Sunday, August 31, 2014

31 ಅಗಷ್ಟ 2014

 ನೈತಿಕ ಅಪಾಯವರ್ಧಕ ವರದಿ (Moral Hazard Report) ಯ ಪಾತ್ರ ಏನು?

ಕಣ್ಣಿಗೆ ಕಾಣುವ ಭೌತಿಕ ಅಪಾಯ ವರ್ಧಕ (Physical Hazard) ಗಳನ್ನು ಆಧಿಕೃತ ವೈದ್ಯರ/ಏಜೆಂಟರ ವರದಿಗಳಿಂದ ಸುಲಭವಾಗಿ ಪತ್ತೆ ಹಚ್ಚಬಹುದು. ಉದಾ : ಹಿರಿಯ ವಯಸ್ಸು, ಅಪಾಯಕಾರಿ ಉದ್ಯೋಗ, ಮಹಿಳಾ ಜೀವಿಗಳು, ಕೆಟ್ಟ ಚಟಗಳು, ಅಪಾಯಕರೀ ಹವ್ಯಾಸಗಳು, ಅನಾರೋಗ್ಯಕರ ವಾಸ ಸ್ಥಾನ, ದೈಹಿಕ ಏರು ಪೇರು, ಅನಾರೋಗ್ಯ, ಅಂಗವಿಕಲತೆ,  ಕೌಟುಂಬಿಕ ಅನಾರೋಗ್ಯದ ಹಿನ್ನೆಲೆ, 11) ವ್ಯಕ್ತಿಗತ ಅನಾರೋಗ್ಯದ ಇತಿಹಾಸ. ಇತ್ಯಾದಿಗಳನ್ನು;  

ಆದರೆ ಕಣ್ಣಿಗೆ ಕಾಣದ ಅಂದರೆ ನೈತಿಕ ಅಪಾಯವರ್ಧಕ (Moral Hazard)  ಗಳೆಂದು ಕರೆಸಿಕೊಳ್ಳುವ; ಕುಡಿತ/ಜೂಜು ಮನೋಭಾವ, ಅಲಕ್ಷ್ಯತನ, ಸ್ವಾರ್ಥಭಾವ, ಲಾಭಕೋರತನ, ದುರಾಶೆÉ, ವಂಚನೆ, ಅನೈತಿಕ ವಿಚಾರಧಾರೆ, ಇತ್ಯಾದಿಗಳನ್ನು, ಪತ್ತೆಹಚ್ಚಲು ಗ್ರಾಹಕರ ತೀರ ಸಮೀಪದವರು ಅಥವಾ ತೀರ ಅನುಭವಸ್ಥ ಅಧಿಕಾರಿಗಳಿಂದ ವಿಶೇಷ ವರದಿಯನ್ನು ಪಡೆಯುತ್ತಾರೆ. ಈ ವರದಿಗೆ ನೈತಿಕ ಅಪಾಯವರ್ಧಕ ವರದಿ (Moral Hazard Report) ಎಂದು ಕರೆಯುತ್ತಾರೆ. ವಿಮಾಂಕನದಲ್ಲಿ ಈವರದಿಗೆ ವಿಶೇಷ ಮಹತ್ವವಿದೆ.

Saturday, August 30, 2014

30 ಅಗಷ್ಟ 2014

ವಿಮಾಂಕನದಲ್ಲ್ಲಿ ಏಜೆಂಟನ ರಹಸ್ಯ ವರದಿ (Agent’s Confidencial Report)ಯ ಪಾತ್ರ ಏನು?

ಉತ್ತರ : ವಿಮಾ ಸಂಸ್ಥೆಯ ವಿರುದ್ಧ ಅನುಚಿತ ಆಯ್ಕೆಯನ್ನು ತಡೆಯಲು ಗ್ರಾಹಕನ ಬಗ್ಗೆ ವಿಮಾಕಂಪನಿಗಳು ಕೇಳಿದ ಮಾಹಿತಿಗಳನ್ನು ಏಜೆಂಟನು ರಹಸ್ಯ ವರದಿ ಮುಖಾಂತರ ಒದಗಿಸುತ್ತಾನೆ. ವರದಿಯ ಕೊನೆಯ ಭಾಗದಲ್ಲಿ, ‘ಗ್ರಾಹಕನು ವಿಮೆ ಪಡೆಯಲು ಅರ್ಹನೆ?’ ಎಂಬ ಪ್ರಶ್ನೆಗೆ ಏಜೆಂಟನು ನೇರ ಉತ್ತರ ನೀಡಬೇಕಾಗುತ್ತದೆ. ಏಜೆಂಟನ ಉತ್ತರ ಸಕಾರಾತ್ಮಕವಾಗಿದ್ದರೆ, ವಿಮಾಸಂಸ್ಥೆಯು ವಿಮಾಕೋರಿಕೆಯನ್ನು ಪರಿಗಣಿಸುತ್ತದೆ. ಅಂತೆಲೇ ಏಜೆಂಟನನ್ನು ಪ್ರಾಥಮಿಕ ವಿಮಾಂಕನಾಧಿಕಾರಿ ಎಂದು ಕರೆಯುತ್ತಾರೆ.



Friday, August 29, 2014

29 ಅಗಷ್ಟ 2014

 ವಿಮಾಂಕನದಲ್ಲ್ಲಿ ಏಜೆಂಟನ ಪಾತ್ರ (Agent’s Role).   ಏನು?

 ಗ್ರಾಹಕನಿಗೆ ಏಜೆಂಟನಿಗೆ ಗ್ರಾಹಕನಿಗೆ ತುಂಬಾ ಹತ್ತಿರದವ ಹಾಗೂ ಪರಿಚಿತನು ಆಗಿರುವದರಿಂದ, ಗ್ರಾಹಕನ ಬಗ್ಗೆ ಬೇಕಾಗುವ ಎಲ್ಲಾ ಭೌತಿಕ ಮಾಹಿತಿಗಳನ್ನು ಸಂಗ್ರಹಿಸಿ ವಿಮಾಂಕನಾ ಅಧಿಕಾರಿಗೆ ನೀಡುವದು ಏಜೆಂಟನ ಕರ್ತವ್ಯವಾಗಿರುತ್ತದೆ.


Thursday, August 28, 2014

28 ಅಗಷ್ಟ 2014

ವೈದ್ಯಕೀಯ ಪರೀಕ್ಷಾ ವರದಿ (Medical Examination Report)  ಯನ್ನು ಯಾವಾಗ ಮತ್ತು ಯಾಕೆ ಕೇಳುತ್ತಾರೆ?

