತಿ ಸಂಪಾದನೆ (Asset Creation) ಗಳ ವಿಧಾನ ಹೇಗೆ?

 ಕೆಳಗಿನ ವಿಧಾನಗಳ ಮೂಲಕ ಆಸ್ತಿ ಸಂಪಾದನೆಯಾಗುತ್ತದೆ.
ಉಳಿತಾಯದ ಮೂಲಕ.         – ಉಳಿಸು
ವ್ಯಾಪಾರ ಚಟುವಟಕೆಗಳ ಮೂಲಕ. - ಬೆಳೆಯಿಸು.
ಆನುವಂಶಿಕತೆಯ ಆಧಾರದ ಮೂಲಕ.- ಬಳುವಳಿಯಾಗಿ ಪಡೆ.



Wednesday, December 17, 2014


17 ಡಿಸೆಂಬ 2014 

 ಉಳಿತಾಯದಲ್ಲಿ ಜೀವನದ  ಯಾವ ವಿವಿಧ ಅವಸ್ಥೆಗಳು ಪರಿಣಾಮ ಬೀರುತ್ತವೆ?

   
1) ವಯಸ್ಸು (age):
ಚಿಕ್ಕ ವಯಸ್ಸಿನಲ್ಲಿ ಸಾಮಾನ್ಯವಾಗಿ ಪರಿವಾರದ ಹೊಣೆ ಇರುವದಿಲ್ಲಾ.
ದೊಡ್ಡವನಾದಂತೆ ಗಳಿಕೆ ಹಾಗೂ ಪರಿವಾರದ ಹೊಣೆ, ಎರಡೂ ಹೆಚ್ಚುತ್ತ ಹೋಗುವವು,
ಮಧ್ಯಮ ವಯಸ್ಸು ದಾಟಿದ ಮೇಲೆ, ಆರೋಗ್ಯದ ಮೇಲೆ ಒತ್ತಡ ಹೆಚ್ಚಾಗುತ್ತದೆ,
ನಿವೃತ್ತಿಯ ನಂತರ ದುಡಿಮೆಯ ಗಳಿಕೆ ನಿಮತು ಹೋಗುತ್ತದೆ. 

2) ವೈವಾಹಿಕ ಸ್ಥಿತಿ (Marriage Status)  :
ಪರಿವಾರದ ಹೊಣೆ  ದಂಪತಿಗಳಿಬ್ಬರ ಒಟ್ಟು ಗಳಿಕೆಯ ಮೇಲೆ ನಿರ್ಧಾರವಾಗುತ್ತದೆ.
ಪರಿವಾರದ ಉಳಿತಾಯ ಸಾಮಥ್ರ್ಯ  ದಂಪತಿಗಳಿಬ್ಬರ ಒಟ್ಟು ಗಳಿಕೆಯ ಮೇಲೆ ನಿರ್ಧಾರವಾಗುತ್ತದೆ.
ಜೀವನ ಸಂಗಾತಿ/ಮಕ್ಕಳು/ಅವಲಂಬಿತರ ಭವಿಷ್ಯ ಪ್ರಥಮ ಆದ್ಯತೆ ಪಡೆಯುತ್ತದೆ. 
ಸ್ವಂತ ಮನೆ/ಕಾರು/ಕೌಟುಂಬಿಕ ಪ್ರವಾಸ/ನಿವೃತ್ತಿಜೀವನ ನಿರ್ವಹಣೆಯ ಚಿಂತೆಗಳಿಗೆ  ನಂತರದ ಆದ್ಯತೆ.

3) ಉದ್ಯೋಗ (employment) ರೀತಿ. 
ಸರಕಾರೀ/ಸಾರ್ವಜನಿಕ ಕ್ಷೇತ್ರ (Government/public sector) ದ ನೌಕರಿ.
ಜೀವನದ ಆರ್ಥಿಕ ನಿರ್ವಹಣೆಯ ಬಹುದೊಡ್ಡ ಜವಾಬ್ದಾರಿಯನ್ನು, ನೌಕರಿಯ ಮಾಲಿಕನೇ ಮಾಡಿರುತ್ತಾನೆ. ಅವಧಿ ವಿಮೆ/ಆರ್ಥಿಕವಿಮೆ/ವರ್ಷಾಶನಗಳಿಗೆ ಅವರು ನೀಡಿದ ಸೌಲಭ್ಯಗಳಗಿಂತ ಇನ್ನೂ ಹೆಚ್ಚಿನ ಸೌಲಭ್ಯಗಳು ಬೇಕೆನಿಸಿದರೆ, ಅವಶ್ಯಕ ಉಳಿತಾಯಗಳನ್ನು ಮಾಡಬೇಕು. ಮಕ್ಕಳ ಶಿಕ್ಷಣ, ಮದುವೆ, ಮನೆ, ಕಾರು, ಇತ್ಯಾದಿಗಳಗಾಗಿ ಎಲ್ಲರಂತೆ ಉಳಿತಾಯ ಮಾಡಬೇಕು.
ಖಾಸಗೀ ಕ್ಷೇತ್ರದ (private  sector)  ನೌಕರಿ.
ತುರ್ತು ನಿಧಿ, ವಿಮೆಯ ಜರೂರತೆ, ಮಕ್ಕಳ ಶಿಕ್ಷಣ, ಮದುವೆ, ಮನೆ, ಕಾರು, ನಿವೃತ್ತಿ ಜೀವನಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ತನ್ನ  ಸ್ವಂತದ ಉಳಿತಾಯಗಳಿಂದಲೇ ಪೂರೈಸಿಕೊಳ್ಳ ಬೇಕು.
ಚಿಕ್ಕ ಕಾಲಾವಧಿ (small period) ಯ ನೌಕರಿ.
ತುರ್ತು ನಿಧಿ, ವಿಮೆಯ ಜರೂರತೆ, ಮಕ್ಕಳ ಶಿಕ್ಷಣ, ಮದುವೆ, ಮನೆ, ಕಾರು, ನಿವೃತ್ತಿ ಜೀವನಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು, ಚಿಕ್ಕ ಕಾಲದ ಉಳಿತಾಯಗಳಿಂದಲೇ ಪೂರೈಸಿಕೊಳ್ಳಬೇಕು. ಒಂಟಿ ಕಂತಿನ/ನಿಯಮಿತ ಕಂತಿನ ವಿಮೆ ಹಾಗೂ ವರ್ಷಾಶನಗಳಿಗೆ ಮೊರೆ ಹೋಗಬೇಕಾಗುವದು.
ಸ್ವಂತ ದುಡಿಮೆ (Self  employed). 
ದುಡಿಮೆಯಲ್ಲಿ ಏರು ಪೇರುಗಳಾಗುವದರಿಂದ, ತುರ್ತು ನಿಧಿ, ವಿಮೆಯ ಜರೂರತೆ, ಮಕ್ಕಳ ಶಿಕ್ಷಣ, ಮದುವೆ, ಮನೆ, ಕಾರು, ನಿವೃತ್ತಿ ಜೀವನಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಒಂಟಿ ಕಂತಿನ ವಿಮೆ ಹಾಗೂ ವರ್ಷಾಶನಗಳಿಗೆ ಮೊರೆ ಹೋಗಬೇಕಾಗುವದು. 
ನಿರುದ್ಯೋಗ (Un employed).  
ತುರ್ತುನಿಧಿಯಿಂದ ಜೀವನ ನಿರ್ವಹಿಸಬೇಕಾಗುವದು. ಪಾಲಿಸಿಗಳಮೇಲೆ ಸಾಲ ತೆಗೆದುಕೊಳ್ಳ ಬಹುದು. ವಿಮಾ ಕಂತುಗಳನ್ನು ನೀಡಲಾಗದಿದ್ದರೆ, ನಿಂತು ಹೋದ ಪಾಲಿಸಿಗಳನ್ನು ರಿವೈವಲ್ ಮಾಡಬಹುದು. ಅವಧಿ/ಆರೋಗ್ಯವಿಮೆ ಪಾಲಸಿಗಳನ್ನು ಲ್ಯಾಪ್ಸ್ ಆಗದಂತೆ ನೋಡಿಕೊಳ್ಳ ಬೇಕು.
4) ಆರೋಗ್ಯ ಸ್ಥಿತಿ (Health issues).
ವಯಸ್ಸು ಹೆಚ್ಚಾದಂತೆ ಆರೋಗ್ಯದ ಅಪಾಯ ದೊಡ್ಡದಾಗುತ್ತ ಹೋಗುತ್ತದೆ.
ವಯಸ್ಸು ಹೆಚ್ಚಾದಂತೆ ಆರೋಗ್ಯ ವಿಮೆ ಖರೀದಿಸುವದು ಕಷ್ಟಕಕರವಾಗುತ್ತದೆ..
ವೃತ್ತಿಯ ರೀತಿ, ಒತ್ತಡ, ಇನ್ನಿತರ ಕಾರಣಗಳೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ.

