Friday, October 17, 2014

17 ಅಕ್ಟೋಬರ್ 2014

ವಿಮೆಯ ಉಳಿತಾಯದಲ್ಲಿ ದೊರೆಯುವ ಕರರಿಯಾಯತಿ ( Tax Rebate ) ಗಳು ಯಾವವು?


ಜೀವ ವಿಮೆಯ ಕಂತುಗಳಲ್ಲಿ ಉಳಿತಾಯ  ಮಾಡಿದ ಹಣಕ್ಕೆ, ಮೂಲ ವಿಮಾ ರಾಶಿಯ 10% ಮಿತಿಯೊಳಗೆ, ಆಯಕರ ಸೆಕ್ಶನ್ 80 ಸಿ ಯ ಕರ ರಿಯಾಯತಿ ಸೌಲಭ್ಯ, ಗರಿಷ್ಠ  100,000 ರೂ.ಗಳವರಗೆ ದೊರಕುತ್ತದೆ. ಅಂದರೆ ಕರ ರಿಯಾಯತಿಗೆ ಆಧಾರದ ಹಣವನ್ನು ಕರಯೋಗ್ಯ ಆದಾಯದಲ್ಲಿ ಕಳೆದು ಆದಾಯ ಕರವನ್ನು ಲೆಕ್ಕ ಮಾಡುತ್ತಾರೆ.
ಜೀವ ವಿಮೆಯ ಕಂತುಗಳಲ್ಲಿ ಉಳಿತಾಯ  ಮಾಡಿದ ಹಣಕ್ಕೆ, ಆಯಕರ ಸೆಕ್ಶನ್ 80 ಡಿ ಯ ಕರ ರಿಯಾಯತಿ ಸೌಲಭ್ಯ, ಗರಿಷ್ಠ  15,000 ರೂ.ಗಳವರಗೆ ದೊರಕುತ್ತದೆ. 60 ವರ್ಷ ಮಿಕ್ಕಿದ ವರಿಷ್ಠ ನಾಗರಿಕರಿಗೆ ಈ ಮಿತಿ 20,000 ರೂ. ಇದೆ. ಅಂದರೆ ಕರ ರಿಯಾಯತಿಗೆ ಆಧಾರದ ಹಣವನ್ನು ಕರಯೋಗ್ಯ ಆದಾಯದಲ್ಲಿ ಕಳೆದು ಆದಾಯ ಕರವನ್ನು ಲೆಕ್ಕ ಮಾಡುತ್ತಾರೆ.
ಜೀವ ವಿಮೆಯ ಯೋಜನೆಗಳಲ್ಲಿ ( ವರ್ಷಾಶನ ಯೋಜನೆ ಹೊರತು ಪಡಿಸಿ) ಕೈ ಸೇರುವ ಪರಿಹಾರ ಹಣವು ಆಯಕರ ಸೆಕ್ಶನ್ 10-10-ಡಿ. ಪ್ರಕಾರ ಕರಮುಕ್ತ ಆದಾಯವಾಗಿದೆ. ಅಂದರೆ ಈ ಆದಾಯದ ಮೇಲೆ ಆದಾಯ ಕರನೀಡ ಬೇಕಾಗಿಲ್ಲಾ.
ವರ್ಷಾಶನ ಯೋಜ£ಗಳಲ್ಲಿ ವರ್ಷಾಶನ ನೀಡುವ ಮುನ್ನ ವರ್ಷಾಶನ ನಿಧಿಯ ಹಣವನ್ನು  1/3 ಭಾಗದವರೆಗೆ ನಗದು ಗೊಳಿಸಿದಾಗ ಸಿಗುವ ನಗದು ಹಣದ ಮೇಲೆ  ಆಯಕರ ಸೆಕ್ಶನ್ 10-10-ಎ. ಪ್ರಕಾರ ಕರಮುಕ್ತ ಆದಾಯವಾಗಿದೆ. ಅಂದರೆ ಈ ಹಣದ ಮೇಲೆ ಆದಾಯ ಕರನೀಡ ಬೇಕಾಗಿಲ್ಲಾ.


No comments:

Post a Comment