 ಕೆಳಗಿನ ಸಂದರ್ಭಗಳಲ್ಲಿ ವೈದ್ಯಕೀಯ ಪರೀಕ್ಷಾ ವರದಿಯನ್ನು ಕೇಳುತ್ತಾರೆ.
1) ಕೋರಿಕೆ ಪತ್ರದಲ್ಲಿ ಅಸಹಜ ಆರೋಗ್ಯ ಸ್ಥಿತಿಬಗ್ಗೆ ಸಂಶಯ ಕಂಡುಬಂದರೆ,
2) ವಿಮಾ ರಾಶಿ ತುಂಬಾ ದೊಡ್ಡದು ಆಗಿದ್ದರೆ,
3) ವಿಮಾ ಜೀವಿಯ ವಯಸ್ಸು ತುಂಬಾ ಹೆಚ್ಚಾಗಿದ್ದರೆ.
ವಿಮಾ ಸಂಸ್ಥೆಯ ವಿರುದ್ಧ ಅನುಚಿತ ಆಯ್ಕೆಯನ್ನು ತಡೆಯಲು ವೈದ್ಯಕೀಯ ಪರೀಕ್ಷಾವರದಿಯನ್ನು ಕೇಳುತ್ತಾರೆ.



Wednesday, August 27, 2014


27 ಅಗಷ್ಟ 2014

 ಏಜೆಂಟನ ಷರಾ (Agent’s Remark)  ಎಂದರೇನು?

ಏಜೆಂಟನ ಷರಾದಲ್ಲಿ ಕೇಳಲಾಗುವ ಮಾಹಿತಿಗಳು, ವಿಮಾ ಜೀವಿಯ ಜೀವನ ಪದ್ಧತಿ, ಹವ್ಯಾಸ, ರೂಢಿಗಳು, ಆತನ ಆರ್ಥಿಕ ಸ್ಥಿತಿಗತಿಗಳು/ಯೋಗ್ಯತೆಗಳು.


Tuesday, August 26, 2014


26 ಅಗಷ್ಟ 2014

ವೈದ್ಯಕೀಯ ಮಾಹಿತಿ (Medical Information)ಗಳು ಯಾವುವು?

ಉತ್ತರ : ವೈದ್ಯಕೀಯ ಮಾಹಿತಿಗಳು ಯಾವುವೆಂದರೆ, ವಿಮಾಜೀವಿಯ ಸಧ್ಯದ ವೈದ್ಯಕೀಯ ಸ್ಥಿತಿ, ಹಿಂದಿನ ವೈದ್ಯಕೀಯ ವರದಿಗಳು; ಆತನ ಎತ್ತರ, ತೂಕ, ಎದೆಯ ಸುತ್ತಳತೆ, ಹೊಟ್ಟೆಯ ಸುತ್ತಳತೆ, ಇತ್ಯಾದಿಗಳು. ಆತನ ಹಾಗೂ ಆತನ ಕುಟುಂಬದ ವೈದ್ಯಕೀಯ ಇತಿಹಾಸದ ಮಾಹಿತಿ ಕೂಡ ಕೇಳಲಾಗುತ್ತದೆ. ವಿಮಾಂಕನ ಅಧಿಕಾರಿ ಬಯಸಿದರೆ, ವಿಮಾ ಜೀವಿಯ ಸಧ್ಯದ ಆರೋಗ್ಯ ವರದಿಯನ್ನು ಕೇಳಲಾಗುತ್ತದೆ.



Monday, August 25, 2014



25 ಅಗಷ್ಟ 2014

ವ್ಯಕ್ತಿಗತ ಮಾಹಿತಿ (Personal Information) ಗಳು ಯಾವುವು?

ಉತ್ತರ : ವ್ಯಕ್ತಿಗತ ಮಾಹಿತಿಗಳು ಯಾವುವೆಂದರೆ, ಕೋರಿಕೆದಾರನ (ಅಂದರೆ ವಿಮಾಜೀವಿಯ) ಹೆಸರು, ವಿಳಾಸ, ವಾರ್ಷಿಕ ಆದಾಯ, ತಿಂಗಳ ವೆಚ್ಚದ ಲೆಕ್ಕ, ಉದ್ಯೋಗ, ವೈವಾಹಿಕ ಸ್ಥಿತಿ, ಇತ್ಯಾದಿ.
ಒಂದು ವೇಳೆ ವಿಮಾ ಕೋರಿಕೆದಾರ, ವಿಮಾಜೀವಿ, ಬೇರೆಯವರು ಆಗಿದ್ದರೆ, ಮೇಲಿನ ಎಲ್ಲಾ ಮಾಹಿತಿ ವಿಮಾ ಜೀವಿಗೆ ಸಂಬಂಧಿಸಿದಂತೆ ಕೇಳಲಾಗುತ್ತದೆ. ಜೊತೆಗೆ ವಿಮಾ ಕೋರಿಕೆದಾರನ ಹೆಸರು, ವಿಳಾಸ, ಇತ್ಯಾದಿಗಳನ್ನೂ ಕೇಳಲಾಗುತ್ತದೆ.


Sunday, August 24, 2014


24 ಅಗಷ್ಟ 2014

ಪ್ರಪೋಜಲ್ ಫಾರ್ಮ (ಕೋರಿಕೆಪತ್ರ)ದಲ್ಲಿ ಯಾವ ಮಾಹಿತಿಗಳು ದೊರಕುತ್ತವೆ? 

ಪ್ರಪೋಜಲ್ ಫಾರ್ಮ (ಕೋರಿಕೆಪತ್ರ) ದಲ್ಲಿ ಕೆಳಗಿನ ಮಾಹಿತಿಗಳು ದೊರಕುತ್ತವೆ.
1)ವ್ಯಕ್ತಿಗತ ಮಾಹಿತಿಗಳು. (Personal Information) 2)ವೈದ್ಯಕೀಯ ಮಾಹಿತಿಗಳು (Medical Information), 3)ಏಜೆಂಟನ ಷರಾ (ರಿಮಾರ್ಕ) (Agent’s Remark).      


Saturday, August 23, 2014


23 ಅಗಷ್ಟ 2014

ವಿಮಾಂಕನಕ್ಕೆ ಬೇಕಾಗುವ ಮಾಹಿತಿ ಪಡೆಯಲು ಕೇಳಲಾಗುವ ದಾಖಲಾತಿಗಳು ಯಾವುವು?

ವಿಮಾಂಕನಕ್ಕೆ ಬೇಕಾಗುವ ಮಾಹಿತಿ ಪಡೆಯಲು ಕೇಳಲಾಗುವ ದಾಖಲಾತಿಗಳು : 1) ಕೋರಿಕೆ ಫಾರ್ಮ(Proposal form), 2) ಆರೋಗ್ಯ ತಪಾಸಣಾ ವರದಿ (Medical Examination Report), 3) ವಿಮಾ ಏಜೆಂಟನ ವರದಿ (Agent’s Report), 4) ಹೆಚ್ಚುವರಿ ಮಾಹಿತಿಗಳ ಪ್ರಶ್ನಾವಳಿಗಳು (dditional Information Questionnaire),  5) ಕರ ಸಲಹೆಗಾರರ/ಅಧಿಕಾರಿಗಳ ವರದಿ ( Report of Income Tax Consultant/Authoriy) 

Friday, August 22, 2014


22 ಅಗಷ್ಟ 2014

ವಿಮಾಂಕನದಲ್ಲ್ಲಿ ಅಪಾಯ ಸ್ವೀಕೃತಿಯ ನಿರ್ಣಯ ತೆಗೆದುಕೊಂಡ ನಂತರ ವಿಮಾಕಂತಿನ ನಿರ್ಧಾರ ಹೇಗೆ ಜರುಗುತ್ತದೆ?