5) ಆದಾಯ ಹಾಗೂ ವೆಚ್ಚ (Income & Expenditure).
ಆದಾಯ ಹಾಗೂ ವೆಚ್ಚಗಳು ಉಳಿಕೆ ಹಣವನ್ನು ನಿರ್ಧರಿಸುತ್ತದೆ.
ಆದಾಯ ಹೆಚ್ಚಳಕ್ಕೆ ವೃತ್ತಿ ಕೌಶಲ್ಯಗಳನ್ನು ಹೆಚ್ಚಿಸಿ ಕೊಳ್ಳಬೇಕು.
ವೆಚ್ಚ ವ್ಯಕ್ತಿಯ ಜೀವನ ಶೈಲಿಯ ಮೇಲೆ ಅವಲಂಬಿತವಾಗಿದೆ.
ವೆಚ್ಚಗಳ ಆದ್ಯತೆಯು ವ್ಯಕ್ತಿಯ ಮಾನಸಿಕತೆಯ ಮೇಲೆ ನಿರ್ಧಾರವಾÀಗುತ್ತದೆ.
ಭವಿಷ್ಯದಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ಮಾಡುವ ವೆಚ್ಚಕ್ಕೆ ಹೂಡಿಕೆಯೆಂದೇ ಕರೆಯಬೇಕು.

6) ಸಾಲ ಹಾಗೂ ಸೊತ್ತುಗಳು (Assets & Liabilities).
ಸಾಲ ಬಡ್ಡಿಯ ವೆಚ್ಚಕ್ಕೆ ಕಾರಣವಾದರೆ, ಸಾಲದಿಂದ ಗಳಿಸಿದ ಆಸ್ತಿ ಆದಾಯತರುತ್ತದೆ.
ಆದಾಯ ಗಳಿಸುವ ಸಾಲಗಳು ತೊಂದರೆ ನೀಡುವದಿಲ್ಲ..
ಆದಾಯ ಗಳಿಸದ ಆಸ್ತಿ ನಿರುಪಯೋಗಿ. 
ಆಸ್ತಿ/ಸಾಲಗಳ ಗುಣಮಟ್ಟವನ್ನು ಕಾಲಾನುಕಾಲಕ್ಕೆ ಪರಿಶೀಲಿಸುವದು ಅತ್ಯವಶ್ಯಕ.
ಸಾಲದ ಆಸ್ತಿಯ ಮೇಲೆ, ಸಾಲದ ಹಣದ ಮೊತ್ತಕ್ಕೆ ವಿಮೆ ಅತ್ಯವಶ್ಯವಾಗಿದೆ.

7) ವಿವಾಹ ವಿಚ್ಛೇದನ (divorce). /ಜೀವನ ಸಂಗಾತಿಯಿಂದ ಪ್ರತ್ಯೇಕವಾಗಿ ವಾಸಿಸುವದು(seperation). /ಜೀವನ ಸಂಗಾತಿಯ ಮರಣ (death of spouse).
ಪರಿವಾರದ ಆರ್ಥಿಕ ಧ್ಯೇಯಗಳು ಬದಲಾಗುವವು. 
ಪ್ರಸಕ್ತ ಹೂಡಿಕೆಗಳನ್ನು ಮರುಪರಿಶೀಲಿಸಬೇಕಾಗುತ್ತದೆ.
ಅವಲಂಬಿತ ಮಕ್ಕಳ ಸಂರಕ್ಷಣೆಗೆ ಹೆಚ್ಚಿನ ವೆಚ್ಚ ತಗಲಬಹುದು.
ಆದಾಯ ವೃದ್ಧಿ ಕಠಿಣವಾಗುವದು.
ಹೂಡಿಕೆಯ ಸಾಮಥ್ರ್ಯ ಕುಗ್ಗುವದು.
ಸಂಗಾತಿಯ ಮರಣದಿಂದ, ಸಂಗಾತಿಯ ಆಸ್ತಿಗೆ ಒಡೆತನ ದೊರಕುವದರಿಂದ, ಆಸ್ತಿ ನಿರ್ವಹಣೆಯ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ.

Tuesday, December 16, 2014

16 ಡಿಸೆಂಬ 2014 

 ನಿವೃತ್ತಿ ನಂತರದ ಜೀವನಘಟ್ಟ (post  retirement) ದಲ್ಲಿರುವ ವ್ಯಕ್ತಿಯ ಅವಶ್ಯಕತೆಗಳನ್ನು ಗುರುತಿಸುವಾಗ ಯಾವ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು?


ನಿವೃತ್ತಿ ನಂತರದ ಜೀವನಘಟ್ಟದಲ್ಲಿರುವ ವ್ಯಕ್ತಿಯ ಅವಶ್ಯಕತೆಗಳನ್ನು ಗುರುತಿಸುವಾಗ ಕೆಳಗಿನ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
ಹಣ ಹೂಡಿಕೆಗೆ, ಖಚಿತವಾದ ಆದಾಯಕ್ಕೆ, ಹೂಡಿಕೆಯ ಭದ್ರತೆಗೆ ಮೊದಲ ಆದ್ಯತೆ ನೀಡಬೇಕು.
       (ಕೂಡಲೇ ಪ್ರಾರಂಭವಾಗುವ ವರ್ಷಾಶನದಲ್ಲಿ ಹಣ ತೊಡಗಿಸ ಬೇಕು.)
ಆಶ್ರಿತರ ಯೋಗ ಕ್ಷೇಮಕ್ಕಾಗಿ ತನ್ನ ಜೀವದ ಮೇಲೆ ಮೊದಲು ಸಾಕಷ್ಟು ಅಪಘಾತ ವಿಮೆ/ ಆರೋಗ್ಯ ವಿಮೆ 
       ಪಡೆಯಬೇಕು. (ಫ್ಯಾಮಿಲಿ ಫ್ಲೋಟರ್ ಪಾಲಿಸಿ ಪಡೆಯಬೇಕು)
ತದ ನಂತರ ಕಾರು/ಮನೆ ಮುಂತಾದ ಆಸ್ತಿಗಳ ರಕ್ಷಣೆಗೆ ಆದ್ಯತೆ ನೀಡಬೇಕು. 
      (ಕಾರು/ಮನೆ ವಿಮೆಯ ಪಾಲಸಿ ಪಡೆಯಬೇಕು) 
ಹಣದುಬ್ಬರದ ಪರಿಣಾಮ ಎದುರಿಸಲು ಉಳಿತಾಯ ಮುಂದುವರೆಸಬೇಕು. 
      (ಪೋಸ್ಟ ಆಫೀಸ ಯುಳಿತಾಯಗಳಲ್ಲಿ ಬ್ಯಾಂಕ್, ಮ್ಯೂಚುವಲ್ ಫಂಡಿನ ಸಾಲ ನಿಧಿಗಳಲ್ಲಿ ಉಳಿಸ ಬೇಕು.)

Monday, December 15, 2014

15 ಡಿಸೆಂಬ 2014 

ನಿವೃತ್ತಿ ಪೂರ್ವ ಜೀವನಘಟ್ಟ (pre retirement) ದಲ್ಲಿರುವ ವ್ಯಕ್ತಿಯ ಅವಶ್ಯಕತೆಗಳನ್ನು ಗುರುತಿಸುವಾಗ ಯಾವ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು?


