Monday, June 30, 2014

30 ಜೂನ 2014

 ಸ್ಥಗಿತಗೊಂಡ ಕೆಳಗಿನ ಪಾಲಿಸಿಯ ಪೇಡ ಅಪ್ ಬೆಲೆ ಲೆಕ್ಕ ಮಾಡಿರಿ?  ಪಾಲಿಸಿಯ ವಿವರಗಳು :


100,000 ರೂ, ವಿಮಾ ಮೊತ್ತದ, 20 ವರ್ಷದ ಎಂಡೋಮೆಂಟ್ ಪಾಲಸಿಯಲ್ಲಿ  4 ವರ್ಷಗಳ ವಿಮಾಕಂತುಗಳ ಸಂದಾಯವಾಗಿ ಈಗಾಗಲೇ 40,000 ರೂ,ಗಳ ಬೋನಸ್ಸು ಜಮೆಯಾಗಿದೆ. ವಾರ್ಷಿಕ ವಿಮಾಕಂತಿನ ದರ  ರೂ. 4950 ಇರುತ್ತದೆ. ಹಾಗಿದ್ದರೆ ಈ ಪಾಲಿಸಿಯ ಪೇಡ ಅಪ್ ಬೆಲೆ ಎಷ್ಟು?
ಉತ್ತರ:              
                                ನೀಡಿದ ವಿಮಾ ಕಂತುಗಳ ಒಟ್ಟಾರೆ ಅವಧಿ
ಪೇಡ್ ಅಪ್ ಮೌಲ್ಯ  = --------------------------- ----------- X ಮೂಲ ವಿಮಾ ಮೊತ್ತ +ಗಳಿಸಿದ ಬೋನಸ್ಸ ಹಣ.
                                    ಪಾಲಿಸಿಯ ಒಟ್ಟಾರೆ ಅವಧಿ
                                              4
ಪೇಡ್ ಅಪ್ ಮೌಲ್ಯ  = ---------------------------  X 100,000 + 16000.
                                               20
ಪೇಡ್ ಅಪ್ ಮೌಲ್ಯ   = 20,000+ 16000.

ಪೇಡ್ ಅಪ್ ಮೌಲ್ಯ   = 36,000 ರೂ.ಗಳು.

------------------------------------------------------------------------------------------------------------


ಸ್ಥಗಿತಗೊಂಡ ಕೆಳಗಿನ ಪಾಲಿಸಿಯ ಪೇಡ ಅಪ್ ಬೆಲೆ ಲೆಕ್ಕ ಮಾಡಿರಿ? ಪಾಲಿಸಿಯ ವಿವರಗಳು :

300,000 ರೂ, ವಿಮಾ ಮೊತ್ತದ,  18 ವರ್ಷದ ಎಂಡೋಮೆಂಟ್ ಪಾಲಸಿಯಲ್ಲಿ  6  ವರ್ಷಗಳ ವಿಮಾಕಂತುಗಳ ಸಂದಾಯವಾಗಿ ಈಗಾಗಲೇ 72,000 ರೂ,ಗಳ ಬೋನಸ್ಸು ಜಮೆಯಾಗಿದೆ. ವಾರ್ಷಿಕ ವಿಮಾಕಂತಿನ ದರ  ರೂ. 17000 ಇರುತ್ತದೆ.  ಹಾಗಿದ್ದರೆ ಈ ಪಾಲಿಸಿಯ ಪೇಡ ಅಪ್ ಬೆಲೆ ಎಷ್ಟು?
ಉತ್ತರ:              
                              ನೀಡಿದ ವಿಮಾ ಕಂತುಗಳ ಒಟ್ಟಾರೆ ಅವಧಿ
ಪೇಡ್ ಅಪ್ ಮೌಲ್ಯ = --------------------------- ----------- X ಮೂಲ ವಿಮಾ ಮೊತ್ತ +ಗಳಿಸಿದ ಬೋನಸ್ಸ ಹಣ.
                                      ಪಾಲಿಸಿಯ ಒಟ್ಟಾರೆ ಅವಧಿ

                                              6
ಪೇಡ್ ಅಪ್ ಮೌಲ್ಯ = ---------------------------  X 3100,000 + 72,000.
                                                18
ಪೇಡ್ ಅಪ್ ಮೌಲ್ಯ  =  100,000+ 72,000.

