Saturday, November 15, 2014

15 ನವ್ಹಂಬರ್ 2014

 ಉಳಿತಾಯದ ಅವಶ್ಯಕತೆಗಳ ಆದ್ಯತೆಗಳನ್ನು ಹೇಗೆ ನಿರ್ಧರಿಸ ಬೇಕು? 

ಪ್ರಥಮ ಆದ್ಯತೆ  :  ತುರ್ತು ನಿಧಿಗಾಗಿ ಉಳಿಸುವದು - (Save for Emergencu Fund) .ಹಟಾತ್ತನೆ ಉದ್ಭವಿಸುವ ಆದರೆ ತಪ್ಪಿಸಿ ಕೊಳ್ಳಲಾಗದ ಆರ್ಥಿಕ ಬೇಡಿಕೆಗಳ ಈಡೇರಿಕೆಗಾಗಿ, (ಅನಾರೋಗ್ಯ/ಅಪಘಾತ/ನಿರುದ್ಯೋಗ/ಇತ್ಯಾದಿ.) ಕನಿಷ್ಠ 6 ತಿಂಗಳ ಆದಾಯದ ಗಾತ್ರದ ತುರ್ತು ನಿಧಿಯನ್ನು ನಿರ್ಮಿಸಬೇಕು. ತುರ್ತು ನಿಧಿಗಾಗಿ ಎರಡು ತಿಂಗಳ ಹಣವನ್ನು ಬ್ಯಾಂಕ ಎಸ್.ಬಿ. ಖಾತೆಯಲ್ಲಿ, ಬಾಕೀ ಹಣವನ್ನು ಮ್ಯೂಚುವಲ್ ಫಂಡಿನ ಸಾಲನಿಧಿಯಲ್ಲಿ ಹೂಡಿಕೆ ಮಾಡ ಬಹುದು.              
ಎರಡನೆಯ ಆದ್ಯತೆ : ವಿಮೆಗಾಗಿ ಉಳಿಸುವದು- (Save for Insurance). 
ಆಕಸ್ಮಿಕ ಮರಣ (un anticipated death )ದಿಂದ ಆದಾಯ ಮೂಲ ಗಳಿಕೆಗಳನ್ನು ಸಂರಕ್ಷಿಸುವದು. ಸಾಕಾಗುವಷ್ಟು ಮೊತ್ತಕ್ಕೆ ವಿಮೆ ಖರೀದಿಸುವದನ್ನು ಮರೆಯ ಬಾರದು. ಅವಧಿ ವಿಮೆಯನ್ನು ತುಂಬಾ ಅಗ್ಗದ ದರದಲ್ಲಿ ಖರೀದಿಸಬಹುದು. ಸಾಕಾಗುವಷ್ಟು ಮೊತ್ತಕ್ಕೆ ವಿಮೆ ಖರೀದಿಸಿದ ನಂತರವೇ ಉಳಿದ ಉಳಿತಾಯದ ಅವಶ್ಯಕತೆಗಳ ಬಗ್ಗೆ ಯೋಚಿಸ ಬೇಕು. 
      
ಆಕಸ್ಮಿಕ ಅಪಘಾತ  (un anticipated accident) ಗಳಿಂದ ಆದಾಯ ಮೂಲ ಗಳಿಕೆಗಳನ್ನು  ಸಂರಕ್ಷಿಸುವದು.ಅಪಘಾತಗಳಿಂದ ಬದುಕಿ, ಆದಾಯ ನಿಂತು ಹೋದರೆ, ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲು ಹೆಚ್ಚುವರಿ ಅಪಘಾತ ವಿಮೆ ಸೌಲಭ್ಯಗಳನ್ನು ಖರೀದಿಸುವದಕ್ಕೆ ಮರೆಯಬಾರದು. ಕೆಲವು ಬಾರಿ  ಪ್ರತ್ಯೇಕ ಅಪಘಾತ ವಿಮೆ ಪಾಲಸಿಗಳನ್ನು ಖರೀದಿಸ ಬಹುದು.
ಆಕಸ್ಮಿಕ ಗಂಭೀರ ಕಾಯಿಲೆ (un anticipated critical illness) ಗಳಿಂದ ಆದಾಯ ಮೂಲ ಗಳಿಕೆಗಳನ್ನು ಸಂರಕ್ಷಿಸುವದು. ಆಕಸ್ಮಿಕ ಗಂಭೀರ ಕಾಯಿಲೆಗಳಿಂದ  ಆದಾಯ ನಿಂತು ಹೋದರೆ, ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲು ಹೆಚ್ಚುವರಿ ಅಪಘಾತ ವಿಮೆ ಸೌಲಭ್ಯಗಳನ್ನು ಖರೀದಿಸುವದಕ್ಕೆ ಮರೆಯಬಾರದು. ಕೆಲವು ಬಾರಿ  ಪ್ರತ್ಯೇಕ ಅಪಘಾತ ವಿಮೆ ಪಾಲಸಿಗಳನ್ನು ಖರೀದಿಸಬಹುದು. ಕುಟುಂಬದ ಸದಸ್ಯರೆಲ್ಲರಿಗೂ ಒಂದೇ ಪಾಲಿಸಿಯ ಮೂಲಕ ಅಪಘಾತ ವಿಮೆ ಪಾಲಸಿ ಖರೀದಿಸ ಬಹುದು.  
       
