Friday, May 22, 2015

22 ಮೇ 2015

ವಿವಾದಾತೀತ ಕರಾರು (indisputable  contract) ಎಂದರೇನು?


ಸತ್ಯವನ್ನು ಮರೆಮಾಚಿದ್ದರೆ, ಸುಳ್ಳು ಹೇಳಿದ ಆಧಾರದ ಮೇಲೆ ವಿಮಾ ಕರಾರನ್ನು, ಕರಾರಿನ ಮೊದಲ ಎರಡು ವರ್ಷಗಳಲ್ಲಿ, ಪೂರ್ವಾನ್ವಯವಾಗಿ ಅನೂರ್ಜಿತಗೊಳಿಸಬಹುದು. ಅಂದರೆ ವಿಮಾ ಕರಾರು ಅನೂರ್ಜಿತ ಅಥವಾ ಅನೂರ್ಜಿತಗೊಳಿಸಬಹುದಾದ (void or voidable)  ಕರಾರು ಆಗಿರುತ್ತದೆ. (ಕರಾರನ್ನು  ಅನೂರ್ಜಿತಗೊಳಿಸಲು  ವಿಮಾ ಒಡಂಬಡಿಕೆ ವಂಚನೆಯ ಆಧಾರದ ಮೇಲೆ ಜರುಗಿರುವದರ ಬಗ್ಗೆ ಸಾಬೀತು ಪಡೆಸುವ ಹೊಣೆಗಾರಿಕೆಯೂ ವಿಮಾ ಕಂಪನಿ ಮೇಲೆ ಇರುವದಿಲ್ಲಾ.) 

ಸತ್ಯವನ್ನು ಮರೆಮಾಚಿದ್ದರೆ, ಸುಳ್ಳು ಹೇಳಿದ ಆಧಾರದ ಮೇಲೆ ವಿಮಾ ಕರಾರನ್ನು, ಕರಾರಿನ ಎರಡು ವರ್ಷಗಳ ನಂತರ sಸುಲಭವಾಗಿ ಅನೂರ್ಜಿತಗೊಳಿಸಲು ಬರುವದಿಲ್ಲಾ. ಆದುದರಿಂದ ಎರಡು ವರ್ಷಗಳ ನಂತರ  ವಿಮಾ ಒಡಂಬಡಿಕೆ ವಿವಾದಾತೀತ ಕರಾರು (indisputable  contract) ಆಗಿರುತ್ತದೆ.

(ಆದರೆ ಎರಡು ವರ್ಷಗಳ ನಂತರ, ವಿಮಾ ಕರಾರನ್ನು ಅನೂರ್ಜಿತಗೊಳಿಸಲೇ ಬೇಕೆಂದು ಬಯಸಿದರೆ, ವಿಮಾ ಒಡಂಬಡಿಕೆಯು  ಅಕ್ರಮವಾಗಿದ್ದು, ಅದು ವಂಚನೆಯ ಆಧಾರದ ಮೇಲೆ ಜರುಗಿರುವದರ ಬಗ್ಗೆ ಸಾಬೀತು ಪಡೆಸುವ ಹೊಣೆಗಾರಿಕೆ ವಿಮಾ ಕಂಪನಿ ಮೇಲೆ ಬೀಳುತ್ತದೆ. ಇದನ್ನೇ ವಿಮಾ ಕಾನೂನು 1938 ರ ಸೆಕ್ಶನ್ 45 ರಲ್ಲಿ ಹೇಳಲಾಗಿದೆ.)

Thursday, May 21, 2015

21 ಮೇ 2015

ಅನೂರ್ಜಿತ (void) ಹಾಗೂ ಅನೂರ್ಜಿತಗೊಳಿಸಬಹುದಾದ (voidable)  ಕರಾರುಗಳೆಂದರೆ ಏನು?


