Wednesday, January 7, 2015

7  ಜನೆವರಿ 2015 

  ಕಾಲ ಕಾಲಕ್ಕೆ ಉಂಟಾಗುವ ಗ್ರಾಹಕನ ಹೆಚ್ಚುವರಿ ಬೇಡಿಕೆ (Aditional Needs) ಗಳ ವಿಶ್ಲೇಷಣೆಯನ್ನು ಹೇಗೆ ಮಾಡಬೇಕು ?

ಉತ್ತರ: 
ಗ್ರಾಹಕನ ಇಂದಿನ, ಬದಲಾದ ಆರ್ಥಿಕ ಗುರಿಗಳ ಹಿನ್ನೆಲೆಯಲ್ಲಿ ಒಟ್ಟಾರೆ ಬೇಡಿಕೆಗಳನ್ನು ಪುನಃ ಪರಿಶೀಲಿಸಬೇಕು.
ಈಗಾಗಲೇ ಈಡೇರಿಕೆಗೊಳ್ಳುವ ಬೇಡಿಕೆಗಳನ್ನು ಬಿಟ್ಟು ಉಳಿದುಕೊಳ್ಳುವ ಬೇಡಿಕೆಗಳನ್ನು  ಕಂಡುಹಿಡಿಯಬೇಕು.
ಇನ್ನುಳಿದ ಬೇಡಿಕೆಗಳನ್ನು ವಿಶ್ಲೇಷಿಸಿ, ಅವುಗಳನ್ನು ಇಡೇರಿಸಲು ಅಗತ್ಯವಾದ ಹಣವನ್ನು ಲೆಕ್ಕಮಾಡಬೇಕು.



Tuesday, January 6, 2015

6  ಜನೆವರಿ 2015 
ಗ್ರಾಹಕನ ಆರ್ಥಿಕ ಬೇಡಿಕೆಗಳ ವಿಶ್ಲೇಷಣೆ  (Need Analysis) ಯನ್ನು ಹೇಗೆ ಮಾಡಬೇಕು ?


ಗ್ರಾಹಕನ ಸಧ್ಯದ ಎಲ್ಲಾ ಹೂಡಿಕೆ (investments) ಗಳನ್ನು ವಿಮರ್ಶೆ ಮಾಡಬೇಕು.
ಈ ಹೂಡಿಕೆಗಳಿಗಾಗಿ ಗ್ರಾಹಕನ ಬದ್ಧತೆ (committment) ಯನ್ನು ಕಂಡುಹಿಡಿಯಬೇಕು.
ಇನ್ನುಳಿದ ಬೇಡಿಕೆಗಳನ್ನು ವಿಶ್ಲೇಷಿಸಿ, ಅವುಗಳನ್ನು ಇಡೇರಿಸಲು ಅಗತ್ಯವಾದ ಹಣವನ್ನು ಲೆಕ್ಕಮಾಡಬೇಕು.



Monday, January 5, 2015

5  ಜನೆವರಿ 2015 

ಗ್ರಾಹಕನ ಆರ್ಥಿಕ ಬೇಡಿಕೆಗಳ ವಿಶ್ಲೇಷಣೆ (Financial Need Analysis) ಮಾಡುವ ಪೂರ್ವದಲ್ಲಿ, ಯಾವ ಕ್ರಮ ಕೈಕೊಳ್ಳಬೇಕು?


ಗ್ರಾಹಕನ ಆರ್ಥಿಕ ಗುರಿ ಹಾಗೂ ಧ್ಯೇಯಗಳ (Financial aims & objectives)ನ್ನು ತಿಳಿದುಕೊಳ್ಳಬೇಕು.

ನೀವು ತಿಳಿದು ಕೊಂಡ ರೀತಿಯಲ್ಲಿಯೇ, ಗ್ರಾಹಕನ ಗುರಿ ಹಾಗೂ ಧ್ಯೇಯಗಳು ಇರುವ ಬಗ್ಗೆ ಖಾತ್ರಿ ಮಾಡಿಕೊಳ್ಳಿರಿ.

ಗ್ರಾಹಕನ ಆರ್ಥಿಕ ಬೇಡಿಕೆಗಳ ವಿಶ್ಲೇಷಣೆಗಳಿಗೆ ಅಗತ್ಯ ಮಾಹಿತಿ ಕಲೆ ಹಾಕಿರಿ.



Sunday, January 4, 2015



4  ಜನೆವರಿ 2015 

  ಗ್ರಾಹಕನ ಹಾಗೂ ಕುಟುಂಬದ ಮಾಹಿತಿ (information) ಗಳನ್ನು  ಹೇಗೆ ಸಂಗ್ರಹಿಸುವದು?


ಇದಕ್ಕಾಗಿ ‘ಮಾಹಿತಿ ಸಂಗ್ರಹ’ ಎಂಬ ಫಾವರ್iನ್ನು - (Information Collection Form)  ಬಳಸಬೇಕು. ಪಡೆಯ ಬೇಕಾದ ಮಾಹಿತಿಗಳನ್ನು ಕೆಳಗಿನಂತೆ ವರ್ಗೀಕರಿಸಬಹುದು.

ವ್ಯಕ್ತಿಗತ (personal) ಮಾಹಿತಿಗಳು, (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ಉದ್ಯೋಗ, ಆದಾಯ, ಆರೋಗ್ಯಸ್ಥಿತಿ, ಇತ್ಯಾದಿ.)

ಪರಿವಾರ (Family) ದ ಮಾಹಿತಿಗಳು, (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ಆರೋಗ್ಯಸ್ಥಿತಿ, ಇತ್ಯಾದಿ.)

