Wednesday, April 30, 2014

30ಎಪ್ರೀಲ್ 2014


ವಿಮಾ ಸಂಸ್ಥೆಗಳ ವಿಧಗಳು :  



ಮೂರು ವಿಧಗಳಲ್ಲಿ: 1) ಜೀವ ವಿಮಾ (Life Insurance) ಸಂಸ್ಥೆಗಳು. 
2) ಸಾಮಾನ್ಯ ವಿಮಾ (General  Insurance)  ಸಂಸ್ಥೆಗಳು. 
3) ಪುನರ್ವಿಮಾ (Re Insurance)ಸಂಸ್ಥೆಗಳು.

Tuesday, April 29, 2014

29 ಎಪ್ರೀಲ್ 2014


ಗ್ರಾಹಕರ ದೂರು ನಿವಾರಣೆ (Complaint Redressal) ಗಾಗಿ ಆಯ್.ಆರ್.ಡಿ.ಎ.ಯು ಕೈಕೊಂಡ ಕ್ರಮಗಳು  :



ಆಯ್.ಆರ್.ಡಿ.ಎ.ಯು ವಿಮಾಸಂಸ್ಥೆಗಳಿಗೆ ತಮ್ಮ ತಮ್ಮ ಕಚೇರಿಗಳಲ್ಲಿ ದೂರು ನಿವಾರಣಾ ಘಟಕ   
        (Complaint Redressal Cell) ವನ್ನು ಸ್ಥಾಪಿಸಲು ನಿರ್ದೇಶನ ನೀಡಿದೆ.
ವಿಮಾ ಲೋಕಪಾಲ್ ಸಂಸ್ಥೆಗಳನ್ನು ಸ್ಥಾಪಿಸಿ ಗ್ರಾಹಕ ದೂರು ನಿವಾರಣೆಗೆ ಯಾವ ವೆಚ್ಚವಿಲ್ಲದೇ, ನಿರ್ಧಿಷ್ಠ 
        ಕಾಲಮಿತಿಯೊಳಗೆ ಪರಿಹಾರ ಸಿಗುವಂತೆ ಮಾಡಿದೆ.
ಆಯ್.ಆರ್.ಡಿ.ಎ.ಯು ಗ್ರಾಹಕ ದೂರು ನಿವಾರಣೆ ಘಟಕ ((IRDA Complaint Redressal Cell)   
        ಸ್ಥಾಪಿಸಿದೆ. ದೂರುದಾರರಿಗೆ ಶುಲ್ಕರಹಿತ ಟೆಲೆಫೋನ್ ಸೌಲಭ್ಯ/ ಈ ಮೇಲ್ ಸಂಪರ್ಕ ವಿಳಾಸ ನೀಡಿದೆ. 
        ಟೆಲೆಫೋನ್ ನಂಬರು – 155255, ಈ ಮೇಲ್ ವಿಳಾಸ –complaints@irda.gov.in

Monday, April 28, 2014

 28  ಎಪ್ರೀಲ್ 2014

ವಿಮಾ ಕ್ಷೇತ್ರಕ್ಕೆ  ಸೂಕ್ಷ್ಮ ವಿಮೆಯ (Micro Insurance) ಕೊಡುಗೆ :  


ಕಡಿಮೆ ಆದಾಯದ ಜನಸಮೂಹಕ್ಕೆ ವಿಮೆಯನ್ನು ತಲುಪಿಸಲು ಸ್ವ ಸಹಾಯ ಸಂಸ್ಥೆಗಳ ಮೂಲಕ ಚಿಕ್ಕ ಪ್ರಮಾಣದಲ್ಲಿ ವಿಮೆಯನ್ನು ಮಾರುವದಕ್ಕೆ ಸೂಕ್ಷ್ಮ ವಿಮೆ ಎನ್ನುತ್ತಾರೆ. ಸೂಕ್ಷ್ಮ ವಿಮೆಯ ವಿಶೇಷತೆಗಳು.
ಕನಿಷ್ಠ ವಿಮಾ ಮೊತ್ತ – 5,000 ರೂ.ಗಳು
ಗರಿಷ್ಠ ವಿಮಾ ಮೊತ್ತ – 50,000 ರೂ.ಗಳು
ವಿಮಾ ಕಂತಿನ ವಿಧಾನ - ಪ್ರತಿ ವಾರಕ್ಕೊಮ್ಮೆ,
ಗುಂಪಿನಲ್ಲಿ ಇರಬೇಕಾದ ಸದಸ್ಯರ ಕನಿಷ್ಠ ಸಂಖ್ಯೆ – 15.  ಸೂಕ್ಷ್ಮ ವಿಮೆ, ಕಡಿಮೆ ಆದಾಯದ ಜನರಿಗೂ ವಿಮಾ         ಸೌಲಭ್ಯ ಕೈಗೆಟುಕುವಂತೆ ಮಾಡುತ್ತದೆ. ಕೃಷಿ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ದುಡಿಯುವವರಿಗೆ ನೆರೆ,            ಬರಗಾಲದಂತಹ ವಿಪತ್ತುಗಳಿಗೂ ವಿಶೇಷ ವಿಮಾ ರಕ್ಷಣೆ ದಯಪಾಲಿಸುತ್ತದೆ.

Sunday, April 27, 2014

 27  ಎಪ್ರೀಲ್ 2014

ವಿಮಾ ಕ್ಷೇತ್ರಕ್ಕೆ  ಆನ್ ಲೈನ ಮೂಲಕ ಮಾರಾಟ (E- Sale) ದ ಕೊಡುಗೆ  : 


ಮಧ್ಯವರ್ತಿಗಳ ಸಹಾಯವಿಲ್ಲದೆಯೇ ಆನ್ ಲೈನ ಮೂಲಕ ವಿಮಾ ಮಾರಾಟ ಜರುಗುವದರಿಂದ, ಕಮೀಶನ್ ವೆಚ್ಚ ಕಡಿಮೆಯಾಗುವದರಿಂದ, ಆನ್‍ಲೈನ್ ಗ್ರಾಹಕರಿಗೆ ರಿಯಾಯತಿ ದರದಲ್ಲಿ ವಿಮಾಕಂತುಗಳನ್ನು, ವಿಮಾ ಸಂಸ್ಥೆಯು ಚಾರ್ಜ್ ಮಾಡುವದು. ಇದು ವಿಮಾ ಮಾರಾಟಕ್ಕೆ ಹೆಚ್ಚು ಪ್ರಚೋದನಕಾರಿಯಾಗಿದೆ.