 ವಿಮಾಂಕನದಲ್ಲ್ಲಿ ಅಪಾಯ ಸ್ವೀಕೃತಿಯ ನಿರ್ಣಯ ತೆಗೆದುಕೊಂಡ ನಂತರ, ಸದರೀ ಅಪಾಯದ ಮಟ್ಟವನ್ನು ಗುರುತಿಸಲಾಗುತ್ತದೆ. ಅಂದರೆ ವಿಮಾಕೋರಿಕೆಯ ಅಪಾಯದ ವರ್ಗವನ್ನು ಗುರುತಿಸಲಾಗುತ್ತದೆ.
ಅಂದರೆ ಅಪಾಯವು ಕಡಿಮೆ ಮಟ್ಟದ್ದೋ? ಸಾಮಾನ್ಯ ಮಟ್ಟದ್ದೋ? ಹೆಚ್ಚಿನ ಮಟ್ಟದ್ದೋ? ಏನೆಂಬುದನ್ನು ಕಂಡುಹಿಡಿಯಲಾಗುತ್ತದೆ. ಇದಕ್ಕೆ ಅಪಾಯ ವರ್ಗೀಕರಣ ಎಂದೆನ್ನುತ್ತಾರೆ. ಅಪಾಯ ವರ್ಗೀಕರಣ ಮಾಡಿದಮೇಲೆ, ಆ ವರ್ಗಕ್ಕೆ ಸಂಬಂಧಿಸಿದ ವಿಮಾದರವನ್ನು ಗೊತ್ತುಪಡಿಸಲಾಗುತ್ತದೆ.

Thursday, August 21, 2014



21 ಅಗಷ್ಟ 2014

ವಿಮಾಂಕನದಲ್ಲ್ಲಿ ನಿರ್ಣಯ ತೆಗೆದುಕೊಳ್ಳಲು ಯಾವುದಾದರೂ ಕಾಲಮಿತಿ ಇದೆಯಾ?

 ಆಯ್.ಆರ್.ಡಿ.ಏ. ಯ ನಿಯಮಾವಳಿಗಳ ಪ್ರಕಾರ ವಿಮಾಕೋರಿಕೆ ಹಾಗೂ ಸಂಬಂಧಿಸಿದ ಎಲ್ಲಾ ಮಾಹಿತಿಗಳು ತಲುಪಿದ 15 ದಿನಗಳೊಳಗೆ ವಿಮಾಂಕನದ ನಿರ್ಣಯ ತಿಳಿಸಬೇಕು.



Wednesday, August 20, 2014


20 ಅಗಷ್ಟ 2014

 ಅಪಾಯದ ವಿಶ್ಲೇಷಣೆಯ ನಂತರ ವಿಮಾಂಕನ ಅಧಿಕಾರಿಯು ತೆಗೆದುಕೊಳ್ಳಬಹುದಾದ ನಿರ್ಣಯಗಳ ನಮೂನೆಗಳು ಯಾವುವು?

 ವಿಮಾಕೋರಿಕೆಯನ್ನು (ಅಪಾಯವನ್ನು) ಒಪ್ಪಲು ಕೆಳಗಿನ ನಮೂನೆಯ ನಿರ್ಣಯಗಳನ್ನು ವಿಮಾಂಕನ ಅಧಿಕಾರಿಯು ತೆಗೆದುಕೊಳ್ಳಬಹುದು.
1) ವಿಮಾಕೋರಿಕೆಯನ್ನು ಸಾಮಾನ್ಯ ದರದಲ್ಲಿ ಸ್ವೀಕರಿಸುವದು, 
2) ವಿಮಾಕೋರಿಕೆಯನ್ನು ಹೆಚ್ಚುವರಿ ದರದಲ್ಲಿ ಸ್ವೀಕರಿಸುವದು,
3) ವಿಮಾಕೋರಿಕೆಯನ್ನು ಸಾಮಾನ್ಯ ದರದಲ್ಲಿ, ಲೀನ್(Lien) (ಹೊರೆಯ ಭಾರ) ದೊಂದಿಗೆ ಸ್ವೀಕರಿಸುವದು,
4) ವಿಮಾಕೋರಿಕೆಯನ್ನು ಬದಲೀ ಕರಾರು/ಷರತ್ತುಗಳೊಂದಿಗೆ ಅನುಸಾರವಾಗಿ ಸ್ವೀಕರಿಸುವದು,
5) ವಿಮಾಕೋರಿಕೆಯನ್ನು ನಿಶ್ಚಿತ ಅಥವಾ ಬದಲೀ ನಿಯಮ/ತಿದ್ದುಪಡಿಗಳೊಂದಿಗೆ ಸ್ವೀಕರಿಸುವದು,
6) ವಿಮಾಕೋರಿಕೆಯ ನಿರ್ಣಯವನ್ನು ಕೆಲ ಅವಧಿಗೆ ಮೂಂದೂಡುವದು (Postponement),
7) ವಿಮಾಕೋರಿಕೆಯನ್ನು ತಿರಸ್ಕರಿಸುವದು(Rejection).

Tuesday, August 19, 2014


19 ಅಗಷ್ಟ 2014
ಪ್ರಶ್ನೆ : ವಿಮಾಂಕನದಲ್ಲ್ಲಿ ಅನುಚಿತ ಆಯ್ಕೆ (Adverse Selection), ಎಂದರೆ ಏನು?
ಉತ್ತರ : ಒಂದು ಗುಂಪು ಸಾಮಾನ್ಯವಾಗಿ ಅನುಭವಿಸುವ ಅಪಾಯದ ಮಟ್ಟವನ್ನು ಮೀರಿ ಹೆಚ್ಚು ಅಪಾಯವನ್ನು ನೀಡುವ ಗ್ರಾಹಕರನ್ನು ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆ ಮಾಡುವದಕ್ಕೆ, ಅನುಚಿತ ಆಯ್ಕೆ ಎನ್ನುತ್ತಾರೆ.


Monday, August 18, 2014


18 ಅಗಷ್ಟ 2014

ವಿಮಾಂಕನದಲ್ಲ್ಲಿ ಅಪಾಯ ವಿಶ್ಲೇಷಣೆ (Analysis of Risk)ಯ ಉದ್ಯೇಶ ಏನು?

ವಿಮಾಂಕನದಲ್ಲ್ಲಿ ಮಾಹಿತಿ ವಿಶ್ಲೇಷಣೆಯ ಉದ್ಯೇಶವೇನಂದರೆ,
1) ಸಂಭವನೀಯ ಅಪಾಯದ ಗರಿಷ್ಠ ಮಟ್ಟವನ್ನು ಕಂಡು ಹಿಡಿಯುವದು.
2) ಸಂಭವನೀಯ ವಂಚನೆಯ ಉದ್ಯೇಶವನ್ನು ಪತ್ತೆ ಹಚ್ಚುವದು.
ಮಾಹಿತಿ ವಿಶ್ಲೇಷಣೆಯ ಪ್ರಮುಖ ಉದ್ಯೇಶ : ಅನುಚಿತ ಆಯ್ಕೆಯಿಂದ ವಿಮಾಸಂಸ್ಥೆಯಿಂದ ರಕ್ಷಿಸುವದು.