 ನಿವೃತ್ತಿ ಪೂರ್ವ ಜೀವನಘಟ್ಟದಲ್ಲಿರುವ ವ್ಯಕ್ತಿಯ ಅವಶ್ಯಕತೆಗಳನ್ನು ಗುರುತಿಸುವಾಗ ಕೆಳಗಿನ ಸಂಗತಿಗಳನ್ನು ಗಣನೆಗೆ  ತೆಗೆದುಕೊಳ್ಳಬೇಕು. 
ಆಶ್ರಿತರ ಯೋಗ ಕ್ಷೇಮಕ್ಕಾಗಿ ತನ್ನ ಜೀವದ ಮೇಲೆ ಮೊದಲು ಸಾಕಷ್ಟು ವಿಮೆ/ಅಪಘಾತ ವಿಮೆ/ ಆರೋಗ್ಯ ವಿಮೆ          
       ಪಡೆಯಬೇಕು.    (ಫ್ಯಾಮಿಲಿ ಫ್ಲೋಟರ್ ಪಾಲಿಸಿ ನೀಡಬೇಕು)
ತದ ನಂತರ ಕಾರು/ಮನೆ ಮುಂತಾದ ಆಸ್ತಿಗಳ ನಿರ್ಮಾಣಕ್ಕೆ / ರಕ್ಷಣೆಗೆ ಆದ್ಯತೆ ನೀಡಬೇಕು.. (ಕಾರು/ಮನೆಗಳ   
          ವಿಮೆಯನ್ನು ಮಾಡಿಸ ಬೇಕು)
ನಿವೃತ್ತಿ ಜೀವನದ ಉಳಿತಾಯದ ಬಗ್ಗೆ ವಿಶೇಷ ಧ್ಯಾನ ನೀಡಬೇಕು.
    (ಪೋಸ್ಟ ಆಫೀಸ ಯುಳಿತಾಯಗಳಲ್ಲಿ ಬ್ಯಾಂಕ್,/ ನಿರಂತರ ಆರ್.ಡಿ./ ಮ್ಯೂಚುವಲ್ ಫಂಡ/ಬಂಗಾರ/ನಿವೇಶನಗಳಲ್ಲಿ,   
     ಉಳಿತಾಯ ಮಾಡಬೇಕು.)   

Sunday, December 14, 2014

14 ಡಿಸೆಂಬ 2014 

 ದೊಡ್ಡ ಮಕ್ಕಳನ್ನು ಪಡೆದ ವಿವಾಹಿತ (married with grown up children) ನ ಅವಶ್ಯಕತೆಗಳನ್ನು ಗುರುತಿಸುವಾಗ ಯಾವ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು?


ದೊಡ್ಡ ಮಕ್ಕಳನ್ನು ಪಡೆದ ವಿವಾಹಿತನ ಅವಶ್ಯಕತೆಗಳನ್ನು ಗುರುತಿಸುವಾಗ ಕೆಳಗಿನ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. 
ಆಶ್ರಿತರ ಯೋಗ ಕ್ಷೇಮಕ್ಕಾಗಿ ತನ್ನ ಜೀವದ ಮೇಲೆ ಮೊದಲು ಸಾಕಷ್ಟು ವಿಮೆ / ಆರೋಗ್ಯ ವಿಮೆ ಪಡೆಯಬೇಕು.            
        (ಫ್ಯಾಮಿಲಿ ಫ್ಲೋಟರ್ ಪಾಲಿಸಿ ಪಡೆಯಬೇಕು)
ಮಕ್ಕಳ ಉನ್ನತ ಶಿಕ್ಷಣಕ್ಕೆ ಉಳಿತಾಯ ಕೈಕೊಳ್ಳಬೇಕು.
        (ಚಿಕ್ಕ ಕಾಲಾವಧಿ ಉಳಿತಾಯಗಳಲ್ಲಿ ಉಳಿತಾಯ ಮಾಡಬೇಕು)
ತದ ನಂತರ ಕಾರು/ಮನೆ ಮುಂತಾದ ಆಸ್ತಿಗಳ ನಿರ್ಮಾಣಕ್ಕೆ / ರಕ್ಷಣೆಗೆ ಆದ್ಯತೆ ನೀಡಬೇಕು. 
          (ಕಾರು/ಮನೆಗಳ ವಿಮೆಯನ್ನು ಮಾಡಿಸ ಬೇಕು)

ಹೂಡಿಕೆಯ ಅಪಾಯ ಸಹಿಸುವ ಶಕ್ತಿ(Ability to take risk and withstand investment losses) ಇಲ್ಲದಿದ್ದರೆ :
  (ಎಂಡೋಮೆಂಟ್/ಮನೀಬ್ಯಾಕ್ ಪಾಲಸಿಗಳಲ್ಲಿ,/ ನಿರಂತರ ಆರ್.ಡಿ./ ಮ್ಯೂಚುವಲ್ ಫಂಡ/ಬಂಗಾರ/ನಿವೇಶನಗಳಲ್ಲಿ,ಉಳಿತಾಯ ಮಾಡಬೇಕು.)   

ಹೂಡಿಕೆಯ ಅಪಾಯ ಸಹಿಸುವ ಶಕ್ತಿ(Ability to take risk and withstand investment losses) ಇದ್ದರೆ :
 (ಯುಲಿಪ್ ಎಂಡೋಮೆಂಟ್ ಪಾಲಸಿ/ ಮ್ಯೂಚುವಲ್ ಫಂಡಿನ ಶೇರು ನಿಧಿಗಳಲ್ಲಿ ಯುಳಿತಾಯ ಮಾಡಬೇಕು.                
ನಿವೃತ್ತಿ ಜೀವನದ ಬಗ್ಗೆ ವಿಶೇಷ ಧ್ಯಾನ ನೀಡಬೇಕು.
(ಮುಂದೂಡಿದ ವರ್ಷಾಶನ ಪಾಲಿಸಿ/ಪಿ,ಎಫ್,/ನಿವೃತ್ತಿ ನಿಧಿಯಲ್ಲಿ ಉಳಿಸ ಬೇಕು.)

Saturday, December 13, 2014

13 ಡಿಸೆಂಬ 2014 

 ಚಿಕ್ಕ ಮಕ್ಕಳನ್ನು ಪಡೆದ ವಿವಾಹಿತ (Young  married with small children) ನ ಅವಶ್ಯಕತೆಗಳನ್ನು ಗುರುತಿಸುವಾಗ ಯಾವ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು?


 ಚಿಕ್ಕ ಮಕ್ಕಳನ್ನು ಪಡೆದ ವಿವಾಹಿತನ ಅವಶ್ಯಕತೆಗಳನ್ನು ಗುರುತಿಸುವಾಗ ಕೆಳಗಿನ ಸಂಗತಿಗಳನ್ನು ಗಣನೆಗೆ          
  ತೆಗೆದುಕೊಳ್ಳಬೇಕು
ಆಶ್ರಿತರ ಯೋಗ ಕ್ಷೇಮಕ್ಕಾಗಿ ಆದ್ಯತೆ ನೀಡಬೇಕು. 
     (ಸಾಕಷ್ಟು ಅವಧಿ /ಅಪಘಾತ/ಆರೋಗ್ಯ ವಿಮೆ ಪಡೆಯಬೇಕು.)

ವಿದ್ಯಾಭ್ಯಾಸಕ್ಕೆ, ಮದುವೆಗೆ, ಹೊಸ ಜೀವನದಲ್ಲಿ ನೆಲೆಯೂರಲು, ಮಕ್ಕಳಿಗೆ ಸರಿಯಾದ ಸಮಯದಲ್ಲಿ ಹಣ ಸಿಗುವoತೆ           ಉಳಿತಾಯ ಮಾಡಬೇಕು.
       (ಇದಕ್ಕಾಗಿ ಮ್ಯಾರೇಜ್/ಎಜ್ಯುಕೇಶನಲ್ ಎನ್ಯೂಟಿ ಪಾಲಸಿ ಪಡೆಯಬೇಕು)
ಪೋಷಕನು ಅಕಸ್ಮಾತ್ ನಿಧನನಾದರೆ, ವಿದ್ಯಾಭ್ಯಾಸಕ್ಕೆ, ಮದುವೆಗೆ, ಮಕ್ಕಳ ಸಲುವಾಗಿ ಪ್ರಾರಂಭಿಸಿದ ಉಳಿತಾಯ    
         ಮುಂದುವರೆಯುವ ವ್ಯವಸ್ಥೆ ಕೈಕೊಳ್ಳಬೇಕು.  
       (ಇದಕ್ಕಾಗಿ ಕಂತು ವಿನಾಯತಿ ಹೆಚ್ಚುವರಿ ಸೌಲಭ್ಯ ಪಡೆಯಬೇಕು.)
ತದ ನಂತರ ನಿವೇಶನ/ಮನೆ/ಕಾರು ಸೌಲಭ್ಯಗಳಿಗಾಗಿ ಉಳಿಸಲು ಪ್ರಯತ್ನಿಸಬೇಕು. 