ಪೇಡ್ ಅಪ್ ಮೌಲ್ಯ  =  172,000 ರೂ.ಗಳು.

Sunday, June 29, 2014

29ಜೂನ 2014


ಪೇಡ ಅಪ್ ಬೆಲೆ (ಪ್ರಾಪ್ತಮೌಲ್ಯ / ನಿಲುಗಡೆ ಮೌಲ್ಯ) :


ನಿಲುಗಡೆಯಾದ ಪಾಲಿಸಿಯ ಮುಖಬೆಲೆಗೆ ಪೇಡ ಅಪ್ ಬೆಲೆ ಎಂದು ಕರೆಯುತ್ತಾರೆ.

ರಿಯಾಯತಿ ಅವಧಿಯ ನಂತರವೂ ಬಾಕೀ ಕಂತನ್ನು ನೀಡಲಾಗದಿದ್ದರೆ ವಿಮಾ ಕರಾರು ರದ್ದಾಗಿ ಪಾಲಿಸಿ ಸ್ಥಗಿತಗೊಳ್ಳುತ್ತದೆ.ಸ್ಥಗಿತಗೊಂಡ ಪಾಲಿಸಿಯಲ್ಲಿ ನೀಡಲಾದ ವಿಮಾಕಂತುಗಳ ಒಟ್ಟಾರೆ ಅವಧಿ 3 ವರ್ಷಗಳಿÀಗಿಂತ ಕಡಿಮೆಯಿದ್ದರೆ, ಆ ಪಾಲಿಸಿಗೆ ರದ್ದುಗೊಂಡ ಪಾಲಿಸಿ ಎಂದು ಕರೆಯುತ್ತಾರೆ. ರದ್ದು ಗೊಂಡ ಪಾಲಿಸಿಯ ಪೇಡ ಅಪ್ ಬೆಲೆ ಶೂನ್ಯವಾಗಿರುತ್ತದೆ.

ಸ್ಥಗಿತಗೊಂಡ ಪಾಲಿಸಿಯಲ್ಲಿ ನೀಡಲಾದ ವಿಮಾಕಂತುಗಳ ಒಟ್ಟಾರೆ ಅವಧಿ ಕನಿಷ್ಠ 3 ವರ್ಷಗಳಿದ್ದರೆ, (ಆ ಪಾಲಿಸಿಗೆ ರದ್ದುಗೊಂಡ ಪಾಲಿಸಿ ಎಂದು ಕರೆಯದೇ)ಪೇಡ್ ಅಪ್ ಪಾಲಿಸಿ ಎಂದು ಕರೆಯುತ್ತಾರೆ. ಪೇಡ್ ಅಪ್ ಪಾಲಿಸಿಯ ಮೌಲ್ಯ ಮೂಲವಿಮಾ ಮೊತ್ತಕ್ಕಿಂತ ಕಡಿಮೆಯಾಗಿರುತ್ತದೆ. ಪೇಡ್ ಅಪ್ ಪಾಲಿಸಿಯ ಮೌಲ್ಯವನ್ನು ಕೆಳಗಿನ ಸೂತ್ರದಿಂದ ಅಳೆಯಲಾಗುತ್ತದೆ.

                                 ನೀಡಿದ ವಿಮಾ ಕಂತುಗಳ ಒಟ್ಟಾರೆ ಅವಧಿ
ಪೇಡ್ ಅಪ್ ಮೌಲ್ಯ = ------------------------------------- -- X  ಮೂಲ ವಿಮಾ ಮೊತ್ತ +(ಗಳಿಸಿದ  ಬೋನಸ್ಸ ಹಣ)
                                        ಪಾಲಿಸಿಯ ಒಟ್ಟಾರೆ ಅವಧಿ
.

