Wednesday, April 1, 2015

1 ಎಪ್ರೀಲ್ 2015

ಪಾಲಿಸಿ ಮುಂದುವರೆಸುವಿಕೆ (Persistency)  ಯ ವಿವಿಧ ಉಪಾಯಗಳು ಯಾವುವು?


ಪಾಲಿಸಿ ಮುಂದುವರೆಸುವಿಕೆ (Persistency) ಯ ವಿವಿಧ ಉಪಾಯಗಳು:-
• ವಿಮಾ ಕಂತಿನ ಅವಧಿಯ/ನೀಡಿಕೆಯ ರೀತಿಯನ್ನು ಗ್ರಾಹಕನಿಗೆ ಹೊಂದಾಣಿಕೆಯಾಗುವ ರೀತಿಯಲ್ಲಿ ನೀಡುವದು. 
ಉದಾ : ವಿಮಾ ಕಂತನ್ನು ಅನಕೂಲಕ್ಕೆ ತಕ್ಕಂತೆ, 1/3/6/12 ತಿಂಗಳಿಗೊಮ್ಮೆ ನೀಡಲು ಅನುವು ಮಾಡಿಕೊಡುವದು. 
ವಿಮಾ ಕಂತನ್ನು ಅನಕೂಲಕ್ಕೆ ತಕ್ಕಂತೆ, ಚೆಕ್ಕು/ಕ್ಯಾಶ್/ಡಿ.ಡಿ./ಈ.ಸಿ.ಎಸ್./ಎಮ್.ಓ. ಗಳ ಮೂಲಕ ನೀಡಲು ಅನುವು ಮಾಡಿಕೊಡುವದು.
• ವಿಮಾ ಕಂತು ನೀಡಿಕೆಗೆ, ಪದೇ ಪದೇ ನೆನಪಿಸುವದು. 
ಉದಾ : ವಾರ್ಷಿಕ/ಅರೆವಾರ್ಷಿಕ ಕಂತುಗಳಲ್ಲಿ ಎಷ್ಟೋ ಬಾರಿ, ವಿಮಾ ಕಂತಿನ ಬಾಕೀ ದಿನಾಂಕಗಳನ್ನೇ ಮರೆಯಬಹುದು. ಪತ್ರ/ಈ.ಮೇಲ್/ಮೊಬೈಲ್‍ಸಂದೇಶಗಳ ಮೂಲಕ ಗ್ರಾಹಕನ ವಿಮಾ ಕಂತು ನೀಡಿಕೆಗೆ, ಪದೇ ಪದೇ ನೆನಪಿಸಬಹುದು.
• ಗ್ರಾಹಕನ ಜೊತೆ ಸಂಪರ್ಕದಲ್ಲಿರುವದು.
ಗ್ರಾಹಕನ ಸಂಪರ್ಕದಲ್ಲಿರುವದರಿಂದ: ಗ್ರಾಹÀಕನ ಜೊತೆ ಒಳ್ಳೆಯ ಸಂಬಂಧವನ್ನು ಬೆಳೆಸ ಬಹುದು. ಗ್ರಾಹÀಕನ ಸಮಸ್ಯೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಪಾಲಸಿ ಸೇವೆಯನ್ನು ಸರಾಗವಾಗಿ ಮಾಡಬಹುದು. ವಿಮಾಕಂತುಗಳನ್ನು ನೀಡಲು ನೆನಪಿಸಬಹುದು. ಹೊಸ ಪಾಲಸಿಗಳನ್ನು ಮಾರಬಹದು.
• ಅಗತ್ಯ ಪಾಲಿಸಿ ಸೇವೆಗಳನ್ನು (Policy servicing) ನೀಡುವದು.
ಪಾಲಸಿ ಸೇವಾಕೊರತೆ, ಪಾಲಸಿ ನಿಲುಗಡೆಗೆ ಕಾರಣವಾಗಬಹುದು. ಅವಶ್ಯವೆನಿಸುವ ಪಾಲಸಿ ಸೇವೆಗಳು : ವಿಳಾಸ ಬದಲಾವಣೆ, ಪಾಲಿಸಿ ಸಾಲ ಕೋರಿಕೆ, ನಾಮೀನೇಶÀನ್/ಅಸೈನ್‍ಮೆಂಟ್ ಮಾಡಿಸುವದು ಅಥವಾ ಬದಲಾಯಿಸುವದು, ಪಾಲಿಸಿಗಳಲ್ಲಿ ಬೇಕೆನಿಸಿದ ಬದಲಾವಣೆಗಳನ್ನು ಕೈಕೊಳ್ಳುವದು, ಇತ್ಯಾದಿ, ಇತ್ಯಾದಿ.



No comments:

Post a Comment