Tuesday, September 30, 2014

30 ಸಪ್ಟೆಂಬರ 2014

ಬೋನಸ್ಸಗಳ ನಮೂನೆಗಳು ಯಾವುವು?

ಬೋನಸ್ಸಗಳ ನಮೂನೆಗಳು;
1. ಸಾದಾ ರಿವರ್ಷನರಿ ಬೋನಸ್ (Simple Reversionary Bonus).
2. ಚಕ್ರ ರಿವರ್ಷನರಿ ಬೋನಸ್ (Campounding Reversionary Bonus).
3. ಟರ್ಮಿನಲ್ ಬೋನಸ್ (Terminal  Bonus).
4. ತಾತ್ಕಾಲಿಕ (ಇಂಟಿರಮ್) ಬೋನಸ್ (Interium Bonus).

Monday, September 29, 2014

29 ಸಪ್ಟೆಂಬರ 2014

 ಒಟ್ಟು ಕಂತ (Gross Premium) ನ್ನು ಹೇಗೆ ಲೆಕ್ಕ ಮಾಡುತ್ತಾರೆ? 

 ನಿವ್ವಳ ಕಂತಿ (net Premium) ಗೆ ಒಟ್ಟು ಸರಾಸರಿ ನಿರ್ವಹಣಾ/ಇತರ ವೆಚ್ಚಗಳÀನ್ನು ಕೂಡಿಸಿದಾಗ ಒಟ್ಟು ಕಂತಿ (Gross Premium) ನ ಲೆಕ್ಕ ಪೂರ್ತಿಗೊಳ್ಳುತ್ತದೆ. ನಿರ್ವಹಣಾ/ಇತರ ವೆಚ್ಚದ ಭಾಗಗಳು : 1) ಆಡಳಿತ ವೆಚ್ಚ, 2) ವೈದ್ಯಕೀಯ ತಪಾಸಣೆ ವೆಚ್ಚ, 3) ಮಾರಾಟ ವೆಚ್ಚ, 4) ಬೋನಸ್ಸು/ಮ್ಯೆಚ್ಯುರಿಟಿ ಹಣಕ್ಕಾಗಿ ಮಾಡ ಬೇಕಾದ ವೆಚ್ಚ, 5) ಕಂಪನಿಗೆ ಲಾಭ ನೀಡುವದಕ್ಕೆ ಮಾಡ ಬೇಕಾದ ವೆಚ್ಚ, 6) ಇತರ ವೆಚ್ಚಗಳು.



Sunday, September 28, 2014

28 ಸಪ್ಟೆಂಬರ 2014

ನಿವ್ವಳ ಕಂತ (Net Premium) ನ್ನು ಹೇಗೆ ಲೆಕ್ಕ ಮಾಡುತ್ತಾರೆ? 

ವಿಮೆಯ ಅವಧಿಯ ಪ್ರಾರಂಭದ ವರ್ಷಗಳಲ್ಲಿ ಏಕಮಟ್ಟದ ಅಪಾಯದ ಕಂತು, ಆಯಾ ವರ್ಷದ ಅಪಾಯ ಕಂತುಗಳಿಗಿಂತ ಹೆಚ್ಚಾಗಿರುವದರಿಂದ, ವಿಮೆಯ ಅವಧಿಯ ಪ್ರಾರಂಭದ ವರ್ಷಗಳಲ್ಲಿ ಉಳಿಕೆ ಹಣ ದೊರೆಯುತ್ತದೆ. ಈ ಉಳಿಕೆ ಹಣವನ್ನು ಮಾರು ಕಟ್ಟೆಯಲ್ಲಿ ತೊಡಗಿಸುವದರಿಂದ ಬಡ್ಡಿಯ ಆದಾಯ ಸಿಗುತ್ತದೆ. ಈ ಬಡ್ಡಿಯ ಆದಾಯದ ಕಾರಣ ಏಕಮಟ್ಟದ ಅಪಾಯ ಕಂತನ್ನು ಇನ್ನೂ ಕಡಿಮೆ ಮಾಡಬಹದು. ಈ ರೀತಿ ಕಡಿಮೆಗೊಂಡ  ಏಕಮಟ್ಟದ ಅಪಾಯ ಕಂತಿಗೆ,  ನಿವ್ವಳ ಅಪಾಯ ಕಂತು ಎನ್ನುತ್ತಾರೆ.

 ನಿವ್ವಳ ಕಂತಿ (Net Premium) ನ ಲೆಕ್ಕ ಮಾಡಿದ ಒಂದು ಉದಾಹರಣೆ ;-
 ಗಳಿಕೆ ದರ 10%. ಇದೆ.   ಒಟ್ಟು ಬಡ್ಡಿ ಗಳಿಕೆ ರೂ. 165 ಇದ್ದು,   ಸರಾಸರಿ ವಾರ್ಷಿಕ ಗಳಿಕೆ ರೂ. 33 ಇದೆ. 




Saturday, September 27, 2014

27 ಸಪ್ಟೆಂಬರ 2014

ಸ್ಥಿರಮಟ್ಟದ ಅಪಾಯ ಕಂತ (level  Premium) ನ್ನು ಹೇಗೆ ಲೆಕ್ಕ ಮಾಡುತ್ತಾರೆ? 

ಮರಣ ದರ ವಯಸ್ಸು ಹೆಚ್ಚಿದಂತೆ ಹೆಚ್ಚಾಗುವದರಿಂದ, ನಿಗದಿತ ವಿಮಾ ರಾಸಿಯ ಅಪಾಯ ಕಂತು ಪ್ರತಿ ವರ್ಷ ಮುಕ್ತಾಯವಾದಂತೆ, ಮುಂದಿನ ವರ್ಷಕ್ಕೆ ಹೆಚ್ಚುತ್ತ ಹೋಗುತ್ತದೆ. 
ಆದರೆ ವಿಮಾ ಅವಧಿಯಲ್ಲಿ ಪ್ರತಿ ವರ್ಷ  ಹೆಚ್ಚುತ್ತ ಹೋಗುವ ಅಪಾಯ ಕಂತನ್ನು ನೀಡಲು ಗ್ರಾಹಕನಿಗೆ ಕೇಳುವದು ವ್ಯಾವಹಾರಿಕವಾಗುವದಿಲ್ಲಾ. ಅದಕ್ಕಾಗಿ ವಿಮಾ ಅವಧಿಯ ಎಲ್ಲಾ ವರ್ಷಗಳಿಗೂ ಒಂದೇ ಮಟ್ಟದ ಅಪಾಯ ಕಂತನ್ನು ನೀಡಲು ಕೇಳಿಕೊಳ್ಳಲಾಗುವದು. ಇದು ಎಲ್ಲಾ ವರ್ಷಗಳ ಆಯಾ ಅಪಾಯ ಕಂತುಗಳ ಒಟ್ಟಾರೆ ಮೊತ್ತದ ಆಧಾರ ಮೇಲೆ ಲೆಕ್ಕ ಮಾಡಿದ ವಾರ್ಷಿಕ ಸರಾಸರಿ ದರವಾಗಿರುತ್ತದೆ. ಇದಕ್ಕೆ ಏಕಮಟ್ಟದ ಅಪಾಯ ಕಂತು ಎಂದು ಕರೆಯ ಬಹುದು.



Friday, September 26, 2014

26 ಸಪ್ಟೆಂಬರ 2014

 ಅಪಾಯ ಕಂತ (Risk Premium) ನ್ನು ಹೇಗೆ ಲೆಕ್ಕ ಮಾಡುತ್ತಾರೆ? 