Saturday, June 28, 2014

28 ಜೂನ 2014


ರಿಯಾಯತಿ ಅವಧಿ (grace period):


ವಿಮಾ ಕರಾರನ್ನು ಜೀವಂತವಾಗಿಡಲು, ವಿಮಾ ಕಂತಿನ ಬಾಕೀ ದಿನಾಂಕದಂದು ಇಲ್ಲವೆ ಅದಕ್ಕೂ ಮೊದಲೇ ವಿಮಾ ಕಂತನ್ನು ನೀಡಬೇಕು. ಆದರೆ ಬಾಕೀ ದಿನಾಂಕದಂದು ಸಂಬಂದಿಸಿದ ವಿಮಾಕಂತನ್ನು ನೀಡಲಾಗದಿದ್ದರೂ ವಿಮಾ ಕಂಪನಿಯು ಕರಾರನ್ನು ರದ್ದುಗೊಳಿಸದೆ ಮುಂದೆ ಕೆಲ ಅವಧಿಯವರೆಗೆ ಕರಾರನ್ನು ಜೀವಂತವಾಗಿಡುತ್ತದೆ. ಈ ಅವಧಿಗೆ ರಿಯಾಯತಿ ಅವಧಿ ಎನ್ನುತ್ತಾರೆ. ರಿಯಾಯತಿ ಅವಧಿಯೊಳಗೆ ಮರಣಸಂಭವಿಸಿದರೆ ಪೂರ್ಣ ವಿಮಾಮೊತ್ತದಲ್ಲಿ ಬಾಕಿ ವಿಮಾ ಕಂತಿನ ಹಣಕಳೆದು ಪರಿಹಾರವನ್ನು ನಿಡುತ್ತಾರೆ.

ರಿಯಾಯತಿ ಅವಧಿ ಸಾಮಾನ್ಯವಾಗಿ 1 ತಿಂಗಳಿಗೆ (ಕನಿಷ್ಢ 30 ದಿನಗಳಿಗೆ) ಸಮನಾಗಿರುತ್ತದೆ.
ಅದು ಮೊದಲ ಬಾಕೀ ಕಂತಿನ ದಿನಾಂಕದ ಮರುದಿನದಿಂದ ಪ್ರಾರಂಭವಾಗುತ್ತದೆ.
ರಿಯಾಯತಿ ಅವಧಿಯ ಕೊನೆಯ ದಿನ ರಜೆಯ ದಿನವಾಗಿದ್ದರೆ, ಅದರ ನಂತರ ಕೂಡಲೇ ಬರುವ ಕೆಲಸದ ದಿನಕ್ಕೂ
        ರಿಯಾಯತಿ ಅವಧಿ ಮುಂದುವರೆಯುತ್ತದೆ.
ರಿಯಾಯತಿ ಅವಧಿಯು ಕೊನೆಯ ದಿನದ ಮಧ್ಯರಾತ್ರಿ 12ಕ್ಕೆ ಕೊನೆಗೊಳ್ಳುತ್ತದೆ.

Friday, June 27, 2014

27 ಜೂನ 2014

ಆಯ್.ಆರ್.ಡಿ.ಏ. ಯ ನಿಯಮಾವಳಿಗಳ ಪ್ರಕಾರ ಪಾಲಿಸಿ ಬಾಂಡಿನಲ್ಲಿ ಕಡ್ಡಾಯವಾಗಿ ನಮೂದಿಸಲೇ ಬೇಕಾದ ಸಂಗತಿಗಳು :

ವಿಮಾಕಂತಿನ ಅವಧಿಗಳ ರೀತಿಗಳು, ವಿಮಾಕಂತು ನೀಡಿಕೆಯ ವಿಧಾನಗಳು, ಅನಕೂಲತೆಗಳು.
ಪಾಲಿಸಿಯ ಸೇವೆ/ವಿಚಾರಣೆಗಳ ಬಗ್ಗೆ ಸಂಪರ್ಕಿಸಬೇಕಾದ ವ್ಯಕ್ತಿ ಅಥವಾ ಕಚೇರಿಯ ವಿವರ.
ವಿಳಾಸ ಬದಲಾವಣೆ/ನಾಮೀನೇಶನ್‍ದ ಮಹತ್ವದ ಬಗ್ಗೆ ತಿಳುವಳಿಕೆ.
ದೂರು/ತೊಂದರೆಗಳ ಬಗ್ಗೆ ಮಾಡಬೇಕಾದ ವಿಧಾನಗಳ ಬಗ್ಗೆ,
ವಿಮಾ ಲೋಕಪಾಲ (Insurance - ombudsman)ನ ವಿಳಾಸ ಹಾಗೂ ಮಾಹಿತಿಗಳ ಬಗ್ಗೆ.