Sunday, August 17, 2014


17 ಡಿಸೆಂಬ 2014 

 ಉಳಿತಾಯದಲ್ಲಿ ಜೀವನದ  ಯಾವ ವಿವಿಧ ಅವಸ್ಥೆಗಳು ಪರಿಣಾಮ ಬೀರುತ್ತವೆ?

   
1) ವಯಸ್ಸು (age):
ಚಿಕ್ಕ ವಯಸ್ಸಿನಲ್ಲಿ ಸಾಮಾನ್ಯವಾಗಿ ಪರಿವಾರದ ಹೊಣೆ ಇರುವದಿಲ್ಲಾ.
ದೊಡ್ಡವನಾದಂತೆ ಗಳಿಕೆ ಹಾಗೂ ಪರಿವಾರದ ಹೊಣೆ, ಎರಡೂ ಹೆಚ್ಚುತ್ತ ಹೋಗುವವು,
ಮಧ್ಯಮ ವಯಸ್ಸು ದಾಟಿದ ಮೇಲೆ, ಆರೋಗ್ಯದ ಮೇಲೆ ಒತ್ತಡ ಹೆಚ್ಚಾಗುತ್ತದೆ,
ನಿವೃತ್ತಿಯ ನಂತರ ದುಡಿಮೆಯ ಗಳಿಕೆ ನಿಮತು ಹೋಗುತ್ತದೆ. 

2) ವೈವಾಹಿಕ ಸ್ಥಿತಿ (Marriage Status)  :
ಪರಿವಾರದ ಹೊಣೆ  ದಂಪತಿಗಳಿಬ್ಬರ ಒಟ್ಟು ಗಳಿಕೆಯ ಮೇಲೆ ನಿರ್ಧಾರವಾಗುತ್ತದೆ.
ಪರಿವಾರದ ಉಳಿತಾಯ ಸಾಮಥ್ರ್ಯ  ದಂಪತಿಗಳಿಬ್ಬರ ಒಟ್ಟು ಗಳಿಕೆಯ ಮೇಲೆ ನಿರ್ಧಾರವಾಗುತ್ತದೆ.
ಜೀವನ ಸಂಗಾತಿ/ಮಕ್ಕಳು/ಅವಲಂಬಿತರ ಭವಿಷ್ಯ ಪ್ರಥಮ ಆದ್ಯತೆ ಪಡೆಯುತ್ತದೆ. 
ಸ್ವಂತ ಮನೆ/ಕಾರು/ಕೌಟುಂಬಿಕ ಪ್ರವಾಸ/ನಿವೃತ್ತಿಜೀವನ ನಿರ್ವಹಣೆಯ ಚಿಂತೆಗಳಿಗೆ  ನಂತರದ ಆದ್ಯತೆ.

3) ಉದ್ಯೋಗ (employment) ರೀತಿ. 
ಸರಕಾರೀ/ಸಾರ್ವಜನಿಕ ಕ್ಷೇತ್ರ (Government/public sector) ದ ನೌಕರಿ.
ಜೀವನದ ಆರ್ಥಿಕ ನಿರ್ವಹಣೆಯ ಬಹುದೊಡ್ಡ ಜವಾಬ್ದಾರಿಯನ್ನು, ನೌಕರಿಯ ಮಾಲಿಕನೇ ಮಾಡಿರುತ್ತಾನೆ. ಅವಧಿ ವಿಮೆ/ಆರ್ಥಿಕವಿಮೆ/ವರ್ಷಾಶನಗಳಿಗೆ ಅವರು ನೀಡಿದ ಸೌಲಭ್ಯಗಳಗಿಂತ ಇನ್ನೂ ಹೆಚ್ಚಿನ ಸೌಲಭ್ಯಗಳು ಬೇಕೆನಿಸಿದರೆ, ಅವಶ್ಯಕ ಉಳಿತಾಯಗಳನ್ನು ಮಾಡಬೇಕು. ಮಕ್ಕಳ ಶಿಕ್ಷಣ, ಮದುವೆ, ಮನೆ, ಕಾರು, ಇತ್ಯಾದಿಗಳಗಾಗಿ ಎಲ್ಲರಂತೆ ಉಳಿತಾಯ ಮಾಡಬೇಕು.
ಖಾಸಗೀ ಕ್ಷೇತ್ರದ (private  sector)  ನೌಕರಿ.
ತುರ್ತು ನಿಧಿ, ವಿಮೆಯ ಜರೂರತೆ, ಮಕ್ಕಳ ಶಿಕ್ಷಣ, ಮದುವೆ, ಮನೆ, ಕಾರು, ನಿವೃತ್ತಿ ಜೀವನಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ತನ್ನ  ಸ್ವಂತದ ಉಳಿತಾಯಗಳಿಂದಲೇ ಪೂರೈಸಿಕೊಳ್ಳ ಬೇಕು.
ಚಿಕ್ಕ ಕಾಲಾವಧಿ (small period) ಯ ನೌಕರಿ.
ತುರ್ತು ನಿಧಿ, ವಿಮೆಯ ಜರೂರತೆ, ಮಕ್ಕಳ ಶಿಕ್ಷಣ, ಮದುವೆ, ಮನೆ, ಕಾರು, ನಿವೃತ್ತಿ ಜೀವನಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು, ಚಿಕ್ಕ ಕಾಲದ ಉಳಿತಾಯಗಳಿಂದಲೇ ಪೂರೈಸಿಕೊಳ್ಳಬೇಕು. ಒಂಟಿ ಕಂತಿನ/ನಿಯಮಿತ ಕಂತಿನ ವಿಮೆ ಹಾಗೂ ವರ್ಷಾಶನಗಳಿಗೆ ಮೊರೆ ಹೋಗಬೇಕಾಗುವದು.
ಸ್ವಂತ ದುಡಿಮೆ (Self  employed). 
ದುಡಿಮೆಯಲ್ಲಿ ಏರು ಪೇರುಗಳಾಗುವದರಿಂದ, ತುರ್ತು ನಿಧಿ, ವಿಮೆಯ ಜರೂರತೆ, ಮಕ್ಕಳ ಶಿಕ್ಷಣ, ಮದುವೆ, ಮನೆ, ಕಾರು, ನಿವೃತ್ತಿ ಜೀವನಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಒಂಟಿ ಕಂತಿನ ವಿಮೆ ಹಾಗೂ ವರ್ಷಾಶನಗಳಿಗೆ ಮೊರೆ ಹೋಗಬೇಕಾಗುವದು. 
ನಿರುದ್ಯೋಗ (Un employed).  
ತುರ್ತುನಿಧಿಯಿಂದ ಜೀವನ ನಿರ್ವಹಿಸಬೇಕಾಗುವದು. ಪಾಲಿಸಿಗಳಮೇಲೆ ಸಾಲ ತೆಗೆದುಕೊಳ್ಳ ಬಹುದು. ವಿಮಾ ಕಂತುಗಳನ್ನು ನೀಡಲಾಗದಿದ್ದರೆ, ನಿಂತು ಹೋದ ಪಾಲಿಸಿಗಳನ್ನು ರಿವೈವಲ್ ಮಾಡಬಹುದು. ಅವಧಿ/ಆರೋಗ್ಯವಿಮೆ ಪಾಲಸಿಗಳನ್ನು ಲ್ಯಾಪ್ಸ್ ಆಗದಂತೆ ನೋಡಿಕೊಳ್ಳ ಬೇಕು.
4) ಆರೋಗ್ಯ ಸ್ಥಿತಿ (Health issues).
ವಯಸ್ಸು ಹೆಚ್ಚಾದಂತೆ ಆರೋಗ್ಯದ ಅಪಾಯ ದೊಡ್ಡದಾಗುತ್ತ ಹೋಗುತ್ತದೆ.
ವಯಸ್ಸು ಹೆಚ್ಚಾದಂತೆ ಆರೋಗ್ಯ ವಿಮೆ ಖರೀದಿಸುವದು ಕಷ್ಟಕಕರವಾಗುತ್ತದೆ..
ವೃತ್ತಿಯ ರೀತಿ, ಒತ್ತಡ, ಇನ್ನಿತರ ಕಾರಣಗಳೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ.