Saturday, April 26, 2014

26  ಎಪ್ರೀಲ್ 2014

ವಿಮಾ ಕ್ಷೇತ್ರಕ್ಕೆ  ಬೆಳೆಯುತ್ತಿರುವ ಬ್ಯಾಂಕ್ ಅಶ್ಯೂರೆನ್ಸ್ ವ್ಯಾಪಾರ (Bank Assurance - Sale)ದ  ಕೊಡುಗೆ :


ಬ್ಯಾಂಕುಗಳು ತಮ್ಮ ಸರಕುಗಳ ಜೊತೆಗೇ ವಿಮಾಸರಕುಗಳನ್ನು ಮಾರುವದಕ್ಕೆ ಬ್ಯಾಂಕಅಶ್ಯೂರೆನ್ಸ  
        ಎನ್ನುತ್ತಾರೆ. 
ಕೆಲವು ಬಾರಿ ವಿಮಾಕಂಪನಿಗಳು ಬ್ಯಾಂಕ ಅಶ್ಯೂರೆನ್ಸ್ ಸಲವಾಗಿಯೇ ಮಾರಲು, ವಿಶೇಷ ವಿಮಾ 
         ಸರಕುಗಳನ್ನು ಪ್ರತ್ಯೇಕವಾಗಿ ತಯಾರಿಸಿ ಕೊಡುವದೂ ಉಂಟು.
ಬ್ಯಾಂಕ ಅಶ್ಯೂರೆನ್ಸ್ ಮೂಲಕ ಬ್ಯಾಂಕುಗಳು ತಮ್ಮ ಸರಕುಗಳ ಸೇವಾ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವವು. 
         ಜೊತೆಗೆ ವಿಮೆ ಮಾರಾಟದಿಂದ ಕಮೀಶನ್‍ದಿಂದ ಹೆಚ್ಚಿನ  ಆದಾಯವನ್ನು ಪಡೆಯುವವು
ಬ್ಯಾಂಕಗಳ ನಂಬಿಕೆಯ ಗ್ರಾಹಕಜಾಲದ ಪ್ರಯೋಜನ ವಿಮಾಸರಕುಗಳ ಮಾರಾಟಕ್ಕೆ ದೊರಕುವದು.

Friday, April 25, 2014

25  ಎಪ್ರೀಲ್ 2014
   

ವಿಮಾ ಕ್ಷೇತ್ರಕ್ಕೆ  ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ (Information technology)ದ  ಕೊಡುಗೆ   


ಗ್ರಾಹಕರು ಕಂಪನಿಗಳ ವೆಬ್ ತಾಣ ಬಳಸಿ ವಿಮಾ ಕಂತುಗಳ ಸಂದಾಯ ಮಾಡಬಹುದು.
ಗ್ರಾಹಕರು ವೆಬ್ ತಾಣಗಳ ಮೂಲಕ ತಮ್ಮ ಪಾಲಿಸಿಯ ಸದ್ಯದ ಸ್ಥಿತಿಗತಿಗಳನ್ನು ತಿಳಿದು ಕೊಳ್ಳಬಹುದು.
ಗ್ರಾಹಕರು ವೆಬ್ ತಾಣಗಳ ಮೂಲಕ ವಿಮಾ ಕಂತು ನೀಡಿದಾಗ ಬದಲಾದ ಪಾಲಿಸಿಯ ಸ್ಥಿತಿಯ ಬಗ್ಗೆ   ಮೊಬೈಲ್    ಸಂದೇಶ ಪಡೆಯ ಬಹುದು.

Thursday, April 24, 2014

24  ಎಪ್ರೀಲ್ 2014


ವಿಮಾ ಕ್ಷೇತ್ರ (insurance field) ದಲ್ಲಿ ತೀರ ಇತ್ತೀಚಿನ ಪ್ರಮುಖ ಬೆಳವಣಿಗೆಗಳು :



ವಿಮಾ ವ್ಯವಹಾರದಲ್ಲಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ (Information Technology)ದ  ಉಪಯೋಗ.
ಬೆಳೆಯುತ್ತಿರುವ ಬ್ಯಾಂಕ್ ಅಶ್ಯೂರೆನ್ಸ್ (Bank Assurance)  ವ್ಯಾಪಾರ.
ಆನ್ ಲೈನ ಮೂಲಕ (E- Sale)   ವಿಮಾ ಮಾರಾಟ. 
ಮೈಕ್ರೋ ಇನ್ಶ್ಯೂರೆನ್ಸ್. (ಸೂಕ್ಷ್ಮ ವಿಮೆ) (Micro Insurance)
ದೂರು ನಿವಾರಣಾ ವ್ಯವಸ್ಥೆ (Complaint Management Cell) . 