ಅನೂರ್ಜಿತ ಕರಾರು (void contract ) ಗಳು ಕೆಳಗಿನ ಸಂದರ್ಭಗಳಲ್ಲಿ ಹುಟ್ಟಿಕೊಳ್ಳುತ್ತವೆ. 
1) ಮೂಲಭೂತ ತಪ್ಪುಗಳ ಆಧಾರದ ಮೇಲೆಯೇ ಕರಾರು ಅನೂರ್ಜಿತಗೊಳ್ಳಬಹುದು.
     (ಕುಡಿತದ ಅಮಲಿನಲ್ಲಿ ಒಪ್ಪಂದಕ್ಕೆ ಹಸ್ತಾಕ್ಷರ ಹಾಕಿದ ಸಂದರ್ಭದಲ್ಲಿ,) 
2) ಕಾನೂನು ವಿರೋಧಿ ಉದ್ಯೇಶಗಳಿಗಾಗಿ, ಒಪ್ಪಂದಕ್ಕೆ ಮನಸ್ಸು ಮಾಡಿದ್ದರೆ,
(ಆತ್ಮ ಹತ್ಯೆ/ಇನ್ನೊಬ್ಬರ ಹತ್ಯೆಯ ಮೂಲಕ ಲಾಭ ಪಡೆಯಲು ವಿಮಾ ಕೋರಿಕೆ ಸಲ್ಲಿಸಿದ್ದರೆ,) 
3) ವಿಮಾ ಆಸಕ್ತಿಯ ಉಪಸ್ಥಿತಿ ಇಲ್ಲದಿದ್ದರೆ,
(ತಂದೆಯ ಅಥವಾ ಗೆಳೆಯನ ಜೀವದ ಮೇಲೆ ವಿಮೆ ಪಡೆಯ ಬಯಸಿದರೆ,) 
4) ಪರಮೋಚ್ಚ ನಂಬಿಕೆಯ ತತ್ವ ಉಲ್ಲಂಘನೆಯಾಗಿದ್ದರೆ,
     (ಉಭಯ ಪಕ್ಷಗಳು ಬೇರೆ ಬೇರೆ ರೀತಿಯಲ್ಲಿಯೇ ಯೋಚಿಸಿ, ಅನುಚಿತ ಲಾಭ ಪಡೆಯ ಬಯಸಿದರೆ.) 
5) ವಾರಂಟಿಯ ಉಲ್ಲಂಘನೆಯಾದಾಗ,
(ಸತ್ಯವನ್ನು ಮರೆ ಮಾಚಿದಾಗ, ಸುಳ್ಳಿನ ಪ್ರದರ್ಶನವಾದಾಗ.) 

ಅನೂರ್ಜಿತಗೊಳಿಸಬಹುದಾದ ಕರಾರು  (voidable  contract)  :
ಅನೂರ್ಜೀತಗೊಳಿಸಬಹುದಾದ  (voidable) ಕರಾರು ಎಂದರೆ ವಿಮಾ ಕಂಪನಿ ಬಯಸಿದರೆ ಅನೂರ್ಜಿತ ಕರಾರನ್ನು ಊರ್ಜಿತವೆಂದು ಮಾನ್ಯ ಮಾಡಬಹುದು.


Wednesday, May 20, 2015

20 ಮೇ 2015

ಕರಾರಿನ ನಿಯಮಗಳ ಉಲ್ಲಂಘನೆಯ   (breach of condition)    ಪರಿಣಾಮ ಏನು?

ಕರಾರಿನ ನಿಯಮಗಳ ಉಲ್ಲಂಘನೆ  (breach of condition)   ಯಾದಾಗ ನಡೆದಾಗ ಕರಾರು ಅನೂರ್ಜಿತ (void)ವಾಗುತ್ತದೆ. ಇಲ್ಲವೇ ಅನೂರ್ಜಿತಗೊಳಿಸಬಹುದಾದ (voidable)  ಕರಾರು ಆಗುತ್ತದೆ. ಅನೂರ್ಜೀತಗೊಳಿಸಬಹುದಾದ (voidable)  ಕರಾರು ಎಂದರೆ ವಿಮಾ ಕಂಪನಿ ಬಯಸಿದರೆ ಅನೂರ್ಜಿತ ಕರಾರನ್ನು ಊರ್ಜಿತವೆಂದು ಮಾನ್ಯ ಮಾಡಬಹುದು.
       

Tuesday, May 19, 2015

19 ಮೇ 2015

ಮರಣ ವಿಮಾ ಪರಿಹಾರ ಸಂದಾಯ ಮಾಡುವಾಗ, ಯಾವ ಸಂದರ್ಭಗಳಲ್ಲಿ ವಿಶೇಷ ಜಾಗ್ರತೆ (special care)    ವಹಿಸ ಬೇಕು? 

