21 ಅಕ್ಟೋಬರ್ 2014
ವಿಮಾ ವಿಚಾರಗಳ ವೇದಿಕೆ . ಸಂಚಾಲಕರು : ರಮೇಶ ಇಟ್ನಾಳ - ಜೀವ ವಿಮಾ ತರಬೇತಿದಾರರು.(ವಿಳಾಸ : rhitnal@gmail.com)
Tuesday, October 21, 2014
Monday, October 20, 2014
20 ಅಕ್ಟೋಬರ್ 2014
ಉಳಿತಾಯದ ನಿವ್ವಳ ಗಳಿಕೆಯದರದ ಮೇಲೆ ಹಣದುಬ್ಬರ ವಿಪರೀತ ಪರಿಣಾಮ ಬೀರುತ್ತದೆ. ಉಳಿತಾಯದ ಮೂಲ ಗಳಿಕೆಯ ದರ 10% ಇದ್ದಾಗ, ಹಣದುಬ್ಬರದ ದರ 4% ಇದ್ದರೆ, ನಿವ್ವಳಗಳಿಕೆ ದರ 6% ಮಾತ್ರವಾಗಿರುತ್ತದೆ.
ನೀವು ಇಂದು 9% ದರದಲ್ಲಿ ಗಳಿಕೆಯ ಆಧಾರ ಮೇಲೆ ಆರ್ಥಿಕ ಯೋಜನೆಯನ್ನು ತಯಾರಿಸಿದಾಗ, ಹಣದುಬ್ಬರದ ದರ 3% ಇದ್ದರೆ, ಯೋಜನೆಯ ಸಫಲತೆಗಾಗಿ 12% ಗಳಿಕೆಯನ್ನು ಸಾಧಿಸಬೆಕಾಗುತ್ತದೆ.
ಉಳಿತಾಯದಲ್ಲಿ ಹಣದುಬ್ಬರ (Inflation) ದ ಪ್ರಭಾವವೇನು?
ಬೆಲೆಯೇರಿಕೆಯ ದರ, ಅಂದರೆ ಹಣದುಬ್ಬರ (Inflation) ದ ದರ, ಉಳಿತಾಯದ ಉದ್ಯೇಶಗಳನ್ನೇ ಬುಡಮೇಲು ಮಾಡುತ್ತದೆ. ಹಣದುಬ್ಬರದ ಪರಿಣಾಮವಾಗಿ ಉಳಿತಾಯದಲ್ಲಿ ಬೆಳೆಸಿದ ಹಣ ಉದ್ಯೇಶ ಈಡೇರಿಕೆಗಳಿಗೆ ಸಾಕಾಗುವದೇ ಇಲ್ಲ.ಉಳಿತಾಯದ ನಿವ್ವಳ ಗಳಿಕೆಯದರದ ಮೇಲೆ ಹಣದುಬ್ಬರ ವಿಪರೀತ ಪರಿಣಾಮ ಬೀರುತ್ತದೆ. ಉಳಿತಾಯದ ಮೂಲ ಗಳಿಕೆಯ ದರ 10% ಇದ್ದಾಗ, ಹಣದುಬ್ಬರದ ದರ 4% ಇದ್ದರೆ, ನಿವ್ವಳಗಳಿಕೆ ದರ 6% ಮಾತ್ರವಾಗಿರುತ್ತದೆ.
ನೀವು ಇಂದು 9% ದರದಲ್ಲಿ ಗಳಿಕೆಯ ಆಧಾರ ಮೇಲೆ ಆರ್ಥಿಕ ಯೋಜನೆಯನ್ನು ತಯಾರಿಸಿದಾಗ, ಹಣದುಬ್ಬರದ ದರ 3% ಇದ್ದರೆ, ಯೋಜನೆಯ ಸಫಲತೆಗಾಗಿ 12% ಗಳಿಕೆಯನ್ನು ಸಾಧಿಸಬೆಕಾಗುತ್ತದೆ.
Sunday, October 19, 2014
19 ಅಕ್ಟೋಬರ್ 2014
ಉಳಿತಾಯದಲ್ಲಿ ಆಯಕರ ರಿಯಾಯತಿ (Income Tax Rebate ) ಗಳ ಪಾತ್ರವೇನು?
