Wednesday, December 17, 2014


17 ಡಿಸೆಂಬ 2014 

 ಉಳಿತಾಯದಲ್ಲಿ ಜೀವನದ  ಯಾವ ವಿವಿಧ ಅವಸ್ಥೆಗಳು ಪರಿಣಾಮ ಬೀರುತ್ತವೆ?

   
1) ವಯಸ್ಸು (age):
ಚಿಕ್ಕ ವಯಸ್ಸಿನಲ್ಲಿ ಸಾಮಾನ್ಯವಾಗಿ ಪರಿವಾರದ ಹೊಣೆ ಇರುವದಿಲ್ಲಾ.
ದೊಡ್ಡವನಾದಂತೆ ಗಳಿಕೆ ಹಾಗೂ ಪರಿವಾರದ ಹೊಣೆ, ಎರಡೂ ಹೆಚ್ಚುತ್ತ ಹೋಗುವವು,
ಮಧ್ಯಮ ವಯಸ್ಸು ದಾಟಿದ ಮೇಲೆ, ಆರೋಗ್ಯದ ಮೇಲೆ ಒತ್ತಡ ಹೆಚ್ಚಾಗುತ್ತದೆ,
ನಿವೃತ್ತಿಯ ನಂತರ ದುಡಿಮೆಯ ಗಳಿಕೆ ನಿಮತು ಹೋಗುತ್ತದೆ. 

2) ವೈವಾಹಿಕ ಸ್ಥಿತಿ (Marriage Status)  :
ಪರಿವಾರದ ಹೊಣೆ  ದಂಪತಿಗಳಿಬ್ಬರ ಒಟ್ಟು ಗಳಿಕೆಯ ಮೇಲೆ ನಿರ್ಧಾರವಾಗುತ್ತದೆ.
ಪರಿವಾರದ ಉಳಿತಾಯ ಸಾಮಥ್ರ್ಯ  ದಂಪತಿಗಳಿಬ್ಬರ ಒಟ್ಟು ಗಳಿಕೆಯ ಮೇಲೆ ನಿರ್ಧಾರವಾಗುತ್ತದೆ.
ಜೀವನ ಸಂಗಾತಿ/ಮಕ್ಕಳು/ಅವಲಂಬಿತರ ಭವಿಷ್ಯ ಪ್ರಥಮ ಆದ್ಯತೆ ಪಡೆಯುತ್ತದೆ. 
ಸ್ವಂತ ಮನೆ/ಕಾರು/ಕೌಟುಂಬಿಕ ಪ್ರವಾಸ/ನಿವೃತ್ತಿಜೀವನ ನಿರ್ವಹಣೆಯ ಚಿಂತೆಗಳಿಗೆ  ನಂತರದ ಆದ್ಯತೆ.