5) ಆದಾಯ ಹಾಗೂ ವೆಚ್ಚ (Income & Expenditure).
ಆದಾಯ ಹಾಗೂ ವೆಚ್ಚಗಳು ಉಳಿಕೆ ಹಣವನ್ನು ನಿರ್ಧರಿಸುತ್ತದೆ.
ಆದಾಯ ಹೆಚ್ಚಳಕ್ಕೆ ವೃತ್ತಿ ಕೌಶಲ್ಯಗಳನ್ನು ಹೆಚ್ಚಿಸಿ ಕೊಳ್ಳಬೇಕು.
ವೆಚ್ಚ ವ್ಯಕ್ತಿಯ ಜೀವನ ಶೈಲಿಯ ಮೇಲೆ ಅವಲಂಬಿತವಾಗಿದೆ.
ವೆಚ್ಚಗಳ ಆದ್ಯತೆಯು ವ್ಯಕ್ತಿಯ ಮಾನಸಿಕತೆಯ ಮೇಲೆ ನಿರ್ಧಾರವಾÀಗುತ್ತದೆ.
ಭವಿಷ್ಯದಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ಮಾಡುವ ವೆಚ್ಚಕ್ಕೆ ಹೂಡಿಕೆಯೆಂದೇ ಕರೆಯಬೇಕು.

6) ಸಾಲ ಹಾಗೂ ಸೊತ್ತುಗಳು (Assets & Liabilities).
ಸಾಲ ಬಡ್ಡಿಯ ವೆಚ್ಚಕ್ಕೆ ಕಾರಣವಾದರೆ, ಸಾಲದಿಂದ ಗಳಿಸಿದ ಆಸ್ತಿ ಆದಾಯತರುತ್ತದೆ.
ಆದಾಯ ಗಳಿಸುವ ಸಾಲಗಳು ತೊಂದರೆ ನೀಡುವದಿಲ್ಲ..
ಆದಾಯ ಗಳಿಸದ ಆಸ್ತಿ ನಿರುಪಯೋಗಿ. 
ಆಸ್ತಿ/ಸಾಲಗಳ ಗುಣಮಟ್ಟವನ್ನು ಕಾಲಾನುಕಾಲಕ್ಕೆ ಪರಿಶೀಲಿಸುವದು ಅತ್ಯವಶ್ಯಕ.
ಸಾಲದ ಆಸ್ತಿಯ ಮೇಲೆ, ಸಾಲದ ಹಣದ ಮೊತ್ತಕ್ಕೆ ವಿಮೆ ಅತ್ಯವಶ್ಯವಾಗಿದೆ.

7) ವಿವಾಹ ವಿಚ್ಛೇದನ (divorce). /ಜೀವನ ಸಂಗಾತಿಯಿಂದ ಪ್ರತ್ಯೇಕವಾಗಿ ವಾಸಿಸುವದು(seperation). /ಜೀವನ ಸಂಗಾತಿಯ ಮರಣ (death of spouse).
ಪರಿವಾರದ ಆರ್ಥಿಕ ಧ್ಯೇಯಗಳು ಬದಲಾಗುವವು. 
ಪ್ರಸಕ್ತ ಹೂಡಿಕೆಗಳನ್ನು ಮರುಪರಿಶೀಲಿಸಬೇಕಾಗುತ್ತದೆ.
ಅವಲಂಬಿತ ಮಕ್ಕಳ ಸಂರಕ್ಷಣೆಗೆ ಹೆಚ್ಚಿನ ವೆಚ್ಚ ತಗಲಬಹುದು.
ಆದಾಯ ವೃದ್ಧಿ ಕಠಿಣವಾಗುವದು.
ಹೂಡಿಕೆಯ ಸಾಮಥ್ರ್ಯ ಕುಗ್ಗುವದು.
ಸಂಗಾತಿಯ ಮರಣದಿಂದ, ಸಂಗಾತಿಯ ಆಸ್ತಿಗೆ ಒಡೆತನ ದೊರಕುವದರಿಂದ, ಆಸ್ತಿ ನಿರ್ವಹಣೆಯ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ.

Saturday, August 16, 2014




16 ಅಗಷ್ಟ 2014

 ವಿಮಾಂಕನದಲ್ಲ್ಲಿಯ ವಿವಿಧ ಘಟ್ಟಗಳು ಯಾವುವು?

 1)ಮಾಹಿತಿ ಸಂಗ್ರಹ (Collection of Information)  , 2) ಅಪಾಯ ವಿಶ್ಲೇಷಣೆ (Analysis of Risk), 3) ಅಪಾಯಗಾತ್ರ ನಿರ್ಧಾರ (Estimation of Risk), 4) ಅಪಾಯ ಸಾಧ್ಯತೆಯ ಅಳತೆ (Estimation of Risk probabaility). 5) ಅಪಾಯ ಸ್ವೀಕೃತಿಯ ನಿರ್ಣಯ (Decision for acceptance of Risk), 6) ವಿಮಾ ಕಂತನ್ನು ಅಳೆಯಲು ಅಪಾಯದ ವರ್ಗೀಕರಣ(Risk Classification).
     (ಇಲ್ಲಿ ಅಪಾಯವು ವಿಮಾರಕ್ಷಿತನಿಗೆ ಸಂಬಂಧಿಸಿರುತ್ತದೆ; ವಿಮಾ ಕೋರಿಕೆದಾರನಿಗೆ ಅಲ್ಲಾ.)


Friday, August 15, 2014

15 ಅಗಷ್ಟ 2014

 ವಿಮಾಂಕನದ ವಿಧಾನ ಹೇಗಿರುತ್ತದೆ? 

 ವಿಮಾಂಕನದ ವಿಧಾನದಲ್ಲಿ, ವಿಮಾಂಕನಾಧಿಕಾರಿಯು ಕೆಳಗಿನ ಸಂಗತಿಗಳಿಗೆ ಹೊಣೆಗಾರನಾಗಿರುತ್ತಾನೆ.  
       1)ಅಪಾಯದ ವರ್ಗೀಕರಣ (Risk Classification), 2)ಅಪಾಯದ ವಿಶ್ಲೇಷಣೆ (Risk Analysis), 3)ಅಪಾಯದ ಆಯ್ಕೆ(Risk selection) .