Wednesday, April 23, 2014

23  ಎಪ್ರೀಲ್ 2014


ಸಧ್ಯಕ್ಕೆ ‘ಸಾಮಾನ್ಯ ವಿಮಾ ನಿಗಮ‘ (General Insurance Corporation of India)  ದ ಸ್ಥಾನಮಾನ :



 21 ಮಾರ್ಚ 2003 ರಿಂದ ಸಾಮಾನ್ಯ ವಿಮಾ ನಿಗಮವು ಪುನರ್ವಿಮೆ (re insurance)  ಕಂಪನಿಯಾಗಿ ಪರಿವರ್ತನೆ ಹೊಂದಿತು.  ಈ ಮೊದಲು ಸಾಮಾನ್ಯ ವಿಮಾ ನಿಗಮ (General Insurance Corporation of India)ದ ಆಧೀನದಲ್ಲಿದ್ದ ನಾಲ್ಕೂ ಸಾಮಾನ್ಯ ವಿಮಾ ಘಟಕಗಳು, ಪ್ರತ್ಯೇಕಗೊಂಡು ಈಗ ಸ್ವತಂತ್ರ ಸಾಮಾನ್ಯ ವಿಮೆ ಕಂಪನಿಗಳಾಗಿ ಕೆಲಸ ಮಾಡತೊಡಗಿವೆ. ಅವುಗಳು ಯಾವುವು ಎಂದರೆ, 
1. ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್.
2. ಯುನೈಟೆಡ್ ಇಂಡಿಯಾ ಇನ್‍ಶ್ಯೂರೆನ್ಸ್ ಕಂಪನಿ ಲಿಮಿಟೆಡ್.
3. ನ್ಯಾಶನಲ್ ಇನ್‍ಶ್ಯೂರೆನ್ಸ್ ಕಂಪನಿ ಲಿಮಿಟೆಡ್.
4. ಓರಿಯೆಂಟಲ್ ಇನ್‍ಶ್ಯೂರೆನ್ಸ್ ಕಂಪನಿ ಲಿಮಿಟೆಡ್.

Tuesday, April 22, 2014

22  ಎಪ್ರೀಲ್ 2014


ವಿಮಾ ಮಾರಾಟ ಮಾಡಬಯಸುವ ಕಂಪನಿಗಳಿಗೆ ವಿಧಿಸಲಾದ ಶರ್ಯತ್ತು (conditions) ಗಳು :



ಕನಿಷ್ಠ 100 ಕೋಟಿ ರೂಪಾಯಿಗಳ ಭಂಡವಾಳದ ಕಂಪನಿಯಾಗಿರಬೇಕು.
ಗರಿಷ್ಠ 26% ದವರೆಗೆ ಮಾತ್ರ ವಿದೇಶಿ ಭಂಡವಾಳವನ್ನು ಪಡೆಯಬಹುದು.
ಇನ್‍ಶ್ಯೂರೆನ್ಸ್ ರೆಗ್ಯುಲೇಟರಿ & ಡೆವಲಪ್‍ಮೆಂಟ್ ಅಥಾರಿಟಿ (ವಿಮಾ ನಿಯಂತ್ರಕ & ಅಭಿವೃದ್ಧಿ ಪ್ರಾಧಿಕರಣ) ಕಡೆಯಿಂದ ಅವಶ್ಯಕ ಲೈಸೆನ್ಸ್ ಪಡೆಯ ಬೇಕು.

Monday, April 21, 2014

21  ಎಪ್ರೀಲ್ 2014

ಉದಾರೀಕರಣ ನಂತರದ ಘಟ್ಟದಲ್ಲಿ (post liberalization stage), ವಿಮೆಯ ಇತಿಹಾಸದ ವಿಶೇಷ ಘಟನಾವಳಿಗಳು :         

  •  2000ನೆಯ ವರ್ಷದಲ್ಲಿ ಖಾಸಗೀ ಕಂಪನಿಗಳಿಗೆ ವಿಮಾ ಮಾರಾಟ ಮಾಡಲು ಅನುಮತಿ  ನೀಡಲಾಯಿತು. ಇದಕ್ಕಾಗಿ 1938 ರ ವಿಮಾ ಕಾನೂನು, 1956ರ ಜೀವ ವಿಮಾ ಕಾನೂನು,  1972ರ ಸಾಮಾನ್ಯ ವಿಮಾ ರಾಷ್ಟ್ರೀಕರಣ ಕಾನೂನುಗಳಿಗೆ ತಿದ್ದುಪಡಿ ತರಲಾಯಿತು.
  • 2002 ಸಾಮಾನ್ಯ ವಿಮಾ ವ್ಯವಹಾರ (ರಾಷ್ಟ್ರೀಕರಣ) ತಿದ್ದುಪಡಿ ಕಾನೂನು ಜಾರಿಗೆ ಬಂದಿತು.
  • 21 ಮಾರ್ಚ 2003 ರಿಂದ ಸಾಮಾನ್ಯ ವಿಮಾ ನಿಗಮವು ಪುನರ್ವಿಮೆ ಕಂಪನಿಯಾಗಿ ಪರಿವರ್ತನೆ ಹೊಂದಿತು.

Sunday, April 20, 2014

20  ಎಪ್ರೀಲ್ 2014


ಉದಾರೀಕರಣ ಘಟ್ಟದಲ್ಲಿ (liberalization stage) ವಿಮೆಯ ಇತಿಹಾಸದ ವಿಶೇಷ ಘಟನಾವಳಿಗಳು :  



1993 – ಮಲ್ಹೋತ್ರಾ ಕಮೀಟಿ ರಚನೆ 
         (ವಿಮಾ ಉದ್ದಿಮೆಯಲ್ಲಿ ಅವಶ್ಯಕ ಸುಧಾರಣೆ ಕುರಿತು ವರದಿ ಸಲ್ಲಿಸಲು)
1994 ಮಲ್ಹೋತ್ರಾ ಕಮೀಟಿ ವರದಿ ಸಲ್ಲಿಕೆ.
1999– ಇನ್‍ಶ್ಯೂರೆನ್ಸ್ ರೆಗ್ಯುಲೇಟರಿ & ಡೆವಲಪ್‍ಮೆಂಟ್ ಅಥಾರಿಟಿ (ಆಯ್.ಆರ್.ಡಿ.ಏ). ಕಾನೂನು ಜಾರಿಗೆ  ಬಂದಿತು.
ಎಪ್ರಿಲ್ 2000 - ಇನ್‍ಶ್ಯೂರೆನ್ಸ್ ರೆಗ್ಯುಲೇಟರಿ & ಡೆವಲಪ್‍ಮೆಂಟ್ ಅಥಾರಿಟಿಯ (ವಿಮಾ ನಿಯಂತ್ರಕ &  ಅಭಿವೃದ್ಧಿ ಪ್ರಾಧಿಕರಣದ) ಸ್ಥಾಪನೆ, ಹೈದರಾಬಾದದಲ್ಲಿ. 

