Tuesday, October 14, 2014

14 ಅಕ್ಟೋಬರ್ 2014

ಗುಂಪು ವಿಮೆ (Group Insurance) ಯಲ್ಲಿ ಎಂಥವರಿಗೆ ವಿಮೆ ದೊರಕುತ್ತದೆ?

ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಗುಂಪು, ಕಾರ್ಮಿಕ ಸಂಘದ ಗುಂಪು, ಅಟೋ ಚಾಲಕರ ಗುಂಪು, ಬ್ಯಾಂಕಿನಲ್ಲಿ ಸಾಲ ಪಡೆಯುವವರ ಗುಂಪು, ವೃತ್ತಿ ಪರ ಸದಸ್ಯರ ಸಂಘ, ಮಾನ್ಯತೆ ಪಡೆದ ಇತರ ಗುಂಪು, ಇತ್ಯಾದಿಗಳು,  ಗುಂಪು ವಿಮೆ ಪಡೆಯಲು ಅರ್ಹತೆ ಪಡೆಯುತ್ತವೆ.
ಗುಂಪಿನ ಪರವಾಗಿ ಮೂರನೇ ಪಕ್ಷದವನು, ಗುಂಪಿನ ಸದಸ್ಯರೆಲ್ಲರಿಗೂ ಒಂದೇ ಪಾಲಿಸಿಯನ್ನು(ಅಂದರೆ ಮಾಸ್ಟರ ಪಾಲಿಸಿಯನ್ನು) ಖರೀದಿಸ ಬಹುದು. ಉದಾಹರಣೆಗೆ; ಸಂಸ್ಥೆಯ ಮಾಲೀಕನು, ಸಾಲ ನೀಡಿದ ಬ್ಯಾಂಕರನು, ಟ್ರೇಡ್ ಯೂನಿಯನ್/ವೃತ್ತಿ ಪರ ಸದಸ್ಯರ ಸಂಘದ ಪದಾಧಿಕಾರಿಗಳು; ಗುಂಪಿನ ಪರವಾಗಿ ಪಾಲಿಸಿ ಖರೀದಿಸುವ/ವಿಮಾ ಕಂತು ನೀಡುವ/ವಿಮಾಪರಿಹಾರ ಸ್ವೀಕರಿಸಿ ಸಂಬಂಧಿಸಿದ ಸದಸ್ಯರಿಗೆ ಹಂಚುವ, ಹೊಣೆಗಾರಿಕೆÀಯನ್ನು ವಹಿಸಿಕೊಳ್ಳ ಬೇಕಾಗುತ್ತದೆ. ವಿಮಾಕಂತಿನ ಭಾರವನ್ನು ಮೂರನೆಯ ಪಕ್ಷದವನು ಪೂರ್ತಿಯಾಗಿ ಇಲ್ಲವೇ ಸದಸ್ಯರೊಂದಿಗೆ ಜಂಟಿಯಾಗಿ ವಹಿಸಿ ಕೊಳ್ಳಬಹುದು.


No comments:

Post a Comment