Thursday, August 14, 2014

14 ಅಗಷ್ಟ 2014

 ಜೀವ ವಿಮೆಗೆ ಸಂಬಂಧಿಸಿದಂತೆ ವಿಮಾಂಕನ ಹೇಗಿರುತ್ತದೆ? 

 ಜೀವಿಸುವಿಕೆಗೆ ಒಡ್ಡಬಹುದಾದ ಅಪಾಯಗಳ ಆಧಾರದ ಮೇಲೆ ವ್ಯಕ್ತಿಗಳನ್ನು ಆಯ್ಕೆ ಮಾಡಿ, ವಿಮಾ ಹೊಣೆಗಾರಿಕೆಯನ್ನು ಒಪ್ಪಕೊಳ್ಳಲು, ವಿಮೆಯ ಬೆಲೆಯನ್ನು ನಿರ್ಧರಿಸುವದು.

Wednesday, August 13, 2014

13 ಅಗಷ್ಟ 2014

 ವಿಮಾಂಕನ (underwriting) ಎಂದರೇನು?

 ವಿಮಾಂಕನ (underwriting) ಎಂದರೆ,
1) ಒಪ್ಪಿಕೊಳ್ಳುವ ವಿಮಾ ರಕ್ಷಣೆಯ ನಿಯಮ, ಶರ್ಯತ್ತು, ಹಾಗೂ ವ್ಯಾಪ್ತಿಗಳನ್ನು ನಿರ್ಧರಿಸುವದು.
2) ಅನಕೂಲವೆನಿಸುವ ರೀತಿಯಲ್ಲಿ ವಿಮಾಕಂತುಗಳನ್ನು ನಿರ್ಧರಿಸುವದು.

Tuesday, August 12, 2014

12 ಅಗಷ್ಟ  2014

ಚೆಕ್ಕು/ಡಿ.ಡಿ./ಎಮ್.ಒ. ಗಳು ವಿಮಾಕಚೇರಿಗಳಿಗೆ ತಲುಪುವ ಮೊದಲೇ ವಿಮಾ ರಕ್ಷಿತ ನಿಧನನಾದರೆ ವಿಮಾಪರಿಹಾರವನ್ನು ಹೇಗೆ ನಿರ್ಧರಿಸುತ್ತಾರೆ?

ಚೆಕ್ಕು/ಡಿ.ಡಿ./ಎಮ್.ಒ.ಗಳು  ಗ್ರಾಹಕನ ಕೈಬಿಟ್ಟುಹೋದ ಸಮಯವನ್ನು ಪುರಾವೆಗಳಿಂದ ದೃಢ ಪಡಿಸಿದರೆ, ಆ ಸಮಯಕ್ಕೆ ಹಣ ಬಂದಿದೆಯೆಂದು ಭಾವಿಸಿ ವಿಮಾ ಪರಿಹಾರ ಸಂದಾಯವನ್ನು ಕೈಕೊಳ್ಳುತ್ತಾರೆ.

Monday, August 11, 2014

11 ಅಗಷ್ಟ  2014

ಚೆಕ್ಕು ಮೂಲಕ ವಿಮಾಕಂತನ್ನು ನೀಡಿದಾಗ ನಗದು ಹಣಪಡೆದ ಸಮಯವನ್ನು ಹೇಗೆ ನಿರ್ಧರಿಸುತ್ತಾರೆ?

ಸಾಮಾನ್ಯ ಪಾಲಿಸಿಗಳಲ್ಲಿ ಚೆಕ್ಕು ಮೂಲಕ ವಿಮಾಕಂತನ್ನು ನೀಡಿದಾಗ, ಚೆಕ್ಕು ನೀಡಿದ ಸಮಯವನ್ನೇ ನಗದು ಹಣಪಡೆದ ಸಮಯವೆಂದು ಭಾವಿಸುತ್ತಾರೆ. ಯುಲಿಪ್ ಪಾಲಿಸಿಗಳಲ್ಲಿ ಚೆಕ್ಕು ಮೂಲಕ ವಿಮಾಕಂತನ್ನು ನೀಡಿದಾಗ, ಚೆಕ್ಕಿನ ಹಣ ಪ್ರತ್ಯಕ್ಷವಾಗಿ ಕೈಗೆ ತಲುಪಿದ ಸಮಯವನ್ನೇ ನಗದು ಹಣಪಡೆದ ಸಮಯವೆಂದು ಭಾವಿಸುತ್ತಾರೆ, ಮತ್ತು ಆ ಸಮಯಕ್ಕೆ ಯುನಿಟ್‍ಗಳ ಹಂಚಿಕೆ ಮಾಡುತ್ತಾರೆ.

Sunday, August 10, 2014

10 ಅಗಷ್ಟ  2014

ವಿಮಾಕಂತು ಬಾಕೀ ಇರುವಾಗ ಪಾಲಸಿಧಾರಕ ನಿಧನನಾದರೆ ವಿಮಾ ಹಣವನ್ನು ನೀಡಬಹುದೆ?

ವಿಮಾಕಂತು ಬಾಕೀ ಇರುವಾಗ, ಆದರೆ ರಿಯಾಯತಿ/ಕ್ಲೇಮ್ ರಿಯಾಯತಿ ಅವಧಿಯೊಳಗೆ  ಪಾಲಸಿಧಾರಕ ನಿಧನನಾದರೆ ಪೂರ್ಣ ವಿಮಾ ಮೊತ್ತದಿಂದ ಬಾಕೀ ವಿಮಾಕಂತು ಹಾಗೂ ಅದರ ಮೇಲಿನ ಬಡ್ಡಿಯನ್ನು ಕಳೆದು ಉಳಿದ ಹಣವನ್ನು ನೀಡುತ್ತಾರೆ.

Saturday, August 9, 2014

9 ಅಗಷ್ಟ  2014

ಫೋರಕ್ಲೋಜರ್ ವಿಧಾನ ಮುಕ್ತಾಯಗೊಂಡ ನಂತರ ಪಾಲಿಸಿಯನ್ನು ಪುನಃ ಪ್ರತಿಷ್ಠಾಪಿಸಬಹುದೆ?

ನೋಟಿಸ ಅವಧಿ ಮುಗಿಯುವ ಮೊದಲೇ ಯಾವ ಪ್ರತಿಕ್ರಿಯೆ ನೀಡದ, ಅಂದರೆ ವ್ಯತ್ಯಾಸದ ಹಣಕ್ಕೆ (ಸರಂಡರ ಬೆಲೆ ಪಾಲಸಿಯ ಹೊರೆಗಿಂತ ಜಾಸ್ತಿಯಾಗಿದ್ದ ಸಂದರ್ಭದಲ್ಲಿ), ನೋಟಿಸ ಅವಧಿ ಮುಗಿಯುವ ಮೊದಲೇ, ಮುಂಗಡ ರಶೀದಿಯನ್ನು ರುಜುಮಾಡಿ ವಾಪಸು ಕಳಿಸಿರದÀ ಪಾಲಸಿಧಾರಕನು; ಪಾಲಸಿಯನ್ನು ಪುನಃ ಪ್ರತಿಷ್ಠಾಪಿಸ ಬಯಸಿದ ದಿನದಂದು, ಸಾಲ ಹಾಗೂ ಬಡ್ಡಿಯ ಹಣವನ್ನು ತುಂಬಿ, ಒಳ್ಳೆಯ ಆರೋಗ್ಯದ ಬಗ್ಗೆ ಪುರಾವೆ ಸಲ್ಲಿಸಿದರೆ, ಪಾಲಿಸಿಯನ್ನು ಪುನಃ ಪ್ರತಿಷ್ಠಾಪಿಸಲು ಕಂಪನಿ ಅನುಮತಿಸುವದು.