 ಅಪಾಯ ಕಂತನ್ನು ಕೆಳಗಿನ ಸೂತ್ರದ ಪ್ರಕಾರ ಲೆಕ್ಕ ಮಾಡುತ್ತಾರೆ.
ಅಪಾಯ ಕಂತು = ಮರಣ ದರ x ವಿಮಾ ರಾಸಿ
ಉದಾ : 25 ವರ್ಷದ ಮರಣ ದರ 0.0001 ಇದ್ದರೆ, 50,000 ರೂ.ಗಳ ವಿಮಾರಾಸಿಯ ಅಪಾಯ ಕಂತು
50 ರೂಪಾಯಿಗಳಾಗುತ್ತದೆ. (ಮರಣ ದರ x ವಿಮಾ ರಾಸಿ = 0.0001 x  50,000 = 50 ರೂ.ಗಳು..)            



Thursday, September 25, 2014

25 ಸಪ್ಟೆಂಬರ 2014

 ವಿಮಾಕಂತನ್ನು ನೀಡುವ ಅವಧಿಗಳ ವಿಧಾನಗಳು (Premium mode)  ಯಾವುವು ? 

ಸಾಮಾನ್ಯವಾಗಿ ಒಟ್ಟು ವಿಮಾಕಂತು (Gross  Premium)  ಗಳನ್ನು ವಾರ್ಷಿಕ ಅವಧಿಯ ಆಧಾರದ ಮೇಲೆಯೇ ನಿರ್ಧರಿಸಲಾಗುತ್ತದೆ. ಆದರೆ ಗ್ರಾಹಕರ ಅನಕೂಲತೆಗಾಗಿ ವರ್ಷದ ವಿಮಾಕಂತಿಗೆ ಬದಲಾಗಿ  ಮಾಸಿಕ/ ತ್ರೈಮಾಸಿಕ/ ಅರೆವಾರ್ಷಿಕ ಕಂತುಗಳಲ್ಲಿಯೂ  ಹಣ ತುಂಬಲು, ವಿಮಾ ಸಂಸ್ಥೆ ಅನಕೂಲ ಮಾಡಿಕೊಡುತ್ತದೆ. ಇದಕ್ಕಾಗಿ ಸ್ವಲ್ಪ ಹೆಚ್ಚಿಗೆ ಹಣವನ್ನು ಕೂಡಾ ನೀಡ ಬೇಕಾಗುತ್ತದೆ. ಕೆಲವು ಬಾರಿ ವಿಮಾಕಾಂತನ್ನು ಪಾಲಸಿಯ ಇಡೀ ಅವಧಿಯ ಆಧಾರದ ಮೇಲೆಯೇ ನಿರ್ಧರಿಸಲಾಗುತ್ತದೆ. ಇದಕ್ಕೆ ಒಂಟಿ ಕಂತು ಎಂದು ಕರೆಯಲಾಗುತ್ತದೆ.



Wednesday, September 24, 2014

24 ಸಪ್ಟೆಂಬರ 2014

 ವಿಮೆಯ ಇಡೀ ಅವಧಿಗೆ ಸ್ಥಿರ ಮಟ್ಟದ  ಕಂತಿನ ದರ (Level  Premium) ವನ್ನು ಹೇಗೆ ಲೆಕ್ಕ ಮಾಡಿ ನಿರ್ಧರಿಸುತ್ತಾರೆ?

ಸಾಮಾನ್ಯವಾಗಿ ಕಂತಿನ ದರವನ್ನು ಪ್ರತಿ ಸಾವಿರ ರೂಪಾಯಿ ವಿಮೆಗೆ, ವರ್ಷದ ಲೆಕ್ಕದಲ್ಲಿ ನಿರ್ಧರಿಸುತ್ತಾರೆ.

1) ಮೊದಲಿಗೆ ಅಪಾಯ ಕಂತಿನ ದರ (Risk Premium) ವನ್ನು ಅವಧಿಯ ಎಲ್ಲಾ ವರ್ಷಗಳಿಗೆ ಪ್ರತ್ಯೇಕವಾಗಿ ನಿರ್ಧರಿಸುತ್ತಾರೆ. ಪ್ರತಿ ವರ್ಷ ಮರಣದರ ಹೆಚ್ಚುತ್ತ ಹೋಗುವದರಿಂದ, ಪ್ರತಿ ವರ್ಷ ಅಪಾಯ ಕಂತಿನ ದರ (Risk Premium) ಹೆಚ್ಚುತ್ತ ಹೋಗುತ್ತದೆ.
2) ನಂತರ ಸ್ಥಿರÀಮಟ್ಟದ ಅಪಾಯ ಕಂತಿನ ದರ (Level  Premium) ವನ್ನು, ಅಂದರೆ ಅದು ಅವಧಿಯ ಎಲ್ಲಾ ವರ್ಷಗಳಿಗೆ ಸಮನಾಗಿ ಇರುವಂತೆ ನಿರ್ಧರಿಸುತ್ತಾರೆ. ಇದು ಎಲ್ಲಾ ವರ್ಷಗಳ ಅಪಾಯ ಕಂತುಗಳ ಒಟ್ಟಾರೆ ಮೊತ್ತದ ಆಧಾರ ಮೇಲೆ ಲೆಕ್ಕ ಮಾಡಿದ ವಾರ್ಷಿಕ ಸರಾಸರಿ ದರವಾಗಿರುತ್ತದೆ.
3) ನಂತರ ನಿವ್ವಳ  ಅಪಾಯ ಕಂತಿನ ದರ (Net  Premium) ವನ್ನು ವಾರ್ಷಿಕ ಅವಧಿಗೆ ಸಂಬಂಧಿಸಿದಂತೆ ನಿರ್ಧರಿಸುತ್ತಾರೆ. ವಿಮೆಯ ಅವಧಿಯ ಪ್ರಾರಂಭದ ವರ್ಷಗಳಲ್ಲಿ; ಸ್ಥಿರಮಟ್ಟದ ಅಪಾಯ ಕಂತಿನ ದರ (Level  Premium), ಆಯಾ ವರ್ಷದ ಅಪಾಯ ಕಂತಿನ ದರ (Risk Premium) ಕ್ಕಿಂತ ಹೆಚ್ಚಾಗಿರುವದರಿಂದ, ವಿಮೆಯ ಅವಧಿಯ ಪ್ರಾರಂಭದ ವರ್ಷಗಳಲ್ಲಿ ಉಳಿಕೆ ಹಣ ದೊರೆಯುತ್ತದೆ. ಈ ಉಳಿಕೆ ಹಣವನ್ನು ಮಾರು ಕಟ್ಟೆಯಲ್ಲಿ ತೊಡಗಿಸುವದರಿಂದ ಬಡ್ಡಿಯ ಆದಾಯ ಸಿಗುತ್ತದೆ. ಈ ಬಡ್ಡಿಯ ಆದಾಯದ ಕಾರಣ ಏಕಮಟ್ಟದ ಅಪಾಯ ಕಂತಿನ ದರ (Level  Premium) ವನ್ನು ಇನ್ನೂ ಕಡಿಮೆ ಮಾಡಬಹದು. ಈ ರೀತಿ ಕಡಿಮೆಗೊಂಡ ಸ್ಥಿರÀಮಟ್ಟದ ಅಪಾಯ ಕಂತಿನ ದರಕ್ಕೆ, ನಿವ್ವಳ ಕಂತಿನ ದರ (Net  Premium)  ಎನ್ನುತ್ತಾರೆ.
4) ನಂತರ ಭಾರ ಹೇರಿಕೆ (Loading)  ಕ್ರಮಗಳನ್ನು ಕೈಕೊಳ್ಳುತ್ತಾರೆ. ಈ ಭಾರ ಹೇರಿಕೆ (Loading) ಗೆ ಪ್ರಮುಖ ಕಾರಣಗಳು. 1) ಆಡಳಿತ ವೆಚ್ಚ, 2) ವೈದ್ಯಕೀಯ ತಪಾಸಣೆ ವೆಚ್ಚ, 3) ಮಾರಾಟ ವೆಚ್ಚ, 4) ಉಳಿತಾಯದ ಹಣ ನೀಡುವದಕ್ಕೆ ತಗಲುವ ವೆಚ್ಚ, 5) ಬೋನಸ್ಸು ನೀಡುವದಕ್ಕೆ ತಗಲುವ ವೆಚ್ಚ,  6) ಕಂಪನಿಗೆ ಲಾಭ ನೀಡುವದಕ್ಕೆ ತಗಲುವ ವೆಚ್ಚ, 6) ಇತರ ವೆಚ್ಚಗಳು.
5) ನಿವ್ವಳ ಕಂತಿನ ದರ (Net  Premium) ದ ಮೇಲೆ, ಭಾರ ಹೇರಿಕೆ (Loading)  ವಿಧಿಸಿದಾಗ ಒಟ್ಟು ಕಂತಿನ ದರ (Gross  Premium) ನಿರ್ಧಾರವಾಗುತ್ತದೆ. ಈ ಒಟ್ಟು ವಿಮಾ ಕಂತಿನ ದರದ ಆಧಾರದ ಮೇಲೆ,  ಒಟ್ಟು ವಾರ್ಷಿಕ ವಿಮಾ ಕಂತನ್ನು (Yearly Gross  Premium) ಹಾಗೂ ಒಟ್ಟು ಏಕ ವಿಮಾ ಕಂತ (Single  Gross  Premium)ನ್ನು ನಿರ್ಧರಿಸುತ್ತಾರೆ. ವಿವಿಧ ನಮೂನೆಯ (ಅಂದರೆ ಮಾಸಿಕ, ತ್ರೈಮಾಸಿಕ, ಅರೆ ವಾರ್ಷಿಕ)  ಅವಧಿಗಳ ಒಟ್ಟು ಕಂತು (Gross  Premium) ಗಳಿಗಾಗಿ, ಅವಶ್ಯಕ ಹೊಂದಾಣಿಕೆಯನ್ನು ಕೈಕೊಳ್ಳಬೇಕಾಗುತ್ತದೆ.
    