Saturday, April 19, 2014

19 ಏಪ್ರೀಲ್ 2014

ವಿಮೆಯ ಇತಿಹಾಸದ, ಉದಾರೀಕರಣ ಪೂರ್ವದ ಘಟ್ಟದಲ್ಲಿಯ (pre- liberalization stage)  ವಿಶೇಷ ಘಟನಾವಳಿಗಳು :


1818 - ಭಾರತದ ಮೊಟ್ಟ ಮೊದಲನೆಯ ವಿಮಾಕಂಪನಿಯ ಸ್ಥಾಪನೆ.
      ಓರಿಯೆಂಟಲ್ ಲೈಫ್ ಇನ್‍ಶ್ಯೂರೆನ್ಸ್ ಕಂಪನಿ - ಕಲಕತ್ತಾ (ದೇಶದ ಆಗಿನ ರಾಜಧಾನಿಯಲ್ಲಿ)
1939 - ಓರಿಯೆಂಟಲ್ ಲೈಫ್ ಇನ್‍ಶ್ಯೂರೆನ್ಸ್ ಕಂಪನಿ - ಕಲಕತ್ತಾ, ಮುಚ್ಚಿತು.
1829 -ದಕ್ಷಿಣ ಭಾರತದ ಮೊಟ್ಟ ಮೊದಲನೆಯ ವಿಮಾಕಂಪನಿಯ ಸ್ಥಾಪನೆ.
      ಮದ್ರಾಸ ಇಕ್ವಿಟೆಬಲ್ ವಿಮಾ ಸಂಸ್ಥೆ – ಮದ್ರಾಸ.
1829 -ಪಶ್ಚಿಮ ಭಾರತದ ಮೊಟ್ಟ ಮೊದಲನೆಯ ವಿಮಾಕಂಪನಿಯ ಸ್ಥಾಪನೆ.
       ಓರಿಯೆಂಟಲ್ ವಿಮಾ ಸಂಸ್ಥೆ – ಮುಂಬಯಿ.
1912 - ಭಾರತದ ಮೊಟ್ಟ ಮೊದಲನೆಯ ವಿಮಾ ಕಾನೂನು ಜಾರಿಯಲ್ಲಿ ಬಂದಿತು.
       ಈ ಕಾನೂನಿನಿಂದ  ಎಲ್ಲಾ ವಿಮಾ ಸಂಸ್ಥೆಗಳಿಂದ ಅಂಕೆ ಸಂಖ್ಯೆ ಪಡೆಯುವ ಅಧಿಕಾರ ಸರಕಾರಕ್ಕೆ ದೊರೆಯಿತು.
1938 –ಭಾರತೀಯ ವಿಮಾ ಕಾನೂನು ಜಾರಿಯಲ್ಲಿ ಬಂದಿತು.
       ಅನೇಕ ತಿದ್ದುಪಡೆ ಹೊಂದಿದ ಈ ಮಹತ್ವದ ಕಾನೂನು ಇಂದಿಗೂ ಚಾಲತಿಯಲ್ಲಿದ್ದು ವಿಮಾ ವ್ಯವಹಾರವನ್ನು ನಿಯಂತ್ರಿಸುತ್ತದೆ.
1956 - ಭಾರತೀಯ ಜೀವ ವಿಮಾ ಕಾನೂನು ಜಾರಿಯಲ್ಲಿ ಬಂದಿತು.
       ಜೀವ ವಿಮೆ ರಾಷ್ಟ್ರೀಕರಣಗೊಂಡು, ಎಲ್ಲಾ ಖಾಸಗೀ ಜೀವ ವಿಮಾ ಕಂಪನಿಗಳು ಸರಕಾರದ ವಶಕ್ಕೆ ಬಂದವು.
1 ಸಪ್ಟೆಂಬರ್ 1956 - ಭಾರತೀಯ ಜೀವ ನಿಗಮದ ಸ್ಥಾಪನೆ.
ಎಲ್ಲಾ ಖಾಸಗೀ ಕಂಪನಿಗಳು ಭಾರತೀಯ ಜೀವ ವಿಮಾನಿಗಮದಲ್ಲಿ ವಿಲೀನಗೊಂಡವು.
1957 - ಸಾಮನ್ಯ ವಿಮಾ ಪರಿಷತ್ತು (ಕೌನ್ಸಿಲ್) ಸ್ಥಾಪಿತಗೊಂಡಿತು.
1972 - ಸಾಮಾನ್ಯ ವಿಮೆಯ ರಾಷ್ಟ್ರೀಕರಣ.
ಸಾಮನ್ಯ ವಿಮೆ ರಾಷ್ಟ್ರೀಕರಣಗೊಂಡು, ಎಲ್ಲಾ ಖಾಸಗೀ ಕಂಪನಿಗಳು ಸರಕಾರದ ವಶಕ್ಕೆ ಬಂದವು.
22 ನವ್ಹಂಬರ್ 1972 - ಸಾಮಾನ್ಯ ವಿಮಾ ನಿಗಮದ ಸ್ಥಾಪನೆ.

ಎಲ್ಲಾ ಖಾಸಗೀ ಜೀವ ವಿಮಾ ಕಂಪನಿಗಳು ಭಾರತೀಯ ಸಾಮಾನ್ಯ ವಿಮಾನಿಗಮದಲ್ಲಿ ವಿಲೀನಗೊಂಡವು.