ಹೂಡಿಕೆಯ ಅಪಾಯ ಸಹಿಸುವ ಶಕ್ತಿ/ಧೈರ್ಯ (Ability to take risk and withstand investment losses) ಇಲ್ಲದಿದ್ದರೆ :
(ಎಂಡೋಮೆಂಟ್/ಮನೀಬ್ಯಾಕ್ ಪಾಲಸಿಗಳಲ್ಲಿ,/ ನಿರಂತರ ಆರ್.ಡಿ./ ಮ್ಯೂಚುವಲ್ ಫಂಡ/ಬಂಗಾರ/ನಿವೇಶನಗಳಲ್ಲಿ,  ಉಳಿತಾಯ ಮಾಡಬೇಕು.)   
   
ಹೂಡಿಕೆಯ ಅಪಾಯ ಸಹಿಸುವ ಶಕ್ತಿ/ಧೈರ್ಯ(Ability to take risk and withstand investment losses) ಇದ್ದರೆ : 
ಯುಲಿಪ್ ಎಂಡೋಮೆಂಟ್ ಪಾಲಸಿ/ ಮ್ಯೂಚುವಲ್ ಫಂಡಿನ ಶೇರು ನಿಧಿಗಳಲ್ಲಿ ಯುಳಿತಾಯ ಮಾಡಬೇಕು.

ಸ್ವಲ್ಪ ಹಣವನ್ನು ಮುಂದೂಡಿದ ವರ್ಷಾಶನ ಪಾಲಸಿಯಲ್ಲಿ ತೊಡಗಿಸಬೇಕು.
         (ಮುಂದೂಡಿದ ವರ್ಷಾಶನ ಪಾಲಿಸಿ/ಪಿ,ಎಫ್,/ನಿವೃತ್ತಿ ನಿಧಿಯಲ್ಲಿ ಉಳಿಸ ಬೇಕು.)

Friday, December 12, 2014



12 ಡಿಸೆಂಬ 2014 

ವಿವಾಹಿತ ತರುಣ (Young  married) ನ ಅವಶ್ಯಕತೆಗಳನ್ನು ಗುರುತಿಸುವಾಗ ಯಾವ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು?

ವಿವಾಹಿತ ತರುಣನ ಅವಶ್ಯಕತೆಗಳನ್ನು ಗುರುತಿಸುವಾಗ ಕೆಳಗಿನ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. 

ಜೀವನ ಸಂಗಾತಿಯೂ ಗಳಿಸುತ್ತಿದ್ದರೆ,
ಯಾರೊಬ್ಬರೂ  ನಿಧನನಾದರೂ  ಆರ್ಥಿಕ  ಆಘಾತಕ್ಕೆ ಒಳಗಾಗುತ್ತಾರೆ. 
    (ಸಂಯುಕ್ತ ಜೀವ ಪಾಲಸಿಯನ್ನು ಪಡೆಯಬೇಕು. ಇಬ್ಬರಿಗೂ ಅಪಘಾತ/ಆರೋಗ್ಯ ವಿಮ್ಯೆ ಅತ್ಯವಶ್ಯವಾಗಿದೆ.).
ತದ ನಂತರ ಮನೆ/ಕಾರು ಸೌಲಭುಗಳಿಗಾಗಿ ಉಳಿಸಲು ಪ್ರಯತ್ನಿಸಬೇಕು.

ಹೂಡಿಕೆಯ ಅಪಾಯ ಸಹಿಸುವ ಶಕ್ತಿ/ಧೈರ್ಯ (Ability to take risk and withstand investment losses) ಇಲ್ಲದಿದ್ದರೆ :

(ಎಂಡೋಮೆಂಟ್/ಮನೀಬ್ಯಾಕ್ ಪಾಲಸಿಗಳಲ್ಲಿ,/ ನಿರಂತರ ಆರ್.ಡಿ./ ಮ್ಯೂಚುವಲ್ ಫಂಡ/ಬಂಗಾರ/ನಿವೇಶನಗಳಲ್ಲಿ,ಉಳಿತಾಯ ಮಾಡಬೇಕು.)   

ಹೂಡಿಕೆಯ ಅಪಾಯ ಸಹಿಸುವ ಶಕ್ತಿ/ಧೈರ್ಯ (Ability to take risk and withstand investment losses) ಇದ್ದರೆ :
 (ಯುಲಿಪ್ ಎಂಡೋಮೆಂಟ್ ಪಾಲಸಿ/ ಮ್ಯೂಚುವಲ್ ಫಂಡಿನ ಶೇರು ನಿಧಿಗಳಲ್ಲಿ ಯುಳಿತಾಯ ಮಾಡಬೇಕು.)

ಸ್ವಲ್ಪ ಹಣವನ್ನು ನಿವೃತ್ತಿ ಜೀವನ ಸೌಲಭ್ಯ (ಡಿeಣiಡಿemeಟಿಣ beಟಿeಜಿiಣs) ಕ್ಕಾಗಿ ತೊಡಗಿಸಬೇಕು.
        (ಮುಂದೂಡಿದ ವರ್ಷಾಶನ ಪಾಲಿಸಿ/ಪಿ,ಎಫ್,/ನಿವೃತ್ತಿ ನಿಧಿಯಲ್ಲಿ ಉಳಿಸಬೇಕು.)

    ಜೀವನ ಸಂಗಾತಿ ಗಳಿಸದಿದ್ದರೆ :
ಆಶ್ರಿತರ ಯೋಗ ಕ್ಷೇಮಕ್ಕಾಗಿ ಆದ್ಯತೆ ನೀಡಬೇಕು. 
    (ಸಾಕಷ್ಟು ಅವಧಿ /ಅಪಘಾತ/ಆರೋಗ್ಯ ವಿಮೆ ಪಡೆಯಬೇಕು.)
ತದ ನಂತರ ನಿವೇಶನ/ಮನೆ/ಕಾರು ಸೌಲಭ್ಯಗಳಿಗಾಗಿ ಉಳಿಸಲು ಪ್ರಯತ್ನಿಸಬೇಕು. 

ಹೂಡಿಕೆಯ ಅಪಾಯ ಸಹಿಸುವ ಶಕ್ತಿ/ಧೈರ್ಯ (Ability to take risk and withstand investment losses) ಇಲ್ಲದಿದ್ದರೆ :  
(ಎಂಡೋಮೆಂಟ್/ಮನೀಬ್ಯಾಕ್ ಪಾಲಸಿಗಳಲ್ಲಿ,/ ನಿರಂತರ ಆರ್.ಡಿ./ ಮ್ಯೂಚುವಲ್ ಫಂಡ/ಬಂಗಾರ/ನಿವೇಶನÀಗಳಲ್ಲಿ, ಉಳಿತಾಯ ಮಾಡಬೇಕು.)

ಹೂಡಿಕೆಯ ಅಪಾಯ ಸಹಿಸುವ ಶಕ್ತಿ/ಧೈರ್ಯ (Ability to take risk and withstand investment losses) ಇದ್ದರೆ :
ಯುಲಿಪ್ ಎಂಡೋಮೆಂಟ್ ಪಾಲಸಿ/ ಮ್ಯೂಚುವಲ್ ಫಂಡಿನ ಶೇರು ನಿಧಿಗಳಲ್ಲಿ ಯುಳಿತಾಯ ಮಾಡಬೇಕು.

