Wednesday, October 22, 2014

22 ಅಕ್ಟೋಬರ್ 2014

ಉಳಿತಾಯದ ಅವಶ್ಯಕತೆಗಳ ಆದ್ಯತಾಕರಣ (Priortisation of saving needs)   ಎಂದರೇನು?

ಉಳಿತಾಯದ ಅವಶ್ಯಕತೆಗಳು ಅನೇಕ ನಮೂನೆಯವುಗಳಾಗಿವೆ. ಈ ಎಲ್ಲಾ ಅವಶ್ಯಕತೆಗಳನ್ನು ಒಂದೇ ಬಾರಿಗೆ ಪೂರೈಸಿಕೊಳ್ಳಲು, ಮಾಡಬೇಕಾದ ಉಳಿತಾಯಗಳ ಸಾಮಥ್ರ್ಯವೂ ಇರುವದಿಲ್ಲಾ. ಆಗ ಕೆಲವು ಮಹತ್ವದ ಅವಶ್ಯಕತೆಗಳನ್ನು ಮಾತ್ರ ಕೈಗೆತ್ತಿಕೋಂಡು, ಅಷ್ಟೊಂದು ಮಹತ್ವದಲ್ಲದ ಅವಶ್ಯಕತೆಗಳನ್ನು ಮುಂದೂಡುವ ಪ್ರಸಂಗ ಒದಗುತ್ತದೆ. ಹೀಗೆ ಮಹತ್ವದ ಆಧಾರದ ಕ್ರಮಾಂಕಗಳ ಮೇಲೆ ಎಲ್ಲಾ ಅವಶ್ಯಕತೆಗಳನ್ನು ಒಂದರ ನಂತರ ಮತ್ತೊಂದನ್ನು ಬರೆದು ಅವಶ್ಯಕತೆಗಳ ಪಟ್ಟಿಯನ್ನು ತಯಾರಿಸುವದಕ್ಕೆ, ಅವಶ್ಯಕತೆಗಳ ಆದ್ಯತಾಕರಣ (Priortisation of  needs)  ಎಂದು ಕರೆಯುತ್ತಾರೆ. ಮೇಲಾಗಿ ಎಲ್ಲಾ ಅವಶ್ಯಕತೆಗಳು ಒಂದೇ ಬಾರಿಗೆ ಹುಟ್ಟಿಕೊಳ್ಳುವದಿಲ್ಲಾ. ಕಾಲ ಕಾಲಕ್ಕೆ ಹೊಸ ಅವಶ್ಯಕತೆಗಳು ಹುಟ್ಟುತ್ತವೆ. ಹಳೇ ಅವಶ್ಯಕತೆಗಳು ಸಾಯುತ್ತವೆ. ಹೀಗಾಗಿ ಪ್ರತಿ ವರ್ಷಕ್ಕೊಮ್ಮೆ ಅವಶ್ಯಕತೆಗಳ ಆದ್ಯತಾಕರಣ ಪಟ್ಟಿಯನ್ನು ಪರಿಶೀಲಸಿ ನವೀಕರಿಸುವದು ಅತಿ ಮಹತ್ವದ ಸಂಗತಿಯಾಗಿದೆ.


No comments:

Post a Comment