Friday, April 18, 2014

18 ಎಪ್ರೀಲ್ 2014

ಭಾರತೀಯ ವಿಮೆಯ ಇತಿಹಾಸದ ಸ್ಥೂಲ ವಿಂಗಡನೆ. 


     ಭಾರತೀಯ ವಿಮೆಯ ಇತಿಹಾಸವನ್ನು ಮೂರು ಘಟ್ಟಗಳಲ್ಲಿ ವಿಂಗಡಿಸಬಹುದು.

            ಒಂದನೆಯ ಘಟ್ಟ – ಉದಾರೀಕರಣ ಪೂರ್ವದ ಘಟ್ಟ (Pre liberalization stage).
            ಎರಡನೆಯ ಘಟ್ಟ – ಉದಾರೀಕರಣದ ಅವಧಿಯ ಘಟ್ಟ (Liberalization stage). 
             ಮೂರನೆಯ  ಘಟ್ಟ – ಉದಾರೀಕರಣದ ಅವಧಿನಂತರದ ಘಟ್ಟ(Post liberalization stage).  

Thursday, April 17, 2014

17 ಎಪ್ರೀಲ್ 2014


ವೃತ್ತಿಪರ ವಿಮಾ ಏಜೆಂಟರಿಂದ ವಿಮಾ ಉದ್ದಿಮೆಗೆ ದೊರಕುವ ಪ್ರಯೋಜನಗಳು :



ವೃತ್ತಿಪರ ವಿಮಾ ಏಜೆಂಟ (professional insurance agent) ರಿಂದ,.

1)    ವಿಮಾ ಗ್ರಾಹಕರಲ್ಲಿ ಆತ್ಮ ವಿಶ್ವಾಸ ಹುಟ್ಟುತ್ತದೆ, ಹೆಚ್ಚುತ್ತದೆ.
2)   ವಿಮೆಯ ವ್ಯಾಪಾರ ಭರದಿಂದ ಬೆಳೆಯುತ್ತದೆ.
3)    ಸಮಾಜಕ್ಕೆ ಆರ್ಥಿಕ ಭದ್ರತೆ ದೊರಕುತ್ತದೆ.
4)   ಉದ್ಯೋಗಾವಕಾಶಗಳು ಬೆಳೆಯುತ್ತವೆ.
5)   ಅಯೋಗ್ಯ ಗಿರಾಕಿಗಳು ದೂರ ಉಳಿಯುತ್ತಾರೆ. ಇದರಿಂದ

1) ವಿಮಾ ಸಂಸ್ಥೆಯ ಗ್ರಾಹಕರಿಗೆ ತಮ್ಮ ಪಾಲಸಿಗಳ ಮೆಲೆ ಹೆಚ್ಚು ಬೋನಸ್ಸು ದೊರಕುತ್ತದೆ.
2) ಸಂಸ್ಥೆಯ ಮಾಲಿಕರಿಗೆ ತಾವು ಹೂಡಿದ ಭಂಡವಾಳದ ಮೇಲೆ ಹೆಚ್ಚು ಲಾಭ ದೊರುಯತ್ತದೆ.

Wednesday, April 16, 2014

16 ಎಪ್ರೀಲ್ 2014


ವೃತ್ತಿಪರ ವಿಮಾ ಏಜೆಂಟ (professional insurance agent) ರಿಂದ ಗ್ರಾಹಕರಿಗೆ ದೊರಕುವ ಪ್ರಯೋಜನಗಳು :



ಅವಶ್ಯಕತೆಗಳ ಈಡೇರಿಕೆ (need fulfilment): ವೃತ್ತಿಪರ ವಿಮಾ ಏಜೆಂಟನು ಗ್ರಾಹಕನ ನಿಜವಾದ ಅವಶ್ಯಕತೆಗಳನ್ನು ಗುರುತಿಸಿ, ಅವುಗಳ ಈಡೇರಿಕೆಗೆ ಬೇಕಾಗುವ ವಿಮಾ ಸರಕುಗಳನ್ನೇ ಶಿಫಾರಸು ಮಾಡುವನು.

ಮುಚ್ಚು ಮರೆಯಿಲ್ಲದೇ ಎಲ್ಲವನ್ನು ಪ್ರದರ್ಶಿಸುವ  ವ್ಯವಹಾರ (disclosure): ವೃತ್ತಿಪರ ವಿಮಾ ಏಜೆಂಟನು ಗ್ರಾಹಕನಿಗೆ ಸರಕುಗಳ ಗುಣಲಕ್ಷಣಗಳನ್ನು ವಿವರಿಸುವಾಗ ಏನನ್ನೂ ಬಚ್ಚಿಡದೇ ಎಲ್ಲವನ್ನೂ ಹೇಳುವ ಪಾರದರ್ಶಕತೆಯನ್ನು  ತೋರಿಸುತ್ತಾನೆ.

Tuesday, April 15, 2014

15  ಎಪ್ರೀಲ್ 2014


ವೃತ್ತಿಪರ ಮಾರುಕಟ್ಟೆಯ(professional market)  ಯ ಪ್ರಯೋಜನಗಳು: 



ವ್ಯವಹಾರದಲ್ಲಿ ಗ್ರಾಹಕ ಎದುರಿಸುವ ನಿಜವಾದ ಸಮಸ್ಯೆ ಎಂದರೆ ಅಂಜಿಕೆ.

ಒಂದನೆಯ ಅಂಜಿಕೆ : ತಮ್ಮ ಸ್ವಾರ್ಥಕ್ಕೇ ಪ್ರಾಧಾನ್ಯತೆ ಕೊಡುವ ಮಾರಾಟಗಾರರಿಂದ ಉಂಟಾಗುವ ಅಂಜಿಕೆ.

ಎರಡನೆಯ ಅಂಜಿಕೆ : ಮನಸಾ ಬಯಸಿದ ಸೌಲಭ್ಯಗಳು ನಿಜವಾಗಿ ದಕ್ಕದೇ ಇರುವ ಅಂಜಿಕೆ.

