Monday, November 24, 2014

24  ನವ್ಹಂಬರ್ 2014

ಆರೋಗ್ಯ ವಿಮಾ ಸೌಲಭ್ಯ ಯೋಜನೆ (Health insurance  Benefit Plan)ಗಳ ವಿಶೇಷತೆಗಳು ಯಾವುವು?


ಆರೋಗ್ಯ ವಿಮಾ ಸೌಲಭ್ಯ ಯೋಜನೆ (Health insurance  Benefit Plan)ಗಳ ವಿಶೇಷತೆಗಳು,

1)ಆರೋಗ್ಯ ವಿಮೆ ಕಂತಿನ ಬೆಲೆ (Pricing of Health Insurance): ಬೆಲೆಯ ನಿರ್ಧಾರ, ಆರೋಗ್ಯದ ಸ್ಥಿರತೆ, ಚಟಗಳು,ಹಾಗೂ ಪರಿವಾರದ ಆರೊಗ್ಯದ ಇತಿಹಾಸದ ಮೇಲೆ ಜರುಗುತ್ತದೆ.
ವ್ಯಕ್ತಿಯ ವಯಸ್ಸು ಚಿಕ್ಕದಿದ್ದಾಗ, ಆರೋಗ್ಯದ ಸ್ಥಿತಿ ಚೆನ್ನಾಗಿದ್ದಾಗ, ಆರೋಗ್ಯ ವಿಮೆ ಪಾಲಿಸಿ ಸುಲಭವಾಗಿ ಕಡಿಮೆ ದರದಲ್ಲಿ ಸಿಗುತ್ತದೆ. ವ್ಯಕ್ತಿಯ ವಯಸ್ಸು ದೊಡ್ಡದಾದಾಗ,, ಆರೋಗ್ಯದ ಸ್ಥಿತಿ ಚೆನ್ನಾಗಿರದಾಗ, ಆರೋಗ್ಯ ವಿಮೆ ಪಾಲಿಸಿ ಸುಲಭವಾಗಿ ಸಿಗುವದಿಲ್ಲಾ. ಸಿಕ್ಕರೂ ಹೆಚ್ಚಿನ ದರದಲ್ಲಿ ಸಿಗುತ್ತದೆ. ಹೀಗಾಗಿ ಚಿಕ್ಕ ವಯಸ್ಸಿಗೇ ಆರೋಗ್ಯ ವಿಮೆ ಪಾಲಿಸಿ ಖರೀದಿಸುವದು ಜಾಣತನದ ಲಕ್ಷಣವಾಗಿರುತ್ತದೆ.

2)ನಗದು ರಹಿತ ಸೌಲಭ್ಯ (Cashless facility) : ಆರೋಗ್ಯ ವಿಮಾ ಪಾಲಸಿಧಾರಕ, ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡ ಆಸ್ಪತ್ರಗಳ ಸಮೂಹದಲ್ಲಿ ಚಿಕಿತ್ಸೆ ಪಡೆದಾಗ ನಗದು ಹಣ ನೀಡಬೇಕಾಗಿಲ್ಲಾ. ಚಿಕಿತ್ಸೆಯ ನಂತರ, ಚಿಕಿತ್ಸಾ ವೆಚ್ಚವನ್ನು, ಕಂಪನಿಯು ನೇರವಾಗಿ ಈ ಆಸ್ಪತ್ರೆಗೆ ತಲುಪಿಸುತ್ತದೆ.

3) ಆರೋಗ್ಯ ಪರೀಕ್ಷೆ (Medical Examination): ಆರೋಗ್ಯ ವಿಮಾ ಪಾಲಸಿ ಖರೀದಿಸುವ ಮುನ್ನ, ಗ್ರಾಹಕನ ಆರೋಗ್ಯ ಸ್ಥಿತಿಯನ್ನರಿಯಲು, ಆತನ ಆರೋಗ್ಯ ಪರೀಕ್ಷೆಯನ್ನು ವಿಮಾ ಕಂಪನಿಯು ಬಯಸುತ್ತದೆ.

4) ಹಿಂದೆ ಅನುಭವಿಸಿದ ಕಾಯಿಲೆಗಳು (Pre existing illness) : ಗ್ರಾಹಕನು ಈ ಹಿಂದೆ ಅನುಭವಿಸಿದ ಕಾಯಿಲೆಗಳಿಗೆ, ಪಾಲಿಸಿ ನೀಡಿದ ಕೂಡಲೇ, ಕಂಪನಿಯು ವಿಮಾ ರಕ್ಷಣೆಯನ್ನು ಅನುಗ್ರಹಿಸುವದಿಲ್ಲಾ. ಸಂದರ್ಭಕ್ಕೆ  ಅನುಸಾರವಾಗಿ, ಈ ಕಾಯಿಲೆಗಳನ್ನು ರಕ್ಷಣೆಯ ವ್ಯಾಪ್ತಿಯಿಂದ ಸದಾಕಾಲ ಇಲ್ಲವೆ ಕೆಲವು ಸಮಯ, ಹೊರಗಿಡಬಹುದು. ಎಷ್ಟು ಅವಧಿಯ ವರೆಗೆ ರಕ್ಷಣೆಯನ್ನು ಹೊರಗಿಡುತ್ತಾರೋ, ಆ ಅವಧಿಗೆ ನಿರೀಕ್ಷಣಾ ಅಥವಾ ಕಾಯುವ ಅವಧಿ (Wಚಿiಣiಟಿg Peಡಿioಜ ) ಎನ್ನುತ್ತಾರೆ.

