Tuesday, September 16, 2014

16 ಸಪ್ಟೆಂಬರ 2014

 ಮಾನವ ಜೀವದ ಮೌಲ್ಯ (Human Life Value ) ವನ್ನು ಆದಾಯ ಸ್ಥಾನ ಪಲ್ಲಟ ಪದ್ಧತಿ (Income Replacement Method ) ಯಲ್ಲಿ ಹೇಗೆ ಅಳೆಯುತ್ತಾರೆ? 


• ಮೊದಲು ವ್ಯಕ್ತಿಯೊಬ್ಬನು ಪರಿವಾರದಲ್ಲಿ ತನ್ನ ಅವಲಂಬಿತರಿಗೆ ಸಲ್ಲಿಸುವ ಆರ್ಥಿಕ ಸಹಾಯದ ವಾರ್ಷಿಕ ಪ್ರಮಾಣವನ್ನು ಅಳೆಯುತ್ತಾರೆ. 
• ತನ್ನ ಉಳಿದ ಗಳಿಕೆಯ ಅವಧಿಯನ್ನು ಅಳೆಯುತ್ತಾನೆ.
• ಹಣದುಬ್ಬರದ ದರ
• ಅವಲಂಬಿತರಿಗೆ ಸಲ್ಲಿಸುವ ಆರ್ಥಿಕ ಸಹಾಯದ ವಾರ್ಷಿಕ ಪ್ರಮಾಣವನ್ನು, ತನ್ನ ಉಳಿದ ಗಳಿಕೆಯ ಅವಧಿಗೆ ಪಡೆಯಲು, ಹೂಡಿಕೆ ಮಾಡಬೇಕಾದ ಬಂಡವಾಳವನ್ನು ಲೆಕ್ಕಮಾಡುತ್ತಾರೆ .(ಇದಕ್ಕಾಗಿ ಹೂಡಿಕೆಯ ದರದ ಅಂದಾಜು ಮಾಡಬೇಕಾಗುತ್ತದೆ.)

ಉದಾ : ವ್ಯಕ್ತಿಯ ತಿಂಗಳ ಒಟ್ಟು ಅದಾಯ ------------------------------- - 35,000 ರೂ.
ಟಾಕ್ಸ, ಓಡಾಟ, ವ್ಯಕ್ತಿಗತ ಖರ್ಚು ಕೆಳೆದು ಇಡೀ ಪರಿವಾರಕ್ಕೆ ಸಿಗುವ ನಿವ್ವಳ ಮಾಸಿಕ ಆದಾಯ  – 30,000 ರೂ.      
ಪರಿವಾರದಲ್ಲಿ ತನ್ನನ್ನು ಒಳಗೊಂಡು ಒಟ್ಟು 6 ಜನ ಸದಸ್ಯರಿದ್ದರೆ, ತನ್ನನ್ನು ಬಿಟ್ಟು 5 ಜನ ಸದಸ್ಯರು ಉಳಿಯುತ್ತಾರೆ.

ಈ ಹಣದಲ್ಲಿ ತನ್ನನ್ನು ಬಿಟ್ಟು ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು        – 25,000 ರೂ. 
ಉಳಿದ ಗಳಿಕೆಯ ಅವಧಿ (ಉದಾಹರಣೆಗೆ : ಗಳಿಕೆ ನಿಲ್ಲುವ ವಯಸ್ಸು 60 – ಈಗಿನ ವಯಸ್ಸು 35 )   - 25 ವರ್ಷಗಳು
ಹಣದುಬ್ಬರದ ಅಂದಾಜು ವಾರ್ಷಿಕ ದರ                                      - 5%
ಹೂಡಿಕೆಯಲ್ಲಿ ಅಂದಾಜು ಗಳಿಕಯ ವಾರ್ಷಿಕ ದರ                               - 8%

ಇಲ್ಲಿ 1 ನೆಯ ವರ್ಷದಲ್ಲಿ ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು : 25000 X 12 = 300,000 ರೂ.      
ಇಲ್ಲಿ 2 ನೆಯ ವರ್ಷದಲ್ಲಿ ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು : 26250 X 12 = 315,000 ರೂ.      
ಇಲ್ಲಿ 3 ನೆಯ ವರ್ಷದಲ್ಲಿ ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು : 27562.5 X 12 = 330,750 ರೂ.      

ಹಾಗಾದರೆ ಪ್ರತಿ ತಿಂಗಳಿಗೆ 25000 ರೂ. ಆದಾಯವನ್ನು ಪ್ರತಿ ವರ್ಷ 5% ಹೆಚ್ಚಿಸುತ್ತ, ಮುಂದಿನ 25 ವರ್ಷಗಳ ವರೆಗೆ  ಪಡೆಯಬೇಕಾದರೆ; 8% ಅಂದಾಜು ಗಳಿಕಯ ವಾರ್ಷಿಕ ದರದಲ್ಲಿ, ಹೂಡಿಕೆ ಮಾಡಬೇಕಾದ ಬಂಡವಾಳ– ರೂ 54,59,741.  
ಅಂದರೆ ಇಲ್ಲಿ ಮಾನವ ಜೀವದ ಮೌಲ್ಯ ರೂ. 54,59,741 ಇರುತ್ತದೆ. ಈ ಪದ್ಧತಿಯಲ್ಲಿ  ಮಾನವ ಜೀವದ ಮೌಲ್ಯ : 
 1)ಪ್ರಾರಂಭದಲ್ಲಿ ಪರಿವಾರದ ಅವಲಂಬಿತರಿಗಾಗಿ ತಗಲುವ ಮಾಸಿಕ ಖರ್ಚು. 2)ಉಳಿದ ಗಳಿಕೆಯ ಅವಧಿ.     
 3) ಹೂಡಿಕೆಯಲ್ಲಿ ಅಂದಾಜು ಗಳಿಕಯ ವಾರ್ಷಿಕ ದರ. 4) ಹಣದುಬ್ಬರದ ಅಂದಾಜು ವಾರ್ಷಿಕ ದರ.                            
 ಇವುಗಳ ಮೇಲೆ ಅವಲಂಬಿತವಾಗಿರುತ್ತದೆ.


No comments:

Post a Comment