Tuesday, September 23, 2014

23 ಸಪ್ಟೆಂಬರ 2014

ವಿಮಾಕಂತನ್ನು ನಿರ್ಧರಿಸುವ ವಿಧಾನಗಳು ಯಾವುವು ? 

 1) ವಿಮೆಯ ಇಡೀ ಅವಧಿಗೆ ಬೆಲೆಯನ್ನು ಒಂದೇ ಕಂತಿನಲ್ಲಿ (Single Premium) ನಿರ್ಧರಿಸಬಹುದು. 
2) ವಿಮೆಯ ಇಡೀ ಅವಧಿಯಲ್ಲಿ, ಬೆಲೆಯನ್ನು ಪ್ರತಿ ವರ್ಷಕ್ಕೊಮ್ಮೆ ನಿರ್ಧರಿಸಬಹುದು. ಇದಕ್ಕೆ  ಬದಲಾಗುವ ವಾರ್ಷಿಕ ಕಂತು (Changing Yearly Premium)  ಗಳೆಂದು ಕರೆಯುತ್ತಾರೆ.
3) ವಿಮೆಯ ಇಡೀ ಅವಧಿಗೆ ವಾರ್ಷಿಕ ಕಂತನ್ನು ಒಂದೇ ಮಟ್ಟದಲ್ಲಿ ಇರುವಂತೆ ನಿರ್ಧರಿಸಬಹುದು. ಇದಕ್ಕೆ  ಬದಲಾಗದÀ ವಾರ್ಷಿಕ ಕಂತು ಅಥವಾ ಸ್ಥಿರ ಮಟ್ಟದ  ಕಂತಿನ ದರ (Level  Premium) ಎಂದು ಕರೆಯುತ್ತಾರೆ.



Monday, September 22, 2014

22 ಸಪ್ಟೆಂಬರ 2014

 ವಿಮಾಕಂತು ನಿರ್ಧರಿಸುವಾಗ ಪ್ರಭಾವ ಬೀರುವ ಸಂಗತಿಗಳು ಯಾವುವು? 

 ವಿಮಾಕಂತು ನಿರ್ಧರಿಸುವಾಗ ಪ್ರಭಾವ ಬೀರುವ ಸಂಗತಿಗಳು – 
1) ಮರಣ ದರ (Mortality Rate) :  ಜೀವನದಲ್ಲಿ ವಯಸ್ಸು ಹೆಚ್ಚಾದಂತೆ ಮರಣ ದರ ಹೆಚ್ಚಾಗುತ್ತ ಹೋಗುತ್ತದೆ. ಹೀಗಾಗಿ ವಯಸ್ಸು ಹೆಚ್ಚಾದಂತೆ ಕಂತಿನ ದರ ಹೆಚ್ಚಾಗುತ್ತದೆ.
2) ಆಡಳಿತ ವೆಚ್ಚ (Administrative Expense)  : ಮಾರಾಟದ ವೆಚ್ಚದ ಪರಿಣಾಮವಾಗಿ ಆಡಳಿತ ವೆಚ್ಚ, ಮೊದಲ ವರ್ಷದಲ್ಲಿ ಅತೀ ಹೆಚ್ಚಾಗಿದ್ದು, ನಂತರದ ವರ್ಷಗಳಲ್ಲಿ ಅತೀ ಕಡಿಮೆಯಾಗಿ ಅದು ಸ್ಥಿರ ಮಟ್ಟದಲ್ಲಿ ಉಳಿಯುತ್ತದೆ. ಹೀಗಾಗಿ ಮೊದಲ ವರ್ಷದಲ್ಲಿ ಹೂಡಿಕೆಗೆ ಸಿಗುವ ಉಳಿಕೆ ಹಣ ಕಡಿಮೆ, ನಂತರದ ವರ್ಷಗಳಲ್ಲಿ ಹೂಡಿಕೆಗೆ ಸಿಗುವ ಉಳಿಕೆ ಹಣ ಜಾಸ್ತಿಯಾಗಿರುತ್ತದೆ.
3) ಹೂಡಿಕೆಯ ಆದಾಯ (Investment Income) : ಉಳಿಕೆಯ ಹಣವನ್ನು ಹೂಡಿಕೆಯಲ್ಲಿ ತೊಡಗಿಸುವದರಿಂದ, ಗಳಿಕೆಯ ಆದಾಯ ಹೂಡಿಕೆಯ ಚಾಣಾಕ್ಷತೆಯ ಮೇಲೆ ಅವಲಂಬಿಸಿರುತ್ತದೆ. 


Sunday, September 21, 2014

21 ಸಪ್ಟೆಂಬರ 2014

ಲೀನ್ (Lien)  (ವಿಮಾ ಪರಿಹಾರದ ಮೇಲಿನ ಹೊರೆ) ಯಾವಾಗ ಪ್ರಯೋಜನಕಾರಿಯಾಗತ್ತದೆ?  

 ಹೆಚ್ಚುವರಿ ಅಪಾಯ ಮಟ್ಟದ ಕಾಲಾವಧಿ, ಇಡೀ ಪಾಲಸಿ ಅವಧಿಗಿಂತ ತುಂಬಾ ಕಡಿಮೆಯಿದ್ದಾಗ,ಹೆಚ್ಚುವರಿ ಅಪಾಯ ಮಟ್ಟದ ಭಯವಿಲ್ಲದ ಗ್ರಾಹಕ ಹೆಚ್ಚುವರಿ ವಿಮಾಕಂತನ್ನು ನೀಡಲು ಒಪ್ಪದಿದ್ದಾಗ, ಲೀನ್ ಪ್ರಯೋಜನಕಾರಿಯೆನಿಸುತ್ತದೆ.



Saturday, September 20, 2014

20 ಸಪ್ಟೆಂಬರ 2014

ಲೀನ್ (ವಿಮಾ ಪರಿಹಾರದ ಮೇಲಿನ ಹೊರೆ) ವಿಧಾನಗಳು ಯಾವುವು? 

