Wednesday, October 15, 2014

15 ಅಕ್ಟೋಬರ್ 2014

ವೇತನ ಉಳಿತಾಯ ಯೋಜನೆ (Salary Savings Scheme - SSS) ಅಂದರೇನು?

ಸಂಸ್ಥೆಯ ನೌಕರದಾರರು ತಾವು ಖರೀದಿಸಿದ ವಿಮಾ ಪಾಲಿಸಿಯ ಮಾಸಿಕ ಕಂತುಗಳನ್ನು, ತಮ್ಮ ವೇತನದಲ್ಲಿ ಕಡಿತಗೊಳಿಸಿ ಮಾಲೀಕನ ಮುಖಾಂತರ ವಿಮಾ ಸಂಸ್ಥೆಗೆ ನೀಡುವ ವ್ಯವಸ್ಥೆಗೆ ವೇತನ ಉಳಿತಾಯ ಯೋಜನೆ ಎನ್ನುವರು. ಇಲ್ಲಿ ಪಾಲಿಸಿಧಾರಕರು ತಮ್ಮ ಪಾಲಿಸಿಯ ಮಾಸಿಕ ಕಂತುಗಳನ್ನು ವೇತನದಲ್ಲಿ ಕಡಿತಗೊಳಿಸಿ ವಿಮಾ ಸಂಸ್ಥೆಗೆ ನೀಡಲು ತಮ್ಮ ಮಾಲೀಕನಿಗೆ ಅಧಿಕಾರ ಪತ್ರ ನೀಡುತ್ತಾರೆ. ಮಾಲೀಕನು ವೇತನದಲ್ಲಿ ಕಡಿತಗೊಳಿಸಿದ ಕಂತುಗಳನ್ನು ವಿಮಾ ಸಂಸ್ಥೆಗೆ ಕಳಿಸಲು ಒಪ್ಪಿಗೆ ನೀಡುತ್ತಾನೆ. ಸಂಸ್ಥೆಯು ಕಡಿತಗೊಳಿಸಿದ ಕಂತುಗಳನ್ನು ಸ್ವೀಕರಿಸಲು ಸಮ್ಮತಿಸುತ್ತದೆ. ಪ್ರತಿ ತಿಂಗಳೂ ಕಂತುಗಳನ್ನು ಕಳಿಸಲು ಮಾಲೀಕನಿಗೆÀ ಬೇಡಿಕೆ ಲಿಸ್ಟನ್ನು ಕಳಿಸಿ ಕೊಡುತ್ತದೆ.
ಇಲ್ಲಿ ನೌಕರದಾರನಿಗೆ ಪ್ರತ್ಯಕ್ಷ ವಿಮೆ ನೀಡುವ ತೊಂದರೆ ತಪ್ಪುತ್ತದೆ. ಪಾಲಿಸಿ ಲ್ಯಾಪ್ಸ್ ಆಗುವ ಭಯ ತಪ್ಪುತ್ತದೆ. ಇದು ವಿಮಾ ಕಂಪನಿಗೂ ಅನಕೂಲಕರ ಸಂಗತಿಯೇ. ಮಾಲೀಕನಿಗೆ ನೌಕರದಾರರ ವಿಶ್ವಾಸ ಗಳಿಸುವ ಅವಕಾಶ ದೊರಕುತ್ತದೆ.

No comments:

Post a Comment