3) ಉದ್ಯೋಗ (employment) ರೀತಿ. 
ಸರಕಾರೀ/ಸಾರ್ವಜನಿಕ ಕ್ಷೇತ್ರ (Government/public sector) ದ ನೌಕರಿ.
ಜೀವನದ ಆರ್ಥಿಕ ನಿರ್ವಹಣೆಯ ಬಹುದೊಡ್ಡ ಜವಾಬ್ದಾರಿಯನ್ನು, ನೌಕರಿಯ ಮಾಲಿಕನೇ ಮಾಡಿರುತ್ತಾನೆ. ಅವಧಿ ವಿಮೆ/ಆರ್ಥಿಕವಿಮೆ/ವರ್ಷಾಶನಗಳಿಗೆ ಅವರು ನೀಡಿದ ಸೌಲಭ್ಯಗಳಗಿಂತ ಇನ್ನೂ ಹೆಚ್ಚಿನ ಸೌಲಭ್ಯಗಳು ಬೇಕೆನಿಸಿದರೆ, ಅವಶ್ಯಕ ಉಳಿತಾಯಗಳನ್ನು ಮಾಡಬೇಕು. ಮಕ್ಕಳ ಶಿಕ್ಷಣ, ಮದುವೆ, ಮನೆ, ಕಾರು, ಇತ್ಯಾದಿಗಳಗಾಗಿ ಎಲ್ಲರಂತೆ ಉಳಿತಾಯ ಮಾಡಬೇಕು.
ಖಾಸಗೀ ಕ್ಷೇತ್ರದ (private  sector)  ನೌಕರಿ.
ತುರ್ತು ನಿಧಿ, ವಿಮೆಯ ಜರೂರತೆ, ಮಕ್ಕಳ ಶಿಕ್ಷಣ, ಮದುವೆ, ಮನೆ, ಕಾರು, ನಿವೃತ್ತಿ ಜೀವನಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ತನ್ನ  ಸ್ವಂತದ ಉಳಿತಾಯಗಳಿಂದಲೇ ಪೂರೈಸಿಕೊಳ್ಳ ಬೇಕು.
ಚಿಕ್ಕ ಕಾಲಾವಧಿ (small period) ಯ ನೌಕರಿ.
ತುರ್ತು ನಿಧಿ, ವಿಮೆಯ ಜರೂರತೆ, ಮಕ್ಕಳ ಶಿಕ್ಷಣ, ಮದುವೆ, ಮನೆ, ಕಾರು, ನಿವೃತ್ತಿ ಜೀವನಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು, ಚಿಕ್ಕ ಕಾಲದ ಉಳಿತಾಯಗಳಿಂದಲೇ ಪೂರೈಸಿಕೊಳ್ಳಬೇಕು. ಒಂಟಿ ಕಂತಿನ/ನಿಯಮಿತ ಕಂತಿನ ವಿಮೆ ಹಾಗೂ ವರ್ಷಾಶನಗಳಿಗೆ ಮೊರೆ ಹೋಗಬೇಕಾಗುವದು.
ಸ್ವಂತ ದುಡಿಮೆ (Self  employed). 
ದುಡಿಮೆಯಲ್ಲಿ ಏರು ಪೇರುಗಳಾಗುವದರಿಂದ, ತುರ್ತು ನಿಧಿ, ವಿಮೆಯ ಜರೂರತೆ, ಮಕ್ಕಳ ಶಿಕ್ಷಣ, ಮದುವೆ, ಮನೆ, ಕಾರು, ನಿವೃತ್ತಿ ಜೀವನಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಒಂಟಿ ಕಂತಿನ ವಿಮೆ ಹಾಗೂ ವರ್ಷಾಶನಗಳಿಗೆ ಮೊರೆ ಹೋಗಬೇಕಾಗುವದು. 
ನಿರುದ್ಯೋಗ (Un employed).  
ತುರ್ತುನಿಧಿಯಿಂದ ಜೀವನ ನಿರ್ವಹಿಸಬೇಕಾಗುವದು. ಪಾಲಿಸಿಗಳಮೇಲೆ ಸಾಲ ತೆಗೆದುಕೊಳ್ಳ ಬಹುದು. ವಿಮಾ ಕಂತುಗಳನ್ನು ನೀಡಲಾಗದಿದ್ದರೆ, ನಿಂತು ಹೋದ ಪಾಲಿಸಿಗಳನ್ನು ರಿವೈವಲ್ ಮಾಡಬಹುದು. ಅವಧಿ/ಆರೋಗ್ಯವಿಮೆ ಪಾಲಸಿಗಳನ್ನು ಲ್ಯಾಪ್ಸ್ ಆಗದಂತೆ ನೋಡಿಕೊಳ್ಳ ಬೇಕು.
4) ಆರೋಗ್ಯ ಸ್ಥಿತಿ (Health issues).
ವಯಸ್ಸು ಹೆಚ್ಚಾದಂತೆ ಆರೋಗ್ಯದ ಅಪಾಯ ದೊಡ್ಡದಾಗುತ್ತ ಹೋಗುತ್ತದೆ.
ವಯಸ್ಸು ಹೆಚ್ಚಾದಂತೆ ಆರೋಗ್ಯ ವಿಮೆ ಖರೀದಿಸುವದು ಕಷ್ಟಕಕರವಾಗುತ್ತದೆ..
ವೃತ್ತಿಯ ರೀತಿ, ಒತ್ತಡ, ಇನ್ನಿತರ ಕಾರಣಗಳೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ.