ಎರಡು ನಮೂನೆಯ ಲೀನ್ (ವಿಮಾ ಪರಿಹಾರದ ಮೇಲಿನ ಹೊರೆ) ವಿಧಾನಗಳು ಇರುತ್ತವೆ.
1) ಸ್ಥಿರವಾದ ಲೀನ್ (Constant Lien)   :  ಹೆಚ್ಚುವರಿ ಅಪಾಯ ಮಟ್ಟದ ಕಾಲಾವಧಿ ಪೂರ್ತಿ, ಹೆಚ್ಚುವರಿ ಅಪಾಯ ಮಟ್ಟ ಸ್ಥಿರವಾಗಿಯೇ ಉಳಿದರೆ ಸ್ಥಿರವಾದ ಹಣದ ಲೀನ್ ವಿಧಿಸುವರು. ಉದಾ : ಪೈಲಟ್ ಆಗಿ ಕಾರ್ಯ ನಿರ್ವಹಿಸುವ ಕಾಲಾವಧಿಗೆ ಸ್ಥಿರವಾದ ಹಣದ ಲೀನ್ ವಿಧಿಸುವರು.
2) ಕುಗ್ಗುತ್ತÀ್ತ ಹೋಗುವ ಲೀನ್ (Decreasing  Lien)    :  ಹೆಚ್ಚುವರಿ ಅಪಾಯ ಮಟ್ಟದ ಕಾಲಾವಧಿಯಲ್ಲಿ,ü, ಹೆಚ್ಚುವರಿ ಅಪಾಯ ಮಟ್ಟ ಸ್ಥಿರವಾಗಿ ಉಳಿಯದೇ ಕುಗ್ಗುತ್ತ ಹೋದರೆ, ಕುಗ್ಗುತ್ತÀ್ತ ಹೋಗುವ ಲೀನ್ ವಿಧಿಸುವರು. ಲೀನ್ ಅವಧಿಯಲ್ಲಿ ಪ್ರತಿ ವರ್ಷ ಲೀನ್ ಗಾತ್ರ ಕಡಿಮೆ ಅಗುತ್ತ ಹೋಗಿ, ಲೀನ್ ಅವಧಿ ಮುಗಿಯುತ್ತಿದ್ದಂತೆಯೇ ಲೀನ್ ಭಾರ ಮುಗಿದೇ ಹೋಗುತ್ತದೆ. ಉದಾ : ಹೆಚ್ಚು ತೂಕದ ವ್ಯಕ್ತಿಯಲ್ಲಿ ಟಿ.ಬಿ. ಕಾಯಿಲೆಯ ಸಂಶಯ ಉಂಟಾದಾಗ, ಕೆಲ ಅವಧಿಗೆ  ಕುಗ್ಗುತ್ತÀ್ತ ಹೋಗುವ ಲೀನ್ ವಿಧಿಸುವರು

Friday, September 19, 2014

19 ಸಪ್ಟೆಂಬರ 2014

ಲೀನ್ (ವಿಮಾ ಪರಿಹಾರದ ಮೇಲಿನ ಹೊರೆ) ಯಾವಾಗ ವಿಧಿಸುತ್ತಾರೆ?  

ಹೆಚ್ಚುವರಿ ಅಪಾಯ ಮಟ್ಟ ಪ್ರಾರಂಭದಲ್ಲಿ ಮಾತ್ರ ಇದ್ದು, ಕೆಲ ಸಮಯದನಂತರ ಅದು ಸಂಪೂರ್ಣವಾಗಿ ಇಲ್ಲದಾಗುವಂತೆ ಆದರೆ, ಈ ಕಾಲಾವಧಿಗೆ ಮಾತ್ರ ಲೀನ್ ವಿಧಿಸುವರು. ಹೆಚ್ಚುವರಿ ಅಪಾಯ ಮಟ್ಟದ ಕಾಲಾವಧಿ (ಲೀನ್ ಅವಧಿ) ಮುಗಿದ ನಂತರ, ಲೀನ್ ಅಥವಾ ಹೆಚ್ಚುವರಿ ಕಂತು ನೀಡಿಕೆಯ ಅವಶ್ಯಕತೆ ಬೀಳುವದಿಲ್ಲಾ. 



Thursday, September 18, 2014

18 ಸಪ್ಟೆಂಬರ 2014

ಲೀನ್ (Lien) (ವಿಮಾ ಪರಿಹಾರದ ಮೇಲಿನ ಹೊರೆ) ಯಾಕೆ ವಿಧಿಸುತ್ತಾರೆ?  

ಹೆಚ್ಚುವರಿ ಅಪಾಯ ಮಟ್ಟದ ಗ್ರಾಹಕ ಹೆಚ್ಚುವರಿ ವಿಮಾಕಂತನ್ನು ನೀಡಲು ಒಪ್ಪದಿದ್ದರೆ, ಹೆಚ್ಚುವರಿ ವಿಮಾಕಂತಿಗೆ ಬದಲಾಗಿ, ಪಾಲಿಸಿ ಮೇಲೆ ಲೀನ್ (Lien) ವಿಧಿಸುತ್ತಾರೆ. ಹೀಗೆ ಮಾಡುವದರಿಂದ ಗ್ರಾಹಕನಿಗೆ ಹೆಚ್ಚುವರಿ ಕಂತಿನ ಭಾರ ತಪ್ಪುತ್ತದೆ. ವಿಮಾ ಘಟನೆ ಸಂಭವಿಸಿದಾಗ ಪೂರ್ಣ ಪರಿಹಾರದ ಬದಲು, ಲೀನ್ ಹಣ  ಕಡಿತದಿಂದ  ಕಡಿಮೆ ಪರಿಹಾರ ನೀಡಬೇಕಾಗುವದರಿಂದ, ವಿಮಾ ಕಂಪನಿಗೆ ಪರಿಹಾರ ಭಾರ ಕಡಿಮೆಯಾಗುತ್ತದೆ.



Wednesday, September 17, 2014

17 ಸಪ್ಟೆಂಬರ 2014

ಲೀನ್ (ಐieಟಿ)  (ವಿಮಾ ಪರಿಹಾರದ ಮೇಲಿನ ಹೊರೆ) ಎಂದರೇನು?  

ವಿಮಾ ಪರಿಹಾರದ ಮೇಲೆ, ವಿಮಾಕಂಪನಿಯು ವಿಧಿಸಿದ ಹೊರೆಗೆ ಲೀನ್ ಎಂದು ಕರೆಯುತ್ತಾರೆ.
ವಿಮಾ ಪರಿಹಾರ ನೀಡುವಾಗ ಲೀನ್ ಅಸ್ತಿತ್ವದಲ್ಲಿದ್ದರೆ, ಪರಿಹಾರದ ಹಣದಲ್ಲಿ ಲೀನ್ ಹಣವನ್ನು ಕಳೆದು ಉಳಿದ ಹಣವನ್ನು ಸಂದಾಯ ಮಾಡಲಾಗುತ್ತದೆ. 



Tuesday, September 16, 2014

16 ಸಪ್ಟೆಂಬರ 2014

 ಮಾನವ ಜೀವದ ಮೌಲ್ಯ (Human Life Value ) ವನ್ನು ಆದಾಯ ಸ್ಥಾನ ಪಲ್ಲಟ ಪದ್ಧತಿ (Income Replacement Method ) ಯಲ್ಲಿ ಹೇಗೆ ಅಳೆಯುತ್ತಾರೆ? 


