Tuesday, December 2, 2014

2 ಡಿಸೆಂಬರ್ 2014

ವರ್ಷಾಶನ (Annuity) ಗಳ ನಮೂನೆಗಳು ಯಾವುವು?

ಉತ್ತರ : ವರ್ಷಾಶನದ ನಮೂನೆಗಳು ಕೆಳಗಿನಂತಿವೆ.
1) ಆಜೀವ ವರ್ಷಾಶನ – (Life Annuity)  ಆಜೀವ ಪರ್ಯಂತ ವರ್ಷಾಶನವನ್ನು ನೀಡಲಾಗುವದು. ಫಲಾನುಭವಿಯ ನಿಧನದ ನಂತರ ವರ್ಷಾಶನ ನೀಡಿಕೆ ನಿಲ್ಲುವದು.
2) ಖಾತರಿ ಅವಧಿಯ ವರ್ಷಾಶನ -(Guaranteed Period Annuity)  ಆಜೀವ ಪರ್ಯಂತ ವರ್ಷಾಶನವನ್ನು ನೀಡಲಾಗುವದು. ಒಂದು ವೇಳೆ ಪಾಲಸಿಧಾರಕನು, ಖಾತರಿ ಅವಧಿಯೊಳಗೆ ನಿಧನನಾದರೆ, ನಿಧನದ ನಂತರ ಖಾತರಿ ಅವಧಿ ಮುಗಿಯುವ ವರೆಗೆ ಪಾಲಸಿಧಾರಕನ                         ನಾಮಿನೀ, ಅಥವಾ ವಾರಸುದರನಿಗೆ  ವರ್ಷಾಶನವನ್ನು ಮುಂದುವರೆಸಲಾಗುವದು.
3) ಸಂಯುಕ್ತ ಜೀವದ ಆದರೆ ಕೊನೆಯವನು ಜೀವಿಸಿರುವ ವರೆಗೆ ಮುಂದುವರೆಸುವ ವರ್ಷಾಶನ (Joint Life, last survivor Annuity) : ಇಲ್ಲಿ ಇಬ್ಬರು ಜೀವಿಗಳ ಮೇಲೆ ಒಂದೇ ವರ್ಷಾಶನದ ಪಾಲಿಸಿಯನ್ನು ನೀಡಲಾಗುವದು. ಇಬ್ಬರಲ್ಲಿ ಒಬ್ಬರು ನಿಧನನಾದರೆ, ಆತನ ನಿಧನದ ನÀಂತರ, ಬದುಕಿ ಉಳಿದ ಇನ್ನೊಬ್ಬನು ಜೀವಿಸಿರುವವನಿಗೂ ವರ್ಷಾಶನವನ್ನು 100% ಇಲ್ಲವೇ 50% ದರದಲ್ಲಿ ಮುಂದುವರೆಸಲಾಗುವದು.
4) ವೃದ್ಧಿಸುವ ಆಜೀವ ವರ್ಷಾಶನ (Increasing Life Annuity)   – ಆಜೀವ  ಪರ್ಯಂತ  ವರ್ಷಾಶನವನ್ನು  ನೀಡಲಾಗುವದು. ಫಲಾನುಭವಿಯ ನಿಧನದ ನಂತರ ವರ್ಷಾಶನ ನೀಡಿಕೆ ನಿಲ್ಲುವದು. ಇಲ್ಲಿ ಪ್ರತಿ ವರ್ಷ ವರ್ಷಾಶನವು ನಿಗದಿತ ದರದಲ್ಲಿ ಹೆಚುತ್ತ ಹೋಗುತ್ತದೆ, ಅದು ಒಂದು ಮಟ್ಟ ತಲುಪಿದ ಮೇಲೆ, ವೃದ್ಧಿಸುವದು ನಿಲ್ಲುತ್ತದೆ. 
5) ಖರೀದಿ ಬೆಲೆ ಮರಳಿ ದೊರೆಯುವ ಆಜೀವ ವರ್ಷಾಶನ (Life Annuity with return of purchase price)   - ಆಜೀವ ಪರ್ಯಂತ ವರ್ಷಾಶನವನ್ನು ನೀಡಲಾಗುವದು. ಫಲಾನುಭವಿಯ ನಿಧನದ ನಂತರ ವರ್ಷಾಶನ ನೀಡಿಕೆ ನಿಲ್ಲುವದು, ಮತ್ತೆ ಅದೇ ಕಾಲಕ್ಕೆ ವರ್ಷಾಶನದ ಖರೀದಿ ಬೆಲೆಯನ್ನು, ಫಲಾನುಭವಿಯ ನಾಮಿನೀಗೆ, ಅಥವಾ ವಾರಸುದಾರರಿಗೆ ಮರಳಿಸಲಾಗುವದು.


No comments:

Post a Comment