ಮರಣ ವಿಮಾ ಪರಿಹಾರ ಸಂದಾಯ ಮಾಡುವಾಗ, ಕೆಳಗಿನÀ ಸಂದರ್ಭಗಳಲ್ಲಿ ವಿಶೇಷ ಜಾಗ್ರತೆ (special care)  ವಹಿಸಬೇಕು.
ವಿಮಾ ಕಂಪನಿಗೆ ಮರಣದ ಸೂಚನೆ ಅಪರಿಚಿತ ವ್ಯಕ್ತಿಯಿಂದ ಬಂದಾಗ,
ವಿಮಾ ಪರಿಹಾರ ಸಂದಾಯದ ಕಾರ್ಯಪ್ರಗತಿ ಬಗ್ಗೆ, ಮೇಲಿಂದ ಮೇಲೆ, ಪುನಃ ಪುನಃ ವಿಮಾ ಕಂಪನಿಯ ಹತ್ತಿರ ವಿಚಾರಿಸತೊಡಗಿದಾಗ,
ಪಾಲಿಸಿ ಕರಾರು ಪ್ರಾರಂಭವಾಗಿ ಮೂರು ವರ್ಷದೊಳಗೆ ಮರಣ ಸಂಭವಿಸಿದಾಗ, ಪಾಲಿಸಿಯ ಮೂರು ವರ್ಷಗಳ ಅವಧಿ ಮುಗಿಯುವ ವರೆಗೆ ಕಾಯ್ದು,  ನಂತರ ವಿಮಾ ಪರಿಹಾರ ಕೋರಿಕೆಯನ್ನು ಸಲ್ಲಿಸಿದಾಗ,
      (ತನಿಖೆಯ ತೀವೃತೆಯನ್ನು ಉದ್ಯೇಶ ಪೂರ್ವಕವಾಗಿ ಕಡಿಮೆ ಮಾಡುವ, ದುರುದ್ಯೇಶದ ಸಾಧ್ಯತೆ ಇಲ್ಲಿ ಕಂಡು ಬರುವದು.)


Monday, May 18, 2015

18 ಮೇ 2015

ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ವಂಚನೆ(fraud) ಯು ಭವಿಷ್ಯದಲ್ಲಿ ಯಾವ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ? 

ಉತ್ತರ : ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ವಂಚನೆ(fraud)ಗೆ ಅವಕಾಶ ದೊರಕಿದರೆ, ಅದು ಭವಿಷ್ಯದಲ್ಲಿ ಕೆಳಗಿನ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ.
ವಿಮಾಕಂಪನಿಗಳಿಗೆ – ಸಂಸ್ಥೆಯ ಒಟ್ಟಾರೆ ವಿಮಾ ಪರಿಹಾರ ವೆಚ್ಚ ಊಹಿಸಿದ್ದಕ್ಕಿಂತಲೂ ಹೆಚ್ಚಾಗಿ, ಸ್ಪರ್ಧಾತ್ಮಕ ವ್ಯಾಪಾರದಲ್ಲಿ ಹಿನ್ನೆಡೆಗೆ ಅವಕಾಶ ಮಾಡಿಕೊಡುತ್ತದೆ. ಸಂಸ್ಥೆಯ ನಿರ್ಲಕ್ಷ್ಯ, ಹೆಚ್ಚು ಸಂಖ್ಯೆಯಲ್ಲಿ ವಂಚನೆಯ ವಿಮಾ ಸಂದಾಯ (fraudulent claim)  ಗಳಿಗೆ ಅವಕಾಶ ಮಾಡಿಕೊಡುತ್ತದೆ.
ಸಾಮಾನ್ಯ ಗ್ರಾಹಕರಿಗೆ -ಸಂಸ್ಥೆಯ ಒಟ್ಟಾರೆ ವಿಮಾ ಪರಿಹಾರ ವೆಚ್ಚ, ಊಹಿಸಿದ್ದಕ್ಕಿಂತಲೂ ಹೆಚ್ಚಾಗುವದರಿಂದ, 1) ವಿಮಾ ಕಂತಿನ ದರದಲ್ಲಿ ಅನಗತ್ಯವಾದ ಹೆಚ್ಚಳ ಕಂಡು ಬರುವದು. 2) ಪ್ರಾಮಾಣಿಕ ಗ್ರಾಹಕರಿ ಇದರಿಂದ ಅನಗತ್ಯವಾಗಿ, ಹೆಚ್ಚು ಬೆಲೆ ತೆರಬೇಕಾಗುವದು.
ವಂಚಕ ಗ್ರಾಹಕರಿಗೆ – ವಿಮಾ ಕಂಪನಿಯ ನಿರ್ಲಕ್ಷ್ಯದಿಂದ ವಂಚಕ ಗ್ರಾಹಕರು ಇನ್ನೂ ಉತ್ತೇಜಿತರಾಗಿ, ಹೆಚ್ಚಿನ ವಂಚನೆಗೆ ತಯಾರಾಗುವರು, ಹಾಗೂ ಇತರರಿಗೂ ಪ್ರೇರಣೆ ನೀಡುವರು.