ಮೊದಲು ವ್ಯಕ್ತಿಯೊಬ್ಬನು ಪರಿವಾರದಲ್ಲಿ ತನ್ನ ಅವಲಂಬಿತರಿಗೆ ಸಲ್ಲಿಸುವ ಆರ್ಥಿಕ ಸಹಾಯದ ವಾರ್ಷಿಕ ಪ್ರಮಾಣವನ್ನು ಅಳೆಯುತ್ತಾರೆ. 
ತನ್ನ ಉಳಿದ ಗಳಿಕೆಯ ಅವಧಿಯನ್ನು ಅಳೆಯುತ್ತಾನೆ.
ಹಣದುಬ್ಬರದ ದರ
ಅವಲಂಬಿತರಿಗೆ ಸಲ್ಲಿಸುವ ಆರ್ಥಿಕ ಸಹಾಯದ ವಾರ್ಷಿಕ ಪ್ರಮಾಣವನ್ನು, ತನ್ನ ಉಳಿದ ಗಳಿಕೆಯ ಅವಧಿಗೆ ಪಡೆಯಲು, ಹೂಡಿಕೆ ಮಾಡಬೇಕಾದ ಬಂಡವಾಳವನ್ನು ಲೆಕ್ಕಮಾಡುತ್ತಾರೆ .(ಇದಕ್ಕಾಗಿ ಹೂಡಿಕೆಯ ದರದ ಅಂದಾಜು ಮಾಡಬೇಕಾಗುತ್ತದೆ.)

ಉದಾ : ವ್ಯಕ್ತಿಯ ತಿಂಗಳ ಒಟ್ಟು ಅದಾಯ ------------------------------- - 35,000 ರೂ.
ಟಾಕ್ಸ, ಓಡಾಟ, ವ್ಯಕ್ತಿಗತ ಖರ್ಚು ಕೆಳೆದು ಇಡೀ ಪರಿವಾರಕ್ಕೆ ಸಿಗುವ ನಿವ್ವಳ ಮಾಸಿಕ ಆದಾಯ  – 30,000 ರೂ.      
ಪರಿವಾರದಲ್ಲಿ ತನ್ನನ್ನು ಒಳಗೊಂಡು ಒಟ್ಟು 6 ಜನ ಸದಸ್ಯರಿದ್ದರೆ, ತನ್ನನ್ನು ಬಿಟ್ಟು 5 ಜನ ಸದಸ್ಯರು ಉಳಿಯುತ್ತಾರೆ.

ಈ ಹಣದಲ್ಲಿ ತನ್ನನ್ನು ಬಿಟ್ಟು ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು        – 25,000 ರೂ. 
ಉಳಿದ ಗಳಿಕೆಯ ಅವಧಿ (ಉದಾಹರಣೆಗೆ : ಗಳಿಕೆ ನಿಲ್ಲುವ ವಯಸ್ಸು 60 – ಈಗಿನ ವಯಸ್ಸು 35 )   - 25 ವರ್ಷಗಳು
ಹಣದುಬ್ಬರದ ಅಂದಾಜು ವಾರ್ಷಿಕ ದರ                                      - 5%
ಹೂಡಿಕೆಯಲ್ಲಿ ಅಂದಾಜು ಗಳಿಕಯ ವಾರ್ಷಿಕ ದರ                               - 8%

ಇಲ್ಲಿ 1 ನೆಯ ವರ್ಷದಲ್ಲಿ ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು : 25000 X 12 = 300,000 ರೂ.      
ಇಲ್ಲಿ 2 ನೆಯ ವರ್ಷದಲ್ಲಿ ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು : 26250 X 12 = 315,000 ರೂ.      
ಇಲ್ಲಿ 3 ನೆಯ ವರ್ಷದಲ್ಲಿ ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು : 27562.5 X 12 = 330,750 ರೂ.      

ಹಾಗಾದರೆ ಪ್ರತಿ ತಿಂಗಳಿಗೆ 25000 ರೂ. ಆದಾಯವನ್ನು ಪ್ರತಿ ವರ್ಷ 5% ಹೆಚ್ಚಿಸುತ್ತ, ಮುಂದಿನ 25 ವರ್ಷಗಳ ವರೆಗೆ  ಪಡೆಯಬೇಕಾದರೆ; 8% ಅಂದಾಜು ಗಳಿಕಯ ವಾರ್ಷಿಕ ದರದಲ್ಲಿ, ಹೂಡಿಕೆ ಮಾಡಬೇಕಾದ ಬಂಡವಾಳ– ರೂ 54,59,741.  
ಅಂದರೆ ಇಲ್ಲಿ ಮಾನವ ಜೀವದ ಮೌಲ್ಯ ರೂ. 54,59,741 ಇರುತ್ತದೆ. ಈ ಪದ್ಧತಿಯಲ್ಲಿ  ಮಾನವ ಜೀವದ ಮೌಲ್ಯ : 
 1)ಪ್ರಾರಂಭದಲ್ಲಿ ಪರಿವಾರದ ಅವಲಂಬಿತರಿಗಾಗಿ ತಗಲುವ ಮಾಸಿಕ ಖರ್ಚು. 2)ಉಳಿದ ಗಳಿಕೆಯ ಅವಧಿ.     
 3) ಹೂಡಿಕೆಯಲ್ಲಿ ಅಂದಾಜು ಗಳಿಕಯ ವಾರ್ಷಿಕ ದರ. 4) ಹಣದುಬ್ಬರದ ಅಂದಾಜು ವಾರ್ಷಿಕ ದರ.                            
 ಇವುಗಳ ಮೇಲೆ ಅವಲಂಬಿತವಾಗಿರುತ್ತದೆ.


Monday, September 15, 2014

15 ಸಪ್ಟೆಂಬರ 2014

 ಮಾನವ ಜೀವದ ಮೌಲ್ಯ (Human Life Value ) ವನ್ನು ಸಾದಾ ಪದ್ಧತಿ (Income Replacement Method ) ಯಲ್ಲಿ ಹೇಗೆ ಅಳೆಯುತ್ತಾರೆ? 


ಮೊದಲು ವ್ಯಕ್ತಿಯೊಬ್ಬನು ಪರಿವಾರದಲ್ಲಿ ತನ್ನ ಅವಲಂಬಿತರಿಗೆ ಸಲ್ಲಿಸುವ ಆರ್ಥಿಕ ಸಹಾಯದ ವಾರ್ಷಿಕ ಪ್ರಮಾಣವನ್ನು ಅಳೆಯುತ್ತಾರೆ. 
ಈ ಆರ್ಥಿಕ ಸಹಾಯದ ವಾರ್ಷಿಕ ಪ್ರಮಾಣವನ್ನು ನಿರಂತರವಾಗಿ ಗಳಿಸಲು ಹೂಡಿಕೆ ಮಾಡಬೇಕಾದ ಬಂಡವಾಳವನ್ನು ಲೆಕ್ಕಮಾಡುತ್ತಾರೆ .(ಇದಕ್ಕಾಗಿ ಹೂಡಿಕೆಯ ದರದ ಅಂದಾಜು ಮಾಡಬೇಕಾಗುತ್ತದೆ.)

ಉದಾ : ವ್ಯಕ್ತಿಯ ತಿಂಗಳ ಒಟ್ಟು ಅದಾಯ ------------------------------- - 35,000 ರೂ.
ಟಾಕ್ಸ, ಓಡಾಟ, ವ್ಯಕ್ತಿಗತ ಖರ್ಚು ಕೆಳೆದು ಇಡೀ ಪರಿವಾರಕ್ಕೆ ಸಿಗುವ ನಿವ್ವಳ ಮಾಸಿಕ ಆದಾಯ  – 30,000 ರೂ.      
ಪರಿವಾರದಲ್ಲಿ ತನ್ನನ್ನು ಒಳಗೊಂಡು ಒಟ್ಟು 6 ಜನ ಸದಸ್ಯರಿದ್ದರೆ, ತನ್ನನ್ನು ಬಿಟ್ಟು 5 ಜನ ಸದಸ್ಯರು ಉಳಿಯುತ್ತಾರೆ.

