Thursday, December 11, 2014

11 ಡಿಸೆಂಬ 2014 

 ಅವಿವಾಹಿತ ತಾರುಣ್ಯಾವಸ್ಥೆ  (Young  unmarried) ಯ ವ್ಯಕ್ತಿಯ ಅವಶ್ಯಕತೆಗಳನ್ನು ಗುರುತಿಸುವಾಗ ಯಾವ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು?

 ಅವಿವಾಹಿತ ತರುಣನ ಅವಶ್ಯಕತೆಗಳನ್ನು ಗುರುತಿಸುವಾಗ ಕೆಳಗಿನ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.  
ಅವಲಂಬಿತರನ್ನು ಪೋಷಿಸುವ ಜವಾಬ್ದಾರಿ ಇದ್ದರೆ, 
ಆಶ್ರಿತರ ಯೋಗ ಕ್ಷೇಮಕ್ಕಾಗಿ ಆದ್ಯತೆ ನೀಡಬೇಕು. 
    (ಸಾಕಷ್ಟು ಅವಧಿ /ಅಪಘಾತ/ಆರೋಗ್ಯ ವಿಮೆ ಪಡೆಯಬೇಕು.)
ತದ ನಂತರ ನಿವೇಶನ/ಮನೆ/ಕಾರು ಸೌಲಭ್ಯಗಳಿಗಾಗಿ ಉಳಿಸಲು ಪ್ರಯತ್ನಿಸಬೇಕು. 
    ಹೂಡಿಕೆಯ ಅಪಾಯ ಸಹಿಸುವ ಶಕ್ತಿ ಇಲ್ಲದಿದ್ದರೆ, 
   (ಎಂಡೋಮೆಂಟ್/ಮನೀಬ್ಯಾಕ್ ಪಾಲಸಿಗಳಲ್ಲಿ,/ ನಿರಂತರ ಆರ್.ಡಿ./ ಶೇರು ಮಾರುಕಟ್ಟೆ ಆಧಾರಿತ ಉಳಿತಾಯ ಮಾಡಬೇಕು.)   
    ಹೂಡಿಕೆಯ ಅಪಾಯ ಸಹಿಸುವ ಶಕ್ತಿ ಇದ್ದರೆ, 
    ಯುಲಿಪ್ ಎಂಡೋಮೆಂಟ್ ಪಾಲಸಿ/ ಮ್ಯೂಚುವಲ್ ಫಂಡಿನ ಶೇರು ನಿಧಿಗಳಲ್ಲಿ ಉಳಿತಾಯ ಮಾಡಬೇಕು.
ಸ್ವಲ್ಪ ಹಣವನ್ನು ನಿವೃತ್ತಿ ಜೀವನ ಸೌಲಭ್ಯ (retirement benefits)  ಕ್ಕಾಗಿ ತೊಡಗಿಸಬೇಕು.
(ಮುಂದೂಡಿದ ವರ್ಷಾಶನ ಪಾಲಿಸಿ/ಪಿ,ಎಫ್,/ನಿವೃತ್ತಿ ನಿಧಿಯಲ್ಲಿ ಉಳಿಸ ಬೇಕು.)

ಅವಲಂಬಿತರನ್ನು ಪೋಷಿಸುವ ಜವಾಬ್ದಾರಿ ಇಲ್ಲದಿದ್ದರೆ, 
ನಿವೇಶನ/ಮನೆ/ಕಾರು ಸೌಲಭ್ಯಗಳಿಗಾಗಿ ಉಳಿಸಲು ಪ್ರಯತ್ನಿಸಬೇಕು. 

ಹೂಡಿಕೆಯ ಅಪಾಯ ಸಹಿಸುವ ಶಕ್ತಿ/ಧೈರ್ಯ (Ability to take risk and withstand investment losses) ಇಲ್ಲದಿದ್ದರೆ,  (ಎಂಡೋಮೆಂಟ್/ಮನೀಬ್ಯಾಕ್ ಪಾಲಸಿಗಳಲ್ಲಿ,/ ನಿರಂತರ ಆರ್.ಡಿ./ ಶೇರು ಮಾರುಕಟ್ಟೆ ಆಧಾರಿತ ಯುಳಿತಾಯ ಮಾಡಬೇಕು.)   

ಹೂಡಿಕೆಯ ಅಪಾಯ ಸಹಿಸುವ ಶಕ್ತಿ/ಧೈರ್ಯ (Ability to take risk and withstand investment losses) ಇದ್ದರೆ,ಯುಲಿಪ್ ಎಂಡೋಮೆಂಟ್ ಪಾಲಸಿ/ ಮ್ಯೂಚುವಲ್ ಫಂಡಿನ ಶೇರು ನಿಧಿಗಳಲ್ಲಿ ಯುಳಿತಾಯ ಮಾಡಬೇಕು.
ಸ್ವಲ್ಪ ಹಣವನ್ನು ನಿವೃತ್ತಿ ಜೀವನ ಸೌಲಭ್ಯ (retirement benefits)  ಕ್ಕಾಗಿ ತೊಡಗಿಸಬೇಕು.
    (ಮುಂದೂಡಿದ ವರ್ಷಾಶನ ಪಾಲಿಸಿ/ಪಿ,ಎಫ್,/ನಿವೃತ್ತಿ ನಿಧಿಯಲ್ಲಿ ಉಳಿಸ ಬೇಕು.) 
ವಿಮೆಗಾಗಿ ಕೊನೆಯ ಆದ್ಯತೆ ನೀಡಬೇಕು. 
    (ಅವಧಿ /ಅಪಘಾತ/ಆರೋಗ್ಯ ವಿಮೆ ಪಡೆಯಬೇಕು.)

No comments:

Post a Comment