ಕರ ರಿಯಾಯತಿ (Income Tax Rebate) ಪಡೆಯುವದೇ ಉಳಿತಾಯದಲ್ಲಿ ಆದ್ಯತೆಯಾಗಕೂಡದು. ಆದ್ಯತೆಯ ಅವಶ್ಯಕತೆಯನ್ನು ಪೂರೈಸಿಕೊಳ್ಳಲು, ಉಳಿತಾಯದ ಸರಕುಗಳನ್ನು ಆಯ್ಕೆ ಮಾಡುವಾಗ ಕರ ರಿಯಾಯತಿ ನೀಡುವ ಸರಕುಗಳಿಗೆ, ಗಳಿಕೆಯ ದರದ ಆಧಾರದ ಮೇಲೆ, ಆದ್ಯತೆ ನೀಡಬಹುದು. ಸಾಮಾನ್ಯ ಸರಕುಗಳಲ್ಲಿಯ ಗಳಿಕೆ ದರವನ್ನು, ಕರ ರಿಯಾತಿಗಳ ಸರಕುಗಳಲ್ಲಿ ದೊರಕುವ ಗಳಿಕೆ ದರದೊಂದಿಗೆ ತುಲನೆಯನ್ನು ತಪ್ಪದೇ ಮಾಡಲೇ ಬೇಕು.Saturday, October 18, 2014
18 ಅಕ್ಟೋಬರ್ 2014
ಆಯಕರ ಸೆಕ್ಶನ್ 80 ಸಿ ಯ ಕರ ರಿಯಾಯತಿ ಸೌಲಭ್ಯ ( Tax Rebate ) ಕ್ಕೆ ಅರ್ಹವಾದ ಉಳಿತಾಯದ ಸರಕುಗಳು :
• ಜೀವ ವಿಮೆ/ಯುಲಿಪ್ ವಿಮೆ/ವರ್ಷಾಶನ ವಿಮೆಗಳಲ್ಲಿಯ ಉಳಿತಾಯದ ಹಣಕ್ಕೆ,
• ಮನೆ ಸಾಲ ಕಂತು ವಾಪಸಾತಿಯಲ್ಲಿ ಬಡ್ಡಿ ಭಾಗ ಬಿಟ್ಟು, ಮೂಲಸಾಲಕ್ಕೆ ಸಂಬಂಧಿಸಿದ ಹಣಕ್ಕೆ,
• ಮಕ್ಕಳ ಶಾಲಾ/ಕಾಲೇಜು ಶಿಕ್ಷಣಕ್ಕೆ ನೀಡಲಾದ ಟ್ಯೂಶನ್ ಶುಲ್ಕದ ಹಣಕ್ಕೆ,
• ಕನಿಷ್ಠ 5 ವರ್ಷದ ಬ್ಯಾಂಕ್‍ದ ವಿಶೇಷ ಠೇವಣಿ/ಪೋಸ್ಟಲ್ ಟಿ.ಡಿ. ಉಳಿತಾಯದ ಹಣಕ್ಕೆ.
• 6 ವರ್ಷದ ಎನ್. ಎಸ್. ಎಸ್. ಉಳಿತಾಯದ ಹಣಕ್ಕೆ,
• 15 ವರ್ಷದ ಪಿ.ಎಫ್./ಪಿ.ಪಿ.ಎಫ್./ಇ,ಪಿ,ಎಫ್. ಉಳಿತಾಯದ ಹಣಕ್ಕೆ,
• ವರಿಷ್ಠ ನಗರಿಕರ ಉಳಿತಾಯ ಯೋಜನೆ ( ಎಸ್.ಸಿ.ಎಸ್.ಸಿ.) ಯಲ್ಲಿ ತೊಡಗಿಸಿದ ಹಣಕ್ಕೆ,
• ಇಕ್ವಿಟಿ ಲಿಂಕ್ಡ ಉಳತಾಯ ಯೋಜನೆಗಳಲ್ಲಿ ತೊಡಗಿಸಿದ ಹಣಕ್ಕೆ,
ಆಯಕರ ಸೆಕ್ಶನ್ 80 ಸಿ ಯ ಕರ ರಿಯಾಯತಿ ಸೌಲಭ್ಯ ( Tax Rebate ) ಜೀವ ವಿಮೆಯ ಸರಕುಗಳನ್ನೊಳಗೊಂಡು ಬೇರೆ ಯಾವ ಉಳಿತಾಯ ಸರಕುಗಳಿಗೆ ದೊಕುತ್ತವೆ?