ಸ್ವಲ್ಪ ಹಣವನ್ನು ಮುಂದೂಡಿದ ವರ್ಷಾಶನ ಪಾಲಸಿಯಲ್ಲಿ ತೊಡಗಿಸಬೇಕು.
(ಮುಂದೂಡಿದ ವರ್ಷಾಶನ ಪಾಲಿಸಿ/ಪಿ,ಎಫ್,/ನಿವೃತ್ತಿ ನಿಧಿಯಲ್ಲಿ ಉಳಿಸ ಬೇಕು.)

Thursday, December 11, 2014

11 ಡಿಸೆಂಬ 2014 

 ಅವಿವಾಹಿತ ತಾರುಣ್ಯಾವಸ್ಥೆ  (Young  unmarried) ಯ ವ್ಯಕ್ತಿಯ ಅವಶ್ಯಕತೆಗಳನ್ನು ಗುರುತಿಸುವಾಗ ಯಾವ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು?

 ಅವಿವಾಹಿತ ತರುಣನ ಅವಶ್ಯಕತೆಗಳನ್ನು ಗುರುತಿಸುವಾಗ ಕೆಳಗಿನ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.  
ಅವಲಂಬಿತರನ್ನು ಪೋಷಿಸುವ ಜವಾಬ್ದಾರಿ ಇದ್ದರೆ, 
ಆಶ್ರಿತರ ಯೋಗ ಕ್ಷೇಮಕ್ಕಾಗಿ ಆದ್ಯತೆ ನೀಡಬೇಕು. 
    (ಸಾಕಷ್ಟು ಅವಧಿ /ಅಪಘಾತ/ಆರೋಗ್ಯ ವಿಮೆ ಪಡೆಯಬೇಕು.)
ತದ ನಂತರ ನಿವೇಶನ/ಮನೆ/ಕಾರು ಸೌಲಭ್ಯಗಳಿಗಾಗಿ ಉಳಿಸಲು ಪ್ರಯತ್ನಿಸಬೇಕು. 
    ಹೂಡಿಕೆಯ ಅಪಾಯ ಸಹಿಸುವ ಶಕ್ತಿ ಇಲ್ಲದಿದ್ದರೆ, 
   (ಎಂಡೋಮೆಂಟ್/ಮನೀಬ್ಯಾಕ್ ಪಾಲಸಿಗಳಲ್ಲಿ,/ ನಿರಂತರ ಆರ್.ಡಿ./ ಶೇರು ಮಾರುಕಟ್ಟೆ ಆಧಾರಿತ ಉಳಿತಾಯ ಮಾಡಬೇಕು.)   
    ಹೂಡಿಕೆಯ ಅಪಾಯ ಸಹಿಸುವ ಶಕ್ತಿ ಇದ್ದರೆ, 
    ಯುಲಿಪ್ ಎಂಡೋಮೆಂಟ್ ಪಾಲಸಿ/ ಮ್ಯೂಚುವಲ್ ಫಂಡಿನ ಶೇರು ನಿಧಿಗಳಲ್ಲಿ ಉಳಿತಾಯ ಮಾಡಬೇಕು.
ಸ್ವಲ್ಪ ಹಣವನ್ನು ನಿವೃತ್ತಿ ಜೀವನ ಸೌಲಭ್ಯ (retirement benefits)  ಕ್ಕಾಗಿ ತೊಡಗಿಸಬೇಕು.
(ಮುಂದೂಡಿದ ವರ್ಷಾಶನ ಪಾಲಿಸಿ/ಪಿ,ಎಫ್,/ನಿವೃತ್ತಿ ನಿಧಿಯಲ್ಲಿ ಉಳಿಸ ಬೇಕು.)

ಅವಲಂಬಿತರನ್ನು ಪೋಷಿಸುವ ಜವಾಬ್ದಾರಿ ಇಲ್ಲದಿದ್ದರೆ, 
ನಿವೇಶನ/ಮನೆ/ಕಾರು ಸೌಲಭ್ಯಗಳಿಗಾಗಿ ಉಳಿಸಲು ಪ್ರಯತ್ನಿಸಬೇಕು. 

ಹೂಡಿಕೆಯ ಅಪಾಯ ಸಹಿಸುವ ಶಕ್ತಿ/ಧೈರ್ಯ (Ability to take risk and withstand investment losses) ಇಲ್ಲದಿದ್ದರೆ,  (ಎಂಡೋಮೆಂಟ್/ಮನೀಬ್ಯಾಕ್ ಪಾಲಸಿಗಳಲ್ಲಿ,/ ನಿರಂತರ ಆರ್.ಡಿ./ ಶೇರು ಮಾರುಕಟ್ಟೆ ಆಧಾರಿತ ಯುಳಿತಾಯ ಮಾಡಬೇಕು.)   

ಹೂಡಿಕೆಯ ಅಪಾಯ ಸಹಿಸುವ ಶಕ್ತಿ/ಧೈರ್ಯ (Ability to take risk and withstand investment losses) ಇದ್ದರೆ,ಯುಲಿಪ್ ಎಂಡೋಮೆಂಟ್ ಪಾಲಸಿ/ ಮ್ಯೂಚುವಲ್ ಫಂಡಿನ ಶೇರು ನಿಧಿಗಳಲ್ಲಿ ಯುಳಿತಾಯ ಮಾಡಬೇಕು.
ಸ್ವಲ್ಪ ಹಣವನ್ನು ನಿವೃತ್ತಿ ಜೀವನ ಸೌಲಭ್ಯ (retirement benefits)  ಕ್ಕಾಗಿ ತೊಡಗಿಸಬೇಕು.
    (ಮುಂದೂಡಿದ ವರ್ಷಾಶನ ಪಾಲಿಸಿ/ಪಿ,ಎಫ್,/ನಿವೃತ್ತಿ ನಿಧಿಯಲ್ಲಿ ಉಳಿಸ ಬೇಕು.) 
ವಿಮೆಗಾಗಿ ಕೊನೆಯ ಆದ್ಯತೆ ನೀಡಬೇಕು. 
    (ಅವಧಿ /ಅಪಘಾತ/ಆರೋಗ್ಯ ವಿಮೆ ಪಡೆಯಬೇಕು.)

Wednesday, December 10, 2014

10 ಡಿಸೆಂಬ 2014 

ಬಾಲ್ಯಾವಸ್ಥೆ (Chilhood)ಯ ಮಕ್ಕಳ ಅವಶ್ಯಕತೆಗಳನ್ನು ಗುರುತಿಸುವಾಗ ಯಾವ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು?

ಬಾಲ್ಯಾವಸ್ಥೆ (Chilhood) ಯ ಮಕ್ಕಳ ಅವಶ್ಯಕತೆಗಳನ್ನು ಗುರುತಿಸುವಾಗ ಕೆಳಗಿನ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
1. ವಿದ್ಯಾಭ್ಯಾಸಕ್ಕೆ, ಮದುವೆಗೆ, ಹೊಸ ಜೀವನದಲ್ಲಿ ನೆಲೆಯೂರಲು, ಮಕ್ಕಳಿಗೆ ಸರಿಯಾದ ಸಮಯದಲ್ಲಿ ಹಣ ಸಿಗುವoತೆ ಉಳಿತಾಯ ಮಾಡಬೇಕು.
(ಇದಕ್ಕಾಗಿ ಮ್ಯಾರೇಜ್/ಎಜ್ಯುಕೇಶನಲ್ ಎನ್ಯೂಟಿ -marriage endowment/ educational annuity, ಪಾಲಸಿ ಪಡೆಯಬೇಕು)
2. ಪೋಷಕನು ಅಕಸ್ಮಾತ್ ನಿಧನನಾದರೆ, ವಿದ್ಯಾಭ್ಯಾಸಕ್ಕೆ, ಮದುವೆಗೆ, ಮಕ್ಕಳ ಸಲುವಾಗಿ ಪ್ರಾರಂಭಿಸಿದ ಉಳಿತಾಯ ಮುಂದುವರೆಯುವ ವ್ಯವಸ್ಥೆ ಕೈಕೊಳ್ಳಬೇಕು.  
    (ಇದಕ್ಕಾಗಿ ಕಂತು ವಿನಾಯತಿ ಹೆಚ್ಚುವರಿ ಸೌಲಭ್ಯ - Premium waiver benefit rider,  ಪಡೆಯಬೇಕು

Tuesday, December 9, 2014

9 ಡಿಸೆಂಬ 2014 
 ಗ್ರಾಹಕನ  ಜೀವನದ ವಿವಿಧ ಘಟ್ಟ (life stage) ಗಳು ಯಾವುವು?

