Wednesday, January 21, 2015

21  ಜನೆವರಿ 2015 

ಸಂದರ್ಶನ  ಮುಗಿದ ನಂತರ, ಶಿಫಾರಸು (Recommendation) ಗಳನ್ನು ಮಾಡುವ ಮುಂಚೆ ಯಾವ ಕ್ರಮ ಕೈಕೊಳ್ಳಬೇಕಗುತ್ತದೆ?


ಸಂದರ್ಶನ ಮುಗಿದ ನಂತರ, ಶಿಫಾರಸು (Recommendation)  ಮಾಡುವ ಮುಂಚೆ ಕೆಳಗಿನ ಕ್ರಮಗಳನ್ನು ಕೈಕೊಳ್ಳಬೇಕು.
1) ಸಂದರ್ಶನದಲ್ಲಿ ಪಡೆದ ಎಲ್ಲಾ ಮಾಹಿತಿಗಳ ವಿಶ್ಲೇಷಣೆಯನ್ನು, ಸಾಧ್ಯವಾದರೆ ತಜ್ಞರ ಸಹಾಯದೊಂದಿಗೆ ಮಾಡಬೇಕು.
2) ಆರ್ಥಿಕ ಅವಶ್ಯಕತೆಗಳನ್ನು ಹಣದಲ್ಲಿ ಅಳೆಯುವಂತೆ ಪರಿವರ್ತಿಸಬೇಕು.
3) ಹಣದಲ್ಲಿ ಅಳೆÀಯಬಹುದಾದ ಬೇಡಿಕೆಗಳನ್ನು ಈಡೇರಿಸಲು, ನೀಡಬಹುದಾದ ಸರಕು(Products) ಗಳನ್ನು ಗುರುತಿಸಬೇಕು.
4) ಸರಕುಗಳ ಬೆಲೆಯನ್ನು ಅರಿತಮೇಲೆ, ಗ್ರಾಹಕನ ಆರ್ಥಿಕ ಸಾಮಥ್ರ್ಯದ ಮಿತಿಯೊಳಗೆ, ಗ್ರಾಹಕನಿಗೆ ಶಿಫಾರಸುಗಳನ್ನು ಮಾಡಬೇಕು.



Tuesday, January 20, 2015

20  ಜನೆವರಿ 2015 

ಸಂದರ್ಶನ (Interview) ಮುಗಿದ ನಂತರದ ಘಟ್ಟ ಯಾವುದು?


ಸಂದರ್ಶನ ಮುಗಿದ ನಂತರದ ಘಟ್ಟ, ಶಿಫಾರಸು (Recommendation) ಮಾಡುವದು,
ಗ್ರಾಹಕನ ಬೇಡಿಕೆಗಳ ಈಡೇರಿಕೆಗೆ ಯೋಗ್ಯ ಶಿಫಾರಸು (Recommendation) ಗಳನ್ನು ಮಾಡುವದು.
ಗ್ರಾಹಕನ ಬೇಡಿಕೆಗಳನ್ನು, ಅವನು ಉಳಿಸಲು ಒಪ್ಪಿಕೊಂಡ ಹಣದ ಚËಕಟ್ಟಿನಲ್ಲಿಯೇ ಮಾಡುವದು.
ಗ್ರಾಹಕನ ವಿರೋಧವಿರದಿದ್ದರೆ, ಯೋಗ್ಯ ಶಿಫಾರಸು (Recommendation) ಗಳನ್ನು ಮಾಡುವದಕ್ಕೆ ಹಣದ ಚËಕಟ್ಟಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲಾ,

Monday, January 19, 2015

 19  ಜನೆವರಿ 2015 

ಸಂದರ್ಶನದ ಸ್ಥಳ ಎಲ್ಲಿರ ಬೇಕು ?


ಗ್ರಾಹಕನ ಅನಕೂಲದ ಪ್ರಕಾರ,
ಆತನ ಮನೆಯಲ್ಲಿ,
ಅಥವಾ ಏಜೆಂಟನ ಆಫೀಸಿನಲ್ಲಿ,
ಇಬ್ಬರಿಗೂ ಒಪ್ಪಿಗೆಯಾದ ಮೂರನೇ ಸ್ಥಳದಲ್ಲಿ.



Sunday, January 18, 2015

18  ಜನೆವರಿ 2015 

ಸಂದರ್ಶನ (Interview) ದಲ್ಲಿಯ ಘಟ್ಟಗಳು ಯಾವುವು?

