Tuesday, December 16, 2014

16 ಡಿಸೆಂಬರ 2014 

 ನಿವೃತ್ತಿ ನಂತರದ ಜೀವನಘಟ್ಟ (post  retirement) ದಲ್ಲಿರುವ ವ್ಯಕ್ತಿಯ ಅವಶ್ಯಕತೆಗಳನ್ನು ಗುರುತಿಸುವಾಗ ಯಾವ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು?


ನಿವೃತ್ತಿ ನಂತರದ ಜೀವನಘಟ್ಟದಲ್ಲಿರುವ ವ್ಯಕ್ತಿಯ ಅವಶ್ಯಕತೆಗಳನ್ನು ಗುರುತಿಸುವಾಗ ಕೆಳಗಿನ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
• ಹಣ ಹೂಡಿಕೆಗೆ, ಖಚಿತವಾದ ಆದಾಯಕ್ಕೆ, ಹೂಡಿಕೆಯ ಭದ್ರತೆಗೆ ಮೊದಲ ಆದ್ಯತೆ ನೀಡಬೇಕು.
       (ಕೂಡಲೇ ಪ್ರಾರಂಭವಾಗುವ ವರ್ಷಾಶನದಲ್ಲಿ ಹಣ ತೊಡಗಿಸ ಬೇಕು.)
• ಆಶ್ರಿತರ ಯೋಗ ಕ್ಷೇಮಕ್ಕಾಗಿ ತನ್ನ ಜೀವದ ಮೇಲೆ ಮೊದಲು ಸಾಕಷ್ಟು ಅಪಘಾತ ವಿಮೆ/ ಆರೋಗ್ಯ ವಿಮೆ 
       ಪಡೆಯಬೇಕು. (ಫ್ಯಾಮಿಲಿ ಫ್ಲೋಟರ್ ಪಾಲಿಸಿ ಪಡೆಯಬೇಕು)
• ತದ ನಂತರ ಕಾರು/ಮನೆ ಮುಂತಾದ ಆಸ್ತಿಗಳ ರಕ್ಷಣೆಗೆ ಆದ್ಯತೆ ನೀಡಬೇಕು. 
      (ಕಾರು/ಮನೆ ವಿಮೆಯ ಪಾಲಸಿ ಪಡೆಯಬೇಕು) 
• ಹಣದುಬ್ಬರದ ಪರಿಣಾಮ ಎದುರಿಸಲು ಉಳಿತಾಯ ಮುಂದುವರೆಸಬೇಕು. 
      (ಪೋಸ್ಟ ಆಫೀಸ ಯುಳಿತಾಯಗಳಲ್ಲಿ ಬ್ಯಾಂಕ್, ಮ್ಯೂಚುವಲ್ ಫಂಡಿನ ಸಾಲ ನಿಧಿಗಳಲ್ಲಿ ಉಳಿಸ ಬೇಕು.)

No comments:

Post a Comment