Friday, August 8, 2014

8 ಅಗಷ್ಟ  2014

ಫೋರಕ್ಲೋಜರ್ ವಿಧಾನ ಪೂರ್ತಿಗೊಳ್ಳುವ ಮೊದಲೇ, ಅಂದರೆ ನೋಟೀಸ ಅವಧಿ ಮುಗಿಯುವ ಮುನ್ನವೇ ಪಾಲಸಿಧಾರಕ ನಿಧನ ಹೊಂದಿದರೆ ಏನಾಗುತ್ತದೆ. 

ಈ ಸಂದರ್ಭದಲ್ಲಿ ಮರಣ ಪರಿಹಾರ ಸಂದಾಯದ ಹಣವನ್ನು ನಾಮಿನೀಗೆ ನೀಡದೆ, ಪಾಲಸಿಧಾರಕನ ಕಾನೂನು ಬದ್ಧ ವಾರಸುದಾರರಿಗೆ ನೀಡಲಾಗುವದು. ಯಾಕಂದರೆ ಫೋರಕ್ಲೋಜರ್ ವಿಧಾನ ಪ್ರಾರಂಭಿಸಿದ ತಕ್ಷಣವೇ ಕರಾರು ರದ್ದತಿಕ್ರಮ ಜರುಗಿರುವದರಿಂದ ನಾಮಿನಿ ಪಾತ್ರ  ಆ ಕ್ಷಣವೇ ಕೊನೆಗೊಂಡಿರುತ್ತದೆ.

Thursday, August 7, 2014

7 ಅಗಷ್ಟ  2014

ಫೋರಕ್ಲೋಜರ್‍ನ್ನು ಹೇಗೆ ಕಾರ್ಯಗತಗೊಳಿಸುತ್ತಾರೆ?

ಫೋರಕ್ಲೋಜರ್‍ಗಾಗಿ ನಿಗದಿತ ದಿನದಂದು 1)ಪಾಲಿಸಿಯ ಸರಂಡರ ಬೆಲೆಯನ್ನು, 2)ಪಾಲಸಿಯ ಮೇಲಿರುವ ಹೊರೆಯ ಅಂದರೆ, ಸಾಲ ಹಾಗೂ ಬಡ್ಡಿಯ ಭಾರವನ್ನು ಲೆಕ್ಕ ಮಾಡುತ್ತಾರೆ. ಮತ್ತು ಪಾಲಿಸಿಯನ್ನು ಫೋರಕ್ಲೋಜರ್ ಮಾಡಲು ತೆಗೆದುಕೊಂಡ ನಿರ್ಧಾರದ ಬಗ್ಗೆ ಪಾಲಸಿಧಾರಕನಿಗೆ ನೋಟಿಸ ಕಳಿಸುತ್ತಾರೆ. ಸರಂಡರ ಬೆಲೆ ಪಾಲಸಿಯ ಹೊರೆಗಿಂತ ಜಾಸ್ತಿಯಾಗಿದ್ದರೆ, ವ್ಯತ್ಯಾಸದ ಹಣಕ್ಕೆ ಕೋರಿಕೆ ಸಲ್ಲಿಸಲು ಮುಂಗಡ ರಶೀದಿ ಕಳಿಸುತ್ತಾರೆ.

ಈಗ ಪಾಲಸಿಧಾರಕನು ಫೋರಕ್ಲೋಜರ್‍ನ್ನು ತಡೆಯ ಬೇಕೆನಿಸಿದರೆ, ಸಾಲ ಹಾಗೂ ಬಡ್ಡಿಯಹಣವನ್ನು ನೋಟಿಸ ಅವಧಿ ಮುಗಿಯುವ ಮೊದಲೇ ಕಂಪನಿಗೆ ನೀಡುವ ಮೂಲಕ, ಫೋರಕ್ಲೋಜರ್‍ನ್ನು ನಿಲ್ಲಿಸಬಹುದು.

ಪಾಲಸಿಧಾರಕನು ಫೋರಕ್ಲೋಜರ್‍ನ್ನು ಒಪ್ಪಿದರೆ, ವ್ಯತ್ಯಾಸದ ಹಣಕ್ಕೆ (ಸರಂಡರ ಬೆಲೆ ಪಾಲಸಿಯ ಹೊರೆಗಿಂತ ಜಾಸ್ತಿಯಾಗಿದ್ದ ಸಂದರ್ಭದಲ್ಲಿ), ನೋಟಿಸ ಅವಧಿ ಮುಗಿಯುವ ಮೊದಲೇ, ಮುಂಗಡ ರಶೀದಿಯನ್ನು ರುಜುಮಾಡಿ ವಾಪಸು ಕಳಿಸಿ, ಮರು ಪಾವತಿಗೆ ಕೋರಿಕೆ ಸಲ್ಲಿಸುತ್ತಾನೆ. ನಂತರ ಆ ಹಣವನ್ನು ಕಂಪನಿಯು ಪಾವತಿ ಮಾಡುತ್ತದೆ.

ನೋಟಿಸ ಅವಧಿ ಮುಗಿಯುವ ಮೊದಲೇ ಯಾವ ಪ್ರತಿಕ್ರಿಯೆ ನೀಡದಿದ್ದರೆ, ಅಥವಾ ಮುಂಗಡ ರಶೀದಿಯನ್ನು ರುಜುಮಾಡಿ ವಾಪಸು ಕಳಿಸಿ ವ್ಯತ್ಯಾಸದ ಹಣಕ್ಕೆ ಕೋರಿಕೆ ಸಲ್ಲಿಸದಿದ್ದರೆ, ಕಂಪನಿಯು ಆ ಹಣವನ್ನು ಕೋರಿಕೆಯಾಗದ ಸರಂಡರ ಖಾತೆ(unclaimed surrender account) ಗೆ ಜಮಾ ಮಾಡಿ ಫೋರಕ್ಲೋಜರ್‍ನ್ನು ಮುಕ್ತಾಯ ಗೊಳಿಸುತ್ತದೆ.

ನಂತರ ಯಾವಾಗಲಾದರೂ,ಕೋರಿಕೆಯಾಗದ ಸರಂಡರ ಖಾತೆ(unclaimed surrender account)ಗೆ ಜಮೆಯಾದ ಹಣವನ್ನು ವಾಪಸು ಪಡೆಯಲು ಪಾಲಸಿಧಾರಕ ಮರಳಿಸಲು ವಿನಂತಿಸಿಕೊಳ್ಳ ಬಹುದು.  