 ಗ್ರಾಹಕನ  ಜೀವನದ ವಿವಿಧ ಅವಸ್ಥೆ (ಟiಜಿe sಣಚಿge) ಗಳು ಕೆಳಗಿನಂತಿವೆ. 

1) ಬಾಲ್ಯಾವಸ್ಥೆ (childhood),                  
2)ಅವಿವಾಹಿತ ತಾರುಣ್ಯಾವಸ್ಥೆ (Young  unmarried),    
3) ವಿವಾಹಿತ ತಾರುಣ್ಯಾವಸ್ಥೆ (Young  married),                                     
4) ಚಿಕ್ಕ ಮಕ್ಕಳನ್ನು ಪಡೆದ ವಿವಾಹಿತ ತಾರುಣ್ಯಾವಸ್ಥೆ (Young  married with small children),        
5) ದೊಡ್ಡ ಮಕ್ಕಳನ್ನು ಪಡೆದ ವಿವಾಹಿತ (Young  married with grownup children),           
6) ನಿವೃತ್ತಿ ಪೂರ್ವ ಜೀವನಘಟ್ಟ (Pre Retirement),  
7) ನಿವೃತ್ತಿ ನಂತರದ ಜೀವನಘಟ್ಟ (Post Retirement),                             .

Monday, December 8, 2014

8 ಡಿಸೆಂಬ 2014 

 ಗ್ರಾಹಕನ  ಅವಶ್ಯಕತೆಗಳ ವಿಶ್ಲೇಷಣೆ (analysis of needs) ಯ ಸಮಯದಲ್ಲಿ,  ಆತನ ಬಳಿ ಈಗಾಗಲೇ ಕೆಲವು ವಿಮಾ ಪಾಲಿಸಿಗಳು ಇದ್ದರೆ, ಏನು ಮಾಡಬೇಕು?

  ಈಗಿನ ವಿಮಾ ಪಾಲಿಸಿಗಳು ಗ್ರಾಹಕನ ಯಾವ ಅವಶ್ಯಕತೆಗಳನ್ನು ಎಷ್ಟರ ಮಟ್ಟಿಗೆ ಪೂರೈಸುತ್ತಿವೆ ಎಂಬುದನ್ನು ತಿಳಿದು ಕೊಳ್ಳಬೇಕು.
1) ಈಗಿನ ವಿಮಾ ಪಾಲಸಿಗಳಿಂದ, ಪೂರ್ತಿಯಾಗಿ ಈಡೇರಿಕೆಗೊಳ್ಳುವ ಅವಶ್ಯಕತೆಗಳನ್ನು ಪಟ್ಟಿಯಿಂದ ಹೊರಗಿಡಬೇಕು.
2) ಸಂಪೂರ್ಣವಾಗಿ  ಈಡೇರಿಕೆಗೊಳ್ಳದ/ ಅಪೂರ್ಣವಾಗಿ ಈಡೇರಿಕೆಗೊಂಡ ಅವಶ್ಯಕತೆಗಳನ್ನು ಆದ್ಯತೆಯ ಆಧಾರದ ಮೇಲೆ ಕೈಗೆತ್ತಿಕೊಂಡು ಅವಶ್ಯಕ ಪಾಲಿಸಿಗಳನ್ನು ನೀಡಲು ಪ್ರಯತ್ನಿಸಬೇಕು.
3) ಯಾವ ಅವಶ್ಯಕತೆಗಳನ್ನು ಪೂರ್ಣವಾಗಿ ಇಲ್ಲವೇ ಅಪೂರ್ಣವಾಗಿ ಈಡೇರಸಲಾಗದ ಪಾಲಸಿಗಳ ಬಗ್ಗೆ ಸರಿಯಾದ ತಿಳುವಳಿಕೆ ನೀಡಿ: ಅವಗಳನ್ನು  ಮುಂದುವರೆಸುವ, ನಿಲ್ಲಿಸುವ, ರದ್ದುಗೊಳಿಸುವ ನಿರ್ಣಯವನ್ನು ಗ್ರಾಹಕನ ವಿವೇಚನೆಗೆ ಬಿಡಬೇಕು.

Sunday, December 7, 2014

7 ಡಿಸೆಂಬ 2014 

ಗ್ರಾಹಕರ  ಅವಶ್ಯಕತೆಗಳ ಆದ್ಯತೀಕರಣ (priortisation of  needs) ವನ್ನು ಯಾಕೆ ಕೈಕೊಳ್ಳ ಬೇಕು? 

ಗುರುತಿಸಲಾದ ಎಲ್ಲಾ  ಅವಶ್ಯಕತೆ (needs)ಗಳನ್ನು ಒಮ್ಮಲೇ ಈಡೇರಿಸುವದಕ್ಕೆ ಬೇಕಾದ ಆರ್ಥಿಕ ಸಾಮಥ್ರ್ಯ ಗ್ರಾಹಕನ ಬಳಿ ಈಗ ಇರಲಿಕ್ಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಗುರುತಿಸಲಾದ ಎಲ್ಲಾ ಅವಶ್ಯಕತೆಗಳಲ್ಲಿ, ಯಾವುಗಳನ್ನು ಮೊದಲು, ಯಾವುಗಳನ್ನು ನಂತರ, ಯಾವುಗಳನ್ನು ಕೊನೆಗೆ ಈಡೇರಿಸಲು ಕೈಗೆತ್ತಿಕೊಳ್ಳಬೇಕೆಂಬುದನ್ನು ನಿರ್ಧರಿಸಲು, ಅವಶ್ಯಕತೆಗಳ ಆದ್ಯತೀಕರಣ (priortisation of  needs)  ವನ್ನು ಮಾಡ ಬೇಕಾಗುತ್ತದೆ.

Saturday, December 6, 2014

 6 ಡಿಸೆಂಬ 2014 

ಗ್ರಾಹಕರ  ಅವಶ್ಯಕತೆಗಳನ್ನು  ಈಡೇರಿಸುವಲ್ಲಿ ಗಮನಿಸಬೇಕಾದ ಸಂಗತಿಗಳು ಯಾವುವು?

ಗ್ರಾಹಕರ  ಅವಶ್ಯಕತೆಗಳನ್ನು  ಈಡೇರಿಸುವಲ್ಲಿ  ಗಮನಿಸಬೇಕಾದ ಸಂಗತಿಗಳು ಕೆಳಗಿನಂತಿರುತ್ತವೆ.
ಗ್ರಾಹಕನ ಆದಾಯ(Income), ವೆಚ್ಚ (expenditure), ಉಳಿಕೆ (saving) ಗಳ ವಿವರಗಳನ್ನು ಪಡೆಯುವದು. 
ಗ್ರಾಹಕನ ಆಸ್ತಿ (asset), ಹೊರೆ (liability), ಸಾಲ (loan) ಗಳ  ವಿವರಗಳನ್ನು ಪಡೆಯುವದು.
ಅವಲಂಬಿತ ಕುಟುಂಬ ಸದಸ್ಯ (dependent members ), ರ ವಿವರಗಳನ್ನು ಪಡೆಯುವದು.
ಅವಲಂಬಿತರ ಆರ್ಥಿಕ ಬೇಡಿಕೆಗಳನ್ನು (financial needs), ಪೂರೈಸಲು ಆತನ ಆರ್ಥಿಕ ಗುರಿಗಳನ್ನು (financial 
         goals) ನಿರ್ಧರಿಸುವದು.
ಭವಿಷ್ಯದಲ್ಲಿ ಉಳಿತಾಯ ಮಾಡಬಹುದಾದ ಹಣದ ಗಾತ್ರವನ್ನು ಗುರುತಿಸುವದು.
ಸ್ವಂತ ಹಾಗೂ ಅವಲಂಬಿತರ ಆರೋಗ್ಯ ಸ್ಥಿತಿಯನ್ನು ಕಂಡುಕೊಳ್ಳುವದು,
ನಿವೃತ್ತಿಯ ನಂತರದ ಪ್ರಸಕ್ತ ಜೀವನ ಶೈಲಿ ಮುಂದುವರೆಸಲು ಬೇಕಾಗುವ ಹಣವನ್ನು ಗುರುತಿಸುವದು.