ಈ ಹಣದಲ್ಲಿ ತನ್ನನ್ನು ಬಿಟ್ಟು ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು – 25,000 ರೂ.
ಪ್ರತಿ ತಿಂಗಳಿಗೆ 25000 ರೂ. ಆದಾಯ ಪಡೆಯಬೇಕಾದರೆ ಹೂಡಿಕೆ ಮಾಡಬೇಕಾದ ಬಂಡವಾಳ – 

                      8 % ಗಳಿಕೆ ದರವಿದ್ದರೆ ಹೂಡಿಕೆ ಮಾಡಬೇಕಾದ ಬಂಡವಾಳ : ರೂ. 37,50,000. 
                      10% ಗಳಿಕೆ ದರವಿದ್ದರೆ ಹೂಡಿಕೆ ಮಾಡಬೇಕಾದ ಬಂಡವಾಳ : ರೂ. 30,00,000. 

ಇಲ್ಲಿ ಮಾನವ ಜೀವದ ಮೌಲ್ಯ ರೂ. 37,00,500 ಅಥವಾ ರೂ. 30,00,000 ಇರುತ್ತದೆ.

ಅಂದರೆ ಈ ಪದ್ಧತಿಯಲ್ಲಿ  ಮಾನವ ಜೀವದ ಮೌಲ್ಯ :  1)ಹೂಡಿಕೆಯ ಅಂದಾಜು ದರ, ಹಾಗೂ 2)ಪರಿವಾರದ ಅವಲಂಬಿತರಿಗಾಗಿ ತಗಲುವ ಮಾಸಿಕ ಖರ್ಚು, ಇವುಗಳ ಮೇಲೆ ಅವಲಂಬಿತವಾಗಿರುತ್ತದೆ.





Sunday, September 14, 2014

14 ಸಪ್ಟೆಂಬರ 2014

 ಮಾನವ ಜೀವದ ಮೌಲ್ಯವನ್ನು ಹಣದಲ್ಲಿ ಹೇಗೆ ಅಳೆಯುತ್ತಾರೆ? 

 ವಿಮೆಯ ದೃಷ್ಟಿಯಿಂದ ಮಾನವ ಜೀವವೂ ಒಂದು ರೀತಿಯಲ್ಲಿ ಗಳಿಸುವ ಆಸ್ತಿ. ಜೀವಂತವಿದ್ದಾಗ ಗಳಿಸುವ ಈ ಆಸ್ತಿಗೆ ಇರುವ ಆರ್ಥಿಕ ಬೆಲೆಯು,
ಎಲ್ಲಾ ಕಾಲದಲ್ಲಿ ಒಂದೇ ರೀತಿಯಲ್ಲಿ ಇರುವದಿಲ್ಲಾ. 
ಕಾಲ ಕಾಲಕ್ಕೆ ಅದು ಬದಲಾಗುತ್ತ ಹೋಗುತ್ತದೆ.
ವಿಮೆ ಪಡೆಯುವ ಸಮಯದಲ್ಲಿ  ಮಾನವ ಜೀವದ ಮೌಲ್ಯವನ್ನು ಹಣದಲ್ಲಿ ಅಳೆಯುವಾಗ, ಆ ಸಮಯದಲ್ಲಿ ವಿಮೆ ಪಡೆಯುವವನ ಗಳಿಕೆಯ ಸಾಮಥ್ರ್ಯ, ಗಳಿಕೆಯ ಭವಿಷ್ಯದ ಅವಧಿಯನ್ನು ಲೆಕ್ಕಕ್ಕೆ ತೆಗೆದು ಕೊಳ್ಳುತ್ತಾರೆ. ಅಂದರೆ ಭವಿಷ್ಯದ ಎಲ್ಲಾ ಗಳಿಕೆಗಳ ಮೌಲ್ಯ  ಆ ಸಮಯಕ್ಕೆ ಎಷ್ಟಿದೆ ಎಂದು ಲೆಕ್ಕ ಮಾಡುತ್ತಾರೆ. ಈ ರೀತಿ ಲೆಕ್ಕ ಮಾಡಲು ಎರಡು ಪದ್ಧತಿಗಳನ್ನು ಬಳಸುತ್ತಾg.É 1) ಸಾದಾ ಪದ್ಧತಿ, 2) ಆದಾಯ ಸ್ಥಾನ ಪಲ್ಲಟ ಪದ್ಧತಿ.



Saturday, September 13, 2014

13 ಸಪ್ಟೆಂಬರ 2014

ಮಾನವ ಜೀವದ ಮೌಲ್ಯ ಎಂದರೇನು? 

 ವಿಮೆಯ ದೃಷ್ಟಿಯಿಂದ ಮಾನವ ಜೀವವೂ ಒಂದು ರೀತಿಯಲ್ಲಿ ಗಳಿಸುವ ಆಸ್ತಿ. ಮರಣ ಸಂಭವಿಸಿದಾಗ  ಆಸ್ತಿಯ ಆರ್ಥಿಕ ಮೌಲ್ಯ ಶೂನ್ಯವಾಗುತ್ತದೆ. ಜೀವಂತವಿದ್ದಾಗ ಗಳಿಸುವ ಈ ಆಸ್ತಿಗೆ ಇರುವ ಆರ್ಥಿಕ ಬೆಲೆಗೆ ಮಾನವ ಜೀವದ ಮೌಲ್ಯ ಎಂದು ಕರೆಯುತ್ತಾರೆ.



Friday, September 12, 2014

12 ಸಪ್ಟೆಂಬರ 2014

 ವೈದ್ಯಕೀಯೇತರ ವಿಮಾಂಕನ (Non Medical  Underwriting ) ದಲ್ಲಿ ಅಪಾಯ ಮಟ್ಟವನ್ನು ನಿಯಂತ್ರಿಸಲು ಯಾವ ಕ್ರಮ ಕೈಕೊಳ್ಳುತ್ತಾರೆ? 

 ವೈದ್ಯಕೀಯೇತರ ವಿಮಾಂಕನದಲ್ಲಿ ಅಪಾಯ ಮಟ್ಟವನ್ನು ನಿಯಂತ್ರಿಸಲು ಕೆಳಗಿನ  ಕ್ರಮ ಕೈಕೊಳ್ಳುತ್ತಾರೆ.
ವೈದ್ಯಕೀಯೇತರ ವಿಮೆಯ ಮಾರಾಟವನ್ನು ಮಹಿಳೆಯರಿಗೆ ನಿಷೇಧಿಸುವದು.
ವಿಮಾ ಮಾರಾಟದ ಮೊತ್ತಕ್ಕೆ ಗರಿಷ್ಠ ಮಿತಿಯನ್ನು ಹಾಕುವದು.
ವಿಮಾ ಪ್ರಾರಂಭದ ವಯಸ್ಸಿಗೆ ಗರಿಷ್ಠ ಮಿತಿಯನ್ನು ಹಾಕುವದು. 
ವಿಮಾ ಅವಧಿ ಕೊನೆಯಲ್ಲಿನ ವಯಸ್ಸಿಗೆ ಗರಿಷ್ಠ ಮಿತಿಯನ್ನು ಹಾಕುವದು.
ವಿಮಾ ಅವಧಿಗೆ ಗರಿಷ್ಠ ಮಿತಿಯನ್ನು ಹಾಕುವದು.
ಕೆಲವು ಬಗೆಯ ವಿಮಾ ಸರಕುಗಳ ಮಾರಾಟಕ್ಕೆ ಮಾತ್ರ ಅನುವು ಮಾಡಿ ಕೊಡುವದು.
ಹೆಚ್ಚು ಅಪಾಯಗಳ ಯೋಜನೆಗಳನ್ನು ಹೊರಗಿಡುವದು.
     

Thursday, September 11, 2014

11 ಸಪ್ಟೆಂಬರ 2014

 ವೈದ್ಯಕೀಯೇತರ ವಿಮಾಂಕನ(Non Medical  Underwriting )ಕ್ಕೆ ಯಾಕೆ ಮೊರೆ ಹೋಗಿತ್ತಾರೆ? 