Wednesday, August 6, 2014

6 ಅಗಷ್ಟ  2014

ಯಾವ ಸಂದರ್ಭದಲ್ಲಿ ವಿಮಾ ಸಂಸ್ಥೆಯು ಪಾಲಿಸಿಯನ್ನು ಫೋರಕ್ಲೋಜರ್ (foreclosure) ಮಾಡುತ್ತದೆ?

ಲ್ಯಾಪ್ಸ್ ಆದ ಪಾಲಿಸಿಯಲ್ಲಿ, ಪಾಲಿಸಿ ಸಾಲದ ಮೇಲೆ ಬಡ್ಡಿ ಕೊಡುವದನ್ನು ಒಂದು ವರ್ಷದ ಅವಧಿಗಿಂತಲೂ ಹೆಚ್ಚು ಸಮಯ ಮೀರಿ ನಿಲ್ಲಿಸಿದಾಗ,
ಯಾವುದೇ ಸಂದರ್ಭದಲ್ಲಿ ಪಾಲಿಸಿ ಸಾಲ ಹಾಗೂ ಬಡ್ಡಿ, ಆ ಸಮಯದ ಸರಂಡರ ಬೆಲೆಗಿಂತ ಹೆಚ್ಚಾದಾಗ,ವಿಮಾ ಸಂಸ್ಥೆಯು ಪಾಲಿಸಿಯನ್ನು ಫೋರಕ್ಲೋಜರ್(foreclosure ಮಾಡುತ್ತದೆ.

Tuesday, August 5, 2014

5 ಅಗಷ್ಟ  2014

ಫೋರಕ್ಲೋಜರ್(foreclosure)  ಎಂದರೇನು?

ವಿಮಾಪಾಲಸಿಯು ಗ್ರಾಹಕನ ಬದಲು, ವಿಮಾಕಂಪನಿಯೇ ಸರಂಡರ ಮಾಡಿದರೆ, ಅದಕ್ಕೆ ಫೋರಕ್ಲೋಜರ್(foreclosure) ಎನ್ನುತ್ತಾರೆ.

Monday, August 4, 2014

4 ಅಗಷ್ಟ  2014

ಪಾಲಿಸಿಯನ್ನು ಅಸೈನ್ ಮಾಡಿದರೆ, ಆ ಪಾಲಿಸಿಯಲ್ಲಿದ್ದ ನಾಮೀನೆಶನ್ ಮೇಲೆ ಯಾವ ಪರಿಣಾಮ ಉಂಟಾಗುವದು?

ಪಾಲಿಸಿಯನ್ನು ಅಸೈನ್ ಮಾಡಿದರೆ, ಆ ಪಾಲಿಸಿಯಲ್ಲಿದ್ದ ನಾಮೀನೆಶನ್ ತನ್ನಿಂದ ತಾನೇ ರದ್ದಾಗುವದು. (ಆದರೆ ಸಾಲ ಪಡೆಯಲು, ಪಾಲಿಸಿಯನ್ನು ವಿಮಾಕಂಪನಿಗೆ ಅಸೈನ್ ಮಾಡಿದರೆ, ಆ ಪಾಲಿಸಿಯಲ್ಲಿದ್ದ ನಾಮಿನೇಶನ್ ರದ್ದಾಗದೇ ಹಾಗೆಯೇ ಉಳಿದುಕೊಳ್ಳುವದು.)

Sunday, August 3, 2014

3 ಅಗಷ್ಟ  2014

ಶರ್ಯತ್ತು ಬದ್ಧ ಅಸೈನಮೆಂಟ್(conditional assignment) ಎಂದರೇನು?

ಶರ್ಯತ್ತು ಬದ್ಧ ಅಸೈನಮೆಂಟ್‍ನಲ್ಲಿ, ಮೊದಲೇ ನಿರ್ಧರಿಸಿದ ಶರ್ಯತ್ತು ಪೂರ್ತಿಗೊಂಡಾಗ, ಅಸೈನಮೆಂಟನಲ್ಲಿ ವರ್ಗಾವಣೆಯಾದ ಮಾಲಿಕತ್ವ ತನ್ನಿಂದ ತಾನೇ ಮರಳಿ ಅಸೈನರ್‍ನಿಗೆ ಮರಳಿ ಸೇರುತ್ತದೆ. ಈ ಶರ್ಯತ್ತು ಪೂರೈಕೆಯ ಮೇಲೆ ಅಸೈನರ್‍ನಿಗೆ ಯಾವ ನಿಯಂತ್ರಣ ಇರಕೂಡದು.

ಉದಾ 1) ಅಸೈನಿಯು ಮ್ಯಾಚುರಿಟಿಗೆ ಮುಂಚೆಯೇ ನಿಧನಹೊಂದಿದರೆ, ವರ್ಗಾವಣೆಯಾದ ಮಾಲಿಕತ್ವ ತನ್ನಿಂದ ತಾನೇ ಮರಳಿ ಅಸೈನರ್‍ನಿಗೆ ಮರಳಿ ಸೇರಬೇಕು ಎನ್ನುವ ಶರ್ಯತ್ತು. 

ಉದಾ 2) ಅಸೈನರನು ಮ್ಯಾಚುರಿಟಿವರೆಗೆ ಬದುಕಿ ಉಳಿದರೆ, ವರ್ಗಾವಣೆಯಾದ ಮಾಲಿಕತ್ವ ತನ್ನಿಂದ ತಾನೇ ಮರಳಿ ಅಸೈನರ್‍ನಿಗೆ ಮರಳಿ ಸೇರಬೇಕು ಎನ್ನುವ ಶರ್ಯತ್ತು. 

Saturday, August 2, 2014

2 ಅಗಷ್ಟ  2014

ಅಸೈನಮೆಂಟ್(assignment) ಬಗ್ಗೆ ಅಧಿಕೃತ ವಿವರಣೆ ಎಲ್ಲಿ ದೊರಕುತ್ತದೆ?

ಅಸೈನಮೆಂಟ್ ಬಗ್ಗೆ ಅಧಿಕೃತ ವಿವರಣೆ ವಿಮಾ ಕಾನೂನು 1938ರ ಸೆಕ್ಶನ್ 38 ರಲ್ಲಿ ದೊರಕುತ್ತದೆ.

Friday, August 1, 2014

1 ಅಗಷ್ಟ  2014

ಪಾಲಿಸಿ ನೀಡುವದಕ್ಕೆ ಮುಂಚೆಯೇ ಅಸೈನಮೆಂಟ್(assignment) ನ್ನು ಮಾಡಬಹುದೇ?

ಇಲ್ಲಾ. ಪಾಲಿಸಿ ಹುಟ್ಟಿದ ಮೇಲೆಯೇ ಹಕ್ಕು ಪ್ರಾಪ್ತಿಯಾಗುವದರಿಂದ, ಪಾಲಿಸಿಗಿಂತ ಮುಂಚೆಯೇ ಅಸೈನಮೆಂಟ್ ಮಾಡಲು ಬರುವದಿಲ್ಲಾ.