ಸಂದರ್ಶನದಲ್ಲಿಯ ಘಟ್ಟಗಳು:
ಗ್ರಾಹಕರನ್ನು ಉಲ್ಹಸಿತ ಸ್ಥಿತಿಯಲ್ಲಿಟ್ಟು ಮಾತನಾಡಿಸುವದು.
ಮಾಹಿತಿ ಸಂಗ್ರಹದ ವಿಧಾನ, ಉದ್ಯೇಶಗಳ ಬಗ್ಗೆ ವಿವರಿಸುವದು,
ನಂತರ ಬೇಕಾದ ಮಾಹಿತಿಗಳನ್ನು ಸಂಗ್ರಹಿಸುವದು.
ಗ್ರಾಹಕನ ಆದ್ಯತೆ ಹಾಗೂ ಕಾಳಜಿಗಳ ಬಗ್ಗೆ ವಿಚಾರಿಸುವದು.
ಗ್ರಾಹಕನ ಆರ್ಥಿಕ ಬೇಡಿಕೆಗಳ ಬಗ್ಗೆ, ತಾತ್ವಿಕವಾಗಿ ಒಮ್ಮತದ ಅಭಿಪ್ರಾಯವನ್ನು ಮೂಡಿಸುವದು.

Saturday, January 17, 2015

17  ಜನೆವರಿ 2015 

ಮಾಹಿತಿ ಹುಡುಕು (Fact find) ವ ವಿಧಾನಗಳು ಯಾವುವು?

ನಿಗದಿತ ಫಾರ್ಮುಗಳನ್ನು ಭರ್ತಿ ಮಾಡುವ ಮೂಲಕ,
ಟೆಲೆಫೋನ್ ಸಂಭಾಷಣೆಗಳ ಮೂಲಕ, 
ಪೂರ್ವ ನಿಯೋಜಿತ ಸಂದರ್ಶನಗಳ ಮೂಲಕ, 



Friday, January 16, 2015

16  ಜನೆವರಿ 2015 
ಸಂಭವನೀಯ ಬದಲಾವಣೆ (Likely Changes) ಗಳಿಗೆ ಯೋಗ್ಯ ಗಮನವನ್ನು ಯಾಕೆ ನೀಡಬೇಕು?

ಸಂಭವನೀಯ ಬದಲಾವಣೆಗಳನ್ನು ಗಮನಿಸುವದು ಆರ್ಥಿಕ ಯೋಜನೆಗಳಲ್ಲಿ ಅತ್ಯವಶ್ಯ.
ಉದಾ: ಭವಿಷ್ಯದಲ್ಲಿ: ಆದಾಯದಲ್ಲಿ ಉಂಟಾಗ ಬಹುದಾದ ಹೆಚ್ಚಳ, ಪರಿವಾರದಲ್ಲಿ  ಉದಯಿಸಲಿರುವ ಮಗು, ಉದ್ದಿಮೆಯಲ್ಲಿ ಜರುಗಬಹುದಾದ ಅನಪೇಕ್ಷಿತ ಘಟನೆಗಳು.



Thursday, January 15, 2015



15 ಜನೆವರಿ 2015 
ಗ್ರಾಹಕನ ಹಣದ ಹರಿದಾಟ (Cash flow) ವನ್ನು  ವಿಶ್ಲೇಷಿಸುವದೆಂದರೆ ಏನು?

 ಗ್ರಾಹಕನ ಹಣದ ಹರಿದಾಟ (Cash flow) ವನ್ನು  ವಿಶ್ಲೇಷಿಸುವ ಮುಖ್ಯ ಉದ್ಯೇಶವೇನಂದರೆ, ಆರ್ಥಿಕ ಯೋಜೆನೆಗೆ ಲಭ್ಯವಾಗುವ ಉಳಿಕೆ ಹಣವನ್ನು ಗುರುತಿಸುವದು.
ಇದಕ್ಕಾಗಿ ಗ್ರಾಹಕನ ಬಳಿಹರಿದು ಬರುವ ಎಲ್ಲಾ ಹಣಪ್ರವಾಹದ ಮೂಲಗಳನ್ನು ಗುರುತಿಸುವದು.
ಇದಕ್ಕಾಗಿ ಗ್ರಾಹಕನಿಂದ ಹೊರಗೆ ಹರಿದು ಹೋಗುವ ಎಲ್ಲಾ ವೆಚ್ಚಗಳ ವಿವರಗಳನ್ನು ಕಲೆ ಹಾಕುವದು. 
ಗ್ರಾಹಕನ ಆದಾಯ ಮೂಲವಾದ ಆಸ್ತಿಗಳ ಗುಣಮಟ್ಟಗಳನ್ನು ಪರೀಕ್ಷಿಸುವದು.
ಗ್ರಾಹಕನ ವೆಚ್ಚಕ್ಕೆ ಕಾರಣವಾಗುವ ಹೊರೆ (Liability) ಗಳ ಸ್ಥಿತಿಗಳನ್ನು ಅವಲೋಕಿಸುವದು.