Friday, December 5, 2014



5 ಡಿಸೆಂಬ 2014 

 ಗ್ರಾಹಕರ  ಅವಶ್ಯಕತೆಗಳನ್ನು  ಈಡೇರಿಸುವಲ್ಲಿ ವಿಮಾ ಏಜೆಂಟನ ಹೊಣೆ (Responsibility) ಗಳು ಯಾವುವು?

 ಗ್ರಾಹಕರ  ಅವಶ್ಯಕತೆಗಳನ್ನು  ಈಡೇರಿಸುವಲ್ಲಿ ವಿಮಾ ಏಜೆಂಟನ ಹೊಣೆ (Responsibility) ಗಳು ಕೆಳಗಿನಂತಿರುತ್ತವೆ.
ಭಾವೀ ಗ್ರಾಹಕ (prospect) ನ ಅವಶ್ಯಕತೆ (needs) ಗಳನ್ನು ಪತ್ತೆ ಹಚ್ಚುವದು.
ಈ ಅವಶ್ಯಕತೆಗಳನ್ನು ಪೂರೈಸಲು ಈ ದಿನ ಬೇಕಾಗುವ ಹಣದ ಗಾತ್ರವನ್ನು ಲೆಕ್ಕಮಾಡುವದು.
ಗ್ರಾಹಕನ ಆರ್ಥಿಕ ಸಾಮಥ್ರ್ಯದ ಹಿನ್ನೆಲೆಯಲ್ಲಿ, ಆದ್ಯತಾ ಕ್ರಮದಲ್ಲಿ ಅವಶ್ಯಕತೆಗಳನ್ನು ಪೂರೈಸಲು ವ್ಯವಸ್ಥೆ ಮಡುವದು.


Thursday, December 4, 2014

4 ಡಿಸೆಂಬ 2014 

ಭಾವೀ ಗ್ರಾಹಕ (Prospect) ರ ಅವಶ್ಯಕತೆ (need) ಗಳು ಯಾವುವು ಆಗಿರುತ್ತವೆ?

 ಭಾವೀ ಗ್ರಾಹಕರ ಅವಶ್ಯಕತೆಗಳು ಕೆಳಗಿನಂತರುತ್ತವೆ.
ಮೊದಲ ಆದ್ಯತೆ  :  ತುರ್ತು ನಿಧಿ (Emergency Fund) ಯನ್ನು ನಿರ್ಮಿಸುವದು. ಹಟಾತ್ತನೆ ಉದ್ಭವಿಸುವ 
                          ಆದರೆ ತಪ್ಪಿಸಿ ಕೊಳ್ಳಲಾಗದ ಆರ್ಥಿಕ ಬೇಡಿಕೆಗಳ ಈಡೇರಿಕೆಗಾಗಿ, (ಅನಾರೋಗ್ಯ/  
                          ಅಪಘಾತ/ ನಿರುದ್ಯೋಗ/ಇತ್ಯಾದಿ.)
ಎರಡನೆಯ ಆದ್ಯತೆ  : ವಿಮೆಯನ್ನು ಖರೀದಿಸುವದು, ಅಕಸ್ಮಿಕ ಮರಣ/ಅಪಘಾತ/ಗಂಭೀರ    ಕಾಯಿಲೆಗಳಿಂದ ರಕ್ಷಣೆ  
                            ಪಡೆಯಲು.           
ಮೂರನೆಯ ಆದ್ಯತೆ :  ಮಕ್ಕಳ ಶಿಕ್ಷಣ/ಮದುವೆಗೆ ಉಳಿತಾಯ ಮಾಡುವದು.
ನಾಲ್ಕನೆಯ ಆದ್ಯತೆ  :  ಮನೆ/ವಾಹನ/ಸಾಲಗಳಿಂದ ಕುಟುಂಬಕ್ಕೆ ದೊರೆಯುವ ಪ್ರಯೋಜನಗಳನ್ನು 
                                    ಉಳಿಸಿಕೊಳ್ಳುವದು.
ಕೊನೆಯ ಆದ್ಯತೆ   :  ವರ್ಷಾಶನ ಸೌಲಭ್ಯಗಳಿಗೆ ಉಳಿತಾಯ ಮಾಡುವದು. (ಆದಾಯ  ನಿಲುಗಡೆಯಾದಾಗ  ಆರ್ಥಿಕ 
                                 ಸ್ವಾವಲಂಬನೆಯನ್ನು ಪಡೆಯಲು.)
ಮೇಲಿನ ಕ್ರಮಾಂಕಗಳಲ್ಲಿಯೇ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಉಳಿತಾಯಕ್ಕೆ ಆದ್ಯತೆಗಳನ್ನು ನೀಡಬೇಕು.

Wednesday, December 3, 2014

3 ಡಿಸೆಂಬರ್ 2014

ವರ್ಷಾಶನ ವಿಮಾ ಸೌಲಭ್ಯ ಯೋಜನೆ (Annuity Insurance Plan Benefit)  ಗಳ ಲಕ್ಷಣ (features)  ಗಳು, ಶರ್ಯತ್ತು (conditions) ಗಳು ಯಾವುವು?

ಉತ್ತರ : ವರ್ಷಾಶನ ವಿಮಾ ಸೌಲಭ್ಯ ಯೋಜನೆಗಳ ವಿಶೇಷತೆಗಳು,
1) ವಿಮಾಕಂತನ್ನು, ಒಂಟಿ/ವಾರ್ಷಿಕ/ಅರೆವಾರ್ಷಿಕ/ತ್ರೈಮಾಸಿಕ/ಮಾಸಿಕ ಕಂತುಗಳ ರೂಪದಲ್ಲಿ ನೀಡಬಹುದು.
2) ವರ್ಷಾಶನವನ್ನು ವಾರ್ಷಿಕ/ಅರೆವಾರ್ಷಿಕ/ತ್ರೈಮಾಸಿಕ/ಮಾಸಿಕ ಕಂತುಗಳ ರೂಪದಲ್ಲಿ ಪಡೆಯಬಹುದು.
3) ಹೆಚ್ಚುವರಿ ವಿಮಾ ಸೌಲಭ್ಯ(Rider Benefit) ಗಳನ್ನು ಮುಂದೂಡಿದ ವರ್ಷಾಶನ ಪಾಲಿಸಿಗಳಲ್ಲಿ, ಮುಂದೂಡಿದ ಅವಧಿಗೆ ಪಡೆಯಬಹುದು.
4) ಮುಂದೂಡಿದ ಅವಧಿ (Deferment Period) ಯಲ್ಲಿ ಪಾಲಸಿದಾರ ಮರಣಿಸಿದರೆ, ಅಲ್ಲಿಯ ವರೆಗೆ ನೀಡಲಾದ ವಿಮಾಕಂತುಗಳನ್ನು ಘೋಷಿತ ದರದ ಬಡ್ಡಿಯೊಂದಿಗೆ ಮರಳಿಸುವರು. ಹೆಚ್ಚುವರಿ ಮಾಸೌಲಭ್ಯಗಳ 
ಪರಿಹಾರವನ್ನು ಕೊಡುವರು.
5) ಮುಂದೂಡಿದ ಅವಧಿ (Deferment Period) ಯಲ್ಲಿ ಪಾಲಿಸಿಧಾರಕ ಪಾಲಿಸಿಯನ್ನು ಸರಂಡರ ಮಾಡಬಹುದು.
6) ಮುಂದೂಡಿದ ಅವಧಿ (Deferment Period) ಯ ಕೊನೆಗೆ ಬೆಳೆದು ನಿಂತ ವರ್ಷಾಶನ ನಿಧಿಯನ್ನು ಅದೇ ಕಂಪನಿಯಲ್ಲಿ ಅಥವಾ ತನಗಿಷ್ಟವಾದ ಬೇರೆ ಯಾವುದೇ ವಿಮಾ ಸಂಸ್ಥೆಯಲ್ಲಿ ತೊಡಗಿಸಿ ವರ್ಷಾಶನವನ್ನು ಪಡೆಯಬಹುದು. 
7) ಮುಂದೂಡಿದ ಅವಧಿಯ ಕೊನೆಗೆ, ಪಾಲಿಸಿಧಾರಕ ಬೇಕೆನಿಸಿದರೆ, ಬೆಳೆದು ನಿಂತ ವರ್ಷಾಶನ ನಿಧಿಯ 1/3 ಭಾಗದವರೆಗಿನ  ಬೆಲೆ (Commutation Value) ಯನ್ನು ನಗದು ರೂಪದಲ್ಲಿ ವಾಪಸು ಪಡೆಯಬಹುದು. ತದ ನಂತರ ನಿಧಿಯ ಉಳಿದ ಭಾಗಕ್ಕೆ ವರ್ಷಾಶನವನ್ನು ಪಡೆಯುವನು.
8) ಕಂಪನಿಗೆ ನೀಡಲಾದ ವಿಮಾಕಂತುಗಳ ಮೇಲೆ, ಆಯ ಕರ ರಿಯಾಯತಿಯನ್ನು ಸೆಕ್ಶನ್ 80 ಸಿಯ ಪ್ರಕಾರ ಪಡೆಯಬಹುದು. ಹೆಚ್ಚುವರಿ ವಿಮಾ ಸೌಲಭ್ಯಗಳ ಕಂತಿನ ಮೇಲೂ ಸಂಬಂಧಿಸಿದ ಆಯ ಕರ ರಿಯಾಯತಿ (Income Tax Rebate) ಗಳನ್ನು  ಪಡೆಯಬಹುದು.

