Wednesday, September 24, 2014

24 ಸಪ್ಟೆಂಬರ 2014

 ವಿಮೆಯ ಇಡೀ ಅವಧಿಗೆ ಸ್ಥಿರ ಮಟ್ಟದ  ಕಂತಿನ ದರ (Level  Premium) ವನ್ನು ಹೇಗೆ ಲೆಕ್ಕ ಮಾಡಿ ನಿರ್ಧರಿಸುತ್ತಾರೆ?

ಸಾಮಾನ್ಯವಾಗಿ ಕಂತಿನ ದರವನ್ನು ಪ್ರತಿ ಸಾವಿರ ರೂಪಾಯಿ ವಿಮೆಗೆ, ವರ್ಷದ ಲೆಕ್ಕದಲ್ಲಿ ನಿರ್ಧರಿಸುತ್ತಾರೆ.

1) ಮೊದಲಿಗೆ ಅಪಾಯ ಕಂತಿನ ದರ (Risk Premium) ವನ್ನು ಅವಧಿಯ ಎಲ್ಲಾ ವರ್ಷಗಳಿಗೆ ಪ್ರತ್ಯೇಕವಾಗಿ ನಿರ್ಧರಿಸುತ್ತಾರೆ. ಪ್ರತಿ ವರ್ಷ ಮರಣದರ ಹೆಚ್ಚುತ್ತ ಹೋಗುವದರಿಂದ, ಪ್ರತಿ ವರ್ಷ ಅಪಾಯ ಕಂತಿನ ದರ (Risk Premium) ಹೆಚ್ಚುತ್ತ ಹೋಗುತ್ತದೆ.
2) ನಂತರ ಸ್ಥಿರÀಮಟ್ಟದ ಅಪಾಯ ಕಂತಿನ ದರ (Level  Premium) ವನ್ನು, ಅಂದರೆ ಅದು ಅವಧಿಯ ಎಲ್ಲಾ ವರ್ಷಗಳಿಗೆ ಸಮನಾಗಿ ಇರುವಂತೆ ನಿರ್ಧರಿಸುತ್ತಾರೆ. ಇದು ಎಲ್ಲಾ ವರ್ಷಗಳ ಅಪಾಯ ಕಂತುಗಳ ಒಟ್ಟಾರೆ ಮೊತ್ತದ ಆಧಾರ ಮೇಲೆ ಲೆಕ್ಕ ಮಾಡಿದ ವಾರ್ಷಿಕ ಸರಾಸರಿ ದರವಾಗಿರುತ್ತದೆ.
3) ನಂತರ ನಿವ್ವಳ  ಅಪಾಯ ಕಂತಿನ ದರ (Net  Premium) ವನ್ನು ವಾರ್ಷಿಕ ಅವಧಿಗೆ ಸಂಬಂಧಿಸಿದಂತೆ ನಿರ್ಧರಿಸುತ್ತಾರೆ. ವಿಮೆಯ ಅವಧಿಯ ಪ್ರಾರಂಭದ ವರ್ಷಗಳಲ್ಲಿ; ಸ್ಥಿರಮಟ್ಟದ ಅಪಾಯ ಕಂತಿನ ದರ (Level  Premium), ಆಯಾ ವರ್ಷದ ಅಪಾಯ ಕಂತಿನ ದರ (Risk Premium) ಕ್ಕಿಂತ ಹೆಚ್ಚಾಗಿರುವದರಿಂದ, ವಿಮೆಯ ಅವಧಿಯ ಪ್ರಾರಂಭದ ವರ್ಷಗಳಲ್ಲಿ ಉಳಿಕೆ ಹಣ ದೊರೆಯುತ್ತದೆ. ಈ ಉಳಿಕೆ ಹಣವನ್ನು ಮಾರು ಕಟ್ಟೆಯಲ್ಲಿ ತೊಡಗಿಸುವದರಿಂದ ಬಡ್ಡಿಯ ಆದಾಯ ಸಿಗುತ್ತದೆ. ಈ ಬಡ್ಡಿಯ ಆದಾಯದ ಕಾರಣ ಏಕಮಟ್ಟದ ಅಪಾಯ ಕಂತಿನ ದರ (Level  Premium) ವನ್ನು ಇನ್ನೂ ಕಡಿಮೆ ಮಾಡಬಹದು. ಈ ರೀತಿ ಕಡಿಮೆಗೊಂಡ ಸ್ಥಿರÀಮಟ್ಟದ ಅಪಾಯ ಕಂತಿನ ದರಕ್ಕೆ, ನಿವ್ವಳ ಕಂತಿನ ದರ (Net  Premium)  ಎನ್ನುತ್ತಾರೆ.
4) ನಂತರ ಭಾರ ಹೇರಿಕೆ (Loading)  ಕ್ರಮಗಳನ್ನು ಕೈಕೊಳ್ಳುತ್ತಾರೆ. ಈ ಭಾರ ಹೇರಿಕೆ (Loading) ಗೆ ಪ್ರಮುಖ ಕಾರಣಗಳು. 1) ಆಡಳಿತ ವೆಚ್ಚ, 2) ವೈದ್ಯಕೀಯ ತಪಾಸಣೆ ವೆಚ್ಚ, 3) ಮಾರಾಟ ವೆಚ್ಚ, 4) ಉಳಿತಾಯದ ಹಣ ನೀಡುವದಕ್ಕೆ ತಗಲುವ ವೆಚ್ಚ, 5) ಬೋನಸ್ಸು ನೀಡುವದಕ್ಕೆ ತಗಲುವ ವೆಚ್ಚ,  6) ಕಂಪನಿಗೆ ಲಾಭ ನೀಡುವದಕ್ಕೆ ತಗಲುವ ವೆಚ್ಚ, 6) ಇತರ ವೆಚ್ಚಗಳು.
5) ನಿವ್ವಳ ಕಂತಿನ ದರ (Net  Premium) ದ ಮೇಲೆ, ಭಾರ ಹೇರಿಕೆ (Loading)  ವಿಧಿಸಿದಾಗ ಒಟ್ಟು ಕಂತಿನ ದರ (Gross  Premium) ನಿರ್ಧಾರವಾಗುತ್ತದೆ. ಈ ಒಟ್ಟು ವಿಮಾ ಕಂತಿನ ದರದ ಆಧಾರದ ಮೇಲೆ,  ಒಟ್ಟು ವಾರ್ಷಿಕ ವಿಮಾ ಕಂತನ್ನು (Yearly Gross  Premium) ಹಾಗೂ ಒಟ್ಟು ಏಕ ವಿಮಾ ಕಂತ (Single  Gross  Premium)ನ್ನು ನಿರ್ಧರಿಸುತ್ತಾರೆ. ವಿವಿಧ ನಮೂನೆಯ (ಅಂದರೆ ಮಾಸಿಕ, ತ್ರೈಮಾಸಿಕ, ಅರೆ ವಾರ್ಷಿಕ)  ಅವಧಿಗಳ ಒಟ್ಟು ಕಂತು (Gross  Premium) ಗಳಿಗಾಗಿ, ಅವಶ್ಯಕ ಹೊಂದಾಣಿಕೆಯನ್ನು ಕೈಕೊಳ್ಳಬೇಕಾಗುತ್ತದೆ.
    


No comments:

Post a Comment