ನಂತರದ ಆದ್ಯತೆ  :  ಮಕ್ಕಳ ಶಿಕ್ಷಣ/ಮದುವೆ (children’s education / marriage) ಗೆ ಅನಕೂಲಕರ ವಿಮೆ ಪಾಲಸಿಗಳ ಮೂಲಕ ಉಳಿತಾಯ ಮಾಡುವದು.
       ಈ ಪಾಲಿಸಿಗಳಲ್ಲಿ ವಿಮಾ ಖರೀದಿದಾರ ನಿಧನನಾದರೂ, ಕೂಡಲೇ ಹಣ ನೀಡದೆ, ಮಕ್ಕಳ  ಶಿಕ್ಷಣ/ ಮದುವೆಯ ಸಮಯದಲ್ಲಿಯೇ ಪರಿಹಾರ ಹಣವನ್ನು ನೀಡಲಾಗುವದು.    
        ಸಕಾಲದಲ್ಲಿ ಪಡೆದ ಹಣದ ಮೌಲ್ಯ ಅಘಾದವಾಗಿರುತ್ತದೆ.
ನಂತರದ ಆದ್ಯತೆ  : ಆಸ್ತಿಗಳ ಗಳಿಕೆಗಾಗಿ/ರಕ್ಷಣೆಗಾಗಿ ಉಳಿಸುವದು - (Save for creation / maintainance of assets).     
       ಮನೆ/ವಾಹನ/ಜೀವನಾವಶ್ಯಕ ವಸ್ತುಗಳಿಗಾಗಿ. ಇವುಗಳಿಗಾಗಿ ಉಳಿಕೆಯ ಹಣ ಬಳಸ ಬಹುದು, ಅಥವಾ ಸಾಲದ ಹಣ ಪಡೆಯ ಬಹುದು. ಸಾಲದ ಹಣಕ್ಕೆ ವಿಮೆ 
       ತೆಗೆದುಕೊಳ್ಳುವದನ್ನು ಮರೆಯ   ಬಾರದು. ಸಾಲ ವಾಪಸಾತಿ ಕಂತಿನ ನಿವ್ವಳದ ಗರಿಷ್ಠ ಮೊತ್ತ, ನಿವ್ವಳ ವೇತನದ 40% ಮಿಕ್ಕಬಾರದು. ಮನೆ ಖರೀದಿಸಲು ಸಾಲ  
       ಪಡೆಯುವಾಗ, ಬ್ಯಾಂಕುಗಳು ಮನೆಯ ಬೆಲೆಯ 100% ಮೊತ್ತಕ್ಕೆ ಸಾಲ  ನೀಡದೇ 75% ಅಥವಾ 80% ಮೊತ್ತಕ್ಕೆ ಸಾಲ ನೀಡುತ್ತದೆ.      
ಕೊನೆಯ ಆದ್ಯತೆ  :  ನಿವೃತ್ತಿ ಜೀವನಕ್ಕೆ ಉಳಿಸುವದು - (Save for Retired Life) .                                                
ನೌಕರ ವರ್ಗಕ್ಕೆ ನಿವೃತ್ತಿ ವೇತನ ಸೌಲಭ್ಯಗಳು; ಪೆನ್ಶನ್, ಇ.ಪಿ.ಎಫ್, ಸೌಲಭ್ಯಗಳು ಮಾಲೀಕರಿಂದ ದೊರೆಯತ್ತವೆ. ಇವುಗಳು ಸಾಕಾಗದಿದ್ದರೆ ಹೆಚ್ಚಿ ಹಣಕ್ಕೆ ನಿವೃತ್ತಿ ಸೌಲಭ್ಯ ಸರಕುಗಳನ್ನು ಕೊಳ್ಳಬೇಕು. ಸ್ವತಂತ್ರವಾಗಿ ಗಳಿಸುವ ಜನರು ನಿವೃತ್ತಿ ವೇತನ ಸೌಲಭ್ಯಗಳಿಗಾಗಿ ಸಂಪೂರ್ಣ ಉಳಿತಾಯವನ್ನು ತಾವೇ ಸ್ವತಃ ಮಾಡಿಕೊಳ್ಳ ಬೇಕಾಗುತ್ತದೆ. ಇದಕ್ಕಾಗಿ ದೀರ್ಘಾವಧೀ ಸರಕುಗಳಲ್ಲಿ ಉಳಿತಾಯ ಮಾಡಬೇಕು.•



ನ್ನೂ ಕೊನೆಯ ಆದ್ಯತೆ : ಆದಾಯ ಕರ ರಿಯಾಯತಿಗಾಗಿ ಉಳಿತಾಯ ಮಾಡುವದು - (Save for Income Tax Rebate) .  ಆದಾಯ ಕರ ರಿಯಾಯತಿಗಾಗಿಯೇ  ಉಳಿಸುವದು ಜಾಣರ ಲಕ್ಷಣವಲ್ಲ. ಅವಶ್ಯಕತೆಗಳ ಈಡೇರಿಕೆಗಾಗಿ ಸರಕುಗಳನ್ನು ಖರೀದಿಸುವಾಗ ದೊರೆಯ ಬಹುದಾದ ಕರ ರಿಯಾಯತಿಗಳನ್ನು ನಿರ್ಲಕ್ಷಿಸುವದು ಮೂರ್ಖತನವಾಗುತ್ತದೆ. 




No comments:

Post a Comment