Wednesday, December 3, 2014

3 ಡಿಸೆಂಬರ್ 2014

ವರ್ಷಾಶನ ವಿಮಾ ಸೌಲಭ್ಯ ಯೋಜನೆ (Annuity Insurance Plan Benefit)  ಗಳ ಲಕ್ಷಣ (features)  ಗಳು, ಶರ್ಯತ್ತು (conditions) ಗಳು ಯಾವುವು?

ಉತ್ತರ : ವರ್ಷಾಶನ ವಿಮಾ ಸೌಲಭ್ಯ ಯೋಜನೆಗಳ ವಿಶೇಷತೆಗಳು,
1) ವಿಮಾಕಂತನ್ನು, ಒಂಟಿ/ವಾರ್ಷಿಕ/ಅರೆವಾರ್ಷಿಕ/ತ್ರೈಮಾಸಿಕ/ಮಾಸಿಕ ಕಂತುಗಳ ರೂಪದಲ್ಲಿ ನೀಡಬಹುದು.
2) ವರ್ಷಾಶನವನ್ನು ವಾರ್ಷಿಕ/ಅರೆವಾರ್ಷಿಕ/ತ್ರೈಮಾಸಿಕ/ಮಾಸಿಕ ಕಂತುಗಳ ರೂಪದಲ್ಲಿ ಪಡೆಯಬಹುದು.
3) ಹೆಚ್ಚುವರಿ ವಿಮಾ ಸೌಲಭ್ಯ(Rider Benefit) ಗಳನ್ನು ಮುಂದೂಡಿದ ವರ್ಷಾಶನ ಪಾಲಿಸಿಗಳಲ್ಲಿ, ಮುಂದೂಡಿದ ಅವಧಿಗೆ ಪಡೆಯಬಹುದು.
4) ಮುಂದೂಡಿದ ಅವಧಿ (Deferment Period) ಯಲ್ಲಿ ಪಾಲಸಿದಾರ ಮರಣಿಸಿದರೆ, ಅಲ್ಲಿಯ ವರೆಗೆ ನೀಡಲಾದ ವಿಮಾಕಂತುಗಳನ್ನು ಘೋಷಿತ ದರದ ಬಡ್ಡಿಯೊಂದಿಗೆ ಮರಳಿಸುವರು. ಹೆಚ್ಚುವರಿ ಮಾಸೌಲಭ್ಯಗಳ 
ಪರಿಹಾರವನ್ನು ಕೊಡುವರು.
5) ಮುಂದೂಡಿದ ಅವಧಿ (Deferment Period) ಯಲ್ಲಿ ಪಾಲಿಸಿಧಾರಕ ಪಾಲಿಸಿಯನ್ನು ಸರಂಡರ ಮಾಡಬಹುದು.
6) ಮುಂದೂಡಿದ ಅವಧಿ (Deferment Period) ಯ ಕೊನೆಗೆ ಬೆಳೆದು ನಿಂತ ವರ್ಷಾಶನ ನಿಧಿಯನ್ನು ಅದೇ ಕಂಪನಿಯಲ್ಲಿ ಅಥವಾ ತನಗಿಷ್ಟವಾದ ಬೇರೆ ಯಾವುದೇ ವಿಮಾ ಸಂಸ್ಥೆಯಲ್ಲಿ ತೊಡಗಿಸಿ ವರ್ಷಾಶನವನ್ನು ಪಡೆಯಬಹುದು. 
7) ಮುಂದೂಡಿದ ಅವಧಿಯ ಕೊನೆಗೆ, ಪಾಲಿಸಿಧಾರಕ ಬೇಕೆನಿಸಿದರೆ, ಬೆಳೆದು ನಿಂತ ವರ್ಷಾಶನ ನಿಧಿಯ 1/3 ಭಾಗದವರೆಗಿನ  ಬೆಲೆ (Commutation Value) ಯನ್ನು ನಗದು ರೂಪದಲ್ಲಿ ವಾಪಸು ಪಡೆಯಬಹುದು. ತದ ನಂತರ ನಿಧಿಯ ಉಳಿದ ಭಾಗಕ್ಕೆ ವರ್ಷಾಶನವನ್ನು ಪಡೆಯುವನು.
8) ಕಂಪನಿಗೆ ನೀಡಲಾದ ವಿಮಾಕಂತುಗಳ ಮೇಲೆ, ಆಯ ಕರ ರಿಯಾಯತಿಯನ್ನು ಸೆಕ್ಶನ್ 80 ಸಿಯ ಪ್ರಕಾರ ಪಡೆಯಬಹುದು. ಹೆಚ್ಚುವರಿ ವಿಮಾ ಸೌಲಭ್ಯಗಳ ಕಂತಿನ ಮೇಲೂ ಸಂಬಂಧಿಸಿದ ಆಯ ಕರ ರಿಯಾಯತಿ (Income Tax Rebate) ಗಳನ್ನು  ಪಡೆಯಬಹುದು.

No comments:

Post a Comment