Sunday, May 17, 2015

17 ಮೇ 2015

ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ವಂಚನೆ (fraud)  ಯ ಬಗ್ಗೆ ಯಾವಾಗ ಅನುಮಾನಿಸುತ್ತಾರೆ? 

ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ಕೆಳಗಿನ ಸಂದರ್ಭಗಳಲ್ಲಿ ವಂಚನೆ (fraud)   ಯ ಬಗ್ಗೆ ಅನುಮಾನಿಸುತ್ತಾರೆ.
ವಿಮಾ ಕರಾರು ಮುಗಿದ ಮೂರು ವರ್ಷದೊಳಗೆ ಮರಣ ಸಂಭವಿಸಿದ್ದರೆ, ವಿಮಾ ಮಾಹಿತಿ ಬಗ್ಗೆ, ಈ ಮೊದಲು ತಪ್ಪು ಹೇಳಿಕೆ ನೀಡಿರುವ, ಸತ್ಯ ಸಂಗತಿ ಬಚ್ಚಿಟ್ಟಿರುವ ಸಾಧ್ಯತೆ ಕಂಡು ಬರುತ್ತದೆ.
ಮೂಲ ಪಾಲಿಸಿ ಬಾಂಡನ್ನು ವಿಮಾ ಪರಿಹಾರಕ್ಕಾಗಿ ನೀಡದಿದ್ದಾಗ, ಪಾಲಸಿಯ ಮಾಲೀಕತ್ವದ ಹಕ್ಕುಗಳಲ್ಲಿ ಬದಲಾವಣೆಗಳ ಸಾಧ್ಯತೆ ಕಂಡು ಬರುತ್ತದೆ.
ಕ್ಷುಲ್ಲಕ ಕಾರಣಗಳಿಗಾಗಿ ವಿಮಾ ಸಂಸ್ಥೆ, ವಿಮಾ ಪರಿಹಾರ ನೀಡಲು ತೊಂದರೆ ಕೊಡತೊಡಗಿದರೆ, ವಿಮಾ ಸಂಸ್ಥೆಯ ಪ್ರಾಮಾಣಿಕತೆಗೆ ಅನುಮಾನ ಉಂಟಾಗುತ್ತದೆ.


Saturday, May 16, 2015

16 ಮೇ 2015

ಮರಣ ವಿಮಾ ಪರಿಹಾರ ಸಂದಾಯ(Death claim settlment)  ವನ್ನು ಹೇಗೆ ಮಾಡುತ್ತಾರೆ? 

ಮರಣದ ಸೂಚನೆ, ಪಾಲಸಿ ಹಕ್ಕುದಾರನಿಂದ ಬಂದ ಕೂಡಲೇ ವಿಮಾ ಕಂಪನಿಯು, ಮರಣ ವಿಮಾ ಪರಿಹಾರ ಸಂದಾಯಕ್ಕೆ ಅವಶ್ಯಕ ಕ್ರಮ ಕೈಕೊಳ್ಳುತ್ತದೆ. ಅಗತ್ಯಬಿದ್ದರೆ, ವಿಮಾ ಪರಿಹಾರ ಸಂದಾಯಕ್ಕೆ ಮೊದಲು, ತನಿಖೆಯನ್ನು ಕೈಕೊಳ್ಳುತ್ತದೆ.