Monday, March 9, 2015

9 ಮಾರ್ಚ 2015 

 ವಿಮಾ  ಏಜೆಂಟನ ಕರ್ತವ್ಯಗಳು (Agent’s duties & responsibilities)  ಯಾವುವು?

 ವಿಮಾ  ಏಜೆಂಟನ ಕರ್ತವ್ಯಗಳು (Agent’s duties & responsibilities) :-
• ವಿಮಾ ಕಂಪನಿಗಳ ಸರಕುಗಳ ಜ್ನಾನ ಪಡೆದು, ಅವುಗಳ ಲಕ್ಷಣಗಳನ್ನು ಹಾಗೂ ಅವುಗಳು ನೀಡುವ ಸೌಲಭ್ಯಗಳನ್ನು     
     ತಿಳಿದು ಕೊಳ್ಳುವದು.
• ವಿಮಾ ಕಂಪನಿಗಳ ಭಾವೀ ಗ್ರಾಹಕರನ್ನು ಗುರುತಿಸುವದು.
• ಗ್ರಾಹಕನ ಅವಶ್ಯಕತೆಗಳನ್ನು ಗುರುತಿಸುವದು ಹಾಗೂ ವಿಶ್ಲೇಷಿಸುವದು. 
• ಗ್ರಾಹಕನ ಅವಶ್ಯಕತೆಗಳಿಗೆ ಹಾಗೂ ಸಾಮಥ್ರ್ಯಗಳಿಗೆ ಹೊಂದಿಕೆಯಾಗುವಂತಹ ಪಾಲಿಸಿ (Suitable products) 
           ಗಳನ್ನು ಶಿಫಾರಸು ಮಾಡುವದು.
• ವಿಮಾ ಕೋರಿಕೆಪತ್ರದಲ್ಲಿ ಸರಿಯಾದ ಮಾಹಿತಿ ಭರ್ತಿಯಾಗುವಂತೆ ನೋಡಿಕೊಳ್ಳುವದು.
• ವಿಮಾಕೋರಿಕೆ ಪತ್ರದ ಜೊತೆಗೆ ಲಗತ್ತಿಸಬೇಕಾದ; ವಯಸ್ಸು, ಆದಾಯ,ಗುರುತು,ಆರೋಗ್ಯ,ಹಾಗೂ ಇನ್ನಿತರ 
        ಮಾಹಿತಿಗಳ ದಾಖಲೆ ಪತ್ರಗಳ ಸಲ್ಲಿಕೆಗೆ ಜವಾಬ್ದಾರಿ ತೆಗೆದು ಕೊಳ್ಳುವದು.
• ಗ್ರಾಹಕನು ನೀಡಬೇಕಾದ ವಿಮಾಕಂತು, ವಿವಿಧ ಶುಲ್ಕಗಳ ಬಗ್ಗೆ ಮಾಹಿತಿ ನೀಡುವದು.
• ಗ್ರಾಹಕನು ಬಯಸಿದರೆ ಪಾಲಿಸಿಗಳಲ್ಲಿ ಪಡೆಯಲಾಗುವ ಕಮೀಶನ್ ಬಗ್ಗೆ ಮಾಹಿತಿ ನೀಡುವದು.
• ವಿಮಾ ಕಂಪನಿಗೆ ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನು ವಿಶ್ವಾಸಪೂರ್ವಕವಾಗಿ ಸಲ್ಲಿಸುವದು.
• ವಿಮಾಂಕನ ಅಧಿಕಾರಿಗೆ, ಅಪಾಯ ಮೌಲ್ಯ ಮಾಪನಕ್ಕೆ ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನು ನೀಡುವದಕ್ಕೆ 
         ಸಹಕರಿಸುವದು.
• ಗ್ರಾಹಕನು ವಿಮಾಕಂತುಗಳನ್ನು ಕಾಲಕ್ಕೆ ಸರಿಯಾಗಿ ನೀಡಲು, ಸಹಾಯ ಸಲ್ಲಿಸುವದು.
• ವಿಮಾ ಸಂಸ್ಥೆ ಅನುಮತಿಸಿದರೆ, ಗ್ರಾಹಕನಿಂದ ವಿಮಾಕಂತು ಸ್ವೀಕರಿಸಿ ಕಂಪನಿಗೆ ನೀಡುವದು.
• ವಿಮಾ ಪರಿಹಾರ ಸಂದಾಯ ಸುಲಭವಾಗುವಂತೆ, ಪರಿಹಾರ ಹಕ್ಕುದಾರನಿಗೆ ಸಹಾಯ ಸಲ್ಲಿಸುವದು.
• ಪಾಲಸಿಯ ವಿಮಾ ಪರಿಹಾರ ಸಂದಾಯವಾಗುವವರೆಗೆ ಗ್ರಾಹಕನಿಗೆ ಪಾಲಸಿಯ ಸೇವೆಯನ್ನು (Policy    
        servicing.)ನೀಡುವದು.

• ಗ್ರಾಹಕನ ಹಿತಾಸಕ್ತಿ (customer’s  interest.) ಗಳನ್ನು ಕಾಪಾಡುವದು. 
• ವಂಚನೆಯ ಘಟನೆ ನಡೆದಾಗ, ಗ್ರಾಹಕ ಹಾಗೂ ಸಂಸ್ಥೆಗಳ ಪರವಹಿಸದೇ, ತಟಸ್ಥ (neutral) ನಾಗಿ ಉಳಿಯುವದು.



No comments:

Post a Comment