ವೃತ್ತಿಪರ ಮಾರುಕಟ್ಟೆಯಲ್ಲಿ ಈ ಎರಡೂ ಅಂಜಿಕೆಗಳಿಗೆ ಮುಕ್ತಿ ಸಿಗುತ್ತದೆ. ಅಲ್ಲಿ ಗ್ರಾಹಕರ ಬೇಡಿಕೆಗಳಿಗೇ ಮೊದಲ ಆದ್ಯತೆ ನೀಡಲಾಗುತ್ತದೆ ಬೇಡಿಕೆಗಳ ಪೂರೈಕೆಗೆ ಗರಿಷ್ಠ ಪ್ರಾಧಾನ್ಯತೆ  ನೀಡಲಾಗುತ್ತದೆ.

Monday, April 14, 2014


14ಎಪ್ರೀಲ್ 2014


ವ್ಯಕ್ತಿಗತ ಹಣಕಾಸು ನಿರ್ವಹಣೆ(individual financial management) ಯಲ್ಲಿ ವಿಮೆಯ ಪ್ರಯೋಜನಗಳು.


    
1) ಆರ್ಥಿಕ ಹಾನಿಯಿಂದ ರಕ್ಷಣೆ : ವಿಮೆಯು ಆಕಸ್ಮಿಕ ಘಟನೆಗಳಿಂದ ಸಂಭವಿಸಬಹುದಾದ ಆರ್ಥಿಕ  ಹಾನಿಯನ್ನು ತಡೆಗಟ್ಟುತ್ತದೆ. ಆರ್ಥಿಕ ಗುರಿಯನ್ನು ಖಚಿತವಾಗಿ ತಲುಪಬಹುದು.

2) ಹೂಡಿಕೆಯ ಸ್ವಾತಂತ್ರ್ಯ : ವಿವಿಧ ರೀತಿಯ ಹೂಡಿಕೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. 
    ಉದಾ : ಚಿಕ್ಕ ಅವಧಿಯಿಂದ ದೀರ್ಘಾವಧಿಗಳಉಳಿತಾಯಗಳು, ಅತ್ಯಂತ ಸುರಕ್ಷಿತ ಉಳಿತಾಯಗಳು,
  ಧೈರ್ಯವಹಿಸಲು ತಯಾರಾದರೆ ಅತೀ ಹೆಚ್ಚು ಗಳಿಕೆಯ ಉಳಿತಾಯಗಳು, ಇಚ್ಛಿತ ಕಾಲಾವಧಿಗಳಿಗೆ (ವಿಮಾ   ಅವಧಿಗಳಿಗೆ) ಉಳಿತಾಯ ಫಲಗಳನ್ನು ಪಡೆಯ ಬಹುದಾದ     ಸೌಲಭ್ಯಗಳು,  ಅನಕೂಲಕರ ಅವಧಿಗಳಿಗೆ    (ಇಚ್ಛಿತ ವಿಮಾ ಕಂತಿನ ಅವಧಿಗಳಿಗೆ) ಉಳಿತಾಯ ಕೈಕೊಳ್ಳಬಹುದಾದ ವ್ಯವಸ್ಥೆಗಳು.
   
3) ಕರ ರಿಯಾಯತಿಗಳ ಸೌಲಭ್ಯಗಳ ಪ್ರಾಪ್ತಿ : ಉಳಿತಾಯಗಳಿಗೆ ಆಯ ಕರ ಕಾನೂನಿನ ಸೆಕ್ಶನ್ 80ಸಿ, 10-10-ಎ, 10-10-ಡಿ, 80ಡಿ, 80 ಡಿ ಡಿ ಬಿ ಗಳ ಸೌಲಭ್ಯಗಳು ಸಿಗುತ್ತವೆ.  
  
4) ತುರ್ತು ಸಾಲ : ಪಾಲಿಸಿಗಳನ್ನು ಅಡವಿಡುವ ಮೂಲಕ ತುರ್ತು ಸಾಲವನ್ನು ಪಡೆಯ ಬಹುದು.
   
5) ವೈವಿಧ್ಯಮಯ ಯೋಜನೆಗಳು : ಜೀವನದ ವಿವಿಧ ಹಂತಗಳ ಬೇಡಿಕೆಗಳನ್ನು ಪೂರೈಸುತ್ತವೆ. ಉದಾ:  ಮಕ್ಕಳ ಶಿಕ್ಷಣ,  ಮದುವೆ, ಆಸ್ತಿನಿರ್ಮಾಣ, ವೃದ್ಧಾಪ್ಯಕ್ಕೆ ಆಸರೆ, ಇತ್ಯಾದಿ ಬೇಡಿಕೆಗಳನ್ನು ಪೂರೈಸುತ್ತವೆ.
    
6) ತುರ್ತು ನಿಧಿಯ ಒತ್ತಡದಿಂದ ಮುಕ್ತಿ : ಜೀವನದಲ್ಲಿ, ಉದ್ಯೋಗದಲ್ಲಿ ವಿಶೇಷ ಗಂಡಾಂತರ ಪ್ರಸಂಗ  ನಿಭಾಯಿಸಲು ಬೇಕಾಗುವ ದೊಡ್ಡ ಮೊತ್ತದ ನಿಧಿಯನ್ನು ಪ್ರತ್ಯೇಕವಾಗಿ  ತೆಗೆದಿಡುವ ಅವಶ್ಯಕತೆ ಇಲ್ಲ.
   
7) ಉಳಿತಾಯ ಹವ್ಯಾಸ ನಿರ್ಮಾಣ : ನಿಯಮಿತ ಹಾಗೂ ಸತತ ಉಳಿತಾಯ ಕೈಕೊಳ್ಳ  ಬೇಕಾಗುವದರಿಂದ ಉಳಿತಾಯದ   ಹವ್ಯಾಸ ಬೆಳೆಯುವದು.