5) ಆದಾಯ ಹಾಗೂ ವೆಚ್ಚ (Income & Expenditure).
ಆದಾಯ ಹಾಗೂ ವೆಚ್ಚಗಳು ಉಳಿಕೆ ಹಣವನ್ನು ನಿರ್ಧರಿಸುತ್ತದೆ.
ಆದಾಯ ಹೆಚ್ಚಳಕ್ಕೆ ವೃತ್ತಿ ಕೌಶಲ್ಯಗಳನ್ನು ಹೆಚ್ಚಿಸಿ ಕೊಳ್ಳಬೇಕು.
ವೆಚ್ಚ ವ್ಯಕ್ತಿಯ ಜೀವನ ಶೈಲಿಯ ಮೇಲೆ ಅವಲಂಬಿತವಾಗಿದೆ.
ವೆಚ್ಚಗಳ ಆದ್ಯತೆಯು ವ್ಯಕ್ತಿಯ ಮಾನಸಿಕತೆಯ ಮೇಲೆ ನಿರ್ಧಾರವಾÀಗುತ್ತದೆ.
ಭವಿಷ್ಯದಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ಮಾಡುವ ವೆಚ್ಚಕ್ಕೆ ಹೂಡಿಕೆಯೆಂದೇ ಕರೆಯಬೇಕು.

6) ಸಾಲ ಹಾಗೂ ಸೊತ್ತುಗಳು (Assets & Liabilities).
ಸಾಲ ಬಡ್ಡಿಯ ವೆಚ್ಚಕ್ಕೆ ಕಾರಣವಾದರೆ, ಸಾಲದಿಂದ ಗಳಿಸಿದ ಆಸ್ತಿ ಆದಾಯತರುತ್ತದೆ.
ಆದಾಯ ಗಳಿಸುವ ಸಾಲಗಳು ತೊಂದರೆ ನೀಡುವದಿಲ್ಲ..
ಆದಾಯ ಗಳಿಸದ ಆಸ್ತಿ ನಿರುಪಯೋಗಿ. 
ಆಸ್ತಿ/ಸಾಲಗಳ ಗುಣಮಟ್ಟವನ್ನು ಕಾಲಾನುಕಾಲಕ್ಕೆ ಪರಿಶೀಲಿಸುವದು ಅತ್ಯವಶ್ಯಕ.
ಸಾಲದ ಆಸ್ತಿಯ ಮೇಲೆ, ಸಾಲದ ಹಣದ ಮೊತ್ತಕ್ಕೆ ವಿಮೆ ಅತ್ಯವಶ್ಯವಾಗಿದೆ.

7) ವಿವಾಹ ವಿಚ್ಛೇದನ (divorce). /ಜೀವನ ಸಂಗಾತಿಯಿಂದ ಪ್ರತ್ಯೇಕವಾಗಿ ವಾಸಿಸುವದು(seperation). /ಜೀವನ ಸಂಗಾತಿಯ ಮರಣ (death of spouse).
ಪರಿವಾರದ ಆರ್ಥಿಕ ಧ್ಯೇಯಗಳು ಬದಲಾಗುವವು. 
ಪ್ರಸಕ್ತ ಹೂಡಿಕೆಗಳನ್ನು ಮರುಪರಿಶೀಲಿಸಬೇಕಾಗುತ್ತದೆ.
ಅವಲಂಬಿತ ಮಕ್ಕಳ ಸಂರಕ್ಷಣೆಗೆ ಹೆಚ್ಚಿನ ವೆಚ್ಚ ತಗಲಬಹುದು.
ಆದಾಯ ವೃದ್ಧಿ ಕಠಿಣವಾಗುವದು.
ಹೂಡಿಕೆಯ ಸಾಮಥ್ರ್ಯ ಕುಗ್ಗುವದು.
ಸಂಗಾತಿಯ ಮರಣದಿಂದ, ಸಂಗಾತಿಯ ಆಸ್ತಿಗೆ ಒಡೆತನ ದೊರಕುವದರಿಂದ, ಆಸ್ತಿ ನಿರ್ವಹಣೆಯ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ.

No comments:

Post a Comment