ಆಯಕರ ಸೆಕ್ಶನ್ 80 ಸಿ ಯ ಕರ ರಿಯಾಯತಿ ಸೌಲಭ್ಯ ( Tax Rebate ) ಕ್ಕೆ ಅರ್ಹವಾದ ಉಳಿತಾಯದ ಸರಕುಗಳು :
• ಜೀವ ವಿಮೆ/ಯುಲಿಪ್ ವಿಮೆ/ವರ್ಷಾಶನ ವಿಮೆಗಳಲ್ಲಿಯ ಉಳಿತಾಯದ ಹಣಕ್ಕೆ,
• ಮನೆ ಸಾಲ ಕಂತು ವಾಪಸಾತಿಯಲ್ಲಿ ಬಡ್ಡಿ ಭಾಗ ಬಿಟ್ಟು, ಮೂಲಸಾಲಕ್ಕೆ ಸಂಬಂಧಿಸಿದ ಹಣಕ್ಕೆ,
• ಮಕ್ಕಳ ಶಾಲಾ/ಕಾಲೇಜು ಶಿಕ್ಷಣಕ್ಕೆ ನೀಡಲಾದ ಟ್ಯೂಶನ್ ಶುಲ್ಕದ ಹಣಕ್ಕೆ,
• ಕನಿಷ್ಠ 5 ವರ್ಷದ ಬ್ಯಾಂಕ್‍ದ ವಿಶೇಷ ಠೇವಣಿ/ಪೋಸ್ಟಲ್ ಟಿ.ಡಿ. ಉಳಿತಾಯದ ಹಣಕ್ಕೆ.
• 6 ವರ್ಷದ ಎನ್. ಎಸ್. ಎಸ್. ಉಳಿತಾಯದ ಹಣಕ್ಕೆ,
• 15 ವರ್ಷದ ಪಿ.ಎಫ್./ಪಿ.ಪಿ.ಎಫ್./ಇ,ಪಿ,ಎಫ್. ಉಳಿತಾಯದ ಹಣಕ್ಕೆ,
• ವರಿಷ್ಠ ನಗರಿಕರ ಉಳಿತಾಯ ಯೋಜನೆ ( ಎಸ್.ಸಿ.ಎಸ್.ಸಿ.) ಯಲ್ಲಿ ತೊಡಗಿಸಿದ ಹಣಕ್ಕೆ,
• ಇಕ್ವಿಟಿ ಲಿಂಕ್ಡ ಉಳತಾಯ ಯೋಜನೆಗಳಲ್ಲಿ ತೊಡಗಿಸಿದ ಹಣಕ್ಕೆ,
Friday, October 17, 2014
17 ಅಕ್ಟೋಬರ್ 2014
• ಜೀವ ವಿಮೆಯ ಕಂತುಗಳಲ್ಲಿ ಉಳಿತಾಯ ಮಾಡಿದ ಹಣಕ್ಕೆ, ಮೂಲ ವಿಮಾ ರಾಶಿಯ 10% ಮಿತಿಯೊಳಗೆ, ಆಯಕರ ಸೆಕ್ಶನ್ 80 ಸಿ ಯ ಕರ ರಿಯಾಯತಿ ಸೌಲಭ್ಯ, ಗರಿಷ್ಠ 100,000 ರೂ.ಗಳವರಗೆ ದೊರಕುತ್ತದೆ. ಅಂದರೆ ಕರ ರಿಯಾಯತಿಗೆ ಆಧಾರದ ಹಣವನ್ನು ಕರಯೋಗ್ಯ ಆದಾಯದಲ್ಲಿ ಕಳೆದು ಆದಾಯ ಕರವನ್ನು ಲೆಕ್ಕ ಮಾಡುತ್ತಾರೆ.