Sunday, April 13, 2014

13ಎಪ್ರೀಲ್ 2014


ವಿಮಾ ಸೇವೆಗಳಿಂದ ಪ್ರಯೋಜನ ಪಡಯುವವರು : 1) ವ್ಯಕ್ತಿ, 2) ಸಮಾಜ, 3) ಸರಕಾರ.



ವ್ಯಕ್ತಿ  : ಅವರ ಆರ್ಥಿಕ ಹಾನಿಯ ಅಪಾಯಗಳಿಗೆ ವಿಮೆಯಿಂದ ರಕ್ಷಣೆ ದೊರಕುವದು.

ವಿಮೆಯಿಂದ ನೇರವಾಗಿ ದೊರೆಯುವ ಉದ್ಯೋಗ ಅವಕಾಶಗಳು : ವಿಮಾ  ನೌಕರಿ, ವಿಮಾ ಏಜೆನ್ಸಿ.  ವಿಮೆಯಿಂದ ಅಪ್ರತ್ಯಕ್ಷವಾಗಿ ದೊರೆಯುವ ಉದ್ಯೋಗ ಅವಕಾಶಗಳು : ವಿಮೆ ಪೋಷಿಸುವ   
ಉದ್ದಿಮೆಗಳಿಂದ.

ಸಮಾಜ : ಕುಟುಂಬಕ್ಕೆ ದೊರೆಯುವ ಭದ್ರತೆ, ಸಮಾಜಕ್ಕೆ ಆರ್ಥಿಕ ಸ್ಥಿರತೆಯನ್ನು ನೀಡುವದು.

ಸರಕಾರ : ದೇಶಾಭಿವೃದ್ಧಿಗೆ ಬೇಕಾಗುವ ಹಣವು ದೊಡ್ಡ ಪ್ರಮಾಣದಲ್ಲಿ  ದೊರಕುತ್ತದೆ.         ದೇಶಾಭಿವೃದ್ಧಿಗೆ ಬೇಕಾಗುವ ಹಣವು ದೀರ್ಘ ಕಾಲಾವಧಿಗೆ ದೊರಕುತ್ತದೆ. ಸಾಮಾಜಿಕ ಹಾಗೂ ಜನಕಲ್ಯಾಣಕ್ಕೆ ಹಣದ ಹೂಡಿಕೆ ದೊರಕುತ್ತದೆ.

Saturday, April 12, 2014

12ಎಪ್ರೀಲ್ 2014


ಆರ್ಥಿಕ ಸೇವೆ (Financial services ) ಗಳ ವಿವಿಧ ನಮೂನೆಗಳು.



ಆರ್ಥಿಕ ವಹಿವಾಟುಗಳಿಗೆ ಸಹಾಯ ಸಲ್ಲಿಸುವ ಸೇವೆಗಳಿಗೆ ಆರ್ಥಿಕ ಸೇವೆಗಳೆಂದು ಕರೆಯುವರು :      1) ಬ್ಯಾಂಕ ವ್ಯವಹಾರ ಸೇವೆ (banking services),
2) ಶೇರು ವ್ಯಾಪಾರ ಸೇವೆ (share market services),
3) ವಿಮಾ ಸೇವೆ (insurance services),
4) ಹಣ ಹೂಡಿಕೆ ಸೇವೆ (investment services),
5) ಹಣ ಉಳಿತಾಯಗಳ ಸೇವೆ (savings  services),
6) ನಿವೃತ್ತಿ ವೇತನ ಯೋಜನಾ ಸೇವೆ (retirement solution services), ಇತ್ಯಾದಿಗಳು.

Friday, April 11, 2014

11ಎಪ್ರೀಲ್ 2014

ವಿಮೆಯ ಕಾರ್ಯಗಳು :

     
ವಿಮೆಯು ಗಳಿಕೆಯ ಆಸ್ತಿಯನ್ನು ರಕ್ಷಿಸುತ್ತದೆ.
ಸಂಭವಿಸಬಹುದಾದ ವಿಪತ್ತಿನಿಂದ ಆಸ್ತಿಯ ಆರ್ಥಿಕ ಗಳಿಕೆಯ ಸಾಮಥ್ರ್ಯವನ್ನು ಕುಸಿಯದಂತೆ ವಿಮೆ ನೋಡಿಕೊಳ್ಳುತ್ತದೆ.
ಆರ್ಥಿಕ ಗಳಿಕೆಯ ಆಸ್ತಿಗಳ ಉದಾಹರಣೆಗಳು : ಕಾರು, ಮನೆ, ಬೆಳೆ, ಗಳಿಸುವ ಜೀವ.
ಆರ್ಥಿಕ ಗಳಿಕೆಯ ಆಸ್ತಿಗಳು ಎದುರಿಸುವ ವಿಪತ್ತುಗಳ ಉದಾಹರಣೆಗಳು : ಅಪಘಾತ, ಬೆಂಕಿ, ಬರಗಾಲ, ದುಡಿಮೆಯ ಕಾಲದಲ್ಲಿಯ ಸಾವು.


ಗಳಿಸುವ ಜೀವಂತ ವ್ಯಕ್ತಿಗೆ ಎದುರಾಗುವ ವಿಪತ್ತು (Risk)ಗಳು :



ಗಳಿಕೆಯ ಅವಧಿಯಲ್ಲಿ ಸಂಭವಿಸಬಹುದಾದು :  1) ಸಾವು (death) 2) ಅಪಘಾತ (accident), 3) ಗಂಭೀರ ಕಾಯಿಲೆ (critical illness ). 4) ಗಳಿಕೆಯ ಅವಧಿಯ ನಂತರ ಸಂಭವಿಸುವ ಮುಪ್ಪು  (old age).

