Wednesday, December 31, 2014

31  ಡಿಸೆಂಬರ 2014 

 ಜೀವ ವಿಮಾ ಖರೀದಿಯಲ್ಲಿ ಗ್ರಾಹಕನು ವಿರೋಧ ವ್ಯಕ್ತಪಡಿಸುವಾಗ, ಏಜೆಂಟನು ಜಾಗ್ರತೆ ವಹಿಸಬೇಕಾದ ಸಂಗತಿಗಳು ಯಾವುವು?

ವಿರೋಧದ ಹಿಂದೆ  ಇರುವ ವಾಸ್ತವಿಕ ಕಾರಣ (real reasons)ಗಳನ್ನು ಪತ್ತೆ ಹಚ್ಚಬೇಕು.
ವಿರೋಧಗಳಿಗೆ ಗ್ರಾಹಕನಿಗಿರುವ ಹಕ್ಕನ್ನು ಮನ್ನಿಸಬೇಕು.
ವಿರೋಧ ಕಾರಣ ಅರಿಯಲು ಸರಿಯಾದ ರೀತಿಯಲ್ಲಿ ಪ್ರಶ್ನೆ ಕೇಳಬೇಕು.
ಗ್ರಾಹಕನ ಉತ್ತರವನ್ನು ಲಕ್ಷಗೊಟ್ಟು ಮನಸಾ ಕೇಳಬೇಕು( you must listen). ನಂತರ ನಿಜವಾದ ಸಮಸ್ಯೆಗೆ ಪರಿಹಾರ ನೀಡಬೇಕು.

Tuesday, December 30, 2014

30 ಡಿಸೆಂಬರ 2014 

ಜೀವ ವಿಮಾ ಖರೀದಿಗಳಲ್ಲಿ ಕಂಡು ಬರುವ ಸಾಮಾನ್ಯ ವಿರೋಧಗಳು ಯಾವುವು?

ಜೀವ ವಿಮಾ ಸರಕುಗಳ ಖರೀದಿಗಳಲ್ಲಿ ಕಂಡು ಬರುವ ವಿರೋಧಗಳು ಕೆಳಗಿನಂತಿವೆ.
ವಿಮಾ ಪಾಲಿಸಿಗಳು ತನ್ನ ಬೇಡಿಕೆಗಳನ್ನು ಪೂರೈಸುವದಿಲ್ಲಾ ಎನ್ನುವ ಭಾವನೆ.
ಬೇರೆ ಕಂಪನಿಗಳ ಸರಕುಗಳು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತವೆ ಎನ್ನುವ ಭಾವನೆ.
ಪಾಲಿಸಿ ಕೊಳ್ಳಲು ತನ್ನ ಬಳಿ ಹಣವಿಲ್ಲಾ, ಎನ್ನುವ ಭಾವನೆ.

   

Monday, December 29, 2014

29 ಡಿಸೆಂಬರ 2014 

ಗ್ರಾಹಕನ ವಿರೋಧಗಳ ರೀತಿ ಹೇಗಿರುತ್ತದೆ?
 ಜೀವ ವಿಮಾ ಸರಕುಗಳ ಖರೀದಿಗೆ ವಿರೋಧಿಸುವ ಕಾರಣಗಳು.
ಗ್ರಾಹಕನು ಜೀವ ವಿಮೆಯನ್ನು ಅರ್ಥ ಮಾಡಿಕೊಂಡಿರುವದಿಲ್ಲಾ.
ಸಾವಿನ ಸಮಯದ ಬಗ್ಗೆ ಚರ್ಚಿಸಲು ಗ್ರಾಹಕನ ಮನ ಒಪ್ಪುವದಿಲ್ಲಾ.
ಸಾವಿನ ನಂತರ ಅವಲಂಬಿತರಿಗೆ ಉಂಟಾಗಬಹುದಾದ ಕಷ್ಟಗಳನ್ನು ಚರ್ಚಿಸ ಬಯಸುವದಿಲ್ಲಾ.


Sunday, December 28, 2014

28 ಡಿಸೆಂಬರ 2014 

ಮನಃಪೂರ್ವಕವಾಗಿ  ಕೇಳುವ ರೀತಿ (Listening) ಹೇಗಿರುತ್ತದೆ?

