Thursday, October 30, 2014

30 ಅಕ್ಟೋಬರ್ 2014

ಆಸ್ತಿಯಿಲ್ಲದ ವ್ಯಕ್ತಿಯೊಬ್ಬನ ಉಳಿತಾಯದ ಅವಶ್ಯಕತೆಗಳನ್ನು ಸಾಮಾನ್ಯವಾಗಿ ಹೇಗೆ ವಿಶ್ಲೇಷಿಸಬೇಕು?

ಆಸ್ತಿಯಿಲ್ಲದ ವ್ಯಕ್ತಿಯೊಬ್ಬನ ಉಳಿತಾಯದ ಅವಶ್ಯಕತೆಗಳನ್ನು ಸಾಮಾನ್ಯವಾಗಿ ವಿಶ್ಲೇಷಿಸುವಾಗ ಕೆಳಗಿನ ಆದ್ಯತೆ ( Priority) ಗಳನ್ನು ಗಮನಿಸಬೇಕು.
ಮೊದಲ ಆದ್ಯತೆ :  ತುರ್ತು ನಿಧಿ (Emergency Fund) ಯನ್ನು ನಿರ್ಮಿಸುವದು.
ಹಟಾತ್ತನೆ ಉದ್ಭವಿಸುವ ಆದರೆ    ತಪ್ಪಿಸಿ ಕೊಳ್ಳಲಾಗದ  ಆರ್ಥಿಕ ಬೇಡಿಕೆಗಳ ಈಡೇರಿಕೆಗಾಗಿ. ಉದಾ : ಅನಾರೋಗ್ಯ (Illness) /  ಅಪಘಾತ (Accident) /ನಿರುದ್ಯೋಗ (Unemloyment) /ಇತ್ಯಾದಿ (etc).              
ನಂತರದ ಆದ್ಯತೆ :  ಮಕ್ಕಳ ಶಿಕ್ಷಣ/ಮದುವೆಗೆ ಉಳಿತಾಯ ಮಾಡುವದು.
ನಂತರದ ಆದ್ಯತೆ :  ಮನೆ/ವಾಹನ/ಮನರಂಜನೆ ಸೌಲಭ್ಯಗಳಿಗೆ ಉಳಿತಾಯ ಮಾಡುವದು.
ಕೊನೆಯ ಆದ್ಯತೆ :  ವರ್ಷಾಶನ ಸೌಲಭ್ಯ (Annuity Benefits) ಗಳಿಗೆ ಉಳಿತಾಯ ಮಾಡುವದು. (ಆದಾಯ  ನಿಲುಗಡೆಯಾದಾಗ ಆರ್ಥಿಕ ಸ್ವಾವಲಂಬನೆಯನ್ನು ಪಡೆಯಲು.)
ಮೇಲಿನ ಕ್ರಮಾಂಕಗಳಲ್ಲಿಯೇ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಉಳಿತಾಯಕ್ಕೆ ಆದ್ಯತೆಗಳನ್ನು ನೀಡಬೇಕು.


No comments:

Post a Comment