5) ಪರಿಹಾರ ಕೇಳದ್ದಕ್ಕೆ ಬೋನಸ್ (No Claim Bonus): ವಿಮೆಯಲ್ಲಿ ಗ್ರಾಹಕರು ನೀಡುವ ಕಂತಿನ ಹಣ, ಅವರು ಪಡೆಯುವ ಪರಿಹಾರದ ಹಣಕ್ಕಿಂತ , ತೀರ ಚಿಕ್ಕದ್ದಾಗಿರುತ್ತದೆ. ಹೀಗಾಗಿ ಪರಿಹಾರ ಪಡೆದವರಿಗೆ ಪಾಲಸಿ ಮುಂದುವರೆಸುವಲ್ಲಿ ಯಾವ ಸಂಕೋಚ, ಅನಾಸಕ್ತಿ ಉಂಟಾಗುವದಿಲ್ಲಾ.
ಪರಿಹಾರ ಪಡೆಯದ ಗ್ರಾಹಕರಿಗೆ ಕೆಲವು ಬಾರಿ, ತಾವು ಹಿಂದೆ ‘ವ್ಯರ್ಥವಾಗಿ ವಿಮಾ ಕಂತು ನೀಡಿದೆವು’, ಅನ್ನುವ ಭಾವನೆ ಬರುವದು ಸುಲಭ. ಅವರು ಪಾಲಸಿಯನ್ನು ಮುಂದುವರೆಸಲು ಕೆಲವು ವೇಳೆ ಹಿಂದೇಟು ಹಾಕಬಹುದು. ಪರಿಹಾರ ಪಡೆಯದ ಇಂತಹ ಗ್ರಾಹಕರಿಗೆ ಪಾಲಿಸಿಯನ್ನು ಮುಂದುವರೆಸಲು, ಪ್ರೋತ್ಸಾಹ ನೀಡುವ ಸಲುವಾಗಿ ಕಂಪನಿಯು ಅವರಿಗೆ ಬೋನಸ್ ನೀಡುವದು. ಇದಕ್ಕೆ ಪರಿಹಾರ ಕೇಳದ್ದಕ್ಕೆ ನೀಡಲಾಗುವ ಬೋನಸ್ ಎಂದು ಕರೆಯ ಬಹುದು. ಇವರು ಮುಂದುವರೆಸುವ ವಿಮಾಕಂತನ್ನು ನೀಡುವಾಗ, ಆ ವಿಮಾಕಂತಿನಲ್ಲಿ ಈ ಬೋನಸ್ಸಿನ ಹಣವನ್ನು ಕಡಿಮೆ ಮಾಡಲಾಗುವದು.

6)ಶಾಶ್ವತವಾಗಿ ಅನ್ವಯವಾಗದ ಕೆಲವು ಕಾರಣಗಳು (Permanent Exclusions): ಮಾದಕ ದೃವ್ಯ ಸೇವನೆ, ವೈದ್ಯರ ಸಲಹೆಯನ್ನು ದಿಃಖರಿಸುವದು, ಇತ್ಯಾದಿ ಕಾರಣಗಳು, ವಿಮಾ ಪರಿಹಾರವನ್ನು ವಿಮೆಯ ವ್ಯಾಪ್ತಿಯಿಂದ ಶಾಶ್ವತವಾಗಿ ಹೊರಗೆ ಇಡುತ್ತವೆ.

7)ತತ್‍ಕ್ಷಣದಿಂದ ರಕ್ಷಣೆ ಪ್ರಾರಂಭ (Immediate Care ): ವಿಮಾ ಪಾಲಿಸಿಯ ಪ್ರಥಮ ಕಂತಿನ ರಸೀದಿ ನೀಡಿದ ತಕ್ಷಣದಿಂದಲೇ ವಿಮಾ ರಕ್ಷಣೆಯ ಕಾರ್ಯ ಪ್ರಾರಂಭವಗುತ್ತದೆ.

8)ಉಳಿತಾಯ/ಸಾಲದಿಂದ ದೊಡ್ಡಮೊತ್ತದ ಹಣದ ಅವಶ್ಯಕತೆಯಿಲ್ಲ (No need for Lump Sum from Savings or Loans) : ಈ ಪಾಲಸಿಯನ್ನು ತೆಗೆದುಕೊಂಡರೆ, ಅನಾರೋಗ್ಯ, ಗಂಭೀರ ಕಾಯಿಲೆಗಳನ್ನು ಎದುರಿಸುವ ಸಲುವಾಗಿ, ದೊಡ್ಡ ಮೊತ್ತದ ಹಣವನ್ನು ಪ್ರತ್ಯೇಕವಾಗಿ ತೆಗೆದಿಡುವ ಪ್ರಸಂಗ ತಪ್ಪುತ್ತದೆ, ಆಥವಾ ಇಂತಹ ಘಟನೆಗಳು ಸಂಭವಿಸಿದಾಗ ದೊಡ್ಡ ಮೊತ್ತದ ಸಾಲವನ್ನು ಮಾಡುವ ಪ್ರಸಂಗ ತಪ್ಪುತ್ತದೆ.


No comments:

Post a Comment