Saturday, December 20, 2014

20 ಡಿಸೆಂಬ 2014 

 ವಾಸ್ತವಿಕ ಅವಶ್ಯಕತೆಗಳು (Real needs), ಹಾಗೂ ಬೇಕೆನಿಸಿದ ಅವಶ್ಯಕತೆಗಳು (Perceived  needs),   ಎಂದರೇನು?

ವಾಸ್ತವಿಕ ಅವಶ್ಯಕತೆ (Real needs) ಗಳೆಂದರೆ ತಳ್ಳಿಹಾಕಲಾರದ ಅವಶ್ಯಕತೆಗಳು. 
ಉದಾ : ಹಸಿವೆಗೆ ಅನ್ನ, ಬಾಯಾರಿಕೆಗೆ ನಿರು, ಸುರಕ್ಷತೆಗೆ ಗುಡಿಸಲು ಮನೆ,ಇತ್ಯಾದಿ. ಅವುಗಳನ್ನು ಈಡೇರಿಸದೇ ಹೋದರೆ ಸಂಕಷ್ಟಗಳಿಗೆ ಈಡಾಗುತ್ತಾರೆ.

ಬೇಕೆನಿಸಿದ ಅವಶ್ಯಕತೆಗಳೆಂದರೆ ತಳ್ಳಿಹಾಕಬಹುದಾದ/ ಉಪೇಕ್ಷಿಸಬಹುದಾದ ಅವಶ್ಯಕತೆಗಳು.
ಉದಾ : ಹಸಿವೆಗೆ ಹೋಳಿಗೆ, ಬಾಯಾರಿಕೆಗೆ ಬಾದಾಮಿ ಹಾಲು, ಸುರಕ್ಷತೆಗೆ ತಾರಸಿ ಮನೆ,ಇತ್ಯಾದಿ. ಅವುಗಳನ್ನು ಈಡೇರಿಸದೇ ಹೋದರೆ ಸಂಕಷ್ಟಗಳೇನು ಉಂಟಾಗುವದಿಲ್ಲಾ.  ಇಲ್ಲಿ ಹೋಳಿಗೆಗೆ ಬದಲಾಗಿ ಅನ್ನ, ಬಾದಾಮಿ ಹಾಲಿಗೆ ಬದಲಾಗಿ ನೀರು, ತಾರಸಿ ಮನೆಗೆ ಬದಲಾಗಿ ಗುಡಿಸಲು ನೀಡಿದರೆ ನಡೆಯುವದು.

No comments:

Post a Comment