Thursday, June 26, 2014

26ಜೂನ 2014


ಪಾಲಸಿ ಬಾಂಡಿನಲ್ಲಿ  ಕೆಳಗಿನ ವಿವರಗಳು ಕಾಣಲು ಸಿಗುತ್ತವೆ.



1)    ತಲೆ ಬರಹ (Heading) : ಸಂಸ್ಥೆಯ ಹೆಸರು, ಚಿಹ್ನೆ, ವಿಳಾಸ.

2) ಪೀಠಿಕೆ (Preamble) : ಕೋರಿಕೆ ಪತ್ರ ಹಾಗೂ ಕೋರಿಕೆದಾರನ ಘೋಷಣೆಗಳೇ ಕರಾರಿಗೆ ತಳಹದಿ ಎಂದು ಹೇಳುತ್ತದೆ.

3) ಕರಾರು ಚಾಲನೆಯ ಶರ್ಯತ್ತುಗಳು (operative clauses) :ಕೋರಿಕೆದಾರನಿಂದ ವಿಮಾ ಕಂತು ನೀಡುವದು,  ವಿಮಾ             ಘಟನೆ ಸಂಭವಿಸಿದಾಗ   ಒಪ್ಪಿಗೆದಾರನಿಂದ ವಿಮಾಪರಿಹಾರ ನೀಡುವದು ಕರಾರಿನಲ್ಲಿ ಪಾಲಿಸ ಬೇಕಾದ ನಿಯಮಗಳು           ಎಂದು ಹೇಳುತ್ತದೆ.

4) ಪ್ರಾವಧಾನಗಳು (Proviso) : ಕರಾರಿನ ಸಾಮಾನ್ಯ ಸಂಗತಿಗಳು ಉದಾ : ಭರವಸೆಯ ಸರಂಡರ್ ಮೌಲ್ಯ ,      
        ನಾಮೀನೇಶನ್, ಅಸೈನಮೆಂಟ್, ಪಾಲಸಿ ಆಧಾರದ ಮೇಲೆ ಸಿಗುವ ಸಾಲ, ಇತ್ಯಾದಿ.

5) ಕೋಷ್ಟಕ (Sheಜuಟe) : ಪಾಲಸಿಧಾರಕನ ವ್ಯಕ್ತಿಗತ ವಿವರಗಳನ್ನು ಇಲ್ಲಿ ನೀಡಲಾಗುವದು. ಉದಾ : ಪಾಲಸಿಯ  
       ನಂಬರು, ಮೂಲ ವಿಮಾ ಮೊತ್ತ,  ಪಾಲಸಿಯ ಅವಧಿಯ ಪ್ರಾರಂಭದ ದಿನಾಂಕ, ಪಾಲಸಿಯ ಅವಧಿಯ
       ಕೊನೆಯದಿನಾಂಕ: ವಿಮಾ ಕಂತಿನ ಹಣ,  ವಿಮಾ ಕಂತಿನ ಅವಧಿ, ಪ್ರಾರಂಭದ ವಿಮಾ ಕಂತಿನ ದಿನಾಂಕ, ಕೊನೆಯ
       ವಿಮಾ ಕಂತಿನ ದಿನಾಂಕ; ವಿಶೇಷ ಶರ್ಯತ್ತುಗಳು, ಹೆಚ್ಚುವರಿ ಸೌಲಭ್ಯಗಳ ವಿವರಗಳು, ದೊರಕಲಾರದ ಸೌಲಭ್ಯಗಳು,
       ತಾತ್ಕಾಲಿಕ ಹೊರೆ ಅಂದರೆ ಲೀನ್.

6) ಧೃಡೀಕರಣ (attestation): ಕರಾರಿಗೆ ಅಧಿಕಾರಿಯ ಹಸ್ತಾಕ್ಷರ, ಕರಾರಿನ ಸ್ಥಳ, ದಿನಾಂಕ.