 ವೈದ್ಯಕೀಯೇತರ ವಿಮಾಂಕನಕ್ಕೆ ಮೊರೆ ಹೋಗುವ ಕಾರಣಗಳು: 
ಎಷ್ಟೋ ಗ್ರಾಹಕರು ಮಾನಸಿಕವಾಗಿ ವೈದ್ಯಕೀಯ ತಪಾಸಣೆಯನ್ನು ವಿರೋಧಿಸುತ್ತಾರೆ. ವೈದ್ಯಕೀಯೇತರ ವಿಮಾಂPನದಿಂದ ವಿಮೆಯ ಮಾರಾಟ ಹೆಚ್ಚಾಗಿ ಸುಲಭವಾಗಿ ಜರುಗುವದು. 

ವೈದ್ಯಕೀಯ ತಪಾಸಣೆಯು ವೆಚ್ಚದಾಯಕ ಹಾಗೂ ಹೆಚ್ಚು ಸಮಯ ತೆಗೆದುಕೊಳ್ಳುವ ಕ್ರಿಯೆ ಅಗುರುತ್ತದೆ.
ವೈದ್ಯಕೀಯ ತಪಾಸಣೆ ಇಲ್ಲದೆಯೇ, ವ್ಯಕ್ತಿಯ ಆರೋಗ್ಯದ ಸ್ಥಿತಿಯ ಬಗ್ಗೆ ಬಹಳಷ್ಟು ಮಾಹಿತಿಯನ್ನು; ವಿವರವಾದ, ಪ್ರಾಮಾಣಿಕವಾದ ವ್ಯಕ್ತಿಗತ ಆರೋಗ್ಯ ಹೇಳಿಕೆಯ ಮೂಲಕ ಪಡೆಯಬಹುದು.
ಒಳ್ಳೆಯ ಗುಣಮಟ್ಟದ ಸಂಸ್ಥೆಗಳಲ್ಲಿ ನೌಕರಿ ಮಾಡುವವರ ಆರೋಗ್ಯದ ಸ್ಥಿತಿಯ ಬಗ್ಗೆ ಬಹಳಷ್ಟು ಮಾಹಿತಿಯನ್ನು; ಸಂಸ್ಥೆಯ ರಜಾ ದಾಖಲೆ ಹಾಗೂ ಇತರ ದಾಖಲೆಗಳ ಮೂಲಕ ಸಂಗ್ರಹಿಸಬಹುದು.
ವೈದ್ಯಕೀಯೇತರ ವಿಮಾಂಕನದಿಂದ ಉಂಟಾಗ ಬಹುದಾದ ಹೆಚ್ಚುವರಿ ವಿಮಾ ಪರಿಹಾರ ವೆಚ್ಚವನ್ನು, ವೈದ್ಯಕೀಯ ತಪಾಸಣೆಗೆ ತಗಲುವ ಒಟ್ಟಾರೆ ವೆಚ್ಚ ಸರಿತೂಗಿಸುವದು.



Wednesday, September 10, 2014


10ಸಪ್ಟೆಂಬರ 2014

 ವೈದ್ಯಕೀಯೇತರ ವಿಮಾಂಕನ (Non Medical  Underwriting ) ಎಂದರೇನು?

 ವೈದ್ಯಕೀಯ ತಪಾಸಣೆ ಮಾಡದೆಯೇ ವಿಮಾ ರಕ್ಷಿತನ ಆರೋಗ್ಯ ಸ್ಥಿತಿಯು, ವಿಮೆ ಪಡೆಯುವದಕ್ಕೆ  ಯೋಗ್ಯವಾಗಿದೆಯೆಂಬುದನ್ನು ಖಾತ್ರಿ ಮಾಡಿಕೊಳ್ಳುವದಕ್ಕೆ ವೈದ್ಯಕೀಯೇತರ ವಿಮಾಂಕನ ಎನ್ನುತ್ತಾರೆ.

Tuesday, September 9, 2014

9 ಸಪ್ಟೆಂಬರ 2014

ವೈದ್ಯಕೀಯ ವಿಮಾಂಕನ (Medical  Underwriting ) ಎಂದರೇನು?

ವೈದ್ಯಕೀಯ ತಪಾಸಣೆಯ ಮೂಲಕ ವಿಮಾ ರಕ್ಷಿತನ ಆರೋಗ್ಯ ಸ್ಥಿತಿಯು, ವಿಮೆ ಪಡೆಯುವದಕ್ಕೆ  ಯೋಗ್ಯವಾಗಿದೆಯೆಂಬುದನ್ನು ಖಾತ್ರಿ ಮಾಡಿಕೊಳ್ಳುವದಕ್ಕೆ ವೈದ್ಯಕೀಯ ವಿಮಾಂಕನ ಎನ್ನುತ್ತಾರೆ.


Monday, September 8, 2014

8 ಸಪ್ಟೆಂಬರ 2014

 ವಿಮೆಯ ಹಣದ ಗರಿಷ್ಠ ಮೊತ್ತ (Maximum Sum Assured ) ವನ್ನು ಹೇಗೆ ನಿರ್ಧರಿಸುತ್ತಾರೆ?

 ವಿಮಾ ಕೋರಿಕೆದಾರನ ಜೀವÀದ ಆರ್ಥಿಕ ಮೌಲ್ಯದ ಆಧಾರದ ಮೇಲೆ ವಿಮೆಯ ಹಣದ ಗರಿಷ್ಠ ಮೊತ್ತವÀನ್ನು ನಿರ್ಧರಿಸುತ್ತಾರೆ. ವ್ಯಕ್ತಿಯೊಬ್ಬನು ಪಡೆÀಬಹುದಾದ ಒಟ್ಟಾರೆ ವಿಮೆಯ ಹಣದ ಗರಿಷ್ಠ ಮೊತ್ತವು,  ವಿಮೆ ಪಡೆಯುವ ಸಮಯಕ್ಕೆ ಇರುವ ಆ ವ್ಯಕ್ತಿಯ ಜೀವÀದ ಆರ್ಥಿಕ ಮೌಲ್ಯಕ್ಕೆ ಸಮನಾಗಿರುತ್ತದೆ .



Sunday, September 7, 2014

 7 ಸಪ್ಟೆಂಬರ 2014

 ಆರ್ಥಿಕ ವಿಮಾಂಕನ (Financial Underwriting )  ಎಂದರೇನು?

 1) ಅವಶ್ಯಕತೆಗಿಂತ ಹೆಚು ಹಣಕ್ಕೆ ವಿಮೆ ಪಡೆಯದಂತೆ ಜಾಗ್ರತೆ ವಹಿಸುವದಕ್ಕೆ,
  2) ಅತಿ ಹೆಚ್ಚು ವಿಮೆ ಮಾಡಿಸಿ ಸಾವಿನಿಂದ ಆರ್ಥಿಕ ಲಾಭ ಪಡೆಯದಂತೆ ಜಾಗ್ರತೆ ವಹಿಸುವದಕ್ಕೆ,
  3) ವಿಮಾದಾರನು ಸಾಯುವ ಮುಂಚೆ ಯಾವ ಆರ್ಥಿಕ ಮಟ್ಟದಲ್ಲಿ ಇರತ್ತಾನೋ, ಅದಕ್ಕಿಂತ ಹೆಚ್ಚಿನ  ಆರ್ಥಿಕ ಮಟ್ಟವನ್ನು ನಿಧನ ಮೂಲಕ ಪಡೆಯದಂತೆ ಜಾಗ್ರತೆ ವಹಿಸುವದಕ್ಕೆ,   
   ಆರ್ಥಿಕ ವಿಮಾಂಕನ  ಎಂದು ಕರೆಯುವರು.               


Saturday, September 6, 2014

6 ಸಪ್ಟೆಂಬರ 2014

ಯಾವ ಘಟನೆಗಳಲ್ಲಿ ನೈತಿಕ ಅಪಾಯ (Moral Hazard ) ಗಳು ಇರಬಹುದು?