ಪರಿವಾರವೈದ್ಯ (family doctor) ನ ಮಾಹಿತಿಗಳು, (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ,)

ವೃತ್ತಿ (professional) ಮಾಹಿತಿಗಳು, (ವೃತ್ತಿ ಮಾಲೀಕನ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವೃತ್ತಿಯ ನಮೂನೆ, ಅಪಾಯಗಳು, ಇತ್ಯಾದಿ.)

ಹಣದ ಹರಿದಾಟ (cash flow) ದ ಮಾಹಿತಿಗಳು, (ಹಣದ ಒಳ/ಹೊರ ಹರಿವು, ಆದಾಯ/ವೆಚ್ಚ, ಆಸ್ತಿ/ಹೊರೆ/ಸಾಲ/ ಇತ್ಯಾದಿ)

ಮಾಹಿತಿ ಸಂಗ್ರಹದ ಮೂಲಕ ಗ್ರಾಹಕನ ಗ್ರಹಿಕೆ (Assumption) ಗಳನ್ನು ಅರ್ಥಮಾಡಿಕೊಂಡು, ಆತನ ಧ್ಯೇಯ (Obejectives) ಗಳ ಬಗ್ಗೆ ಒಮ್ಮತವನ್ನು ಸಾಧಿಸುವದು.



Saturday, January 3, 2015

3  ಜನೆವರಿ 2015 

‘ ನನಗೆ ವಿಮಾ ಪಾಲಿಸಿ ಖರೀದಿಸಲು, ನನ್ನ ಬಳಿ ಹಣವಿಲ್ಲಾ.’ ಎಂದು ಎಂದು ಗ್ರಾಹಕ ಹೇಳಿದಾಗ, ಏನು ಮಾಡ ಬೇಕು?


ವಿಮೆ ಕಡೆಗಣಿಸಲಾಗದ ವಾಸ್ತವಿಕ ಅವಶ್ಯಕತೆ (Real need), ಎನ್ನುವದನ್ನು ಮನವರಿಕೆ ಮಾಡಿಕೊಡಬೇಕು.
ವಿಮೆ ಪಡೆಯುವದರಿಂದ ದೊರೆಯುವ ಪ್ರಯೋಜನಗಳ(Benefits)ನ್ನು ಒತ್ತಿ ಹೇಳಬೇಕು.
ವಿಮೆ ಪಡೆಯದೆ ಇರುವದರಿಂದ ಆಗುವÀ ಅನಾನುಕೂಲತೆ (inconveniences) ಗಳನ್ನು ಹೇಳಬೇಕು.
ಅಪಾಯಗಳನ್ನು ಉಪಾಯವಾಗಿ ಎದುರಿಸ ಬೇಕಾದ ಜಾಣ್ಮೆಯ ಬಗ್ಗೆ ಒತ್ತಿ ಹೇಳಿರಿ.

Friday, January 2, 2015

2  ಜನೆವರಿ 2015 

‘ ಪ್ರತಿಸ್ಪರ್ಧಿ ಕಂಪನಿಗಳ ಪಾಲಿಸಿಗಳು ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತವೆ .’ ಎಂದು ಎಂದು ಗ್ರಾಹಕ ಹೇಳಿದಾಗ, ಏನು ಮಾಡ ಬೇಕು?


ಇಬ್ಬರ ಪಾಲಿಸಿಗಳು ನೀಡುವ ಸೌಲಭ್ಯಗಳ ತುಲನಾತ್ಮಕ ವಿಶ್ಲೇಷಣೆ (comparative analysis) ಮಾಡಬೇಕು.
ತಮ್ಮ ಸರಕುಗಳಲ್ಲಿದ್ದ ಬಲಿಷ್ಠ ಸೌಲಭ್ಯಗಳ ಬಗ್ಗೆ ಗ್ರಾಹಕನ ವಿಶೇಷ ಗಮನ ಸೆಳೆಯ ಬೇಕು.
ಗ್ರಾಹಕನ ಬೇಡಿಕೆಗಳನ್ನು ಈಡೇರಿಸಲು, ಏಜೆಂಟನು ಸೂಚಿಸಿದ ಪಾಲಿಸಿ ಎಷ್ಟೊಂದು ಸುಯೋಗ್ಯವಾಗಿದೆ , ಎನ್ನುವದನ್ನು ಮನಗಾಣಿಸಿ ಕೊಡಬೇಕು. 


Thursday, January 1, 2015

1  ಜನೆವರಿ 2015 

‘ಈ ವಿಮಾ ಪಾಲಿಸಿ ನನ್ನ ಬೇಡಿಕೆಗಳನ್ನು ಈಡೇರಿಸುವದಿಲ್ಲಾ ಎಂದು’ ಎಂದು ಗ್ರಾಹಕ ಹೇಳಿದಾಗ, ಏನು ಮಾಡ ಬೇಕು?



ಅವರ ಕಳವಳವನ್ನು ತಿಳಿದು ಕೋಳ್ಳಲು, ತೆರೆದ ಪ್ರಶ್ನೆ (Open ended questions)ಗಳನ್ನು ಕೇಳಬೇಕು.
ಆ ವಿಮಾ ಪಾಲಿಸಿಗಳ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡಬೇಕು.
ಅಥವಾ ಗ್ರಾಹಕನ ಬೇಡಿಕೆಗಳನ್ನು ಈಡೇರಿಸಬಲ್ಲ ಹೊಸ ಪಾಲಿಸಿಯನ್ನು ಸೂಚಿಸ ಬೇಕು.