ಗ್ರಾಹಕನು ಹೇಳುವದನ್ನು ಗಮನವಿಟ್ಟು ಕೇಳುವದು. ಅವನು ಹೇಳುವದರಲ್ಲಿ ನಿಮಗೆ ಆಸಕ್ತಿ ಇದೆ ಎಂದು       
       ತೋರಿಸಿಕೊಳ್ಳುವದು.
ಗ್ರಾಹಕನ ಉತ್ತರಗಳನ್ನು ಒಂದೆಡೆ ಬರೆದುಕೊಳ್ಳುವದು, ಅವನ ಹಾವಭಾವಗಳನ್ನು ಗಮನಿಸುವದು.
ಗ್ರಾಹಕನ ಆರ್ಥಿಕ ಯೋಜನೆಯನ್ನು ಕಾರ್ಯಗತಗೊಳಿಸಲು ತನಗಿರುವ ಆಸಕ್ತಿಯನ್ನು ತೋರಿಸುವದು.


Saturday, December 27, 2014


27 ಡಿಸೆಂಬg 2014 ಡಿಸೆಂಬರ 2014 

 ಪ್ರಶ್ನೆ ಕೇಳುವ ರೀತಿ ಹೇಗಿರುತ್ತದೆ?


ಗ್ರಾಹಕನ ಉತ್ತರ ಏಜೆಂಟನ ಮುಂದಿನ ಪ್ರಶ್ನೆಯನ್ನು ರೂಪಿಸುತ್ತದೆ.
ಪ್ರಶ್ನೆ ಸರಳವಾಗಿರಬೇಕು, ಆರ್ಥಪೂರ್ಣವಾಗಿರಬೇಕು, ಗೊಂದಲರಹಿತವಾಗಿರಬೇಕು. 
ಪ್ರಶ್ನೆಗಳು ವ್ಯಕ್ತಿಗತವಾಗಿರಬೇಕು, ಜನಸಮೂಹಕ್ಕೆ ಅನ್ವಯವಾಗುವ ಸಾಮಾನ್ಯ ಪ್ರಶ್ನೆ ಕೇಳಲಾಗದು.


Friday, December 26, 2014

26 ಡಿಸೆಂಬರ 2014 

ಪ್ರಶ್ನೆ ಕೇಳುವ ಉದ್ಯೇಶಗಳೇನು?

ಮಾಹಿತಿ ಕೋರಿಕೆ ಪ್ರಶ್ನೆ             : ಬೇಕಾದ ವಿವರ ಕಲೆ ಹಾಕಲು. 
ಹೆಚ್ಚಿನ ಮಾಹಿತಿ ಕೋರಿಕೆ ಪ್ರಶ್ನೆ        : ಹೆಚ್ಚಿನ ವಿವರ ಕಲೆ ಹಾಕಲು. 
ಮಾಹಿತಿ ಸ್ಪಷ್ಟೀಕರಣ ಪ್ರಶ್ನೆ           : ಉತ್ತರಗಳ ಮೇಲೆ ಸ್ಪಷ್ಟೀಕರಣ ಕೇಳಲು. 
ಒಪ್ಪಿಗೆಗೆ ಖಾತ್ರಿ ಮಾಡಿಕೊಳ್ಳುವ ಪ್ರಶ್ನೆ    : ಒಪ್ಪಿಗೆಯ ಸಂದಿಘ್ನತೆಯನು ತೊಡೆದು ಹಾಕಲು.
ಒಪ್ಪಿಗೆ ಕಾರ್ಯಗತಗೊಳಿಸಲು ಪ್ರಶ್ನೆ     : ಒಪ್ಪಿಗೆಯನ್ನು ಕಾರ್ಯಾಚರಣೆಯಲ್ಲಿ ತರಲು.



Thursday, December 25, 2014

25 ಡಿಸೆಂಬರ 2014 

ಪ್ರಶ್ನೆ ಕೇಳುವ ಕೌಶಲ್ಯ (Questioning  Skills) ವೆಂದರೇನು?

ಪ್ರಶ್ನೆ ಕೇಳುವ ಕೌಶಲ್ಯವೆಂದರೆ,
ವಿವಿಧ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುವ ಕಲೆ,
ತೆರೆದು ಕೊಳ್ಳುವ ಪ್ರಶ್ನೆ (Open ended questions) ಕೇಳುವದು - ಅಂದರೆ ವಿವರಗಳನ್ನು ಕಲೆ ಹಾಕಲು ಕೇಳುವ 
          ಪ್ರಶ್ನೆ.
ಮುಚ್ಚಿ ಕೊಳ್ಳುವ ಪ್ರಶ್ನೆ (Close ended questions) ಕೇಳುವದು– ಅಂದರೆ ಸಮ್ಮತಿಯನ್ನು ಪಡೆಯಲು ಕೇಳುವ 
       ಪ್ರಶ್ನೆ.