Thursday, April 10, 2014

10 ಎಪ್ರೀಲ್ 2014


ವಿಮೆಯ ಬಗ್ಗೆ ಇನ್ನಷ್ಟು ವಿವರಣೆ :



ವಿಮೆಯು ವಿಪತ್ತು ವರ್ಗಾವಣೆಯ (Risk  transfer) ತತ್ವದ ಮೇಲೆ ಕೆಲಸ ಮಾಡುತ್ತದೆ.
ಆರ್ಥಿಕ ಹಾನಿಯ ವಿಪತ್ತನ್ನು ವರ್ಗಾಯಿಸ ಬಯಸುವವನಿಗೆ ವಿಮಾ ಕೋರಿಕೆದಾರ ((Insurance Proposer) ಎನ್ನುತ್ತಾರೆ.

ಆರ್ಥಿಕ ಹಾನಿಯ ವಿಪತ್ತನ್ನು ಸ್ವೀಕರಿಸಲು ತಯಾರಾಗುವವನಿಗೆ ವಿಮಾ ಪ್ರದಾನಕ ((Insurance Acceptor) ಎನ್ನುತ್ತಾರೆ.

ಆರ್ಥಿಕ ಹಾನಿಯ ವಿಪತ್ತನ್ನು  ವರ್ಗಾಯಿಸಲು ನೀಡಬೇಕಾದ ಬೆಲೆಗೆ ವಿಮಾಕಂತು (Insurance premium) ಎನ್ನುತ್ತಾರೆ.

ಆರ್ಥಿಕ ಹಾನಿಯ ಅಪಾಯಕ್ಕೆ ನೀಡಬಹುದಾದ ಪರಿಹಾರದ ಗರಿಷ್ಠಮೊತ್ತಕ್ಕೆ  ವಿಮಾ ಮೊತ್ತ (Sum Insured) ಎನ್ನುತ್ತಾರೆ.

Wednesday, April 9, 2014

9 ಎಪ್ರೀಲ್ 2014

ವಿಮೆ (Insurance)


ನಿಗದಿತ ಬೆಲೆಗೆ ಪ್ರತಿಯಾಗಿ, ಪೂರ್ವ ನಿಗದಿತ ಘಟನೆಗಳು ಸಂಭವಿಸಿದಾಗ, ಜರುಗಬಹುದಾದ ಆರ್ಥಿಕ ಹಾನಿಗಳಿಗೆ, ಪೂರ್ವನಿರ್ಧಾರಿತ ಪರಿಹಾರ ನೀಡುವದಕ್ಕೆ ವಿಮೆ (Insurance)    ಎನ್ನುತ್ತಾರೆ,

ಆಕಸ್ಮಿಕ ವಿಪತ್ತಿನ ಘಟನೆಗಳಿಂದ ಜರುಗಬಹುದಾದ ಆರ್ಥಿಕಹಾನಿಯಿಂದ ರಕ್ಷಣೆ ಪಡೆಯಬೇಕಾದರೆ ವಿಮೆ ಅತ್ಯವಶ್ಯವಾಗಿದೆ.

ಆರ್ಥಿಕ ಹಾನಿಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳದೇ ಉಪಾಯವಾಗಿ ಬೇರೆಯವರಿಗೆ ಅಪಾಯದ ಹಾನಿಯನ್ನು ವರ್ಗಾಯಿಸುವದಕ್ಕೆ ವಿಮೆ ಎಂದು ಕರೆಯಬಹುದು. ಇದುವೇ ವಿಪತ್ತು ವರ್ಗಾವಣೆ (Risk  transfer).

ಕೆಲವರು ಆರ್ಥಿಕ ಹಾನಿಯ ಅಪಾಯವನ್ನು ಮೈಮೇಲೆ ಹಾಕಿಕೊಂಡು ಆ ಹಾನಿಯನ್ನು ತಮ್ಮ ಬಳಿ ಉಳಿಸಿಕೊಳ್ಳುತ್ತಾರೆ. ಇದುವೇ ವಿಪತ್ತು ಉಳಿಸಿಕೊಳ್ಳುವಿಕೆ (Risk  retention).

Tuesday, April 8, 2014


8 ಎಪ್ರೀಲ್ 2014

ಲೋಕಾರ್ಪಣೆ : ವಿಮಾಲೋಕ. (ಸಮಸ್ತ ಕನ್ನಡ ಜನತೆಗೆ)


ಶಾಲಿವಾಹನ ಶಕೆ ೧೯೩೬,  ಜಯನಾಮ ಸಂವತ್ಸರ, ಚೈತ್ರ ಮಾಸ, ಶುದ್ಧ ನವಮಿ, ಮಂಗಳವಾರ 
(೮ ಎಪ್ರೀಲ್ ೨೦೧೪ ) ದಿನವಾದ ಇಂದು, ರಾಮ ನವಮಿಯ ಶುಭ ದಿನ. 

ಈ ಶುಭ ದಿನದಂದು, ನಾನು ಸಮಸ್ತ ಕನ್ನಡ ಜನತೆಗೆ  " ವಿಮಾ ಲೋಕ "   ಬ್ಲಾಗ್ ನ್ನು ಪ್ರಾರಂಭಿಸುತ್ತಿದ್ದೇನೆ. ವಿಮೆಯ ಬಗ್ಗೆ, ಅದರಲ್ಲೂ ವಿಶೇಷವಾಗಿ ಜೀವ ವಿಮೆಯ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಈ ವೇದಿಕೆ ತಯಾರಾಗಿದೆ.  ಈ ನನ್ನ ಪ್ರಯತ್ನಕ್ಕೆ ಸಹಕಾರ ನೀಡಲು ಕನ್ನಡ ಜನತೆಯನ್ನು ಪ್ರಾರ್ಥಿಸುತ್ತಿದ್ದೇನೆ.

ವಂದನೆಗಳೊಂದಿಗೆ -
ರಮೇಶ ಇಟ್ನಾಳ. ( ಧಾರವಾಡ : ೫೮೦ ೦೦೮.  E mail : rhitnal@gmail.com )