Tuesday, December 2, 2014

2 ಡಿಸೆಂಬರ್ 2014

ವರ್ಷಾಶನ (Annuity) ಗಳ ನಮೂನೆಗಳು ಯಾವುವು?

ಉತ್ತರ : ವರ್ಷಾಶನದ ನಮೂನೆಗಳು ಕೆಳಗಿನಂತಿವೆ.
1) ಆಜೀವ ವರ್ಷಾಶನ – (Life Annuity)  ಆಜೀವ ಪರ್ಯಂತ ವರ್ಷಾಶನವನ್ನು ನೀಡಲಾಗುವದು. ಫಲಾನುಭವಿಯ ನಿಧನದ ನಂತರ ವರ್ಷಾಶನ ನೀಡಿಕೆ ನಿಲ್ಲುವದು.
2) ಖಾತರಿ ಅವಧಿಯ ವರ್ಷಾಶನ -(Guaranteed Period Annuity)  ಆಜೀವ ಪರ್ಯಂತ ವರ್ಷಾಶನವನ್ನು ನೀಡಲಾಗುವದು. ಒಂದು ವೇಳೆ ಪಾಲಸಿಧಾರಕನು, ಖಾತರಿ ಅವಧಿಯೊಳಗೆ ನಿಧನನಾದರೆ, ನಿಧನದ ನಂತರ ಖಾತರಿ ಅವಧಿ ಮುಗಿಯುವ ವರೆಗೆ ಪಾಲಸಿಧಾರಕನ                         ನಾಮಿನೀ, ಅಥವಾ ವಾರಸುದರನಿಗೆ  ವರ್ಷಾಶನವನ್ನು ಮುಂದುವರೆಸಲಾಗುವದು.
3) ಸಂಯುಕ್ತ ಜೀವದ ಆದರೆ ಕೊನೆಯವನು ಜೀವಿಸಿರುವ ವರೆಗೆ ಮುಂದುವರೆಸುವ ವರ್ಷಾಶನ (Joint Life, last survivor Annuity) : ಇಲ್ಲಿ ಇಬ್ಬರು ಜೀವಿಗಳ ಮೇಲೆ ಒಂದೇ ವರ್ಷಾಶನದ ಪಾಲಿಸಿಯನ್ನು ನೀಡಲಾಗುವದು. ಇಬ್ಬರಲ್ಲಿ ಒಬ್ಬರು ನಿಧನನಾದರೆ, ಆತನ ನಿಧನದ ನÀಂತರ, ಬದುಕಿ ಉಳಿದ ಇನ್ನೊಬ್ಬನು ಜೀವಿಸಿರುವವನಿಗೂ ವರ್ಷಾಶನವನ್ನು 100% ಇಲ್ಲವೇ 50% ದರದಲ್ಲಿ ಮುಂದುವರೆಸಲಾಗುವದು.
4) ವೃದ್ಧಿಸುವ ಆಜೀವ ವರ್ಷಾಶನ (Increasing Life Annuity)   – ಆಜೀವ  ಪರ್ಯಂತ  ವರ್ಷಾಶನವನ್ನು  ನೀಡಲಾಗುವದು. ಫಲಾನುಭವಿಯ ನಿಧನದ ನಂತರ ವರ್ಷಾಶನ ನೀಡಿಕೆ ನಿಲ್ಲುವದು. ಇಲ್ಲಿ ಪ್ರತಿ ವರ್ಷ ವರ್ಷಾಶನವು ನಿಗದಿತ ದರದಲ್ಲಿ ಹೆಚುತ್ತ ಹೋಗುತ್ತದೆ, ಅದು ಒಂದು ಮಟ್ಟ ತಲುಪಿದ ಮೇಲೆ, ವೃದ್ಧಿಸುವದು ನಿಲ್ಲುತ್ತದೆ. 
5) ಖರೀದಿ ಬೆಲೆ ಮರಳಿ ದೊರೆಯುವ ಆಜೀವ ವರ್ಷಾಶನ (Life Annuity with return of purchase price)   - ಆಜೀವ ಪರ್ಯಂತ ವರ್ಷಾಶನವನ್ನು ನೀಡಲಾಗುವದು. ಫಲಾನುಭವಿಯ ನಿಧನದ ನಂತರ ವರ್ಷಾಶನ ನೀಡಿಕೆ ನಿಲ್ಲುವದು, ಮತ್ತೆ ಅದೇ ಕಾಲಕ್ಕೆ ವರ್ಷಾಶನದ ಖರೀದಿ ಬೆಲೆಯನ್ನು, ಫಲಾನುಭವಿಯ ನಾಮಿನೀಗೆ, ಅಥವಾ ವಾರಸುದಾರರಿಗೆ ಮರಳಿಸಲಾಗುವದು.


Monday, December 1, 2014

1 ಡಿಸೆಂಬರ್ 2014

ವರ್ಷಾಶನದ ಪಾಲಿಸಿ (Annuity Policy) ಗಳನ್ನು ಖರೀದಿಸಲು ಬೆಲೆ ಸಂದಾಯವನ್ನು ಯಾವ ರೀತಿಯಲ್ಲಿ ಮಾಡಬಹುದು?


ಕೂಡಲೇ ಪ್ರಾರಂಭವಾಗುವ ವರ್ಷಾಶನ ಪಾಲಿಸಿ (Immeಜiಚಿಣe ಂಟಿಟಿuiಣಥಿ ಠಿoಟiಛಿಥಿ) ಗೆ , ಖರೀದಿ ಬೆಲೆಯನ್ನು ಪಾಲಿಸಿಯನ್ನು ಕೊಳ್ಳುವ ಸಮಯದಲ್ಲಿ ಒಂದೇ ಕಂತಿ (single premium)  ನಲ್ಲಿ ನೀಡ ಬೇಕಾಗುವದು.
1) ಮುಂದೂಡಿದ ವರ್ಷಾಶನ ಪಾಲಿಸಿ (Immediate Annuity policy) ಗೆ, ಖರೀದಿ ಬೆಲೆಯನ್ನು ಪಾಲಿಸಿಯನ್ನು ಕೊಳ್ಳುವ ಸಮಯದಲ್ಲಿ ಒಂದೇ ಕಂತಿ (single premium) ನಲ್ಲಿ ನೀಡಬಹುದು, ಅಥವಾ ಮುಂದೂಡಿದ ಅವಧಿಯಲ್ಲಿ, 1/3/6/12 ತಿಂಗಳ ಅವಧಿಗಳ ಕಂತುಗಳಲ್ಲಿ ನೀಡಬಹುದು.