• ಜೀವ ವಿಮೆಯ ಕಂತುಗಳಲ್ಲಿ ಉಳಿತಾಯ ಮಾಡಿದ ಹಣಕ್ಕೆ, ಆಯಕರ ಸೆಕ್ಶನ್ 80 ಡಿ ಯ ಕರ ರಿಯಾಯತಿ ಸೌಲಭ್ಯ, ಗರಿಷ್ಠ 15,000 ರೂ.ಗಳವರಗೆ ದೊರಕುತ್ತದೆ. 60 ವರ್ಷ ಮಿಕ್ಕಿದ ವರಿಷ್ಠ ನಾಗರಿಕರಿಗೆ ಈ ಮಿತಿ 20,000 ರೂ. ಇದೆ. ಅಂದರೆ ಕರ ರಿಯಾಯತಿಗೆ ಆಧಾರದ ಹಣವನ್ನು ಕರಯೋಗ್ಯ ಆದಾಯದಲ್ಲಿ ಕಳೆದು ಆದಾಯ ಕರವನ್ನು ಲೆಕ್ಕ ಮಾಡುತ್ತಾರೆ.
• ಜೀವ ವಿಮೆಯ ಯೋಜನೆಗಳಲ್ಲಿ ( ವರ್ಷಾಶನ ಯೋಜನೆ ಹೊರತು ಪಡಿಸಿ) ಕೈ ಸೇರುವ ಪರಿಹಾರ ಹಣವು ಆಯಕರ ಸೆಕ್ಶನ್ 10-10-ಡಿ. ಪ್ರಕಾರ ಕರಮುಕ್ತ ಆದಾಯವಾಗಿದೆ. ಅಂದರೆ ಈ ಆದಾಯದ ಮೇಲೆ ಆದಾಯ ಕರನೀಡ ಬೇಕಾಗಿಲ್ಲಾ.
• ವರ್ಷಾಶನ ಯೋಜ£ಗಳಲ್ಲಿ ವರ್ಷಾಶನ ನೀಡುವ ಮುನ್ನ ವರ್ಷಾಶನ ನಿಧಿಯ ಹಣವನ್ನು 1/3 ಭಾಗದವರೆಗೆ ನಗದು ಗೊಳಿಸಿದಾಗ ಸಿಗುವ ನಗದು ಹಣದ ಮೇಲೆ ಆಯಕರ ಸೆಕ್ಶನ್ 10-10-ಎ. ಪ್ರಕಾರ ಕರಮುಕ್ತ ಆದಾಯವಾಗಿದೆ. ಅಂದರೆ ಈ ಹಣದ ಮೇಲೆ ಆದಾಯ ಕರನೀಡ ಬೇಕಾಗಿಲ್ಲಾ.
ವಿಮೆಯ ಉಳಿತಾಯದಲ್ಲಿ ದೊರೆಯುವ ಕರರಿಯಾಯತಿ ( Tax Rebate ) ಗಳು ಯಾವವು?

Thursday, October 16, 2014
16 ಅಕ್ಟೋಬರ್ 2014
ಇಲ್ಲಿ ಕನಿಷ್ಠ ವಿಮಾ ಮೊತ್ತ – 5000 ರೂ.
ಇಲ್ಲಿ ಗರಿಷ್ಠ ವಿಮಾ ಮೊತ್ತ – 50,000 ರೂ.
ಕಂತು ನೀಡಿಕೆ ವಿಧಾನ – ವಾರಕ್ಕೊಮ್ಮೆ.
ಸೂಕ್ಷ್ಮ ವಿಮೆ (Micro Insurance ) ಎಂದರೇನು?
ಕಡಿಮೆ ಆದಾಯದ ಅಸಂಘಟಿತ ಕಾರ್ಮಿಕರ ಗುಂಪಿಗೆ ಒಂದೇ ಪಾಲಿಸಿ ಮೂಲಕ ವಿಮಾ ರಕ್ಷಣೆಯನ್ನು, ಮೈಕ್ರೋ ವಿಮೆ ಮೂಲಕ ನೀಡಬಹುದು. ಲಾಭಾಕಾಂಕ್ಷೆಯಿಲ್ಲದೇ ಕಾರ್ಯ ಮಾಡುವ ಸ್ವಯಂ ಸೇವಾ ಸಂಘಗಳು, ಇಂತಹ ಅಸಂಘಟಿತ ಗುಂಪುಗಳಿಗೆ ಸೂಕ್ಷ್ಮ ವಿಮಾ ಪಾಲಿಸಿಯನ್ನು ನೀಡಬಹುದು.ಇಲ್ಲಿ ಕನಿಷ್ಠ ವಿಮಾ ಮೊತ್ತ – 5000 ರೂ.
ಇಲ್ಲಿ ಗರಿಷ್ಠ ವಿಮಾ ಮೊತ್ತ – 50,000 ರೂ.
