Tuesday, September 16, 2014

16 ಸಪ್ಟೆಂಬರ 2014

 ಮಾನವ ಜೀವದ ಮೌಲ್ಯ (Human Life Value ) ವನ್ನು ಆದಾಯ ಸ್ಥಾನ ಪಲ್ಲಟ ಪದ್ಧತಿ (Income Replacement Method ) ಯಲ್ಲಿ ಹೇಗೆ ಅಳೆಯುತ್ತಾರೆ? 


ಮೊದಲು ವ್ಯಕ್ತಿಯೊಬ್ಬನು ಪರಿವಾರದಲ್ಲಿ ತನ್ನ ಅವಲಂಬಿತರಿಗೆ ಸಲ್ಲಿಸುವ ಆರ್ಥಿಕ ಸಹಾಯದ ವಾರ್ಷಿಕ ಪ್ರಮಾಣವನ್ನು ಅಳೆಯುತ್ತಾರೆ. 
ತನ್ನ ಉಳಿದ ಗಳಿಕೆಯ ಅವಧಿಯನ್ನು ಅಳೆಯುತ್ತಾನೆ.
ಹಣದುಬ್ಬರದ ದರ
ಅವಲಂಬಿತರಿಗೆ ಸಲ್ಲಿಸುವ ಆರ್ಥಿಕ ಸಹಾಯದ ವಾರ್ಷಿಕ ಪ್ರಮಾಣವನ್ನು, ತನ್ನ ಉಳಿದ ಗಳಿಕೆಯ ಅವಧಿಗೆ ಪಡೆಯಲು, ಹೂಡಿಕೆ ಮಾಡಬೇಕಾದ ಬಂಡವಾಳವನ್ನು ಲೆಕ್ಕಮಾಡುತ್ತಾರೆ .(ಇದಕ್ಕಾಗಿ ಹೂಡಿಕೆಯ ದರದ ಅಂದಾಜು ಮಾಡಬೇಕಾಗುತ್ತದೆ.)

ಉದಾ : ವ್ಯಕ್ತಿಯ ತಿಂಗಳ ಒಟ್ಟು ಅದಾಯ ------------------------------- - 35,000 ರೂ.
ಟಾಕ್ಸ, ಓಡಾಟ, ವ್ಯಕ್ತಿಗತ ಖರ್ಚು ಕೆಳೆದು ಇಡೀ ಪರಿವಾರಕ್ಕೆ ಸಿಗುವ ನಿವ್ವಳ ಮಾಸಿಕ ಆದಾಯ  – 30,000 ರೂ.      
ಪರಿವಾರದಲ್ಲಿ ತನ್ನನ್ನು ಒಳಗೊಂಡು ಒಟ್ಟು 6 ಜನ ಸದಸ್ಯರಿದ್ದರೆ, ತನ್ನನ್ನು ಬಿಟ್ಟು 5 ಜನ ಸದಸ್ಯರು ಉಳಿಯುತ್ತಾರೆ.

ಈ ಹಣದಲ್ಲಿ ತನ್ನನ್ನು ಬಿಟ್ಟು ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು        – 25,000 ರೂ. 
ಉಳಿದ ಗಳಿಕೆಯ ಅವಧಿ (ಉದಾಹರಣೆಗೆ : ಗಳಿಕೆ ನಿಲ್ಲುವ ವಯಸ್ಸು 60 – ಈಗಿನ ವಯಸ್ಸು 35 )   - 25 ವರ್ಷಗಳು
ಹಣದುಬ್ಬರದ ಅಂದಾಜು ವಾರ್ಷಿಕ ದರ                                      - 5%
ಹೂಡಿಕೆಯಲ್ಲಿ ಅಂದಾಜು ಗಳಿಕಯ ವಾರ್ಷಿಕ ದರ                               - 8%

ಇಲ್ಲಿ 1 ನೆಯ ವರ್ಷದಲ್ಲಿ ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು : 25000 X 12 = 300,000 ರೂ.      
ಇಲ್ಲಿ 2 ನೆಯ ವರ್ಷದಲ್ಲಿ ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು : 26250 X 12 = 315,000 ರೂ.      
ಇಲ್ಲಿ 3 ನೆಯ ವರ್ಷದಲ್ಲಿ ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು : 27562.5 X 12 = 330,750 ರೂ.      

ಹಾಗಾದರೆ ಪ್ರತಿ ತಿಂಗಳಿಗೆ 25000 ರೂ. ಆದಾಯವನ್ನು ಪ್ರತಿ ವರ್ಷ 5% ಹೆಚ್ಚಿಸುತ್ತ, ಮುಂದಿನ 25 ವರ್ಷಗಳ ವರೆಗೆ  ಪಡೆಯಬೇಕಾದರೆ; 8% ಅಂದಾಜು ಗಳಿಕಯ ವಾರ್ಷಿಕ ದರದಲ್ಲಿ, ಹೂಡಿಕೆ ಮಾಡಬೇಕಾದ ಬಂಡವಾಳ– ರೂ 54,59,741.  
ಅಂದರೆ ಇಲ್ಲಿ ಮಾನವ ಜೀವದ ಮೌಲ್ಯ ರೂ. 54,59,741 ಇರುತ್ತದೆ. ಈ ಪದ್ಧತಿಯಲ್ಲಿ  ಮಾನವ ಜೀವದ ಮೌಲ್ಯ : 
 1)ಪ್ರಾರಂಭದಲ್ಲಿ ಪರಿವಾರದ ಅವಲಂಬಿತರಿಗಾಗಿ ತಗಲುವ ಮಾಸಿಕ ಖರ್ಚು. 2)ಉಳಿದ ಗಳಿಕೆಯ ಅವಧಿ.     
 3) ಹೂಡಿಕೆಯಲ್ಲಿ ಅಂದಾಜು ಗಳಿಕಯ ವಾರ್ಷಿಕ ದರ. 4) ಹಣದುಬ್ಬರದ ಅಂದಾಜು ವಾರ್ಷಿಕ ದರ.                            
 ಇವುಗಳ ಮೇಲೆ ಅವಲಂಬಿತವಾಗಿರುತ್ತದೆ.


No comments:

Post a Comment