7) ಶರ್ಯತ್ತುಗಳು,ಸೌಲಭ್ಯಗಳು ಹಾಗೂ ನಿಯಮಗಳು ( Terms & conditions, Previledges & conditions) :
        ವಯಸ್ಸಿನ ಅಂಗೀಕಾರ, ಕಂತು ನೀಡದಿದ್ದರೆ ಆಗುವ ಪರಿಣಾಮಗಳು, ಸಾಲದ ನಿಯಮಗಳು, ಸೌಲಭ್ಯ ಸಿಗದಂತೆ  
         ಮಾಡುವ ಘಟನೆಗಳು – (ಉದಾ : ಆತ್ಮ ಹತ್ಯೆ), ಇತ್ಯಾದಿಗಳ ಬಗ್ಗೆ.

8) ಒಕ್ಕಣಿಕೆಗಳು (Endorsements) :ನಾಮೀನೇಶನ್/ಅಸೈನಮೆಂಟ್‍ಗಳ ಬದಲಾವಣೆ, ರದ್ದತಿ, ಇತರ ಸಂಗತಿಗಳು.

Wednesday, June 25, 2014

25ಜೂನ 2014


ವಿಮಾ ಪರಿಹಾರ ಕೋರಿಕೆ ಸಲ್ಲಿಸುವಾಗ ಕಡ್ಡಾಯವಾಗಿ ನೀಡಬೇಕಾದ ದಾಖಲೆಗಳು :



1) ಮೂಲ ಪಾಲಿಸಿ ಬಾಂಡ್.
2) ಕೊನೆಗೆ ನೀಡಲಾದ ವಿಮಾ ಕಂತಿನ ರಸೀದಿ.
3) ಡಿಸ್‍ಚಾರ್ಜ್ ಫಾರ್ಮ ಹಾಗೂ ಮುಂಗಡ ಪಾವತಿ..
4) ಮರಣ ದಾಖಲಾತಿ ಪತ್ರ ( ವಿಮಾ ಜೀವಿ ಮರಣಹೊಂದಿದ್ದರೆ)

Tuesday, June 24, 2014

24 ಜೂನ 2014


ಪ್ರಾಸ್ಪೆಕ್ಟಸ್ ಎಂದರೇನು?



ವಿಮಾ ಕರಾರಿನಲ್ಲಿ ತಾನು ಗ್ರಾಹಕನಿಗೆ ನೀಡಬಹುದಾದ/ನೀಡಲಾಗದ ಎಲ್ಲ ಸೌಲಭ್ಯಗಳನ್ನು/ ಸಂದರ್ಭಗಳನ್ನು  ಸ್ಪಷ್ಟವಾಗಿ, ವಿವರವಾಗಿ ತಾನು ಹೊರತಂದ ಪ್ರಾಸ್ಪೆಕ್ಟಸ್ ಪುಸ್ತಕದಲ್ಲಿ ಪ್ರಕಾಶನಗೊಳಿಸುತ್ತದೆ. ಅಯ್.ಆರ್.ಡಿ.ಎ. ಯ ಪಾಲಸಿಧಾರಕರ ಹಿತಾಸಕ್ತಿಗಳ ರಕ್ಷಣೆ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ವಿಮಾ ಸಂಸ್ಥೆಯು ತಾನು ಪ್ರಕಟಿಸಬೇಕಾದ ಪ್ರಾಸ್ಪೆಕ್ಟಸ್‍ದಲ್ಲಿ ಕೆಳಗಿನ ಸಂಗತಿಗಳನ್ನು ಕಡ್ಡಾಯವಾಗಿ ತೋರಿಸಲೇ ಬೇಕು.

1) ವಿಮಾ ಕರಾರಿನಲ್ಲಿ ನೀಡಲಾಗುವ ಸೌಲಭ್ಯಗಳ ವ್ಯಾಪ್ತಿ.
2) ವಿಮಾ ಕರಾರಿನಲ್ಲಿ ವಿಧಿಸಲಾಗುವ ಶರ್ಯತ್ತುಗಳು/ನಿಯಮಗಳು/ವಾರಂಟಿಗಳು.
3) ವಿಮಾ ಕರಾರಿನಲ್ಲಿ ಪ್ರಾಪ್ತವಾಗುವ ಹಕ್ಕುಗಳು ಹಾಗೂ ಅಪವಾದಗಳು.
4) ವಿಮಾ ಕರಾರಿನಲ್ಲಿ ಪ್ರಾಪ್ತವಾಗುವ ಬೋನಸ್ಸಗಳ ವಿವರಗಳು, ಹಾಗೂ ಇತರ ಸಂಗತಿಗಳು.