ಅವಶ್ಯಕತೆಗಿಂತ ಹೆಚ್ಚು ಹಣಕ್ಕೆ ವಿಮೆಯ ಬೇಡಿಕೆ ಸಲ್ಲಿಸಿದಾಗ,
ವಾರಸುದಾರರು ಇಲ್ಲದಿರುವಾಗ ವಿಮೆಗೆ ಬೇಡಿಕೆ ಸಲ್ಲಿಸಿದಾಗ,
ಗಳಿಕೆ ಇಲ್ಲದವನ ಮೇಲೆ ವಿಮೆಗೆ ಬೇಡಿಕೆ ಬಂದಾಗ,
ನಾಮಿನಿಯು ಹತ್ತಿರದ ಸಂಬಂಧಿಯಾಗಿರದಿದ್ದರೆ,
ಇಳಿವಯಸ್ಸಿನಲ್ಲಿ ಪ್ರಥಮ ಬಾರಿ ವಿಮೆಗೆ ಬೇಡಿಕೆ ಸಲ್ಲಿಸಿದಾಗ,
ವೈದ್ಯಕೀಯ ಪರೀಕ್ಷೆಯನ್ನು ದೂರದ ಸ್ಥಳದಲ್ಲಿ ಮಾಡಿಸಿದಾಗ,
ಜೀವಕ್ಕೆ ಕಂಟಕ ಸನ್ನಿವೇಶವಿದ್ದಾಗ ವಿಮೆಗೆ ಬೇಡಿಕೆ ಸಲ್ಲಿಸಿದಾಗ.
     
     

Friday, September 5, 2014

5 ಸಪ್ಟೆಂಬರ 2014

ನೈತಿಕ ಅಪಾಯವರ್ಧಕ (Moral Hazard ) ಗಳ ಬಗ್ಗೆ ವಿವರಿಸಿರಿ.

 ನೈತಿಕ ಅಪಾಯ ವರ್ಧಕ. ಕಣ್ಣಿಗೆ ಕಾಣದವುಗಳು.
ಉದಾ :
ದುರ್ನಡತೆ : ಕುಡಿತ/ಜೂಜು ಮನೋಭಾವ.
ಕೆಟ್ಟ ಮನೋಭಾವ : ಅಲಕ್ಷ್ಯತನ, ಸ್ವಾರ್ಥಭಾವ.
ಕೆಟ್ಟ ಉದ್ಯೇಶ : ಲಾಭಕೋರತನ, ದುರಾಶೆÉ, ವಂಚನೆ, ಅನೈತಿಕ ವಿಚಾರಧಾರೆ.



Thursday, September 4, 2014



4 ಸಪ್ಟೆಂಬರ 2014

 ಭೌತಿಕ ಅಪಾಯವರ್ಧಕ (Physical  Hazard)  ಗಳ ಬಗ್ಗೆ ವಿವರಿಸಿರಿ.

 ಭೌತಿಕ ಅಪಾಯ ವರ್ಧಕ -. ಕಣ್ಣಿಗೆ ಕಾಣುವಂತಹವು :  

ಅಪಾಯ ವರ್ಧಕಗಳ ನೆಲೆಗಳು : 1)ವಯಸ್ಸು, 2)ವೃತ್ತಿ, 3)ಲಿಂಗ, 4)ರೂಢಿ(ಚಟ)ಗಳು, 5) ವಾಸ ಸ್ಥಾನ, 6) ಹವ್ಯಾಸಗಳು. 7) ದೈಹಿಕ ಲಕ್ಷಣಗಳು (ಎತ್ತರ, ತೂಕ, ಅಂಗ ರಚನೆ), 8)ಆರೋಗ್ಯ ಸ್ಥಿತಿ, 9)ಅಂಗವಿಕಲತೆ, 10) ಕೌಟುಂಬಿಕ ಆರೋಗ್ಯ ಹಿನ್ನೆಲೆ, 11) ವ್ಯಕ್ತಿಗತ ಆರೋಗ್ಯ ಇತಿಹಾಸ.  

ಉದಾ : ಹಿರಿಯ ವಯಸ್ಸು, ಅಪಾಯಕಾರಿ ವೃತ್ತಿಗಳು, ಸ್ತ್ರೀ ಜೀವಿಗಳು, ಕೆಟ್ಟ ಚಟಗಳು, ಅಪಾಯಕರೀ ಹವ್ಯಾಸಗಳು, ಅನಾರೋಗ್ಯಕರ ವಾಸ ಸ್ಥಾನ, ದೈಹಿಕ ಏರು ಪೇರು (ಕುಳ್ಳು, ಬೊಜ್ಜು, ಬಡಕಲು), ಅನಾರೋಗ್ಯ, ಅಂಗವಿಕಲತೆ,  ಕೌಟುಂಬಿಕ ಅನಾರೋಗ್ಯದ ಹಿನ್ನೆಲೆ,) ವ್ಯಕ್ತಿಗತ ಅನಾರೋಗ್ಯದ ಇತಿಹಾಸ.



Wednesday, September 3, 2014

3 ಸಪ್ಟೆಂಬರ 2014

 ಎಷ್ಟು ಬಗೆಯ ಅಪಾಯವರ್ಧಕ (Hazard) ಗಳಿವೆ?

       ಎರಡು ಬಗೆಯ ಅಪಾಯವರ್ಧಕಗಳಿವೆ. 
       1) ಭೌತಿಕ ಅಪಾಯ ವರ್ಧಕ (Moral Hazard ) : ಕಣ್ಣಿಗೆ ಕಾಣುವವು.
       2) ನೈತಿಕ ಅಪಾಯ ವರ್ಧಕ (Moral Hazard ) : ಕಣ್ಣಿಗೆ ಕಾಣದವು.

Tuesday, September 2, 2014

2 ಸಪ್ಟೆಂಬರ 2014

        ಆಪಾಯವರ್ಧಕ (Hazard) ಗಳು ಎಂದರೇನು?

ಅಪಾಯ ವರ್ಧಕ (Hazard) ಗಳೆಂದರೆ : ಅಪಾಯವನ್ನು ಹೆಚ್ಚಿಸುವ ಸಂಗತಿಗಳು ಅಥವಾ  ಕಾರಣಗಳು. 
 ಉದಾ :
ಅಪಾಯ ಮೂಲಗಳು ಅಪಾಯ ವರ್ಧಕಗಳು
1) ಬೆಂಕಿ ಗಾಳಿ, ಪೆಟ್ರೋಲ್.
2) ಹೃದಯ ಕಾಯಿಲೆ, ಧೂಮಪಾನ, ಕುಡಿತ, ಅಲಕ್ಷ್ಯ,
3) ಸಾವು, ಅಪಾಯಕಾರಿ ವೃತ್ತಿಗಳು.
4) ಗಂಭೀರ ಕಾಯಿಲೆ, ಅನಾರೋಗ್ಯಕರ ವಾತಾವರಣ, ಚಟಗಳು.



Monday, September 1, 2014

1 ಸಪ್ಟೆಂಬರ 2014

ಗ್ರಾಹಕನ ಆದಾಯ ಸ್ಥಿತಿಗತಿಗಳ ಬಗ್ಗೆ ಮಾಹಿತಿಗಳನ್ನು ಹೇಗೆ ಸಂಗ್ರಹಿಸಲಾಗುತ್ತದೆ?

ಉತ್ತರ : ಆದಾಯಕರ ಅಧಿಕಾರಿಗಳ, ಆದಾಯಕರ ಸಲಹೆಗಾರರÀವರದಿಗಳ ಮೂಲಕ ಗ್ರಾಹಕನ ಆದಾಯ ಸ್ಥಿತಿಗತಿಗಳ ಬಗ್ಗೆ ಮಾಹಿತಿಗಳನ್ನು ಅಧಿಕೃತವಾಗಿ ಪಡೆಯಬಹುದು.