ಕಂತು ನೀಡಿಕೆ ವಿಧಾನ – ವಾರಕ್ಕೊಮ್ಮೆ.
Wednesday, October 15, 2014
15 ಅಕ್ಟೋಬರ್ 2014
ಇಲ್ಲಿ ನೌಕರದಾರನಿಗೆ ಪ್ರತ್ಯಕ್ಷ ವಿಮೆ ನೀಡುವ ತೊಂದರೆ ತಪ್ಪುತ್ತದೆ. ಪಾಲಿಸಿ ಲ್ಯಾಪ್ಸ್ ಆಗುವ ಭಯ ತಪ್ಪುತ್ತದೆ. ಇದು ವಿಮಾ ಕಂಪನಿಗೂ ಅನಕೂಲಕರ ಸಂಗತಿಯೇ. ಮಾಲೀಕನಿಗೆ ನೌಕರದಾರರ ವಿಶ್ವಾಸ ಗಳಿಸುವ ಅವಕಾಶ ದೊರಕುತ್ತದೆ.
ವೇತನ ಉಳಿತಾಯ ಯೋಜನೆ (Salary Savings Scheme - SSS) ಅಂದರೇನು?
ಸಂಸ್ಥೆಯ ನೌಕರದಾರರು ತಾವು ಖರೀದಿಸಿದ ವಿಮಾ ಪಾಲಿಸಿಯ ಮಾಸಿಕ ಕಂತುಗಳನ್ನು, ತಮ್ಮ ವೇತನದಲ್ಲಿ ಕಡಿತಗೊಳಿಸಿ ಮಾಲೀಕನ ಮುಖಾಂತರ ವಿಮಾ ಸಂಸ್ಥೆಗೆ ನೀಡುವ ವ್ಯವಸ್ಥೆಗೆ ವೇತನ ಉಳಿತಾಯ ಯೋಜನೆ ಎನ್ನುವರು. ಇಲ್ಲಿ ಪಾಲಿಸಿಧಾರಕರು ತಮ್ಮ ಪಾಲಿಸಿಯ ಮಾಸಿಕ ಕಂತುಗಳನ್ನು ವೇತನದಲ್ಲಿ ಕಡಿತಗೊಳಿಸಿ ವಿಮಾ ಸಂಸ್ಥೆಗೆ ನೀಡಲು ತಮ್ಮ ಮಾಲೀಕನಿಗೆ ಅಧಿಕಾರ ಪತ್ರ ನೀಡುತ್ತಾರೆ. ಮಾಲೀಕನು ವೇತನದಲ್ಲಿ ಕಡಿತಗೊಳಿಸಿದ ಕಂತುಗಳನ್ನು ವಿಮಾ ಸಂಸ್ಥೆಗೆ ಕಳಿಸಲು ಒಪ್ಪಿಗೆ ನೀಡುತ್ತಾನೆ. ಸಂಸ್ಥೆಯು ಕಡಿತಗೊಳಿಸಿದ ಕಂತುಗಳನ್ನು ಸ್ವೀಕರಿಸಲು ಸಮ್ಮತಿಸುತ್ತದೆ. ಪ್ರತಿ ತಿಂಗಳೂ ಕಂತುಗಳನ್ನು ಕಳಿಸಲು ಮಾಲೀಕನಿಗೆÀ ಬೇಡಿಕೆ ಲಿಸ್ಟನ್ನು ಕಳಿಸಿ ಕೊಡುತ್ತದೆ.ಇಲ್ಲಿ ನೌಕರದಾರನಿಗೆ ಪ್ರತ್ಯಕ್ಷ ವಿಮೆ ನೀಡುವ ತೊಂದರೆ ತಪ್ಪುತ್ತದೆ. ಪಾಲಿಸಿ ಲ್ಯಾಪ್ಸ್ ಆಗುವ ಭಯ ತಪ್ಪುತ್ತದೆ. ಇದು ವಿಮಾ ಕಂಪನಿಗೂ ಅನಕೂಲಕರ ಸಂಗತಿಯೇ. ಮಾಲೀಕನಿಗೆ ನೌಕರದಾರರ ವಿಶ್ವಾಸ ಗಳಿಸುವ ಅವಕಾಶ ದೊರಕುತ್ತದೆ.
Subscribe to:
Posts (Atom)